Tuesday, April 21, 2026
Tuesday, April 21, 2026

ಅಟಲ್ ಪಿಂಚಣಿ ಯೋಜನೆ, ಕರ್ನಾಟಕ ಪ್ರಗತಿ

Date:

ಕರ್ನಾಟಕದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನವೆಂಬರ್ ತಿಂಗಳ ಕೊನೆಯ ವೇಳೆಗೆ ಒಟ್ಟು 2,77,471 ಜನರನ್ನು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ನೋಂದಣಿ ಮಾಡುವ ಮೂಲಕ ಶೇ. 44 ರಷ್ಟು ಪ್ರಗತಿ ಸಾಧಿಸಲಾಗಿದೆ.

ಈ ವರ್ಷದಲ್ಲಿ ಒಟ್ಟು 6,33,220 ಮಂದಿಗೆ ಯೋಜನೆಯನ್ನು ವಿಸ್ತರಿಸುವ ಗುರಿ ನೀಡಲಾಗಿತ್ತು. ಪ್ರಸ್ತುತ ಸಂದರ್ಭ ರಾಜ್ಯದಾದ್ಯಂತ ಒಟ್ಟು 21,38,524 ಮಂದಿಯನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಯೋಜನೆ ಅನುಷ್ಠಾನದಲ್ಲಿ ಕೆನರಾ ಬ್ಯಾಂಕ್ ಮೊದಲ ಸ್ಥಾನದಲ್ಲಿದೆ. ರಾಜ್ಯವು ತನ್ನ 1,811 ಶಾಖೆಗಳಿಂದ ಒಟ್ಟು 82,510 ಜನರಿಗೆ ಎಪಿವೈ ಪಿಂಚಣಿ ಖಾತೆ ತೆರೆಯಲಾಗಿದೆ.

ಎಸ್ ಬಿಐ ತನ್ನ 1,554 ಶಾಖೆಗಳಲ್ಲಿ 68,488 ಮಂದಿಗೆ ಖಾತೆ ಆರಂಭಿಸಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಒಟ್ಟು 33,031 ಪಿಂಚಣಿ ಖಾತೆ ತೆರೆದಿದೆ.

ರಾಜ್ಯಮಟ್ಟದ ಬ್ಯಾಂಕರ್ ಗಳ ಸಮಿತಿ ಹಾಗೂ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಜೊತೆಯಾಗಿ ಎಪಿವೈ ಯೋಜನೆ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿತು.

“ಕೊರೋನಾ ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ಎ ಪಿ ವೈ ಯೋಜನೆಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ” ಎಂದು ಪಿಎಫ್ಆರ್ ಡಿಎ ಕಾರ್ಯನಿರ್ವಾಹಕ ನಿರ್ದೇಶಕ ಅನಂತ ಗೋಪಾಲ್ ದಾಸ್ ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಎಲ್ ಎಸ್ ಬಿಸಿ ರಾಜ್ಯ ಸಂಚಾಲಕ ಎ. ಮುರಳಿಕೃಷ್ಣ, ಪಿ.ಸಿ. ದಾಮೋದರನ್, ನಬಾರ್ಡ್ ನ ಪ್ರಧಾನ ವ್ಯವಸ್ಥಾಪಕ ಸಿ.ವಿ. ರೆಡ್ಡಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಕ್ರಾಂತಿಕಾರಿ ಬಸವಣ್ಣನವರ ದಾರಿಯಲ್ಲಿ ಸಾಗುವ ಸಂಕಲ್ಪ ಮಾಡೋಣ- ಬಿ.ವೈ.ರಾಘವೇಂದ್ರ

B.Y. Raghavendra ಕಾಯಕ- ದಾಸೋಹ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಸಾರಿದ...

Bharat Scouts and Guides ಕೃಷಿ ಕ್ಷೇತ್ರ ಮಾಹಿತಿಯಿಂದ ವಿದ್ಯಾರ್ಥಿಗಳು ಪರಿಪೂರ್ಣರಾಗಲು ಸಾಧ್ಯ- ಕೆ.ರವಿ

Bharat Scouts and Guides ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ...

Klive special Article “ಶಂಕರಂ ಲೋಕ ಶಂಕರಂ” ಎನ್.ಜಯಭೀಮ್ ಜೊಯ್ಸ್, ಶಿವಮೊಗ್ಗ

Klive special Article ಶ್ರೀಶಂಕರಾಚಾರ್ಯ ಗುರುಗಳು (ಶ್ರೀಶಂಕರಜಯಂತಿಯ ಸಂದರ್ಭದಲ್ಲಿ)ಪ್ರತಿವರ್ಷ ವೈಶಾಖಮಾಸದ...

RM Manjunath Gowda ಹುಲಿಕಲ್ ಘಾಟಿ ಪ್ರಕರಣ.ಇಂಜಿನಿಯರುಗಳೇ ಹೊಣೆ. ಎಫ್ ಐ ಆರ್ ದಾಖಲಿಸಲು ಎಸ್ ಪಿ.ಅವರಿಗೆ ಮನವಿ ಮಾಡುವೆ- ಆರ್.ಎಂ.ಮಂಜುನಾಥ ಗೌಡ.

RM Manjunath Gowda ಹುಲಿಕಲ್ ಘಾಟಿ ಪ್ರಕರಣದಲ್ಲಿ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಮಕೆನಾಡು...