Wednesday, August 12, 2026
Wednesday, August 12, 2026
Home Blog Page 239

Shimoga News ಗ್ರಾಮೀಣ ಕ್ರೀಡಾಕೂಟಗಳಿಂದ ಪ್ರತಿಭಾವಂತರಿಗೆ ಅವಕಾಶ- ಎಚ್.ಗಣಪತಿ ಹುಲ್ತಿಕೊಪ್ಪ.

0

Shimoga News ಶ್ರೀ ರೇಣುಕಾಂಬ ದೇವಿಯ ತಪ್ಪಲಿನಲ್ಲಿರುವ ಬಸ್ತಿಕೊಪ್ಪ ಗ್ರಾಮದ ಯುವಕರು ಇಚ್ಛಾಶಕ್ತಿಯಿಂದ ಕ್ರೀಡೆಗಳನ್ನು ಆಯೋಜಿಸುತ್ತಿರುವುದು ಸಾಮಾಜಿಕ ಸ್ವಸ್ಥದ ದೃಷ್ಟಿಯಿಂದ ಶ್ಲಾಘನೀಯ ಎಂದು ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ ಹೇಳಿದರು.

ಸೊರಬ ತಾಲೂಕಿನ ಚಂದ್ರಗುತ್ತಿ ಸಮೀಪದ ಬಸ್ತಿಕೊಪ್ಪ ಗ್ರಾಮದಲ್ಲಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಕ್ರಿಕೆಟ್ ಟೂರ್ನಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಯುವಕರಲ್ಲಿ ಸೂಕ್ತವಾಗಿರುವ ಪ್ರತಿಭೆಯನ್ನು ಹೊರ ಚಿಮ್ಮಿಸಲು ಇಂತಹ ಕ್ರೀಡಾಕೂಟಗಳು ಅತ್ಯಂತ ಸಹಕಾರಿಯಾಗಿದ್ದಾವೆ. ಯುವಕರು ಸಂಘಟಿತರಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯದ ಬೆಳವಣಿಗೆ ಸದೃಢವಾಗುತ್ತದೆ. ಎಂದ ಅವರು ಬಹಳಷ್ಟು ವರ್ಷಗಳ ಹಿಂದೆ ನಾನು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಬಸ್ತಿಕೊಪ್ಪ ಗ್ರಾಮದ ಜನರು ಅತೀ ಹೆಚ್ಚಿನ ಮತಗಳನ್ನು ನೀಡಿ ನನ್ನ ಗೆಲುವಿಗೆ ಪ್ರಮುಖ ಕಾರಣೀಭೂತರಾಗಿದ್ದಾರೆ. ಈ ಗ್ರಾಮದ ಜನರ ಪ್ರೀತಿ ಮತ್ತು ವಿಶ್ವಾಸ ದೊಡ್ಡದು, ಗ್ರಾಮದ ಋಣವನ್ನು ತೀರಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ತಿಳಿಸಿದರು.

Shimoga News ಬಸ್ತಿಕೊಪ್ಪ ಗ್ರಾಮವು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಹಾಗೂ ಶಿಕ್ಷಣ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಎಸ್. ಮಧು ಬಂಗಾರಪ್ಪನವರ ಮೇಲೆ ವಿಶೇಷ ಅಭಿಮಾನ ಹೊಂದಿರುವ ಗ್ರಾಮವಾಗಿದೆ. ಗ್ರಾಮದ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸಚಿವರಾದ ಮಧು ಬಂಗಾರಪ್ಪ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಈಗಾಗಲೇ ಗ್ರಾಮದ ಅಭಿವೃದ್ಧಿಗಾಗಿ 1 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ಕತವಾಯಿ ಚಂದ್ರಪ್ಪ ಮಾತನಾಡಿ ಗ್ರಾಮೀಣ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಇಂತಹ ಪ್ರಯತ್ನಗಳು ನಿರಂತರ ನಡೆಯಲಿ ಎಂದು ಹಾರೈಸಿದರು. ಶಿಕ್ಷಣ ಸಚಿವರು ಗ್ರಾಮಕ್ಕೆ ಮಂಜೂರು ಮಾಡಿರುವ ಅನುದಾನದಿಂದ ಗ್ರಾಮವು ಪ್ರಗತಿ ಹೊಂದಲಿದೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ಪಿ ರತ್ನಾಕರ, ಸದಸ್ಯರಾದ ಲಕ್ಷ್ಮಿ ಚಂದ್ರಪ್ಪ, ಕಾಂಗ್ರೆಸ್ ಮುಖಂಡ ಚಂದ್ರಪ್ಪ ಕತವಾಯಿ ಮಾತನಾಡಿದರು. ಗ್ರಾಮದ ಹಿರಿಯರು, ಪ್ರಮುಖರು ಹಾಗೂ ಬಸ್ತಿಕೊಪ್ಪ ಗೆಳೆಯರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Shimoga News ಮಾಹಿತಿ ಅಯೋಗದಿಂದ ರಾಜ್ಯ ಆಡಳಿತದಲ್ಲಿ ಪಾರದರ್ಶಕತೆ ಪ್ರಯತ್ನ- ಡಾ.ಹರೀಶ್ ಕುಮಾರ್.

0

Shimoga News ಕರ್ನಾಟಕ ರಾಜ್ಯದಲ್ಲಿ ಅಕ್ಟೋಬರ್ 12, 2005ರಲ್ಲಿ ಅಸ್ತಿತ್ವಕ್ಕೆ ಬಂದ ಮಾಹಿತಿ ಆಯೋಗವು ಆಡಳಿತದಲ್ಲಿ ಪಾರದರ್ಶಕತೆ ಮತ್ತು ಬದ್ಧತೆಯನ್ನು ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾದ ಡಾ.ಹರೀಶ್‌ಕುಮಾರ್ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಇಂದು ನಗರದ ಜಿ.ಪಂ.ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಅಧಿನಿಯಮ-2005 ಕುರಿತ ಜಾಗೃತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಅಧ್ಯಯನ ಮತ್ತು ಸಾಮಾನ್ಯ ತಿಳುವಳಿಕೆ ಇರಬೇಕು. ಮಾಹಿತಿ ಬಯಸಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಕಾಯ್ದೆಯಲ್ಲಿ ಲಭ್ಯವಿರುವ ಸೆಕ್ಷನ್‌ಗಳ ಆಧಾರದ ಮೇಲೆ ಉತ್ತರ ಮತ್ತು ಮಾಹಿತಿಯನ್ನು ಒದಗಿಸಬೇಕು. ಕಳೆದ ಹತ್ತು ವರ್ಷಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ವಯ ಮಾಹಿತಿ ನೀಡುವಲ್ಲಿ ವಿಳಂಬ, ಸರಿಯಾದ ಮಾಹಿತಿ ನೀಡದಿರುವುದು ಹಾಗೂ ಇತರ ಕಾರಣಗಳಿಂದಾಗಿ ರೂ.೧೦ ಕೋಟಿಯಷ್ಟು ದಂಡವು ಸರ್ಕಾರಿ ಅಧಿಕಾರಿಗಳಿಂದ ಆಯೋಗಕ್ಕೆ ಜಮೆ ಆಗಿದೆ.

Shimoga News ಆದ್ದರಿಂದ ಮಾಹಿತಿ ಅಧಿಕಾರಿಗಳು ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಕಾಲಮಿತಿಯಲ್ಲಿ ಉತ್ತರ ಒದಗಿಸಬೇಕೆಂದು ಅವರು ಹೇಳಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರು ಮಾಹಿತಿ ಕೋರಿ ಸಲ್ಲಿಸುವ ಅರ್ಜಿಗಳನ್ನು ಅರ್ಜಿ ಸಲ್ಲಿಕೆಯಾದ ೩೦ ದಿನಗಳಲ್ಲಿ ವಿಲೇವಾರಿ ಮಾಡಬೇಕು. ಮಾಹಿತಿ ಕೇಳಿ ಯಾವುದೇ ವ್ಯಕ್ತಿಯು ಸರ್ಕಾರದ ಉದ್ಯೋಗ, ಸೌಲಭ್ಯಗಳ ಬಗ್ಗೆ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದಲ್ಲಿ ಮಾಹಿತಿ ನೀಡಬೇಕಾಗುತ್ತದೆ. ಅಧಿಕಾರಿಯ ಹೆಸರು ಮತ್ತು ಹುದ್ದೆ ಸಾರ್ವಜನಿಕ ದಾಖಲೆಯಾಗಿರುವುದರಿಂದ ಅವುಗಳನ್ನು ನೀಡಬೇಕಾಗುತ್ತದೆ. ಯಾವುದೇ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಅಥವಾ ತನಿಖೆ ಮುಕ್ತಾಯವಾಗಿ ಅಂತಿಮ ವರದಿ ಸಲ್ಲಿಸದಿರುವ ಅಥವಾ ತನಿಖೆ ಮುಕ್ತಾಯವಾದ ಬಗ್ಗೆ ಸಂಬಂಧಿಸಿದ ಅಧಿಕಾರಿ ಅಥವಾ ಸಂಸ್ಥೆ ದೃಢೀಕರಣ ನೀಡದ ಹೊರತು ಯಾವುದೇ ಮಾಹಿತಿಯನ್ನು ನೀಡುವಂತಿಲ್ಲ. ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಾಯ್ದೆ ಮತ್ತು ಕಾನೂನುಗಳ ಸಾಮಾನ್ಯ ಜ್ಞಾನವು ಅಗತ್ಯವಾಗಿದೆ ಎಂದರು.

ಮಾಹಿತಿ ಹಕ್ಕು ಕಾಯ್ದೆ 2005 ರಲ್ಲಿ ಜಾರಿಗೆ ಬಂದಿದ್ದರೂ ಸಹ ಹಿಂದಿನ 20 ವರ್ಷಗಳ ಮಾಹಿತಿಗಳಿಗೂ ಈ ಕಾಯ್ದೆ ಅನ್ವಯವಾಗುತ್ತದೆ. ಕಳೆದ 20 ವರ್ಷಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳಿಂದ ಹಲವಾರು ಆದೇಶಗಳು ಬಂದಿವೆ. ಈ ಆದೇಶಗಳು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಅಳವಡಿಕೆ ಹಾಗೂ ವಿಸ್ತರಣೆಗಳಿಗೆ ಸಾಕಷ್ಟು ಬಲ ತುಂಬಿವೆ ಎಂದು ತಿಳಿಸಿದರು.
ಮಾಹಿತಿ ಆಯುಕ್ತರಾದ ಬದ್ರುದ್ದೀನ್ ಕೆ. ಮಾತನಾಡಿ, ಮಾಹಿತಿ ಅಧಿಕಾರಿಗಳು ಮಾಹಿತಿ ಕೋರಿ ಬಂದ ಅರ್ಜಿಗಳಿಗೆ ಕಾಯ್ದೆಯನ್ವಯ ಪರಿಶೀಲಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು. ಅರ್ಜಿಗಳ ವಿಲೇವಾರಿಯಲ್ಲಿ ಜಿಲ್ಲೆ ಪ್ರಥಮ ಸ್ಥಾನಕ್ಕೆ ಬರುವಂತೆ ಆಶಿಸಿದ ಅವರು, ಕೇವಲ ಸಿಸಿ ಟಿ.ವಿ.ದೃಶ್ಯಗಳು ಪ್ರಕರಣಗಳ ಬಗ್ಗೆ ಅಂತಿಮ ಆರೋಪ ಪಟ್ಟಿ, ಯಾವ ವ್ಯಕ್ತಿ ಮೇಲೆ ಎಷ್ಟು ಪ್ರಕರಣಗಳಿವೆ ಎಂಬುದು ಸೇರಿದಂತೆ ವೈಯಕ್ತಿಕ ಹಾಗೂ ವ್ಯಕ್ತಿಗತ ಮಾಹಿತಿಯನ್ನು ನೀಡುವಾಗ ಮಾಹಿತಿ ಹಕ್ಕು ಕಾಯ್ದೆಯಲ್ಲಿನ ಸೆಕ್ಷನ್‌ಗಳನ್ನು ಸರಿಯಾಗಿ ತಿಳಿದು ಅರ್ಥೈಸಿಕೊಂಡು ಮುಂದುವರಿಯಬೇಕು. ಯಾವ ಮಾಹಿತಿ ನೀಡಲು ಅವಕಾಶವಿದೆ ಮತ್ತು ಯಾವುದನ್ನು ನೀಡಲು ಅವಕಾಶವಿಲ್ಲ ಎಂಬುದರ ಬಗ್ಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತಿಳುವಳಿಕೆ ಇರಬೇಕು ಎಂದು ಹೇಳಿದರು.

Keladi Shivappa Nayaka University ಕೃಷಿ ವಿವಿಯಿಂದ ಒಂದು ತಿಂಗಳು ಬೇಕರಿ ವಿವಿಧ ಉತ್ಪನ್ನಗಳ ತಯಾರಿಕಾ ಕೌಶಲ್ಯ ತರಬೇತಿ.

0

Keladi Shivappa Nayaka University ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ದಿ:12/01/2026 ರಿಂದ ದಿ:10/02/2026 ರವರೆಗೆ 1 ತಿಂಗಳು ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ವಿವಿಧ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್ತು, ಕೋಕೋನಟ್ ಕುಕಿಸ್, ಕೋಕೊನಟ್ ಬಿಸ್ಕತ್ತು, ಮಸಾಲ ಬಿಸ್ಕತ್ತು, ಮೆಲ್ಟಿಂಗ್ ಮೊಮೆಂಟ್ ಬಿಸ್ಕತ್ತು, ಪೀನಟ್ ಕುಕಿಸ್, ವೆನಿಲ್ಲಾ ಬಟನ್, ಬನಾನಾ ಕೇಕ್, ಫ್ರುಟ್ ಕೇಕ್, ಸ್ಪಾಂಜ್‌ಕೇಕ್, ಆರೆಂಜ್ ಕೇಕ್, ಕಪ್ ಕೇಕ್, ಚಾಕಲೇಟ್ ಕೇಕ್, ಜಾಮ್ ರೋಲ್, ಜೆಲ್‌ಕೇಕ್, ಪೇಸ್ಟ್ರಿ ಕೇಕ್, ಬಟರ್ ಐಸಿಂಗ್, ಡೋ ನಟ್, ಮಿಲ್ಕ ಬ್ರೆಡ್, ಬನ್, ರಸ್ಕ್, ಫಿಜ್ಜಾ, ಪಪ್‌ಪೇಸ್ಟಿç, ದಿಲ್ ಪಸಂದ್, ಬಾಂಬೆ ಕಾರ ಹಾಗೂ ಇತರೆ ಬೇಕರಿ ಉತ್ಪನ್ನಗಳ ತಯಾರಿಕೆಯ ಬಗ್ಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಿದೆ.

Keladi Shivappa Nayaka University ಆಕಸ್ತರು ತರಬೇತಿ ಶುಲ್ಕ ರೂ. 4500/-ಗಳನ್ನು ಪಾವತಿಸಿ, ಜ.10 ರೊಳಗಾಗಿ ದೂರವಾಣಿ ಮೂಲಕ ಅಥವಾ ಖುದ್ದಾಗಿ ಕೃಷಿ ಮಹಾವಿದ್ಯಾಲಯವನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಪ್ರೋಫೆಸರ್ ತಿಳಿಸಿದ್ದಾರೆ.

ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ. ಜಯಶ್ರೀ ಎಸ್. -9449187763 ಮತ್ತು ಜಯಶಂಕರ-9686555897 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

Karate World Championships ಶಿವಮೊಗ್ಗದಲ್ಲಿ 3ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿ.

0

Karate World Championships ಕರಾಟೆಯು ಆತ್ಮವಿಶ್ವಾಸ ಮತ್ತು ಕ್ರೀಡಾತ್ಮಕತೆ ಹೆಚ್ಚಿಸುವ ಕ್ರೀಡೆಯಾಗಿದೆ. 3ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ 2025ರ ಜನವರಿ 11ರಂದು ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಈ ಕ್ರೀಡಾಕೂಟವನ್ನು ಸಹ್ಯಾದ್ರಿ ಶಿವಮೊಗ್ಗ ಡಿಸ್ಟಿಕ್ ಸ್ಪೋರ್ಟ್ಟ್ಸ್ ಕರಾಟೆ ಅಸೋಸಿಯೇಷನ್ ನ ಆಯೋಜಕರಾದ ಸೆನ್ಸೈ ನವೀನ್ , ಸೆನ್ಸೈ ಸಾಧಿಕ್ , ಸೆನ್ಸೈ ಮಂಜುನಾಥ್ ರವರು ಆಯೋಜಿಸಿರುತ್ತಾರೆ.

ಈ ಕ್ರೀಡಾಕೂಟಕ್ಕೆ1,200ಕ್ಕೂ ಹೆಚ್ಚು ಕ್ರೀಡಾ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ತಮಿಳುನಾಡು, ತೆಲಂಗಾಣ, ಪಂಜಾಬ್‌, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸ್ಪರ್ಧಾಳುಗಳು ಆಗಮಿಸುತ್ತಿದ್ದಾರೆ. ಬರುವಂತಹ ಕ್ರೀಡಾಪಟುಗಳಿಗೆ ಊಟ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುವುದು. ಹಾಗೂ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಆಕರ್ಷಕವಾದ ಟ್ರೋಫಿ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.

ಈ ಮಹತ್ವದ ಚಾಂಪಿಯನ್‌ಶಿಪ್‌ನಲ್ಲಿ ಕ್ರೀಡಾಪಟುಗಳು ತಾವು ಪಡೆದ ಕೌಶಲ್ಯವನ್ನು ಪ್ರದರ್ಶಿಸಲು ತಯಾರಾಗಿದ್ದಾರೆ.

ಈ ಕ್ರೀಡೆಯು ಕ್ರೀಡಾ ಪ್ರಿಯರ ಮನ ಸೆಳೆಯಲಿರುವುದು ನಿಶ್ಚಿತ. ಕಾರ್ಯಕ್ರಮವನ್ನು ಉದ್ಘಾಟಿಸಲು ಗಣ್ಯ ಅತಿಥಿಗಳು ಆಗಮಿಸುತ್ತಿದ್ದು , ಈ ಮಹತ್ವದ ಕ್ಷಣವನ್ನು ಅನೇಕ ಗಣ್ಯರು ಗೌರವಿಸಲಿದ್ದಾರೆ.

Karate World Championships ಮಾನ್ಯ ಶಿಕ್ಷಣ ಸಚಿವರದ ಮಧು ಬಂಗಾರಪ್ಪ ನವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವರು. ಶಿವಮೊಗ್ಗ ಜಿಲ್ಲೆಯ ಶಾಸಕರಾದ ಬಿ.ಎಸ್. ಚೆನ್ನಬಸಪ್ಪನವರು, ಈ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸುತ್ತಾರೆ. ಡಿ.ಎಸ್.ಅರುಣ್ ಸರ್ , ವಿಧಾನ ಪರಿಷತ್ ಸದಸ್ಯರು ಶಿವಮೊಗ್ಗ ಹಾಗೂ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ಈ ಚಾಂಪಿಯನ್‌ಶಿಪ್ ಕೇವಲ ಸ್ಪರ್ಧೆಗಷ್ಟೇ ಸೀಮಿತವಾಗಿರದೆ, ಏಕತೆ, ಶಿಸ್ತಿನ ಮತ್ತು ಶ್ರೇಷ್ಠತೆಯ ಹಬ್ಬವಾಗಿದೆ. ವಿವಿಧ ವಿಭಾಗಗಳಲ್ಲಿ ಸ್ಪರ್ಧಿಗಳು ತಮ್ಮ ಕೌಶಲ್ಯ, ಸಾಧನೆ ಮತ್ತು ಕ್ರೀಡಾತ್ಮಕತೆಯನ್ನು ಪ್ರದರ್ಶಿಸುತ್ತಾರೆ. ಸಹ್ಯಾದ್ರಿ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಈ ಕಾರ್ಯಕ್ರಮವನ್ನು ಸ್ಮರಣೀಯವಾಗಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ, ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನಗಳ ಮಹತ್ವವನ್ನು ಉತ್ತೇಜಿಸುತ್ತಿದೆ.

ಕರಾಟೆ ಪ್ರಿಯರು ಮತ್ತು ಕ್ರೀಡಾಭಿಮಾನಿಗಳು ಈ ಅದ್ಭುತ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸ್ಪರ್ಧೆಗಳ ರೋಮಾಂಚನ ಮತ್ತು ಪ್ರೇರಣಾದಾಯಕ ಕ್ಷಣಗಳನ್ನು ಸಾಕ್ಷಿಯಾಗಲು ಆಹ್ವಾನಿತರಾಗಿದ್ದಾರೆ.

B. Y. Raghavendra ಸಂಸದ ರಾಘವೇಂದ್ರರಿಗೆ” ಶ್ರೀಗುರುಬಸವಶ್ರೀ” ಪ್ರಶಸ್ತಿ ಪ್ರದಾನ.

0

B. Y. Raghavendra ಶಿವಮೊಗ್ಗದ ಶ್ರೀ ಬೆಕ್ಕಿನಕಲ್ಮಠದಲ್ಲಿ ಆರಂಭಗೊಂಡಿರುವ ಪರಮ ತಪಸ್ವಿ ಲಿಂ. ಶ್ರೀ ಗುರುಬಸವ ಮಹಾಸ್ವಾಮಿಗಳವರ 114ನೇ ಪುಣ್ಯ ಸ್ಮರಣೋತ್ಸವ, 556ನೇ ಶಿವಾನುಭವ ಗೋಷ್ಠಿ ಹಾಗೂ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸಂಸದ ಬಿ.ವೈ‌.ರಾಘವೇಂದ್ರ ಪಾಲ್ಗೊಂಡಿದ್ದರು.

ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಈ ಪವಿತ್ರ ಸಮಾರಂಭದಲ್ಲಿ, ಸಂಸದ ರಾಘವೇಂದ್ರರಿಗೆ “ಗುರುಬಸವಶ್ರೀ” ಪ್ರಶಸ್ತಿಯನ್ನ ನೀಡಲಾಯಿತು..
ಈ ಸನ್ಮಾನವನ್ನು ಪೂಜ್ಯರ ಪ್ರಸಾದ ಮತ್ತು ಆಶೀರ್ವಾದವೆಂದು ಭಾವಿಸುತ್ತೇನೆ. ಅತ್ಯಂತ ವಿನಮ್ರತೆಯಿಂದ ಸ್ವೀಕರಿಸಿದ್ದೇನೆ.
ಈ ಗೌರವಕ್ಕೆ ನಾನು ಸದಾ ಆಭಾರಿ ಎಂದು ಪ್ರಶಸ್ತಿ ಸ್ವೀಕರಿಸಿ ಸಂಸದ ರಾಘವೇಂದ್ರ ನುಡಿದರು.

B. Y. Raghavendra ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಬೋಜೇಗೌಡರು, ಶ್ರೀ ಎಸ್. ರುದ್ರೇಗೌಡರು, ಡಾ ಧನಂಜಯ್ ಸರ್ಜಿ , ಶ್ರೀ ಜ್ಯೋತಿಪ್ರಕಾಶ್ ಸೇರಿದಂತೆ ವೇದಿಕೆಯ ಮೇಲೆ ಅನೇಕ ಗಣ್ಯರು ಹಾಗೂ ಮಠದ ಭಕ್ತವೃಂದದವರು ಉಪಸ್ಥಿತರಿದ್ದರು.

Rotary Club Shivamogga ಹೃದಯಾಘಾತವಾದ ಮೊದಲ ಮೂವತ್ತು ನಿಮಿಷ ಬಂಗಾರದ ಸಮಯ.ತಕ್ಷಣ ಆಸ್ಪತ್ರೆಗೆ ಸೇರಿಸಿ- ಡಾ.ವಿ.ಎಲ್.ಎಸ್. ಕುಮಾರ್.

0

Rotary Club Shivamogga ನಮ್ಮ ದೇಶದಲ್ಲಿ ರಸ್ತೆ ಅಫಘಾತದಲ್ಲಿ ಹೆಚ್ಚಾಗಿದ್ದು, ಅಪಘಾತದಲ್ಲಿ ಮರಣ ಹೊಂದಿರುವವರ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

ಹೃದಯಾಘಾತಜಲ್ಲಿ ಎರಡನೇ ಸ್ಥಾನದಲ್ಲಿದೆ. ಆದ್ದರಿಂದ ಜಾಗೃತಿ ಅವಶ್ಯಕ ಎಂದು ರೋಟರಿ ಕ್ಲಬ್ ಜ್ಯೂಬಿಲಿಯ ಡಾ.ವಿ.ಎಲ್. ಎಸ್. ಕುಮಾರ್ ತಿಳಿಸಿದರು.

ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಿದ್ದ, ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿದ ಮಾತನಾಡಿದರು.

ರೋಟರಿ ಕ್ಲಬ್ ಹುಟ್ಟಿದ ಮಗುವಿಗೆ ಫಲ್ಸ್ ಪೋಲಿಯೋ ನೀಡುತ್ತದೆ. ವಿದ್ಯಾಭ್ಯಾಸಕ್ಕೆ ಶಾಲೆ ನಡೆಸುತ್ತಿದೆ. ಆರೋಗ್ಯಕ್ಕೆ ಜಿಮ್ ಇದೆ. ರಕ್ತದ ಅವಶ್ಯಕತೆಗೆ ಬ್ಲಡ್ ಬ್ಯಾಂಕ್ ಇದೆ. ಇದರೊಂದಿಗೆ ಚಿತಾಗಾರ ನಡೆಸುತ್ತಿದೆ. ಹೀಗೆ ರೋಟರಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ ಎಂದರು.

ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ನಮ್ಮದು. ಆದ್ದರಿಂದ ಎಲ್ಲದರಲ್ಲಿಯೂ ಜಾಗ್ರತೆ ವಹಿಸಬೇಕಾಗಿದೆ. ಎಲ್ಲಾ ಕಡೆ ಹೆಚ್ಚು ಆಸ್ವತ್ರೆ ಇವೆ. ಕಾರಣ ಆರೋಗ್ಯ. ದೈಹಿಕ, ಮಾನಸಿಕ, ಸಾಮಾಜಿಕ, ಔದ್ಯೋಗಿಕ, ಕೌಟುಂಬಿಕ, ವೈಯಕ್ತಿಕ ಹೀಗೆ ಹಲವಾರು ಕಾರಣದಿಂದ ಅನಾರೋಗ್ಯ ಉಂಟಾಗುತ್ತಿದೆ.ಉತ್ತಮ ಆರೋಗ್ಯಕ್ಕೆ 8 ಗಂಟೆ ನಿದ್ದೆ, ಕುಟುಂಬದೊಂದಿಗೆ ಸಮಯ ಕಳೆಯಬೇಕು. ದುರಭ್ಯಾಸ ಬಿಟ್ಟು , ಯೋಗ-ದ್ಯಾನ, ಶುದ್ದ ಗಾಳಿ ಅವಶ್ಯಕ. ಗಂಗಾಸ್ಥಾನ ತುಂಗಾಪಾನ ಎನ್ನುತ್ತಿದ್ದರು, ಇಂದು ಚರಂಡಿ ನೀರಿಗಿಂತ ಕೆಟ್ಟದಾಗಿ ತುಂಗಾ ಬದಲಾಗಿದೆ ಎಂದು ಹೇಳಿದರು.

Rotary Club Shivamogga ಪ್ಲಾಸ್ಟಿಕ್ ಉಪಯೋಗದಿಂದ ಕ್ಯಾನ್ಸರ್ ಅತ್ಯಧಿಕವಾಗಿ ಹರಡುತ್ತಿದೆ. ಪ್ರತಿ ದಿನ ಹತ್ತು ಜನರು ಕ್ಯಾನ್ಸರ್ ಆಸ್ಪತ್ರೆಗೆ ಬರುತ್ತಿದ್ದಾರಂತೆ.
ಹೃದಯಾಘಾತ ಆದಾಗ ಏನು ಮಾಡಬೇಕೆಂದು ತಿಳಿದುಕೊಳ್ಳಿ, ಹೃದಯ ದಿಂದ ಮೆದುಳಿಗೆ ಆಮ್ಲಜನಕ ಇಲ್ಲದೆ ಏಳು ನಿಮಿಷ ಇರಬಲ್ಲದು. ಹೃದಯಾಘಾತ ಆದ ತಕ್ಷಣ ಪ್ರಥಮ ಚಿಕಿತ್ಸೆ ಅಗತ್ಯ, ಉಸಿರಾಟ ಪುನ: ಚಾಲನೆಗೆ ತರಬೇಕು. ಹೊಟ್ಟೆ ಎರಿಳಿತ ನೋಡಿ, ಕುತ್ತಿಗೆ ಸಮೀಪ ಎರಡು ಬೆರಳು ಇಟ್ಟು ನೋಡಬಹುದು ಹತ್ತು ಸೆಕೆಂಡ್ ನಲ್ಲಿ ಪರೀಕ್ಷಿಸಿ, ಸಿಪಿಆರ್ ಎಲ್ಲರೂ ಅರಿತುಕೊಳ್ಳಿ, ಇದರಿಂದ ಪ್ರಾಣ ಉಳಿಸಬಹುದು. ಮುವತ್ತು ನಿಮಿಷ ಬಂಗಾರದ ಸಮಯ ತಕ್ಷಣ ಆಸ್ವತ್ರೆಗೆ ಸೇರಿಸಬೇಕು. ಹೃದಾಘಾ ತವಾದವರಿಗೆ “ಮಲಗಿಸ ಬೇಡಿ, ನೀರು ಕುಡಿಸಬೇಡಿ” ಕುರ್ಚಿಮೇಲೆ ಕುಳ್ಳರಿಸಿ, ಎತ್ತುಕೊಂಡು ಹೋಗಿ, ನಡೆಯಲು ಬಿಡಬಾರದು ಎಂದು ತಿಳಿ ಹೇಳಿದರು.

ಹೃದಯಾಘಾತವಾದವರಿಗೆ ಹೇಳ ಬೇಡಿ, ಕೆಮ್ಮಲು ಹೇಳಿ, ಆಸ್ವತ್ರೆಗೆ ಹೋಗುವವರೆಗೆ, ದೀರ್ಘಶ್ವಾಸ ತೆಗೆದು ಕೊಳ್ಳಲು ತಿಳಿಸಬೇಕು. ಅಸ್ಪ್ರೀನ್ ಮಾತ್ರೆ ಜಗಿಯಲು ಕೊಡಬೇಕು.ಸ್ಟ್ರೋಕ್ ಸಹ ಹೆಚ್ಚಾಗುತ್ತದೆ, ಮಾತನಾಡುವಾಗ ಮುಖ ಒಂದು ಕಡೆ ಸೇರುವುದು, ಮಾತನಾಡಲು ತೊಂದರೆ ಯಾದರೆ, ಮೂರು ಗಂಟೆಯೊಳಗೆ ಆಸ್ಪತ್ರೆಗೆ ಹೋಗಬೇಕು. ಪಿಡ್ಸ್ ಬಂದಾಗ ಎರಡು ನಿಮಿಷ ಮಾತ್ರ ಮೈಕೈ ಅಲುಗಾಡಿಸುತ್ತಾರೆ, ಸುತ್ತಲೂ ಯಾವುದೇ ಅಡೆತಡೆ ಬರದಂತೆ ನೋಡಿ ಕೊಳ್ಳಬೇಕು. ನೊರೆ ಒಳಗೆ ಹೊಗದಂತೆ, ಮಗ್ಗಲು ಮಾಡಿ ಮಲಗಿಸಿ, ಒರೆಸಬೇಕು . ಬಾಯಿಗೆ ಏನನ್ನು ಕೊಡಬಾರದು ಎಂದು ತಿಳಿಸಿದರು.

ಬಿ.ಎಸ್.ಅಶ್ವಥ್ ಅಧ್ಯಕ್ಷತೆ ವಹಿಸಿ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರೇವಣ ಸಿದ್ದಪ್ಪ ವಂದಿಸಿದರು.

Shimoga News ಜಿಲ್ಲೆ ಮತ್ತು ‌ನಗರಪಾಲಿಕೆಯ ಅಧಿಕಾರಿಗಳು ಆಹಾರ ಸುರಕ್ಷತೆ ಕಾಪಾಡಲು ಅನುಸರಿಸುವ ಕ್ರಮಗಳ ಬಗ್ಗೆ ಉನ್ನತ ಮಟ್ಟದ ಸಭೆ.

0

Shimoga News ಮಾನ್ಯ ಉಪ ವಿಭಾಗಾಧಿಕಾರಿಗಳು ಹಾಗೂ ಅಂಕಿತ ಅಧಿಕಾರಿಗಳು ಎಫ್ ಎಸ್ ಎಸ್ಎ ಶಿವಮೊಗ್ಗ ಇವರ ಅಧ್ಯಕ್ಷತೆಯಲ್ಲಿ ಆಹಾರ ತಯಾರಿಕೆ, ಸಂಗ್ರಹಣೆ,ಸಾಗಾಣಿಕೆ ಮತ್ತು ಮಾರಾಟ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಆಹಾರ ಸುರಕ್ಷತಾಧಿಕಾರಿಗಳು, ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರು,ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆಯ NULM ವಿಭಾಗದ ಅಧಿಕಾರಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯನ್ನು ನಡೆಸಿದರು.

Shimoga News ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಹಾರ ತಯಾರಿಸುವ ಘಟಕಗಳ ವಿವರಗಳನ್ನು ತುರ್ತಾಗಿ ಪಟ್ಟಿ ಮಾಡಿ ಮಾಹಿತಿಯನ್ನು ನೀಡಲು ಸೂಚಿಸಿದರು.

ಧ್ವನಿ ಮುದ್ರಿಕೆಯ ಮುಖಾಂತರ ಮಹಾನಗರ ಪಾಲಿಕೆಯ ವಾಹನಗಳ ಮೂಲಕ ವ್ಯಾಪಕ ಪ್ರಚಾರ /ಅರಿವು ಮೂಡಿಸಲು ಸೂಚಿಸಿದರು.

Teppotsava in Shivamogga ತುಂಗಾತೀರದಲ್ಲಿ ಸೀತಾರಾಮಾಂಜನೇಯ ಕ್ಷೇತ್ರವಿರುವುದು ನಗರದ ಸೌಭಾಗ್ಯ- ಶಾಸಕ ಚನ್ನಬಸಪ್ಪ.

0

Teppotsava in Shivamogga ಶಿವಮೊಗ್ಗ ನಗರದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಗ್ಗುರುತಾಗಿರುವ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರಸ್ತುತ ‘ಶ್ರೀ ಸೀತಾರಾಮ ಕಲ್ಯಾಣ ಶತಮಾನೋತ್ಸವ’ದ ಸಂಭ್ರಮ ಮನೆಮಾಡಿದೆ.ಈ ಅಭೂತಪೂರ್ವ ಸಂಭ್ರಮದ ಅಂಗವಾಗಿ ಪವಿತ್ರ ತುಂಗಾ ನದಿಯ ಮಡಲಿನಲ್ಲಿ ಆಯೋಜಿಸಲಾಗಿದ್ದ ಭವ್ಯ ‘ತೆಪ್ಪೋತ್ಸವ’ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್. ಚೆನ್ನಬಸಪ್ಪನವರು ಭಾಗವಹಿಸಿ, ದೈವಿಕ ಕ್ಷಣಗಳಿಗೆ ಸಾಕ್ಷಿಯಾದರು.

ಕೆಳದಿ ಅರಸರ ಕಾಲದಿಂದಲೂ ಐತಿಹಾಸಿಕ ಮಹತ್ವ ಪಡೆದಿರುವ ಹಳೆಯ ಶಿವಮೊಗ್ಗದ ಕೋಟೆ ಪ್ರದೇಶವು ಹಿಂದೂ ಸಂಸ್ಕೃತಿಯ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯವು ಭಕ್ತರ ಶ್ರದ್ಧಾಕೇಂದ್ರವಾಗಿದ್ದು, ಈಗ ಶತಮಾನೋತ್ಸವದ ಹೊಸ್ತಿಲಲ್ಲಿದೆ.

ದಕ್ಷಿಣಾಭಿಮುಖವಾಗಿ ಹರಿಯುವ ಪುಣ್ಯನದಿ ತುಂಗಾ ತೀರದಲ್ಲಿ ಈ ಪುಣ್ಯಕ್ಷೇತ್ರವಿರುವುದು ನಮ್ಮ ನಗರದ ಸೌಭಾಗ್ಯ. ಕಳೆದ 74 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ತೆಪ್ಪೋತ್ಸವವು, ಶಿವಮೊಗ್ಗದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಎಂದು ಅವರು ತಿಳಿಸಿದ್ದಾರೆ.

Teppotsava in Shivamogga ಸೂರ್ಯಾಸ್ತದ ಮನಮೋಹಕ ಹೊತ್ತಿನಲ್ಲಿ, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಭವ್ಯ ತೆಪ್ಪದಲ್ಲಿ ಶ್ರೀ ಸೀತಾರಾಮ, ಲಕ್ಷ್ಮಣ ಹಾಗೂ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗಳು ತುಂಗಾ ನದಿಯಲ್ಲಿ ವಿಹರಿಸುವ ದೃಶ್ಯ ಅತ್ಯಂತ ನಯನ ಮನೋಹರವಾಗಿತ್ತು.

ನದಿಯ ಅಲೆಗಳ ಮೇಲೆ ತೇಲಿಬಂದ ದೈವಿಕ ಕಳೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ತುಂಗಾ ತೀರಕ್ಕೆ ಆಗಮಿಸಿದ್ದರು.

ಮಂತ್ರಘೋಷ, ಭಕ್ತರ ಜೈಕಾರ ಹಾಗೂ ಪಟಾಕಿಗಳ ಸಂಭ್ರಮದ ನಡುವೆ ನಡೆದ ಈ ಕಾರ್ಯಕ್ರಮವು ಕೇವಲ ಧಾರ್ಮಿಕ ವಿಧಿಯಲ್ಲ, ಇದು ಶಿವಮೊಗ್ಗದ ಭಾವೈಕ್ಯತೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ.

Banashankari Devi Jatra ವೈಭವದಿಂದ ಜರುಗಿದ ಶ್ರೀಬನಶಂಕರಿ ದೇವಿ ಜಾತ್ರಾ ಮಹೋತ್ಸವ.

0

Banashankari Devi Jatra ಬನದ ಹುಣ್ಣಿಮೆ ಪ್ರಯುಕ್ತ ಬಾಪೂಜಿ ನಗರದಲ್ಲಿ ಶ್ರೀ ಮಾತಾ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಎರಡು ದಿನ ಅದ್ದೂರಿಯಾಗಿ ಜರುಗಿತು.

ಶನಿವಾರ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಶ್ರೀ ಮಾತಾ ಬನಶಂಕರಿ ದೇವಸ್ಥಾನದಲ್ಲಿ ಎರಡು ದಿನ ವೈಭವದಿಂದ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಶುಕ್ರವಾರ ಅಮ್ಮನವರ ರಾಜಬೀದಿ ಪಲ್ಲಕ್ಕಿ ಉತ್ಸವ ನಡೆಯಿತು. ಎಲ್ಲ ಭಕ್ತರಿಗೂ ಅನ್ನಸಂತರ್ಪಣೆ ವಿತರಿಸಲಾಯಿತು.

ಶನಿವಾರ ಶ್ರೀ ಮಾತಾ ಬನಶಂಕರಿ ಅಮ್ಮನವರಿಗೆ 108 ಲೀಟರ್ ಎಳನೀರು, ಕ್ಷೀರಾಭಿಷೇಕ, ದುರ್ಗಾ ಹೋಮ, ಸುಹಾಸಿನಿ ಪೂಜೆ, ಮಹಾ ಮಂಗಳಾರತಿ ನಡೆಯಿತು. ರಥೋತ್ಸವ ಸಮಯದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಮಂಗಳವಾದ್ಯಗಳೊಂದಿಗೆ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು. ಮಧ್ಯಾಹ್ನ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Banashankari Devi Jatra ರಾಜಕೀಯ ಮುಖಂಡರು, ಸ್ವಾಮೀಜಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿದ್ದರು. ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ನಗರ ದೇವಾಂಗ ಸಮಾಜದ ಅಧ್ಯಕ್ಷ ಬಿ.ಸತೀಶ್ ಕುಮಾರ್ ಹಾಗೂ ಆಡಳಿತ ಮಂಡಳಿ ಅತ್ಯಂತ ವ್ಯವಸ್ಥಿತವಾಗಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ನಗರ ದೇವಾಂಗ ಸಮಾಜದ ಉಪಾಧ್ಯಕ್ಷ ಯು.ರಾಮಪ್ಪ ರಾಂಪುರ, ಎಂ.ವಾಸುದೇವಪ್ಪ, ಕಾರ್ಯದರ್ಶಿ ಡಿ.ಪರಶುರಾಮಪ್ಪ, ಪ್ರಮುಖರಾದ ಬಿ.ಸಿ.ವೆಂಕಟೇಶ್, ಟಿ.ಆರ್.ಮಂಜುನಾಥ್, ಡಿ.ಎಚ್.ನಾಗರಾಜಪ್ಪ, ಎಸ್.ಶಾಂತಾ ವೆಂಕೋಬ, ಎಂ.ಗುರುಶಾಂತಪ್ಪ, ಎಚ್.ಎಸ್.ಹಾಲೇಶಪ್ಪ, ಎಚ್.ಎಚ್.ಕಮಲಾಕ್ಷಪ್ಪ, ಡಿ.ಎಚ್.ಕುಮಾರ್, ಡಿ.ಟಿ.ವೆಂಕಟೇಶ್, ಎಸ್.ಶೇಷಪ್ಪ, ಬಿ.ನರಸಿಂಹಪ್ಪ, ಡಿ.ಜಿ.ಚಂದ್ರಶೇಖರ್, ಪಿ.ಟಿ.ರಂಗನಾಥಪ್ಪ, ಟಿ.ಶಂಕರಪ್ಪ, ಡಿ.ಎಚ್.ಶೇಖರಪ್ಪ, ಆರ್.ಮಣಿಕಂಠ, ಕೆ.ಬಿ.ಸಂದೀಪ್, ಎಂ.ಮಂಜುನಾಥ, ಕೆ.ಎಸ್.ಬಂಗಾರ ಶೆಟ್ಟಿ, ಬಿ.ಪ್ರೇಮಾ ಗಿರಿಯಪ್ಪ, ಪಿ.ಆರ್.ಗಿರಿಯಪ್ಪ, ಜಿ.ಮೋಹನಮೂರ್ತಿ, ಟಿ.ರಾಜೇಶ್, ಎನ್.ಸುರೇಶ್, ಜಯಮ್ಮ ಚಂದ್ರಶೆಟ್ಟಿ, ಉಮಾ ನಾಗರಾಜ್ ಮತ್ತಿತರರು ಇದ್ದರು.

District Consumer Disputes Redressal Commission Shivamogga ದೂರುದಾರರ ಪರ ತೀರ್ಪು ನೀಡಿದ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ

0

District Consumer Disputes Redressal Commission Shivamogga ದೂರುದಾರರ ಉಳಿತಾಯ ಖಾತೆಯಿಂದ ಕಡಿತವಾದ ಹಣವನ್ನು ಪರಿಶೀಲಿಸಿ ಜಮೆ ಮಾಡದೇ ಸೇವಾ ನ್ಯೂನ್ಯತೆ ಎಸಗಿದ ಕೆನರಾ ಬ್ಯಾಂಕಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶಿಸಿದೆ.

ದೂರುದಾರ ಆದೇಶ ಕೆ.ಎನ್. ಪಿಡ್ಬ್ಯೂಡಿ ವಸತಿಗೃಹ, ಬಾಲರಾಜ್ ರಸ್ತೆ, ಶಿವಮೊಗ್ಗ, ಇವರು ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ದುರ್ಗಿಗುಡಿ ಶಾಖೆ, ಶಿವಮೊಗ್ಗ ಮತ್ತು ಪ್ರಧಾನ ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ಬೆಂಗಳೂರು ಇವರ ವಿರುದ್ಧ ದೂರನ್ನು ಸಲ್ಲಿಸಿ, ಎದುರಾರರ ಬ್ಯಾಂಕಿನಲ್ಲಿ ತಾವು ಉಳಿತಾಯ ಖಾತೆಯನ್ನು ಹೊಂದಿದ್ದು, ಪೇಟಿಎಂ ಮತ್ತು ಗೂಗಲ್ ಪೇ ಯನ್ನು ಅಳವಡಿಸಿಕೊಂಡು ಉಪಯೋಗಿಸುತ್ತಿರಲಾಗುತ್ತದೆ.
ದಿ:04/05/2024ರಂದು ಬೆಳಿಗ್ಗೆ 8-00 ಗಂಟೆಗೆ ಕೆನರಾ ಬ್ಯಾಂಕ್‌ನಿAದ 02 ಎಸ್‌ಎಂಎಸ್ ಬಂದಿದ್ದು 1ನೇ ಎಸ್‌ಎಂಎಸ್ ನಲ್ಲಿ ರೂ.5,00,000/-(ಐದು ಲಕ್ಷ) ಮತ್ತು 2ನೇ ಎಸ್‌ಎಂಎಸ್ ನಲ್ಲಿ ರೂ.50,000/-(ಐವತ್ತು ಸಾವಿರ)ಗಳು ಕಡಿತವಾಗಿದ್ದು, ಈ ವಿಷಯವನ್ನು 1ನೇ ಎದುರುದಾರರ ಬಳಿ ತಿಳಿಸಿದ್ದು, ಎದುರುದಾರರು ದೂರುದಾರರ ಖಾತೆಯಿಂದ ಹಣ ಕಡಿತವಾಗಿರುವುದನ್ನು ಖಾತರಿಪಡಿಸಿರುತ್ತಾರೆ.

ತದನಂತರ, ದೂರುದಾರರು ಕ್ರೆöÊಂ ಪೋಲೀಸ್ ಠಾಣೆ ಶಿವಮೊಗ್ಗ ಇಲ್ಲಿ ದೂರನ್ನು ದಾಖಲಿಸಿರುತ್ತಾರೆ. ದೂರುದಾರರು 1ನೇ ಎದುರುದಾರರ ಬಳಿ ಹಲವು ಬಾರಿ ಕೇಳಿಕೊಂಡರೂ ಕಡಿತವಾದ ಹಣವನ್ನು ಪರಿಶೀಲಿಸಿ ದೂರುದಾರರ ಖಾತೆಗೆ ಹಣ ಜಮೆ ಮಾಡದಿರುವ ಕಾರಣ ನೋಟೀಸ್ ನೀಡಿದ್ದು, ಯಾವುದೇ ಪ್ರತ್ಯುತ್ತರ ನೀಡದೇ ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ಆರೋಪಿಸಿರುತ್ತಾರೆ.

District Consumer Disputes Redressal Commission Shivamogga ದೂರುದಾರರು ಮತ್ತು 1ನೇ ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ, ಆರ್.ಬಿ.ಐ. ಸುತ್ತೋಲೆಯಂತೆ, ಎದುರುದಾರರು ತನಿಖೆಯನ್ನು ಮಾಡಿ ಕಡಿತವಾದ ಮೊತ್ತವನ್ನು ದೂರುದಾರರ ಖಾತೆಗೆ ಜಮಾ ಮಾಡದೇ ಇರುವುದರಿಂದ, ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, 1 ಮತ್ತು 2ನೇ ಎದುರುದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ರೂ.5,50,000/-ಗಳನ್ನು ಉಳಿತಾಯ ಖಾತೆಗೆ ಅನ್ವಯಿತ ಬಡ್ಡಿಯನ್ನು ಸೇರಿಸಿ, ಆದೇಶವಾದ ದಿನದಿಂದ 45 ದಿನಗಳ ಒಳಗೆ ದೂರುದಾರರ ಖಾತೆಗೆ ಜಮಾ ಮಾಡುವುದು, ತಪ್ಪಿದ್ದಲ್ಲಿ ವಾರ್ಷಿಕ ಶೇ.10ರ ಬಡ್ಡಿಯನ್ನು ಸೇರಿಸಿ, ಪೂರ್ತಿ ಹಣ ನೀಡುವವರೆಗೆ ಪಾವತಿಸಬೇಕು ಮತ್ತು ಎದುರುದಾರರು ದೂರುದಾರರಿಗೆ ರೂ.30,000/-ಗಳನ್ನು ಮಾನಸಿಕ ವೇದನೆ, ಹಾಗೂ ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ ದಿನದಿಂದ 45 ದಿನಗಳ ಒಳಗೆ ಪಾವತಿಸಬೇಕು.ತಪ್ಪಿದ್ದಲ್ಲಿ ವಾರ್ಷಿಕ ಶೇ.10 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ನೀಡುವವರೆಗೆ ಪಾವತಿಸಬೇಕೆಂದು ಆಯೋಗದ ಅಧ್ಯಕ್ಷರಾದ ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠವು ದಿನಾಂಕ:31/12/2025 ರಂದು ಆದೇಶಿಸಿದೆ.