Monday, August 3, 2026
Monday, August 3, 2026
Home Blog Page 2065

ದೆಹಲಿ ಮಾಲಿನ್ಯ ನಿರ್ವಹಣೆ, ಸುಪ್ರೀಂ ಅತೃಪ್ತಿ.

0

ದೆಹಲಿಯಲ್ಲಿ ವಾಯು ಮಾಲಿನ್ಯವು ಕೃಷಿ ತ್ಯಾಜ್ಯ ಸುಡುವಿಕೆ ಯಿಂದ ಶೇಕಡ 10 ಪ್ರಮಾಣದಷ್ಟಿದೆ ಎಂದು ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಈ ಹೇಳಿಕೆ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರು ಅಸಮಧಾನ ವ್ಯಕ್ತಪಡಿಸಿದರು. ಶ್ರೀ ರಮಣ ಅವರ ನೇತೃತ್ವದ ನ್ಯಾಯಪೀಠವು ದೆಹಲಿ ವಾಯುಮಾಲಿನ್ಯದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಪ್ರಮಾಣ ಗಂಭೀರವಾಗಿದೆ ಎಂದು ತಿಳಿಸಿತು. ಇದಕ್ಕೆ ಕೇಂದ್ರ ಸರ್ಕಾರದ ಪರವಾಗಿ ಉತ್ತರಿಸಿದ ಸಾಲಿಸಿಟರ್ ತುಷಾರ್ ಮೆಹ್ತಾ”ವೈಜ್ಞಾನಿಕ ವರದಿ ಪ್ರಕಾರ ದೆಹಲಿಯ ವಾಯುಮಾಲಿನ್ಯದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಪ್ರಮಾಣ ಶೇ.4 ರಷ್ಟಿದೆ. ಬೇಸಿಗೆಯ ಕಾಲದಲ್ಲಿ ಇದು ಶೇ.7 ರಷ್ಟಿರುತ್ತದೆ. ರೈತರನ್ನು ದೂಷಿಸುವುದಕ್ಕಾಗಿಯೇ ದೆಹಲಿ ಸರ್ಕಾರ ಅಫಿಡವಿಟ್ ಸಲ್ಲಿಸಿದೆ ಎಂದು ತಿಳಿಸಿದರು.

ಯಾವುದೇ ಆಧಾರವಿಲ್ಲದೆ ಮಾತನಾಡಬೇಡಿ. ದಿಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ನಿಮ್ಮ ಬಳಿ ಯಾವ ವೈಜ್ಞಾನಿಕ ಆಧಾರವಿದೆ ಎನ್ನುವುದು ತಿಳಿಸಿ ಎಂದು ನ್ಯಾಯಪೀಠ ಕೇಳಿದೆ.

ದೆಹಲಿ ಮಾಲಿನ್ಯಕ್ಕೆ ವಾಹನಗಳ ಧೂಳು, ಉದ್ಯಮಗಳೇ ಕಾರಣ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ನೀಡಿದೆ. ಆದರೆ ಗಾಳಿ ಗುಣಮಟ್ಟ ನಿರ್ವಹಣೆ ಸಮಿತಿಯು ಮಾಲಿನ್ಯದ ಪ್ರಮುಖ ಕಾರಣ ತಿಳಿಸಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರವು ತುರ್ತು ಸಭೆ ನಡೆಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಕೊರೊನಾ ನಂತರ ಹೊಸ ಸೋಂಕು?

0

ಕೊರೊನಾ ನಂತರ ಹೊಸ ಸೋಂಕು?
ವಿ.ಆ. ಸಂ ಎಚ್ಚರಿಕೆ…

ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲೇ ಮತ್ತೊಂದು ವೈರಸ್ ಭಾರತಕ್ಕೆ ಪ್ರವೇಶಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಕೊರೊನಾ ನಂತರ ಎ ಎಂ ಆರ್ ( ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ) ಎಂಬ ಸೋಂಕು ಅತ್ಯಂತ ವೇಗವಾಗಿ ಎಲ್ಲೆಡೆ ಹರಡುತ್ತಿದೆ. ಆದ್ದರಿಂದ ರಾಜ್ಯಗಳು ಎಎಂಆರ್ ವಿರುದ್ಧ ಹೋರಾಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿ.ಆ.ಸಂ ನಲ್ಲಿ ಭಾರತೀಯ ಅಧಿಕಾರಿಯಾಗಿರುವ ಡಾ. ಅನುಜ್ ಶರ್ಮಾ ಈ ಸಲಹೆಯನ್ನು ನೀಡಿದ್ದಾರೆ.

ಕೊರೊನಾದಂತೆ ಎ ಎಂ ಆರ್ ವೈರಸ್ ತಡೆಯಲು ಜನ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಮತ್ತು ಆಗಾಗ ಕೈ ತೊಳೆದುಕೊಳ್ಳಬೇಕು. ಇದರ ಜೊತೆಗೆ ಕಡ್ಡಾಯವಾಗಿ ಕೊರೊನಾ ನಿರೋಧಕ ಲಸಿಕೆ ಪಡೆಯಬೇಕು ಎಂದು ಡಾ. ಅನುಜ್ ಶರ್ಮಾ ಎಚ್ಚರಿಸಿದ್ದಾರೆ.

ಈ ಹೊಸ ಸೋಂಕು (ಎಎಂಆರ್ ) ಬ್ಯಾಕ್ಟೀರಿಯ ಮತ್ತು ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಒಬ್ಬ ವ್ಯಕ್ತಿಯಲ್ಲಿ ಎ.ಎಂ.ಆರ್ ಕಾಣಿಸಿಕೊಂಡರೆ ಆಂಟಿಬಯೋಟಿಕ್ ಸೇರಿದಂತೆ ಯಾವುದೇ ಮಾತ್ರೆ ,ಔಷಧಿಗಳು ಸಹ ಕೆಲಸ ಮಾಡುವುದಿಲ್ಲ. ಹೀಗಾಗಿ ಎಎಂಆರ್ ನಿಂದ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಡಬ್ಲ್ಯೂ ಎಚ್ಒ ತಿಳಿಸಿದೆ.

ಕೊರೊನಾ
ಸೋಂಕಿತರಿಗೆ, ಅದರಲ್ಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಅತಿ ವೇಗವಾಗಿ ಎ ಎಂ ಆರ್ ತಗಲುವ ಸಾಧ್ಯತೆ ಇದೆ ಎಂದು ಅಮೆರಿಕಾದ ರೋಗ ನಿಯಂತ್ರಣ ಕೇಂದ್ರ(ಸಿಡಿಸಿ) ವೈದ್ಯರು ತಿಳಿಸಿದ್ದಾರೆ.

“ಕೊರೊನಾ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಲ್ಲದೆ, ವೈದ್ಯರು ಅವರಿಗೆ ಅತಿಯಾದ ಆಂಟಿಬಯೋಟಿಕ್ಸ್ ನೀಡುವುದರಿಂದ ವ್ಯಕ್ತಿಯ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇದರ ಜೊತೆಗೆ ಗಂಭೀರವಾಗಿ ಅನಾರೋಗ್ಯಕ್ಕೊಳಗಾದ ವ್ಯಕ್ತಿಯಿಂದ ಪರ್ಯಾಯ ವೈರಸ್ ಸೃಷ್ಟಿಯಾಗುತ್ತದೆ. ಈ ವೈರಾಣುವೇ ಎಎಂಆರ್ ಆಗುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿಸುತ್ತದೆ.

ಗ್ರಾಮೀಣ ವಸತಿ ಯೋಜನೆ : ಫಲಾನುಭವಿಗಳು ಅತಂತ್ರ

0

ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಸರ್ವರಿಗೂ ಸೂರು, ಈ ನಾಡನ್ನು ಗುಡಿಸಲು ಮುಕ್ತ ಮಾಡುತ್ತವೆ ಎಂದು ಘೋಷಣೆ ಯನ್ನು ಮೂಡಿಸುತ್ತವೆ. ಆದರೆ, ಕಳೆದ ಮೂರು ವರ್ಷಗಳಿಂದ ರಾಜ್ಯದ ಗ್ರಾಮೀಣ ವಸತಿ ಯೋಜನೆಗಳು ಸ್ಥಗಿತಗೊಂಡಿದೆ. ಗ್ರಾಮೀಣ ವಸತಿಯನ್ನೆ ನಂಬಿಕೊಂಡು ಕೂತ ಅದೆಷ್ಟೋ ಕುಟುಂಬಗಳು ಇಂದಿಗೂ ಸರ್ಕಾರದ ವಸತಿ ಮನೆಗಳ ನಿರ್ಮಾಣಕ್ಕಾಗಿ ಕಾದು ಕುಳಿತಿವೆ.
ರಾಜ್ಯ ಸರ್ಕಾರ 2018- 19 ನೇ ಸಾಲಿನಿಂದ ಗ್ರಾಮೀಣ ವಸತಿ ಯೋಜನೆಗಳಿಗೆ ಅನುದಾನ ಹಂಚಿಕೆಯನ್ನೇ ನಿಲ್ಲಿಸಿದೆ. 2016-17, 2017-18ನೇ ಸಾಲಿನ ಫಲಾನುಭವಿಗಳಿಗೆ 2-3 ಬಿಲ್ ಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ಮನೆಗಳು ಅರೆಬರೆ ನಿರ್ಮಾಣದ ಸ್ಥಿತಿಯಲ್ಲಿವೆ.
ರಾಜೀವ್ ಗಾಂಧಿ ವಸತಿ ನಿಗಮವು ಗ್ರಾಮೀಣ ಭಾಗದಲ್ಲಿ ಪಂಚಾಯಿತಿಗಳ ಮೂಲಕ ಪ್ರಧಾನ ಮಂತ್ರಿ ಅವಾಸ್ ಯೋಜನೆ, ಅಂಬೇಡ್ಕರ್, ಬಸವ ವಸತಿ ಯೋಜನೆ, ಮತ್ಸ್ಯಾಶ್ರಯ ವಸತಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳ ಹಂಚಿಕೆ ಪಂಚಾಯಿತಿಗಳ ಮೂಲಕ ನಡೆಯುತ್ತದೆ. ಹಲವು ಪಂಚಾಯಿತಿ ಸದಸ್ಯರು ಮನೆ ನೀಡುವ ಭರವಸೆಯೊಂದಿಗೆ ಚುನಾವಣೆ ಎದುರಿಸುತ್ತಾರೆ. ಈಗ ಸರ್ಕಾರವೇ ಅನುದಾನವನ್ನೇ ನಿಲ್ಲಿಸಿರುವುದರಿಂದ ಮನೆಗಳ ನಿರ್ಮಾಣ ಪ್ರಕ್ರಿಯೆಯು ಸಂಪೂರ್ಣವಾಗಿ ನಿಂತಂತಾಗಿದೆ.
2018- 19 ರಲ್ಲಿ ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ ರಾಜ್ಯ ಸರಕಾರ 5 ಲಕ್ಷ ರೂ. ಪರಿಹಾರ ಘೋಷಿಸಿತ್ತು.
ರಾಜೀವ್ ಗಾಂಧಿ ವಸತಿ ನಿಗಮದ ಮೂಲಕವೇ ಪರಿಹಾರ ಹಂಚಿಕೆ ಮಾಡಿದ್ದರಿಂದಾಗಿ ವಸತಿ ಯೋಜನೆಗಳಿಗೆ ಅನುದಾನ ಹಂಚಿಕೆ ಸ್ಥಗಿತಗೊಂಡಿತೆಂಬ ಮಾತುಗಳು ಸರ್ಕಾರಿ ವಲಯದಿಂದ ಕೇಳಿಬಂದಿವೆ.
ಈಗ ವಸತಿ ಯೋಜನೆ ಮನೆಗಳ ಹಂಚಿಕೆಗೂ ಹಣ ಇಲ್ಲ. ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೂ ಪರಿಹಾರ ಇಲ್ಲ ಎಂಬಂತಾಗಿದೆ.
ಇದರಿಂದಾಗಿ ಸರ್ಕಾರದಿಂದ ಕೇವಲ ಎರಡು ಅಥವಾ ಮೂರು ಬಿಲ್ಲುಗಳು ಸ್ವಿಕೃತಗೊಂಡ ಪರಿಣಾಮ ಮಿಕ್ಕ ಹಣ ಬಾಕಿಯಾಗಿ ಫಲಾನುಭವಿಗಳು ಅತಂತ್ರರಾಗಿದ್ದಾರೆ. ಫಲಾನುಭವಿಗಳ ಹಿತಾಸಕ್ತಿ ಮತ್ತು ಸದ್ಯದ ಮಳೆಗಾಲದ ಸಂಕಷ್ಟ ಪರಿಸ್ಥಿತಿಯನ್ನು ಸಹಾನುಭೂತಿಯಿಂದ ಸರ್ಕಾರ ಗಮನಿಸಬೇಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ದೀಪದ ಬೆಳಕಿನಲ್ಲಿ, ಕೋಲಾಟದ ಬೆಡಗು

0

ದೀಪಾವಳಿ ಸಿಡಿಮದ್ದು ಹಾಗೂ ಸುಂದರ ದೀಪಗಳನ್ನು ಬೆಳಗಿಸುವ ಹಬ್ಬ. ಮನದ ಕತ್ತಲೆಯನ್ನು ಕಳೆದು ಜೀವನದಲ್ಲಿ ಬೆಳಕು ಕಾಣುವ ಹಬ್ಬ. ಅದನ್ನೇ ತಮಸೋಮ ಜ್ಯೋತಿರ್ಗಮಯ ಎಂದಿದ್ದಾರೆ ಹಿರಿಯರು. ಹಬ್ಬಗಳಲ್ಲಿ ಊಟ, ಉಡುಗೆ ಅಲ್ಲದೆ ಹಾಡು-ಕುಣಿತ ಎಲ್ಲವೂ ಸೇರಿರುತ್ತದೆ. ಮಲೆನಾಡಿನ ದೀಪಾವಳಿ ಕೂಡ ಅತ್ಯಂತ ವಿಶಿಷ್ಟವಾದದ್ದು ದೀಪ ಬೆಳಗುವ ಜೊತೆಗೆ ಅಂಟಿಗೆ-ಪಿಂಟಿಗೆ ಒಂದು ವಿಶೇಷ ಗಮನ ಸೆಳೆಯುವ ಆಚರಣೆಯಾಗಿದೆ. ಇದರೊಂದಿಗೆ ಇನ್ನೊಂದು ವಿಶೇಷ ಆಕರ್ಷಣೆ ಎಂದರೆ ರಾತ್ರಿ ವೇಳೆ ದೀಪದ ಬೆಳಕಿನ ಮುಂದೆ ಕೋಲಾಟ ಪ್ರದರ್ಶನ ನಡೆಯುತ್ತದೆ. ಮನೆ ಅಂಗಳದಲ್ಲಿ ರಾತ್ರಿ ಹಣತೆ ಬೆಳಗಿ ಅದರ ಬೆಳಕಿನಲ್ಲಿ ಕೋಲಾಟ ಆಡುವುದು ಒಂದು ವಿಶೇಷ. ಗ್ರಾಮೀಣ ಯುವಕರು ವಿವಿಧ ರೀತಿಯ ಹೆಜ್ಜೆಹಾಕಿ ಕೋಲು ಹಾಕುತ್ತಾ ಕುಣಿಯುತ್ತಾರೆ. ಕೋಲು ಪದಕ್ಕೆ ಲಯಬದ್ಧವಾಗಿ ಕುಣಿಯುವ ಅವರ ವಿವಿಧ ಭಂಗಿಗಳನ್ನು ನೋಡುವುದೇ ಒಂದು ಆನಂದ. ಈಗ ನೀವು ನೋಡುತ್ತಿರುವುದು ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಸುತ್ತಮುತ್ತಲಿನ ಗ್ರಾಮದ ಯುವಕರ ಕೋಲಾಟ.

ಸಿಬಿಐ, ಇ.ಡಿ ನಿರ್ದೇಶಕರ ಸೇವಾವಧಿ ವಿಸ್ತರಣೆ

0

ಕೇಂದ್ರ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳದ ನಿರ್ದೇಶಕರ ಸೇವಾವಧಿಯನ್ನ ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ. ಈ ಎರಡು ಸುಗ್ರಿವಾಜ್ಞೆಗಳಿಗೆ ರಾಷ್ಟ್ರಪತಿಯವರ ಅಂಕಿತವಷ್ಟೇ ಬಾಕಿ ಇದೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೇ ತಿದ್ದುಪಡಿ ವಿಧೇಯಕಗಳನ್ನು ಮಂಡಿಸುವುದು ಸರ್ಕಾರದ ಉದ್ದೇಶವಾಗಿದೆ.
ಪ್ರತಿಪಕ್ಷಗಳನ್ನು ಬೆದರಿಸಲು ಮಾತ್ರವೇ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಪ್ರತಿಪಕ್ಷದ ಆರೋಪ ಮಾಡುತ್ತಿವೆ.
ಸದ್ಯ ಈ ಸಂಸ್ಥೆಗಳ ಮುಖ್ಯಸ್ಥರ ಅವಧಿ ಎರಡು ವರ್ಷ ಇದೆ. ಸಿಬಿಐ, ಇ.ಡಿ ನಿರ್ದೇಶಕರ ಸೇವಾವಧಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಹಾಗೂ ಪ್ರತಿಪಕ್ಷ ನಾಯಕರನ್ನು ಒಳಗೊಂಡ ವಿಶೇಷ ಸಮಿತಿಯ ಶಿಫಾರಸ್ಸಿನ ಅನ್ವಯ ಒಂದು ವರ್ಷ ವಿಸ್ತರಿಸಬಹುದು. ಸುಗ್ರಿವಾಜ್ಞೆ ಪ್ರಕಾರ, ಎರಡು ಸಂಸ್ಥೆಗಳ ನಿರ್ದೇಶಕರ ಸೇವಾವಧಿಯನ್ನು ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆಸ್ಪತ್ರೆಯ ನಿರ್ಲಕ್ಷ : ತೀರ್ಪು ಗ್ರಾಹಕರ ಪರ

0

ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆ ಸಂದರ್ಭ ಅಸುನಿಗಿದ ತಾಯಿ ಪ್ರಕರಣವೊಂದು ವಿಚಾರಣಿಗೆ ದಾಖಲಾಗಿತ್ತು.

ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಈ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ವೇಳೆ ವಾದ-ವಿವಾದಗಳನ್ನು ಆಲಿಸಿದ ಆಯೋಗವು ಮಹಾರಾಷ್ಟ್ರ ರಾಜ್ಯದ ಗ್ರಾಹಕರ ಆಯೋಗವು ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.ಅದರ ಪ್ರಕಾರ ಖಾಸಗಿ ಆಸ್ಪತ್ರೆಯು ಮೃತರ ವಾರಸುದಾರರಿಗೆ 20 ಲಕ್ಷ ರೂಪಾಯಿ ಪರಿಹಾರದ ಜೊತೆಗೆ 1 ಲಕ್ಷ ರೂಪಾಯಿ ಕೋರ್ಟ್ ಖರ್ಚನ್ನು ನೀಡಬೇಕೆಂದು ತೀರ್ಪು ನೀಡಿದೆ.

ಈ ಘಟನೆಯು 1995 ರಲ್ಲಿ ‌ ನಡೆದಿದೆ. 6 ವಾರದೊಳಗಾಗಿ ಈ ಪರಿಹಾರದ ಹಣವನ್ನು ನೀಡಬೇಕು, ತಪ್ಪಿದ್ದಲ್ಲಿ ಶೇ. 6 ರಷ್ಟು ಸರಳ ಬಡ್ಡಿಯನ್ನು ಸೇರಿಸಿ ನೀಡಬೇಕೆಂದು ಆದೇಶಿಸಿದೆ.

ಆಡಳಿತ ಸುಧಾರಣೆಗೆ ಪ್ರಧಾನಿಯವರ ಮಹತ್ವದ ಹೆಜ್ಜೆ

0

ಲೋಕಸಭಾ ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗ ಆಡಳಿತ ಸುಧಾರಣೆಯತ್ತ ನರೇಂದ್ರ ಮೋದಿಯವರ ಗಮನ ಹೆಚ್ಚಿಸಿದೆ. ತಮ್ಮ ಸರ್ಕಾರದ 77 ಮಂದಿ ಸಚಿವರನ್ನು ಎಂಟು ತಂಡಗಳಾಗಿ ವಿಂಗಡಿಸಿದ್ದಾರೆ.

ಪ್ರತಿ ತಂಡದಲ್ಲಿ 9ರಿಂದ 10 ಸಚಿವರು ಇರುವಂತೆ ನಿಗಾವಹಿಸಲಾಗಿದೆ. ಈ ತಂಡಗಳಲ್ಲಿ ಒಬ್ಬರು ಸಂಪುಟ ಸಚಿವರು ಇರಲಿದ್ದು, ಸಮನ್ವಯಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪ್ರತಿ ತಂಡವು ಒಂದು ವೆಬ್ ಪೋರ್ಟಲ್ ರಚಿಸಿ, ತಮಗೆ ಸೂಚಿಸಲಾಗಿರುವ ಆಡಳಿತ ಸುಧಾರಣಾ ಕ್ಷೇತ್ರದ ಕುರಿತು ಜನರಿಂದ ಮತ್ತು ತಜ್ಞರಿಂದ ಮಾಹಿತಿ ಕಲೆ ಹಾಕುತ್ತಿರಬೇಕು.
ಸಚಿವ ಸಂಪುಟ ಸಹೋದ್ಯೋಗಿಗಳು, ಕಿರಿಯ ಸಚಿವರು, ಹಿರಿಯ ಸಚಿವರು, ಒಬ್ಬರನ್ನೊಬ್ಬರು ಗೌರವಿಸಿ, ಪಕ್ಷ ಹಾಗೂ ಸರ್ಕಾರದ ಕೆಲಸಗಳನ್ನು ಸಮನ್ವಯತೆ ಸಾಧಿಸಿಕೊಳ್ಳಲು ಆದ್ಯತೆ ನೀಡಬೇಕು.
ನಿವೃತ್ತ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಆಡಳಿತದ ಲೋಪದೋಷಗಳ ಕುರಿತು ವಿಸ್ತೃತ ವರದಿ ಪಡೆಯಬೇಕು.
ಪ್ರತಿ ತಂಡವು ದೇಶದ ವಿವಿಧ ರಾಜ್ಯಗಳಲ್ಲಿ ನ ಎಲ್ಲಾ ಜಿಲ್ಲೆಗಳು, ರಾಜ್ಯ ಇಲಾಖೆಗಳ ಕೈಪಿಡಿ ರಚಿಸಬೇಕು. ಅದನ್ನು ಸೂಕ್ತ ಹೂಡಿಕೆದಾರರಿಗೆ ತಲುಪಿಸಿ ಹೊಸ ಯೋಜನೆಗಳನ್ನು ಘೋಷಿಸಬೇಕು ಎಂಬ ಆದೇಶಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನದ ಮೂಲಕ ಜನಸ್ನೇಹಿ ಆಡಳಿತ ಸುಧಾರಣೆಗಾಗಿ ಸಚಿವರ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರಷ್ಯಾದಿಂದ “ಎಸ್-400”,ಯುಎಸ್ ಮೃದು ಧೋರಣೆ

0

ಅಮೆರಿಕದ ನಿರ್ಬಂಧ ಬೆದರಿಕೆ ನಡುವೆಯೇ ರಷ್ಯಾವು ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ‘ಎಸ್-400’ ಅನ್ನು ಭಾರತಕ್ಕೆ ಪೂರೈಸುವ ಪ್ರಕ್ರಿಯೆ ಆರಂಭಿಸಿದೆ. ‘ ವರ್ಷಾಂತ್ಯಕ್ಕೆ ಎಸ್-400 ವ್ಯವಸ್ಥೆಯ ಮೊದಲ ಘಟಕವು ಪೂರ್ಣ ಪ್ರಮಾಣದಲ್ಲಿ ಭಾರತ ತಲುಪಲಿದೆ. ಈಗಾಗಲೇ ಮೊದಲ ಕಂತಿನ ಭಾಗಗಳು ಭಾರತಕ್ಕೆ ಹಸ್ತಾಂತರವಾಗಿವೆ’ ಎಂದು ರಷ್ಯಾದ ಮಿಲಿಟರಿ ಸಹಕಾರ ಏಜೆನ್ಸಿ ಮುಖ್ಯಸ್ಥ ಮಿಟ್ರಿ ಶುಗಾಯೆವ್ ಹೇಳಿದ್ದಾರೆ.
ರಷ್ಯಾದ ಮಿಲಿಟರಿ ಶಸ್ತ್ರಾಸ್ತ್ರ ಗಳನ್ನು ಖರೀದಿಸುವ ದೇಶದ ವಿರುದ್ಧ ಅಮೆರಿಕವು ಹಣಕಾಸು ಮತ್ತು ಮಿಲಿಟರಿ ವ್ಯವಹಾರ ನಡೆಸುವುದಿಲ್ಲ. ಈ ಸಂಬಂಧ 2017ರಲ್ಲಿ ‘ಕ್ಯಾಟ್ಸಾ’ ಕಾನೂನು ರೂಪಿಸಲಾಗಿದೆ. ಎಸ್-400 ಖರೀದಿಸಿದ ಟರ್ಕಿ ವಿರುದ್ಧ ಕಳೆದ ವರ್ಷ ಅಮೆರಿಕ ಸರ್ಕಾರವನ್ನು ಅಡಿಯಲ್ಲಿ ನಿರ್ಬಂಧ ಹೇರಿದೆ. ಇದಲ್ಲದೆ ಎಫ್-35 ಯುದ್ಧವಿಮಾನ ಯೋಜನೆಯಿಂದಲೂ ಟರ್ಕಿಯನ್ನು ಹೊರಕ್ಕೆ ದೂಡಲಾಗಿದೆ. ನ್ಯಾಟೋ ಒಕ್ಕೂಟದ ಟರ್ಕಿ ವಿರುದ್ಧವೇ ಅಮೇರಿಕಾ ಇಷ್ಟೊಂದು ಖಡಕ್ ಕ್ರಮ ಕೈಗೊಂಡಿದ್ದರೂ, ಭಾರತದ ವಿರುದ್ಧ ಮಾತ್ರ ಮೊದಲಿನಿಂದಲೂ ಮೃದು ಧೋರಣೆಯನ್ನು ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಷ್ಯಾದಿಂದ ಎಸ್- 400 ಖರೀದಿಸುವುದು ಬೇಡ, ಬದಲಿಗೆ ತಮ್ಮ ಬಳಿಯಿರುವ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ನೀಡುವುದಾಗಿ ಈಗಾಗಲೇ ಹಲವು ಬಾರಿ ಅಮೆರಿಕಾದ ರಕ್ಷಣಾ ಸಚಿವರು ಮತ್ತು ವಿದೇಶಾಂಗ ಸಚಿವರು ಭಾರತ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಆದರೆ, ರಷ್ಯಾ ಸರ್ಕಾರದೊಂದಿಗೆ ಒಪ್ಪಂದ ಮುರಿದು ಕೊಳ್ಳಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹಿರೇಕೆರೂರು : ರೈತರೊಂದಿಗೆ ಒಂದು ದಿನ

0

ಹಿರೇಕೆರೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ 64ನೇ ಹುಟ್ಟುಹಬ್ಬದ ಪ್ರಯುಕ್ತ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮಕ್ಕೇ ಕನ್ನಡ ಚಲನಚಿತ್ರದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಾಲನೆ ನೀಡಿದರು.

ರೈತರೊಂದಿಗೆ ಒಂದು ದಿನ ಕಾರ್ಯಕ್ರಮಕ್ಕೆ ಇಡೀ ಹಿರೇಕೆರೂರು ತಾಲೂಕು ಮದುವಣಗಿತ್ತಿಯಂತೆ ಸಿಂಗಾರಗೊಂಡು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಪೂರ್ಣ ಕುಂಭ ಹೊತ್ತ ನೂರಾರು ಮಹಿಳೆಯರು, ವೀರಗಾಸೆ, ಡೊಳ್ಳು ಕುಣಿತ, ಎತ್ತಿನ ಬಂಡಿ ಹಾಗೂ ಮೀರಿದ ವಾದ್ಯ ಮೇಳಗಳ ಮೆರವಣಿಗೆಯೊಂದಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ಈ ಸಮಾರಂಭದಲ್ಲಿ ಸಾಧಕ ರೈತರಿಗೆ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರೈತರಿಗೆ ಉಪಯೋಗವಾಗುವಂತಹ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಜೇನು ಸಾಕಾಣಿಕೆ ಕುರಿತು ಪ್ರಾತ್ಯಕ್ಷಿಕೆ, ಪುರುಷರಿಗೆ ಹಾಲು ಕರೆಯುವ ಸ್ಪರ್ಧೆ, ಮಹಿಳೆಯರಿಗೆ ಮಜ್ಜಿಗೆ ಕಡೆಯುವ ಮತ್ತು ಹಿಟ್ಟು ಬೀಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ರೈತರು ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡಾಗ ಮಾತ್ರ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಸಚಿವ ಬಿ.ಸಿ.ಪಾಟೀಲ್ ಅವರು ರೈತರಿಗೆ ಸಲಹೆ ನೀಡಿದರು.

ಇದೇ ಮೊದಲ ಬಾರಿಗೆ ನನ್ನ ತಾಲೂಕಿನಲ್ಲಿನ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ. ಸಮಗ್ರ ಕೃಷಿ ನೀತಿ ಅನುಸರಿಸಿ ಉಪಕಸುಬುಗಳನ್ನು ಸಹ ಅಳವಡಿಸಿಕೊಳ್ಳಿ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ರೈತರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿ ಪೊಲೀಸ್ ಆಗಿ, ನಟನಾಗಿ, ನಿರ್ಮಾಪಕನಾಗಿ ಈಗ ಸಚಿವರಾಗುವುದು ಬಹಳ ಸುಲಭದ ಕೆಲಸವಲ್ಲ. ಏನೇ ಕೆಲಸವಾಗಲಿ ಅದನ್ನ ಗುರಿ ಇಟ್ಟು ಮಾಡಿದರೆ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ ಇದಕ್ಕೆ ಬಿ.ಸಿ.ಪಾಟೀಲರ ಸಾಕ್ಷಿ. “ಬಿ.ಸಿ.ಪಾಟೀಲರ ನಾ ನಾನು ಪ್ರೀತಿಯಿಂದ ಕಾಕಾ ಅವರೇ” ಎಂದು ಕರೆಯುತ್ತೇನೆ. ರೈತರು ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ರೈತರು ಮತ್ತು ಸೈನಿಕರು ದೇಶದ ಬೆನ್ನೆಲುಬು. ರೈತ ಭೂಮಿತಾಯಿಯನ್ನು ನಂಬಿ ಕಷ್ಟಪಟ್ಟು ದುಡಿಯುತ್ತಾನೆ. ಹಾಗಾಗಿ ರೈತರು ತಂತ್ರಜ್ಞಾನ ಇಲಾಖೆಯ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಫಸಲು ಬೆಳೆದಲ್ಲಿ ತಮ್ಮ ಆದಾಯ ದ್ವಿಗುಣ ಗೊಳಿಸಬಹುದು ಎಂದು ತಿಳಿಸಿದರು.

ಅಮೆರಿಕ-ಭಾರತ : ವಿಮಾನಯಾನ

0

ಎರಡು ವರ್ಷಗಳ ಕೊರೊನಾ ಲಾಕ್ ಡೌನ್ ನ ನಂತರ ಎಲ್ಲಾ ಚಟುವಟಿಕೆಗಳು ಮತ್ತೆ ಮೊದಲಿನಂತೆ ಆರಂಭಗೊಂಡಿವೆ. ಈಗ ಅಮೆರಿಕನ್ ಏರ್ ಲೈನ್ಸ್ ಒಂದು ದಶಕದ ಬಳಿಕ ಭಾರತಕ್ಕೆ ತಡೆರಹಿತ ನೇರ ವಿಮಾನ ಸಂಚಾರವನ್ನು ಮತ್ತೆ ಆರಂಭಿಸಿದೆ.
13/11/2021 ರಂದು ನ್ಯೂಯಾರ್ಕ್-ಹೊಸದಿಲ್ಲಿ ನಡುವೆ ಸಂಚರಿಸುವ ಮೊದಲ ವಿಮಾನವು ಇಂದಿರಾಗಾಂಧಿ ಅಂತಾರಾಷ್ಟ್ರೀಯ ನಿಲ್ದಾಣವನ್ನು ಬಂದು ತಲುಪಿದೆ.
ಈ ವಿಮಾನಯಾನವನ್ನು ಅಕ್ಟೋಬರ್ ನಲ್ಲಿಯೇ ಆರಂಭಿಸಬೇಕಿತ್ತು. ಆದರೆ, ಅಂತರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಕಡಿಮೆಯಿರುವುದರಿಂದ ಎರಡು ವಾರ ಮುಂದೂಡಲಾಗಿತ್ತು. ಹಾಗೆಯೇ ಬೆಂಗಳೂರು- ಸಿಯಾಟಲ್ ನಡುವಿನ ನೇರ ವಿಮಾನ ಸಂಚಾರವನ್ನು 2022ರ ಜ. 4 ರಂದು ಆರಂಭಿಸಲು ನಿರ್ಧರಿಸಲಾಗಿದ್ದರೂ, ಅದನ್ನು ಮಾರ್ಚ್ ಅಂತ್ಯಕ್ಕೆ ಮುಂದೂಡಲಾಗಿದೆ ಎಂಬ ವರದಿ ಲಭ್ಯವಾಗಿದೆ. ಕಾರ್ಪೊರೇಟ್ ವ್ಯವಹಾರಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಕೋವಿಡ್ ಪೂರ್ವ ಮಟ್ಟಕ್ಕೆ ಮರಳದೇ ಇರುವುದು ಈ ತೀರ್ಮಾನಕ್ಕೆ ಕಾರಣವಾಗಿದೆ ಎಂದು ಸಂಸ್ಥೆ ತಿಳಿಸಿದೆ.