Monday, August 3, 2026
Monday, August 3, 2026
Home Blog Page 2063

ಹ್ಯಾಕರ್ ಶ್ರೀಕಿಯ ಚಮತ್ಕಾರ

0

ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಬಿಟ್ ಕಾಯಿನ್ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಆರೋಪಿ ಹ್ಯಾಕರ್ ಶ್ರೀಕಿಯ ಚಮತ್ಕಾರ ಹೊರಬಿದ್ದಿದೆ. ಒಂದೇ ಲ್ಯಾಪ್ಟಾಪ್ನಲ್ಲಿ ಬಿಟ್ ಕಾಯಿನ್ ಗಳ ಅಕೌಂಟ್ಗೆ ಪ್ರವೇಶಿಸಲು ಬಳಸುವ 76 ಲಕ್ಷ ಪ್ರೈವೇಟ್ ಕೀ ಮತ್ತು ಹಲವು ಡಿಜಿಟಲ್ ವ್ಯಾಲೆಟ್ ಗಳು ಇದ್ದವು ಎಂಬುದನ್ನು ವಿಧಿವಿಜ್ಞಾನ ವಿಶ್ಲೇಷಣಾ ವರದಿ ತಿಳಿಸಿದೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ಕೋರಿಕೆಗೆ ಸೈಬರ್ ತಂತ್ರಜ್ಞರು ಶ್ರೀಕಿಯ ಲ್ಯಾಪ್ ಟಾಪ್ ಅನ್ನು ಪರಿಶೀಲನೆಗೆ ಒಳಪಡಿಸಿದ್ದರು. ಶ್ರೀಕಿ ಹೊಂದಿದ್ದ ಕ್ಲೌಡ್ ಅಕೌಂಟ್ ‘ಕ್ಲೌಡ್ ಅಕೌಂಟ್’ ಒಂದನ್ನು ಪರಿಶೀಲಿಸಿದಾಗ 27-ಇ ವ್ಯಾಲೆಟ್ಗಳು, ಲಕ್ಷಗಟ್ಟಲೆ ಪ್ರೈವೇಟ್ ಕೀಗಳು ಹಾಗೂ ವಿಳಾಸಗಳು ಪತ್ತೆಯಾಗಿದ್ದವು. ಹ್ಯಾಕರ್ ಶ್ರೀಕಿ ‘ಬಿಟ್ ಕಾಯಿನ್ ಕೇರ್’ ಎಂಬ ತಂತ್ರಜ್ಞಾನವನ್ನೇ ಹ್ಯಾಕ್ ಮಾಡಿ. ತನ್ನ ಹಿಡಿತಕ್ಕೆ ತೆಗೆದುಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಹ್ಯಾಕರ್ ಶ್ರೀಕಿ ಬಿಟ್ ಕಾಯಿನ್ ತನಿಖಾಧಿಕಾರಿಗಳ ದಿಕ್ಕುತಪ್ಪಿಸಲು ‘ಬಿಟ್ ಕಾಯಿನ್ ಕೇರ್’ ತಂತ್ರಾಶವನ್ನೇ ಹ್ಯಾಕ್ ಮಾಡಿ ತಿರುಚಿರುವ ಸಾಧ್ಯತೆ ಇದೆ ಎಂಬ ಅನುಮಾನವನ್ನು ಸೈಬರ್ ತಂತ್ರಜ್ಞರು ವ್ಯಕ್ತಪಡಿಸಿದ್ದಾರೆ.

ಅಭಿನವ್ ಅಬ್ಬರ ಬ್ಯಾಟಿಂಗ್ : ಕರ್ನಾಟಕ ಕ್ಕೆ ಜಯ

0

ಸೈಯದ್ ಮುಸ್ತಾಕ್ ಅಲಿ ಟಿ – 20 ಟೂರ್ನಿಯು ಪಂದ್ಯ ಸೌರಾಷ್ಟ್ರ ಮತ್ತು ಕರ್ನಾಟಕ ತಂಡಗಳ ನಡುವೆ ನಡೆಯಿತು. ಸೌರಾಷ್ಟ್ರ ವಿರುದ್ಧ ಕರ್ನಾಟಕ ರೋಚಕ ಜಯ ಸಾಧಿಸಿತು.
ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಾಗಿ ನಡೆಯಿತು. ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಡಿದ ಸೌರಾಷ್ಟ್ರ ತಂಡವು ಶೆಲ್ಡನ್ ಜಾಕ್ಸನ್ 43 ಎಸೆತಗಳಲ್ಲಿ 53 ರನ್ ಗಳಿಸಿ ಅರ್ಧಶತಕ ಭಾರಿಸಿದರು. ಇವರ ಅಬ್ಬರದ ಬ್ಯಾಟಿಂಗ್ ನಿಂದ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು.
146 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಆಡಿದ ಕರ್ನಾಟಕ ಕೇವಲ 2 ಎಸೆತ ಉಳಿದಿದೆ ಎನ್ನುವಾಗ ಕ್ರೀಡಾಂಗಣದ ಪ್ರೇಕ್ಷಕರನ್ನು ಉಸಿರು ಬಿಗಿಹಿಡಿಯುವಂತೆ ಮಾಡಿತು. ದಿಟ್ಟತನದ ಬ್ಯಾಟಿಂಗ್ ಪ್ರದರ್ಶಿಸಿದ ಅಭಿನವ್ ಅಂತಿಮ ಓವರ್ ನ 5 ನೇ ಎಸೆತದಲ್ಲಿ ಭರ್ಜರಿ ಬೌಂಡರಿ ಹೊಡೆದರು. ಇದರಿಂದಾಗಿ 19 .5 ಓವರ್ ಗಳಲ್ಲಿಯೇ 8 ವಿಕೆಟ್ ಗಳಿಗೆ 150 ರನ್ ಬಾರಿಸಿ ರೋಚಕ ಜಯ ಸಾಧಿಸಿತು.
ಕರ್ನಾಟಕ ತಂಡ ರನ್ ಪಡೆಯುತ್ತಾ ಹೋದಂತೆ ಸೌರಾಷ್ಟ್ರ ದ ಅನುಭವಿ ಎಡಗೈ ಮದ್ಯಮವೇಗಿ ಜಯದೇವ್ ಉನದ್ಕಟ್ ಪೆಟ್ಟು ಕೊಟ್ಟರು. ಇದರಿಂದಾಗಿ ಕರ್ನಾಟಕ ಕೇವಲ 34 ರನ್ ಗಳಾಗುವಷ್ಟರಲ್ಲಿ 3 ವಿಕೆಟ್ ಗಳನ್ನ ಕಳೆದುಕೊಂಡಿತು.
ಈ ಹಂತದಲ್ಲಿ ಒಂದೆಡೆ ವಿಕೆಟ್ ಗಳು ಪತನವಾಗುತ್ತಿದ್ದರೆ, 5 ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿದ ಅಭಿನವ್ ಮನೋಹರ್ ತಮ್ಮ ರನ್ ವೇಗಕ್ಕೆ ಕಡಿವಾಣ ಹಾಕಲಿಲ್ಲ. ದಿಟ್ಟತನದಿಂದ ತಮ್ಮ ಪಾದಾರ್ಪಣೆ ಪಂದ್ಯದಲ್ಲಿಯೇ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. 49 ಎಸೆತಗಳಲ್ಲಿ 70 ರನ್ ಗಳಿಸಿ ಸೌರಾಷ್ಟ್ರದ ಬೌಲರ್ಗಳನ್ನು ಹೌಹಾರಿದವರಂತೆ ಮಾಡಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು. ಕರ್ನಾಟಕ ತಂಡವು ಸಯ್ಯದ್ ಮುಷ್ತಾಕ್ ಅಲಿ ಟಿ – 20 ಕ್ರಿಕೆಟ್ ಟೂರ್ನಿಯ 8 ರ ಘಟ್ಟಕ್ಕೆ ಏರಿ ಮತ್ತು ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಕಾರಣರಾದರು.
ಸೌರಾಷ್ಟ್ರದ ಜಯದೇವ್ 4 ವಿಕೆಟ್ ಗಳಿಸಿದರು ಕೂಡ ತಂಡಕ್ಕೆ ಜಯದ ಕಾಣಿಕೆ ಸಾಧ್ಯವಾಗಲಿಲ್ಲ.
ಕರ್ನಾಟಕ ತಂಡದ ವಿ.ಕೌಶಿಕ್ . ವೈಶಾಖ್ ವಿಜಯ್ ಕುಮಾರ್. ಮತ್ತು ಕೆ.ಸಿ. ಕಾರ್ಯಪ್ಪ.ತಲಾ 2 ವಿಕೆಟ್ ಗಳಿಸಿದರು. ದೇವದತ್ತ ಪಡಿಕ್ಕಲ್. ಆರ್. ಸಮರ್ಥ್ ಮತ್ತು ಕೆ . ಗೌತಮ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಕರ್ನಾಟಕ ಕ್ವಾರ್ಟರ್ ಫೈನಲ್ ನಲ್ಲಿ ಬಂಗಾಳ ತಂಡವನ್ನು ಎದುರಿಸಲಿದೆ.

ಪೂರ್ವಾಂಚಲ್ ಎಕ್ಸ್ ಪ್ರೆಸ್ ಹೆದ್ದಾರಿ: ಪ್ರಗತಿಗೆ ಬೆಸುಗೆ

0

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವಾಂಚಲ್ ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದ್ದಾರೆ.

2017ರಲ್ಲಿ ಉತ್ತರಪ್ರದೇಶದಲ್ಲಿ 6 ಹೆದ್ದಾರಿಗಳನ್ನು ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿತ್ತು. ಈ ಪೈಕಿ ಉತ್ತರಪ್ರದೇಶದ ಪೂರ್ವಾಂಚಲ ಹೆದ್ದಾರಿಯು ಉದ್ಘಾಟನೆಯಾದ ಮೊದಲ ಯೋಜನೆಯಾಗಿದೆ.

ಪೂರ್ವಾಂಚಲ್ ಎಕ್ಸ್ ಪ್ರೆಸ್ ಹೆದ್ದಾರಿಯ ಉದ್ಘಾಟನೆ ಬಳಿಕ, ಸುಲ್ತಾನ್ ಪುರದಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದರು. “ಆರು ಪಥಗಳ ಪೂರ್ವಾಂಚಲ ಎಕ್ಸ್ಪ್ರೆಸ್ ಹೆದ್ದಾರಿಯು ಉತ್ತರ ಪ್ರದೇಶದ ಪೂರ್ವಭಾಗದ ಜೀವನಾಡಿಯಾಗಲಿದೆ. ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಲಿದೆ. ಹೆದ್ದಾರಿಯು ವಾಯುಪಡೆಗೆ ಶಕ್ತಿ ತುಂಬಲಿದೆ” ಎಂದು ಪ್ರಧಾನಿ ತಿಳಿಸಿದ್ದಾರೆ.

ಈ ಹೆದ್ದಾರಿಯು 341 ಕಿ. ಮೀ ಉದ್ದದ ಮಾರ್ಗವನ್ನು ಹೊಂದಿದೆ. 22,500 ಕೋಟಿ ವೆಚ್ಚವಾಗಿದೆ. ಉತ್ತರ ಪ್ರದೇಶದ ಪೂರ್ವ-ಪಶ್ಚಿಮ ಭಾಗಗಳಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ. ಲಖನೌ, ಗಾಜಿಪುರ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಾಗಿದೆ. ಉತ್ತರಪ್ರದೇಶದ 8 ಜಿಲ್ಲೆಗಳಲ್ಲಿ ಈ ಮಾರ್ಗ ಹಾದು ಹೋಗುತ್ತದೆ.

ಈಗಾಗಲೇ ಇರುವ ಆಗ್ರಾ,ಲಖನೌ ಹೆದ್ದಾರಿಯನ್ನು ಇದು ಸಂಪರ್ಕಿಸುತ್ತದೆ. ರಾಜ್ಯದ ಪೂರ್ವ ಭಾಗವು ಪಶ್ಚಿಮ ಭಾಗದ ಜೊತೆ ಬೆಸೆಯುತ್ತದೆ.

ಈ ಭಾಗ ಬೃಹತ್ ಕೈಗಾರಿಕಾ ಕಾರಿಡಾರ್ ಆಗಿ ಬದಲಾಗಲಿದೆ. ಉದ್ಯೋಗದ ಅವಕಾಶಗಳು ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.

ಪುನೀತರನ್ನ ಪರಿಪರಿಯಾಗಿ ನೆನೆದ ಜನಮನ

0

ಕನ್ನಡ ಚಲನಚಿತ್ರದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ತುಂಬಲಾರದ ನಷ್ಟ. ಉಸಿರು ಅಳಿದ ಬಳಿಕವು ಹೆಸರು ಉಳಿಸಿಕೊಳ್ಳುವ ವ್ಯಕ್ತಿಗಳು ಬಹಳ ಅಪರೂಪ ಪುನೀತ್ ಅವರ ವ್ಯಕ್ತಿತ್ವ ಅದಕ್ಕೊಂದು ಮಾದರಿ. ಪುನೀತ್ ರಾಜಕುಮಾರ್ ಅವರ ನಟನೆ ಹಾಗೂ ಸಾಮಾಜಿಕ ಸೇವೆಗೆ ಮರಣೋತ್ತರ ಪ್ರಶಸ್ತಿಗಳ ಮಹಾಪೂರವೇ ಹರಿದುಬರುತ್ತಿದೆ.

ಕರ್ನಾಟಕ ರತ್ನ ಪ್ರಶಸ್ತಿ, ಬಸವ ಶ್ರೀ ಪ್ರಶಸ್ತಿ, ಸಿದ್ದಶ್ರೀ ಪ್ರಶಸ್ತಿಗೆ ಪುನೀತ್ ರಾಜಕುಮಾರ್ ಅವರು ಭಾಜನರಾಗಿದ್ದಾರೆ. ಅಲ್ಲದೆ ರಾಜ್ಯದ ಸಾಮಾನ್ಯ ಜನರಿಂದ ಹಿಡಿದು ಗಣ್ಯಾತಿಗಣ್ಯರೆಲ್ಲರೂ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲೇಬೇಕೆಂದು ಒತ್ತಾಯ ಹೇರುತ್ತಿದ್ದಾರೆ. ಪುನೀತ್ ಅವರ ನಟನೆಯ ಸಾಧನೆಯ ಜೊತೆಗೆ ಸಮಾಜದ ಮೇಲೆ ಅವರಿಗಿದ್ದ ಕಳಕಳಿಯನ್ನು ನಮ್ಮ ಜನತೆ ಎಷ್ಟು ಮೆಚ್ಚಿದೆ ಎಂದು ಇದರಿಂದ ತಿಳಿಯುತ್ತದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ “ಪುನೀತ್ ನಮನ” ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಚಲನಚಿತ್ರದ ದಿಗ್ಗಜರು ಪಾಲ್ಗೊಂಡಿದ್ದರು. ಅಲ್ಲದೆ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ನಾಯಕರು ಭಾಗಿಯಾಗಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ನಾಯಕರು ಭಾಗಿಯಾಗಿದ್ದದ್ದು ಒಂದುದು ವಿಶೇಷ.

ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ ಪುನೀತ್ ಅವರ ‘ಬೆಟ್ಟದ ಹೂವು’ ಚಿತ್ರದ ಅಮೋಘ ನಟನೆಗೆ ಕೇಂದ್ರ ಸರ್ಕಾರ ‘ಅತ್ಯುತ್ತಮ ಬಾಲ್ಯ ನಟ ಪ್ರಶಸ್ತಿ’ ನೀಡಿದೆ ಹಾಗೂ ತಾವು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರ ಚಿತ್ರವೊಂದಕ್ಕೆ ರಾಜ್ಯ ಸರ್ಕಾರ ‘ಅತ್ಯುತ್ತಮ ನಟ ಪ್ರಶಸ್ತಿ’ ನೀಡಿದ್ದನ್ನು ನೆನಪಿಸಿಕೊಂಡರು. ಡಾ.ರಾಜಕುಮಾರ್ ನಿಧನರಾದ ಸಮಯದಲ್ಲಿ ಯಾವ ರೀತಿಯಲ್ಲಿ ಜನ ತಮ್ಮ ದುಃಖ ಮತ್ತು ನಮನವನ್ನು ವ್ಯಕ್ತಪಡಿಸಿದ್ದರೋ, ಅದೇ ರೀತಿ ಪುನೀತ್ ನಿಧನದ ಸಂದರ್ಭದಲ್ಲಿ ಕೂಡ ಜನತೆ ಪ್ರೀತಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪುನೀತ್ ದೊಡ್ಡ ಹೆಜ್ಜೆ ಬಿಟ್ಟು ಹೋಗಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಕೊಡಿಸಲು ಮುಖ್ಯಮಂತ್ರಿಯವರು ಎಲ್ಲಾ ಪ್ರಯತ್ನ ಮಾಡಬೇಕು ಎಂದು ಒತ್ತಾಯ ಮಾಡಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ ಚಿತ್ರರಂಗಕ್ಕೆ ಬರುವವರಿಗೆ ಪುನೀತ್ ಹೆಸರಿನಲ್ಲಿ ಒಂದು ತರಬೇತಿ ಸಂಸ್ಥೆ ಅಥವಾ ಸ್ಟುಡಿಯೋ ಸ್ಥಾಪಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ದಕ್ಷಿಣ ಭಾರತದ ಚಲನಚಿತ್ರ ನಟ ಶರತ್ ಕುಮಾರ್ ಮಾತನಾಡಿ ಈ ನಾಡು ನನಗೆ ಯಾವಾಗಲೂ ಹತ್ತಿರ. ಪುನೀತ್ ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ನಾವು ಮಾದರಿಯಾಗಿ ಇಟ್ಟುಕೊಳ್ಳೋಣ ಎಂದರು.
ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ಅವರು ಮಾತನಾಡಿ “ಹಿಂದೆ ಇಲ್ಲೇ ನಡೆದ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ನನ್ನ ಆಯಸ್ಸು ನಿನಗೆ ಕೊಡ್ತೀನಿ ಎಂದು ಪುನೀತ್ ಗೆ ಹೇಳಿದ್ದೆ…. ಇಲ್ಲ… ಆಗ್ತಾಯಿಲ್ಲ. ನನ್ನನ್ನು ಅಲ್ಲಿಗೆ ಕಳಿಸಿ, ಅವನನ್ನು ಇಲ್ಲಿಗೆ ಕರೆಸಿಕೊಳ್ಳಿ” ಎಂದು ಭಾವತೀವ್ರತೆಯಿಂದ ಮಾತನಾಡಿದರು. ಮುಂದೆ ಮಾತುಗಳೇ ಹೊರಡದೆ ದುಃಖತಪ್ತರಾದರು.

ಹಿರಿಯಣ್ಣ ನಟ ಶಿವರಾಜ್ ಕುಮಾರ್ ಮಾತನಾಡಿ “ಇಲ್ಲಿ ಮಾತನಾಡಲು ನನಗೆ ತುಂಬಾ ಕಷ್ಟ ಆಗ್ತುತ್ತಿದೆ. ನನ್ನ ತಮ್ಮ ಪುನೀತ್ ಬಗ್ಗೆ ಪದೇಪದೇ ಮಾತಾಡಿ ಮಾತಾಡಿ…. ಸಂದರ್ಶನಗಳಲ್ಲಿ ಹೊಗಳಿದ್ದು ಜಾಸ್ತಿ ಆಯ್ತೇನೋ? ಅವನಿಗೆ ನನ್ನ ದೃಷ್ಟಿಯೇ ಆಯ್ತಾ?” . ನನಗೆ ಚಿತ್ರರಂಗದಲ್ಲಿ ನಟನೆ ಆಸಕ್ತಿ ಇರಲಿಲ್ಲ ಸ್ಪೂರ್ತಿ ಕೊಟ್ಟವನೇ ಪುನೀತ್ ಎನ್ನುತ್ತಾ ಬಿಕ್ಕಿಬಿಕ್ಕಿ ಅತ್ತರು. ಈ ಸನ್ನಿವೇಶದಲ್ಲಿ ಕಣ್ಣೀರು ತರಿಸುವಂತಿತ್ತು.

ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಇಬ್ಬರು ಪುತ್ರಿಯರು ದುಃಖ ಸಾಗರದಲ್ಲಿ ಮುಳುಗಿದ್ದರು.

ಮುತ್ತುರಾಜ ಹೆತ್ತ ಮುತ್ತೆ ಎತ್ತ ಹೋದೆಯೋ.
ಅತ್ತು ಕರೆದರೂ ಮತ್ತೆ ಬಾರದಾದೆಯೋ….
ನಾಗೇಂದ್ರ ಪ್ರಸಾದ್ ರಚಿಸಿದ ಈ ಹಾಡು ಅಷ್ಟೇ ಆರ್ಥ ಧ್ವನಿಯಲ್ಲಿ ಮೂಡಿ ಬಂದಿತು. ಕೇಳಿದವರ ಎದೆಯಲ್ಲಿ ಪುನೀತರ ಅಗಲಿಕೆಯ ದುಃಖವನ್ನು ಭರಿಸಲು ಸಾಂತ್ವನ ಹೇಳುವಂತಿತ್ತು.

ರಾಜ್ಯದಲ್ಲಿ ಎನ್. ಎಸ್.ಎಸ್ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ

0

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಎನ್ ಎಸ್ ಎಸ್ ಶಿಬಿರ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಲಿತ ವಿದ್ಯೆಯ ಮೂಲಕ ಸಮಾಜದಲ್ಲಿನ ನ್ಯೂನ್ಯತೆ ಹೋಗಲಾಡಿಸಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಸಮಾಜಮುಖಿ ಯಾಗುವ ನಿಟ್ಟಿನಲ್ಲಿ, ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಲ್ಲಿ, ಎನ್.ಎಸ್.ಎಸ್ ಸೇವಾ ಚಟುವಟಿಕೆಗಳನ್ನು ಮಾಡಲಾಗುತ್ತಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಶ್ರೀಮತಿ ಜಿ. ಅನುರಾಧ ಹೇಳಿದ್ದಾರೆ.

“ಎನ್ ಎಸ್ ಎಸ್ ಶಿಬಿರಗಳು ಮಾನಸಿಕ, ಬೌದ್ಧಿಕ, ಆಂತರಿಕ ಆರೋಗ್ಯ ನೀಡುತ್ತವೆ” ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ, ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ, ಡಾ.ಎಚ್.ಎಂ. ವಾಗ್ದೇವಿ, ಡಾ. ಕೆ. ಬಿ. ಧನಂಜಯ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು ಟೆಕ್ ಸಮಾವೇಶ : ವಿಶೇಷತೆಗಳು

0

ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗದ 24ನೇ ವರ್ಷದ ಮೂರು ದಿನಗಳ ಸಮಾವೇಶವು ಇಂದಿನಿಂದ ಆರಂಭಗೊಳ್ಳಲಿದೆ. ತಂತ್ರಜ್ಞಾನ ವಿಲ್ಲದೆ ಬದುಕಿನ ಕಲ್ಪನೆಯು ಸಾಧ್ಯವಿಲ್ಲ. ಇದರ ಲಾಭ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಈ ದೇಶದಿಂದ ಶೃಂಗ ಸಮಾವೇಶವನ್ನು ಏರ್ಪಡಿಸಲಾಗಿದೆ.
‘ತಾಜ್ ವೆಸ್ಟ್ ಎಂಡ್’ ಹೋಟೆಲ್ ನಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಶೃಂಗದಲ್ಲಿ 30ಕ್ಕೂ ಹೆಚ್ಚು ದೇಶಗಳು ಭಾಗವಹಿಸಲಿವೆ.
300ಕ್ಕೂ ಹೆಚ್ಚು ಕಂಪನಿಗಳು, 5ಸಾವಿರಕ್ಕೂ ಹೆಚ್ಚು ನವೋದ್ಯಮಗಳು, ವಾಣಿಜ್ಯ ವಲಯದಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಡ್ರೈವಿಂಗ್ ದಿ ನೆಕ್ಸ್ಟ್ ಘೋಷವಾಕ್ಯದಡಿ ನಡೆಯಲಿರುವ ಈ ಶೃಂಗದಲ್ಲಿ ಪ್ರಧಾನವಾಗಿ ಐಟಿ,ಬಿಟಿ, ಕೃಷಿ, ಆರೋಗ್ಯ, ಸೈಬರ್ ಸೆಕ್ಯೂರಿಟಿ, ಲಸಿಕೆ, ವೈದ್ಯಕೀಯ ಮತ್ತು ಆರ್ಥಿಕ ತಂತ್ರಜ್ಞಾನಗಳಿಗೆ ಒತ್ತು ಕೊಡಲಾಗಿದೆ.
ತಂತ್ರಜ್ಞಾನದಲ್ಲಿ ಪಾರಮ್ಯ ಹೊಂದಿರುವ ಬೆಂಗಳೂರಿನ ಸಾಧನೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯಿಂದ ಶೃಂಗದಲ್ಲಿ ಪ್ರತ್ಯೇಕವಾಗಿ ‘ಬೆಂಗಳೂರು ನೆಕ್ಸ್ಟ್’ ನಾವಿನ್ಯತೆ ಮತ್ತು ನಾಯಕತ್ವ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.
ನಾಲ್ಕು ವೇದಿಕೆಗಳಲ್ಲಿ ಒಟ್ಟು 75 ಗೋಷ್ಠಿ ಮತ್ತು 7 ಸಂವಾದ ನಡೆಯಲಿದೆ.
ಈ ಶೃಂಗವು ಭಾರತ ಮತ್ತು ಅಮೆರಿಕ ಸಮಾವೇಶವಾಗಿದೆ.
ಗ್ರಾಮೀಣ ಐಟಿ ಮತ್ತು ಬಯೋ ಕ್ವಿಜ್ ನಡೆಯಲಿದೆ.
ವಿಜ್ಞಾನ ಗ್ಯಾಲರಿ, ಸ್ಟಾರ್ಟಪ್ ಯೂನಿಕಾರ್ನ್ ಕಂಪನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಇದು ಜಾಗತಿಕ ನಾವೀನ್ಯತಾ ಮೈತ್ರಿಕೂಟ ವಾಗಿದೆ.
ಎಸ್ಟಿ ಪಿಐ / ಐಟಿ ರಫ್ತು ಪ್ರಶಸ್ತಿ-ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.
ವರ್ಚುವಲ್ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. 320ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿವೆ. ಇವುಗಳ ಪೈಕಿ ರಾಜ್ಯ ಸರ್ಕಾರದ ‘ಎಲಿವೇಟ್’ ಯೋಜನೆಯಡಿ ಆಯ್ಕೆಯಾಗಿರುವ 100 ಮಳಿಗೆಗಳಿರಲಿವೆ. ಆಸಕ್ತರು ಲಿಂಕ್ ಮೂಲಕ ನೋಂದಣಿ ಮಾಡಿಕೊಂಡು ಸಮಾವೇಶ ವೀಕ್ಷಿಸಬಹುದಾಗಿದೆ.

ಲಿಂಕ್ :https://www.bengalurutechsummit.com/web/it_forms/registration & conference.php

ಶಬ್ದ ಮಾಲಿನ್ಯ ನಿಯಂತ್ರಣ ಮಾಹಿತಿ ಕೇಳಿದ ಹೈಕೋರ್ಟ್

0

ಮಾರ್ಪಡಿಸಿದ ಸೈಲೆನ್ಸರ್ ಗಳನ್ನು ಬಳಸುವ ಮೂಲಕ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ದ್ವಿಚಕ್ರ ಹಾಗೂ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದೆ.
ಕರ್ನಾಟಕ ಮೋಟಾರು ವಾಹನ ಅಧಿನಿಯಮ- 1989 ರ ನಿಯಮ 33 ಕ್ಕೆ ತಿದ್ದುಪಡಿ ತಂದು ಹೊಸ ವಾಹನಗಳ ನೋಂದಣಿ ಕಾರ್ಯ ನಡೆಯುತ್ತಿದೆ. ಖಾಸಗಿ ಡೀಲರ್ ಗಳಿಗೆ ವಹಿಸಿರುವ ಸಾರಿಗೆ ಇಲಾಖೆ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ ಕಟ್ಟುನಿಟ್ಟಿನ ಜಾರಿಯ ಬಗ್ಗೆ ಸಲ್ಲಿಕೆಯಾಗಿರುವ ಹಲವು ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ವಾಹನಗಳನ್ನು ಗುರುತಿಸಲು ಸಂಬಂಧಪಟ್ಟ ಪ್ರಾಧಿಕಾರಗಳು ಕಾರ್ಯಾಚರಣೆ ನಡೆಸಬೇಕು. ಅಂತಹ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮೌಖಿಕ ಆದೇಶ ನೀಡಿದೆ.
ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ಮಾರ್ಪಡಿಸಿದ ಸೈಲೆನ್ಸರ್ ಬಳಸಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿವೆ. ಅದನ್ನು ತಡೆಯಲು ಮತ್ತು ಅಂತಹ ವಾಹನಗಳನ್ನು ಗುರುತಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ. ಶಬ್ದ ಮಾಲಿನ್ಯ ಉಂಟು ಮಾಡುವ ರಾತ್ರಿ ಕ್ಲಬ್ ಗಳು ಮತ್ತು ಇತರೆ ಸಂಸ್ಥೆಗಳ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸಬೇಕು ಎಂದು ಸರಕಾರ ಮತ್ತು ಪೊಲೀಸ್ ಇಲಾಖೆಗೆ ನ್ಯಾಯಪೀಠ ನಿರ್ದೇಶನ ನೀಡಿದೆ.
ಜನ ಸಂದಣಿ ಇರುವ ದಾರಿಗಳಲ್ಲಿ ಅವಶ್ಯಕತೆ ಇಲ್ಲದೆ ಇದ್ದರೂ, ಮೋಟಾರ್ ವಾಹನ ಗಳ ಶಬ್ದವನ್ನು ಹೆಚ್ಚಿಸುವವರಿಗೆ ಈ ಆದೇಶದಿಂದ ಕಡಿವಾಣ ಹಾಕಿದಂತಾಗುತ್ತದೆ.

ಮಣ್ಣ ಮಕ್ಕಳನ್ನು ಕಾಡಿದ, ಮಳೆರಾಯ

0

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈತರ ಬೆಳೆ ನಾಶಕ್ಕೆ ಕಾರಣವಾಗಿದೆ.

ಅಪಾರ ಬೆಳೆಯ ನಾಶದ ಪರಿಣಾಮವಾಗಿ ತರಕಾರಿಗಳ ಬೆಲೆ ಏರುಗತಿಯಲ್ಲಿದೆ.

ಕಳೆದ ತಿಂಗಳಿಗೆ ಹೋಲಿಸಿದರೆ ಸೀಮೆ ಬದನೆಕಾಯಿ, ಬೀಟ್ರೂಟ್ ಹೊರತುಪಡಿಸಿ ಇತರೆ ಎಲ್ಲಾ ತರಕಾರಿಗಳು ಶೇ. 50ರಿಂದ 60 ರಷ್ಟು ಏರಿಕೆಯಾಗಿವೆ. ಗೆಡ್ಡೆಕೋಸು, ದಪ್ಪ ಮೆಣಸಿನಕಾಯಿ, ನುಗ್ಗೆಕಾಯಿ ಹೀಗೆ ಇತ್ಯಾದಿ ತರಕಾರಿಯ ಬೆಲೆ ಏರಿದೆ. 15 ಕೆಜಿ ಟೊಮೆಟೊ ಬಾಕ್ಸ್ ಕಳೆದ ತಿಂಗಳು 400ರಿಂದ 450 ರೂಗಳಿಂದ 800 ರೂ. ತಲುಪಿದೆ ಎಂದು ಫೋರ್ ಸ್ಟಾರ್ ಗ್ರೂಪ್ಸ್ ಟ್ರೇಡರ್ಸ್ ನ ಪ್ರಕಾಶ್ ಅವರು ತಿಳಿಸಿದ್ದಾರೆ.

ವಾಡಿಕೆಗಿಂತ ಹೆಚ್ಚು ಸುರಿಯುತ್ತಿರುವ ಮಳೆಯಿಂದಾಗಿ ಕೊಡಗಿನ ಕಾಫಿ, ಮಲೆನಾಡಿನ ಅಡಿಕೆ ಬೆಳೆ, ಚಾಮರಾಜನಗರ ಹಾಸನದಲ್ಲಿ ಮೆಕ್ಕೆಜೋಳ ರಾಗಿ ಬೆಳೆಗಳಿಗೆ ಹಾನಿ ಉಂಟುಮಾಡಿದೆ. ಕಟಾವಿಗೆ ಬಂದ ರಾಗಿ, ಶೇಂಗಾ, ಕಾಳುಮೆಣಸು ನಾಶವಾಗಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ದಲ್ಲಿ ಭಾರಿ ಪ್ರಮಾಣದ ನೀರು ನಿಂತು ಹೊಲಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಬೆಂಗಳೂರು, ಮೈಸೂರು, ದಾವಣಗೆರೆ, ಕೋಲಾರ ಮುಂತಾದ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ.

ಪೈರು ಕೊಯ್ಲುಗುವ ಹಂತದಲ್ಲಿ ಇಂತಹ ದುಸ್ಥಿತಿ ಬಂದಿದೆ. ಕಷ್ಟಪಟ್ಟು ಬೆಳೆದ ಬೆಳೆಯು ಕೈಗೆ ಸೇರುವಷ್ಟರಲ್ಲಿ ನೀರುಪಾಲಾಗಿದೆ ಎಂದು ರೈತರು ಕಂಗಾಲಾಗಿದ್ದಾರೆ.

ಕಷ್ಟಪಟ್ಟು ಬೆವರು ಹರಿಸಿ, ಸಾಲ ಸೋಲ ಮಾಡಿ ಬೆಳೆದ ಬೆಳೆಯು ಇಂದು ನೀರುಪಾಲಾಗಿದೆ. ರೈತರ ಸ್ಥಿತಿ ಚಿಂತಾಜನಕ. ಇಂತಹ ಸಂದರ್ಭದಲ್ಲಿ ಅವರಿಗೆ ನೆರವಾಗಲು ರಾಜ್ಯ ಸರ್ಕಾರ ಪರಿಹಾರ ಚಟುವಟಿಕೆ ಆರಂಭಿಸಬೇಕಿದೆ.

ಮುಂದಿನ ವಿಶ್ವಕಪ್ ಕ್ರಿಕೆಟ್: ಪಂದ್ಯಗಳಿಗೆ ಆತಿಥೇಯ ಭಾರತ

0

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಈಗಾಗಲೇ ವಿಶ್ವಮಟ್ಟದ ಟೂರ್ನಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ವೇಳಪಟ್ಟಿಯ ಅನ್ವಯ 2023 ರಿಂದ 2031 ರವರೆಗೆ ನಡೆಯುವ ಟೂರ್ನಿಗಳಿಗೆ ಆ ಅವಧಿಯಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಸಮಿತಿಯ 3 ವಿಶ್ವಮಟ್ಟದ ಟೂರ್ನಿಗಳಿಗೆ ಭಾರತ ಆತಿಥ್ಯ ವಹಿಸಲಿದೆ.
2026 ರ ಟಿ – 20 ವಿಶ್ವಕಪ್ 2029 ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು 2031 ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗಳನ್ನು ಭಾರತದಲ್ಲಿ ನಡೆಸಲಾಗುವುದು.
11 ಪೂರ್ಣಾವಧಿ ಸದಸ್ಯ ರಾಷ್ಟ್ರಗಳು ಮತ್ತು 3 ಸಹ ಸದಸ್ಯ ರಾಷ್ಟ್ರಗಳನ್ನು 2 ಏಕದಿನ ವಿಶ್ವಕಪ್, 4 ಟಿ – 20 ವಿಶ್ವಕಪ್ ಮತ್ತು 2 ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳನ್ನು ಆಯೋಜಿಸಲು ಆಯ್ಕೆ ಮಾಡಲಾಗಿದೆ ಎಂದು ICC ಅಪೆಕ್ಸ್ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಲಸಿಕೆ ಪೂರ್ಣಗೊಂಡ ಮನೆಗೆ ಸ್ಟಿಕ್ಕರ್

0

ಕೋವಿಡ್ ನಿರೋಧಕ ಲಸಿಕೆ ಅಭಿಯಾನ ತೀವ್ರ ಗತಿಯಲ್ಲಿ ಮುಂದುವರಿಯಬೇಕು. ಹಾಗಾಗಿ ಎರಡೂ ಡೋಸ್ ಲಸಿಕೆ ಪೂರ್ಣಗೊಳಿಸಿದ ಕುಟುಂಬಗಳ ಮನೆ ಬಾಗಿಲಿಗೆ ಸ್ಟಿಕ್ಕರ್ ಅಂಟಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸಲಹೆ ನೀಡಿದ್ದಾರೆ.
ಲಸಿಕೆ ಅಭಿಯಾನ ಇನ್ನೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಸರ್ಕಾರೇತರ ಸಂಸ್ಥೆಗಳು, ನಾಗರಿಕ ಸಂಘಟನೆಗಳು ಮತ್ತು ಅಭಿವೃದ್ಧಿ ಪಾಲುದಾರರ ಜೊತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸಮಾಲೋಚನೆ ನಡೆಸಿದರು.
ಮನೆ ಬಾಗಿಲಿಗೆ ಲಸಿಕೆ ಕೊಂಡೊಯ್ಯುವ ‘ಹರ್ ಘರ್ ದಸ್ತಕ್’ ಅಭಿಯಾನದ ಕುರಿತು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಕೋವಿಡ್ ಬಿಕ್ಕಟ್ಟು ನಿಭಾಯಿಸುವ ವಿಷಯದಲ್ಲಿ ಭಾರತ ಸರಿಸಾಟಿ ಇಲ್ಲದ ಸಾಧನೆ ಮಾಡಿದೆ. ಲಾಕ್ ಡೌನ್ ಸಂದರ್ಭ ಯಾರೊಬ್ಬರು ಉಪವಾಸ ಬೀಳದಂತೆ ನೋಡಿಕೊಂಡಿದ್ದು ನಮ್ಮ ಸರ್ಕಾರದ ಹೆಗ್ಗಳಿಕೆ. ಇದರಲ್ಲಿ ಎನ್ ಜಿಒ ಮತ್ತು ನಾಗರಿಕ ಸಂಘ ಸಂಸ್ಥೆಗಳ ಪಾಲು ದೊಡ್ಡದಿದೆ. ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಮನೆಬಾಗಿಲಿಗೆ ಲಸಿಕೆ ತಲುಪಿಸುವುದು ಸಾಹಸದ ಕೆಲಸವೇ ಸರಿ. ಇದರಲ್ಲಿ ಜನರು ಕೂಡ ಮುತುವರ್ಜಿ ವಹಿಸಬೇಕು.
ಎರಡೂ ಡೋಸ್ ಪೂರೈಸಿದವರ ಪ್ರಮಾಣ ಶೇಕಡ 40ರಷ್ಟು ದಾಟಿದೆ. ಈ ಸಾಧನೆಗೆ ಎಲ್ಲರ ಸಹಭಾಗಿತ್ವವೇ ಕಾರಣ.
ಆದರೂ ಸಂಕ್ರಾಮಿಕ ರೋಗ ಸಂಪೂರ್ಣ ಅಂತ್ಯಗೊಳ್ಳಬೇಕಾದರೆ ಶೇ.100ರಷ್ಟು ಲಸಿಕೆ ಪೂರೈಸುವುದು ಅನಿವಾರ್ಯ ಎಂದು ಹೇಳಿದರು.