Wednesday, August 12, 2026
Wednesday, August 12, 2026
Home Blog Page 240

Keladi Shivappa Nayaka University ನವುಲೆ ಕೃಷಿ ಕಾಲೇಜು ಎದುರು ಬಿದ್ದಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು. ಗ್ರಾಮಾಂತರ ಪೊಲೀಸ್ ಠಾಣೆ ಮಾಹಿತಿ.

0

Keladi Shivappa Nayaka University ಡಿ.30 ರಂದು ನವುಲೆಯ ಕೃಷಿ ಕಾಲೇಜು ಎದುರು ಅಸ್ವಸ್ಥನಾಗಿ ಬಿದ್ದಿದ್ದ ಸುಮಾರು 65 ರಿಂದ 70 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅಲ್ಲಿ ಅದೇ ದಿನ ವ್ಯಕ್ತಿ ಮೃತಪಟ್ಟಿರುತ್ತಾನೆ.

ಮೃತ ವ್ಯಕ್ತಿಯು ಸುಮಾರು 5.4 ಅಡಿ ಎತ್ತರ, ತಲೆಯಲ್ಲಿ ಎರಡು ಇಂಚು ಉದ್ದದ ಬಿಳಿ ಕೂದಲು, ಬಿಳಿ ಗಡ್ಡ ಮೀಸೆ ಬಿಟ್ಟಿರುತ್ತಾನೆ. ಮೃತನ ಎಡಪಕ್ಕೆಯಲ್ಲಿ ಸಾಸಿವೆ ಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಬಲಕೆನ್ನೆಯಲ್ಲಿ ಗ್ಯಾಂಗ್ರೀನ್ ಆಗಿದ್ದು ದವಡೆಗಳು ಕಾಣುತ್ತಿರುತ್ತವೆ. ಮತ್ತು ರಕ್ತ ಕೀವು ಸೋರಿರುತ್ತದೆ.

Keladi Shivappa Nayaka University ಬಿಸ್ಕೇಟ್ ಕಲರಿನ ಅರ್ಧ ತೋಳಿನ ಷರ್ಟ್, ನೀಲಿ ಬಿಳಿ ಬಣ್ಣದ ಡಿಸೈನ್‌ನ ಲುಂಗಿ ಪಂಚೆ ಧರಿಸಿರುತ್ತಾನೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಸಿಪಿಐ ಗ್ರಾಮಾಂತರ ವೃತ್ತ ಶಿವಮೊಗ್ಗ, ಪಿಎಸ್‌ಐ ಗ್ರಾಮಾಂತರ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 100 ಹಾಗೂ 08182-261418, 261410, 9480803350 ಗೆ ಕರೆ ಮಾಡಿ ಮಾಹಿತಿ ನೀಡಬಹುದೆಂದು ಗ್ರಾಮಾಂತರ ಪೊಲೀಸ್ ಠಾಣೆ ಠಾಣಾಧಿಕಾರಿ ತಿಳಿಸಿದ್ದಾರೆ.

B. Y. Raghavendra ಪ್ರಮುಖ ವೃತ್ತಗಳಲ್ಲಿ ಸ್ಕೈವಾಕ್ ಅಂಡರ್ ಪಾಸ್ ನಿರ್ಮಿಸಿ ಜನ ಸಂಚಾರಕ್ಕೆ ಸುರಕ್ಷತೆ ನೀಡಿ- ಸಂಸದ ಬಿ.ವೈ. ರಾಘವೇಂದ್ರ.

0

B. Y. Raghavendra ಶಿವಮೊಗ್ಗ ನಗರದಲ್ಲಿ ವಾಹನ ದಟ್ಟಣೆಯಿಂದ ಉಂಟಾಗಿರುವ ಟ್ರಾಫಿಕ್‌ನ್ನು ನಿಯಂತ್ರಿಸಲು ಪ್ರಮುಖ ಸರ್ಕಲ್ ಗಳಲ್ಲಿ ಸ್ಕೈವಾಕ್ ಅಥವಾ ಅಂಡರ್ ಪಾಸ್ ನಿರ್ಮಿಸುವ ಮೂಲಕ ಸಾರ್ವಜನಿಕರು ಸುರಕ್ಷಿತವಾಗಿ ಓಡಾಡಲು ಅನುಕೂಲ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಂಸದರಾದ ಬಿ.ವೈ. ರಾಘವೇಂದ್ರ ಸೂಚಿಸಿದರು.

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೂತನ ಜಿಲ್ಲಾಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂದೇಶ್ ಮೋಟಾರ್ ಸರ್ಕಲ್, ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ, ಆಲ್ಕೊಳ ಸರ್ಕಲ್ ಸೇರಿದಂತೆ ನಗರದ ಅನೇಕ ಸರ್ಕಲ್‌ಗಳು ಮತ್ತು ಮುಖ್ಯ ರಸ್ತೆಗಳಲ್ಲಿ ಹೆಚ್ಚಿನ ವಾಹನ ದಟ್ಟಣೆಯಿಂದ ರಸ್ತೆ ದಾಟಲು ಹಾಗೂ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರು ಪರದಾಡುವಂತಾಗಿದೆ.
ಇದರಿಂದ ರಸ್ತೆ ಅಪಘಾತಗಳೂ ಹೆಚ್ಚುತ್ತಿದೆ. ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಸ್ಕೈವಾಕ್ ಅಥವಾ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಈಗಾಗಲೇ ನಗರದಲ್ಲಿ ಶಿವಪ್ಪ ನಾಯಕ ಮತ್ತು ಅಮೀರ್ ಅಹಮದ್ ಸರ್ಕಲ್ ನಲ್ಲಿ ಅಂಡರ್ ಪಾಸ್ ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಪ್ಯಾಸೇಜ್ ನೀರು ಒಳ ಬರುವುದರಿಂದ ಇದನ್ನು ಮುಚ್ಚಲಾಗಿದೆ. ಅದನ್ನು ಕೂಡಲೇ ಪರಿಶೀಲಿಸಿ ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ಅಂಡರ್‌ಪಾಸ್‌ಗಳನ್ನು ತೆರೆದು ಸಾರ್ವಜನಿಕರಿಗೆ ಸುಗಮವಾಗಿ ರಸ್ತೆ ದಾಟಲು ಅನುವು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

B. Y. Raghavendra ಶಿವಮೊಗ್ಗದ ಶಾಂತಮ್ಮ ಲೇಔಟ್ ಮಾರ್ಗವಾಗಿ ಚಿತ್ರದುರ್ಗ ಹೋಗುವ ರಸ್ತೆ ಹಾಗೂ ಗುಂಡಪ್ಪ ಶೆಡ್ ರಸ್ತೆಯಲ್ಲಿ ಈಗಾಗಲೇ ಅಂಡರ್‌ಪಾಸ್ ಮಾಡಲು ತೀರ್ಮಾನಿಸಿದ್ದು, ಮರ ಕಡಿತ ಬಾಕಿ ಇದೆ. ಅರಣ್ಯ ಇಲಾಖೆ ಮತ್ತು ರೈಲ್ವೆ ಇಲಾಖೆ ಜಂಟಿ ಸರ್ವೆ ಮಾಡಿ ವರದಿ ನೀಡಿದ ಕೂಡಲೇ ಅಂಡರ್‌ಪಾಸ್ ಕಾಮಗಾರಿ ಕೆಲಸ ಆರಂಭವಾಗುತ್ತದೆ. ಹಾಗೂ ತರೀಕೆರೆ ಬೈ ಪಾಸ್ ಕಾಮಗಾರಿ ಮರ ಕಡಿತ ನಿಂದ ಅರ್ಧಕ್ಕೆ ನಿಂತಿದ್ದು, ಅರಣ್ಯ ಇಲಾಖೆ ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಕಾಮಗಾರಿಗೆ ದಾರಿ ಮಾಡಿಕೊಡಬೇಕು ಎಂದು ಸೂಚಿಸಿದರು.

ಕೇಂದ್ರ ಸರ್ಕಾರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕಳೆದ ಬಾರಿ ರೂ.3500 ಕೋಟಿ ನೀಡಿತ್ತು. ಆದರೆ ಈ ಬಾರಿ ರೂ.1500 ಕೋಟಿ ಬಿಡುಗಡೆ ಮಾಡಿದೆ. ಆಗುಂಬೆ ಮಾರ್ಗದ ಅಭಿವೃದ್ದಿಗೆ ರೂ.400 ಕೋಟಿ ಬಿಡುಗಡೆ ಆಗಿದೆ. ರಾಜ್ಯ ಸರ್ಕಾರ, ಅಧಿಕಾರಿಗಳು, ಪರಿಸರವಾದಿಗಳು ವರದಿ ನೀಡಿದ ಮೇಲೆ ಆ ಮಾರ್ಗಕ್ಕೆ ಟನಲ್ ಮಾಡುವುದೊ ಅಥವಾ ರಸ್ತೆ ಅಗಲೀಕರಣ ಮಾಡುವುದೊ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಸಂಚರಿಸಲು ಈಗಾಗಲೇ ರೈಲ್ವೆ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಆದರೆ ಶಿಕಾರಿಪುರ ದಿಂದ ರಾಣೆಬೆನ್ನೂರು ರೈಲ್ವೆ ಮಾರ್ಗ ಮಾಡಲು ಭೂಸ್ವಾಧೀನ ಕುರಿತಾದ ಸಮಸ್ಯೆ ಇದೆ. ಈ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ರೂ.45 ಕೋಟಿ ಹಣವನ್ನು ಒಂದು ವಾರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಅದು ಬಂದ ಕೂಡಲೇ ಈ ಕಾರ್ಯ ಮುಂದುವರೆಯುತ್ತದೆ. ಮಾರ್ಚ್ ಒಳಗೆ ಶಿವಮೊಗ್ಗದಿಂದ ಶಿಕಾರಿಪುರ, ಶಿಕಾರಿಪುರದಿಂದ ರಾಣಿಬೆನ್ನೂರು ರೈಲ್ವೆ ಮಾರ್ಗ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಸಿಸಿಎಫ್ ಹನುಂತಪ್ಪ, ಎಸ್‌ಪಿ ಬಿ.ನಿಖಿಲ್, ಡಿಸಿಎಫ್ ಅಜ್ಜಯ್ಯ, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ವಿಶೇಷ ಭೂಸ್ವಾಧೀನಾಧಿಕಾರಿ ಸಿದ್ದಲಿಂಗ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Gaurav Institute of Computers ಮೂರು ತಿಂಗಳ ಅವಧಿಯ ಉಚಿತ ಕೃತಕ ಬುದ್ಧಿಮತ್ತೆ ( ಎಐ) ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ.

0

Gaurav Institute of Computers ಶಿವಮೊಗ್ಗ ನಗರದ ಗಾರ್ಡ್‌ನ್ ಏರಿಯ 3ನೇ ತಿರುವಿನಲ್ಲಿರುವ ಗೌರವ್ ಇನ್ಸಿಟ್ಯೂಟ್ ಆಫ್ ಕಂಪ್ಯೂಟರ್ ಆಶ್ರಯದಲ್ಲಿ ಮತ್ತು ಸರ್ಕಾರಿ ಪ್ರಾಯೋಜ ಕತ್ವದಲ್ಲಿ ಜ. 7ರಿಂದ 3 ತಿಂಗಳುಗಳ ಕಾಲ ಉಚಿತವಾಗಿ ಇಂಜಿನಿಯರ್ ಪಡೆದ ವಿದ್ಯಾರ್ಥಿಗಳಿಗೆ (Artificial Intelligence Application Developer) ತರಬೇತಿ ನೀಡಲಾಗುತ್ತಿದೆ.

Gaurav Institute of Computers ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಖ್ಯಾತ ಕಂಪನಿಗಳಿಂದ ಉದ್ಯೋಗ ನೀಡಲಾಗುವುದು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಸಂಸ್ಥೆ ವಿನಂತಿಸಿದೆ. ಮಾಹಿತಿಗೆ ದೂ. 08182 221268, ಮೊ. 8277683666 ಮತ್ತು 9448722033ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

Mcgann Hospital ಶಿವಮೊಗ್ಗ ಸಿಮ್ಸ್ ನಲ್ಲಿ ಉಳಿಕೆ ಸೀಟುಗಳ ಭರ್ತಿಗೆ ಪ್ರಕಟಣಾ ಮಾಹಿತಿ.

0

Mcgann Hospital ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ ಇಲ್ಲಿ 2025-26 ನೇ ಸಾಲಿನಲ್ಲಿ ಕೆಇಎ ಮೂಲಕ ಎಲ್ಲಾ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿಕೆಯಾಗಿರುವ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸಿನ ಸೀಟುಗಳನ್ನು ಭರ್ತಿ ಮಾಡಲಾಗುವುದು.

ಬಿಎಸ್‌ಸಿ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ ರೆಗ್ಯುಲರ್ 05, ಲ್ಯಾಟರಲ್ 04 ಒಟ್ಟು 09. ಬಿಎಸ್‌ಸಿ ಆಪ್ಟೆಮೆಟ್ರಿ ರೆಗ್ಯುಲರ್ 20. ಬಿಎಸ್‌ಸಿ ರೀನಲ್ ಡಯಾಲಿಸಿಸ್ ಟೆಕ್ನಾಲಜಿ 10. ಬಿಎಸ್‌ಸಿ ರೆಸ್ಪರೇಟರಿ ಕೇರ್ ಟೆಕ್ನಾಲಜಿ 02. ಬಿಎಸ್‌ಸಿ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ರೆಗ್ಯುಲರ್ 02, ಲ್ಯಾಟರಲ್ 01 ಒಟ್ಟು 03 ಸೀಟುಗಳು ಲಭ್ಯವಿದೆ.

Mcgann Hospital ಜ.08 ರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 5 ಗಂಟೆವರೆಗೆ ವಾಕ್ ಇನ್ ಅಡ್ಮಿಷನ್‌ನ್ನು 2ನೇ ಫ್ಲೋರ್‌ನ ಕಮ್ಯುನಿಟಿ ಮೆಡಿಸಿನ್ ಲೆಕ್ಚರರ್ ಹಾಲ್, ಸಿಮ್ಸ್ ಶಿವಮೊಗ್ಗ ಇಲ್ಲಿ ನಿಗದಿಪಡಿಸಲಾಗಿದೆ. ಕೆಇಎ ನಲ್ಲಿ ನೋಂದಾಯಿತ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲಾಗುವುದು ಎಂದು ಸಿಮ್ಸ್ ನಿರ್ದೇಶಕರು ತಿಳಿಸಿದ್ದಾರೆ.

Rangayana “ಸ್ವಾತಂತ್ರ್ಯದ ಓಟ” ನಾಟಕದಲ್ಲಿ ಅಭಿನಯಿಸಲು ಕಲಾವಿದರಿಗೆ “ರಂಗಾಯಣ”ದಿಂದ ಅರ್ಜಿ ಆಹ್ವಾನ

0

Rangayana ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೊಳುವಾರು ಮೊಹಮ್ಮದ್ ಕುಂಞ ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಯನ್ನು ನಾಟಕ ರೂಪದಲ್ಲಿ ರಂಗಾಯಣ, ಶಿವಮೊಗ್ಗ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶಿಸುವ ಯೋಜನೆ ಹಮ್ಮಿಕೊಂಡಿದ್ದು, ಈ ಯೋಜನೆಗೆ 2026 ರ ಫೆಬ್ರವರಿಯಿಂದ 2026 ರ ಜೂನ್‌ವರೆಗೆ ಐದು ತಿಂಗಳ ಅವಧಿಗೆ ರೆಪರ್ಟರಿ ಕಲಾವಿದರಲ್ಲದೇ 15 ಜನ ಆಸಕ್ತ ಹಾಗೂ ಅನುಭವಿ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.

Rangayana ಕಲಾವಿದರ ವಯಸ್ಸು ಕನಿಷ್ಟ 20 ರಿಂದ ಗರಿಷ್ಟ 40 ಇರಬೇಕು. ಆಯ್ಕೆಯಾದ ಕಲಾವಿದರಿಗೆ ಮಾಹೆಯಾನ ರೂ.22 ಸಾವಿರ ಗೌರವ ಸಂಭಾವನೆ, ಊಟ, ಉಪಹಾರ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುವುದು. ಯೋಜನೆಯು 5 ತಿಂಗಳ ಅವಧಿಯಾಗಿದ್ದು ಅರ್ಜಿ ಸಲ್ಲಿಸಲು ಜ.16 ಕಡೆಯ ದಿನವಾಗಿರುತ್ತದೆ. ಅರ್ಜಿಯನ್ನು ಆಡಳಿತಾಧಿಕಾರಿಗಳು, ರಂಗಾಯಣ, ಹೆಲಿಪ್ಯಾಡ್ ಹಿಂಭಾಗ, ಅಶೋಕನಗರ, ಶಿವಮೊಗ್ಗ 577201 ಇಲ್ಲಿಗೆ ಖುದ್ದಾಗಿ, ಅಂಚೆ ಮೂಲಕ ಅಥವಾ ಇ-ಮೇಲ್ admin.rangayanashivamogga@gmail.com ಮೂಲಕ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ರಂಗಾಯಣ, ಶಿವಮೊಗ್ಗ ಕಚೇರಿ, ದೂರವಾಣಿ ಸಂಖ್ಯೆ : 08182-256353, 7975229166 ನ್ನು ಸಂಪರ್ಕಿಸಬಹುದಾಗಿದೆ. ಅರ್ಜಿಯೊಂದಿಗೆ ತಮ್ಮ ಇತ್ತೀಚಿನ ಭಾವಚಿತ್ರ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ರಂಗಭೂಮಿ ಅನುಭವದ ವಿವರ, ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಬೇಕೆಂದು ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ ಸಿ ತಿಳಿಸಿದ್ದಾರೆ.

Sri Adi Chunchanagiri ಶ್ರೀ ಆದಿಚುಂಚನಗಿರಿ ಮಠವು ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸಾಧನೆಗೈದು ದೇಶಕ್ಕೇ ಮಾದರಿ- ಎಸ್.ಎನ್.ಚನ್ನಬಸಪ್ಪ.

0

Sri Adi Chunchanagiri ಸಂಸ್ಕೃತಿ ಮತ್ತು ಸಂಸ್ಕಾರ ಮನುಷ್ಯನ ಜೀವನಕ್ಕೆ ಅಗತ್ಯವಾಗಿ ಬೇಕು ಎಂದು ಶಿವಮೊಗ್ಗ ಶಾಸಕರಾದ ಎಸ್. ಎನ್.ಚನ್ನಬಸಪ್ಪ ಅವರು ಅಭಿಪ್ರಾಯ ಪಟ್ಟರು.

ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಪ್ರೌಢಶಾಲೆ ಮತ್ತು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ,, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ,ಅದಕ್ಕೆ ಪೂರಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡಿ, ಶ್ರೀ ಮಠವು ದೇಶಕ್ಕೆ ಮಾದರಿಯಾಗಿದೆ ಎಂದರು.

ದೇಶ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದ ಆಗತ್ಯತೆ ಇದೆ. ಅಂತಹ ಕೆಲಸವನ್ನು ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಮಾಡ್ತಾ
ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಶ್ರೀಮಠ ಶಿಕ್ಷಣದ ಜೊತೆ ಜೊತೆಗೆ, ಕ್ರೀಡೆ,ವಿಜ್ಞಾನ, ಕಲೋತ್ಸವ ಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರತಿಯೊಬ್ಬರಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ.ಅಂತಹ ಪ್ರತಿಭೆಗಳನು ಗುರುತಿಸಿ ಪ್ರೋತ್ಸಾಹ ನೀಡಿದ್ದೇ ಆದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ.

ರಾಜ್ಯದಲ್ಲಿಯೇ ಮೊದಲ ಬಾರಿಗೆ ನಮ್ಮ ಸಂಸ್ಥೆಗೆ ಕೃಷಿ ಕಾಲೇಜು ಕೊಟ್ಟಿರುವುದು ಹೆಮ್ಮೆಯ ಸಂಗತಿ. ಕೃಷಿ ನಮ್ಮ ದೇಶದ ಬೆನ್ನೆಲುಬು, ಋಷಿ ಮತ್ತು ಕೃಷಿ ಈ ದೇಶದಲ್ಲಿ ಸಮೃದ್ಧಿಯಾಗಿದ್ದರೆ,ಎಲ್ಲವೂ ಸಮೃದ್ಧಿಯಾಗಲು ಸಾಧ್ಯ ಎಂದರು.

Sri Adi Chunchanagiri ಭಾರತೀಯ ಸಂಸ್ಕೃತಿಗೆ ಹೊಂದಿಕೊಳ್ಳುವಂಥ ಶಿಕ್ಷಣದ ವ್ಯವಸ್ಥೆ ನಮ್ನ ಮಕ್ಕಳಿಗೆ ಸಿಗುತ್ತಾಯಿದೆ. ಹಾಗಾಗಿ ನಮ್ಮ ಮಕ್ಕಳು ದಾರಿ ತಪ್ಪಲು ಸಾಧ್ಯವಿಲ್ಲ ಎಂದರು.
ಮಕ್ಕಳು ಕನಿಷ್ಠ ಪಕ್ಷ ದಿನಕ್ಕೊಮ್ಮೆಯಾದರೂ ಹಿರಿಯರನ್ನ, ಹೆತ್ತವರನ್ನು ಗೌರವಿಸುವುದನ್ನು, ನಮಸ್ಕರಿಸುವುದನ್ನು ಕಲಿಯಿರಿ, ಚೆನ್ನಾಗಿ ಓದಿ,ಸೋಮಾರಿತನ ಬಿಡಿ ಸಂಸ್ಕೃತಿ ಅರಿವು ನಿಮಗಿರಲಿ, ಮಕ್ಕಳಿಗೆ ಕಿವಿಮಾತು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಶಾಖೆಯ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು, ಶ್ರೀ ಕ್ಷೇತ್ರ ಶಾಖೆಯ ಪೂಜ್ಯ ಶ್ರೀ ಸಂವಿಧಾನಂದನಾಥ ಸ್ವಾಮೀಜಿಯವರು,ಮಾಯಸಂದ್ರ ಶಾಖೆಯ ಪೂಜ್ಯ ಶ್ರೀ ರಾಜಯೋಗನಂದನಾಥ ಸ್ವಾಮೀಜಿಯವರು, ಸಂಪನ್ಮೂಲ ವ್ಯಕ್ತಿಗಳಾದ ಡಾ. ರಾಹುಲ್ ದೇವರಾಜ್, ಅಧಿಕೃತ ಫಿನಿಶರ್ 2025 ಐರನ್ ಮ್ಯಾನ್ 70.3, ಗೋವಾ, ಶ್ರೀ ಹರ್ಷ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಆಡಳಿತಾಧಿಕಾರಿ ಡಾ‌.ಎ.ಟಿ.ಶಿವರಾಮ,ಶ್ರೀ ಆದಿಚುಂಚನಗಿರಿ ಕೃಷಿ ವಿಜ್ಞಾನ ಕಾಲೇಜಿನ, ಪ್ರಾಂಶುಪಾಲ ಶಿವಲಿಂಗೇಗೌಡ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ನಿರ್ದೇಶಕರಗಳು, ಪ್ರಾಂಶುಪಾಲರು, ಸಿಬ್ಬಂದಿಯ ವರ್ಗದವರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ರಾಜ್ಯ ಹಾಗೂ ರಾಷ್ಟ್ರ, ಅಂತರಾಷ್ಟ್ರ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಶಾಲಾ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪೂಜ್ಯರಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಕೊನೆಯಲ್ಲಿ ಎಸಿಎಸ್ ಸಾಂಸ್ಕೃತಿಕ ಉತ್ಸವ ಮಕ್ಜಳಿಂದ ಜರುಗಿದವು

Shivanand Patil ಕೈಮಗ್ಗದ ಉತ್ತೇಜನಕ್ಕೆ ಪೂರಕ ಅಂಶಗಳನ್ನ ಜವಳಿ ನೀತಿಯಲ್ಲಿ ಅಳವಡಿಸಲಾಗುವುದು- ಶಿವಾನಂದ ಪಾಟೀಲ್.

0

Shivanand Patil ಕೈಮಗ್ಗ ಉತ್ತೇಜನಕ್ಕೆ ಪೂರಕವಾದ ಅಂಶಗಳನ್ನು ನೂತನ ಜವಳಿ ನೀತಿಯಲ್ಲಿ ಅಳವಡಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಮಹಾಲಕ್ಷ್ಮಿ ಪುರಂ ಲೇಔಟ್‌ನ ರಾಣಿ ಅಬ್ಬಕ್ಕ ಮೈದಾನದಲ್ಲಿ ಆಯೋಜಿಸಿರುವ 15 ದಿನಗಳ ರಾಷ್ಟ್ರೀಯ ಕೈಮಗ್ಗ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಸಚಿವರು, ಹೊಸತನ ಅಳವಡಿಸಿಕೊಂಡರೆ ಮಾತ್ರ ಕೈಮಗ್ಗ ಉದ್ಯಮಕ್ಕೆ ಭವಿಷ್ಯ ಇದೆ. ಈ ನಿಟ್ಟಿನಲ್ಲಿ ಪೂರಕ ಅಂಶಗಳನ್ನು ಜವಳಿ ನೀತಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.

ನೇಕಾರ ಸಮ್ಮಾನ್‌ ಯೋಜನೆಯಲ್ಲಿ ನೀಡುತ್ತಿದ್ದ ರೂ 2000 ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ರೂ 5000ಗಳಿಗೆ ಹೆಚ್ಚಳ ಮಾಡಿದ್ದು, 2024-25ನೇ ಸಾಲಿನಲ್ಲಿ 1,17,459 ನೇಕಾರರ ಬ್ಯಾಂಕ್‌ ಖಾತೆಗಳಿಗೆ ರೂ 58.69 ಕೋಟಿಗಳನ್ನು ಜಮಾ ಮಾಡಲಾಗಿದೆ.

2025-26ನೇ ಸಾಲಿನಲ್ಲಿ 1.2 ಲಕ್ಷ ಕೈಮಗ್ಗ ಮತ್ತು ವಿದ್ಯುತ್‌ ಮಗ್ಗ ನೇಕಾರರನ್ನು ಈ ಯೋಜನೆಯಲ್ಲಿ ಅಳವಡಿಸಲು ರೂ 60 ಕೋಟಿ ಹಂಚಿಕೆ ಮಾಡಲಾಗಿದ್ದು, ಮೊದಲ ಕಂತಿನಲ್ಲಿ ತಲಾ ರೂ 2,500ಗಳಂತೆ ರೂ 29.99 ಕೋಟಿಗಳನ್ನು ಡಿಬಿಟಿ ಮೂಲಕ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ನೇಕಾರರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾಹ ದೃಷ್ಟಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, 2024-25ನೇ ಸಾಲಿನಲ್ಲಿ 2843 ವಿದ್ಯಾರ್ಥಿಗಳಿಗೆ ರೂ 1.65 ಕೋಟಿ ಹಾಗೂ 2025-26ನೇ ಸಾಲಿನಲ್ಲಿ ಇದುವರೆಗೆ 1137 ವಿದ್ಯಾರ್ಥಿಗಳಿಗೆ ರೂ 62.62 ಲಕ್ಷ ನೀಡಲಾಗಿದೆ ಎಂದರು.

ಕೈಮಗ್ಗ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸಲು ಪ್ರತಿಶತ 20ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, 2024-25ನೇ ಸಾಲಿನಲ್ಲಿ ಈ ಉದ್ದೇಶಕ್ಕೆ ರೂ5.04 ಕೋಟಿ, 2025-26ನೇ ಸಾಲಿನಲ್ಲಿ ರೂ 54.93 ಲಕ್ಷಗಳನ್ನು ಸರ್ಕಾರ ಕೈಮಗ್ಗ ನೇಕಾರರ ಸಹಕಾರ ಸಂಘ ಹಾಗೂ ಕೈಮಗ್ಗ ಮಹಾಮಂಡಳಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

Shivanand Patil ವಿದ್ಯುತ್‌ ಮಗ್ಗಗಳಿಗೆ ಹತ್ತು ಹೆಚ್‌ಪಿವರೆಗೆ ಪ್ರತಿಶತ ನೂರರಷ್ಟು ವಿದ್ಯುತ್‌ ರಿಯಾಯಿತಿ ನೀಡಲಾಗಿದೆ. 10.1 ರಿಂದ 20 ಹೆಚ್‌ಪಿವರೆಗಿನ ಮಗ್ಗಗಳಿಗೆ ಪ್ರತಿ ಯೂನಿಟ್‌ಗೆ ರೂ 1.25ಗಳಂತೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಇದುವರೆಗೆ ವಿದ್ಯುತ್‌ ಸಹಾಯ ಯೋಜನೆಗೆ ರೂ 252.97 ಕೋಟಿಗಳನ್ನು ಜವಳಿ ಇಲಾಖೆಯಿಂದ ಇಂಧನ ಇಲಾಖೆಗೆ ಭರಿಸಲಾಗಿದೆ ಎಂದು ಹೇಳಿದರು.

ಸಮಗ್ರ ಜವಳಿ ಪಾರ್ಕ್‌
ಕಲಬುರಗಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಸಮಗ್ರ ಜವಳಿ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದ್ದು, ಮೂಲ ಸೌಕರ್ಯ ಕಲ್ಪಿಸಲು 390.26 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಜವಳಿ ಪಾರ್ಕ್‌ಗೆ 180 ಮೆಗಾ ವ್ಯಾಟ್‌ ವಿದ್ಯುತ್‌ ಪೂರೈಕೆಗೆ ಪವರ್‌ ಸ್ಟೇಷನ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಗೆ ನಂದಿಕೂರು ಗ್ರಾಮದ ಎಸ್‌ಟಿಪಿಯಿಂದ 12.09 ಎಂಎಲ್‌ಡಿ ನೀರು ಪೂರೈಕೆ ಮಾಡಲು ಸಮೀಕ್ಷೆ ಕೈಗೊಂಡಿದ್ದು, ಪೈಪ್‌ಲೈನ್‌ ಡಿಸೈಜ್‌ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಗೋಪಾಲಯ್ಯ ಅವರು, ಮತನಾಡಿ, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನೇಕಾರರ ಸಂಖ್ಯೆ ಅಧಿಕ ಪ್ರಮಾಣದಲ್ಲಿದ್ದು, ಶಾಸಕನಾಗಿ ಕೈಮಗ್ಗ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುತ್ತೇನೆ ಎಂದರು.

ಕಾವೇರಿ ಹ್ಯಾಂಡ್‌ಲೂಮ್‌ ಅಧ್ಯಕ್ಷ ಜೆ.ಬಿ.ಗಣೇಶ್‌ ಅವರು, ಮತನಾಡಿ ಕಾವೇರಿ ಹ್ಯಾಂಡ್‌ಲೂಮ್ಸ್‌ ಪುನಶ್ಚೇತನಕ್ಕೆ ಸರ್ಕಾರದಿಂದ ರೂ 25 ಕೋಟಿ ನೆರವು ಕೊಡಿಸಬೇಕು ಹಾಗೂ ಕೆಎಚ್‌ಡಿಸಿ ಮಾದರಿಯಲ್ಲಿ 4 ಎಚ್‌ ಸೌಲಭ್ಯ ನೀಡಬೇಕು ಎಂದು ಜವಳಿ ಸಚಿವರಿಗೆ ಮನವಿ ಮಾಡಿದರು.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕೈಮಗ್ಗ ಮತ್ತು ಜವಳಿ ಇಲಾಖೆ ನಿರ್ದೇಶಕಿ, ಜವಳಿ ಅಭಿವೃದ್ಧಿ ಆಯುಕ್ತೆ ಕೆ. ಜ್ಯೋತಿ, ಕೆಎಸ್‌ಟಿಐಡಿಸಿ ಅಧ್ಯಕ್ಷ ಚೇತನ್‌, ಉಪಾಧ್ಯಕ್ಷ ಬಾಲಾಜಿ ಉಪಸ್ಥಿತರಿದ್ದರು.

S. N. Channabasappa ಜನವರಿ 3. ಸುಂದರ ಸಂಜೆ ತೆಪ್ಪೋತ್ಸವ ನೋಡಲು ಬನ್ನಿ- ಶಾಸಕ ಚೆನ್ನಿ ಆಹ್ವಾನ

0

S. N. Channabasappa ಶಿವಮೊಗ್ಗ ನಗರದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಗ್ಗುರುತಾಗಿರುವ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರಸ್ತುತ ಶ್ರೀ ಸೀತಾರಾಮ ಕಲ್ಯಾಣ ಶತಮಾನೋತ್ಸವದ ಸಂಭ್ರಮ ಮನೆಮಾಡಿದೆ.
ಳಈ ಅಭೂತಪೂರ್ವ ಸಂಭ್ರಮದ ಅಂಗವಾಗಿ ಇಂದು ದಿನಾಂಕ 03.01.2026ರ ಶನಿವಾರ ಸಂಜೆ ಪವಿತ್ರ ತುಂಗಾ ನದಿಯ ಮಡಲಿನಲ್ಲಿ ಭವ್ಯ ‘ತೆಪ್ಪೋತ್ಸವ’ ಕಾರ್ಯಕ್ರಮ ಜರುಗಲಿದ್ದು, ನಗರದ ಸಮಸ್ತ ಭಕ್ತಾದಿಗಳು ಭಾಗವಹಿಸಬೇಕೆಂದು ಈ ಮೂಲಕ ಆಮಂತ್ರಿಸುತ್ತೇನೆ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್. ಚೆನ್ನಬಸಪ್ಪ ತಿಳಿಸಿದ್ದಾರೆ.

ಕೆಳದಿ ಅರಸರ ಕಾಲದಿಂದಲೂ ಐತಿಹಾಸಿಕ ಮಹತ್ವ ಪಡೆದಿರುವ ಹಳೆಯ ಶಿವಮೊಗ್ಗದ ಕೋಟೆ ಪ್ರದೇಶವು ಹಿಂದೂ ಸಂಸ್ಕೃತಿಗೆ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯವು ಭಕ್ತರ ಶ್ರದ್ಧಾಕೇಂದ್ರವಾಗಿದ್ದು, ಈಗ ಶತಮಾನೋತ್ಸವದ ಹೊಸ್ತಿಲಲ್ಲಿದೆ. ದಕ್ಷಿಣಾಭಿಮುಖವಾಗಿ ಹರಿಯುವ ಪುಣ್ಯನದಿ ತುಂಗಾ ತೀರದಲ್ಲಿ ಈ ದೇವಾಲಯವು ಇರುವುದು ನಗರದ ಸೌಭಾಗ್ಯ. ಕಳೆದ 74 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ತೆಪ್ಪೋತ್ಸವವು, ಶಿವಮೊಗ್ಗದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದಿದ್ದಾರೆ.

S. N. Channabasappa ಸೂರ್ಯಾಸ್ತದ ಮನಮೋಹಕ ಹೊತ್ತಿನಲ್ಲಿ, ವಿದ್ಯುತ್ ದೀಪಗಳಿಂದ ಶೃಂಗರಿಸಲ್ಪಟ್ಟ ಭವ್ಯ ತೆಪ್ಪದಲ್ಲಿ ಶ್ರೀ ಸೀತಾರಾಮ ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗಳು ತುಂಗಾ ನದಿಯಲ್ಲಿ ವಿಹರಿಸುವ ದೃಶ್ಯ ಅತ್ಯಂತ ನಯನಮನೋಹರವಾಗಿರುತ್ತದೆ. ನದಿಯ ಅಲೆಗಳ ಮೇಲೆ ತೇಲಿಬರುವ ದೈವಿಕ ಕಳೆಯನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ಸಾವಿರಾರು ಭಕ್ತರು ತುಂಗಾ ತೀರಕ್ಕೆ ಆಗಮಿಸುತ್ತಾರೆ. ಪಟಾಕಿಗಳ ಸಂಭ್ರಮ, ಮಂತ್ರಘೋಷ ಹಾಗೂ ಭಕ್ತರ ಜೈಕಾರದ ನಡುವೆ ನಡೆಯುವ ಈ ಕಾರ್ಯಕ್ರಮವು ಕೇವಲ ಧಾರ್ಮಿಕ ವಿಧಿಯಲ್ಲ, ಇದು ಶಿವಮೊಗ್ಗದ ಭಾವೈಕ್ಯತೆ ಮತ್ತು ಸಂಭ್ರಮದ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ನಗರದ ಇತಿಹಾಸ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.

Gurudutt Hegde ಎಲ್ಲರ ಸಹಕಾರವು ನನನ್ನು ಉತ್ತಮ ಜಿಲ್ಲಾಧಿಕಾರಿಯನ್ನಾಗಿಸಿದೆ- ಗುರುದತ್ತ ಹೆಗಡೆ.

0

Gurudutt Hegde ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಮಾಧ್ಯಮದವರು, ಸಾರ್ವಜನಿಕರು ಅತ್ಯುತ್ತಮ ಸಹಕಾರ ನೀಡಿ ನನ್ನನ್ನು ಉತ್ತಮ ಜಿಲ್ಲಾಧಿಕಾರಿಯಾಗಿ ಮಾಡಿದ್ದಾರೆಂದು ಆರೋಗ್ಯ ಇಲಾಖೆ ಆಯುಕ್ತರಾಗಿ ಪದೋನ್ನತಿ ಹೊಂದಿದ ನಿಕಟಪೂರ್ವ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ನುಡಿದರು.
ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಶಿವಮೊಗ್ಗ ಜಿಲ್ಲೆಯ ವತಿಯಿಂದ ಶನಿವಾರ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ನಿಕಟಪೂರ್ವ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಮತ್ತು ನೂತನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ಅವರಿಗೆ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪರಿಭಾವಿತ(ಡೀಮ್ಡ್) ಅರಣ್ಯ ಪ್ರದೇಶ ಸುಮಾರು 7000 ಎಕರೆಗೆ ಸಂಬAಧಿಸಿದ ವಿಷಯ ಬಗೆಹರಿಸಲು ಸಾಕಷ್ಟು ಕೆಲಸಗಳಾಗಿದ್ದು ಇದೀಗ ತಂಡ ರಚಿಸಲಾಗಿದೆ. ಹಾಗೂ ನೆನೆಗುದಿಗೆ ಬಿದ್ದಿದ್ದ ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಕೆಲಸ ತಾರ್ಕಿಕ ಅಂತ್ಯ ತಲುಪುತ್ತಿರುವುದು ಉತ್ತಮ ವಿಷಯ. ಅರಣ್ಯ ಇಲಾಖೆಯಲ್ಲಿ ಎಲ್ಲ ಅಧಿಕಾರಿಗಳು ಅತ್ಯುತ್ತಮವಾಗಿ ಬೆಂಬಲ ನೀಡಿದ್ದಾರೆ. ಸುಲಭವಾಗಿ ಕೆಲಸಗಳನ್ನು ಮಾಡುವ ಮೂಲಕ ಸಹಕಾರ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಜಿಲ್ಲೆಯ ಎಸ್‌ಪಿ ಯಾಗಿದ್ದ ಮಿಥುನ್ ಕುಮಾರ್ ನನಗೆ ಶಕ್ತಿ ಮತ್ತು ಸಹಕಾರ ನೀಡಿದ್ದರು. ಅವರು ಕಷ್ಟಕರವಾದ ಕೆಲಸಗಳನ್ನು ಕೈಗೆತ್ತಿಕೊಂಡು ಮಾಡುತ್ತಿದ್ದರು. ಡ್ರಗ್ಸ್ ಮತ್ತು ಅಪರಾಧ ವಿಷಯ ನಿರ್ವಹಣೆಯಲ್ಲಿ ಉತ್ತಮ ನಿರ್ಣಯ ತೆಗೆದುಕೊಳ್ಳುತ್ತಿದ್ದರು. ಅವರಿಗೆ ಧನ್ಯವಾದಗಳು.
ಜಿ.ಪಂ ಸಿಇಓ ಹೇಮಂತ್, ಕೆಲಸದಲ್ಲಿ ಅತಿ ಆಸಕ್ತಿ ಇರುವ ಅಧಿಕಾರಿ. ತುಂಬಾ ಮುತುವರ್ಜಿ ತೆಗೆದುಕೊಂಡು ಕೆಲಸ ಮಾಡುವ ಗುಣ ಹೊಂದಿದ್ದಾರೆ. ವಿನೂತನವಾದ ಕೆಲಸಗಳನ್ನು ಶ್ರಮ ವಹಿಸಿ ಮಾಡುತ್ತಾರೆ. ಮಿಷನ್ ಸುರಕ್ಷಾ ಅಭಿಯಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತಮವಾಗಿ ಕೆಲಸ ಮಾಡುತ್ತಿದೆ. ನೌಕಕರಿಗೆ ಉತ್ತೇಜನ ನೀಡುತ್ತಿದೆ. ಎಲ್ಲ ಇಲಾಖೆಗಳು ಅತ್ಯುತ್ತಮ ಕೆಲಸ ಮಾಡಿ ಬೆಂಬಲ ನೀಡಿದ್ದೀರಿ. ನೂತನವಾಗಿ ಬಂದಿರುವ ಡಿಸಿ ಮತ್ತು ಎಸ್‌ಪಿ ಗಳು ಉತ್ತಮ ಅನುಭವ ಇರುವ ಅಧಿಕಾರಿಗಳು. ಜಿಲ್ಲೆಯಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಾರೆ. ಅವರಿಗೂ ಸಹ ನಿಮ್ಮೆಲ್ಲರ ಬೆಂಬಲ ಹೀಗೇ ಇರಲಿ. ನನ್ನ ಹೆಸರಿಗೆ ಕಾರಣ ಈ ಜಿಲ್ಲೆ: ಸಾಗರ ಹತ್ತಿರ ವರದಾಶ್ರಮದ ಶ್ರೀಧರ ಸ್ವಾಮಿಗಳ ಅನುಯಾಯಿಗಳು ನನ್ನ ತಂದೆ ತಾಯಿ. ನಾನು ದತ್ತ ಜಯಂತಿಯAದು ಹುಟ್ಟಿದ ಕಾರಣ ಗುರುದತ್ತ ಎಂದು ಹೆಸರಿಟ್ಟಿದ್ದು ಈ ಜಿಲ್ಲೆ ನನಗೆ ಹೆಸರನ್ನು ನೀಡಿರುವುದನ್ನು ಸದಾ ಸ್ಮರಿಸುತ್ತೇನೆ ಎಂದರು.

ಗುರುದತ್ ಹೆಗಡೆ ಸರ್ ಜಿಲ್ಲೆಯ ಅರಣ್ಯ ವಿಷಯಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದು, ಉತ್ತಮ ಬೆಂಬಲ ನೀಡಿದ್ದರು. ಅವರು ಸಹೃದಯಿಯಾಗಿದ್ದು ಜಿಲ್ಲೆಯ ಯಾವುದೇ ರೀತಿಯ ಸಮಸ್ಯೆಗಳು, ಕೆಲಸಗಳಲ್ಲಿ ಸಹಕಾರಿಯಾಗಿದ್ದರು. ಡೀಮ್ಡ್ ಫಾರೆಸ್ಟ್ ವಿಷಯದಲ್ಲಿ ಸಮನ್ವಯ ಸಾಧಿಸಿ, ತಂಡಗಳನ್ನು ರಚಿಸುವ ಮೂಲಕ ಕಾರ್ಯವನ್ನು ಸುಲಲಿತಗೊಳಿಸಿದರು. ಹಾಗೂ ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ವಿಷಯದಲ್ಲಿ ಸಹ ಉತ್ತಮ ಕಾರ್ಯವೆಸಗಿ ಈ ವಿಷಯ ಒಂದು ತಾರ್ಕಿಕ ಹಂತಕ್ಕೆ ತಲುಪಿಸಲು ಸಹಕಾರಿಯಾಗಿದ್ದಾರೆ. ದೀರ್ಘ ಕಾಲೀಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಹಾಗೆಯೇ ನೂತನ ಜಿಲ್ಲಾಧಿಕಾರಿಗಳು ಮತ್ತು ವರಿಷ್ಟಾಧಿಕಾರಿಗಳು ಸಹ ಜಿಲ್ಲೆಯಲ್ಲಿ ಉತ್ತಮ ಆಡಳಿತ ನಡೆಸುವರೆಂಬ ಭರವಸೆ ಕೆ.ಟಿ.ಹನುಮಂತಪ್ಪ, ಸಿಸಿಎಫ್

ಗುರುದತ್ತ ಹೆಗಡೆಯವರು ‘ಮ್ಯಾನ್ ಆಫ್ ಗ್ರೇಟ್ ವ್ಯಾಲ್ಯೂಸ್’ ಎನ್ನಬಹುದು. ಕರ್ತವ್ಯ ಮತ್ತು ಕುಟುಂಬ ಎರಡನ್ನು ಸಮತೋಲನದಲ್ಲಿ ತೆಗೆದುಕೊಂಡು ಹೋಗುವ ವ್ಯಕ್ತಿತ್ವ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಪೊಲೀಸ್ ಇಲಾಖೆಗೆ ಬೆನ್ನೆಲುಬಾಗಿ ಜೊತೆ ನಿಂತಿದ್ದರು. ಅವರು ಅಧೀನ ಅಧಿಕಾರಿ, ನೌಕರರಿಗೆ ಉತ್ತಮವಾಗಿ ಕೆಲಸ ಹಂಚಿಕೆ, ನಿಯೋಜನೆ ಮಾಡುತ್ತಾ ಎಲ್ಲರಿಗೂ ಸ್ಪೂರ್ತಿಯಾಗಿದ್ದರು. – ಜಿ.ಕೆ.ಮಿಥುನ್ ಕುಮಾರ್, ಡಿಸಿಪಿ ಈಶಾನ್ಯ(ಶಿವಮೊಗ್ಗದಿಂದ ವರ್ಗಾವಣೆಗೊಂಡ ಎಸ್‌ಪಿ-ವಿಡಿಯೋ ಮೂಲಕ)

‘ದಿ ಬೆಸ್ಟ್ ಡಿಸಿ’ ಜೊತೆ ಕೆಲಸ ಮಾಡುವ ಅವಕಾಶ ನನಗೆ ದೊರೆತಿದ್ದು ನನ್ನ ಪುಣ್ಯ. ಯಾವುದೇ ರೀತಿಯ ಕ್ಲಿಷ್ಟಕರ ಸಮಸ್ಯೆಗಳಿದ್ದರೂ ಸರಳವಾದ ಪರಿಹಾರಗಳನ್ನು ಹುಡುಕುತ್ತಿದ್ದರು. ಕಿರಿಯ ಅಧಿಕಾರಿಗಳಿಗೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸ್ವಾತಂತ್ರö್ಯ ನೀಡಿದ್ದು, ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ನಿಡುತ್ತಿದ್ದುದು ನಮಗೆ ಸ್ಪೂರ್ತಿಯಾಗಿತ್ತು. ಅವರು ಸದ್ಗುಣಿ ಮತ್ತು ಸರಳ ಜೀವಿಗಳು. ಕೆಲಸಗಳ ಆದ್ಯತೆಯನ್ನು ಚೆನ್ನಾಗಿ ಅರಿತಿದ್ದರು. ಡಿಸಿ ಮತ್ತು ಎಸ್ಪಿ ಇಬ್ಬರೂ ಜೋಡೆತ್ತಿನ ರೀತಿಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾರೆ. ನೂತನವಾಗಿ ಆಗಮಿಸಿರುವ ಡಿಸಿ ಮತ್ತು ಎಸ್‌ಪಿ ಗಳು ಸಹ ಅನುಭವಿಗಳು. ನಮಗೆ ಉತ್ತಮವಾಗಿ ಸಹಕರಿಸಿ ಅತ್ಯುತ್ತಮ ಆಡಳಿತ ನಡೆಸುತ್ತಾರೆಂಬ ನಂಬಿಕೆ ಇದೆ.

  • ಹೇಮಂತ್ ಎನ್, ಜಿ.ಪಂ. ಸಿಇಓ
    ಗುರುದತ್ತ ಹೆಗಡೆಯವರು ಓರ್ವ ದಕ್ಷ, ಪ್ರಾಮಾಣಿಕ ಆಡಳಿತಗಾರ. ಜನರ ಸೇವೆಯಲ್ಲಿ ಅತ್ಯಂತ ಕಳಕಳಿ, ಬದ್ದತೆ ಹೊಂದಿದ್ದು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಾ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ. ಸರ್ಕಾರಿ ನೌಕರರ ವಿಚಾರದಲ್ಲಿ ಅವರ ನಿಲುವು ಸಹ ಉತ್ತಮವಾಗಿದೆ.
    ಸಿ.ಎಸ್.ಷಡಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು(ವಿಡಿಯೋ ಮೂಲಕ ಸಂದೇಶ)
    ಗುರುದತ್ತ ಹೆಗಡೆಯವರು, ಜಿಲ್ಲೆಯಲ್ಲಿನ ಸಮಸ್ಯೆಗಳ ವಿಷಯಗಳನ್ನು ಸಮರ್ಥವಾಗಿ ಎದುರಿಸಿ, ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಕಾರಾತ್ಮಕ ಗುಣಗಳನ್ನು ಹೊಂದಿರುವ ಇವರು ಎಲ್ಲ ಕೆಲಸ ಕಾರ್ಯಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ, ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ. ಹಾಗೂ ನೂತನ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಮತ್ತು ನೂತನ ಎಸ್‌ಪಿ ನಿಖಿಲ್ ಅವರು ಸಹ ಉತ್ತಮ ಅಧಿಕಾರಿಗಳಾಗಿದ್ದು, ತಮ್ಮ ಸಹಕಾರ ಸದಾ ಇರಲಿ.
    • – ಮೋಹನ್ ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ

ಜಿಲ್ಲೆಯಲ್ಲಿನ ಅರಣ್ಯ ವಿಷಯಗಳು ಜಟಿಲವಾಗಿದ್ದು, ಅರಣ್ಯ ಮತ್ತು ಕಂದಾಯ ಇಲಾಖೆಗಳ ಸಮನ್ವಯತೆ ಹೇಗಿರಬೇಕೆಂದು ಒಂದು ನಿರ್ದಿಷ್ಟ ಮಾನದಂಡ ಒದಗಿಸಿದ್ದರು. ಒಂದು ತಂಡವಾಗಿ ಕೆಲಸ ನಿರ್ವಹಿಸುವ ರೀತಿ ಅತ್ಯುತ್ತಮವಾಗಿತ್ತು.

  • ಅಜ್ಜಯ್ಯ, ಡಿಸಿಎಫ್

Gurudutt Hegde ಗುರುದತ್ತ ಹೆಗಡೆ ಸರ್ ಅತ್ಯುತ್ತಮ ಆಡಳಿತಗಾರ ಎಂದೂ ಯಾವ ಅಧಿಕಾರಿಗೂ ಗದರಿಸದೇ ವಿಶ್ವಾಸದಿಂದ ಕೆಲಸ ಪಡೆಯುವ ವಿಶಿಷ್ಟ ಶೈಲಿ ರೂಢಿಸಿಕೊಂಡಿದ್ದರು. ಕಿರಿಯ ಅಧಿಕಾರಿಗಳಲ್ಲಿ ನಂಬಿಕೆ ಹೊಂದಿದ್ದರು. ಆರೋಗ್ಯ ಇಲಾಖೆಯಲ್ಲಿನ ಅವರ ಮುಂದಿನ ಹುದ್ದೆ ಪ್ರಮುಖ ಮತ್ತ ಸವಾಲಿನ ಹುದ್ದೆಯಾಗಿ ಸಮರ್ಥವಾಗಿ ನಿರ್ವಹಿಸಲಿದ್ದಾರೆ.

  • ಡಾ.ನಟರಾಜ್, ಡಿಹೆಚ್‌ಓ
    ಹೆಗಡೆ ಸರ್, ಶಾಂತಿ ಮಂತ್ರದಿAದಲೇ ಜಿಲ್ಲೆಯಲ್ಲಿ ಅತ್ಯುತ್ತಮ ಆಡಳಿತ ನಡೆಸಿ ಸಮೃದ್ದಿ ನೀಡಿದ್ದಾರೆ. ಉತ್ತಮ ಆಡಳಿತ ಕೌಶಲ್ಯ ಹೊಂದಿದ್ದಾರೆ. ಎಲ್ಲರೊಟ್ಟಿಗೆ ಸ್ನೇಹದಿಂದ ಕೆಲಸ ತೆಗೆದುಕೊಳ್ಳುತ್ತಿದ್ದರು. ಜಿಲ್ಲಾಡಳಿತವೇ ಒಂದು ಕುಟುಂಬ ಎಂದು ಕಾರ್ಯ ನಿರ್ವಹಿಸಬೇಕೆಂಬುದನ್ನು ತೋರಿಸಿಕೊಟ್ಟ ಮಾದರಿ ಆಡಳಿತಗಾರ.
  • ಧರ್ಮಪ್ಪ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ
    ನೂತನ ಎಸ್ ಪಿ ನಿಖಿಲ್ ಬಿ ಮಾತನಾಡಿ, ಗುರುದತ್ತ ಹೆಗಡೆಯವರು ಎಲ್ಲರಿಗೂ ನಿಲುಕುವಂತಹ ದಕ್ಷ ಅಧಿಕಾರಿ. ಹಾಗೂ ಉತ್ತÀ್ತಮ ಮಾರ್ಗದರ್ಶಕರು ಕೂಡ ಆಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಐಚ್ಚಿಕ ತೆಗೆದುಕೊಳ್ಳಲು ಅವರೇ ಸ್ಪೂರ್ತಿ. ಜಿಲ್ಲೆಯಲ್ಲಿ ಅವರು ಅಧ್ಬುತ ಕೆಲಸ ಮಾಡಿದ್ದು ಅದು ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದ್ದು, ಮುಂದೆಯೂ ಕೂಡ ನಿಮ್ಮ ಸಹಕಾರ ಪೊಲೀಸ್ ಇಲಾಖೆ ಜೊತೆ ಸದಾ ಇರಲಿ ಎಂದು ಕೋರಿದರು.
    ನೂತನ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಎಲ್ಲ ಇಲಾಖೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಮಾಧ್ಯಮಗಳೊಂದಿಗೆ ಅನ್ಯೋನ್ಯತೆ ಮತ್ತು ಸಮನ್ವಯತೆಯೊಂದಿಗೆ ಕೆಲಸ ಮಾಡುವ ಹಂಬಲ ಹೊಂದಿದ್ದು ಎಲ್ಲ ಇಲಾಖೆಗಳು ಒಂದು ಕುಟುಂಬವಾಗಿ ಕಾರ್ಯವೆಸಗೋಣ ಎಂದರು.
    ಕಾರ್ಯಕ್ರಮದಲ್ಲಿ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್, ಪ್ರೊಬೇಷನರಿ ಅಧಿಕಾರಿ ನಾಗೇಂದ್ರದ್ರ ಬಾಬು, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಸಿಗಳಾದ ಸತ್ಯನಾರಾಯಣ, ಯತೀಶ್, ಜಿಲ್ಲೆಯ ಅಧಿಕಾರಿಗಳು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು, ನೌಕರರು ಪಾಲ್ಗೊಂಡಿದ್ದರು.

Shimoga News ಜನವರಿ 7. ಒಕ್ಕಲಿಗರ ಮಹಿಳಾ ವೇದಿಕೆ ಆಶ್ರಯದಲ್ಲಿ ಮಲೆನಾಡು ಮೇಳ.

0

Shimoga News ಪಂಪ ನಗರದಲ್ಲಿರುವ ಜಿಲ್ಲಾ ಒಕ್ಕಲಿಗರ ಮಹಿಳಾ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಜನವರಿ 7ರಂದು ಬೆಳಗ್ಗೆ 9.30ಕ್ಕೆ ಮಲೆನಾಡು ಮೇಳ ಆಯೋಜಿಸಲಾಗಿದೆ.
ವಿದ್ಯಾ ನಾಗೇಶ್, ಪ್ರಭಾ ಶ್ರೀನಾಥ್ ಅವರು ಮಲೆನಾಡು ಮೇಳ ಉದ್ಘಾಟಿಸುವರು. ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಅಧ್ಯಕ್ಷತೆ ವಹಿಸುವರು. ಕಾರ್ಯನಿರ್ವಾಹಕ ಅಭಿಯಂತರ ಬಿ.ಇ.ವಿರೇಂದ್ರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಉಪಸ್ಥಿತರಿರುವರು. ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರೇಮಾ ವೆಂಕಟೇಶ್, ಕಾರ್ಯದರ್ಶಿ ಕಾವ್ಯ ಸತೀಶ್, ಖಜಾಂಚಿ ಸೌರಭ ಹರ್ಷ ಹಾಗೂ ಸಂಘದ ಸದಸ್ಯನಿಯರು ಉಪಸ್ಥಿತರಿರುವರು.
Shimoga News ಕಾಂಚಿಪುರಂನಿಂದ ಬರುತ್ತಿರುವ ರೇಷ್ಮೆ ಸೀರೆಗಳ ನೇರ ಮಾರಾಟ, ಫ್ಯಾನ್ಸಿ ಸೀರೆಗಳು, ಡ್ರೆಸ್, ಬೆಡ್ ಲೈನರ್, ಗೃಹಪಯೋಗಿ ವಸ್ತುಗಳು, ಅಲಂಕಾರಿಕ ಸಾಮಾಗ್ರಿಗಳು, ಮನೆಯಲ್ಲಿ ತಯಾರಿಸಿದ ರುಚಿಕರ ಸಸ್ಯಾಹಾರಿ ಹಾಗೂ ಮಾಂಸಾಹಾರಿ ತಿನಿಸುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಹಳೆಯ ಝರಿ ಸೀರೆಯನ್ನು ಒಳ್ಳೆಯ ಬೆಲೆಯಲ್ಲಿ ತೆಗೆದುಕೊಳ್ಳಲಾಗುವುದು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುತ್ತಿರುವ ಮಹಿಳಾ ಉದ್ಯಮಿಗಳನ್ನು ಹುರಿದುಂಬಿಸಲು ಪ್ರತಿ ವರ್ಷ ಮೇಳ ಆಯೋಜಿಸಲಾಗುತ್ತಿದೆ ಎಂದು ಸ್ಟಾಲ್ ನಿರ್ವಾಹಕರಾದ ಅಂಜು ಸುರೇಶ್ ಹಾಗೂ ಸುಪ್ರಿಯಾ ರಾಮಪ್ಪ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9964022158, 7019659461, 9945770711 ಸಂಪರ್ಕಿಸಬಹುದಾಗಿದೆ.