Sunday, October 25, 2026
Sunday, October 25, 2026

Dasara Elephant Somanna Escape ಅಂಬಾರಿ ಆನೆ ಅವಘಡ: ಆನೆ ನಡೆವಳಿಕೆಗಳ ಬಗ್ಗೆ ‘ಫ್ಯಾಕ್ಟ್ ಫೈಂಡ್’ ರೆಡಿ- ಸಿಸಿಎಫ್ ಹನುಮಂತಪ್ಪ

Date:

Dasara Elephant Somanna Escape ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಂಬಾರಿ ಹೊತ್ತ ಸೋಮಣ್ಣ ಆನೆ ಗಾಬರಿಯಾಗಿ ಓಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಸಿದ್ಧಪಡಿಸಲಾಗಿದೆ ಎಂದು ಸಿಸಿಎಫ್ ಹನುಮಂತಪ್ಪ ತಿಳಿಸಿದ್ದಾರೆ. ಆನೆಗಳ ಆರೋಗ್ಯ, ತರಬೇತಿ, ಸುರಕ್ಷತಾ ಕ್ರಮಗಳು ಹಾಗೂ ಘಟನೆಯ ಹಿಂದಿನ ಕಾರಣಗಳ ಕುರಿತು ಪರಿಶೀಲನೆ ನಡೆಸಿ, ಸಾಕ್ಷ್ಯಾಧಾರಗಳ ಸಹಿತ ವರದಿಯನ್ನು ಇಲಾಖೆಯ ಮುಖ್ಯಸ್ಥರಿಗೆ ಸಲ್ಲಿಸಲಾಗಿದೆ.

ಜಂಬೂಸವಾರಿ ವೇಳೆ ನಡೆದ ಅವಘಡಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಸಮಗ್ರ ತನಿಖೆ ನಡೆಸಿದೆ. ಘಟನೆಯ ವಿಡಿಯೋ ಕ್ಲಿಪ್ಪಿಂಗ್‌ಗಳು, ಸಿಸಿಟಿವಿ ದೃಶ್ಯಗಳು ಹಾಗೂ ಮಾವುತರು, ಕಾವಾಡಿಗರು ಮತ್ತು ಸಿಬ್ಬಂದಿಯ ಹೇಳಿಕೆಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗಿದೆ.

ಆನೆಗಳ ಆರೋಗ್ಯ ತಪಾಸಣೆ, ತರಬೇತಿ, ಆಹಾರ, ಸುರಕ್ಷತೆ ಹಾಗೂ ಮೇಲ್ವಿಚಾರಣೆ ಸೇರಿದಂತೆ ಎಲ್ಲ ಅಂಶಗಳನ್ನು ವರದಿಯಲ್ಲಿ ದಾಖಲಿಸಲಾಗಿದೆ. ಕಾರ್ಯಕ್ರಮದ ಮೇಲ್ವಿಚಾರಣೆಗೆ ಸ್ಥಳೀಯ ಹಾಗೂ ಭದ್ರಾ ಭಾಗದ ಮೂವರು ತರಬೇತಿ ಪಡೆದ ವೈದ್ಯರನ್ನು ನಿಯೋಜಿಸಲಾಗಿತ್ತು. ಅನುಭವಿ ಜಮೇದಾರ್, ಮಾವುತರು ಮತ್ತು ಕಾವಾಡಿಗರು ನಿರಂತರ ಸಂಪರ್ಕದಲ್ಲಿದ್ದರು ಎಂದು ಹನುಮಂತಪ್ಪ ತಿಳಿಸಿದ್ದಾರೆ.

Dasara Elephant Somanna Escape ಸಾಗರ್ ಮತ್ತು ಸೋಮಣ್ಣ ಆನೆಗಳ ಸಿದ್ಧತೆ ಹಾಗೂ ತರಬೇತಿಯನ್ನೂ ಪರಿಶೀಲಿಸಲಾಗಿದೆ. ತರಬೇತಿ ಅವಧಿಯಲ್ಲಿ ಸಾಗರ್ ಆನೆ ನಿರೀಕ್ಷಿತ ಮಟ್ಟದಲ್ಲಿ ಆರಾಮದಾಯಕವಾಗಿರದ ಹಿನ್ನೆಲೆಯಲ್ಲಿ, ಸೋಮಣ್ಣ ಆನೆಯನ್ನು ಆಯ್ಕೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಜಂಬೂಸವಾರಿ ವೇಳೆ ಸೋಮಣ್ಣ ಆನೆ ಆರಂಭದಲ್ಲಿ ಸುಮಾರು 800 ಮೀಟರ್ ದೂರ ಶಾಂತವಾಗಿ ಸಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆನೆಗಳು ತಿರುಗುವಾಗ ಅವುಗಳ ಕಾಲುಗಳ ಚಲನೆ ಹಾಗೂ ಬಾಲ ಎತ್ತುವಂತಹ ವರ್ತನೆಗಳನ್ನು ಸಿಬ್ಬಂದಿ ಸೂಕ್ಷ್ಮವಾಗಿ ಗಮನಿಸಬೇಕು. ಆನೆಗಳು ಉದ್ರೇಕಗೊಳ್ಳುವ ಸಂದರ್ಭಗಳಲ್ಲಿ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆ ಮತ್ತು ಏಕಾಗ್ರತೆ ಹೊಂದಿರಬೇಕು ಎಂದು ಸಿಸಿಎಫ್ ಸೂಚಿಸಿದ್ದಾರೆ.

ಎಲ್ಲ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಗಿದ್ದು, ಲಭ್ಯವಿರುವ ಸಾಕ್ಷ್ಯಾಧಾರಗಳೊಂದಿಗೆ ಸಂಪೂರ್ಣ ವರದಿಯನ್ನು ಇಲಾಖೆಯ ಮುಖ್ಯಸ್ಥರಿಗೆ ಸಲ್ಲಿಸಲಾಗಿದೆ ಎಂದು ಹನುಮಂತಪ್ಪ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಪತಿ ಮತ್ತು ಪತಿಮನೆಯವರಿಂದ ಕಿರುಕುಳ: ಗೃಹಿಣಿ ಆತ್ಮಹತ್ಯೆ.

Breaking News ಗಂಡ ಹಾಗೂ ಗಂಡನ ಮನೆಯವರ ಕಿರುಕುಳದಿಂದ ವಿಷ ಸೇವಿಸಿ...

Hartalu Halappa ರಾಜ್ಯದಲ್ಲಿ ವಿದ್ಯುತ್ ಕೊರತೆ: ಸರ್ಕಾರದ ಅಸಮರ್ಥತೆ- ಮಾಜಿ ಸಚಿವ ಹರತಾಳು ಹಾಲಪ್ಪ ಗಂಭೀರ ಪ್ರಶ್ನೆ.

Hartalu Halappa ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ...

Shimoga Pes College ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಪ್ರಬಂಧ ಮಂಡನೆ: ಎಂಬಿಎ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ.

Shimoga Pes College ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ ಪಿಇಎಸ್‌ಐಟಿ‌ಎಂ...

Rain In Shivamogga ಮಲೆನಾಡಿನ ಕಡೆ ಮಳೆ : ಹವಾಮಾನ ಸಾರಾಂಶ

Rain In Shivamogga ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಹಲವು...