Wednesday, November 4, 2026
Wednesday, November 4, 2026
Home Blog Page 2102

ವಿದ್ಯಾರ್ಥಿವೇತನ ಮತ್ತು ಬಸ್ ಸಂಚಾರಕ್ಕೆ ವಿದ್ಯಾರ್ಥಿಗಳ ಬೇಡಿಕೆ.

0

ಕಾಲೇಜು ವಿದ್ಯಾರ್ಥಿಗಳ ಸ್ಕಾಲರ್ ಶೀಪ್ ಹಾಗೂ ಬಸ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಶಾಖೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕೊರೋನಾ ಎರಡನೇ ಲಾಕ್ ಡೌನ್ ನಂತರ ರಾಜ್ಯದಲ್ಲಿ ಶಾಲೆ, ಕಾಲೇಜು ತೆರೆದು ತಿಂಗಳುಗಳು ಕಳೆದಿದೆ. ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳು ಭರದಿಂದ ಸಾಗುತ್ತಿದೆ. ಜೊತೆಗೆ ಇನ್ನೂ ಕೆಲವು ಕೋರ್ಸ್ ಗಳ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಕಾಲೇಜು ವಿದ್ಯಾರ್ಥಿಗಳಿಗೆ ಎಸ್ಎಸ್ ಪಿ ಸ್ಕಾಲರ್ ಶಿಪ್ ಅಡಿಯಲ್ಲಿ ನೀಡುವ ಸ್ಕಾಲರ್ ಶಿಪ್ ಸಮರ್ಪಕವಾಗಿ ನೀಡಿಲ್ಲ.

ಜೊತೆಗೆ ಹಲವು ಮಾರ್ಗಗಳಿಗೆ ನಗರದಿಂದ ಹೊರಗಡೆ ಇರುವ ವಸತಿ ನಿಲಯಗಳಿಗೆ ಸೂಕ್ತ ಬಸ್ ಸೌಲಭ್ಯ ಒದಗಿಸಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಕಳೆದ 2020-21 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಎಸ್ ಸಿ, ಎಸ್ ಟಿ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳ ವಿರುದ್ಧ ವಿದ್ಯಾರ್ಥಿಗಳಿಗೆ ಎಸ್ಎಸ್ ಪಿ ಅಡಿಯಲ್ಲಿ ಸ್ಕಾಲರ್ ಶಿಪ್ ನೀಡಲು ಅರ್ಜಿ ಆಹ್ವಾನಿಸಿತ್ತು. ಈ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುವುದನ್ನು ಆರಂಭಿಸಲಾಗಿತ್ತು.

ಸರ್ಕಾರ ಕೋಟಾದ ಇನ್ನು ಹಲವು ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಲಭಿಸಿಲ್ಲ. ಆದ್ದರಿಂದ, ಸರ್ಕಾರ ಕೂಡಲೇ ಬಾಕಿ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಸ್ಕಾಲರ್ಶಿಪ್ ನೀಡಬೇಕೆಂದು ಪ್ರತಿಭಟನಾಕಾರರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ತೇಜಸ್ವಿ ಅವರ ಪತ್ನಿ ಶ್ರೀಮತಿ ರಾಜೇಶ್ವರಿ ನಿಧನ.

0

ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಧರ್ಮ ಪತ್ನಿ ರಾಜೇಶ್ವರಿ ಅವರು ಅನಾರೋಗ್ಯದ ಕಾರಣದಿಂದ ಇಂದು ವಿಧಿವಶರಾಗಿದ್ದಾರೆ.

ಕಾಡಿನ ಸಂತ ಎಂದೇ ಹೆಸರುವಾಸಿಯಾಗಿರುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪ್ರತಿ ಹೆಜ್ಜೆಯಲ್ಲೂ ರಾಜೇಶ್ವರಿ ಅವರು ಜೊತೆಯಾಗಿದ್ದರು. ಜೊತೆಗೆ ಸಾಹಿತ್ಯಲೋಕದಲ್ಲಿ ಹೆಚ್ಚು ಆಸಕ್ತಿ ಉಳ್ಳವರಾಗಿದ್ದರು. ತಮ್ಮ ಪತಿಯ ಬಗ್ಗೆ ‘ನನ್ನ ತೇಜಸ್ವಿ’ ಎಂಬ ಪುಸ್ತಕವನ್ನು ಬರೆದು ಪ್ರಖ್ಯಾತಿಯನ್ನು ಗಳಿಸಿದ್ದಾರೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ನಿಧನದ ನಂತರ ಚಿಕ್ಕಮಗಳೂರು ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನ ತೋಟದ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ರಾಜೇಶ್ವರಿ ಅವರ ನೆಚ್ಚಿನ ಹವ್ಯಾಸಗಳ ಜೊತೆಗೆ ಕಾಫಿ ತೋಟವನ್ನು ಸಹ ನೋಡಿಕೊಂಡು ಹೋಗುತ್ತಿದ್ದರು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ ರಾಜೇಶ್ವರಿ ತೇಜಸ್ವಿನಿ ಅವರು ಬಳಲುತ್ತಿದ್ದರು. ನಂತರ ಅವರನ್ನು ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಏಷ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಪಂದ್ಯಾವಳಿ

0

‘ಏಷ್ಯಾನ್ ಚಾಂಪಿಯನ್ ಟ್ರೋಫಿ ಹಾಕಿ ಟೂರ್ನಿಯ’ ಪಂದ್ಯ ಇಂದಿನಿಂದ ಆರಂಭವಾಗಲಿದ್ದು ಭಾರತ ತಂಡವು ಸತತ ಹ್ಯಾಟ್ರಿಕ್ ಜಯದ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.
ಭಾರತ 2011 ರಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿದೆ. ಹಿಂದಿನ 2 ಆವೃತ್ತಿಗಳಲ್ಲಿ ಪ್ರಶಸ್ತಿ ಜಯಿಸಿರುವ ತಂಡ ಈಗ ಹ್ಯಾಟ್ರಿಕ್ ಸಾಧನೆಯ ಕನಸಿನ್ನಲಿದೆ.
ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ನಂತರ ಇದೇ ಮೊದಲ ಬಾರಿಗೆ ಭಾರತ ತಂಡ ಕಣಕ್ಕೆ ಇಳಿಯುತ್ತಿದ್ದು ನಾಯಕ ಮನಪ್ರೀತ್ ಸಿಂಗ್ ಮತ್ತು ಉಪನಾಯಕ ಹರ್ಮನ್ ಪ್ರೀತ್ ಸಿಂಗ್ ತಂಡದ ಶಕ್ತಿ ಯಾಗಿದ್ದಾರೆ.
ಕೆಲವು ಆಟಗಾರರು ಹಿಂದಿನ 2 ವರ್ಷಗಳಿಂದ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.ಕಾರಣ ಕೆಲವರನ್ನು ಕಣಕ್ಕೆ ಇಳಿಸಲು ಸಾಧ್ಯವಾಗಿರಲಿಲ್ಲ. ಅವರಿಗೆಲ್ಲ ಈಗ ಅವಕಾಶದ ಬಾಗಿಲು ತೆರೆದಿದೆ. ಎಂದು ಮನ್ ಪ್ರೀತ್ ಸಿಂಗ್ ತಿಳಿಸಿದರು.
ಮಸ್ಕತ್ ನಲ್ಲಿ ನಡೆದಿದ್ದ ಹಿಂದಿನ ಆವೃತ್ತಿಯಲ್ಲಿ ಭಾರತ ತಂಡ ಪಾಕಿಸ್ತಾನದೊಂದಿಗೆ ಪ್ರಶಸ್ತಿ ಹಂಚಿಕೊಂಡಿತ್ತು.ಮಳೆಯಿಂದಾಗಿ ಫೈನಲ್ ಪಂದ್ಯವನ್ನು ರದ್ದು ಮಾಡಿದ್ದರಿಂದ 2 ತಂಡಗಳನ್ನು ವಿಜಯ ತಂಡಗಳು ಎಂದೂ ಘೋಷಿಸಲಾಗಿತ್ತು.ಆದ್ದರಿಂದ ಭಾರತದ ಭರವಸೆ ಹೆಚ್ಚಿದೆ.
ತಂಡ ಈಗಲೂ ಬಲಿಷ್ಟವಾಗಿದೆ,ಭುವನೇಶ್ವರದಲ್ಲಿ ನಡೆದ ಶಿಬಿರದಲ್ಲಿ ಫಿಟ್- ನೆಸ್ ಹೆಚ್ಚು ಆದ್ಯತೆ ನೀಡಲಾಗಿದೆ, ಏಷ್ಯಾದ ಇತರ ತಂಡಗಳು ಯಾವ ರೀತಿ ಸಜ್ಜಾಗಿವೆ ಎಂಬುವುದನ್ನು ಈ ಟೂರ್ನಿಯಲ್ಲಿ ನೋಡಬೇಕಷ್ಟೇ,ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ಟೂರ್ನಿ ನಮ್ಮ ತಂಡಕ್ಕೆ ಉತ್ತಮ ಅವಕಾಶ ಒದಗಿಸಲಿದೆ ಎಂದು ಅವರು ಹೇಳಿದರು.
ಯುವ ಆಟಗಾರರನ್ನು ಒಳಗೊಂಡ ಭಾರತ ಹಾಕಿ ತಂಡ ಹೊಸ ಸವಾಲಿಗೆ ಸಜ್ಜಾಗಿದೆ. ಆರಂಭವಾಗಲಿರುವ ಏಷ್ಯಾದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿಯ ಕನಸುಹೊತ್ತು ತಂಡ ಕಣಕ್ಕೆ ಇಳಿಯಲಿದೆ. ಭಾರತ ತಂಡ ಮೊದಲ ದಿನ ಮತ್ತು ಮೊದಲ ಪಂದ್ಯ “ಕೊರಿಯಾ” ತಂಡದ ವಿರುದ್ಧ ಮುಖಾಮುಖಿಯಾಗಿ ಆಡುತ್ತಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಜ್ಯದಲ್ಲಿ, 236 ಕೊರೋನಾ ಸೋಂಕಿತರು

0

ಕೊರೋನಾ ಪ್ರಕರಣಗಳು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇಂಗ್ಲೆಂಡ್ ನಿಂದ ಕರ್ನಾಟಕಕ್ಕೆ ಆಗಮಿಸಿದ ಐದು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಇಷ್ಟಾದರೂ ಸಹ ಕೋವಿಡ್ ಸೋಂಕಿನ ಪ್ರಮಾಣ ರಾಜ್ಯದಲ್ಲಿ ಕಡಿಮೆಯಾಗಿದೆ. ರಾಜ್ಯಾದ್ಯಂತ ಒಟ್ಟು 236 ಪ್ರಕರಣಗಳು ದೃಢಪಟ್ಟಿವೆ. ಏಳು ಮಂದಿ ಮೃತಪಟ್ಟಿದ್ದಾರೆ.

ಲಂಡನ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವಿಮಾನದ ಪ್ರಯಾಣಿಕರನ್ನು ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಿದಾಗ ಐದು ಜನರಲ್ಲಿ ಕೊರೋನಾ ಪತ್ತೆಯಾಗಿದೆ.

18 ವರ್ಷದ ಇಬ್ಬರಿಗೆ, ಆರು ವರ್ಷದ ಇಬ್ಬರಿಗೆ, ಮತ್ತು 30 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ನವೆಂಬರ್ ತಿಂಗಳಲ್ಲಿ ಹಣದುಬ್ಬರ ಏರಿಕೆ.

0

ಕಳೆದ ನವೆಂಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಶೇ. 4.91ಕ್ಕೆ ಏರಿಕೆಯಾಗಿದೆ. ಆಹಾರ ವಸ್ತುಗಳ ದರ ಹೆಚ್ಚಳವಾಗಲು ಇದಕ್ಕೆ ಪ್ರಮುಖ ಕಾರಣವಾಗಿದೆ.

ಗ್ರಾಹಕ ದರ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ, ಅಕ್ಟೋಬರ್ ತಿಂಗಳಿನಲ್ಲಿ ಶೇ. 4.48 ಇತ್ತು ಎಂದು ಸರ್ಕಾರ ಇದಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ.

ಸೂಚ್ಯಂಕದಲ್ಲಿ ಸುಮಾರು ಅರ್ಧದಷ್ಟು ಪಾಲು ಹೊಂದಿರುವ ಆಹಾರ ವಸ್ತುಗಳ ದರದಲ್ಲಿ ಶೇ. 4.48 ರಷ್ಟು ಏರಿಕೆಯಾಗಿತ್ತು. ಅಕ್ಟೋಬರ್ ತಿಂಗಳಿನಲ್ಲಿ ಶೇ. 0.85 ರಷ್ಟು ಅಧಿಕವಾಯಿತು.

ಖಾದ್ಯ ತೈಲಗಳ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.30ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ತರಕಾರಿಗಳ ದರದಲ್ಲಿ ಶೇ.13.6 ಇಳಿಕೆಯಾಗಿತ್ತು.

ಇಂಧನಗಳ ರಿಟೇಲ್ ದರದಲ್ಲಿ ಶೇ. 13.35 ಹೆಚ್ಚಳವಾಗಿದೆ. ಚಿಲ್ಲರೆ ಹಣದುಬ್ಬರವನ್ನು ನಿಯಂತ್ರಿಸಲು ಆರ್ ಬಿಐ ತನ್ನ ದ್ವೈ ಮಾಸಿಕ ಹಣಕಾಸು ನೀತಿಯಲ್ಲಿ ಆದ್ಯತೆ ನೀಡುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೀತಿಯ ಪ್ರಕಾರ ಚಿಲ್ಲರೆ ಹಣದುಬ್ಬರ ಶೇ.4ಕ್ಕಿಂತ 2% ಹೆಚ್ಚು ಅಥವಾ ಕಡಿಮೆ ಯ ಮಟ್ಟದಲ್ಲಿದ್ದರೆ ಸುರಕ್ಷಿತ ಮಟ್ಟದಲ್ಲಿದೆ ಎಂದರ್ಥ. ಮೊಬೈಲ್ ಬಿಲ್, ಜವಳಿ ಉತ್ಪನ್ನಗಳ ದರ ಹೆಚ್ಚಳದ ಪರಿಣಾಮ ಚಿಲ್ಲರೆ ಹಣದುಬ್ಬರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಅಟಲ್ ಪಿಂಚಣಿ ಯೋಜನೆ, ಕರ್ನಾಟಕ ಪ್ರಗತಿ

0

ಕರ್ನಾಟಕದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನವೆಂಬರ್ ತಿಂಗಳ ಕೊನೆಯ ವೇಳೆಗೆ ಒಟ್ಟು 2,77,471 ಜನರನ್ನು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ನೋಂದಣಿ ಮಾಡುವ ಮೂಲಕ ಶೇ. 44 ರಷ್ಟು ಪ್ರಗತಿ ಸಾಧಿಸಲಾಗಿದೆ.

ಈ ವರ್ಷದಲ್ಲಿ ಒಟ್ಟು 6,33,220 ಮಂದಿಗೆ ಯೋಜನೆಯನ್ನು ವಿಸ್ತರಿಸುವ ಗುರಿ ನೀಡಲಾಗಿತ್ತು. ಪ್ರಸ್ತುತ ಸಂದರ್ಭ ರಾಜ್ಯದಾದ್ಯಂತ ಒಟ್ಟು 21,38,524 ಮಂದಿಯನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಯೋಜನೆ ಅನುಷ್ಠಾನದಲ್ಲಿ ಕೆನರಾ ಬ್ಯಾಂಕ್ ಮೊದಲ ಸ್ಥಾನದಲ್ಲಿದೆ. ರಾಜ್ಯವು ತನ್ನ 1,811 ಶಾಖೆಗಳಿಂದ ಒಟ್ಟು 82,510 ಜನರಿಗೆ ಎಪಿವೈ ಪಿಂಚಣಿ ಖಾತೆ ತೆರೆಯಲಾಗಿದೆ.

ಎಸ್ ಬಿಐ ತನ್ನ 1,554 ಶಾಖೆಗಳಲ್ಲಿ 68,488 ಮಂದಿಗೆ ಖಾತೆ ಆರಂಭಿಸಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಒಟ್ಟು 33,031 ಪಿಂಚಣಿ ಖಾತೆ ತೆರೆದಿದೆ.

ರಾಜ್ಯಮಟ್ಟದ ಬ್ಯಾಂಕರ್ ಗಳ ಸಮಿತಿ ಹಾಗೂ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಜೊತೆಯಾಗಿ ಎಪಿವೈ ಯೋಜನೆ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿತು.

“ಕೊರೋನಾ ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ಎ ಪಿ ವೈ ಯೋಜನೆಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ” ಎಂದು ಪಿಎಫ್ಆರ್ ಡಿಎ ಕಾರ್ಯನಿರ್ವಾಹಕ ನಿರ್ದೇಶಕ ಅನಂತ ಗೋಪಾಲ್ ದಾಸ್ ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಎಲ್ ಎಸ್ ಬಿಸಿ ರಾಜ್ಯ ಸಂಚಾಲಕ ಎ. ಮುರಳಿಕೃಷ್ಣ, ಪಿ.ಸಿ. ದಾಮೋದರನ್, ನಬಾರ್ಡ್ ನ ಪ್ರಧಾನ ವ್ಯವಸ್ಥಾಪಕ ಸಿ.ವಿ. ರೆಡ್ಡಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬೆಳಗಾವಿ ಅಧಿವೇಶನ : ಗೃಹ ಸಚಿವರ ಸಭೆ

0

ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸು ವುದಕ್ಕೂ ಮೊದಲು ಪೂರ್ವಭಾವಿಯಾಗಿ, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಬೆಳಗ್ಗೆ, ಸಭೆ ನಡೆಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ, ಅಧಿವೇಶನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ, ಅವಕಾಶವಿಲ್ಲದಂತೆ, ಸುಲಲಿತವಾಗಿ ನಡೆಯಲು, ತೆಗೆದುಕೊಂಡಿರುವ ರಕ್ಷಣಾ ಕ್ರಮಗಳ ಬಗ್ಗೆ, ಸಚಿವರು ಮಾಹಿತಿ ಪಡೆದುಕೊಂಡರು.

ಈ ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಒಳಾಡಳಿತ, ಶ್ರೀ ರಜನೀಶ್ ಗೋಯಲ್, ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ, ಶ್ರೀ ಪ್ರತಾಪ್ ರೆಡ್ಡಿ, ಶ್ರೀ ಸತೀಶ್ ಕುಮಾರ್, ಐಜಿ ಬೆಳಗಾವಿ ವೃತ್ತ ಹಾಗೂ ಬೆಳಗಾವಿ ಪೊಲೀಸ್ ಆಯುಕ್ತ ತ್ಯಾಗರಾಜ್ ಶ್ರೀ ಅವರೂ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭಾರತದ ಹರ್ನಾಜ್ ಕೌರ್ ಭುವನ ಸುಂದರಿ

0

21 ವರ್ಷಗಳ ಬಳಿಕ ಭಾರತಕ್ಕೆ ನಟಿ ಹಾಗೂ ರೂಪದರ್ಶಿ ಹರ್ನಾಜ್ ಕೌರ್ ಸಂಧು ಅವರು ಭುವನ ಸುಂದರಿ ಪಟ್ಟವನ್ನು ಒಲಿಸಿಕೊಂಡಿದ್ದಾರೆ.

ಇಸ್ರೇಲ್ ನ ಕೆಂಪು ಸಮುದ್ರ ತೀರದಲ್ಲಿರುವ ಈಲಟ್ ನಗರದ ಐಷಾರಾಮಿ ರೆಸಾರ್ಟ್ ನಲ್ಲಿ ಭುವನ ಸುಂದರಿ ಸ್ಪರ್ಧೆಯ 70ನೇ ಆವೃತ್ತಿಯ ಕಾರ್ಯಕ್ರಮ ನಡೆಯಿತು. ಭಾರತದ ಚಂಡಿಗಡ ಮೂಲದ 21 ವರ್ಷದ ಹರೆಯದ ಹರ್ನಾಜ್ ಕೌರ್ ಅವರು ಫೈನಾನ್ಸ್ ಸುತ್ತಿನಲ್ಲಿ ಭುವನ ಸುಂದರಿ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

1994 ರಲ್ಲಿ ಭಾರತದ ಸುಶ್ಮಿತಾ ಸೇನ್ ಮತ್ತು 2000 ರಲ್ಲಿ ಲಾರಾ ದತ್ತ ಭುವನಸುಂದರಿ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. ಅದಾದ 21 ವರ್ಷದ ಬಳಿಕ ಭಾರತಕ್ಕೆ ಹರ್ನಾಜ್ ಈ ಗೌರವ ತಂದುಕೊಟ್ಟಿದ್ದಾರೆ.

ಈ ಸ್ಪರ್ಧೆಯ ಮೊದಲ ರನ್ನರ್ ಅಪ್ ಆಗಿ ಪೆರಾಗ್ವೆಯ ನಾದಿಯಾ ಫೆರೆರಾ ಹಾಗೂ ಎರಡನೇ ರನ್ನರ್ ಅಪ್ ಆಗಿ ದಕ್ಷಿಣ ಆಫ್ರಿಕಾದ ಲಲೇಲಾ ಸ್ವಾನ್ ಸ್ಥಾನ ಪಡೆದರು.

“21 ವರ್ಷಗಳ ನಂತರ ಭಾರತಕ್ಕೆ ಈ ಮಹೋನ್ನತ ಗೌರವ ತಂದು ಕೊಡುತ್ತಿದ್ದು, ಅತ್ಯಂತ ಹೆಮ್ಮೆಯ ಕ್ಷಣ” ಎಂದು ಹರ್ನಾಜ್ ಕೌರ್ ಪ್ರತಿಕ್ರಿಯಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪ್ರತಿಭಟನೆ ಬಿಗಿ ಮಾಡಿದ ರೈತರು- ಸಚಿವರ ಆಶ್ವಾಸನೆ

0

ದೆಹಲಿಯಲ್ಲಿ ರೈತರು ಬೇಡಿಕೆಗಾಗಿ ಪ್ರತಿಭಟನೆಯನ್ನು ನಡೆಸಿದ್ದರು. ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ಕೂಡ ಕಾಯ್ದೆ ಹಿಂಪಡೆದಿಲ್ಲ. ಈ ಮೂರು ಕಾಯ್ದೆಗಳನ್ನು ಹಿಂಪಡೆಯುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ತಿಳಿಸಿದ್ದಾರೆ.

ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಲು ಒತ್ತಾಯಿಸಿದರು. ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಸುವರ್ಣ ವಿಧಾನಸೌಧದ ಕೊಂಡುಸ್ಕೊಪ್ಪ ದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರು, ಮುಖ್ಯಮಂತ್ರಿಗಳು ಪ್ರತಿಭಟನೆ ಸ್ಥಳಕ್ಕೆ ಬಂದು ರೈತರ ಮನವಿ ಆಲಿಸಲು ಬರಬೇಕು ಎಂದು ಕರೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ, ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು, “ರೈತರ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದು ಭರವಸೆಯನ್ನು ನೀಡಿದರು.

ಸಚಿವ ಭೈರತಿ ಬಸವರಾಜ ಅವರು, ‘ ಅಧಿವೇಶನದ ಮೊದಲ ದಿನ ಸಂತಾಪ ಸೂಚನೆ ಬಳಿಕ ತುರ್ತು ಕಾರ್ಯಕ್ರಮದ ನಿಮಿತ್ತ ಸಿಎಂ ವಾರಣಾಸಿಗೆ ತೆರಳಿದ್ದಾರೆ. ಅಲ್ಲಿಂದ ವಾಪಸಾದ ಬಳಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವಿವಿಧ ಬ್ಯಾಂಕುಗಳಲ್ಲಿ ಖಾಲಿ ಹುದ್ದೆ, ಮಾಹಿತಿ.

0

ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ 41,177 ಸುದ್ದಿಗಳು ಖಾಲಿ ಇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

2021ರ ಡಿಸೆಂಬರ್ ತಿಂಗಳಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಟ್ಟು ಹುದ್ದೆಗಳು 8,05,986 ಮಂಜೂರಾಗಿದೆ. ಇದರಲ್ಲಿ 41,177 ಹುದ್ದೆಗಳು ಖಾಲಿ ಇವೆ.

ಬ್ಯಾಂಕ್ ಗಳ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗರಿಷ್ಠ ಸಂಖ್ಯೆಯಲ್ಲಿ, ಅಂದರೆ 8,544 ಹುದ್ದೆಗಳು ಖಾಲಿ ಇವೆ ಎಂದು ಅಧಿಕೃತ ಅಂಕಿ ಅಂಶಗಳವೆ ಎಂದು ತಿಳಿದುಬಂದದೆ.

ಸಾರ್ವಜನಿಕ ಬ್ಯಾಂಕ್ಗಳಲ್ಲಿ ಹುದ್ದೆಗಳು ಕಾಣುತ್ತಿರುವುದರ ಬಗ್ಗೆ ಹಾಗೂ ಸಿಬ್ಬಂದಿ ಕೊರತೆಯ ಪರಿಣಾಮ ಉಂಟಾಗಿದೆ. ಈ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆಯೇ ಎಂಬ ಪ್ರಶ್ನೆಗೆ ಲೋಕಸಭೆಯಲ್ಲಿ ಹಣಕಾಸು ಸಚಿವರು ಉತ್ತರಿಸಿದ್ದಾರೆ.

ಹುದ್ದೆಗಳು ಭರ್ತಿಗೊಳ್ಳ ದಿರುವುದರಿಂದ ಬ್ಯಾಂಕ್ ಗಳಲ್ಲಿ ಅವುಗಳ ಕರ್ತವ್ಯ ಕರ್ತವ್ಯ ನಿರ್ವಹಣೆಗೆ ತೊಂದರೆ ಆಗಿಲ್ಲ ಎಂದು ತಿಳಿಸಿದ ಸಚಿವರು, ಈ ಅಂಕಿ ಅಂಶವನ್ನು ತಿಳಿಸಿದ್ದಾರೆ.

ಸಾರ್ವಜನಿಕ ಬ್ಯಾಂಕ್ ಗಳಲ್ಲಿ ಕಳೆದ ಆರು ವರ್ಷಗಳಲ್ಲಿ ಪಂಜಾಬ್ ಅಂಡ್ ಸಿಂಧ್ ಬ್ಯಾಂಕಿನಲ್ಲಿ ಒಂದನ್ನು ಹೊರತುಪಡಿಸಿ, ಇನ್ಯಾವುದೇ ಹುದ್ದೆಗಳನ್ನು ರದ್ದುಪಡಿಸಿಲ್ಲ.
ಅಗತ್ಯಾನುಸಾರ ಖಾಲಿ ಹುದ್ದೆಗಳನ್ನು ಬರ್ತಿ ಗೊಳಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಒಟ್ಟು 12 ಸಾರ್ವಜನಿಕ ಬ್ಯಾಂಕ್ ಗಳಿವೆ. ಅಧಿಕಾರಿ, ಕ್ಲರ್ಕ್, ಉಪ ಸಿಬ್ಬಂದಿ ವಿಭಾಗದಲ್ಲಿ ಖಾಲಿಯಾಗಿರುವ ಹುದ್ದೆಗಳು ಇವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 6,743, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6,295 , ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ 5,112 ಹಾಗೂ ಬ್ಯಾಂಕ್ ಆಫ್ ಇಂಡಿಯಾದಲ್ಲಿ 4,848 ಹುದ್ದೆಗಳು ಖಾಲಿ ಇವೆ. ಎಸ್ ಬಿಐ ಬ್ಯಾಂಕಿನಲ್ಲಿ 3,423 ಹುದ್ದೆಗಳು ಖಾಲಿ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.