Saturday, February 21, 2026
Saturday, February 21, 2026
Home Blog Page 210

Klive Special Article ಸಶಕ್ತವಾಗಬೇಕಿದ್ದ ಸಾಮಾಜಿಕ ಮಾಧ್ಯಮಗಳ ಶಕ್ತಿಹ್ರಾಸ

0

ಲೇ: ಡಾ.ಸತೀಶ್ ಕುಮಾರ್. ಅಂಡಿಂಜೆ

Klive Special Article ಇತ್ತೀಚೆಗೆ ಬಿಡುಗಡೆಯಾಗಿ ತುಂಬಾ ಜನಪ್ರಿಯತೆ ಪಡೆದ ರಾಜ್ ಬಿ. ಶೆಟ್ಟಿಯವರ ‘ಸು ಫ್ರಂ ಸೋ’ ಚಲನಚಿತ್ರವನ್ನು ತುಂಬಾ ಜನ ನೋಡಿ ನಕ್ಕು ನಲಿದಿದ್ದಾರೆ. ಆದರೆ ನೋಡಿದವರಲ್ಲಿ ಕೆಲವರಾದರೂ ಆ ಚಿತ್ರ ಕೊಡುವ ಸಂದೇಶವನ್ನು ಸೂಕ್ಷ್ಮವಾಗಿ ಗಮನಿಸಿರಬಹುದು. ನಾನು ಗಮನಿಸಿದಂತೆ ಆ ಚಿತ್ರವು ಒಂದು ಸುಳ್ಳನ್ನು ಮರೆ ಮಾಚುವುದಕ್ಕೆ ಹೋಗಿ ಚಿತ್ರದ ಅಶೋಕ ಪಾತ್ರಧಾರಿ ಎದುರಿಸುವ ಸಮಸ್ಯೆಗಳು, ಸುಳ್ಳನ್ನೇ ಸತ್ಯವೆಂದು ನಂಬಿದ ಜನ ಮಾಡುವ ಹೋಮ ಹವನಗಳು ಇಂದಿನ ಸಾಮಾಜಿಕ ಮಾಧ್ಯಮಗಳು ಹರಡುವ ಸುಳ್ಳುಗಳು ಮತ್ತು ಅದನ್ನು ನಂಬುವ ಜನರು ಮಾಡುವ ಅನಾಹುತಗಳಿಗೆ ಸಮವಾಗಿದೆ.

ಮಹಿಳೆಯೊಬ್ಬಳು ಸ್ನಾನ ಮಾಡುವುದನ್ನು ಕದ್ದು ನೋಡಲು ಹೋದ ಗುರುತುಗಳನ್ನು ಅಳಿಸಲು ಹೋಗಿ ಸಿಕ್ಕಿ ಬಿದ್ದಾಗ ಬಿಡಿಸಿಕೊಳ್ಳುವ ಉಪಾಯವಾಗಿ ದೆವ್ವ ಮೈಮೇಲೆ ಬಂದ ನಾಟಕವನ್ನು ಚಿತ್ರದಲ್ಲಿ ಅಶೋಕ ಮಾಡುತ್ತಾನೆ. ಅದನ್ನು ಬಿಡಿಸಲು ಮನೆಯವರು ಮತ್ತು ಊರಿನವರು ಮಾಡುವ ಮಂತ್ರ ತಂತ್ರ ಹೋಮ ಹವನ ಕಷಾಯ ಮದ್ದು ಎಲ್ಲವನ್ನೂ ಆತ ಅನುಭವಿಸಬೇಕಾಗುತ್ತದೆ. ಆತ ಸತ್ಯ ಹೇಳಿದರೂ ಜನ ನಂಬಲು ಸಿದ್ಧರಿರಲಿಲ್ಲ. ಸ್ವಾಮೀಜಿಯ ಮೂಲಕ ದೆವ್ವ ದೂರವಾಯಿತು ಎಂದರೂ ಜನ ನಂಬಲಿಲ್ಲ. ಒಮ್ಮೆ ದೆವ್ವಗಿವ್ವ ಇಲ್ಲವೆಂದ ಅಶೋಕನೇ ದೆವ್ವ ಬಂತೆಂದು ಹೆದರಿ ಪ್ರಸಾದ ಹಾಕಿಕೊಳ್ಳುವ ಸ್ಥಿತಿಗೆ ಬರುತ್ತಾನೆ. ಇದೇ ಸ್ಥಿತಿಯನ್ನು ಇಂದಿನ ಸಾಮಾಜಿಕ ಮಾಧ್ಯಮಗಳೂ ಮಾಡುತ್ತಿವೆ. ಸುಳ್ಳನ್ನೇ ಮತ್ತೆ ಮತ್ತೆ ಹೇಳಿ ಜನರನ್ನು ನಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅವು ಹರಡುತ್ತಿರುವ ಸುಳ್ಳಿನ ದೆವ್ವಗಳನ್ನು ಸಾಮಾನ್ಯರಿಂದ ಬಿಡಿಸಲು ಸಾಧ್ಯವಾಗುತ್ತಿಲ್ಲ.
ಇಂದು ಸಮಾಜದಲ್ಲಿ ಜನರ ಮನಸ್ಥಿತಿಯನ್ನು ಕೆಡಿಸಿ ಸಾಮಾಜಿಕ ಶಾಂತಿಗೆ ಭಂಗ ತರುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಕೆಲಸ ಸಾಮಾಜಿಕ ಮಾಧ್ಯಮಗಳಿಂದ ನಡೆಯುತ್ತಿದೆ. ಸಮಾಜದ ಸುವ್ಯವಸ್ಥೆ ಅಥವಾ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಯಾಗಿರುವಂತೆ ಮಾಡುವುದನ್ನು ಸಾಮಾಜಿಕ ಸ್ವಾಸ್ಥ್ಯವೆಂದು ಕರೆಯಬಹುದು. ಒಂದು ಸಮಾಜ ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವುದು ಕೂಡಾ ಸಾಮಾಜಿಕ ಸ್ವಾಸ್ಥ್ಯವಾಗಿದೆ. Klive Special Article ಸಮಾಜದ ಕಟ್ಟು ಕಟ್ಟಳೆ, ನಿಯಮಗಳಿಗೆ ಬದ್ಧವಾಗಿರುವುದು ಕೂಡಾ ಸಾಮಾಜಿಕ ಸ್ವಾಸ್ಥ್ಯವೆಂದು ಕರೆಯಲ್ಪಡುತ್ತದೆ. ಸಮಾಜದ ವಿವಿಧ ಜಾತಿ, ಜನಾಂಗ, ಧರ್ಮಗಳಿಗೆ ಸಂಬಂಧಿಸಿದ ವಿವಿಧ ವರ್ಗ, ಗುಂಪುಗಳ ನಡುವೆ ಸೌಹಾರ್ದಯುತ ಸಂಬಂಧ ಬೆಳೆಸುವುದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕರ‍್ಯವಾಗಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಸಮೂಹ ಮಾಧ್ಯಮಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತಿವೆ. ಆದರೆ ಫೇಸ್‌ಬುಕ್, ಯುಟ್ಯೂಬ್, ಇನ್ಸ್ಟಾಗ್ರಾಮ್, ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮಗಳಿಂದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದಕ್ಕಿಂತ ಕೆಡಿಸುವುದರಲ್ಲೇ ಸುದ್ದಿಯಾಗುತ್ತಿರುವುದನ್ನು ಕಾಣಬಹುದು. ಇಂದು ಸಮೂಹ ಮಾಧ್ಯಮಗಳ ಬಗೆಗೆ ಸಕಾರಾತ್ಮಕ ಟೀಕೆಯ ಬದಲು ನಕಾರಾತ್ಮಕ ಟೀಕೆಗಳು ಹೆಚ್ಚು ಕೇಳಿ ಬರುತ್ತಿವೆ. ಸಮೂಹ ಮಾಧ್ಯಮಗಳು ಅದರಲ್ಲೂ ಸಾಮಾಜಿಕ ಮಾಧ್ಯಮಗಳು ಹಿಂಸೆ, ಲೈಂಗಿಕತೆ, ಜನಾಂಗೀಯ ಬೇಧಭಾವ, ಕೋಮುವಾದಗಳನ್ನು ಪ್ರಚೋದಿಸುತ್ತವೆ, ಮಕ್ಕಳು, ಮಹಿಳೆಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಸಮೂಹ ಮಾಧ್ಯಮಗಳಲ್ಲಿ ಕಂಡು ಬರುವ ಅಶ್ಲೀಲ ಚಿತ್ರಗಳು, ಲೈಂಗಿಕತೆ ಪ್ರಚೋದಿಸುವ ದೃಶ್ಯಗಳು, ಮೋಸದ ಜಾಹಿರಾತುಗಳು, ಸುಳ್ಳು ಸುದ್ದಿಗಳು, ತಿರುಚಿದ ಸುದ್ದಿಗಳು, ತಪ್ಪು ಮಾಹಿತಿಗಳು, ಎಐ ವೀಡಿಯೊಗಳು ಜನರ ಮನಸ್ಸನ್ನು ಭ್ರಷ್ಟಗೊಳಿಸುವುದರ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುತ್ತವೆ. ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಯುಟ್ಯೂಬ್ ವಾಹಿನಿಗಳು ಹಣದಾಸೆಯಿಂದ ವೀವ್ಸ್, ಲೈಕ್ಸ್, ಶೇರ್‌ಗಾಗಿ ಹಸಿ ಹಸಿ ಸುಳ್ಳುಗಳನ್ನು ತಲೆಗೆ ಹೊಡೆಯುವ ಸತ್ಯದಂತೆ ಬಿಂಬಿಸಿ ಜನರನ್ನು ನಂಬುವಂತೆ ಮಾಡುತ್ತಿದ್ದಾರೆ. ಇದನ್ನು ನಂಬಿದ ಮತ್ತು ನಂಬದ ಜನರ ನಡುವೆ ವಾದ ವಿವಾದ ಜಗಳ ಪ್ರತಿಭಟನೆಗಳು ನಡೆದು ಇಡೀ ಸಮಾಜದ ನೆಮ್ಮದಿ ಕೆಡಿಸುವ ಕೆಲಸ ನಡೆಯುತ್ತಿದೆ.

ಇತ್ತೀಚೆಗೆ ಉಡುಪಿಯ ಪತ್ರಕರ್ತರೊಬ್ಬರು ಮನೆಯ ಅಂಗಳದಲ್ಲಿ ಬಿದ್ದ ವೀಡಿಯೊ ಹಾಕಿದ್ದನ್ನು ಅವರು ರಜನಿಕಾಂತ್ ತರಹ ಕಾಣುವ ಕಾರಣಕ್ಕೆ ರಜನಿಕಾಂತ್ ಬಿದ್ದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿ ಅವರ ಅಭಿಮಾನಿಗಳಲ್ಲಿ ಗಾಬರಿ ಹುಟ್ಟಿಸಿದ್ದರು. ಉತ್ತರ ಕರ್ನಾಟಕದಲ್ಲಿ ಒಂದು ಕಡೆ ಯಾರೋ ಅಮಾಯಕನನ್ನು ಮಕ್ಕಳ ಕಳ್ಳ ಎಂದು ಬಿಂಬಿಸಿ, ಜನ ಆತನನ್ನು ಹೊಡೆದು ಸಾಯುವಂತೆ ಮಾಡಿದ್ದರು. ಯಾವುದೋ ಲಸಿಕೆ ಹಾಕಿಸಿಕೊಂಡ ಮಗು ಸತ್ತು ಹೋಗಿದೆ ಎಂದು ಬಿಂಬಿಸಿ ಆ ಲಸಿಕೆ ಹಾಕಿಸಿಕೊಂಡ ಮಕ್ಕಳ ಪೋಷಕರೆಲ್ಲ ತಮ್ಮ ಮಕ್ಕಳೊಂದಿಗೆ ಆಸ್ಪತ್ರೆಗೆ ಗಾಬರಿಯಿಂದ ಧಾವಿಸುವಂತೆ ಮಾಡಿದ್ದರು. ಪ್ರಸಿದ್ಧ ಯಾತ್ರಾಸ್ಥಳವೊಂದರ ಸಮೀಪ ನಡೆದ ವಿವಿಧ ತನಿಖೆಗಳು ನಡೆದು ಮುಕ್ತಾಯಗೊಂಡ ಅತ್ಯಾಚಾರ ಪ್ರಕರಣವೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಕ್ಷೇತ್ರದ ಹೆಸರನ್ನು ಕೆಡಿಸುವ ಮತ್ತು ಆ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಲ್ಲಿ ಭಯ ಮೂಡಿಸುವ ಕೆಲಸ ಆನೇಕ ಯುಟ್ಯೂಬರ್‌ಗಳಿಂದ ನಡೆಯುತ್ತಿದೆ. ಕೊರೊನಾ ಸಮಯದಲ್ಲಿ ಬೇರೆ ದೇಶಗಳಲ್ಲಿ ನಡೆದ ಸಾವಿನ ದೃಶ್ಯಗಳನ್ನು ತೋರಿಸಿ ಇಲ್ಲಿನ ಜನರಲ್ಲಿ ಭಯ ಮೂಡಿಸುವ ಕೆಲಸ ಮಾಡಲಾಗಿತ್ತು.

ಕೋಮು ಸಂಘರ್ಷದ ಕಪೋಲಕಲ್ಪಿತ ಸುದ್ದಿ, ವಿಡಿಯೋಗಳನ್ನು ತೋರಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಲಾಗುತ್ತದೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಇಂತಹ ಅನೇಕ ಘಟನೆಗಳನ್ನು ಉದಾಹರಣೆಯಾಗಿ ನೀಡಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದು ಬಿಂಬಿತವಾಗುತ್ತಿರುತ್ತದೋ ಅವೆಲ್ಲವೂ ಸತ್ಯವಾಗಿರುವುದಿಲ್ಲ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು ಎಂಬ ಮಾತಿನಲ್ಲಿ ಸತ್ವವಿದೆ. ಕಣ್ಣಿಗೆ ಕಂಡಿದ್ದೆಲ್ಲವನ್ನೂ ಸತ್ಯ ಎಂದು ನಂಬಿಕೊಂಡು ಹಣದಾಸೆಗೆ ಬರೆಯುವ ಜಾಯಮಾನಕ್ಕೆ ಇಂದಿನ ಯುಟ್ಯೂಬ್ ಪತ್ರಕರ್ತ ಪಕ್ಕಾದರೆ ಅದಕ್ಕಿಂತ ಆತ್ಮಘಾತುಕತನ ಮತ್ತೊಂದಿಲ್ಲ. ಕಣ್ಣಿಗೆ ಕಾಣುವ ವ್ಯಕ್ತಸತ್ಯಗಳಾಚೆಗಿನ ಆಯಾಮಗಳನ್ನು ಶೋಧಿಸುವುದರ ಕಡೆಗೂ ಆತನ ಗಮನವಿರಬೇಕು. ಅವ್ಯಕ್ತ, ತೆರೆಮರೆಯ ನಿಗೂಢ ಸತ್ಯಗಳಿಗೆ ಬಹಿರ್ಮುಖೀ ಸ್ವರೂಪ ಇರುವುದಿಲ್ಲ. ಅವ್ಯಕ್ತ ಸತ್ಯಗಳು ಸೀಮಿತ ವಲಯಕ್ಕೆ ಮಾತ್ರ ಗೊತ್ತಿರುತ್ತವೆ. ಆ ಪರಿಧಿಯ ಮಿತಿಯೊಳಗಷ್ಟೇ ಗಿರಕಿ ಹೊಡೆಯುತ್ತಿರುತ್ತವೆ. ಅದನ್ನು ದಾಟಿ ಎಲ್ಲರ ಗಮನಕ್ಕೆ ಬಾರದಂತೆ ತಡೆಯುವ ಪ್ರಯತ್ನಗಳು ನಡೆದರೂ ಅವ್ಯಕ್ತ ಸತ್ಯಗಳು ಒಂದು ದಿನ ಜನರ ಗಮನಕ್ಕೆ ಬಂದೇ ಬರುತ್ತವೆ. ಆ ಎಚ್ಚರ ಇಂದಿನ ಸೋ ಕಾಲ್ಡ್ ಪತ್ರಕರ್ತರಂತೆ ವರ್ತಿತ್ತಿರುವ ಯುಟ್ಯೂಬರ್‌ಗಳಿಗಿರಬೇಕು.
ದಿನಪತ್ರಿಕೆ, ಟೆಲಿವಿಷನ್ ರೇಡಿಯೋ ಈ ಮಾಧ್ಯಮಗಳಂತೆ ಸಾಮಾಜಿಕ ಮಾಧ್ಯಮಗಳಿಗೂ ಇಡೀ ಜನಸಮೂಹಕ್ಕೆ ಸರಿಯಾದ ದಾರಿ ತೋರಿಸುವ ಶಕ್ತಿ ಇದೆ. ಅಂಥದ್ದೊಂದು ಶಕ್ತಿಯಿರುವ ಕಾರಣಕ್ಕೇ ಅವುಗಳಿಗೆ ಸಾರ್ವಕಾಲಿಕ ಮನ್ನಣೆ ದೊರಕುತ್ತದೆ. ಸಾಮಾಜಿಕ ಮಾಧ್ಯಮವೊಂದು ನೀಡುವ ಮಾಹಿತಿಯೊಂದು ಆಳುವ ಸರ್ಕಾರದ ಕಣ್ಣು ತೆರೆಸಬಹುದು. ಅದರ ಮೂಲಕ ಪ್ರಕಟವಾಗುವ ವಿವರವೊಂದು ನಿರ್ಗತಿಕರ ಬಾಳನ್ನು ಬೆಳಗಿಸಬಹುದು. ನೋವಿನೊಂದಿಗೆ ನರಳುವವರಿಗೆ ಪರಿಹಾರದ ದಾರಿಗಳನ್ನು ಕಂಡರಿಸಬಹುದು. ಅಸಾಧ್ಯ ಎಂದು ಕೈಚೆಲ್ಲಿ ಕುಳಿತವರೊಳಗೆ ಹುಮ್ಮಸ್ಸು ತುಂಬಿ ಅವರನ್ನು ಹೊಸ ಸಾಧ್ಯತೆಗಳ ಕಡೆಗೆ ಕಣ್ಣು ಹಾಯಿಸುವಂತೆ ಪ್ರೇರೇಪಿಸಬಹುದು.

ಅಸಂಖ್ಯ ಜನರನ್ನು ದಿಢೀರನೆ ಸೆಳೆದು ಗಾಢವಾದ ಪ್ರಭಾವ ಬೀರುವ ಸಾಮರ್ಥ್ಯ ಅದಕ್ಕಿದೆ. ಇಂಥ ಅಗಾಧ ಸಾಮರ್ಥ್ಯದ ಮಾಧ್ಯಮಗಳನ್ನು ಹಣ, ಪ್ರಚಾರ ಅಪೋಶನ ತೆಗೆದುಕೊಂಡಾಗ ಏನೆಲ್ಲಾ ಅಪಾಯಗಳಿರುತ್ತವೆ ಎಂಬುದನ್ನು ಈಗಾಗಲೇ ಕಂಡಿದ್ದೇವೆ. ಹಾಗಾದಾಗ, ಸಹಜವಾಗಿಯೇ ಮಾಧ್ಯಮವೊಂದು ತಾನು ನಿರ್ವಹಿಸಬೇಕಾದ ಹೊಣೆಗಾರಿಕೆಯಿಂದ ನುಣುಚಿಕೊಳ್ಳಬೇಕಾದ ಪ್ರಸಂಗ ಎದುರಾಗಬಹುದು. ಅದಕ್ಕೆ ಇಂದಿನ ಸಾಮಾಜಿಕ ಮಾಧ್ಯಮಗಳು ಅವಕಾಶ ನೀಡಬಾರದು. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಇಂದಿನ ಪ್ರತಿಯೊಂದು ಮಾಧ್ಯಮದ ಜವಾಬ್ದಾರಿಯಾಗಬೇಕು.

-ಡಾ.ಸತೀಶ್ ಕುಮಾರ್ ಅಂಡಿಂಜೆ,
ಪ್ರಾಧ್ಯಾಪಕರು,
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಕುವೆಂಪು ವಿಶ್ವವಿದ್ಯಾಲಯ,
ಶಂಕರಘಟ್ಟ-577451
ಶಿವಮೊಗ್ಗ
ಮೊಬೈಲ್:9448870461
E-mail: sathishandinje@gmail.com

D. Devaraj Arasu ಆಗಸ್ಟ್ 20. ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಜಿಲ್ಲಾಡಳಿತ ಸರ್ವ ಸಜ್ಜು

0

D. Devaraj Arasu ಡಿ.ದೇವರಾಜ ಅರಸುರವರ ಜನ್ಮ ದಿನಾಚರಣೆ ಸಮಾರಂಭವನ್ನು ಆಗಸ್ಟ್ 20 ರಂದು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಯಲು ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಿ.ದೇವರಾಜ ಅರುಸುರವರ ಜನ್ಮ ದಿನಾಚರಣೆ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಆಹ್ವಾನಿಸಲು ಸೂಚಿಸಿದ ಅವರು ಆ.20 ರಂದು ಕುವೆಂಪು ರಂಗಮಂದಿರದಲ್ಲಿ ಜಯಂತಿ ಆಚರಣೆಗೆ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದರು. ನಗರದ ಮುಖ್ಯ ಭಾಗಗಳಲ್ಲಿ ಪಾಲಿಕೆ ವತಿಯಿಂದ ಫ್ಲೆಕ್ಸ್ಗಳನ್ನು ಅಳವಡಿಸಲು, ತೋಟಗಾರಿಕೆ ಮತ್ತು ಪಾಲಿಕೆಯವರು ವೇದಿಕೆ ಅಲಂಕಾರ ಕೈಗೊಳ್ಳುವಂತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಲಘು ಉಪಹಾರದ ವ್ಯವಸ್ಥೆ ಮಾಡುವಂತೆ ಸೂಚಿಸಿದ ಅವರು ಮುಖಂಡರು ಉಲ್ಲೇಖಿಸಿದ ಉಪನ್ಯಾಸಕರಿಂದ ಅರಸುವರವ ಕುರಿತು ಉಪನ್ಯಾಸ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು.
D. Devaraj Arasu ದಲಿತ ಸಂಘಟನೆ ಮತ್ತು ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಎಲ್ಲ ಇಲಾಖೆಗಳು ಮತ್ತು ವಿವಿಧ ಸಂಘ ಸಂಸ್ಥೆಳು, ಸಂಘಟನೆಗಳ ಸಹಯೋಗ ಮತ್ತು ಸಮನ್ವಯತೆಯಿಂದ ಅರಸುರವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಮನವಿ ಮಾಡಿ, ದೇವರಾಜು ಅರಸು ಪ್ರಶಸ್ತಿ ಪುರಸ್ಕಾರ ನೀಡುವುದನ್ನು ನಿಲ್ಲಿಸಿ ಎರಡು ವರ್ಷಗಳಾಯಿತು. ಪುನಃ ಈ ಪ್ರಶಸ್ತಿ ನೀಡಬೇಕೆಂದು ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅರಸುರವರ ಕುರಿತಾದ ಕಿರು ಪುಸ್ತಕಗಳನ್ನು ವಿತರಿಸುವಂತೆ ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಜಾತಿ ಒಕ್ಕೂಟದ ಅಧ್ಯಕ್ಷರಾದ ವಿ ರಾಜು ಮಾತನಾಡಿ, ದೇವರಾಜ ಅರಸು ಭವನದ ನಿರ್ಮಾಣ ಪೂರ್ಣಗೊಳ್ಳಲು ಅಗತ್ಯವಾದ ಅನುದಾನ ತಂದು ಕಾಮಗಾರಿಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಹಾಗೂ ಸಮುದಾಯ ಭವನವನ್ನು ಇಲಾಖೆಯ ಆಡಳಿತ ಕಚೇರಿ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳದೇ, ಭವನದ ನಿರ್ಮಾಣದ ಉದ್ದೇಶದ ಆಶಯಗಳನ್ವಯ ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಶಾಲಾ-ಕಾಲೇಜು ಮಟ್ಟದಲ್ಲಿ ಅರಸು ರವರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಜಯಂತಿ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ನೀಡುವಂತೆ ತಿಳಿಸಿದರು.
ಜಿಲ್ಲೆಯ ಪ್ರತಿ ತಾಲ್ಲೂಕುಗಳಲ್ಲಿ ಹಿಂದುಳಿದ ವರ್ಗಗಳಿಗಾಗಿ ಸೇವೆ ಸಲ್ಲಿಸಿದ ಓರ್ವರನ್ನು ಗುರುತಿಸಿ ಜಯಂತಿಯಂದು ಸನ್ಮಾನಿಸಲಾಗುವುದು ಹಾಗೂ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು ಎಂದರು.
ದೇವರಾಜ ಅರಸು ಸಮುದಾಯ ಭವನ ಕಟ್ಟಡ ನಿರ್ಮಾಣದ ಅಂದಾಜು ಮೊತ್ತಕ್ಕಿಂತ ಹೆಚ್ಚಾದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದೀಗ ಕಾಮಗಾರಿ ಪೂರ್ಣಗೊಳ್ಳಲು ಅವಶ್ಯಕತೆ ಇರುವ ರೂ. 1.7 ಕೋಟಿ ಮೊತ್ತದ ಅಂದಾಜು ಪಟ್ಟಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿ ಅನುದಾನ ನೀಡುವಂತೆ ಜನಪ್ರತಿನಿಧಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ಅನುದಾನ ಬಿಡುಗಡೆಯಾದ ತಕ್ಷಣ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದ ಅವರು ಎಲ್ಲರೂ ಸೇರಿ ಜಯಂತಿಯನ್ನು ಯಶಸ್ವಿಯಾಗಿಸೋಣ. ಎಲ್ಲ ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ತಿಳಿಸಿದರು. .
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಮೇಶ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶೋಭಾ, ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ಎಸ್ ಪಿ.ಶೇಷಾದ್ರಿ, ವೆಂಕಟೇಶ್, ಇತರೆ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Shivamogga Urban Development Authority ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ವಸತಿ ಯೋಜನೆಗಾಗಿ ಜಮೀನು ನೀಡಲು ಮನವಿ

0

Shivamogga Urban Development Authority ಕರ್ನಾಟಕ ಗೃಹ ಮಂಡಳಿಯು ತನ್ನ ವಸತಿ ಯೋಜನೆಗಳಿಗಾಗಿ ಭೂಮಾಲೀಕರು ಪಾಲುದಾರಿಕೆ ಅಡಿ ಅನುಪಾತದ ಆಧಾರದಲ್ಲಿ ಭೂ ಪರಿಹಾರ ಕೋರುವ ಜಮೀನುಗಳು ಮತ್ತು ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡಿಸದೇ ನೇರವಾಗಿ ಭೂಮಾಲೀಕರೊಂದಿಗೆ ಪಾಲುದಾರಿಕೆಯಡಿ ಅನುಪಾತದ ಆಧಾರದ ಮೇಲೆ ಜಮೀನುಗಳನ್ನು ಸಂಗ್ರಹಣೆ ಮಾಡಿ ವಸತಿ ಯೋಜನೆ ಕೈಗೊಳ್ಳಲು ಉದ್ದೇಶಿಸಿದ್ದು, ಆಸಕ್ತ ಭೂಮಾಲೀಕರಿಂದ ಭೂಮಿ ನೋಂದಾಯಿಸಿಕೊಳ್ಳುವಂತೆ ಕೋರಿದೆ.
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ, ಉತ್ತಮ ರಸ್ತೆ ಸಂಪರ್ಕವಿರುವ ಮತ್ತು ವಸತಿ ಯೋಜನೆಗಳಿಗೆ ಉತ್ತಮ ಬೇಡಿಕೆಯಿರುವ ಜಮೀನುಗಳು (50:50ರ ಅನುಪಾತದಲ್ಲಿ) ಹಾಗೂ ಉಳಿದ ಎಲ್ಲಾ ಪ್ರದೇಶಗಳಲ್ಲಿ ಉತ್ತಮ ರಸ್ತೆ ಸಂಪರ್ಕವಿರುವ ಮತ್ತು ವಸತಿ ಯೋಜನೆಗಳಿಗೆ ಉತ್ತಮ ಬೇಡಿಕೆಯಿರುವ ಜಮೀನುಗಳು (60:40ರ ಅನುಪಾತದಲ್ಲಿ) ಒಳಗೊಂಡಿರುತ್ತದೆ.
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಶಿವಮೊಗ್ಗ ಕನಿಷ್ಟ 50 ಎಕರೆ, ಭದ್ರಾವತಿ ಕ 25 ಎಕರೆ, ಶಿಕಾರಿಪುರ ಕ 25 ಎಕರೆ, ಸೊರಬ ಕ 25 ಎಕರೆ, ಸಾಗರ ಕ 25 ಎಕರೆ, ತೀರ್ಥಹಳ್ಳಿ ಕ 25 ಎಕರೆ, ಹೊಸನಗರ ಕ 25 ಎಕರೆ, ಆನವಟ್ಟಿ/ ಹೊಳೆಹೊನ್ನೂರು/ ರಿಪ್ಪನಪೇಟೆ/ ಆಯನೂರು/ ಶಿರಾಳಕೊಪ್ಪ ಪಟ್ಟಣಗಳಲ್ಲಿ ಕ 25 ಎಕರೆ ಪ್ರದೇಶಗಳಲ್ಲಿ ಭೂಮಿಯನ್ನು ಪಡೆದು ವಸತಿ ಯೋಜನೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
Shivamogga Urban Development Authority ಪ್ರಸ್ತಾವಿತ ಜಮೀನು ರಾಷ್ಟ್ರೀಯ /ರಾಜ್ಯ ಹೆದ್ದಾರಿ/ಜಿಲ್ಲಾ ಮುಖ್ಯ ರಸ್ತೆಗಳಿಗೆ ಹೊಂದಿಕೊಂಡಿರಬೇಕು. ನಗರ ಹಾಗೂ ಪಟ್ಟಣ ಪ್ರದೇಶದ ವ್ಯಾಪ್ತಿಯಿಂದ ಗರಿಷ್ಠ 2 ರಿಂದ 5 ಕಿ.ಮೀ. ಅಂತರದಲ್ಲಿರಬೇಕು. ಜಮೀನು ಆದಷ್ಟು ಸಮತಟ್ಟಾಗಿದ್ದು ರಾಜಕಾಲುವೆ/ಮುಖ್ಯನಾಲಾ ಅಥವಾ ಕೆರೆಗಳಿಂದ ಹೊರತಾಗಿರಬೇಕು. ಪಿ.ಟಿ.ಸಿ.ಎಲ್.ಕಾಯೆಯಿಂದ ಹೊರತಾಗಿರಬೇಕು. ಜಮೀನು ಒಂದೇ ಕಾಂಪ್ಯಾಕ್ಟ್ ಬ್ಲಾಕ್‌ನಲ್ಲಿರಬೇಕು ಹಾಗೂ ವಸತಿ ಯೋಜನೆಗೆ ಯೋಗ್ಯವಾಗಿರಬೇಕು. ಈ ಜಮೀನು ಸರ್ಕಾರವು ನಗರ/ಪಟ್ಟಣಕ್ಕೆ ಅನುಮೋದಿಸಿರುವ ಮಹಾಯೋಜನೆಯಲ್ಲಿ ವಸತಿ ವಲಯದಲ್ಲಿರಬೇಕು. ಜಮೀನುಗಳು ಯಾವುದೇ ಋಣಭಾರ ಹೊಂದಿರಬಾರದು. ಪ್ರಸ್ತಾವಿತ ಜಮೀನುಗಳನ್ನು ಅನುಪಾತದ ಪಾಲುದಾರಿಕೆಯಲ್ಲಿ ಕೈಗೊಳ್ಳುವ ಪ್ರಕ್ರಿಯೆಯು ಕ.ಗೃ.ಮಂ.ಯಿಂದ ರಚಿಸಲಾದ ಜಂಟಿ ಸಹಭಾಗಿತ್ವ ಭೂಸಂಗ್ರಹಣಾ ಸಮಿತಿಯ ನಿರ್ಣಯಕ್ಕೆ ಒಳಪಟ್ಟಿರುತ್ತದೆ.
ನಗರ ಹಾಗೂ ಪಟ್ಟಣ ಪ್ರದೇಶಗಳ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜಮೀನುಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಹಾಗೂ ಆಯಾ ಪ್ರದೇಶಗಳ ಬೇಡಿಕೆ ಸಮೀಕ್ಷೆಯನ್ನು ಆಧರಿಸಿ, ವಸತಿ ಯೋಜನೆಗಳನ್ನು ಕೈಗೊಳ್ಳಲಾಗುವುದು. ಪ್ರಸ್ತಾವಿತ ಜಮೀನುಗಳನ್ನು ಭೂಮಾಲೀಕರು ಮಂಡಳಿ ಹೆಸರಿಗೆ ನೋಂದಾಯಿಸಿ, ಹಸ್ತಾಂತರಿಸಬೇಕು
ಆಸಕ್ತಿಯುಳ್ಳ ಭೂಮಾಲೀಕರು ತಮ್ಮ ಜಮೀನುಗಳು ಮೇಲೆ ತಿಳಿಸಲಾದ ಅಂಶಗಳಿಗೆ ಹೊಂದುವಂತೆ ಇದ್ದು, ಮಂಡಳಿಗೆ ಜಮೀನನ್ನು ನೀಡಲು ಆಸಕ್ತಿಯಿದ್ದವರು ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ಕಾರ್ಯಪಾಲಕ ಅಭಿಯಂತರರು, ಕ.ಗೃ.ಮಂ, ಶಿವಮೊಗ್ಗ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ಯೋಜನಾ ಕಚೇರಿ, ಶಿವಮೊಗ್ಗ ಅಥವಾ ನೇರವಾಗಿ ಕೇಂದ್ರ ಕಚೇರಿ, ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು-560009 ಇವರಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 9449235920/ 9740512824/ 9743733696/ 08182-249944 ಗಳನ್ನು ಸಂಪರ್ಕಿಸುವುದು.

MESCOM ಆಗಸ್ಟ್ 14, ಗಾಂಧಿ ಬಜಾರ್ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ, ಮೆಸ್ಕಾಂ ಪ್ರಕಟಣೆ

0

MESCOM ಶಿವಮೊಗ್ಗ ನಗರದ ಮೀನು ಮಾರುಕಟ್ಟೆ ಬಳಿ ವಿದ್ಯುತ್ ಉಪಕರಣಗಳ ದುರಸ್ಥಿ ಕಾಮಗಾರಿ ಹಮ್ಮಿಕೊಂಡಿರುವುದರಿAದ ಆ.14 ರಂದು ಬೆಳ್ಳಗ್ಗೆ 9:00 ರಿಂದ 06:00 ರವರೆಗೆ ಈ ವ್ಯಾಪ್ತಿಯ ಗಾಂಧಿಬಜಾರ್, ಸಾರ್ವಕರ್ ನಗರ, ಮೀನು ಮಾರುಕಟ್ಟೆ, ತಿರುಪಳಯ್ಯನ ಕೇರಿ, ಅಶೋಕರಸ್ತೆ, ರಾವ್ಮಣ್ಣ ಶ್ರೇಷ್ಠಿ ಪಾರ್ಕ್ , ಎಸ್‌ಪಿಎಂ ರಸ್ತೆ, ಎಲೆರೇವಣ್ಣ ಕೇರಿ, ಆನವೇರಪ್ಪ ಕೇರಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Shri Subrahmanya Swamy ಆಗಸ್ಟ್ 13. ಗೊಂದಿಚಟ್ನಳ್ಳಿಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ

0

Shri Subrahmanya Swamy ಶಿವಮೊಗ್ಗ ನಗರದ ಗೋoಧಿ ಚಟ್ನಹಳ್ಳಿ ನಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ನೂತನ ದೇವಸ್ಥಾನ ಪ್ರವೇಶ ಹಾಗೂ ವಿಗ್ರಹ ಪ್ರತಿಷ್ಠಾಪನೆ ಕಳಸರೋಹಣ ಅಷ್ಟ ಬಂಧನ ಮಹಾ ಕುಂಭ ಅಭಿಷೇಕ ಮಹೋತ್ಸವ ಆಗಸ್ಟ್ 13 ರಂದು ಪೂಜೆ ಆರಂಭಗೊಂಡು ದಿನಾಂಕ 14 ಗುರುವಾರ ಬೆಳಿಗ್ಗೆ 9:00 ರಿಂದ 10.30 ರವರೆಗೆ ನಡೆಯುವ ನೂತನ ದೇವಸ್ಥಾನ ಪ್ರವೇಶ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ಅಷ್ಟ ಬಂಧನ ಮತ್ತು ಮಾಹಾ ಕುಂಭಾಭಿಷೇಕ ಕಾರ್ಯಕ್ರಮವು ಬಹು ವಿಜೃಂಭಣೆಯಿಂದ ನಡೆಸಲು ಇಚ್ಛೆಯಿಸುವುದರಿಂದ ಸುತ್ತ ಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು ಮನ ಧನ ಸಹಾಯ ನೀಡಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳಲಾಗಿದೆ. Shri Subrahmanya Swamy ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ ಕುಂಭ ಅಭಿಷೇಕಕ್ಕೆ ಬಸವ ಮರಳುಸಿದ್ದ ಸ್ವಾಮಿಯವರಿಂದ ನೆರವೇರಿಸಲಿದ್ದಾರೆ ದೇವಸ್ಥಾನದ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಕೆ ,ಎಸ್, ಈಶ್ವರಪ್ಪ ಬಿ, ವೈ, ರಾಘವೇಂದ್ರ ಎಂ, ಪ್ರಕಾಶ್ (ಗಿಲ್ಲಿ) ಅಧ್ಯಕ್ಷರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ಸಸಿ ನೆಡುವ ಕಾರ್ಯಕ್ರಮ ಉದ್ಘಾಟನೆ ಭಾಗವಹಿಸುತ್ತಿರುವ ಶಾರದಾ ಪುರನಾಯಕ್ ನಾಯ ಎಸ್, ಎನ್ ,ಚೆನ್ನಬಸಪ್ಪ ಡಿ ,ಎಸ್, ಅರುಣ್ ಧನಂಜಯ್ ಸರ್ಜಿ ಅಶೋಕ್ ನಾಯ್ಕ ಕೆ,ಇ ಕಾಂತೇಶ್ ನಾಗರತ್ನ ಎಚ್ ಪ್ರೇಮ ಇನ್ನು ಮುಂತಾದರು ಭಾಗವಹಿಸುತ್ತಿದ್ದಾರೆ.

Sri Rameshwar Temple ತೀರ್ಥಹಳ್ಳಿ ಶ್ರೀರಾಮೇಶ್ವರ ದೇಗುಲದಲ್ಲಿ ಹುಂಡಿಹಣ ಕಳವು

0

Sri Rameshwar Temple ತೀರ್ಥಹಳ್ಳಿ ಶ್ರೀರಾಮೇಶ್ವರ ದೇಗುಲದಲ್ಲಿ ಹುಂಡಿಹಣ ಕಳವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಕಳ್ಳತನ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಅನ್ನದಾಸುಹ ಕೊಠಡಿಯಲ್ಲಿ ಹಾಗೂ ಸಣ್ಣದೊಂದು ಕಾಣಿಕೆ ಹುಂಡಿ ಸಹ ತೆಗೆದು ಅದರಲ್ಲಿದ್ದ ಹಣವನ್ನು ಕಳ್ಳನೊಬ್ಬ ದೋಚಿದ್ದಾರೆ.

ರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ದೇವಸ್ಥಾನದ ಬಾಗಿಲು ಮುರಿದು ಕಳ್ಳತನ ಮಾಡಲು ಯತ್ನಿಸಲಾಗಿದೆ.

ಮೂವತ್ತು ಸಾವಿರಕ್ಕೂ ಅಧಿಕ ಹಣ ಕಳ್ಳತನವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮುಖಕ್ಕೆ ಟವೆಲ್ನಿಂದ ಸುತ್ತಿಕೊಂಡು ಕಳ್ಳನೊಬ್ಬ ಓಡಾಡಿರುವ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸರಿಯಾಗಿವೆ. ತೀರ್ಥಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Shivaganga Yoga Center ಯೋಗದಿಂದ ದೀರ್ಘಾಯುಷ್ಯ, ದೇಹ & ಮನಸ್ಸು ಸದೃಢ-‌ಜಡೆಮಠದ ಶ್ರೀಮಹಾಂತಶ್ರೀ

0

Shivaganga Yoga Center ಸಾವಿರಾರು ವರ್ಷಗಳ ಕಾಲ ಇತಿಹಾಸವಿರುವ ಯೋಗ ಪ್ರಾಣಾಯಾಮ ಧ್ಯಾನ ಇಂದು ಹೆಚ್ಚು ಪ್ರಚಲಿತವಾಗಿದೆ ಎಂದು ವಿರಕ್ತ ಜಡೆ ಮಠದ ಶ್ರೀ ಮ. ನಿ. ಪ್ರ. ಮಹಾಂತ ಮಹಾಸ್ವಾಮಿಗಳು ನುಡಿದರು. ಶಿವಮೊಗ್ಗ ಕುವೆಂಪು ನಗರ ಎನ್ಎಸ್ ಲೇಔಟ್ ನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಶ್ರೀ ಶಿವಗಂಗಾ ಯೋಗ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳನಾದ ಉಚಿತ ಯೋಗ ಶಿಬಿರ ಹಾಗೂ ಸಂಗೀತ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಯೋಗದಿಂದ ದೀರ್ಘಾಯುಷ್ಯ, ಸಕಾರಾತ್ಮಕ ಭಾವನೆಗಳ ಜೊತೆಗೆ ದೇಹ ಮನಸ್ಸು ಸದೃಢವಾಗಿರುತ್ತದೆ. ಯೋಗ ಹಾಗೂ ಸಂಗೀತ ಒಂದು ನಾಣ್ಯದ ಎರಡು ಮುಖಗಳು ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ನಮ್ಮ ಮನಸ್ಸು ಸದಾ ಸದ್ಭಾವನೆ ಇಂದ ಕೂಡಿರಲು ಯೋಗ ಸಂಗೀತ ಬಹಳ ಅವಶ್ಯಕವಾಗಿದೆ. ಅದರಲ್ಲೂ ಇಂದಿನ ಒತ್ತಡ ಪ್ರಪಂಚದಲ್ಲಿ ಎಲ್ಲಾ ಔಷಧಿ ಮಾತ್ರೆಗಳಿಗಿಂತ ಯೋಗ ಪ್ರಾಣಾಯಾಮ ಧ್ಯಾನ ಹಾಗೂ ಸಂಗೀತ ಬಹಳ ಸಹಕಾರಿಯಾಗಿದೆ ಎಂದು ಹೇಳಿದರು.
ಈ ವೇಳೆ ಶಿವಗಂಗಾ ಯೋಗ ಕೇಂದ್ರದ ಗುರುಗಳಾದ ಯೋಗಚಾರ್ಯ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಡಾ. ಸಿವಿ ರುದ್ರಾರಾಧ್ಯ ಅವರು ಮಾತನಾಡಿ ಶಿವಮೊಗ್ಗವನ್ನು ಒಂದು ಯೋಗ ನಗರವನ್ನು ಆಗಿಸುವ ಗುರಿ ಹೊಂದಿ ಇವತ್ತು 37ನೆಯ ಶಾಖೆಗೆ ನಾವು ಚಾಲನೆಯನ್ನು ಕೊಡುತ್ತಿದ್ದೇವೆ. ಮನೆ, ಮನೆಗಳಿಗೆ ಯೋಗವನ್ನು ತಲುಪಿಸುವುದರ ಮುಖಾಂತರ ಎಲ್ಲಾ ಬಡಾವಣೆಗಳಲ್ಲೂ ಯೋಗ ಶಿಕ್ಷಣವನ್ನ ನೀಡುತ್ತಾ ಇದ್ದೇವೆ. ಇದಕ್ಕೆಲ್ಲಾ ಪ್ರೇರಣೆ ನಮ್ಮ ಯೋಗ ಕೇಂದ್ರದ ಅಧ್ಯಕ್ಷರಾದ ರುದ್ರೇಗೌಡರು ಎಂದು ಹೇಳಿದರು. ಜೊತೆಗೆ 37 ಶಾಖೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ನಮ್ಮ ಯೋಗ ಶಿಕ್ಷಕರ ಪಾತ್ರ ತುಂಬಾ ಪ್ರಮುಖವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಹುಮಾಯನ್ ಹರ್ಲಾಪುರ್ ಅವರು ಸಂಗೀತ ಶಿಬಿರಕ್ಕೆ ಚಾಲನೆ ನೀಡಿ ವಚನಗಳನ್ನು ಹಾಡುವುದರ ಮೂಲಕ ಸಂಗೀತ ಮಾನಸಿಕ ಖಿನ್ನತೆಯನ್ನು ದೂರವಾಗಿಸುವುದರ ಜೊತೆಗೆ ಆ ಮನೆಯ ವಾತಾವರಣವನ್ನು ತುಂಬಾ ಉತ್ತಮವಾಗಿ ಇಡುತ್ತದೆ. ಪ್ರಸ್ತುತ ಮೊಬೈಲ್ ಹಾವಳಿಯಿಂದ ಯುವ ಪೀಳಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಸಂಗೀತವನ್ನು ಅಭ್ಯಾಸ ಮಾಡುವುದರ ಮುಖಾಂತರ ಮನೋವಿಕಾಸವನ್ನು ಮಾಡಿಕೊಳ್ಳೋಣ ಎಂದು ಕಿವಿಮಾತು ಹೇಳಿದರು. Shivaganga Yoga Center ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ರುದ್ರಮುನಿ ಸಜ್ಜನ್, ಮಾತನಾಡಿ ವೀರಶೈವ ಮಹಾಸಭಾ ಸಮಾಜದಲ್ಲಿ ಸಂಘಟನೆಗಳ ಮುಖಾಂತರ ಲಿಂಗಾಯತ ಧರ್ಮವನ್ನು ಪ್ರಚಾರಗೊಳಿಸಿ ಹಲವಾರು ಸಾಧಕರಿಗೆ ಸನ್ಮಾನ ಮಾಡುವುದರ ಮುಖಾಂತರ. ಹಾಗೂ ದೇಶದಲ್ಲಿ ವಿಶೇಷವಾದ ಸಾಧನೆ ಮಾಡಿದ ಗಣ್ಯರಿಗೆ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿಯನ್ನುನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದೇವೆ. ಇಂತಹ ಕಾರ್ಯಕ್ರಮಗಳಿಂದ ನಮ್ಮ ವೀರಶೈವ ಲಿಂಗಾಯಿತ ಮಹಾಸಭಾ ಪುನೀತವಾಗುತ್ತದೆ ಇದರ ಸದುಪಯೋಗವನ್ನು ನಮ್ಮ ಬಡಾವಣೆಯ ಎಲ್ಲರೂ ಉಪಯೋಗಿಸಿಕೊಳ್ಳಬೇಕೆಂದು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರು ಉದ್ಯಮಿಗಳು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್ ರುದ್ರೇಗೌಡ ಅವರು ಮಾತನಾಡಿ, ನಿರಂತರವಾಗಿ ಯೋಗ ತರಬೇತಿಯನ್ನ ನೀಡುತ್ತಿರುವ ಏಕೈಕ ಸಂಸ್ಥೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಇದೆ ಎಂದಾದರೆ ಅದು ಶಿವಗಂಗಾ ಯೋಗ ಕೇಂದ್ರ ಮಾತ್ರ ಜೊತೆಗೆ ಈಗಾಗಲೇ ಶಿವಗಂಗಾ ಯೋಗ ಕೇಂದ್ರ ಪ್ರಧಾನ ಕಛೇರಿಯಲ್ಲಿ ಬರುವ ದಿನಗಳಲ್ಲಿ ನ್ಯಾಚುರೋಪತಿ ಆಯಿಲ್ ಬಾತ್ ಮಡ್ಬಾತ್ ಹಾಗೂ ಹಲವಾರು ಆರೋಗ್ಯ ಥೆರಪಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುವುದು ಎಂದು ನುಡಿದರು.ಸಮಾರಂಭದಲ್ಲಿ ಶಿವಗಂಗಾ ಯೋಗಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ. ವಿಜಯಕುಮಾರ್. ನೀಲಕಂಠರಾವ್. ಕಾಟನ್ ಜಗದೀಶ್. ಎಲ್.ಎಂ. ಮೋಹನ್,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು ವಾಗ್ದೇವಿ ಬಸವರಾಜ್, ವೀರಶೈವ ಮಹಾಸಭಾ ಜಿಲ್ಲಾ ಮಾಧ್ಯಮ ಘಟಕದ ಅಧ್ಯಕ್ಷ ಕೆ.ಆರ್. ಸೋಮನಾಥ್, ಪಾಲಿಕೆ ಘಟಕದ ಅಧ್ಯಕ್ಷ ರಾಜಶೇಖರ್, ವೀರಶೈವ ಮಹಾಸಭಾದ ಪದಾಧಿಕಾರಿಗಳು, ಯೋಗ ಶಿಕ್ಷಕರುಗಳು ಲವಕುಮಾರ್, , ಪೋಷಕರಾದ ಮೋಹನ್ ಬಾಳೆಕಾಯಿ, ಯೋಗ ತರಬೇತುದಾರರು ಉಪಸ್ಥಿತರಿದ್ದರು.

K.S.Eshwarappa ಧರ್ಮಸ್ಥಳದ ವಿಷಯಕ್ಕೆ ನಾವು ಯಾವುದೇ ತ್ಯಾಗಕ್ಕೂ‌ ಸಿದ್ಧ: ಕೆ. ಎಸ್. ಈಶ್ವರಪ್ಪ

0

K.S.Eshwarappa ಶಿವಮೊಗ್ಗದಲ್ಲಿ ಧರ್ಮಸ್ಥಳ ಧರ್ಮಧರ್ಶಿ ವಿರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳ ಕ್ಷೇತ್ರದ ಪರವಾಗಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ಮೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ಹುನ್ನಾರ ನಡೆದಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಹಾಗೂ ರಾಷ್ಟ್ರಭಕ್ತರ ಬಳಗದ ಪ್ರಮುಖ ಕೆ ಎಸ್ ಈಶ್ವರಪ್ಪ ಭಾಗಿಯಾಗಿದ್ದರು.

ಧರ್ಮಸ್ಥಳ ವಿರೋಧಿಗಳನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

K.S.Eshwarappa ಹುಂಚದ ಶ್ರೀ ಹೊಂಬುಜ ಜೈನ ಮಠ ಹಾಗೂ ಜೈನ್ ಮಿಲನ್ ಶಿವಮೊಗ್ಗ , ದಿಗಬಂರ ಜೈನ ಸಂಘದವರು ಪ್ರತಿಭಟನೆಗೆ ಸಾಥ್ ನೀಡಿದರು.

Adichunchanagiri Education Trust ಅಕ್ಷರ ಅಭ್ಯಾಸವು ವ್ಯಕ್ತಿಯೊಬ್ಬನ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ: ಶ್ರೀ ಪ್ರಸನ್ನನಾಥಸ್ವಾಮೀಜಿ

0

Adichunchanagiri Education Trust ಹಿಂದೂ ಪದ್ಧತಿಯಲ್ಲಿ, ಅಕ್ಷರಾಭ್ಯಾಸಂ ಅಥವಾ ವಿದ್ಯಾರಂಭಂ ಎಂದರೆ ಮಗುವನ್ನು ಶಿಕ್ಷಣದ ಪ್ರಪಂಚಕ್ಕೆ ವಿಧ್ಯುಕ್ತವಾಗಿ ಸೇರಿಸುವುದು. ಅಕ್ಷರ, ಅಂದರೆ “ಅಕ್ಷರ” ಮತ್ತು ಅಭ್ಯಾಸ, ಅಂದರೆ “ಅಧ್ಯಯನ”.ಈ ಪದವು ಎರಡು ಪದಗಳ ಸಂಯೋಜನೆಯಾಗಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಿ ಕೆ ಜಿ ಮತ್ತು ಎಲ್ ಕೆ ಜಿ ಪುಟಾಣಿ ಮಕ್ಕಳಿಗೆ ಬಿ ಜಿ ಎಸ್ ಸಭಾಭವನದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ,ಅಕ್ಷರ ಅಭ್ಯಾಸವು ವ್ಯಕ್ತಿಯೊಬ್ಬನ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಆದ್ದರಿಂದ, ಪ್ರತಿಯೊಬ್ಬರೂ ಅಕ್ಷರ ಅಭ್ಯಾಸವನ್ನು ಗಂಭೀರವಾಗಿ ಪರಿಗಣಿಸಬೇಕು.
ಶಿಕ್ಷಣದ ಆರಂಭವು ಪ್ರತಿಯೊಂದು ಮಗುವಿನ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಆದ್ದರಿಂದ ಈ ಪ್ರಯಾಣವನ್ನು ಶುಭ ಸೂಚನೆಯಾಗಿ, ವಿದ್ಯಾರಂಭದಂತಹ ಸಾಂಪ್ರದಾಯಿಕ ಸಮಾರಂಭದೊಂದಿಗೆ ಪ್ರಾರಂಭಿಸುವುದು ಅರ್ಥಪೂರ್ಣವಾಗಿದೆ.ಮಕ್ಕಳಲ್ಲಿ ನಾವು ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಹುಟ್ಟು ಹಾಕಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರು ನಿತ್ಯ ಶ್ರಮ ವಹಿಸಬೇಕು ಎಂದರು.
Adichunchanagiri Education Trust ಮಗುವಿನ ತಂದೆ ಅಥವಾ ಗುರುವು ಮಗುವಿನ ಕೈ ಹಿಡಿದು, ಸ್ಲೇಟ್ ಅಥವಾ ತಟ್ಟೆಯಲ್ಲಿ ಅಕ್ಕಿಯ ಮೇಲೆ ಓಂ, ಶ್ರೀ, ಮತ್ತು ಇತರ ದೇವರ ಹೆಸರುಗಳನ್ನು ಬರೆಯುತ್ತಾರೆ. ನಂತರ, ಮಗುವು ತಾನೇ ಅಕ್ಷರಗಳನ್ನು ಬರೆಯಲು ಪ್ರಯತ್ನಿಸುತ್ತದೆ ಎಂದು ಪೂಜ್ಯರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಉಪಸ್ಥಿತರಿದ್ದರು. ಶಾಲೆಯ ಪ್ರಾಂಶುಪಾಲರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

D.K.Shivakumar ಬಿಜೆಪಿಯ ಕೆಲವು ಖಾಲಿ ಟ್ರಂಕುಗಳು ಶಬ್ದ ಮಾತ್ರ ಮಾಡುತ್ತವೆ : ಡಿಸಿಎಂ ಡಿ.ಕೆ.ಶಿವಕುಮಾರ್

0

D.K.Shivakumar ಬಿಜೆಪಿಯ ಕೆಲವು ಖಾಲಿ ಟ್ರಂಕುಗಳು ಶಬ್ದ ಮಾತ್ರ ಮಾಡುತ್ತವೆ. ಬರೀ ಶಬ್ದ ಮಾಡುವವರು ಸಂಸತ್ ನಲ್ಲಿ ಮಾತನಾಡಿ, ಪ್ರಧಾನ‌ಮಂತ್ರಿಯವರನ್ನು ಭೇಟಿ ಮಾಡಿ ರಾಜ್ಯಕ್ಕೆ ಹತ್ತು ರೂಪಾಯಿಯಾದರೂ ಅನುದಾನ ತೆಗೆದುಕೊಂಡು ಬರಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ ಸಂಸದರ ಮೇಲೆ ಮಾತಿನ ಚಾಟಿ ಬೀಸಿದ್ದಾರೆ. ಪ್ರಧಾನಿಯವರ ಮಾತಿನ ಮೇಲೆ ಭರವಸೆಯಿದೆ. ಬೆಂಗಳೂರು ಅಭಿವೃದ್ಧಿಗೆ ಅನುದಾನ ನೀಡುವ ಬಗ್ಗೆ ಪ್ರಧಾನಿಯವರ ಬಳಿ ಮಾತನಾಡಿದೆ. ಅವರು ನಮ್ಮ‌ ಮನವಿಯನ್ನು ಗಮನಿಸುವುದಾಗಿ ತಿಳಿಸಿದ್ದಾರೆ. ಅವರು ಮಾತನಾಡಿದ ಶೈಲಿ ನೋಡಿದರೆ ನನಗೆ ಅವರ ಮಾತಿನ ಮೇಲೆ ಭರವಸೆಯಿದೆ. ಬೆಂಗಳೂರು ಜಾಗತಿಕ ನಗರ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಬೆಂಗಳೂರು ಭಾರತವನ್ನು ಪ್ರತಿನಿಧಿಸುತ್ತದೆ. D.K.Shivakumar ಬೆಂಗಳೂರು ಅಭಿವೃದ್ಧಿಗೆ ಎಲ್ಲಾ ಪಕ್ಷಗಳು ಕೊಡುಗೆ ‌ನೀಡಿವೆ. ನಾನು ಒಬ್ಬನೇ ಅಥವಾ ನಮ್ಮ ಸರ್ಕಾರದಿಂದಲೇ ಎಲ್ಲಾ ಆಗಿದೆ ಎಂದು ಹೇಳುವುದಿಲ್ಲ. ಬೆಂಗಳೂರು ದೇಶದಲ್ಲಿಯೇ ಪ್ರಮುಖ ನಗರವಾಗಿದೆ. ಇದನ್ನು ಇನ್ನೂ ಅತ್ಯುತ್ತಮ ನಗರವನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಇಲ್ಲಿ ರಾಜಕೀಯಕ್ಕಿಂತ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.