Tuesday, August 11, 2026
Tuesday, August 11, 2026
Home Blog Page 208

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

0

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ ಕ್ರಿಕೆಟ್ ಕ್ಲಬ್‌ನ ಶ್ರೀ ನಾಗೇಂದ್ರ ಕೆ. ಪಂಡಿತ್ ಅವರನ್ನು ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಲಾಗಿದೆ.

ಶ್ರೀ ನಾಗೇಂದ್ರ ಪಂಡಿತ್ ಅವರು ಸುಮಾರು 50 ವರ್ಷಗಳ ಕ್ರಿಕೆಟ್ ಅನುಭವ ಹೊಂದಿರುವ ಅತ್ಯಂತ ಉತ್ಸಾಹಿ ಕ್ರಿಕೆಟಿಗ ಹಾಗೂ ಅನುಭವಿ ಕ್ರಿಕೆಟ್ ನಿರ್ವಹಣಾಧಿಕಾರಿ ಆಗಿದ್ದಾರೆ. ಅವರು ಕ್ರಿಕೆಟಿಗರಾಗಿಯೂ ಹಾಗೂ ಆಡಳಿತಗಾರರಾಗಿಯೂ ಸೇವೆ ಸಲ್ಲಿಸಿದ್ದು, ಕೆನರಾ ಬ್ಯಾಂಕ್‌ನ ಮಾಜಿ ನೌಕರರಾಗಿದ್ದಾರೆ. ಕೆನರಾ ಬ್ಯಾಂಕ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದು, ತಂಡದ ನಾಯಕನಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅವರು ಸಾಗರದಲ್ಲಿರುವ ನಾಗೇಂದ್ರ ಪಂಡಿತ್ ಕ್ರಿಕೆಟ್ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿದ್ದು, ಯುವ ಪ್ರತಿಭೆಗಳ ಪೋಷಣೆ ಹಾಗೂ ಮೂಲ ಮಟ್ಟದ ಕ್ರಿಕೆಟ್ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ ಪ್ರಸಿದ್ಧ ಸಂಸ್ಥೆಯಾಗಿದೆ.

Karnataka State Cricket Association ಶ್ರೀ ನಾಗೇಂದ್ರ ಕೆ. ಪಂಡಿತ್ ಅವರಿಗೆ ಅವರ ಹೊಸ ಜವಾಬ್ದಾರಿಗೆ ಹಾರ್ದಿಕ ಶುಭಾಶಯಗಳನ್ನು
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ. ಅರ್ . ಜಯಂತ್, ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು , ಅಭಿನಂದಿಸಿದ್ದಾರೆ ಸಲ್ಲಿಸುತ್ತಿದ್ದು, ಅವರ ನೇತೃತ್ವದಲ್ಲಿ ಶಿವಮೊಗ್ಗ ವಲಯದ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಚಟುವಟಿಕೆಗಳ ಸಮಗ್ರ ಬೆಳವಣಿಗೆಯನ್ನು ನಿರೀಕ್ಷಿಸಬಹುದು.

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

0

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ. ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

0

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ್ದ ಮೂವರಿಗೆ ಜಿಲ್ಲಾ 1 ನೇ ಹೆಚ್ಚುವರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಕಠಿಣ ಕಾರಾವಾಸ ಮತ್ತು 12,000 ರೂ ದಂಡವನ್ನು ವಿಧಿಸಿದೆ. ಕೆಲಸ ಮಾಡಿದ ಹಣವನ್ನು ಪಡೆದುಕೊಂಡು ವಾಪಸ್ ಮನೆಗೆ ಬರುತ್ತಿರುವಾಗ ಕಿರಣ್ ಎಂಬಾತನ್ನ ಮೇಲೆ ಮೂವರು ಮಾರಣಾಂತಿಕ ಹಲ್ಲೆ ನಡೆಸಿದರು. ಹಲ್ಲೆ ನಡೆಸಿದ
ಮಂಜುನಾಥ ಬಡಾವಣೆಯ ವಾಸಿಗಳಾದ ಸಂತೋಷ್ ಅಲಿಯಾಸ್ ಸಂತು (27), ಶರತ್ (24) ಮತ್ತು ಬುದ್ಧ್ದನಗರದ ಪ್ರಶಾಂತ್ ಎಂ (24) ಶಿಕ್ಷೆ ನೀಡಿ ಕೋರ್ಟ್ ತೀರ್ಪು ನೀಡಿದೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣದ ಆಗಿನ ತನಿಖಾಧಿಕಾರಿ ಪಿ ಎಸ್‌ಐ ತಿಮ್ಮಪ್ಪ ಪ್ರಕರಣದ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ನಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಬಿ.ಎಸ್.ಮಮತಾ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಅಭಯ್ ಧನಪಾಲ್ ಚೌಗಲಾ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Bangalore International Film Festival ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನವೀನ್ ಶಂಕರ್ ಅಭಿನಯದ “ನೋಡಿದವರು ಏನಂತಾರೆ” ಚಿತ್ರ ಪ್ರದರ್ಶನ

0

Bangalore International Film Festival ನಟ ನವೀನ್ ಶಂಕರ್ ನಾಯಕನಾಗಿ ನಟಿಸಿರುವ ಹಾಗೂ ಕುಲದೀಪ್ ಕಾರಿಯಪ್ಪ ನಿರ್ದೇಶಿಸಿರುವ “ನೋಡಿದವರು ಏನಂತಾರೆ” ಚಿತ್ರ 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಜನಪ್ರಿಯ ಕನ್ನಡ ಸಿನಿಮಾ ವಿಭಾಗದಲ್ಲಿ ಪ್ರದರ್ಶನವಾಯಿತು. ಪ್ರದರ್ಶನದ ನಂತರ ಚಿತ್ರತಂಡದವರು ಮಾತನಾಡಿದರು.

ಚಿತ್ರಮಂದಿರದಲ್ಲಿ ನಮ್ಮ ಚಿತ್ರ ನೋಡಿದವರು ಮೆಚ್ಚಿಕೊಂಡಿದ್ದರು. ಈಗ ಚಿತ್ರೋತ್ಸವದಲ್ಲೂ ನಮ್ಮ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು ನಿರ್ದೇಶಕ ಕುಲದೀಪ್ ಕಾರಿಯಪ್ಪ.

ನಮ್ಮ ಚಿತ್ರ ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಸಿನಿಮಾಗಳ ಹಬ್ಬವೆಂದೆ ಕರೆಯಲ್ಪಡುವ ಚಿತ್ರೋತ್ಸವದಲ್ಲಿ ನಮ್ಮ “ನೋಡಿದವರು ಏನಂತಾರೆ” ಚಿತ್ರವನ್ನು ನೋಡಿದವರು ಮೆಚ್ಚಿಕೊಂಡರು ಎಂದು ನಾಯಕ ನವೀನ್ ಶಂಕರ್ ತಿಳಿಸಿದರು.

ನಾನು ಈ ಹಿಂದೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸಿದ್ದೆ. ಈ ಬಾರಿ ನಾನು ನಾಯಕಿಯಾಗಿ ನಟಿಸಿರುವ “ನೋಡಿದವರು ಏನಂತಾರೆ” ಚಿತ್ರ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿರುವುದಕ್ಕೆ ಸಂತಸವಾಗಿದೆ ಎಂದು ನಾಯಕಿ ಅಪೂರ್ವ ಭಾರದ್ವಾಜ್ ಹೇಳಿದರು.

ಮರಗಳ ಹತ್ಯೆಗೆ ಮೊದಲು ನನಗೆ ದಯಾಮರಣ ನೀಡಿ : ವಿಶುಕುಮಾರ್

0

ಶ್ರೀಗಂಧ ಮರಗಳನ್ನು ಕಡಿತಲೆ ಮಾಡುವುದಕ್ಕಿಂತ ಮೊದಲು ನನಗೆ ದಯಾಮರಣ ದಯಪಾಲಿಸಿ” ಎಂದು ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೆ ಭೂಸ್ವಾಧೀನ ಪ್ರಾಧಿಕಾರದ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಫೆ.2ಕ್ಕೆ ಶ್ರೀಗಂಧ ಮರಗಳನ್ನು ಕಡಿತಲೆ ಮಾಡಲಾಗುವುದು ಎಂದು ಜ.27ಕ್ಕೆ ನೋಟಿಸ್ ನೀಡುತ್ತಾರೆ. ಆದರೆ ಈ ವಿಷಯ ಈಗಾಗಲೇ ನ್ಯಾಯಾಲಯದ ವಿಚಾರಣೆಯಲ್ಲಿರುವ ಸಂದರ್ಭದಲ್ಲಿ ಅಧಿಕಾರಿಗಳು ಮರ ಕಡಿತಲೆ ಮುಂದಾಗಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ತಾವು ಸುಮಾರು 30 ವರ್ಷಗಳಿಂದ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶ್ರೀಗಂಧ ಬೆಳೆ ಬೆಳೆಸಿಕೊಂಡು ಬಂದಿರುವುದಾಗಿ ತಿಳಿಸಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಜಾಹೀರಾತು ನೀಡಿ ಶ್ರೀಗಂಧ ಬೆಳೆಸಲು ರೈತರನ್ನು ಪ್ರೋತ್ಸಾಹಿಸಿತ್ತು. ಸರ್ಕಾರದ ಪ್ರೇರಣೆಯ ಮೇರೆಗೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಶ್ರೀಗಂಧ ಮರಗಳನ್ನು ಬೆಳೆಸಿದ್ದೇವೆ. ಆದರೆ ಈಗ ಅದಕ್ಕೆ ತಕ್ಕಂತೆ ಬೆಲೆ ನೀಡಿದೆ ಕಡಿತಲೆ ಮಾಡುವುದಕ್ಕೆ ಮುಂದಾಗಿರುವುದು ಅನ್ಯಾಯ ಎಂದು ಆರೋಪಿಸಿದರು.
ಅಧಿಕಾರಿಗಳ ಲಂಚಗುಳಿತನ ಹಾಗೂ ದೌರ್ಜನ್ಯದಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದೇನೆ ಎಂದರು. “ಆದರೆ ಈಗ ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಬರುತ್ತಿಲ್ಲ. ಆದ್ದರಿಂದ ಸರ್ಕಾರವೇ ಹೇಳಿದಂತೆ ಶ್ರೀಗಂಧ ಮರಗಳಿಗೆ ವೈಜ್ಞಾನಿಕವಾಗಿ ಯೋಗ್ಯ ಬೆಲೆ ನಿಗದಿ ಮಾಡಿ ಪರಿಹಾರ ನೀಡಿ. ಇಲ್ಲವಾದಲ್ಲಿ ನನ್ನ ಮರಗಳನ್ನು ಉಚಿತವಾಗಿ ತೆಗೆದುಕೊಳ್ಳಿ. ಆದರೆ ಅದಕ್ಕಿಂತ ಮೊದಲು ನನಗೆ ದಯಾಮರಣ ನೀಡಿ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೆಲವು ಅಧಿಕಾರಿಗಳು ಶ್ರೀಗಂಧಕ್ಕೆ ಹಾಗೂ ಭೂತಾಯಿಗೆ ಅಪಮೌಲ್ಯ ಮಾಡುತ್ತಿರುವುದನ್ನು ನಾನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಕಿಡಿಕಾರಿದರು. ಶ್ರೀಗಂಧವು ರಾಷ್ಟ್ರದ ಅಮೂಲ್ಯ ಸಂಪತ್ತು. ಅದನ್ನು ಬೆಳೆಸಿದ ರೈತನಿಗೆ ಗೌರವ ನೀಡದೆ ದೌರ್ಜನ್ಯ ನಡೆಸುತ್ತಿರುವುದು ನೋವಿನ ಸಂಗತಿ ಎಂದು ಹೇಳಿದರು.
ಸಂದರ್ಭದಲ್ಲಿ ಕುಟುಂಬದ ಸದಸ್ಯರು, ಸ್ಥಳೀಯರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.

B.Y.Raghavendra ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕ ಜಿಲ್ಲಾ ಜಾಗೃತಿ ಸಮಾವೇಶ

0

B.Y.Raghavendra ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಭಾರತೀಯ ಜನತಾ ಪಾರ್ಟಿ, ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ “ಜಿಲ್ಲಾ ಜಾಗೃತಿ ಸಮಾವೇಶ”ದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಭಾಗವಹಿಸಿದ್ದರು.

ಗ್ರಾಮೀಣ ಭಾಗದ ಜನತೆಯ ಆರ್ಥಿಕ ಸಬಲೀಕರಣ, ಉದ್ಯೋಗ ಹಾಗೂ ಆಜೀವಿಕಾವಕಾಶಗಳ ವೃದ್ಧಿ ಗುರಿಯಾಗಿಟ್ಟುಕೊಂಡು, ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ “ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕ ಮಿಷನ್ – ಗ್ರಾಮೀಣ (VB-G RAM G)” ಯೋಜನೆಯ ಕುರಿತು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಸಮಗ್ರ ಮಾಹಿತಿಯನ್ನ ಸಂಸದರು ನೀಡಿದರು.

B.Y.Raghavendra ಈ ಸಮಾವೇಶದಲ್ಲಿ ಉಡುಪಿ–ಚಿಕ್ಕಮಗಳೂರು ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ನಗರದ ಶಾಸಕರಾದ ಶ್ರೀ ಚನ್ನಬಸಪ್ಪ, ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ, ಶ್ರೀ ಅಶೋಕ್ ನಾಯ್ಕ್, ಜಿಲ್ಲಾ ಬಿಜೆಪಿ ಅಧ್ಯಕ್ಷರು ಶ್ರೀ ಜಗದೀಶ ಎನ್, ಜಿಲ್ಲಾ ಪದಾಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು

Shankara Eye Hospital ವಿಐಎಸ್‌ಎಲ್ ನಿಂದ ಸಾಂಸ್ಥಿಕ ಸಾಮಾಜಿಕ ಕಳಕಳಿಯ ಅಂಗವಾಗಿ ಉಚಿತ ವೈಧ್ಯಕೀಯ ಆರೋಗ್ಯ ಶಿಬಿರ

0

Shankara Eye Hospital ಶಂಕರ ಕಣ್ಣಿನ ಆಸ್ಪತ್ರೆ (ಶಿವಮೊಗ್ಗ) ಮತ್ತು ವಿಐಎಸ್‌ಎಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ಭದ್ರಾವತಿಯ ದೊಡ್ಡೇರಿ ಗ್ರಾಮದಲ್ಲಿ ಸಮಗ್ರ ಉಚಿತ ವೈಧ್ಯಕೀಯ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.

ಸಾಮಾನ್ಯ ತಪಾಸಣೆ, ನೇತ್ರವಿಜ್ಞಾನ, ದಂತವೈದ್ಯಶಾಸ್ತçದAತಹ ಕ್ಷೇತ್ರಗಳಲ್ಲಿ ಅನುಭವಿ ತಜ್ಞವೈದ್ಯರು ಭಾಗವಹಿಸುವ ಮೂಲಕ ಆರೋಗ್ಯ ಸಮಾಲೋಚನೆ ಮತ್ತು ರೋಗನಿರ್ಣಯ ಸೇವೆಗಳನ್ನು ನೀಡಲಾಯಿತು. ಈ ಉಪಕ್ರಮದ ಭಾಗವಾಗಿ ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಕಣ್ಣಿನ ಪರೀಕ್ಷೆ, ದಂತ ತಪಾಸಣೆಗಳನ್ನು ಮಾಡಲಾಯಿತು.

Shankara Eye Hospital ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಮಾನವಸಂಪನ್ಮೂಲ), ವಿಐಎಸ್‌ಎಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇವರೊಂದಿಗೆ ವಿಐಎಸ್‌ಎಲ್‌ನ ಅಧಿಕಾರಿಗಳಾದ ಡಾ|| ಕೆ.ಎಸ್. ಸುಜೀತ್ ಕುಮಾರ್, ಡಾ|| ಎಸ್.ಎನ್. ಸುರೇಶ್, ಶ್ರೀ ಎಮ್.ಎಲ್. ಯೋಗೀಶ್, ದೊಡ್ಡೇರಿ ಗ್ರಾಮದಿಂದ ಶ್ರೀಮತಿ ರಾಮಕ್ಕ, ಅಧ್ಯಕ್ಷರು ದೊಡ್ಡೇರಿ ಗ್ರಾಮಪಂಚಾಯ್ತಿ, ಶ್ರೀ ಆರ್. ಮೋಹನ್ ಕುಮಾರ್, ಕಾರ್ಯದರ್ಶಿ, ದೊಡ್ಡೇರಿ ಗ್ರಾಮಪಂಚಾಯ್ತಿ, ಶಂಕರ ಕಣ್ಣಿನ ಆಸ್ಪತ್ರೆಯ ಡಾ|| ಲಕ್ಷಿತ & ಶ್ರೀ ಹರ್ಷ ಆರ್. ಗೌಡ ಮತ್ತು ತಂಡದವರು ಉಪಸ್ಥಿತರಿದ್ದರು. 164 ಗ್ರಾಮಸ್ಥರು ಈ ಶಿಬಿರದ ಸದುಪಯೋಗಪಡಿಸಿಕೊಂಡರು.

ವಿಐಎಸ್‌ಎಲ್‌ ವತಿಯಿAದ ಉಚಿತ ಔಷಧಿ ಹಾಗೂ ಕನ್ನಡಕಗಳನ್ನು ವಿತರಿಸಲಾಯಿತು

Inner Wheel Club ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಮಾನವೀಯ ಸೇವೆಗಳು

0

Inner Wheel Club ಇನ್ನರ್ ವೀಲ್ ಕ್ಲಬ್ ಆಫ್ ಶಿವಮೊಗ್ಗ ಈಸ್ಟ್ ವತಿಯಿಂದ 29 ಜನವರಿ 2026 ರಂದು ಜಿಲ್ಲಾ ಅಧ್ಯಕ್ಷೆಯ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ ಇನ್ನರ್ ವೀಲ್ ದಿನಾಚರಣೆಯೊಂದಿಗೆ ಸಂಯೋಜಿಸಿ ಆಯೋಜಿಸಲಾಯಿತು. ಇನ್ನರ್ ವೀಲ್ ಒಂದು ಅಂತರರಾಷ್ಟ್ರೀಯ ಮಹಿಳಾ ಸೇವಾ ಸಂಘಟನೆಯಾಗಿದ್ದು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
ಈ ಸಂದರ್ಭದಲ್ಲಿ ಅಗತ್ಯವಿರುವ ವ್ಯಕ್ತಿಗೆ ಒಂದು ಹಿಯರಿಂಗ್ ಎಯ್ಡ್ ದಾನ ಮಾಡಲಾಯಿತು ಹಾಗೂ ರೋಟರಿ ಶಾಲೆಗೆ ನಲಿ-ಕಲಿ ಮೇಜುಗಳಿಗಾಗಿ 20 ಕುರ್ಚಿಗಳನ್ನು ವಿತರಿಸಲಾಯಿತು. ಜೊತೆಗೆ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ “ಮೊಬೈಲ್ ಫೋನ್ ಇಲ್ಲದ ಒಂದು ದಿನ” ಎಂಬ ವಿಷಯದ ಮೇಲೆ “ಯೂತ್ ಅನ್ಪ್ಲಗ್” ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿ ಚಿಂತನಾ ಶಕ್ತಿ, ಬರವಣಿಗೆ ಕೌಶಲ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವುದಾಗಿತ್ತು.
ಕಾರ್ಯಕ್ರಮಕ್ಕೆ ಜಿಲ್ಲಾ 318ರ ಅಧ್ಯಕ್ಷೆ ಶ್ರೀಮತಿ ಶಬರಿ ಕಡಿದಾಳ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಶಿವಮೊಗ್ಗ ಈಸ್ಟ್‌ನ ಅಧ್ಯಕ್ಷೆ ಶ್ರೀಮತಿ ವೀಣಾ ಸುರೇಶ್, ಕಾರ್ಯದರ್ಶಿ ಶ್ರೀಮತಿ ಶಿಲ್ಪಾ ಗೋಪಿನಾಥ್, ಖಜಾಂಚಿ ಶ್ರೀಮತಿ ಶ್ವೇತಾ ಆಶಿತ್, ಸಂಪಾದಕಿ ವಿಜಯಶ್ರೀ, ಎಲ್ಲಾ ಕ್ಲಬ್ ಸದಸ್ಯರು, ಪೂರ್ವ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಭಾರತಿ ಚಂದ್ರಶೇಖರ್, ರೋಟರಿ ಕ್ಲಬ್ ಆಫ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಆರ್‌ಟಿಎನ್. ಕಿಶೋರ್, ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್. ರೋಟರಿ ಕ್ಲಬ್ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಫೆಬ್ರವರಿ 1ರಂದು ಉಪಾಸನ ಮೋಹನ್ ರಿಂದ ಸುಗಮ ಸಂಗೀತ ಕಾರ್ಯಗಾರ

0

ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಫೆಬ್ರವರಿ 1 ರಂದು ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ವಿನೋಬನಗರ 60ನೇ ರಸ್ತೆಯಲ್ಲಿರುವ ಶುಭ ಮಂಗಳ ಸಮುದಾಯ ಭವನದಲ್ಲಿ ನಾದೋಪಾಸನ ಸುಗಮ ಸಂಗೀತ ಗೀತ ಗಾಯನ ತರಬೇತಿ ಕಾರ್ಯಗಾರವನ್ನು ನಾಡಿನ ಖ್ಯಾತ ಸಂಗೀತ ವಿದ್ವಾಂಸ ಉಪಾಸನ ಮೋಹನ್ ಅವರು ನಡೆಸಿಕೊಡಲಿದ್ದು ಯುವ ನಾಯಕ ಸಂಗೀತ ಪ್ರೇಮಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆಇ ಕಾಂತೇಶ್ ರವರು ಕಾರ್ಯಕ್ರಮ ಉದ್ಘಾಟಿಸುವವರು. ಈ ಕಾರ್ಯಗಾರದಲ್ಲಿ ಭಾಗವಹಿಸಲಿಚ್ಚಿಸುವವರು. ಆಸಕ್ತರು ದೂರವಾಣಿ ಸಂಖ್ಯೆ 97 411 57 990 ರಲ್ಲಿ ಹೆಸರು ನೋಂದಾಯಿಸಲು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾಂತ ಎಸ್. ಶೆಟ್ಟಿ ತಿಳಿಸಿದ್ದಾರೆ.

Sahyadri Art College Shimoga ಬದುಕಿನ ಮೌಲ್ಯಗಳನ್ನು ಕಲಿಸುವ ಸಂಸ್ಥೆ ಜೆಸಿಐ : ಪ್ರವೀಣ್ ದೇಶಪಾಂಡೆ

0

Sahyadri Art College Shimoga ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಹಾಗೂ ನಾಯಕತ್ವ ಬೆಳೆಸುವಲ್ಲಿ ಜೆಸಿಐ ಸಂಸ್ಥೆಯ ತರಬೇತಿ ಮಹತ್ತರ ಪಾತ್ರ ವಹಿಸುತ್ತದೆ ನುರಿತ ವಲಯ ತರಬೇತುದಾರ ಪ್ರವೀಣ್ ದೇಶಪಾಂಡೆ ಹೇಳಿದರು.

ಜಿಲ್ಲಾ ಪಂಚಾಯಿತಿ, ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಹಯೋಗದೊಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬದುಕಿನ ಮೌಲ್ಯಗಳನ್ನು, ಸಂಸ್ಕಾರಗಳನ್ನು ಹಾಗೂ ಶಿಸ್ತುಬದ್ಧ ಜೀವನ ಮತ್ತು ಕೌಶಲ್ಯಗಳನ್ನು ಜೆಸಿಐ ಕಲಿಸುತ್ತದೆ. ಜೆಸಿಐ ಸಂಸ್ಥೆ ವ್ಯಕ್ತಿತ್ವ ವಿಕಸನಗೊಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಂಡು ಮುನ್ನಡೆಯಬೇಕು. ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಹಂತ ಹಂತವಾಗಿ ಪ್ರಗತಿ ಸಾಧಿಸಬೇಕು. ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು. ಜೆಸಿಐ ಸಂಸ್ಥೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಬಿ.ಎನ್.ಸಂತೋಷ್ ಕುಮಾರ್ ಮಾತನಾಡಿ, ತರಬೇತಿಗಳಿಂದ ವಿದ್ಯಾರ್ಥಿಗಳಲ್ಲಿ ವಿಶೇಷ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಮುಂದಿನ ಕಾರ್ಯಕ್ಷೇತ್ರ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಜೆಸಿಐ ಸಂಸ್ಥೆಯ ಮೂಲಕ ನಿರಂತರವಾಗಿ ಸಮಾಜಮುಖಿ ಸೇವಾ ಕಾರ್ಯ ನಡೆಸುವ ಜತೆಯಲ್ಲಿ ಯುವಜನರಿಗೆ ತರಬೇತಿ ನೀಡಲಾಗುತ್ತಿದೆ. ಇದರಿಂದ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ತರಬೇತಿಗಳು ನೆರವಾಗುತ್ತದೆ ಎಂದು ಹೇಳಿದರು.

Sahyadri Art College Shimoga ವಲಯ ತರಬೇತುದಾರ ಗಣೇಶ್ ವಿ, ಶೇಷಗಿರಿ ಡಿ, ಕಾರ್ಯದರ್ಶಿ ಉಮಾಮಣಿ, ಮಹದೇವಸ್ವಾಮಿ, ಡಾ. ಕೃಪಾಲಿನಿ, ಸಿಂಚನಾ, ಗೌರಿಶಂಕರ, ರವಿ ಮತ್ತು ಜೆಸಿಐ ಸಂಸ್ಥೆ ಸದಸ್ಯರು ಹಾಜರಿದ್ದರು.