ಅಮೆರಿಕದ ನಿರ್ಬಂಧ ಬೆದರಿಕೆ ನಡುವೆಯೇ ರಷ್ಯಾವು ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ‘ಎಸ್-400’ ಅನ್ನು ಭಾರತಕ್ಕೆ ಪೂರೈಸುವ ಪ್ರಕ್ರಿಯೆ ಆರಂಭಿಸಿದೆ. ‘ ವರ್ಷಾಂತ್ಯಕ್ಕೆ ಎಸ್-400 ವ್ಯವಸ್ಥೆಯ ಮೊದಲ ಘಟಕವು ಪೂರ್ಣ ಪ್ರಮಾಣದಲ್ಲಿ ಭಾರತ ತಲುಪಲಿದೆ. ಈಗಾಗಲೇ ಮೊದಲ ಕಂತಿನ ಭಾಗಗಳು ಭಾರತಕ್ಕೆ ಹಸ್ತಾಂತರವಾಗಿವೆ’ ಎಂದು ರಷ್ಯಾದ ಮಿಲಿಟರಿ ಸಹಕಾರ ಏಜೆನ್ಸಿ ಮುಖ್ಯಸ್ಥ ಮಿಟ್ರಿ ಶುಗಾಯೆವ್ ಹೇಳಿದ್ದಾರೆ.
ರಷ್ಯಾದ ಮಿಲಿಟರಿ ಶಸ್ತ್ರಾಸ್ತ್ರ ಗಳನ್ನು ಖರೀದಿಸುವ ದೇಶದ ವಿರುದ್ಧ ಅಮೆರಿಕವು ಹಣಕಾಸು ಮತ್ತು ಮಿಲಿಟರಿ ವ್ಯವಹಾರ ನಡೆಸುವುದಿಲ್ಲ. ಈ ಸಂಬಂಧ 2017ರಲ್ಲಿ ‘ಕ್ಯಾಟ್ಸಾ’ ಕಾನೂನು ರೂಪಿಸಲಾಗಿದೆ. ಎಸ್-400 ಖರೀದಿಸಿದ ಟರ್ಕಿ ವಿರುದ್ಧ ಕಳೆದ ವರ್ಷ ಅಮೆರಿಕ ಸರ್ಕಾರವನ್ನು ಅಡಿಯಲ್ಲಿ ನಿರ್ಬಂಧ ಹೇರಿದೆ. ಇದಲ್ಲದೆ ಎಫ್-35 ಯುದ್ಧವಿಮಾನ ಯೋಜನೆಯಿಂದಲೂ ಟರ್ಕಿಯನ್ನು ಹೊರಕ್ಕೆ ದೂಡಲಾಗಿದೆ. ನ್ಯಾಟೋ ಒಕ್ಕೂಟದ ಟರ್ಕಿ ವಿರುದ್ಧವೇ ಅಮೇರಿಕಾ ಇಷ್ಟೊಂದು ಖಡಕ್ ಕ್ರಮ ಕೈಗೊಂಡಿದ್ದರೂ, ಭಾರತದ ವಿರುದ್ಧ ಮಾತ್ರ ಮೊದಲಿನಿಂದಲೂ ಮೃದು ಧೋರಣೆಯನ್ನು ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಷ್ಯಾದಿಂದ ಎಸ್- 400 ಖರೀದಿಸುವುದು ಬೇಡ, ಬದಲಿಗೆ ತಮ್ಮ ಬಳಿಯಿರುವ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ನೀಡುವುದಾಗಿ ಈಗಾಗಲೇ ಹಲವು ಬಾರಿ ಅಮೆರಿಕಾದ ರಕ್ಷಣಾ ಸಚಿವರು ಮತ್ತು ವಿದೇಶಾಂಗ ಸಚಿವರು ಭಾರತ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಆದರೆ, ರಷ್ಯಾ ಸರ್ಕಾರದೊಂದಿಗೆ ಒಪ್ಪಂದ ಮುರಿದು ಕೊಳ್ಳಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.