Saturday, February 21, 2026
Saturday, February 21, 2026
Home Blog Page 211

Department of Police ಪೊಲೀಸರ ಸೃಜನಶೀಲತೆಗೆ ಸಾಕ್ಷಿಯಾದ ‘ಸಾಹಿತ್ಯ ಹುಣ್ಣಿಮೆ’ ಕಾರ್ಯಕ್ರಮ

0

Department of Police ಸದಾ ಒತ್ತಡದಲ್ಲಿ ಇರುತ್ತಿದ್ದ ಪೊಲೀಸ್ ಇಲಾಖೆಯ ಸಿಬ್ಬಂದಿಗಳಲ್ಲಿದ್ದ, ಸೃಜನಶೀಲ ಮನಸ್ಸು ಅರಳಿತ್ತು. ತಮ್ಮ ಸ್ವರಚಿತ ಕವನಗಳನ್ನು ಓದಿದ ಪೊಲೀಸ್ ಸಿಬ್ಬಂದಿಗಳು, ಅಕ್ಷರ ಮತ್ತು ಗಾಯನದ ಮೂಲಕ ನೆರೆದಿದ್ದವರ ಹೃದಯ ಸ್ಪರ್ಶಿಸುವಲ್ಲಿ ಸಫಲರಾಗಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಜಿಲ್ಲಾ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಿಎಆರ್ ಸಭಾಂಗಣದಲ್ಲಿ ಏರ್ಪಡಿಸಿದ್ದ 240 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಇಂಥಹ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗಿತ್ತು.

ಖಾಕಿ ಕವಿ ಮಂಜುನಾಥ ವಾಚಿಸಿದ ರಸ್ತೆ ಸುರಕ್ಷತೆ ಕವನ, ಉಮಾಪತಿ ಗಂಗಾರಾಮ್ ವಾಚಿಸಿದ ಮಾದರಿಯಾಗು ಓ ನನ್ನ ಅಣ್ಣ ಕವನ, ಸಾಗರದ‌ ಪೊಲೀಸ್ ಸಿಬ್ಬಂದಿ ಗೀತಾ ಸಾಗರ್ ವಾಚಿಸಿದ ಪೊಲೀಸ್ ನವರು ಏನ್ ಮಾಡ್ತಾ ಇದಾರೆ ಸ್ವಾಮಿ ಎಂಬ ಸಾರ್ವಜನಿಕರ ಅಸಡ್ಡೆಯ ಪ್ರಶ್ನೆಗಳು ಮತ್ತು ಪೊಲೀಸರ ಒತ್ತಡದ ಬಗೆಗಿನ ಕವನ ಕೇಳುಗರ ಮೆಚ್ಚುಗೆ ಗಳಿಸಿತು. ಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿ ರವಿಕುಮಾರ್, ತಿಮ್ಮೇಶಪ್ಪ, ನಾಗಿಬಾಯಿ, ಹರೀಶ್ ಶಿವಮೊಗ್ಗ, ಬಿ.ಬಿ. ಮಂಜುನಾಥ, ಪರಶುರಾಮ, ಸಂತೋಷ ಹೆಚ್.ಜಿ., ಶರತ್ ಸಿ.ಟಿ., ಲಕ್ಷ್ಮಣ್, ಜಾಯ್ ಶಿವಮೊಗ್ಗ, ನಿಂಗೇಶ್ ಡಿ., ಪ್ರಶಾಂತ ಕೆ.ಎಮ್ ಕವನ ವಾಚಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಮೇಶ್ ಕುಮಾರ್ ಮಾತನಾಡಿ, ಭಾಷಾ ವೈವಿಧ್ಯತೆಯನ್ನು ಸಾಮಾನ್ಯ ಜನರಿಗೆ ಪರಿಚಯಿಸುವ ಕಾರ್ಯ ಸಾಹಿತ್ಯ ಹುಣ್ಣಿಮೆಯಿಂದ ನಡೆಯುತ್ತಿದೆ. ಬೆಂಗಳೂರಿನಲ್ಲಿ ವಿವಿಧ ಭಾಷೆಗಳಿಂದ ಕನ್ನಡಕ್ಕೆ ಸವಾಲು ಎದುರಾಗುತ್ತಿದ್ದರು ಸಹ, ಕನ್ನಡದ ಬಗೆಗಿನ ಅನೇಕ ಕ್ರಿಯಾಶೀಲ ಚಟುವಟಿಕೆಗಳು ಭಾಷೆಯನ್ನು ಮತ್ತಷ್ಟು ಶಕ್ತಿಗೊಳಿಸುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಸಮಾಜಮುಖಿ ಬರವಣಿಗೆ ಹೆಚ್ಚು ಜನಮೆಚ್ಚುಗೆ ಪಡೆಯುತ್ತದೆ. ಹೊಸ ಸಾಹಿತ್ಯ ಆಸಕ್ತರನ್ನು ತಲುಪಲು ಜನರಿರುವಲ್ಲಿಗೆ ಹೋಗಿ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶದ ಜೊತೆಯಲ್ಲಿ, ಮಾತೃ ಭಾಷೆಯ ಸವಾಲುಗಳನ್ನು ಚರ್ಚಿಸುವ ಹಿನ್ನಲೆಯಲ್ಲಿ ಮನೆ ಮನ ಕಾರ್ಯಕ್ರಮವಾಗಿ ರೂಪಿಸಿದ ಸಾಹಿತ್ಯ ಹುಣ್ಣಿಮೆಯು 20 ವರ್ಷಗಳು ಪೂರೈಸಿದೆ.

ಬಡಾವಣೆಗಳಲ್ಲಿ ಕಾರ್ಯಕ್ರಮ ಮಾಡುವಾಗ ಎಲ್ಲಾ ಮನೆಗಳಿಗೆ ತೆರಳಿ ಆಮಂತ್ರಣ ಪತ್ರಿಕೆಗಳು ಹಂಚುತ್ತಿದ್ದೇವೆ‌. ಒಳಿತು ಮತ್ತು ಕೆಡುಕುಗಳ ನಡುವೆ ಸಾಹಿತ್ಯದ ಮೂಲಕ ಸಮಾಜದಲ್ಲಿ ಒಳ್ಳೆಯ ವಿಚಾರಗಳನ್ನು ಬಿತ್ತುವ ಕಾರ್ಯ ಮಾಡೋಣ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕೋಶಾಧ್ಯಕ್ಷರಾದ ಮಧುಸೂದನ್ ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೂರದರ್ಶನ ಕಲಾವಿದ ಉಮೇಶ್ ಗೌಡ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ನಾಗೇಂದ್ರ ಆಚಾರ್ಯ ಕಥೆಯನ್ನು ವಾಚಿಸಿದರು.

Department of Police ಇದೇ ವೇಳೆ ಖಾಕಿ ಕವಿ ಮಂಜುನಾಥ ಅವರು ರಚಿಸಿದ ಕವನ ಸಂಕಲನ ಆಶಾ ಸುಂದರಿ ಹಾಗೂ ಕಾವ್ಯ ಮಂಜರಿ ಪುಸ್ತಕಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

ಡಿಎಆರ್ ಇನ್ಸ್ಪೆಕ್ಟರ್ ಸೋಮಶೇಖರಪ್ಪ ಸ್ವಾಗತಿಸಿ, ತಾಲ್ಲೂಕು ಕಸಾಪ ಅಧ್ಯಕ್ಷೆ ಮಹಾದೇವಿ ಪ್ರಾರ್ಥಿಸಿ, ಕೆ.ಮಂಜಪ್ಪ ನಿರೂಪಿಸಿದರು. ಪೊಲೀಸ್ ಸಿಬ್ಬಂದಿ ಉಮಾಪತಿ, ರವಿಕುಮಾರ್, ಜಿ.ಲಕ್ಷ್ಮಣ, ಗಾಯಕಿ ನಳಿನಾಕ್ಷಿ, ಸುಶೀಲಾ ಷಣ್ಮುಗಂ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

Rotary Club Shivamogga ಒತ್ತಡದ ಜೀವನಶೈಲಿಯಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ : ಬಸವರಾಜ ಬಿ.

0

Rotary Club Shivamogga ಇಂದಿನ ಒತ್ತಡದ ಜೀವನಶೈಲಿಯಲ್ಲಿ ಆರೋಗ್ಯದ ಬಗ್ಗೆ ಗಮನಿಸುತ್ತಿಲ್ಲ. ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಕ್ಯಾನ್ಸರ್ ಆಗಿದೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದಾಗ ಗುಣಪಡಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಬಸವರಾಜ ಬಿ ಹೇಳಿದರು.

ಗೋಪಾಳದ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಾರಾಯಣ ಹೃದ್ರಾಲಯ ಆಸ್ಪತ್ರೆಯ ಸಹಯೋಗದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಮತ್ತು ಮೆಮೊಗ್ರಫಿ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಆರೋಗ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ರೋಟರಿ ಸಂಸ್ಥೆಯು ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುತ್ತಿದೆ. ನಿರಂತರವಾಗಿ ಆರೋಗ್ಯ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ಏಕೆಂದರೆ ಆರೋಗ್ಯವೇ ಮಹಾಭಾಗ್ಯ. ಆರೋಗ್ಯವೇ ಸಂಪತ್ತು ಎಂದು ತಿಳಿಸಿದರು.

ನಾರಾಯಣ ಹೃದಯಾಲಯದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಮತ್ತು ರಂಗನಾಥ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಶಿಬಿರಕ್ಕೆ ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ 200 ಜನ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

Rotary Club Shivamogga ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನ ಈಶ್ವರ್, ಆನಂದ್, ಬಲರಾಮ್, ರಮೇಶ್, ಸಂತೋಷ್, ಮಂಜುನಾಥ್, ಜಿ.ಎನ್.ಪ್ರಕಾಶ್, ಜಗದೀಶ್, ಪ್ರೊ. ಚೆನ್ನಪ್ಪ, ಧರ್ಮೇಂದ್ರ ಸಿಂಗ್, ರವಿ ಕೊಟೋಜಿ, ಜ್ಯೋತಿ ಶ್ರೀ ರಾಮ್, ಗೀತಾ ಜಗದೀಶ್, ಅನ್ ಕ್ಲಬ್ ಅಧ್ಯಕ್ಷೆ ರಾಜಶ್ರೀ ಬಸವರಾಜ್, ಮಥುರಾ ಧನಂಜಯ್, ಕ್ಲಬ್‌ನ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ನಾರಾಯಣ ಹೃದಯಾಲಯದ ಸಿಬ್ಬಂದಿ ಮತ್ತು ರಂಗನಾಥ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.

CM Siddharamaiah ದೇಶದ ಆರ್ಥಿಕತೆಗೆ ಬೃಹತ್ ಕೊಡುಗೆ ಕೊಡುತ್ತಿರುವ ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರವೂ ಸಹ ಕೈ ಜೋಡಿಸಬೇಕು- ಸಿಎಂ ಸಿದ್ಧರಾಮಯ್ಯ

0

CM Siddharamaiah 2030ರ ವೇಳೆಗೆ ಬೆಂಗಳೂರು ನಗರದಲ್ಲಿ 220 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಪೂರ್ಣಗೊಳಿಸಿ, 30 ಲಕ್ಷ ಜನರು ಪ್ರಯಾಣಿಸಲು ಮೂಲಸೌಕರ್ಯ ಕಲ್ಪಿಸುವುದು ನಮ್ಮ ಬದ್ಧತೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ವಿವಿಧೆಡೆ ಆಯೋಜಿಸಿದ್ದ ಸಮಾರಂಭಗಳಲ್ಲಿ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿ, ನಮ್ಮ ಮೆಟ್ರೋ ಯೋಜನೆಯ ಹಳದಿ ಮಾರ್ಗವನ್ನು ಉದ್ಘಾಟಿಸಿ. ಮೆಟ್ರೋ 3ನೇ ಹಂತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮುಖ್ಯಮಂತ್ರಿಗಳು ಮಾತನಾಡಿದರು .

ಮೆಟ್ರೋ ನಿಲ್ದಾಣಗಳ ನಿರ್ಮಾಣದಲ್ಲಿ ಇನ್ಫೋಸಿಸ್ ಫೌಂಡೇಶನ್, ಬಯೋಕಾನ್ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್‌ ನಂತಹ ಖಾಸಗಿ ಸಂಸ್ಥೆಗಳು ಕೈಜೋಡಿಸಿವೆ. ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ ಮುಂದಿನ ದಿನಗಳಲ್ಲಿ ಇನ್ನಷ್ಟು ಸದೃಢಗೊಳ್ಳುವ ವಿಶ್ವಾಸ ನನಗಿದೆ.

CM Siddharamaiah ನಮ್ಮ ರಾಜ್ಯವು ದೇಶದ ಐಟಿ ರಫ್ತಿನಲ್ಲಿ ಶೇ.35-40 ರಷ್ಟು ಕೊಡುಗೆ ಕೊಡುತ್ತಿದೆ. ಇದರಲ್ಲಿ ಬೆಂಗಳೂರಿನ ಪಾಲು ದೊಡ್ಡದು. ಎಲೆಕ್ಟ್ರಾನಿಕ್ಸ್ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯ ರಫ್ತಿನಲ್ಲಿ ಶೇ.40 ಕ್ಕೂ ಹೆಚ್ಚಿನ ಪಾಲು ರಾಜ್ಯದ್ದಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು 1.35 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳನ್ನು ರೂಪಿಸಿ ಸಂಪನ್ಮೂಲಗಳನ್ನು ವಿನಿಯೋಗಿಸಿ ಬೆಂಗಳೂರನ್ನು ಮಾದರಿ ನಗರವನ್ನಾಗಿಸಲು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಅನೇಕ ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ದೇಶದ ಆರ್ಥಿಕತೆಗೆ ಬೃಹತ್ ಕೊಡುಗೆ ಕೊಡುತ್ತಿರುವ ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರವೂ ಸಹ ಕೈ ಜೋಡಿಸಬೇಕೆಂದು ವಿನಂತಿಸುತ್ತೇನೆ ಎಂದು ಸಿದ್ಧರಾಮಯ್ಯ ಅವರು ಪ್ರಧಾನಿ ಮೋದಿ ಅವರ ಗಮನ ಸೆಳೆಯುವಂತೆ ಮಾತನಾಡಿದರು.

Dr. H. B. Manjunatha ದೇಶದಲ್ಲಿ ನೇತ್ರದಾನಿಗಳ ಅಗತ್ಯವಿದೆ – ಹಿರಿಯ ಪತ್ರಕರ್ತ ಡಾ. ಹೆಚ್. ಬಿ. ಮಂಜುನಾಥ

0

Dr. H. B. Manjunatha ಮಧ್ಯಂತರ ಅಂಧತ್ವದಿಂದ ಬಳಲುತ್ತಿರುವ ಲಕ್ಷಾಂತರ ಮಂದಿಯ ಪುನರ್ ದೃಷ್ಟಿಗೆ ನೇತ್ರದಾನಿಗಳ ಅವಶ್ಯವಿದ್ದು ನಿವೃತ್ತ ನೇತ್ರ ಪರೀಕ್ಷಕರು ನೇತ್ರದಾನಕ್ಕೆ ಜನರನ್ನು ಪ್ರೇರೇಪಿಸುವ ಸೇವಾ ಕಾರ್ಯವನ್ನು ಮಾಡಬೇಕು ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಕರೆ ಕೊಟ್ಟರು. ಅವರಿಂದು ಕರ್ನಾಟಕ ನಿವೃತ್ತ ನೇತ್ರ ಪರೀಕ್ಷಕರ ಪ್ರಥಮ ರಾಜ್ಯಮಟ್ಟದ ಸ್ನೇಹಕೂಟದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ದೇಶದಲ್ಲಿ ವಾರ್ಷಿಕ ಸುಮಾರು ಒಂದು ಲಕ್ಷ ಮಂದಿ ಮಧ್ಯಂತರ ಅಂಧತ್ವದವರಿಗೆ ನೇತ್ರ ಕಸಿಗಾಗಿ ಸುಮಾರು ಎರಡು ಲಕ್ಷ ಎಪ್ಪತ್ತು ಸಾವಿರ ನೇತ್ರಗಳ ಅವಶ್ಯಕತೆ ಇದ್ದು ವಾರ್ಷಿಕ ನಮ್ಮ ದೇಶದಲ್ಲಿ ಸುಮಾರು 56 ಸಾವಿರದಿಂದ 66 ಸಾವಿರ ಮಾತ್ರ ನೇತ್ರದಾನಗಳು ನಡೆಯುತ್ತಿದ್ದು ಮರಣಾ ನಂತರ ಮಣ್ಣಲ್ಲಿ ಮಣ್ಣಾಗುವ ಬೆಂಕಿಯಲ್ಲಿ ಬೂದಿಯಾಗುವ ಮುನ್ನ ಮೃತರ ನೇತ್ರಗಳನ್ನು ಸೂಕ್ತ ಸಮಯದ ಒಳಗೆ ದಾನ ಮಾಡುವಂತೆ ಸಮಾಜದಲ್ಲಿ ಜಾಗೃತಿ ಉಂಟಾಗಬೇಕಿದೆ ಎಂದರು. ಕಣ್ಣಿನ ತೊಂದರೆಗೆ ಕಾರಣವಾಗುವ ಅನ್ನಾಂಗಗಳ ಕೊರತೆ ಬಗ್ಗೆ ಸಮಾಜಕ್ಕೆ ತಿಳಿಸಬೇಕಾಗಿದೆ ಅಲ್ಲದೆ ಶಾಲಾ ಮಕ್ಕಳನ್ನು ಪ್ರಾಥಮಿಕ ಹಂತದಲ್ಲೇ ನೇತ್ರ ಪರೀಕ್ಷೆಗೆ ಒಳಪಡಿಸಿದಲ್ಲಿ ಮುಂದೆ ಉಂಟಾಗಬಹುದಾದ ಕಣ್ಣಿನ ತೊಂದರೆಗಳು ಈಗಲೇ ತಡೆಯಬಹುದಾಗಿದ್ದು ಈ ನಿಟ್ಟಿನಲ್ಲೂ ನಿವೃತ್ತ ನೇತ್ರ ಪರೀಕ್ಷಕರು ಸ್ವಯಂ ಪ್ರೇರಣೆಯಿಂದ ಜನಜಾಗೃತಿ ಮೂಡಿಸುವ ಕೆಲಸಗಳನ್ನು ವೈಯಕ್ತಿಕವಾಗಿ ಹಾಗೂ ಸಾಂಘಿಕವಾಗಿ ಮಾಡಬೇಕು ಎಂದು ಎಚ್ ಬಿ ಮಂಜುನಾಥ್ ಹೇಳಿದರು . Dr. H. B. Manjunatha ನಿವೃತ್ತ ನೇತ್ರ ತಜ್ಞ ಡಾ.ಎ ಬಿ ಕಾಕಡೆ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ನೇತ್ರ ತಜ್ಞ ಡಾ. ಎಸ್ ಎಸ್ ಕೊಳಕೂರ್ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ ಹೆಚ್ ಎಂ ವೀರಯ್ಯ ಮುಂತಾದವರು ಮುಖ್ಯ ಅತಿಥಿಗಳಾಗಿದ್ದು ಕಾರ್ಯಕ್ರಮದ ನಿರೂಪಣೆಯನ್ನು ನಿವೃತ್ತ ನೇತ್ರಾಧಿಕಾರಿ ಪ್ರಕಾಶ್ ಸವದತ್ತಿ ಮಾಡಿದರು.ರಂಗನಾಥ ಸ್ವಾಗತ ಕೋರಿದರು. ನಿವೃತ್ತ ನೌಕರರ ಮಿನಿ ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು.

Shivaganga Yoga Center ಯೋಗದಿಂದ ಸದೃಢವಾದ ದೇಹ ಮನಸ್ಸು ಹಾಗೂ ನಕಾರಾತ್ಮಕ ಭಾವನೆ ದೂರ : ಜಡೆ ಮಠದ ಶ್ರೀ ಮ. ನಿ. ಪ್ರ. ಮಹಾಂತ ಮಹಾಸ್ವಾಮಿ

0

Shivaganga Yoga Center ಸಾವಿರಾರು ವರ್ಷಗಳ ಕಾಲ ಇತಿಹಾಸವಿರುವ ಯೋಗ ಪ್ರಾಣಾಯಾಮ ಧ್ಯಾನ ಇಂದು ಹೆಚ್ಚು ಪ್ರಚಲಿತವಾಗಿದೆ ಎಂದು ವಿರಕ್ತ ಜಡೆ ಮಠದ ಶ್ರೀ ಮ. ನಿ. ಪ್ರ. ಮಹಾಂತ ಮಹಾಸ್ವಾಮಿಗಳು ನುಡಿದರು. ಇಂದು ಕುವೆಂಪು ನಗರ ಎನ್ಎಸ್ ಲೇಔಟ್ ನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಶ್ರೀ ಶಿವಗಂಗಾ ಯೋಗ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳನಾದ ಉಚಿತ ಯೋಗ ಶಿಬಿರ ಹಾಗೂ ಸಂಗೀತ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಯೋಗದಿಂದ ದೀರ್ಘಾಯುಷ್ಯ, ಸಕಾರಾತ್ಮಕ ಭಾವನೆಗಳ ಜೊತೆಗೆ ದೇಹ ಮನಸ್ಸು ಸದೃಢವಾಗಿರುತ್ತದೆ. ಯೋಗ ಹಾಗೂ ಸಂಗೀತ ಒಂದು ನಾಣ್ಯದ ಎರಡು ಮುಖಗಳು ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ನಮ್ಮ ಮನಸ್ಸು ಸದಾ ಸದ್ಭಾವನೆ ಇಂದ
ಕೂಡಿರಲು ಯೋಗ ಸಂಗೀತ ಬಹಳ ಅವಶ್ಯಕವಾಗಿದೆ. ಅದರಲ್ಲೂ ಇಂದಿನ ಒತ್ತಡ ಪ್ರಪಂಚದಲ್ಲಿ ಎಲ್ಲಾ ಔಷಧಿ ಮಾತ್ರೆಗಳಿಗಿಂತ ಯೋಗ ಪ್ರಾಣಾಯಾಮ ಧ್ಯಾನ ಹಾಗೂ ಸಂಗೀತ ಬಹಳ ಸಹಕಾರಿಯಾಗಿದೆ ಎಂದು ಹೇಳಿದರು.

ಈ ವೇಳೆ ಶಿವಗಂಗಾ ಯೋಗ ಕೇಂದ್ರದ ಗುರುಗಳಾದ ಯೋಗಚಾರ್ಯ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಡಾ. ಸಿವಿ ರುದ್ರಾರಾಧ್ಯ ಅವರು ಮಾತನಾಡಿ ಶಿವಮೊಗ್ಗವನ್ನು ಒಂದು ಯೋಗ ನಗರವನ್ನು ಆಗಿಸುವ ಗುರಿ ಹೊಂದಿ ಇವತ್ತು 37ನೆಯ ಶಾಖೆಗೆ ನಾವು ಚಾಲನೆಯನ್ನು ಕೊಡುತ್ತಿದ್ದೇವೆ. ಮನೆ, ಮನೆಗಳಿಗೆ ಯೋಗವನ್ನು ತಲುಪಿಸುವುದರ ಮುಖಾಂತರ ಎಲ್ಲಾ ಬಡಾವಣೆಗಳಲ್ಲೂ ಯೋಗ ಶಿಕ್ಷಣವನ್ನ ನೀಡುತ್ತಾ ಇದ್ದೇವೆ. ಇದಕ್ಕೆಲ್ಲಾ ಪ್ರೇರಣೆ ನಮ್ಮ ಯೋಗ ಕೇಂದ್ರದ ಅಧ್ಯಕ್ಷರಾದ ರುದ್ರೇಗೌಡರು ಎಂದು ಹೇಳಿದರು. ಜೊತೆಗೆ 37 ಶಾಖೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ನಮ್ಮ ಯೋಗ ಶಿಕ್ಷಕರ ಪಾತ್ರ ತುಂಬಾ ಪ್ರಮುಖವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಹುಮಾಯನ್ ಹರ್ಲಾಪುರ್ ಅವರು ಸಂಗೀತ ಶಿಬಿರಕ್ಕೆ ಚಾಲನೆ ನೀಡಿ ವಚನಗಳನ್ನು ಹಾಡುವುದರ ಮೂಲಕ ಸಂಗೀತ ಮಾನಸಿಕ ಖಿನ್ನತೆಯನ್ನು ದೂರವಾಗಿಸುವುದರ ಜೊತೆಗೆ ಆ ಮನೆಯ ವಾತಾವರಣವನ್ನು ತುಂಬಾ ಉತ್ತಮವಾಗಿ ಇಡುತ್ತದೆ. ಪ್ರಸ್ತುತ ಮೊಬೈಲ್ ಹಾವಳಿಯಿಂದ ಯುವ ಪೀಳಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಸಂಗೀತವನ್ನು ಅಭ್ಯಾಸ ಮಾಡುವುದರ ಮುಖಾಂತರ ಮನೋವಿಕಾಸವನ್ನು ಮಾಡಿಕೊಳ್ಳೋಣ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ರುದ್ರಮುನಿ ಸಜ್ಜನ್, ಮಾತನಾಡಿ ವೀರಶೈವ ಮಹಾಸಭಾ ಸಮಾಜದಲ್ಲಿ ಸಂಘಟನೆಗಳ ಮುಖಾಂತರ ಲಿಂಗಾಯತ ಧರ್ಮವನ್ನು ಪ್ರಚಾರಗೊಳಿಸಿ ಹಲವಾರು ಸಾಧಕರಿಗೆ ಸನ್ಮಾನ ಮಾಡುವುದರ ಮುಖಾಂತರ. ಹಾಗೂ ದೇಶದಲ್ಲಿ ವಿಶೇಷವಾದ ಸಾಧನೆ ಮಾಡಿದ ಗಣ್ಯರಿಗೆ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿಯನ್ನುನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದೇವೆ. ಇಂತಹ ಕಾರ್ಯಕ್ರಮಗಳಿಂದ ನಮ್ಮ ವೀರಶೈವ ಲಿಂಗಾಯಿತ ಮಹಾಸಭಾ ಪುನೀತವಾಗುತ್ತದೆ ಇದರ ಸದುಪಯೋಗವನ್ನು ನಮ್ಮ ಬಡಾವಣೆಯ ಎಲ್ಲರೂ ಉಪಯೋಗಿಸಿಕೊಳ್ಳಬೇಕೆಂದು ಕರೆ ನೀಡಿದರು.

Shivaganga Yoga Center ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರು ಉದ್ಯಮಿಗಳು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್ ರುದ್ರೇಗೌಡ ಅವರು ಮಾತನಾಡಿ, ನಿರಂತರವಾಗಿ ಯೋಗ ತರಬೇತಿಯನ್ನ ನೀಡುತ್ತಿರುವ ಏಕೈಕ ಸಂಸ್ಥೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಇದೆ ಎಂದಾದರೆ ಅದು ಶಿವಗಂಗಾ ಯೋಗ ಕೇಂದ್ರ ಮಾತ್ರ ಜೊತೆಗೆ ಈಗಾಗಲೇ ಶಿವಗಂಗಾ ಯೋಗ ಕೇಂದ್ರ ಪ್ರಧಾನ ಕಛೇರಿಯಲ್ಲಿ ಬರುವ ದಿನಗಳಲ್ಲಿ ನ್ಯಾಚುರೋಪತಿ ಆಯಿಲ್ ಬಾತ್ ಮಡ್ಬಾತ್ ಹಾಗೂ ಹಲವಾರು ಆರೋಗ್ಯ ಥೆರಪಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುವುದು ಎಂದು ನುಡಿದರು.

ಸಮಾರಂಭದಲ್ಲಿ ಶಿವಗಂಗಾ ಯೋಗಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ. ವಿಜಯಕುಮಾರ್. ನೀಲಕಂಠ. ಕಾಟನ್ ಜಗದೀಶ್. ಎಲ್.ಎಂ. ಮೋಹನ್,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು ವಾಗ್ದೇವಿ ಬಸವರಾಜ್, ವೀರಶೈವ ಮಹಾಸಭಾ ಜಿಲ್ಲಾ ಮಾಧ್ಯಮ ಘಟಕದ ಅಧ್ಯಕ್ಷ ಕೆ.ಆರ್. ಸೋಮನಾಥ್, ಪಾಲಿಕೆ ಘಟಕದ ಅಧ್ಯಕ್ಷ ರಾಜಶೇಖರ್, ವೀರಶೈವ ಮಹಾಸಭಾದ ಪದಾಧಿಕಾರಿಗಳು, ಯೋಗ ಶಿಕ್ಷಕರುಗಳು ಲವಕುಮಾರ್, , ಪೋಷಕರಾದ ಮೋಹನ್ ಬಾಳೆಕಾಯಿ, ಯೋಗ ತರಬೇತುದಾರರು ಉಪಸ್ಥಿತರಿದ್ದರು.

Bharat Scouts and Guides ಆತ್ಮವಿಶ್ವಾಸ, ಕೌಶಲ್ಯ ವೃದ್ಧಿಸುವ ನಿಪುಣ್ ಪರೀಕ್ಷಾ ಶಿಬಿರ

0

Bharat Scouts and Guides ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಕೌಶಲ್ಯ ವೃದ್ಧಿಸುವ ದೃಷ್ಟಿಯಿಂದ ನಿಪುಣ್ ಪರೀಕ್ಷಾ ಶಿಬಿರ ಸಹಕಾರಿಯಾಗಲಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ಎರಡು ದಿನ ಬಿ ಎಚ್ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಕೌಟ್ ಭವನದ ಬೇಡನ್ ಪೋವೆಲ್ ಹಾಲ್ ನಲ್ಲಿ ಪ್ರಥಮದರ್ಜೆ ಕಾಲೇಜುಗಳ ರೋವರ‍್ಸ್, ರೇಂಜರ‍್ಸ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ನಿಪುಣ್ ಟೆಸ್ಟಿಂಗ್ ಕ್ಯಾಂಪ್ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಜೀವನದಲ್ಲಿ ಪರಿಪೂರ್ಣತೆ ಸಾಧಿಸಲು ವಿದ್ಯಾಭ್ಯಾಸದ ಜೊತೆಗೆ ಸ್ಕೌಟ್ಸ್ ಚಳುವಳಿಯಲ್ಲಿ ತೊಡಗಿಸಿಕೊಳ್ಳಬೇಕು. ಅದರಲ್ಲೂ ನಿಪುಣ್ ಟೆಸ್ಟ್ ತುಂಬಾ ಪ್ರಮುಖ ಘಟ್ಟವಾಗಿದೆ. ಈ ಹಂತವನ್ನು ದಾಟಿದ ನಂತರ ಮುಂದೆ ರಾಜ್ಯ ಪುರಸ್ಕಾರನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆದ್ದರಿಂದ ಇಂತಹ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರೋವರ್ ವಿಭಾಗದ ಜಿಲ್ಲಾ ಆಯುಕ್ತ ಕೆ ರವಿ ಮಾತನಾಡಿ, ಈಗಾಗಲೇ ಜಿಲ್ಲೆಯ ವಿವಿಧ ಕಾಲೇಜುಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶಿಬಿರದಲ್ಲಿ ತೊಡಗಿಕೊಂಡಿರುವುದು ತುಂಬಾ ಹೆಮ್ಮೆ ವಿಷಯವಾಗಿದೆ. ಇದರಲ್ಲಿ ಅವರಿಗೆ ಸಂಸ್ಕಾರ, ಪ್ರತಿಜ್ಞೆ ನಿಯಮಗಳು, ಆತ್ಮ ರಕ್ಷಣೆ ಕಲೆ, ಜೀವನ ಕೌಶಲ್ಯಗಳು, ಬದುಕಿನ ಕಲೆಯನ್ನು ಕಲಿಸುವುದರ ಜೊತೆಗೆ ದೇಶಾಭಿಮಾನ, ಕರ್ತವ್ಯ ಹಾಗೂ ಸಮಯ ಪ್ರಜ್ಞೆ ಮತ್ತು ಶಿಸ್ತು ಕಲಿಸಲಾಗುವುದು ಎಂದು ನುಡಿದರು.
Bharat Scouts and Guides ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಸ್ಕೌಟ್ಸ್ ಅಂಡ್ ಗೈಡ್ಸ್ ಚಳುವಳಿ ಮನೆ ಮನೆಗೆ ತಲುಪಬೇಕು. ಮಕ್ಕಳಲ್ಲಿರುವ ಕ್ರಿಯಾಶೀಲತೆ ಹಾಗೂ ಅವರಲ್ಲಿರುವ ಪ್ರತಿಭೆಗೆ ಹಾಗೂ ಕಲಿಕೆಗೆ ಉತ್ತಮ ವೇದಿಕೆಯಾಗಿದೆ. ಈ ಚುನಾವಣೆಯಲ್ಲಿ ತೊಡಗಿಕೊಂಡವರಿಗೆ ವಿಶೇಷವಾದ ಗೌರವ ದೊರಕುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ತರಬೇತಿ ಆಯುಕ್ತರಾದ ಎಚ್ ಶಿವಶಂಕ್ರಪ್ಪ, ಕೃಷ್ಣಸ್ವಾಮಿ, ಲಕ್ಷ್ಮೀ ಕೆ ರವಿ, ವಿನಯ ಭೂಷಣ್, ಹೆಚ್ ಜ್ಯೋತಿ, ಪರಿಮಳ, ಮಂಜುಳಾ, ಗಣಪತಿ, ರಮ್ಯಾ, ಮಲ್ಲಿಕಾರ್ಜುನ್ ಕಾನೂರ್, ರುದ್ರಪ್ಪ ಚಿಲೂರು, ಎನ್ ಆರ್ ಚಂದ್ರಶೇಖರ್, ದೇವಪ್ಪ, ಸಂಗೀತಾ ಬಗಲಿ, ಬಸವಣ್ಣಪ್ಪ ಉಪಸ್ಥಿತರಿದ್ದರು

ಆರ್.ವಿ. ರಸ್ತೆ ರಾಗಿಗುಡ್ಡ ಮೆಟ್ರೋ ರೈಲು ನಿಲ್ದಾಣದಲ್ಲಿ ಮೆಟ್ರೋ 2 ರ ಹಳದಿ ಮಾರ್ಗದ ಉದ್ಘಾಟನೆ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

0

ಆರ್.ವಿ. ರಸ್ತೆ ರಾಗಿಗುಡ್ಡ ಮೆಟ್ರೋ ರೈಲು ನಿಲ್ದಾಣದಲ್ಲಿ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದ ವರೆಗಿನ ಬೆಂಗಳೂರು ಮೆಟ್ರೋ 2 ರ ಹಳದಿ ಮಾರ್ಗದ ಉದ್ಘಾಟನೆ ಮಾಡಿ ಮೆಟ್ರೋ ರೈಲಿನ ಮೂಲಕ ಕೊನಪ್ಪನ ಅಗ್ರಹಾರದ ವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಯಾಣಸಿದರು.

ಈ ಸಮಯದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಗಳೊಂದಿಗೆ ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಹಾಗೂ ವಿದ್ಯುತ್ ಸಚಿವರಾದ ಮನೋಹರ್ ಲಾಲ್, ಮಾನ್ಯ ಕೇಂದ್ರ ರೈಲ್ವೆ ಮಾಹಿತಿ ಮತ್ತು ಪ್ರಸಾರ, ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್, ಮಾನ್ಯ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ, ಮಾನ್ಯ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ, ಉಪ ಮುಖ್ಯ ಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಂಸದರಾದ ತೇಜಸ್ವಿ ಸೂರ್ಯ, ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಸಂಸದರಾದ ಡಾ.ಸಿ.ಎನ್. ಮಂಜುನಾಥ್ ಸೇರಿದಂತೆ, ಗಣ್ಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Nidhi Aapke Nikat ನೌಕರರ ಭವಿಷ್ಯ ನಿಧಿ ಕ್ಲೈಮ್ ಪರಿಹಾರಕ್ಕಾಗಿ ಶಿಬಿರ/ಅದಾಲತ್‌ನಲ್ಲಿ ಪಾಲ್ಗೊಳ್ಳಲು ಮನವಿ

0

Nidhi Aapke Nikat ಮುಚ್ಚಿದ ಸಂಸ್ಥೆಗಳ ಸದಸ್ಯರಿಗೆ ಕ್ಲೈಮ್ ಫಾರ್ಮ್ಗಳ ದೃಢೀಕರಣವನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದು, ಅಧಿಕೃತ ಸಹಿದಾರರು/ಉದ್ಯೋಗದಾತರು ಲಭ್ಯವಿಲ್ಲದ ಕಾರಣ, ಕ್ಲೈಮ್ ಗಳು ತಮ್ಮ ಕ್ಲೈಮ್ ಗಳನ್ನು ದೃಢೀಕರಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಾರೆ. ಕ್ಲೈಮ್ ಗಳು ಮತ್ತು ಪೋಷಕ ದಾಖಲೆಗಳನ್ನು ನಿಗದಿತ ಅಧಿಕಾರಿಗಳು ದೃಢೀಕರಿಸಬಹುದು ಮತ್ತು ಪ್ರಕ್ರಿಯೆಗಾಗಿ ಸಲ್ಲಿಸಬಹುದಾಗಿದೆ.
ಪ್ರಮಾಣೀಕರಿಸುವ ಅಧಿಕಾರಿಗಳು;- ಮ್ಯಾಜಿಸ್ಟ್ರೇಟ್/ಗೆಜೆಟೆಡ್ ಅಧಿಕಾರಿ, ಪೋಸ್ಟ್ ಮಾಸ್ಟರ್ ಅಥವಾ ಉಪ ಪೋಸ್ಟ್ ಮಾಸ್ಟರ್, ಗ್ರಾಮ ಒಕ್ಕೂಟ/ಪಂಚಾಯತ್ ಅಧ್ಯಕ್ಷರು, ಸಂಸತ್ ಸದಸ್ಯರು/ಶಾಸಕ ಸಭೆ ಸದಸ್ಯರು, ಕೇಂದ್ರ ಟ್ರಸ್ಟಿಗಳ ಮಂಡಳಿ/ಇಪಿಎಫ್‌ಒ ಪ್ರಾದೇಶಿಕ ಸಮಿತಿಯ ಸದಸ್ಯರು, ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು/ಮೇಯರ್ ಇವರುಗಳು ದಾಖಲೆಗಳನ್ನು ದೃಢೀಕರಿಸಬಹುದಾಗಿದೆ.
ಸದಸ್ಯರು ಎದುರಿಸುತ್ತಿರುವ ಯಾವುದೇ ಇತರ ಕುಂದುಕೊರತೆಗಳನ್ನು ಮತ್ತು ಪಾಲುದಾರರ ಹಕ್ಕುಗಳನ್ನು ಸಲ್ಲಿಸುವಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಪರಿಹರಿಸಲು ಮತ್ತು ಮಾರ್ಗದರ್ಶನ ನೀಡಲು ಶಿವಮೊಗ್ಗ ಪ್ರಾದೇಶಿಕ ಕಚೇರಿಯು ಪ್ರತಿ ತಿಂಗಳು ನಿಧಿ ಆಪ್ಕೆ ನಿಕಟ್ ಅನ್ನು ಆಯೋಜಿಸುತ್ತಿದ್ದು, ಸದಸ್ಯರು ತಮ್ಮ ಕುಂದುಕೊರತೆ ಪರಿಹಾರಕ್ಕಾಗಿ ಈ ಶಿಬಿರಗಳಲ್ಲಿ ಭಾಗವಹಿಸುವಂತೆ ನೌಕರರ ಭವಿಷ್ಯ ನಿಧಿ ಪ್ರಾದೇಶಿಕ ಕಚೇರಿಯ ಲೇಖಾ ಅಧಿಕಾರಿಗಳು ತಿಳಿಸಿದ್ದಾರೆ.

Klive Special Article ಸರ್ವಧರ್ಮೀಯರಿಗೂ ಸಿಗುವ ಗುರುಸಾರ್ವಭೌಮ, ಶ್ರೀರಾಘವೇಂದ್ರರು

0

ಲೇ: ಎನ್.ಜಯಭೀಮ ಜೊಯಿಸ್. ಶಿವಮೊಗ್ಗ

Klive Special Article “ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬದೇ
ಕೆಟ್ಟವರುಂಟೋ”
ಶ್ರೀರಾಘವೇಂದ್ರಗುರುಸಾರ್ವಭೌಮರು 16 ನೇ ಶತಮಾನದ ಸಂತ ಶ್ರೇಷ್ಠರು.ಶ್ರೀ ರಾಘವೇಂದ್ರ ಸ್ವಾಮಿಗಳ ಅನನ್ಯ ಭಕ್ತರು ದೇಶ,ವಿದೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ.ಅದರಲ್ಲೂ ದಕ್ಷಿಣಭಾರತದಪ್ರದೇಶಗಳಾದಆಂಧ್ರಪ್ರದೇಶ,
ತಮಿಳುನಾಡುಮತ್ತು ಕರ್ನಾಟಕ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಗೌತಮಗೋತ್ರದ ಬೀಗಮುದ್ರೆಯ ಮನೆತನದವರಾದ ವೀಣಾಕನಕಾಚಲಭಟ್ಟರೆಂದೇ ಖ್ಯಾತಿ ಪಡೆದವರ ಪುತ್ರರು ತಿಮ್ಮಣ್ಣಭಟ್ಟರು.ಇವರೂ ಕೂಡ ತಮ್ಮ ಪೂರ್ವಜರಂತೆ ಆಚಾರ್ಯರ ಶಾಸ್ತ್ರದಲ್ಲಿ ಹಾಗೂ ವಂಶವಿದ್ಯೆಯಾದ ವೀಣೆಯಲ್ಲಿ ಪ್ರಾವೀಣ್ಯತೆ ಪಡೆದವರು.
ಇವರಸುಪುತ್ರರೇ “ಶ್ರೀವೆಂಕಟನಾಥಾಚಾರ್ಯರು ವೆಂಕಟನಾಥರೇ ಶ್ರೀಸುಧೀಂದ್ರ ತೀರ್ಥಗುರುಗಳಿಂದ ಸನ್ಯಾಸ ದೀಕ್ಷೆ ಪಡೆದು ಶ್ರೀರಾಘವೇಂದ್ರಗುರು ಸಾರ್ವಭೌಮರಾಗಿ ವೇದಾಂತ ಸಾಮ್ರಾಜ್ಯದ ಪೀಠವನ್ನಲಂಕರಿಸಿದ ಯತಿವರೇಣ್ಯರು. ಸನ್ಯಾಸದೀಕ್ಷೆಯನ್ನು ಫಾಲ್ಗುಣ ಶುಕ್ಲಪಕ್ಷದ ದ್ವಿತೀಯಾ ದಿನದಂದು ಶ್ರೀಸುಧೀಂದ್ರತೀರ್ಥರಿಂದಸ್ವೀಕರಿಸುತ್ತಾರೆ.ಈದಿನವನ್ನುಶ್ರೀಗುರುಸಾರ್ವ
ಭೌಮರ ಪಟ್ಟಾಭಿಷೇಕ ಮಹೋತ್ಸವದ ದಿನವನ್ನಾಗಿ ಆಚರಿಸಲಾಗುತ್ತದೆ.
ಮಹಾಮಹಿಮರಾದ ಶ್ರೀಗುರುರಾಯರು ಹುಟ್ಟಿದ ಮಂಗಳಕರವಾದ ದಿನವಾದ ಫಾಲ್ಗುಣ
ಶುಕ್ಲಪಕ್ಷದ ಸಪ್ತಮಿಯನ್ನು “ಶ್ರೀರಾಯರ ವರ್ಧಂತಿ” ಉತ್ಸವದಿನವನ್ನಾಗಿಆಚರಿಸಲಾಗುತ್ತದೆ.
ಈ ಒಂದು ವಾರದ ಕಾಲದಲ್ಲಿ ಶ್ರೀರಾಯರಿಗೆ ವಿಶೇಷ ಉತ್ಸವ,ಪೂಜೆ,ಉಪನ್ಯಾಸ,ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು ಏರ್ಪಡಿಸಿ “ಶ್ರೀರಾಘವೇಂದ್ರ ಸಪ್ತಾಹ” ಎಂದೂ ಆಚರಿಸುತ್ತಾರೆ.
ಜನರಕಷ್ಟಗಳನಿವಾರಣೆಗೆಮತ್ತುಲೋಕೋದ್ಧಾರಕ್ಕಾಗಿಅವತರಿಸಿದಮಹಾನುಭಾವರು
ಶ್ರೀರಾಘವೇಂದ್ರಸ್ವಾಮಿಗಳು. ಯಾರು ರಾಯರನ್ನು ದೃಢ ಭಕ್ತಿಯಿಂದ ತಮ್ಮ
ಇಷ್ಟಾರ್ಥ,ಸಿದ್ಧಿಗಾಗಿ ಮೊರೆಹೋಗುತ್ತಾರೋ ಅಂತಹವರ ಬೇಡಿಕೆಗಳನ್ನು ಈಡೇರಿಸುವ ಕರುಣಾಮಯಿಗಳು ಶ್ರೀ ಗುರುರಾಯರು. ರಾಯರನ್ನು ನಂಬಿ ಕೆಟ್ಟವರಿಲ್ಲ. “ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ”.ಮನುಷ್ಯನ ಆತ್ಮ ಜ್ಞಾನಕ್ಕೆ ಪ್ರತಿಯೊಬ್ಬರ ಬದುಕಿನಲ್ಲಿ ಓರ್ವ ಗುರುವಿನ ಮಾರ್ಗದರ್ಶನ ಅತ್ಯಗತ್ಯ.
ಅಂತಹ ಗುರುಗಳ ಪಂಕ್ತಿಯಲ್ಲಿ ಅಗ್ರಸ್ಥಾನ ಪಡೆದಿರುವವರು ಶ್ರೇಷ್ಠಗುರುಗಳಾದ ಮಂತ್ರಾಲಯದಶ್ರೀರಾಘವೇಂದ್ರಸ್ವಾಮಿಗಳವರು.ರಾಯರುಓರ್ವ ಮಹಿಮಾ ಪುರುಷರು. ಶ್ರೀರಾಯರುಅವರಪೂರ್ವಾಶ್ರಮದಲ್ಲಿ(ವೆಂಕಟನಾಥರು) ಅವರ ಪತ್ನಿ ಮತ್ತು ಮಗನ ಸಮೇತ ಒಂದು
ಸಮಾರಂಭಕ್ಕೆಹೋಗಿದ್ದಾಗಅವರಿಗೆಆಹ್ವಾನಕೊಟ್ಟವರು ಸರಿಯಾದ ಗೌರವ ಕೊಡದೆ ಅವರಿಗೆ ಗಂಧ ತೇಯುವ ಕೆಲಸವನ್ನು ಕೊಟ್ಟರು.ಗಂಧವನ್ನು ಹಚ್ಚಿಕೊಂಡ ಬ್ರಾಹ್ಮಣರಿಗೆಮೈಯೆಲ್ಲಾ ಉರಿಯಾಗಿ ಒದ್ದಾಟ ಪ್ರಾರಂಭವಾಯಿತು.ಕಾರ್ಯಕ್ರಮ
ನಿರ್ವಾಹಕರಿಗೆತಕ್ಷಣ ಆಗಿರುವ ಪ್ರಮಾದವನ್ನರಿತು ವೆಂಕಟನಾಥರನ್ನುಒದಗಿರುವಈಸಂದಿಗ್ಧಪರಿಸ್ಥಿತಿಯಿಂದ ಪಾರುಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ತಕ್ಷಣ ವೆಂಕಟನಾಥರು ವರುಣಸೂಕ್ತವನ್ನು ಪಠಿಸಿ ಎಲ್ಲರ ಮೈಯಲ್ಲಾದ ಉರಿಯನ್ನು ತಮ್ಮ ಮಂತ್ರ ಶಕ್ತಿಯಿಂದ ಶಮನಗೊಳಿಸುತ್ತಾರೆ. ರಾಯರು ತಮ್ಮಶಿಷ್ಯನೊಬ್ಬನುತನ್ನಕಡುಬಡತನದ ಬಗ್ಗೆ ಅರಿಕೆಮಾಡಿಕೊಂಡಾಗಗುರುಗಳು ಒಂದು ಹಿಡಿ)ಮಂತ್ರಾಕ್ಷತೆಯನ್ನುಕೊಟ್ಟುಆಶೀರ್ವದಿಸುತ್ತಾರೆ.
ಶಿಷ್ಯನು ತನ್ನಮನೆಗೆಹೋಗುವಾಗಕತ್ತಲಾಗಿದ್ದರಿಂದ ದಾರಿಯಲ್ಲಿ ಸಿಕ್ಕ ಒಂದು ಮನೆಯಜಗಲಿಯಮೇಲೆ ತನ್ನ ಮಂತ್ರಾಕ್ಷತೆಯಗಂಟಿನೊಂದಿಗೆ ಮಲಗುತ್ತಾನೆ. ಆ ಮನೆಗೆ ಪಿಶಾಚಿ ಬಾಧೆ ಇರುತ್ತದೆ. ಆ ದಿನವು ಎಂದಿನಂತೆ ಪಿಶಾಚಿ ಬರಲು ಶ್ರೀರಾಯರ
Klive Special Article ಮಂತ್ರಾಕ್ಷತೆ ಪ್ರಭಾವದಿಂದ ಮನೆಯೊಳಗೆ ‌ಹೋಗಲಾಗದೇ ಹೊರಗಡೆಯೇ ಸುಟ್ಟು ಭಸ್ಮ
ವಾಗುತ್ತದೆ.ಅಂದೇ ಆ ಮನೆಯಲ್ಲಿ ಮನೆಯೊಡತಿಗೆ ಮಗು ಹುಟ್ಟುತ್ತದೆ.ಆಮನೆಯಲ್ಲಿ ಮಗು ಹುಟ್ಟುವ ಪ್ರತಿ ಸಂದರ್ಭದಲ್ಲಿಯೂ ಪಿಶಾಚಿಯ ಕಾಟದಿಂದ ಹುಟ್ಟುವ ಮಕ್ಕಳು ಸತ್ತುಹೋಗುತ್ತಿದ್ದವು.
ಆದರೆ ಈ ಬಾರಿ ಮಂತ್ರಾಕ್ಷತೆಯ ಪ್ರಭಾವದಿಂದ
ಹುಟ್ಟಿದ ಮಗು ಬದುಕಿತು,ಪಿಶಾಚಿ ಸುಟ್ಟು ಭಸ್ಮ
ವಾಯಿತು.ಆ ಮನೆಯ ಯಜಮಾನನು ಪಿಶಾಚಿಯ ಬಾಧೆಯನ್ನು ರಾಯರೇ ಶಿಷ್ಯನಮುಖಾಂತರ ಪರಿಹಾರಮಾಡಿದ್ದಾರೆ ಎಂದು ಸಂತೋಷದಿಂದ ಶಿಷ್ಯನಿಗೆ ಗೌರವಾದರಗಳಿಂದ ಸತ್ಕಾರಮಾಡಿ ಕಳಿಸಿಕೊಡುತ್ತಾನೆ.
ಹರಿದಾಸರಲ್ಲಿಅಗ್ರಗಣ್ಯರಾಗಿದ್ದಶ್ರೀಜಗನ್ನಾಥ
ದಾಸರಿಗೂ ಅವರಿಗೆ ಬಂದಿದ್ದವ್ಯಾಧಿಪರಿಹಾರಕ್ಕೆ ದಾರಿ ತೋರಿಸಿದ ಮಹಾನುಭಾವರು . ತಮ್ಮ ಅಪೂರ್ವತಪಃಶಕ್ತಿಯ ಬಲದಿಂದ ದೇಹೀ ಎಂದು ಬರುವ ಭಕ್ತರ ಮನಸ್ಸಿನ ಇಷ್ಟಾರ್ಥ ಸಿದ್ಧಿಗಳನ್ನು ಈಡೇರಿಸುವ ಕಲಿಯುಗದ ಕಾಮಧೇನುಶ್ರೀರಾಘವೇಂದ್ರಗುರುಸಾರ್ವ
ಭೌಮರು. ಶ್ರೀಗುರುರಾಯರು ಹುಟ್ಟಿದ್ದು ತಮಿಳುನಾಡಿನ ಭುವನಗಿರಿಯಲ್ಲಿ ಮತ್ತು ಸಶರೀರರಾಗಿ ಬ್ರಂದಾವನ ಪ್ರವೇಶ ಮಾಡಿದ್ದು ಆಂಧ್ರಪ್ರದೇಶದ ಮಂತ್ರಾಲಯದಲ್ಲಿ. ಶ್ರೀರಾಘವೇಂದ್ರ ಗುರುಗಳು ಯಾವುದೇ ಒಂದು ಕೋಮು,ಮತ,ಜಾತಿಗೆ ಮಾತ್ರ
ಸೀಮಿತರಾದವರಲ್ಲ.ಇಡೀ ಮಾನವ ಕುಲವನ್ನೇ ಉದ್ಧಾರ ಮಾಡಲು ಭೂಮಿಯಲ್ಲಿ ಅವತರಿಸಿದ
ಯೋಗೀಶ್ವರರು. ಜಾತಿಗಿಂತ ನೀತಿ ಮೇಲು,ಭಕ್ತಿಯೇ ಎಲ್ಲಕ್ಕೂ ಕೊಂಡಿ ಎನ್ನುವ ತತ್ವವನ್ನು ವಿಶ್ವಕ್ಕೆ ಸಾರಿದ ಮಹಾನುಭಾವರು.ಶ್ರೀರಾಯರು ಸಶರೀರರಾಗಿ ಬೃಂದಾವನವನ್ನು ರುಧಿರೋದ್ಗಾರಿ ಸಂವತ್ಸರದ ಶ್ರಾವಣ ಬಹುಳ ದ್ವಿತೀಯ (ಕ್ರಿ.ಶ 1671ನೆ ಆಗಸ್ಟ್ ಮಾಹೆ)ದಂದು ಪ್ರವೇಶ ಮಾಡುತ್ತಾರೆ.
ಈ ವಿಶೇಷ ದಿನವನ್ನು ಶ್ರೀರಾಯರ ಆರಾಧನಾ ದಿನವನ್ನಾಗಿ ಆಚರಿಸಲಾಗುತ್ತದೆ.ಈ ವರ್ಷದ ಶ್ರೀರಾಯರ ಆರಾಧನೆಯು 354ನೇವರ್ಷದ ಆರಾಧನಾ ಮಹೋತ್ಸವವಾಗಿರುತ್ತೆ.ಶ್ರೀರಾಯರ ಆರಾಧನಾಸಂದರ್ಭದಲ್ಲಿ ಭಕ್ತಿಯನಮನಗಳನ್ನು ಅರ್ಪಿಸಿ ಎಲ್ಲರಿಗೂ ಸನ್ಮಂಗಳವನ್ನು ಕರುಣಿಸಿ ಅನುಗ್ರಹಿಸುವಂತೆ ಶ್ರೀರಾಯರಲ್ಲಿ ಪ್ರಾರ್ಥಿಸೋಣ.


ಎನ್.ಜಯಭೀಮ್ ಜೊಯ್ಸ್

ಸಮಾಜಮುಖಿ ಚಿಂತನಾ ಸಭೆಗೆ ದಯವಿಟ್ಟು ಬನ್ನಿ- ಕೆ.ಸಿ.ಬಸವರಾಜ್

0

ಸಮಾಜದಲ್ಲಿ ಇಂದು ಎಲ್ಲೆಡೆ ಜಾತಿ, ಉಪಜಾತಿ, ರಾಜಕಾರಣ, ಹಣವೇ ಪ್ರದಾನವಾಗಿ ಮಾನವೀಯತೆ ಮರೆತು ಮೃಗೀಯ ವರ್ತನೆ ತೋರುತ್ತಿರುವ ಪ್ರಸಂಗಗಳು, ಮನೆ – ಮನಸ್ಸು ಗಳನ್ನು ಒಡೆಯುತ್ತಿರುವ ಧಾರವಾಹಿಗಳು, ಹಿರಿಯರ ಹಿತನುಡಿಗಳನ್ನು ಕೇಳದೇ ನಿರ್ಲಕ್ಷಿಸಿ ಸಹವಾಸ ದೋಷಕ್ಕೆ ಒಳಗಾಗಿ ತಮ್ಮ ಆರೋಗ್ಯವನ್ನು ಲಕ್ಷಿಸದೆ ಅನಾರೋಗ್ಯಕ್ಕೆ ಒಳಗಾಗುತ್ತಿರುವ ಯುವ ಜನಾಂಗ, ಮನೆಯ ಇತರ ಸದಸ್ಯರು ಟಿವಿ, ಮೊಬೈಲ್ ನಲ್ಲೇ ಬ್ಯುಸಿ ಆಗಿ ಅದೇ ಮನೆಯ ಹಿರಿಯರನ್ನು ಮಾತನಾಡಿಸದೆ ಹಿರಿಯ ಜೀವಗಳು ಕೊರಗುತ್ತಿರುವ ಸನ್ನಿವೇಶ , ಹಣವೇ ಪ್ರಾಮುಖ್ಯವಾಗಿ ಮೌಲ್ಯಗಳು ಮರೆಯಾಗುತ್ತಿರುವ ಸನ್ನಿವೇಶದಲ್ಲಿ ಸಮಾಜದ ಒಳಿತಿಗಾಗಿ ಕೆಲವು ನಿಮಿಷ ಚರ್ಚಿಸಿ ನಮ್ಮ ನಮ್ಮ ಇತಿ ಮಿತಿಯೊಳಗೆ ಕನಿಷ್ಟ ಕಾರ್ಯ ಪ್ರವೃತ್ತರಾಗಲು ಮನಸ್ಸು ಹೊಂದಿರುವ ಮನುಕುಲದ ಹಾಗೂ ಸಕಲ ಜೀವಿಗಳ ಒಳಿತನ್ನು ಬಯಸುವ ವಿಶಾಲ ಹೃದಯದ ವ್ಯಕ್ತಿಗಳಿಗೆ ಒಂದು ಆಹ್ವಾನ :- ಸಮಾಜಮುಖಿ ಚಿಂತನೆ ಹೊಂದಿರುವ ಎಲ್ಲರ ಜತೆ ಚರ್ಚಿಸಲು ಚಿಂತಕರ ಚಾವಡಿ ಶಿವಮೊಗ್ಗ ದ ವತಿಯಿಂದ ದಿನಾಂಕ – 11-08-2025 ರಂದು ಸೋಮವಾರ ಸಂಜೆ 5 ಗಂಟೆಗೆ ಗಾಂದಿನಗರದ ಪಾರ್ಕ್ ನ ಮದ್ಯದಲ್ಲಿ ಇರುವ ಕುಟೀರದಲ್ಲಿ ( ಉಷಾ ನರ್ಸಿಂಗ್ ಹೊಂ ನಿಂದ ಜಿಲ್ಲಾ ಪಂಚಾಯತ್ ಗೆ ಹೋಗುವ ಮಾರ್ಗ ದಲ್ಲಿರುವ ಗಾಂದಿನಗರ ಬಡಾವಣೆಯ ಪಾರ್ಕ್) ಸಮಾಲೋಚನಾ ಸಬೆಯನ್ನು ಕರೆಯಲಾಗಿದೆ, ಸೋಮವಾರ ಸಂಜೆ, 5 ಗಂಟೆಗೆ ಆಯೋಜಿಸಿರುವ ಅಂದಿನ ಸಬೆಗೆ ತಾವು ಬನ್ನಿ ಜತೆಗೆ ಸಮಾಜಮುಖಿ ಚಿಂತನೆ ಹೊಂದಿರುವ ಇತರರಿಗೂ ವಿಷಯ ತಿಳಿಸಿ ಕರೆತನ್ನಿ. – ಕೆ. ಸಿ. ಬಸವರಾಜ್, ಸಂಚಾಲಕರು, ಚಿಂತಕರ ಚಾವಡಿ, ಮತ್ತು ವಕೀಲರು, ಶಿವಮೊಗ್ಗ. ಸಂಪರ್ಕ ದೂರವಾಣಿ – 9483003823.