Monday, August 3, 2026
Monday, August 3, 2026
Home Blog Page 2064

ಜನತೆಗೆ ಆಹಾರ ಭದ್ರತೆ : ಸುಪ್ರೀಂ ಕಳಕಳಿ

0

ಕೋವಿಡ್-19 ಸಾಂಕ್ರಾಮಿಕ ರೋಗ ಹಾಗೂ ಲಾಕ್ ಡೌನ್ ನಿಂದಾಗಿ ಬಡವರ್ಗ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ ಹೀಗಾಗಿ ಕೇಂದ್ರ ಸರ್ಕಾರ ಸಮುದಾಯ ಕ್ಯಾಂಟೀನ್ ಗಳನ್ನು ಮೂರು ವಾರಗಳಲ್ಲಿ ಆರಂಭಿಸುವಂತೆ ಗಡುವು ನೀಡಿದೆ.

ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಇಂತಹ ಸಂದರ್ಭದಲ್ಲಿ ಜನರ ಆಹಾರ ಭದ್ರತೆಯನ್ನು ನಿಗದಿಪಡಿಸಬೇಕು. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮುದಾಯಗಳನ್ನು ಸ್ಥಾಪಿಸಿ ಜನರಿಗೆ ಸಬ್ಸಿಡಿ ದರದಲ್ಲಿ ಆಹಾರ ದೊರೆಯುವಂತೆ ಮಾಡಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅನುನ್ ಧವನ್, ಇಶಾನ್ ಧವನ್ ಮತ್ತು ಕುಂಜನಾ ಸಿಂಗ್ ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಾದ-ವಿವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು ಕೇಂದ್ರ‌ ಸರ್ಕಾರ ಸಲ್ಲಿಸಿದ ಪ್ರಮಾಣ ಪತ್ರಗಳು ಮತ್ತು ಹೇಳಿಕೆಗಳನ್ನು ಗಮನಿಸಿದರೆ ಸಲಹೆಗಳನ್ನು ಕಲೆಹಾಕುವ ಪ್ರಕ್ರಿಯೆ ಇನ್ನೂ ನಡೆಯುತ್ತಿರುವಂತೆ ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.

“ಹಸಿವು ಮತ್ತು ಅಪೌಷ್ಠಿಕತೆ ಎರಡು ಭಿನ್ನ ವಿಚಾರಗಳು. ಈ ಎರಡನ್ನು ಮಿಶ್ರಣ ಮಾಡಬೇಡಿ. ಅಪೌಷ್ಟಿಕತೆಯ ಬಗ್ಗೆ ಬಂದಿರುವ ಅಂತರಾಷ್ಟ್ರೀಯ ಸೂಚ್ಯಂಕಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ನಮ್ಮ ಉದ್ದೇಶ ಇರುವುದು ದೇಶದಲ್ಲಿ ಹಸಿವು ಇಲ್ಲದಂತೆ ಮಾಡುವುದು” ಎಂದು ನ್ಯಾಯಪೀಠ ಹೇಳಿದೆ.

ಕೇಂದ್ರ ಸರ್ಕಾರ ಸಮುದಾಯ ಕ್ಯಾಂಟೀನ್ ಸ್ಥಾಪನೆಗೆ ಯೋಜನೆ ರೂಪಿಸಿದ್ದು ಇದಕ್ಕೆ ರಾಜ್ಯಗಳು ಸಹಕರಿಸಬೇಕು. ರಾಜ್ಯ ಸರ್ಕಾರಗಳಿಗೆ ಏನಾದರೂ ಆಕ್ಷೇಪ ಇದ್ದರೆ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುವುದು ಎಲ್ಲಾ ರಾಜ್ಯಗಳು ಕೇಂದ್ರದ ಜೊತೆಗೆ ಸಹಕರಿಸಬೇಕು ಎಂದು ಕೋರ್ಟ್ ತಿಳಿಸಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯಗಳು ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಈ ಸಮಯದಲ್ಲಿ ಪೀಠ ಸೂಚಿಸಿದೆ.

‘ಹಸಿವು ತಡೆಗೆ ನಾವು ಮುಂದಾದರೆ ಯಾವುದೇ ಸಂವಿಧಾನ, ಯಾವುದೇ ಕಾನೂನು ಅಥವಾ ಯಾವುದೇ ನ್ಯಾಯಾಲಯ ಬೇಡ ಎನ್ನುವುದಿಲ್ಲ. ಈಗಾಗಲೇ ವಿಳಂಬವಾಗಿದೆ. ವಿಚಾರಣೆಯನ್ನು ಪದೇಪದೇ ಮುಂದೂಡುವುದರಿಂದ ಪ್ರಯೋಜನ ಇಲ್ಲ. ರಾಜ್ಯ ಸರ್ಕಾರಗಳ ಜೊತೆಗೆ ದಯವಿಟ್ಟು ಚರ್ಚಿಸಿ ಯೋಜನೆಯನ್ನು ಅಭಿವೃದ್ಧಿಪಡಿಸಿ’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಮಾಜಿ ಸಿ. ಎಂ.ಆಸ್ತಿ ಕೇವಲ ಒಂದೇಮನೆ

0

ಅಪ್ಪಟ ಗಾಂಧಿವಾದಿ,ಸರಳತೆಯಲ್ಲೇ ಜೀವನ ಸಾಗಿಸಿದವರು, ಸಿದ್ದವನಹಳ್ಳಿ ನಿಜಲಿಂಗಪ್ಪ.
ದಿವಂಗತ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ನಿವಾಸವನ್ನು ಸ್ವಾಧೀನಪಡಿಸಿಕೊಂಡು ಅವರ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ.

ಇಂತಹ ಅಪೂರ್ವ ವ್ಯಕ್ತಿಯ ಆದರ್ಶಗಳು ಅನುಕರಣೀಯ. ಅವರು ಬಾಳಿದ ಮನೆಯನ್ನ ಸ್ಮಾರಕವಾಗಿಸಲು ಸಾರ್ವಜನಿಕರ ಒತ್ತಾಯವಿತ್ತು.
ಅದಕ್ಕೆ ಪೂರಕವಾಗಿ
ವಿಧಾನ ಪರಿಷತ್ ಸದಸ್ಯ ಶ್ರೀ ಮೋಹನ್ ಕೊಂಡಜ್ಜಿ ಸರ್ಕಾರದ ಗಮನ ಸೆಳೆದು ಪತ್ರವನ್ನೂ ಬರೆದಿದ್ದರು.

ಎಸ್ ನಿಜಲಿಂಗಪ್ಪ ಅವರ ನಿವಾಸ ಚಿತ್ರದುರ್ಗದಲ್ಲಿದೆ. ದಶಕಗಳಿಂದ ಅಲ್ಲಿನ ಜನರು ನಿಜಲಿಂಗಪ್ಪ ಅವರ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಬೇಡಿಕೆಯನ್ನು ಇಟ್ಟಿದ್ದರು. ಈಗ ಅವರ ಬೇಡಿಕೆಗೆ ಕೇಂದ್ರ ಸರ್ಕಾರವು ಮನ್ನಣೆಯನ್ನು ನೀಡಿದೆ.

ಎಸ್ ನಿಜಲಿಂಗಪ್ಪ ಅವರ ಮೊಮ್ಮಗನಿಂದ ಮನೆ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಐದು ಕೋಟಿ ರೂಗಳನ್ನು ಮಂಜೂರು ಮಾಡಲಾಗಿದೆ. ಅದರಲ್ಲಿ ಎರಡು ಕೋಟಿ ರೂಗಳನ್ನು ಮೊದಲ ಹಂತದಲ್ಲಿ ಬಿಡುಗಡೆಗೊಳಿಸಲಾಗಿದೆ.

ಎಸ್ ನಿಜಲಿಂಗಪ್ಪ ಸಮಾಧಿ ಸಮಿತಿಯ ಸದಸ್ಯರಾದ ಎಂ. ಎಲ್.ಸಿ ಮೋಹನ್ ಕೊಂಡಜ್ಜಿ ಅವರು ಮಾತನಾಡಿ ಸುಮಾರು ಎಂಟು ವರ್ಷಗಳ ಕಾಲ ಸಿಎಂ ಆಗಿದ್ದ ನಿಜಲಿಂಗಪ್ಪ ಅವರು ಕೇವಲ ಒಂದೇ ಒಂದು ಆಸ್ತಿಯನ್ನು ಹೊಂದಿದ್ದರು. ಅದು ಅವರ ಮನೆ ಮಾತ್ರ. ಚಿತ್ರದುರ್ಗದ ಜನರ ಒತ್ತಾಯದ ಮೇರೆಗೆ ನಾನು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ಅವರ ನಿವಾಸ ಸ್ಮರಣೀಯವಾಗಲಿರುವುದು ಸಂತಸದ ವಿಚಾರ ಎಂದರು.

ಚಾಲನಾಪತ್ರ ನೀಡುವಾಗ ಕಾಯಿದೆ ಪಾಲಿಸಿ

0

ವಾಹನ ಚಾಲನಾ ಪರವಾನಗಿ ನೀಡಲು ಅಗತ್ಯ ಪರೀಕ್ಷೆ ನಡೆಸುವಾಗ ‘ಮೋಟಾರು ವಾಹನ ಕಾಯಿದೆ – 1986’ ರ ಸೆಕ್ಷನ್ 15 (2) ಕಟ್ಟುನಿಟ್ಟಾಗಿ ಪಾಲಿಸುವಂತೆ ಹೈಕೋರ್ಟ್ ಸಾರಿಗೆ ಇಲಾಖೆಗೆ ಆದೇಶಿಸಿದೆ.
ಎಸ್. ಗೌರಿಶಂಕರ್ ಸಲ್ಲಿಸಿದ್ದ ಪಿಐಎಲ್ ಕುರಿತು ಮುಖ್ಯ ನ್ಯಾಯಮೂರ್ತಿಗಳಾದ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆಯನ್ನು ನಡೆಸಿತು.
ಅರ್ಜಿದಾರ ಎಸ್.ಗೌರಿಶಂಕರ್ ಖುದ್ದು ವಾದ ಮಂಡಿಸಿ, ವಾಹನ ಚಾಲನಾ ಪರವಾನಗಿ ನೀಡುವ ಮೊದಲು ನಡೆಸುವ ಪರೀಕ್ಷೆಗಳಲ್ಲಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 15ರ ನಿಯಮ ಪಾಲನೆ ಆಗುತ್ತಿಲ್ಲ. ವಾಹನ ಚಾಲನೆಯಲ್ಲಿ ಪಕ್ವತೆ ಪಡೆದುಕೊಳ್ಳದವರಿಗೂ ಪರವಾನಗಿ ನೀಡಲಾಗುತ್ತಿದೆ. ಒಂದು ಕೇಂದ್ರದಲ್ಲಿ ದಿನಕ್ಕೆ 200 ಮಂದಿಗೆ ಪರೀಕ್ಷೆ ನಡೆಸಲಾಗುತ್ತದೆ. ಇದು ಪ್ರಯೋಗಿಕವಾಗಿ ಸಾಧುವಲ್ಲ. ಹಾಗಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ವಾದ ಪ್ರತಿವಾದ ಆಲಿಸಿದ ಪೀಠ, ನಿಯಮಗಳನ್ನು ಪಾಲಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಅದನ್ನು ನಂಬದೇ ಇರಲು ಸಾಧ್ಯವಿಲ್ಲ. ಅದಾಗ್ಯೂ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 15 (2) ರೈ ಅನ್ವಯ ನೋಂದಣಿ ಪುಸ್ತಕ ನಿರ್ವಹಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನಿರ್ದೇಶನ ನೀಡುತ್ತೇವೆ ಎಂದು ಆದೇಶಿಸಿ ಅರ್ಜಿ ಇತ್ಯರ್ಥ ಪಡಿಸಿತು.

ಪುನೀತ್ ರಾಜಕುಮಾರ್:ಕರ್ನಾಟಕ ರತ್ನ ಘೋಷಣೆ

0

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಮಾನಿಗಳು ಮೇಳೈಸಿದ್ದರು.ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಯು “ಪುನೀತ ನಮನ” ಎಂಬ ಭಾವಪೂರ್ಣ ಕಾರ್ಯಕ್ರಮ ಏರ್ಪಡಿಸಿತ್ತು.ರಾಜ್ಯದ ಮುಖ್ಯಮಂತ್ರಿಗಳೇ ಅಲ್ಲದೆ ಸರ್ಕಾರದ ಸಚಿವ ಸಂಪುಟ ಸದಸ್ಯರು ಭಾಗವಹಿಸಿದ್ದರು.ವಿಶೇಷವೆಂದರೆ ದಕ್ಷಿಣ ಭಾರತದ ಅನೇಕ ಚಲನಚಿತ್ರ ನಟರು ನಮನ ಸಲ್ಲಿಸಲು ಉಪಸ್ಥಿತರಿದ್ದರು.ಸ್ಥಳಾವಕಾಶ ಮತ್ತು ಸಮಯದ ಮಿತಿಯಿಂದಾಗಿ ನಾಡಿನ ಎಲ್ಲರಿಗೂ ಈ ಕಾರ್ಯಕ್ರಮಕ್ಕೆ ಹಾಜರಿರಲು ಅವಕಾಶಮಾಡಿಕೊಡಲಾಗಲಿಲ್ಲ.ಕ್ಷಮಿಸಬೇಕು ಎಂದು ಮಂಡಳಿಯ ಪರವಾಗಿ ಶ್ರೀ ಸಾ.ರಾ.ಗೋವಿಂದು ಕೋರಿದರು.ಚಲನಚಿತ್ರ ಸಾಹಿತಿ ಕವಿ ಡಾ.ನಾಗೇಂದ್ರ ಪ್ರಸಾದ್ ಅವರು ರಚಿಸಿದ ಪುನೀತ್ ಅವರ ಕುರಿತ ಹಾಡುಎಲ್ಲರೆದೆಯನ್ನು ಕಲಕಿತು.ಹಿರಿಯಣ್ಣ ನಟ ಶಿವರಾಜ್ ಕುಮಾರ್ ಅಂತೂ ಬಿಕ್ಕಿಬಿಕ್ಕಿ ಅತ್ತರು.ಶ್ರೀಮತಿ  ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕಣ್ಮುಚ್ಚಿಕೊಂಡೇ ದುಃಖದ ಕಡಲಲ್ಲಿ ಮುಳುಗಿದ್ದರು. ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರುಪುನೀತ್ ಅವರ ಅಭಿನಯ, ವ್ಯಕ್ತಿತ್ವ, ಸಮಾಜ ಸೇವೆಯನ್ನ ಶ್ಲಾಘಿಸಿದರು.ರಾಜ್ಯ ಸರ್ಕಾರವು ಪುನೀತ್ ಅವರ ಸಮಗ್ರ ಸೇವೆಯನ್ನ ಪರಿಗಣಿಸಿ ಅವರಿಗೆಮರಣೋತ್ತರವಾಗಿ”ಕರ್ನಾಟಕ ರತ್ನ” ಪುರಸ್ಕಾರ ನೀಡುವುದಾಗಿ ಘೋಷಿಸಿದರು.ಅಷ್ಟೇ ಅಲ್ಲ ದೇಶದ ಮಟ್ಟದಲ್ಲಿ ಸಿಗಬೇಕಾಗಿರುವ ಉನ್ನತ ಪುರಸ್ಕಾರಗಳ ಬಗ್ಗೆ ಸೂಕ್ತವಾಗಿ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಮತ್ತು ‌ವಿರೋಧ ಪಕ್ಷದ ನಾಯಕ      ಶ್ರೀ ಸಿದ್ಧರಾಮಯ್ಯ ಮಾತನಾಡಿದರು.ಪುನೀತ್ ಅವರುಡಾ.ರಾಜ್ ಕುಮಾರ್ ಅವರಷ್ಟೇ ಜನಪ್ರಿಯತೆ ಗಳಿಸಿದ್ದರು.ಅವರ ಸಮಾಜ ಸೇವೆಅನುಕರಣೀಯ ಎಂದು ಬಿ.ಎಸ್.ಯಡಿಯೂರಪ್ಪ ನುಡಿದರು.ಶ್ರೀಸಿದ್ಧರಾಮಯ್ಯ ಅವರು ಮಾತನಾಡಿಪುನೀತ್ ಅವರ ನಿಧನ ನಮ್ಮ ಕುಟುಂಬದಲ್ಲಿ ಒಬ್ಬರನ್ನ ಕಳೆದುಕೊಂಡಂತೆ ದುಃಖವಾಗಿದೆ. ಈ ಭಾವನೆ ಇಡೀ ಕರ್ನಾಟಕದ ಜನತೆಯದ್ದೇ ಆಗಿದೆ ಎಂದರು.ತಮಿಳು ನಟ ವಿಶಾಲ್ ಅವರು “ಶಕ್ತಿಧಾಮದ ಹೆಣ್ಣುಮಕ್ಕಳ ಜವಾಬ್ದಾರಿ ನಾನು ವಹಿಸಿಕೊಳ್ಳುವೆ.ನನಗೊಂದು ಅವಕಾಶ ಕೊಡಿ.ಯಾವುದೇ ಪ್ರಚಾರ ಪಡೆಯಲು ನಾನು ಈ ವಿಚಾರ ಹೇಳುತ್ತಿಲ್ಲ. ಪುನೀತರ ನಗು ಸದಾ ನನ್ನ ಕಣ್ಮುಂದೆ ಇರುತ್ತದೆ ” ಎಂದರು.

ನ್ಯಾಯಮೂರ್ತಿಗಳ ಸಮ್ಮುಖ:ಲಿಖಿಂಪುರ -ಖೇರಿ ತನಿಖೆ

0

ಲಿಖಿಂಪುರ -ಖೇರಿ ಹಿಂಸಾಚಾರ ಪ್ರಕರಣದ ತನಿಖೆಯ ಉಸ್ತುವಾರಿಯನ್ನ ನಿವೃತ್ತ ನ್ಯಾಯಮೂರ್ತಿ ನಡೆಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಉತ್ತರ ಪ್ರದೇಶ ಸರ್ಕಾರ ಅದರ ಪಾಲನೆ ಮಾಡಲು ತನ್ನ ಸಮ್ಮತಿ ಸೂಚಿಸಿದೆ.
ವಿಶೇಷ ತನಿಖಾ ತಂಡವನ್ನು ( ಎಸ್ಐಟಿ) ಮೇಲ್ದರ್ಜೆಗೆ ಏರಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ನ್ಯಾಯಾಲಯವು ಸೂಚಿಸಿದೆ. ಉನ್ನತ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲು ಹೇಳಿದೆ. ಉತ್ತರಪ್ರದೇಶ ಕೇಡರ್ ನ ಐಪಿಎಸ್ ಅಧಿಕಾರಿಗಳನ್ನು ನೇಮಿಸಬೇಕು. ಆದರೆ, ಅವರು ಮೂಲತಃ ಬೇರೆ ರಾಜ್ಯದವರಾಗಿರಬೇಕು ಎಂದು ತಿಳಿಸಿದೆ.
ನಾಲ್ವರು ರೈತರು ಮತ್ತು ಒಬ್ಬ ಪತ್ರಕರ್ತನ ಮೇಲೆ ಎಸ್ ಯುವಿ ವಾಹನ ಹರಿಸಿ ಹತ್ತಿ ಹಾಗೂ ನಂತರದ ಹಿಂಸಾಚಾರದಲ್ಲಿ ಮೂವರ ಹತ್ಯೆಯು ಅಕ್ಟೋಬರ್ 3ರಂದು ಲಿಖಿಂಪುರ -ಖೇರಿಯಲ್ಲಿ ನಡೆದಿತ್ತು.
ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಯೊಬ್ಬರನ್ನು ತನಿಖೆಯ ದಿನ ನಿತ್ಯದ ಪ್ರಗತಿಯ ಉಸ್ತುವಾರಿಗೆ ನೇಮಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎಂ. ವಿ.ರಮಣ ಅವರ ನೇತೃತ್ವದ ಪೀಠವು ಹೇಳಿದೆ.
ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಉತ್ತರಪ್ರದೇಶ ಸರ್ಕಾರವನ್ನು ಸುಪ್ರೀಂಕೋರ್ಟ್ ಇದೇ 8 ರಂದು ತರಾಟೆಗೆ ತೆಗೆದುಕೊಂಡಿತ್ತು. ಪಂಜಾಬ್-ಹರಿಯಾಣ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಯನ್ನು ತನಿಖೆಯ ಪ್ರಗತಿಯ ಮೇಲೆ ನಿಗಾ ಇರಿಸಲು ನೇಮಿಸುವ ಪ್ರಸ್ತಾಪವನ್ನೂ ಮುಂದಿಟ್ಟಿತ್ತು.
ಪ್ರಕರಣದ ಪ್ರಮುಖ ಆರೋಪಿ ಯೊಬ್ಬರನ್ನು ರಕ್ಷಿಸುವುದಕ್ಕಾಗಿಯೇ ಸಾಕ್ಷ್ಯ ಸಂಗ್ರಹ ಮಾಡಿದಂತಿದೆ ಎಂದು ಅತೃಪ್ತಿ ವ್ಯಕ್ತಪಡಿಸಿತ್ತು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ, ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೀಗೆ ಹೇಳಲಾಗಿತ್ತು.

ಎಂ-ಸ್ಯಾಂಡ್ ಬಂತು : ನದಿ ಮರಳಿಗೆ ಬೆಲೆ ಇಲ್ಲ

0

ರಾಜ್ಯದಲ್ಲಿ ಮರಳಿನ ಬೇಡಿಕೆ ಮತ್ತು ಪೂರೈಕೆ ವ್ಯವಸ್ಥೆಗಳೇ ಕೃತಕ ಅಭಾವ ಸೃಷ್ಟಿಸಿ ವ್ಯವಹಾರ ಕುದುರಿಸುವ ಕಾರಣದಿಂದ ದರ ಗಗನಕ್ಕೇರಿದೆ. ಈ ವ್ಯಾಪಾರ ದಂದೆಯಾಗಿ ಮಾರ್ಪಟ್ಟಿದೆ. ನಿರ್ಮಾಣ ವಲಯ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ನದಿ ಮರಳಿನಿಂದ ಬೇಡಿಕೆ ನೀಗಿಸಲು ಎಂ-ಸ್ಯಾಂಡ್ ಪರ್ಯಾಯ ಆಯ್ಕೆಯಾಗಿದೆ. ನಿರ್ಮಾಣ ವಲಯ ಈಗ ನದಿ ಮರಳು ಆಶ್ರಯಿಸಿಲ್ಲ ಎಂದು ಭಾರತೀಯ ಬಿಲ್ಡರ್ ಗಳ ಒಕ್ಕೂಟದ ಅಧ್ಯಕ್ಷರಾಗಿರುವ ಜಿ.ಎಂ.ರವೀಂದ್ರ ಅವರು ತಿಳಿಸಿದ್ದಾರೆ.
2018ರಲ್ಲಿ 11 ಕೋಟಿ ರೂಪಾಯಿ ಹೂಡಿಕೆ ಮಾಡಿ ಮಲೇಷಿಯಾದಿಂದ 56,400 ಟನ್ ಮರಳನ್ನು ನವ ಮಂಗಳೂರು ಬಂದರಿಗೆ ತರಿಸಿದ್ದೆವು. ಟನ್ ಗೆ 2,200ರೂ. ವೆಚ್ಚವಾಗಿದೆ. ಬೇಡಿಕೆ ಇಲ್ಲದ್ದರಿಂದ ಟನ್ ಗೆ 1,400ಕ್ಕೆ ಮಾರಿದೆವು. ಅಷ್ಟೂ ಮರಳು ಖಾಲಿ ಮಾಡಲು ಎರಡು ವರ್ಷ ಬೇಕಾಯಿತು. 5ಕೋಟಿ ರೂ. ನಷ್ಟ ಆಗಿದೆ ಎಂದು ಮರಳು ಆಮದು ಮಾಡಿದ್ದ ಚೆನ್ನೈನ ಇಂಟಿಗ್ರೇಟೆಡ್ ಸರ್ವಿಸ್ ಪಾಯಿಂಟ್ ಕಂಪನಿಯ ನಿರ್ದೇಶಕರೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಗುರುತಿಸಿದ ನೈಸರ್ಗಿಕ ಮರುಳು ನಿಕ್ಷೇಪಗಳ ಪೈಕಿ 251ನ್ನು ಹರಾಜು ಮಾಡಲಾಗಿದೆ. ಉಳಿದ 102 ನಿಕ್ಷೇಪಗಳನ್ನು ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ (ಎಚ್ ಜಿಎಂಲ್) ಮತ್ತು ಕರ್ನಾಟಕ ರಾಜ್ಯ ಖನಿಜ ನಿಗಮಕ್ಕೆ ವಹಿಸಿ ಗ್ರಾಹಕರಿಗೆ ಪೂರೈಸಲು ಹೊಸ ಮರಳು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.
ಮರಳು ಗಣಿಗಾರಿಕೆಗೆ ಗುತ್ತಿಗೆ ಪಡೆದ ಸಂಸ್ಥೆಗಳ ಅವಧಿ ಮುಗಿದ ಬಳಿಕ ಆ ನಿಕ್ಷೇಪಗಳಲ್ಲಿ ಮರಳು ಗಣಿಗಾರಿಕೆ ಮತ್ತು ಸಾಗಣೆ ಹೊಣೆಯನ್ನು ಈ ಸಂಸ್ಥೆಗಳೇ ವಹಿಸಿಕೊಳ್ಳಲಿದೆ ಎಂಬ ಮಾಹಿತಿ ದೊರೆತಿದೆ.

ರಾಜ್ಯದ ಹಲವು ಜಿಲ್ಲೆಯಲ್ಲಿ ಮಳೆಯ ಅವಾಂತರ

0

ರಾಜ್ಯದಲ್ಲಿ ಕೆಲವೆಡೆ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಇದರಿಂದ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಶಿವಮೊಗ್ಗದ ನ್ಯೂ ಮಂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಒಂದು ಅಡಿ ನೀರು ನಿಂತಿದೆ. ಇದರಿಂದ ಮಕ್ಕಳಿಗೆ ಶಾಲೆಗೆ ತೆರಳು ಕಷ್ಟಕರವಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ರೈತರು ಬೆಳೆದ ರಾಗಿ ಬೆಳೆಯು ನೆಲಕ್ಕುರುಳಿದ. ಇದರಿಂದ ಅನ್ನದಾತರು ಕಂಗಾಲಾಗಿದ್ದಾರೆ.

ಹಾಸನ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಗೊರವನಹಳ್ಳಿಯಲ್ಲಿ ಮನೆಯ ಗೋಡೆ ಕುಸಿದಿದೆ. ಜೋಳ ,ರಾಗಿ ಬೆಳೆಗಳ ಕಟಾವಿಗೆ ಅಡ್ಡಿ ಉಂಟಾಗಿದೆ.

ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಜೋರು ಮಳೆ ಯಾಗಿದೆ. ಭಟ್ಕಳ, ಹೊನ್ನಾವರ, ಶಿರಸಿ ವಿವಿಧೆಡೆ ಸಾಧಾರಣ ಮಳೆಯಾಗಿದೆ.
ರಾಜ್ಯದ ಕರಾವಳಿ ಹಾಗೂ ಮಳೆನಾಡಿನ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನವೆಂಬರ್ 16 ರಿಂದ 18ರವರೆಗೆ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ಕ್ರಿಕೆಟಿಗರಿಲ್ಲದ ವಿಶ್ವತಂಡ

0

ಕ್ರೀಡೆಯಲ್ಲಿ ಯಾವುದೇ ಪೂರ್ವಗ್ರಹ ಇರಬಾರದೆಂದು ಎಲ್ಲರೂ ನಿರೀಕ್ಷಿಸುತ್ತಾರೆ. ಆದರೆ ಕ್ರಿಕೆಟ್ ಕ್ಷೇತ್ರದಲ್ಲಿ ಈ ಪೂರ್ವಗ್ರಹ ಮತ್ತೆ ಸ್ಥಾಪಿತವಾಗಿದೆಯೇನೋ ಅನಿಸುವಂತಾಗಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಟಿ – 20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ನಿರಾಶೆ ಹೊಂದಿದ್ದು ಎಲ್ಲರೂ ತಿಳಿದ ಸಂಗತಿ. ಭಾರತ ತಂಡದಲ್ಲಿ ಸಮರ್ಥ ಆಟಗಾರರು ಇದ್ದಾರೆ ಅವರಲ್ಲಿ ವಿಶ್ವ ತಂಡಕ್ಕೆ ಆಯ್ಕೆ ಆಗುವ ಸಾಮರ್ಥ್ಯ ಇಲ್ಲ ಎಂದು ಹೇಳಲಾಗದು. ಇದು ಎಲ್ಲರಿಗೂ ತಿಳಿದ ವಿಷಯ ಪ್ರಸ್ತುತ ವಿಶ್ವಕಪ್ ತಂಡ ಘೋಷಿಸಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಈ ತಂಡವನ್ನು ಆಯ್ಕೆ ಮಾಡಿದೆ. ಇದರ ನಾಯಕನಾಗಿ ಬಾಬರ್ ಅಜಂ ಪಾಕಿಸ್ತಾನ. ಆಯ್ಕೆ ಆಗಿದ್ದಾರೆ. ಮಿಕ್ಕಂತೇ ಶ್ರೀಲಂಕಾ. ಮತ್ತು ದಕ್ಷಿಣ ಆಫ್ರಿಕಾ ಮತ್ತು ಇತರ 6 ರಾಷ್ಟ್ರಗಳ ಆಟಗಾರರಿದ್ದಾರೆ. ಕೇವಲ ಸೆಮಿಫೈನಲ್ ಗೆ ಅರ್ಹತೆ ಪಡೆಯಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಭಾರತದ ಆಟಗಾರರನ್ನು ಅಸಡ್ಡೆ ಮಾಡಲಾಗಿದೆ.
ಸೂಪರ್ – 12 ರ ಮತ್ತು ನಂತರದ ಹಂತದ ಪಂದ್ಯಗಳ ಅಧಾರದಲ್ಲಿ ಆಯ್ಕೆ ಮಾಡಲಾಗಿದೆ.ಯಾವುದೇ ತಂಡದ ಆಯ್ಕೆಯಂತೆ ಈ ತಂಡವನ್ನು ಕೂಡ ಸಾಕಷ್ಟು ಚರ್ಚೆಯ ನಂತರ ಅನೇಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆರಿಸಲಾಗಿದೆ ಇದು ಭಾರಿ ಸಾವಲಿನ ಕಾರ್ಯವಾಗಿತ್ತು. ಎಂದು ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ವೆಸ್ಟ್ ಇಂಡೋ ಸನ್ ಮಾಜಿ ವೇಗದ ಬೌಲರ್ ಇಯಾನ್ ಬಿಷಪ್ ಅಭಿಪ್ರಾಯಪಟ್ಟಿದ್ದಾರೆ.
ಇವರ ಅಭಿಪ್ರಾಯವನ್ನು ನಾವುಗಳು ನೋಡಿದಾಗ ಎಷ್ಟು ಸತ್ಯ ಮತ್ತು ಎಷ್ಟು ಸುಳ್ಳು ಎಂಬುವುದನ್ನು ಸಂಶಯಪಡುವಂತಾಗಿದೆ.
ಆಯ್ಕೆಯಾದ ವಿಶ್ವಕಪ್ ತಂಡಗಳ ಆಟಗಾರರ ಪಟ್ಟಿ ಇಂತಿದೆ
ಡೇವಿಡ್ ವಾರ್ನರ್ ಆಸ್ಟ್ರೇಲಿಯಾ. ಜೋಸ್ ಬಟ್ಲರ್ ವಿಕೆಟ್ ಕೀಪರ್ . ಇಂಗ್ಲೆಂಡ್. ಬಾಬರ್ ಅಜಂ. ನಾಯಕ . ಪಾಕಿಸ್ತಾನ . ಚರಿತ್ ಆಸಲಂಕಾ ಶ್ರೀಲಂಕಾ. ಏಡನ್ ಮರ್ಕಾಮ್ ದಕ್ಷಿಣ ಆಫ್ರಿಕಾ. ಮೋಯಿನ್ ಅಲಿ ಇಂಗ್ಲೆಂಡ್ . ವಾಣಿಂದು ಹಸರಂಗ ಶ್ರೀಲಂಕಾ. ಯಾಡಾo ಜಂಪಾ ಆಸ್ಟ್ರೇಲಿಯಾ. ಜೋಶ್ ಕ್ರೀಡೆಯಲ್ಲಿ ಯಾವುದೇ ಪೂರ್ವಗ್ರಹ ಇರಬಾರದೆಂದು ಎಲ್ಲರೂ ನಿರೀಕ್ಷಿಸುತ್ತಾರೆ. ಆದರೆ ಕ್ರಿಕೆಟ್ ಕ್ಷೇತ್ರದಲ್ಲಿ ಈ ಪೂರ್ವಗ್ರಹ ಮತ್ತೆ ಸ್ಥಾಪಿತವಾಗಿದೆಯೇನೋ ಅನಿಸುವಂತಾಗಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಟಿ – 20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ನಿರಾಶೆ ಹೊಂದಿದ್ದು ಎಲ್ಲರೂ ತಿಳಿದ ಸಂಗತಿ. ಭಾರತ ತಂಡದಲ್ಲಿ ಸಮರ್ಥ ಆಟಗಾರರು ಇದ್ದಾರೆ ಅವರಲ್ಲಿ ವಿಶ್ವ ತಂಡಕ್ಕೆ ಆಯ್ಕೆ ಆಗುವ ಸಾಮರ್ಥ್ಯ ಇಲ್ಲ ಎಂದು ಹೇಳಲಾಗದು. ಇದು ಎಲ್ಲರಿಗೂ ತಿಳಿದ ವಿಷಯ ಪ್ರಸ್ತುತ ವಿಶ್ವಕಪ್ ತಂಡ ಘೋಷಿಸಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಈ ತಂಡವನ್ನು ಆಯ್ಕೆ ಮಾಡಿದೆ. ಇದರ ನಾಯಕನಾಗಿ ಬಾಬರ್ ಅಜಂ ಪಾಕಿಸ್ತಾನ. ಆಯ್ಕೆ ಆಗಿದ್ದಾರೆ. ಮಿಕ್ಕಂತೇ ಶ್ರೀಲಂಕಾ. ಮತ್ತು ದಕ್ಷಿಣ ಆಫ್ರಿಕಾ ಮತ್ತು ಇತರ 6 ರಾಷ್ಟ್ರಗಳ ಆಟಗಾರರಿದ್ದಾರೆ. ಕೇವಲ ಸೆಮಿಫೈನಲ್ ಗೆ ಅರ್ಹತೆ ಪಡೆಯಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಭಾರತದ ಆಟಗಾರರನ್ನು ಅಸಡ್ಡೆ ಮಾಡಲಾಗಿದೆ.
ಸೂಪರ್ – 12 ರ ಮತ್ತು ನಂತರದ ಹಂತದ ಪಂದ್ಯಗಳ ಅಧಾರದಲ್ಲಿ ಆಯ್ಕೆ ಮಾಡಲಾಗಿದೆ.ಯಾವುದೇ ತಂಡದ ಆಯ್ಕೆಯಂತೆ ಈ ತಂಡವನ್ನು ಕೂಡ ಸಾಕಷ್ಟು ಚರ್ಚೆಯ ನಂತರ ಅನೇಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆರಿಸಲಾಗಿದೆ ಇದು ಭಾರಿ ಸಾವಲಿನ ಕಾರ್ಯವಾಗಿತ್ತು. ಎಂದು ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ವೆಸ್ಟ್ ಇಂಡೋ ಸನ್ ಮಾಜಿ ವೇಗದ ಬೌಲರ್ ಇಯಾನ್ ಬಿಷಪ್ ಅಭಿಪ್ರಾಯಪಟ್ಟಿದ್ದಾರೆ.
ಇವರ ಅಭಿಪ್ರಾಯವನ್ನು ನಾವುಗಳು ನೋಡಿದಾಗ ಎಷ್ಟು ಸತ್ಯ ಮತ್ತು ಎಷ್ಟು ಸುಳ್ಳು ಎಂಬುವುದನ್ನು ಸಂಶಯಪಡುವಂತಾಗಿದೆ.
ಆಯ್ಕೆಯಾದ ವಿಶ್ವಕಪ್ ತಂಡಗಳ ಆಟಗಾರರ ಪಟ್ಟಿ ಇಂತಿದೆ
ಡೇವಿಡ್ ವಾರ್ನರ್ ಆಸ್ಟ್ರೇಲಿಯಾ. ಜೋಸ್ ಬಟ್ಲರ್ ವಿಕೆಟ್ ಕೀಪರ್ . ಇಂಗ್ಲೆಂಡ್. ಬಾಬರ್ ಅಜಂ. ನಾಯಕ . ಪಾಕಿಸ್ತಾನ . ಚರಿತ್ ಆಸಲಂಕಾ ಶ್ರೀಲಂಕಾ. ಏಡನ್ ಮರ್ಕಾಮ್ ದಕ್ಷಿಣ ಆಫ್ರಿಕಾ. ಮೋಯಿನ್ ಅಲಿ ಇಂಗ್ಲೆಂಡ್ . ವಾಣಿಂದು ಹಸರಂಗ ಶ್ರೀಲಂಕಾ. ಯಾಡಾo ಜಂಪಾ ಆಸ್ಟ್ರೇಲಿಯಾ. ಜೋಶ್ ಹ್ಯಾಜಿಲ್ ವುಡ್ ಆಸ್ಟ್ರೇಲಿಯಾ. ಟೆಂಪ್ ಬೌಲ್ಟ್ ನ್ಯೂಜಿಲೆಂಡ್. ಎನ್ರಿಚ್ ನಾರ್ಕಿಯಾ ದಕ್ಷಿಣಾ ಆಫ್ರಕಾ . ಶಹಿಬ್ ಶಾ ಅಫ್ರಿದ್ ಪಾಕಿಸ್ತಾನ.ಹ್ಯಾಜಿಲ್ ವುಡ್ ಆಸ್ಟ್ರೇಲಿಯಾ. ಟೆಂಪ್ ಬೌಲ್ಟ್ ನ್ಯೂಜಿಲೆಂಡ್. ಎನ್ರಿಚ್ ನಾರ್ಕಿಯಾ ದಕ್ಷಿಣಾ ಆಫ್ರಕಾ . ಶಹಿಬ್ ಶಾ ಅಫ್ರಿದ್ ಪಾಕಿಸ್ತಾನ.

ವಿಶ್ವಕಪ್ : ಭಾರತೀಯ ಹಾಕಿ ಜೂನಿಯರ್ ಮಹಿಳಾ ತಂಡ

0

ವಿಶ್ವಕಪ್ ಹಾಕಿ ಮಹಿಳಾ ಟೂರ್ನಿಯು ದಕ್ಷಿಣಾ ಆಫ್ರಿಕಾದಲ್ಲಿ ಡಿಸೆಂಬರ್ 5 ರಿಂದ ಆರಂಭವಾಗಲಿದೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತದ 18 ಆಟಗಾರ್ತಿಯರಿರುವ ತಂಡವನ್ನು ಪ್ರಕಟಿಸಲಾಗಿದೆ
ಆಟಗಾರ್ತಿಯರ ಪಟ್ಟಿ ಪ್ರಕಟ.
ಲಾಲ್ ರೆಮ್ಸಿಯಾಮಿ ನಾಯಕಿ. ಇಶಿಕಾ ಚೌಧರಿ ಉಪನಾಯಕಿ. ಬಿಚು ದೇವಿ ಖರಿಬಮ್. ಮತ್ತು ಖುಷ್ಟು ಇವರಿಬ್ಬರೂ ಗೋಲ್ ಕೀಪರ್. ಅಕ್ಷತಾ ಅಬಾಸೊ ಧೇಖಾಲೆ. ಪ್ರಿಯಾಂಕ. ಮರೀನಾ ಲಾಲ್ ರಮಘಾಕಿ. ಅಜ್ಮಿನಾ ಕುಜೂರ್. ಬಲ್ಜಿತ್ ಕೌರ್ . ರೀತ್. ವೈಷ್ಣವಿ ವಿಟ್ಕಲ್ ಫಾಲ್ಮೆ. ಸಲೀಮಾ ಟೆಟೇ. ಶರ್ಮೀಳಾ ದೇವಿ. ಬ್ಯೂಟಿ ಡoಗ್ ಡoಗ್. ದೀಪಿಕಾ. ಮುಮ್ತಾಜ್ ಖಾನ್. ಸಂಗೀತಾ ಕುಮಾರಿ. ಜೀವನ್ ಕಿಶೋರ್ ಟೂಪ್ಪೂ.
ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಸೀನಿಯರ್ ಮಹಿಳಾ ಹಾಕಿ ತಂಡದಲ್ಲಿ ಅಡಿದ್ದ ಲಾಲ್ ರೆಮ್ಸಿಯಾಮಿ ಅವರು ಎಫ್ ಐ ಎಚ್ ವಿಶ್ವಕಪ್ ನಲ್ಲಿ ದೇಶದ ಜೂನಿಯರ್ ತಂಡವನ್ನು ಮುನ್ನಡೆಸಲಿದ್ದಾರೆ.
21 ವರ್ಷದ ಲಾಲ್ ರೆಮ್ಸಿಯಾಮಿ ತಂಡದ ನಾಯಕತ್ವ ವಹಿಸಿದ್ದರೆ. ಇಶೀಕಾ ಚೌಧರಿ ಉಪನಾಯಕಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ. ಟೋಕಿಯೋ ಕೂಟದಲ್ಲಿ ಆಡಿದ್ದ ಸಲೀಮಾ ಟೆಟೆ ಹಾಗೂ ಶರ್ಮಿಳಾ ದೇವಿ ಕೂಡ ಜೂನಿಯರ್ ತಂಡದ ಪರಕಣಕ್ಕಿಳಿಯಲ್ಲಿದ್ದಾರೆ.
ಪ್ರೀತಿ ಮತ್ತು ಪ್ರಭಾಲಿಟ್ ಕೌರ್ ಅವರನ್ನು ಕಾಯ್ದಿರಿಸಿದ ಆಟಗಾರ್ತಿಯರಾಗಿ ತಂಡದೊಂದಿಗೆ ತೆರಳಲಿದ್ದಾರೆ.
ವಿಶ್ವದ ಪ್ರಮುಖ 16 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು 2016 ರ ಟೂರ್ನಿಯಲ್ಲಿ ಅರ್ಜೆಂಟೀನಾ ಚಾಂಪಿಯನ್ ಆಗಿತ್ತು.
2013 ರ ಅವೃತ್ತಿಯಲ್ಲಿ ಇಂಗ್ಲೆಂಡ್ ಅನ್ನು ಮಣಿಸಿ ಕಂಚಿನ ಪದಕ ಗೆದ್ದಿದ್ದು ಭಾರತ ಜೂನಿಯರ್ ತಂಡದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಈ ಭಾರಿ ತಂಡವು .ಸಿ. ಗುಂಪಿನಲ್ಲಿ ಸ್ಥಾನ ಪಡೆದಿದ್ದು ಡಿಸೆಂಬರ್ 6 ರಂದು ಮೊದಲ ಪಂದ್ಯದಲ್ಲಿ ರಷ್ಯಾ ತಂಡವನ್ನು ಎದುರಿಸಲಿದೆ.

ಸಗಟು ಹಣದುಬ್ಬರಕ್ಕೆ ಇಂಧನ ಬೆಲೆ ಆಧಾರ

0

ಸಗಟು ಹಣದುಬ್ಬರವು ಏಪ್ರಿಲ್ ನಿಂದ ಈವರೆಗೆ ಸತತ ಏಳನೇ ತಿಂಗಳಿನಲ್ಲಿಯೂ ಎರಡಂಕಿ ಮಟ್ಟದಲ್ಲಿಯೇ ಇದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಶೇಕಡ 10.66ರಷ್ಟು ಇತ್ತು. ಇದಕ್ಕೆ ಹೋಲಿಸಿದರೆ ಶೇ. 1.88 ರಷ್ಟು ಹೆಚ್ಚಾಗಿದೆ. 2020 ರ ಅಕ್ಟೋಬರ್ ನಲ್ಲಿ ಇದ್ದ ಶೇಕಡ 1.31ಕ್ಕೆ ಹೋಲಿಸಿದರೆ ಶೇ.11. 23ರಷ್ಟು ಏರಿಕೆಯಾಗಿದೆ.
ತಯಾರಿಕಾ ಉತ್ಪನ್ನಗಳು ಮತ್ತು ಕಚ್ಚಾ ಪೆಟ್ರೋಲಿಯಂ ಬೆಲೆಯಲ್ಲಿ ಏರಿಕೆ ಆಗಿರುವುದೇ ಅಕ್ಟೋಬರ್ ನಲ್ಲಿ ಸಗಟು ಹಣದುಬ್ಬರವು ಈ ಪ್ರಮಾಣದಲ್ಲಿ ಏರಿಕೆ ಆಗಲು ಕಾರಣ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವಾರ ಸರ್ಕಾರವು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಗ್ರಾಹಕ ದರ ಸೂಚ್ಯಂಕ ಆಧರಿಸಿ ( ಸಿಪಿಐ) ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ನಲ್ಲಿ ಶೇಕಡ 4.48ರಷ್ಟಾಗಿದೆ. ಸೆಪ್ಟೆಂಬರ್ ನಲ್ಲಿ ಇದು ಶೇ. 4.35ರಷ್ಟು ಇತ್ತು. ತಯಾರಿಕಾ ವೆಚ್ಚ, ಇಂಧನ ಮತ್ತು ಸರಕುಗಳ ಬೆಲೆ ಏರಿಕೆಯಿಂದಾಗಿ ಆಹಾರ ವಸ್ತುಗಳ ಬೆಲೆ ಹೆಚ್ಚಾಗಿದೆ.
ಇದರಿಂದಾಗಿ ಚಿಲ್ಲರೆ ಹಣದುಬ್ಬರವೂ ಹೆಚ್ಚಾಗಿದೆ ಎಂಬ ಮಾಹಿತಿ ದೊರೆತಿದೆ.
ಬೇಡಿಕೆಯು ಸುಧಾರಿಸುತ್ತಿದೆ. ಇಂಧನಗಳ ಮೇಲಿನ ತೆರಿಗೆ ಕಡಿತವು ತುಸು ಸಮಾಧಾನ ನೀಡಿದ್ದರೂ, ಕಂಪನಿಗಳು ತಮ್ಮ ತಯಾರಿಕೆ ಮತ್ತು ಸಾಗಣೆಗಳನ್ನು ವರ್ಗಾಯಿಸಲು ಆರಂಭಿಸಿವೆ. ಮುಂಬರುವ ತಿಂಗಳುಗಳಲ್ಲಿ ಸಗಟು ಹಣದುಬ್ಬರವು ತಗ್ಗುವ ನಿರೀಕ್ಷೆ ಇದೆ.
2021 ರ ಮಾರ್ಚ್ ವೇಳೆಗೆ ಶೇ.7.5 ರಿಂದ ಶೇ.8.5 ರ ಮಟ್ಟ ದಲ್ಲಿ ಇರುವ ಅಂದಾಜು ಮಾಡಲಾಗಿದೆ ಎಂದು ಐಸಿಆರ್ ಎ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್ ಹೇಳಿದ್ದಾರೆ.