Tuesday, August 11, 2026
Tuesday, August 11, 2026
Home Blog Page 209

Rotary Shivamogga ಸಾರ್ಥಕ ಸೇವೆ ಸಲ್ಲಿಸಿದ ವೃತ್ತಿಪರರಿಗೆ ರೋಟರಿಯಿಂದ ವಿಶೇಷ ವೃತ್ತಿ ಸೇವಾ ಪ್ರಶಸ್ತಿ ಪ್ರದಾನ

0

Rotary Shivamogga ರೋಟರಿ ಸಂಸ್ಥೆಯು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುವ ಜತೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಇತರರಿಗೂ ಪ್ರೇರಣೆಯಾಗುತ್ತದೆ ಎಂದು ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಹೇಳಿದರು.

ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರದಲ್ಲಿ ವೃತ್ತಿಪರರಿಗೆ ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ವಿಶೇಷ ಸಾಧಕರಿಗೆ ವೃತ್ತಿ ಸೇವಾ ಪ್ರಶಸ್ತಿ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಜನರಿಗೆ ಸಾಧನೆ ಮಾಡಲು ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸಿಗುತ್ತದೆ ಎಂದು ತಿಳಿಸಿದರು.

ವೃತ್ತಿಪರ ಸೇವಾ ನಿರ್ದೇಶಕ ಡಿ.ಕೆ.ಶೇಷಗಿರಿ ಮಾತನಾಡಿ, ವೃತ್ತಿ ಮತ್ತು ಕೌಶಲ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ. ಅಂತರಾಷ್ಟ್ರೀಯ ಸಂಸ್ಥೆಯು ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯ ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಎಚ್.ಸುರೇಶ್, ನಂಜುಂಡ, ಅರಸು ನಾಯಕ್, ನಾಗರಾಜ, ಮೈಲಾರಿ, ಜಯಪಾಲ್, ಜಫ್ರುಲ್ಲಾ ಖಾನ್, ಪ್ರಹ್ಲಾದ್, ಮಂಜುನಾಥ್ ಅವರಿಗೆ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ಬಹಳ ಸಂತಸದ ಸಂಗತಿ ಎಂದು ಸನ್ಮಾನಿತರು ಅನಿಸಿಕೆ ವ್ಯಕ್ತಪಡಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್‌ಕುಮಾರ್ ಮಾತನಾಡಿ, ಸೇವಾಕಾರ್ಯಗಳನ್ನು ನಮ್ಮ ಕ್ಲಬ್‌ನಿಂದ ಹಮ್ಮಿಕೊಂಡು ನಡೆಸುತ್ತಿದ್ದು, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಪ್ರೊ. ಧನಂಜಯ ಮಾತನಾಡಿ, ಸಾಮಾನ್ಯ ವೃತ್ತಿ ಮಾಡುವ ಸಾಧಕರನ್ನು ಗುರುತಿಸಿ ಗೌರವಿಸುವುದು ವಿಶೇಷ ಕಾರ್ಯ ಎಂದು ಹೇಳಿದರು.

Rotary Shivamogga ವೃತ್ತಿಪರ ಪ್ರಶಸ್ತಿ ಪ್ರದಾನ ಮುಖ್ಯಸ್ಥ ಸತೀಶ್ ಚಂದ್ರ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಚಂದ್ರಹಾಸ ಪಿ.ರಾಯ್ಕರ್, ಜಗದೀಶ್, ರವಿಶಂಕರ್, ಗಣೇಶ್, ಅಜಿತ್, ಡಾ. ಗುಡದಪ್ಪ ಕಸಬಿ, ರಘುರಾಜ್, ರವಿ ಪ್ರಕಾಶ್ ಜನ್ನೆ, ವೀಣಾ ಕಿಶೋರ್, ಗಿರಿಜಾ ಧನಂಜಯ ರಾಂಪುರ, ಪದ್ಮಿನಿ ವಸಂತ ಹೋಬಳಿದಾರ್, ಬಿಂದು ವಿಜಯಕುಮಾರ್, ಕೇಶವಪ್ಪ, ರಮೇಶ್ ಭಟ್, ಆದಿಮೂರ್ತಿ, ರೂಪಾ ಗುಡದಪ್ಪ ಕಸಬಿ ಮತ್ತಿತರರು ಉಪಸ್ಥಿತರಿದ್ದರು.

ಕುವೆಂಪು ರಸ್ತೆಯಲ್ಲಿ ಹಂಪ್ಸ್ ನಿರ್ಮಿಸಲು ಮನವಿ

0

ಶರಾವತಿ ನಗರ 9ನೇ ಕ್ರಾಸ್, ಪಿಎನ್‌ಟಿ ಕಾಲೊನಿ ಪಕ್ಕದ ರಸ್ತೆ, ವಿನೋಬನಗರದಿಂದ ಪೆಟ್ರೋಲ್ ಬಂಕ್ ಪಕ್ಕ ಕುವೆಂಪು ರಸ್ತೆಗೆ ಸೇರುವ ನಾಲ್ಕು ರಸ್ತೆಗಳು ಸೇರುವ ಜಾಗದಲ್ಲಿ ಕಳೆದ ಹಲವಾರು ತಿಂಗಳುಗಳಿAದ ನಿತ್ಯವೂ ಅಪಘಾತ ಗಳು ಸಂಭವಿಸುತ್ತಿದ್ದು, ಕೂಡಲೆ ಈ ಭಾಗದಲ್ಲಿ ಹಂಪ್ಸ್ ಹಾಕಲು ಒತ್ತಾಯಿಸಿದ್ದಾರೆ.
ಇಲ್ಲಿ ಸಮರ್ಪಕ ಸಂಚಾರ ನಿಯಂತ್ರಣ ವ್ಯವಸ್ಥೆ ಇಲ್ಲದಿರುವುದು ಹಾಗೂ ಹಂಪ್‌ಗಳ ತಪ್ಪು ವಿನ್ಯಾಸ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಈ ದಿನ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ. ಇದೇ ಸ್ಥಳದಲ್ಲಿ ಕೆಲ ತಿಂಗಳ ಹಿಂದೆ ಕಾರೊಂದು ಕಾಂಪೌಂಡ್ ಗೋಡೆ ಹಾಗೂ ನಗರಸಭೆಯ ಡಿಸ್‌ಪ್ಲೇ ಕಂಬಕ್ಕೆ ಡಿಕ್ಕಿ ಸಂಭವಿಸಿದ ಘಟನೆ ಕೂಡ ನಡೆದಿದೆ.
ಬಹುತೇಕ ಅಪಘಾತಗಳು ನಡೆದು ಆಸ್ಪತ್ರೆಗೆ ಸೇರಿಸಿರುವ ಉದಾಹರಣೆ ಕೂಡ ಇದೆ. ಘಟನೆಗೆ ಸಂಬಂಧಿಸಿದಂತೆ ಅಧಿಕೃತ ದೂರುಗಳು ದಾಖಲಾಗುತ್ತಿಲ್ಲ. ಈ ಕುರಿತು ಸಾರ್ವಜನಿಕರು ಸಂಚಾರಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೂ, ಇದುವರೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪವಿದೆ. ಆದ್ದರಿಂದ, ಸಂಚಾರ ಪೊಲೀಸ್ ಇಲಾಖೆ, ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹಂಪ್ಸ್ಗಳನ್ನು ಸರಿಯಾಗಿ ಮರು ನಿರ್ಮಾಣ ಮಾಡಲು ಒತ್ತಾಯಿಸಿದ್ದಾರೆ. ಜೊತೆಗೆ ಈ ಭಾಗದಲ್ಲಿ ಅಗತ್ಯ ಸೂಚನಾ ಫಲಕಗಳು ಮತ್ತು ವೇಗ ನಿಯಂತ್ರಣ ಸಿಸಿ ಟಿವಿ ಅಳವಡಿಸಿ, ಯಾವುದೇ ಅಮೂಲ್ಯ ಜೀವ ಕಳೆದುಹೋಗುವ ಮುನ್ನವೇ ತ್ವರಿತ ಕ್ರಮ ಕೈಗೊಳ್ಳಲು ಸಾರ್ವಜನಿಕರು ಮನವಿ ಮಾಡಿದ್ದಾರೆ.

Department of Social Welfare ಕುಷ್ಟರೋಗ ತಾರತಮ್ಯ ಬೇಡ-ಸೂಕ್ತ ಚಿಕಿತ್ಸೆಯಿಂದ ಪೂರ್ಣ ಗುಣ ಸಾಧ್ಯ : ಡಾ.ನಟರಾಜ್

0

Department of Social Welfare ಬಡವ, ಶ್ರೀಮಂತ, ಗಂಡು, ಹೆಣ್ಣು ಎಂಬ ಬೇಧವಿಲ್ಲದೆ ಯಾರಲ್ಲಿ ಬೇಕಾದರೂ ಕುಷ್ಟರೋಗ ಬರಬಹುದಾಗಿದ್ದು ರೋಗಲಕ್ಷಣಗಳು ಕಂಡು ಬಂದ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು ಎಂದು ಡಿಹೆಚ್‌ಓ ಡಾ.ನಟರಾಜ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೋಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಹಯೋಗದೊಂದಿಗೆ ಆರ್.ಎಮ್.ಎಲ್ ನಗರದ ಕನಕ ವಿದ್ಯಾ ಸಂಸ್ಥೆಯ ಮುಂಭಾಗದಿಂದ ಏರ್ಪಡಿಸಲಾಗಿದ್ದ ಕುಷ್ಠರೋಗ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕುಷ್ಟರೋಗಕ್ಕೆ ಬಹುವಿಧ ಔಷಧ(ಎಂಡಿಟಿ) ಚಿಕಿತ್ಸೆಯು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಹಾಗೂ ಸಹಾಯಕ ಔಷಧಿಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಕುಷ್ಟರೋಗದಿಂದ ಅಂಗವೈಕಲ್ಯಕ್ಕೆ ಒಳಗಾದವರಿಗೆ ರಿ-ಕನ್ಸ÷್ಟçಕ್ಟಿವ್ ಶಸ್ತçಚಿಕಿತ್ಸೆಯನ್ನು ಆಯ್ದ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸಲಾಗುವುದು.
ಮಚ್ಚೆಗಳನ್ನು ಗುಪ್ತವಾಗಿರಸದೇ ವೈದ್ಯರಲ್ಲಿ ತೋರಿಸಿಕೊಂಡು, ಪ್ರಾರಂಭಿಕ ಹಂತದಲ್ಲಿಯೇ ತೋರಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದರೆ ಅಂಗವೈಕಲ್ಯ ತಡೆಯಬಹುದಾಗಿದ್ದು, ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ರೋಗಮುಕ್ತರಾಗಬೇಕೆಂದು ಹಾಗೂ ರೋಗ ಕಳಂಕವೆAದು ಭಾವಿಸಬಾರದು. ಮೌಢ್ಯತೆಯಿಂದ ಹೊರಬರಬೇಕೆಂದು ಕರೆ ನೀಡಿದರು.
ಡಿಎಲ್‌ಓ ಡಾ.ಕಿರಣ್ ಮಾತನಾಡಿ, ಸುಮಾರು 80 ರಿಂದ 90 ವರ್ಷಗಳ ಹಿಂದೆ ಕುಷ್ಟರೋಗಕ್ಕೆ ಯಾವುದೇ ಔಷಧಿಗಳಿರಲಿಲ್ಲ. ಆಗ ಜನರ ಮನಸ್ಸಿನಲ್ಲಿ ಈ ರೋಗದ ಕುರಿತು ದೊಡ್ಡ ಮೌಢ್ಯತೆ ಇತ್ತು. ಇದು ಹಿಂದಿನ ಜನ್ಮದ ಪಾಪವೆಂದು ಪರಿಗಣಿಸಿದ್ದರು. ಅಂದಿನ ದಿನಮಾನದಲ್ಲಿ ಮಹಾತ್ಮಾ ಗಾಂಧೀಜಿಯವರು ತಮ್ಮ ಸಾಬರಮತಿ ಆಶ್ರಮದಲ್ಲಿ ಈ ರೋಗಿಗಳಿಗೆ ಆರೈಕೆ ಮಾಡಿ ಚಿಕಿತ್ಸೆ ಕೊಡಿಸಿ ಗುಣಮುಖರಾಗಿಸುತ್ತಿದ್ದರು. ಇದರ ಸ್ಮರಣಾರ್ಥ ಜ.30 ಗಾಂಧೀಜಿಯವರು ಹುತಾತ್ಮರಾದ ದಿನವನ್ನು ಸರ್ಕಾರವು ಕುಷ್ಟರೋಗ ನಿರ್ಮೂಲನೆ ದಿನವನ್ನಾಗಿ ಆಚರಿಸುತ್ತಿದೆ ಎಂದರು.
ಜ.30 ರಿಂದ ಫೆ.13 ರವರೆಗೆ 15 ದಿನಗಳ ಕಾಲ ಕುಷ್ಟರೋಗ ಪತ್ತೆ ಹಚ್ಚುವ ಆಂದೋಲನ ಮಾಡಲಾಗುತ್ತಿದೆ. ಕುಷ್ಟರೋಗವು ಮೈಕ್ರೋಬ್ಯಾಕ್ಟೀರಿಯಂ ಲೆಪ್ರೆ ಎಂಬ ಸೂಕ್ಷಾö್ಮಣುವಿನಿಂದ ಬರುವ ಕಾಯಿಲೆಯಾಗಿದ್ದು ನಿಧಾನವಾಗಿ ಸೋಂಕು ಹರಡುತ್ತದೆ. ಪ್ರಾಥಮಿಕವಾಗಿ ಚರ್ಮ, ನರಗಳ ಮೇಲೆ ಪರಿಣಾಮ ಬೀರುತದೆ. ರೋಗ ಇರುವ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ರೋಗ ಹರಡುತ್ತದೆ. ಈ ರೋಗ ವಂಶಪಾರAರ‍್ಯವಲ್ಲ. ಕುಷ್ಟ ರೋಗದ ಬಗ್ಗೆ ಯಾವುದೇ ಬೇಧ, ತಾರತಮ್ಯ ಬೇಡ.
ಚರ್ಮದ ಮೇಲೆ ತಿಳಿಬಿಳಿ ಅಥವಾ ಕೆಂಪು ಇಲ್ಲವೇ ತಾಮ್ರ ವರ್ಣದ ಸ್ಪರ್ಷಜ್ಞಾನವಿಲ್ಲದ ಮಚ್ಚೆಗಳು, ಹುಬ್ಬು ಕಣ್ಣರೆಪ್ಪೆ ನಷ್ಟ, ಕೈ ಅಥವಾ ಕಾಲಿನ ಸ್ಪರ್ಶಜ್ಞಾನ ಕಡಿಮೆಯಾಗುವುದು, ಕೈ ಬೆರಳುಗಳು, ಪಾದಗಳಲ್ಲಿ ನಿಶ್ಯಕ್ತಿ ರೋಗ ಲಕ್ಷಣಗಳಾಗಿವೆ. ರೋಗ ತೀವ್ರತೆ ಮೇಲೆ ಪಿಬಿ ಮತ್ತು ಎಂಬಿ ಎಂದು ವರ್ಗೀಕರಿಸಲಾಗಿದ್ದು, ಪಿಬಿ ಗೆ 6 ತಿಂಗಳ ಕಾಲ ಉಚಿತ ಬಹುಔಷಧಿ ಚಿಕಿತ್ಸೆ, ಎಂಬಿ ಗೆ 12 ತಿಂಗಳ ಕಾಲ ಔಷಧಿ ನೀಡಲಾಗುತ್ತದೆ. ಸೂಕ್ತ ಚಿಕಿತ್ಸೆಯಿಂದ ಈ ರೋಗವನ್ನು ಸಂಪೂರ್ಣವಾಗಿ ಗುಣ ಹೊಂದಬಹುದು.
ಜಿಲ್ಲೆಯಲ್ಲಿ ಈ ಸಾಲಿನ ಏಪ್ರಿಲ್‌ನಿಂದ ಇಲ್ಲಿಯವರೆಗೆ 41 ಕುಷ್ಟರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನಿಡಲಾಗುತ್ತಿದೆ. 2025-26 ನೇ ಸಾಲಿಗೆ 28 ಜನರು ಗುಣಮುಖರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕುಷ್ಟರೋಗದಿಂದ ಸಂಪೂರ್ಣರಾಗಿ ಗುಣಮುಖರಾದ ಶಿವಪ್ಪ, ಲಕ್ಷ್ಮಣ ಇಕ್ಬಾಲ್ ಮತ್ತು ಮೊಹಮ್ಮದ್ ಜಮೀರ್‌ರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿದ್ದು, ಈ ವೇಳೆ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಇವರು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರಲ್ಲಿ ಜಾಗೃತಿ ಮೂಡಿಸಿದರು.
Department of Social Welfare ಜಾಥಾವು ಆರ್‌ಎಂಎಲ್ ನಗರದ ಕನಕ ವಿದ್ಯಾಸಂಸ್ಥೆಯಿಂದ ಪ್ರಾರಂಭಗೊಂಡು ಆರ್.ಎಂ.ಎಲ್ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಗಿಬಂದು ಸೀಗೆಹಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ, ಊರುಗಡೂರು ಪಿಹೆಚ್‌ಸಿ ವೈದ್ಯಾಧಿಕಾರಿ ಡಾ. ಕಾಂಚನ, ಮಾಜಿ ಪಾಲಿಕೆ ಸದಸ್ಯರಾದ ರಾಜು, ಸ್ಥಳೀಯ ಮುಖಂಡರಾದ ಪ್ರಸನ್ನಕುಮಾರ್, ಮೂರ್ತಿ, ನೇತಾಜಿ, ಪೂಜಾ ಚಾರಿಟಬಲ್ ಟ್ರಸ್ಟ್, ಅಂಬೇಡ್ಕರ್ ಜಾನಪದ ಕಲಾ ತಂಡ, ನೇಸರ ಕಲಾ ತಂಡ, ಸಿಮ್ಸ್ ನರ್ಸಿಂಗ್ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.

Karnataka State Commission for Protection of Child Rights ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪಾಲನೆ-ಪೋಷಣೆಯಲ್ಲಿ ಜಿಲ್ಲೆ ಅಗ್ರಸ್ಥಾನ : ನ್ಯಾ.ಸಂತೋಷ ಎಂ.ಎಸ್

0

Karnataka State Commission for Protection of Child Rights ಮಕ್ಕಳ ಹಕ್ಕುಗಳ ರಕ್ಷಣೆ, ಪಾಲನೆ ಮತ್ತು ಪೋಷಣೆಯಲ್ಲಿ ಜಿಲ್ಲೆಯು ಅಗ್ರ ಸ್ಥಾನ ಪಡೆದಿದ್ದು, ಇದರಲ್ಲಿ ಅಧಿಕಾರ ವರ್ಗದ ಪಾತ್ರ ಪ್ರಮುಖವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಂ.ಎಸ್.ಸಂತೋಷ್ ಶ್ಲಾಘಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಜಿಲ್ಲಾ ಡಯಟ್ ಸಂಸ್ಥೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಪಾಲನಾ ಸಂಸ್ಥೆಗಳ ಸಿಬ್ಬಂದಿಗಳಿಗೆ ಶುಕ್ರವಾರ ಏರ್ಪಡಿಸಿದ್ದ “ಬಾಲ್ಯ ವಿವಾಹ, ಪೊಕ್ಸೋ ಮತ್ತು ಮಕ್ಕಳ ರಕ್ಷಣೆಗೆ ಸಂಬAಧಿಸಿದ ಅರಿವು ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮಕ್ಕಳ ಸುರಕ್ಷತೆ, ಮೂಲಭೂತ ಸೌಕರ್ಯಗಳ ಕುರಿತಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮಗುವಿಗೆ ಸಮಾಜದಲ್ಲಿ ಪಾಲನೆ ಪೋಷಣೆ ಸಿಗಬೇಕು. ಸಿಗಬೇಕಾದ ಪಾಲನೆ ಪೋಷಣೆ ದೊರಕದಿದ್ದಾಗ ಅದು ಕಾನೂನಿನ ಉಲ್ಲಂಘನೆಯಾಗುತ್ತದೆ, ಆದ್ದರಿಂದ ಪಾಲನೆ ಸಂಸ್ಥೆಯಲ್ಲಿ ಪ್ರತಿ ಮಗುವಿನ ಪಾಲನೆ ಪೋಷಣೆಯನ್ನು ಸರಿಯಾಗಿ ಮಾಡಿ, ಈ ಮಕ್ಕಳು ಮುಖ್ಯವಾಹಿನಿಗೆ ಬರುವಂತೆ ಪಾಲನಾ ಸಂಸ್ಥೆಗಳು ಮಾಡಬೇಕೆಂದರು.
ಬಾಲ್ಯ ವಿವಾಹ, ಪೊಕ್ಸೋ ಮತ್ತು ಮಕ್ಕಳ ರಕ್ಷಣೆಗೆ ಸಂಬAಧಿಸಿದAತೆ ಅರಿವು ಮತ್ತು ಜಾಗೃತಿಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಸಮನ್ವಯ ಸಭೆ ಕೈಗೊಂಡು ನಿರಂತರ ಅಭಿಯಾನ ನಡೆಸಬೇಕು. ಎಲ್ಲ ಪಾಲುದಾರ ಇಲಾಖೆಗಳು ಸಕ್ರಿಯವಾಗಿ, ಕ್ರಿಯಾಶೀಲರಾಗಿ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣ ಕೊಳ್ಳ ಮಾತನಾಡಿ, ಅಧಿಕಾರಿಗಳು ಮಕ್ಕಳ ಪಾಲನೆ ಪೋಷಣೆಗೆ ಸಂಬಂಧಿಸಿದಂತೆ ಯಾವುದೇ ರಾಜಿ ಮಾಡಿಕೊಳ್ಳದೇ ಸರಿಯಾಗಿ ಕ್ರಮ ವಹಿಸಬೇಕು.ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಗಳು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು ಎಂದರು.
Karnataka State Commission for Protection of Child Rights ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಂದ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಕುರಿತಾದ ಮಾಹಿತಿ ತೆಗೆದುಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಬೇಕು. ಬಾಲ್ಯ ವಿವಾಹ, ಪೋಕ್ಸೋದಂತಹ ಪ್ರಕರಣಗಳನ್ನು ತಡೆಗಟ್ಟಲು ಶ್ರಮ ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್ ಆರ್, ಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯೆ ರೇಖಾ.ಜಿ.ಎಂ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್, ಡಯಟ್ ಪ್ರಾಂಶುಪಾಲರಾದ ಹೆಚ್.ಆರ್. ಕೃಷ್ಣಮೂರ್ತಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಮಾಂಸ ಮತ್ತು ಹಾಲು ಉತ್ಪಾದನೆಯಲ್ಲಿ ಸುರಕ್ಷತಾ ಅಭ್ಯಾಸ ಕ್ರಮಗಳು ಕುರಿತು ರೈತರ ಜಾಗೃತಿ ಕಾರ್ಯಕ್ರಮ

0

ಪಶುವೈದ್ಯಕೀಯ ಮಹಾ ವಿದ್ಯಾಲಯ, ವಿನೋಬನಗರ ಶಿವಮೊಗ್ಗ ,ರಾಷ್ಟ್ರೀಯ ಕೃಷಿ ಸಂಶೋಧನಾ ಕೇಂದ್ರ, ನವದೆಹಲಿ ಹಾಗೂ ರಾಷ್ಟ್ರೀಯ ಮಾಂಸ ಸಂಶೋಧನೆ ಸಂಸ್ಥೆ, ಹೈದರಾಬಾದ್ ಇವರಿಂದ ಪ್ರಾಯೋಜಿತ, “ಮಾಂಸ ಮತ್ತು ಹಾಲು ಉತ್ಪಾದನೆಯಲ್ಲಿ ಸುರಕ್ಷತಾ ಅಭ್ಯಾಸ ಕ್ರಮಗಳು” ಎಂಬ ವಿಷಯದ ಮೇಲೆ ಒಂದು ದಿನದ “ರೈತರ ಜಾಗೃತಿ ಕಾರ್ಯಕ್ರಮ” ವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಪ್ರಕಾಶ್ ನಡೂರ್ ರವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಹೈದರಾಬಾದ್ ರಾಷ್ಟ್ರೀಯ ಮಾಂಸ ಸಂಶೋಧನೆ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್.ಬಿ. ಬಾರ್ಬುದೆ ವಹಿಸಿದ್ದರು, ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಬಸವರಾಜ ಆವಟಿ ಹಾಗೂ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಜಿ..ಕೆ. ಗಿರಿಜೇಶ್ ರವರು ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಡಾ. ಬಾಬುರತ್ನ ಎ., ಶಿವಮೊಗ್ಗ ಕೃಷಿ ಇಲಾಖೆಯ ಉಪ ನಿರ್ದೇಶಕಿ ಡಾ. ಜಿ.. ಮಂಜುಳ ಪಶುವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ.ಟಿ.ತಿರುಮಲೇಶ್ ಇವರುಗಳು ಮುಖ್ಯ ಅಥಿತಿಗಳಾಗಿ ಬಾಗವಹಿಸಿದ್ದರು. ಪಶುವೈದ್ಯಕೀಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಅರುಣ್ ಖರಾಟೆ, ಉಪಸ್ಥಿತರಿದ್ದರು..
ಈ ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಮೀನುಗಾರಿಕಾ ಇಲಾಖೆ, ರೇಷ್ಮೆ ಇಲಾಖೆ , ಶಿವಮೊಗ್ಗ ಹಾಲು ಒಕ್ಕೂಟ ಹಾಗೂ ಮಹಾವಿದ್ಯಾಲಯದ ವಿವಿಧ ವಿಭಾಗಗಳಿಂದ ಆಕರ್ಷಕ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು ಮತ್ತು ಈ ವಸ್ತು ಪ್ರದರ್ಶನದಲ್ಲಿ ಪುಂಗನೂರು ದೇಶಿ ಆಕಳು ತಳಿ, ಬೀಟಲ್, ಶಿರೋಹಿಯಂತಹ ಮೇಕೆ ತಳಿಗಳು, ಬನ್ನೂರು ಕುರಿ ತಳಿ ಮತ್ತು ವಿವಿಧ ಕುಕ್ಕುಟ ತಳಿಗಳಾದ ಬಾತು ಕೋಳಿ, ಸಿಲ್ಕಿ ಕೋಳಿ, ಮೈಸೂರು ನಾಟಿ ಕೋಳಿ, ಗೌಜಲ ಹಕ್ಕಿ, ಕಡಕನಾಥ್ ಕೋಳಿ, ಸೋನಾಲಿಯಂತಹ ದೇಶಿ ತಳಿಗಳನ್ನು ಪ್ರದರ್ಶಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ಸುತ್ತಮತ್ತಲ ಜಿಲ್ಲೆಗಳಿಂದ ಸುಮಾರು 400 ಜನ ರೈತರು ಭಾಗವಹಿಸಿ ಅನೇಕ ವಿಷಯಗಳ ಬಗ್ಗೆ ತಜ್ಞರೊಂದಿಗೆ ಸಂವಾದ ನಡೆಸಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಿಂದ ಕಾರ್ಯಕ್ರಮದ ಲಾಭ ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ಅನೇಕ ಔಷಧಿ ಕಂಪನಿಗಳು, ಕೃಷಿ ಉಪಕರಣಗಳ ತಯಾರಿಕಾ ಕಂಪನಿಗಳವರು ಬಾಗವಹಿಸಿ, ತಮ್ಮ –ತಮ್ಮ ಉತ್ಪನ್ನಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿ ಕೊಟ್ಟರು. ತೆಂಗು, ಬಾಳೆ, ಅಡಿಕೆ, ಕರಿ ಮೆಣಸು, ಭತ್ತ, ಸಪೋಟಾ, ಮಾವು ಬೆಳೆಗಳ ಬಗ್ಗೆ ಹಾಗೂ ಒಳನಾಡು ಮೀನುಗಳಾದ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ, ಮೃಗಾಲ ಗೆಂಡೆ ಇತ್ಯಾದಿ ಮೀನಿನ ತಳಿಗಳು, ವಿವಿಧ ಜೇನು ತಳಿಗಳು. 40 ಕ್ಕೂ ಹೆಚ್ಚಿನ ಮೇವಿನ ಬೆಳೆಗಳ ವಿವಿಧ ತಳಿಗಳು, ರೇಷ್ಮೆ ಹುಳುಗಳ ಸಾಕಾಣಿಕೆ, ಔಷಧಿ ಸಸ್ಯಗಳು, ಎರೆಹುಳು ಗೊಬ್ಬರ, ವಿವಿಧ ರೀತಿಯ ಜಾನುವಾರು ಕೊಟ್ಟಿಗೆಗಳ ಮಾದರಿಗಳು, ಜೈವಿಕ ಅನಿಲ ಉತ್ಪಾದನೆಯ ಮಾದರಿಗಳು ಪ್ರಮುಖ ಅಕರ್ಷಣೆಯಾಗಿದ್ದವು.
ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಾಂಸ ಮತ್ತು ಹಾಲು ಉತ್ಪನ್ನಗಳ ಸುರಕ್ಷತಾ ಕ್ರಮಗಳ ಕುರಿತು ಕಿರು ನಾಟಕವನ್ನು ಪ್ರದರ್ಶಿಸಿ ರೈತರಿಗೆ ಅರಿವು ಮೂಡಿಸಿದರು.

Shimoga District Registration and Stamps Department ಕಾಗದರಹಿತ ನೋಂದಣಿ ವ್ಯವಸ್ಥೆ: ತರಬೇತಿ

0

Shivamogga District Registration and Stamps Department ಶಿವಮೊಗ್ಗ ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಹೊಸದಾಗಿ ಅನುಷ್ಠಾನಗೊಳಿಸುತ್ತಿರುವ ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಹಿತಿಯನ್ನು ತಿಳಿದುಕೊಳ್ಳಲು ಜ. 31 ರಂದು ಮಧ್ಯಾಹ್ನ 3.00 ಕ್ಕೆ ಶಿಕಾರಿಪುರ ಮತ್ತು ತೀರ್ಥಹಳ್ಳಿ, ಫೆ. 02 ರಂದು ಮಧ್ಯಾಹ್ನ 3.00 ಕ್ಕೆ ಸೊರಬ ಮತ್ತು ಹೊಸನಗರ, ಫೆ. 03 ರಂದು ಮಧ್ಯಾಹ್ನ 3.00 ಕ್ಕೆ ಭದ್ರಾವತಿ ಮತ್ತು ಶಿವಮೊಗ್ಗ ಹಾಗೂ ಫೆ. 04 ರಂದು ಮಧ್ಯಾಹ್ನ 3.00 ಕ್ಕೆ ಸಾಗರ ಉಪನೋಂದಣಿ ಕಚೇರಿಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು, ಪತ್ರ ಬರಹಗಾರರು, ವಕೀಲರು ಹಾಗೂ ಇಚ್ಛೆಯಿರುವ ಎಲ್ಲಾ ನಾಗರೀಕರು ಹಾಜರಾಗುವಂತೆ ಜಿಲ್ಲಾ ನೋಂದಣಾಧಿಕಾರಿಗಳು ತಿಳಿಸಿರುತ್ತಾರೆ.

H.S.Sundaresh ಚಾಲಕರು ಪ್ರಯಾಣಿಕರ ಅನುಕೂಲಕ್ಕಾಗಿ ಆಟೋ ನಿಲ್ದಾಣಗಳ ನಿರ್ಮಾಣ : ಹೆಚ್. ಎಸ್. ಸುಂದರೇಶ್

0

H.S.Sundaresh ಆಟೋ ಚಾಲಕರು ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ನಗರದಲ್ಲಿ ಹಲವಾರು ಕಡೆಗಳಲ್ಲಿ ಸೂಡಾ ವತಿಯಿಂದ ಆಟೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ತಿಳಿಸಿದರು.
ಶುಕ್ರವಾರ ನಗರದ ತುಂಗಾನಗರ ಪ್ರಾ.ಆ.ಕೇಂದ್ರ, ಎನ್‌ಹೆಚ್ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಎದುರಿನಲ್ಲಿ ನೂತನವಾಗಿ ಆಟೋ ನಿಲ್ದಾಣ ಹಾಗೂ ಗಾಡಿಕೊಪ್ಪದ ಸಿದ್ದಪ್ಪ ಬಡಾವಣೆಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತುಂಗಾನಗರದ ಪ್ರಾ.ಆರೋಗ್ಯ ಕೇಂದ್ರದ ಬಳಿ, ಹರಕೆರೆಯ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಎನ್ ಹೆಚ್ ಆಸ್ಪತ್ರೆ ಎದುರು ಆಟೋ ನಿಲ್ದಾಣ ಅತ್ಯವಶ್ಯಕವಾಗಿ ಬೇಕಾಗಿತ್ತು. ಬಿಸಿಲಿನ ಬೇಗೆಗೆ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಆಟೋ ನಿಲ್ದಾಣದಿಂದ ಅನುಕೂಲವಾಗಲಿದ್ದು ಈ ಮೂರು ಸ್ಥಳಗಳಲ್ಲಿ ತಲಾ ರೂ.25 ಲಕ್ಷ ವೆಚ್ಚದಲ್ಲಿ ಆಟೋ ನಿಲ್ದಾಣ ನಿರ್ಮಿಸಲಾಗುವುದು ಎಂದರು.
ಗಾಡಿಕೊಪ್ಪದಲ್ಲಿರುವ ಸಿದ್ದಪ್ಪ ಬಡಾವಣೆಯಲ್ಲಿ ರೂ.25 ಕೋಟಿ ವೆಚ್ಚದಲ್ಲಿ ನಿವಾಸಿಗಳ ಮನೆ ಬಳಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದ್ದು, ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ ಎಂದರು.
ಇತ್ತೀಚೆಗೆ ಮಲೆನಾಡಿನಲ್ಲಿ ಉಷ್ಣಾಂಶ ಹೆಚ್ಚುತ್ತಿದೆ. ಆದ್ದರಿಂದ ನಗರದಲ್ಲಿ ಗಿಡಗಳನ್ನು ನೆಡುವುದು, ಪಾರ್ಕ್ ಅಭಿವೃದ್ದಿ ಪಡಿಸುವುದು ಅತ್ಯವಶ್ಯಕವಾಗಿದೆ. ನಗರನ್ನು ಹಸಿರಾಗಿಡಲು ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಈಗಾಗಲೇ 50 ಪಾರ್ಕ್ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ 50 ಪಾರ್ಕ್ಗಳನ್ನು ಅಭಿವೃದ್ದಿಪಡಿಸಿ, ಉದ್ಘಾಟನೆ ಮಾಡಲಾಗುತ್ತಿದೆ. ನಮ್ಮ ನಗರವನ್ನು ನಾವು ಸುಂದರವಾಗಿ ಮತ್ತು ಹಸಿರಾಗಿ ಇಟ್ಟುಕೊಳ್ಳಬೇಕು. ನಿವಾಸಿಗಳು ತಮ್ಮ ಮನೆ ಸುತ್ತಮುತ್ತ ಗಿಡಗಳನ್ನು ನೆಡಬೇಕು ಎಂದರು.
H.S.Sundaresh ಶಿವಮೊಗ್ಗ-ಭದ್ರಾವತಿ ವ್ಯಾಪ್ತಿಯಲ್ಲಿ ರೂ.50 ಕೋಟಿ ವೆಚ್ಚದಲ್ಲಿ 22 ಕೆರೆಗಳನ್ನು ಹೈಟೆಕ್ ಆಗಿ ಅಭಿವೃದ್ದಿಪಡಿಸಲಾಗುವುದು. 12 ಕೆರೆ ಅಭಿವೃದ್ದಿಗೆ ಈಗಾಗಲೇ ಟೆಂಡರ್ ಆಗಿದೆ. ವಾಕಿಂಗ್ ಪಾಥ್, ಮಕ್ಕಳ ಆಟಿಕೆಗಳು, ಫೆನ್ಸ್, ಲೈಟ್, ಐಲ್ಯಾಂಡ್ ನಿರ್ಮಾಣ ಸೇರಿದಂತೆ ಅತ್ಯಂತ ಸುಂದರವಾಗಿ ಕೆರೆಗಳನ್ನು ಅಭಿವೃದ್ದಿಸಲು ಯೋಜನೆ ರೂಪಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಸುಮಾರು 1000 ಅಪಾರ್ಟ್ಮೆಂಟ್ ನಿರ್ಮಾಣ ಮಾಡಿ ಜನರಿಗೆ ನೀಡಲು ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ನಿವೇಶನ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಎಇಇ ಬಸವರಾಪ್ಪ, ಎಇಇ ಗಂಗಾಧರಸ್ವಾಮಿ, ಬಡಾವಣೆ ನಿವಾಸಿಗಳು, ಆಟೋ ಚಾಲಕರು ಹಾಜರಿದ್ದರು.

District Health and Family Welfare Department ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ

0

District Health and Family Welfare Department ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಬ್ಯಾಕೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ರೋಸ್ಟರ್ & ಮೆರಿಟ್ ಆಧಾರದಲ್ಲಿ ನೇಮಕ ಮಾಡಲು ಅರ್ಹ ಎಂ.ಬಿ.ಬಿ.ಎಸ್. ಪದವೀಧರ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಫೆ. 02 ರಂದು ಬೆಳಗ್ಗೆ 11.00 ರಿಂದ ಮಧ್ಯಾಹ್ನ 1.00ರವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ತಮ್ಮ ವಿದ್ಯಾರ್ಹತೆ, ಹುಟ್ಟಿದ ದಿನಾಂಕ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳ ಒಂದು ಸೆಟ್ ನಕಲು ಮತ್ತು ಮೂಲ ಪ್ರತಿಗಳು ಮತ್ತು ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-222382 ನ್ನು ಸಂಪರ್ಕಿಸುವುದು.

ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಪೂರ್ಣಗೊಳಿಸಲು ಒತ್ತಾಯ

0

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಉಪಕರಣಗಳ ಅಳವಡಿಕೆ ಕಾಮಗಾರಿ ಶೀಘ್ರ ಬೇಗ ಪೂರ್ಣಗೊಳಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಒತ್ತಾಯಿಸಿದರು.
2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಿ ಕರ್ನಾಟಕ ಸರ್ಕಾರ ನಿರ್ವಹಿಸಿದ ಪ್ರಥಮ ವಿಮಾನ ನಿಲ್ದಾಣ. 3 ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸುಗಮ ಸೇವೆ ನೀಡಿದೆ. ಪ್ರಸ್ತುತ ಬೆಂಗಳೂರು, ಗೋವಾ, ಚೆನ್ನೈ, ತಿರುಪತಿ ಮತ್ತು ಹೈದರಾಬಾದ್‌ಗೆ ವಿಮಾನಗಳನ್ನು ಹೊಂದಿದೆ. ನೈಟ್ ಲ್ಯಾಂಡಿAಗ್ ವ್ಯವಸ್ಥೆ ಪೂರ್ಣಗೊಂಡ ಬಳಿಕ ನವದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ನಗರಗಳೊಂದಿಗೆ ನೇರ ವಿಮಾನ ಸಂಪರ್ಕ ಸಿಗಲಿದೆ ಎಂದರು.
ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಬಾಕಿ ಇರುವ ಸಿವಿಲ್ ಕಾಮಗಾರಿ ಮತ್ತು ನೈಟ್ ಲ್ಯಾಂಡಿಂಗ್ ಸೌಲಭ್ಯಕ್ಕೆ ಅಗತ್ಯವಾದ ಉಪಕರಣಗಳ ಅಳವಡಿಕೆಗೆ ಕಾಮಗಾರಿಗಳು ವಿಳಂಬ ಆಗುತ್ತಿದೆ. ಈ ಉಪಕರಣಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಹಣವನ್ನು ಬಿಡುಗಡೆ ಮಾಡಿದ್ದರೂ ಅಳವಡಿಕೆ ಕಾರ್ಯ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರ ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.
ನೈಟ್ ಲ್ಯಾಂಡಿಂಗ್ ವ್ಯವಸ್ಥೆಯಿಂದ ಮುಂದಿನ ದಿನಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವು ಮಲೆನಾಡಿನ ಆರ್ಥಿಕತೆ, ಪ್ರವಾಸೋದ್ಯಮ ಹಾಗೂ ಉದ್ಯೋಗಾವಕಾಶಗಳಿಗೆ ಇನ್ನಷ್ಟು ಶಕ್ತಿ ತುಂಬಿ ಜಿಲ್ಲೆಯ ವ್ಯಾಪಾರ ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು. ಸಚಿವರು ಸಂಘದ ಅಹವಾಲು ಸ್ವೀಕರಿಸಿ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿ ನೈಟ್ ಲ್ಯಾಂಡಿಂಗ್ ಕಾಮಗಾರಿಗಳು ಬೇಗನೇ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಆದ ಹೆಚ್.ಸಿ ಯೋಗೇಶ್ ಅವರು ಮಾತನಾಡುತ್ತಾ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಅತಿ ಅವಶ್ಯಕವಾಗಿದ್ದು ಉಪಮುಖ್ಯಮಂತ್ರಿಗಳು ಈ ದಿಸೆಯಲ್ಲಿ ಸ್ಪಂದಿಸುವ ಭರವಸೆ ನೀಡಿದ್ದು ಸಂತಸ ತಂದಿದೆ ಎಂದರು

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ನ ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಸಾಗರ ರಸ್ತೆ ಕೈಗಾರಿಕಾ ಸಂಘದ ಕೆ ಬಿ ಶಿವಕುಮಾರ್ ಇದ್ದರು.

CM Siddharamaiah ಮಹಾಂತೇಶ್ ಬೀಳಗಿ ಪುತ್ರಿಗೆ ಸರ್ಕಾರಿ ಉದ್ಯೋಗ: ಆದೇಶ ಪ್ರತಿ ಹಸ್ತಾಂತರಿಸಿದ ಸಿಎಂ

0

CM Siddharamaiah ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ‌ ಅವರು ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಪುತ್ರಿ ಚೈತನ್ಯಾ ಎಮ್.ಬೀಳಗಿ ಅವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸ್ತಾಂತರಿಸಿ, ತಂದೆಯಂತೆಯೇ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವಂತೆ ಶುಭ ಕೋರಿದರು.

ಸಚಿವರಾದ ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಉಪಸ್ಥಿತರಿದ್ದರು.