ಸಾಫ್ಟ್‌ವೇರ್ ಸೇವೆಗಳು ಮತ್ತು AI ಆಧಾರಿತ ಉತ್ಪನ್ನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರೂ ಐಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಶಿವಮೊಗ್ಗದಲ್ಲಿ ತನ್ನ ಹೊಸ ಕಚೇರಿಯನ್ನು ಆರಂಭಿಸಿದೆ. ಸಂಸ್ಥೆಗೆ ಈಗಾಗಲೇ ಬೆಂಗಳೂರು ಮತ್ತು ಮಧುರೈ ನಗರಗಳಲ್ಲಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಹೊಸ ಕಚೇರಿಯ ಮೂಲಕ ಕೃತಕ ಬುದ್ಧಿಮತ್ತೆ (AI), ವೆಬ್ ಮತ್ತು ಮೊಬೈಲ್ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರಿಂದ ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಶಿವಮೊಗ್ಗದ ತಂತ್ರಜ್ಞಾನ ಮತ್ತು ಆರ್ಥಿಕ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ
Department of Posts ಅಂಚೆ ಇಲಾಖೆ ವತಿಯಿಂದ ಶಾಖಾ ಅಂಚೆಪಾಲಕ, ಸಹಾಯಕ ಅಂಚೆಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ಅಂಚೆ ವಿಭಾಗದಲ್ಲಿ 57 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು ವೆಬ್ ಸೈಟ್
https://indiapost.gov.in/gdsonlineengagement ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
ಅರ್ಜಿ ನೋಂದಣಿ ಮಾಡಲು ಫೆ.14 ಹಾಗೂ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕಪಾವತಿಸಲು ಫೆ.16 ಕಡೆಯ ದಿನವಾಗಿದೆ. ಎಲ್ಲ ಹುದ್ದೆಗಳಿಗೆ 10ನೇ ತರಗತಿ ತೇರ್ಗಡೆ ಕಡ್ಡಾಯ. ಕನ್ನಡವನ್ನು ಹತ್ತನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಹಾಗೂ ಗಣಿತ ಮತ್ತು ಇಂಗ್ಲೀಷ್ ನಲ್ಲಿ ಕನಿಷ್ಠ ತೇರ್ಗಡೆ ಅಂಕ ಹೊಂದಿರಬೇಕು. ವಯೋಮಿತಿ 18 ರಿಂದ 40 ವರ್ಷವಿದ್ದು ಮೀಸಲು ವರ್ಗಗಳಿಗೆ ವಯೋಮಿತಿ ಸಡಲಿಕೆ ಇರುತ್ತದೆ. ಅಂಕಗಳ ಆಧಾರದಲ್ಲಿ ಆನ್ ಲೈನ್ ಮೂಲಕವೇ ನೇಮಕಾತಿ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08182-222835 ನ್ನು ಸಂರ್ಕಿಸಬಹುದಾಗಿದೆ.
ರೇಷ್ಮೆ ಕೃಷಿ ಪ್ರಶಸ್ತಿಗಾಗಿ ರೇಷ್ಮೆ ಬೆಳೆಗಾರರಿಂದ ಅರ್ಜಿ ಆಹ್ವಾನ
2023-24 ಮತ್ತು 2024-25 ನೇ ಸಾಲಿಗೆ ರೇಷ್ಮೆ ಕೃಷಿ ಪ್ರಶಸ್ತಿ ನೀಡಲು ಉತ್ತಮ ಪ್ರಗತಿ ಸಾಧಿಸಿರುವ ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರೇಷ್ಮೆ ಬೆಳೆಗಾರರು ಕನಿಷ್ಠ 1 ಎಕರೆ ಹಿಪ್ಪುನೇರಳೆ ತೋಟ ಹಾಗೂ ಪ್ರತ್ಯೇಕ ಹುಳು ಸಾಕಾಣಿಕೆ ಮನೆ ಹೊಂದಿರಬೇಕು. 100 ಮೊಟ್ಟೆಗೆ ಸರಾಸರಿ ರೇಷ್ಮೆ ಗೂಡಿನ ಇಳುವರಿ 65 ಕೆಜಿ ಹಾಗೂ ಒಂದು ಎಕರೆಗೆ ರೇಷ್ಮೆ ಗೂಡಿನ ಉತ್ಪಾದನೆ 500 ಕೆಜಿ ಗಿಂತ ಕಡಿಮೆ ಇರಬಾರದು. ರೇಷ್ಮೆ ಪಾಸ್ ಬುಕ್ , ರೇಷ್ಮೆ ಮೊಟ್ಟೆ /ಚಾಕಿ ಖರೀದಿಸಿರುವ ಬಗ್ಗೆ ಹಾಗೂ ರೇಷ್ಮೆ ಗೂಡು ಮಾರಾಟ ಮಾಡಿರುವ ಬಗ್ಗೆ ದಾಖಲಾತಿ ಹೊಂದಿರಬೇಕು.
ಆಸಕ್ತರು ಸ್ಥಳೀಯ ರೇಷ್ಮೆ ಸಹಾಯಕ ನಿರ್ದೇಶಕರ ಕಛೇರಿಗೆ ಸಂಪರ್ಕಿಸಿ ಅರ್ಜಿ ಪಡೆದುಕೊಂಡು ಅಗತ್ಯ ದಾಖಲಾತಿಗಳೊಂದಿಗೆ ಫೆಬ್ರವರಿ 6 ರೊಳಗಾಗಿ ಅರ್ಜಿ ರೇಷ್ಮೆ ಉಪ ನಿರ್ದೇಶಕರ ಕಛೇರಿ, ಶಿವಮೊಗ್ಗ ಇಲ್ಲಿಗೆ ಸಲ್ಲಿಸಬೇಕೆಂದು ರೇಷ್ಮೆ ಉಪನಿರ್ದೇಶಕರು ತಿಳಿಸಿದ್ದಾರೆ
ತೀರ್ಥಹಳ್ಳಿ ತಾಲೂಕಿನಲ್ಲಿ ಎರಡು ಪ್ರತ್ಯೇಕ ಸಿಲಿಂಡರ್ ಗೆ ಬೆಂಕಿ ಪ್ರಕರಣ-ಅಗ್ನಿಶಾಮಕ ದಳ ಡೌಡು
ತೀರ್ಥಹಳ್ಳಿ ಪ್ರತ್ಯೇಕ ಎರಡು ಮನೆಗಳಲ್ಲಿ ಸಿಲಿಂಡರ್ ಗೆ ಏಕಾಏಕಿ ಬೆಂಕಿ ಹತ್ತಿಕೊಂಡ ಪ್ರಕರಣ ಬೆಳಕಿಗೆ ಬಂದಿವೆ. ಒಂದು ಪ್ರಕರಣ, ಇಂದು ಬೆಳಗ್ಗೆ ತೀರ್ಥಹಳ್ಳಿಯ ಬೆಳಗಾರ್ ನಲ್ಲಿ ನಡೆದಿದ್ದು ಬೆಂಕಿ ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಬಾಳಗಾರಿನ ನಾಗರಾಜ್ ಭಟ್ ಎನ್ನುವವರ ಮನೆಯಲ್ಲಿ ಬಳಸುತ್ತಿದ್ದ ಎಚ್ ಪಿ ಗ್ಯಾಸ್ ಸಿಲಿಂಡರ್ ಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಗ್ಯಾಸ್ ಬ್ಲಾಸ್ಟ್ ಆಗುವ ಭಯದಲ್ಲಿ ಬೆಂಕಿ ನಂದಿಸುವ ಪ್ರಯತ್ನ ನಡೆದಿದೆ. ಆ ನಂತರ ಎಚ್ ಪಿ ಗ್ಯಾಸ್ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಹಾಗೆ ಇನ್ನೊಂದು ಪ್ರಕರಣ, ಲೇಔಟ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಹಾರ ಮೂಲದ ಕಾರ್ಮಿಕರು ಅಡುಗೆ ಮಾಡುವಾಗ ಗ್ಯಾಸ್ ಸ್ಟವ್ ನಲ್ಲಿ ಲೀಕ್ ಆದ ಹಿನ್ನಲೆಯಲ್ಲಿ ಸಿಲಿಂಡರ್ ಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು ಬೆಂಕಿ ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಮೇಲಿನಕುರುವಳ್ಳಿಯ ಕೊಪ್ಪ ರಸ್ತೆಯ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ಕಾರ್ಮಿಕರ ತಂಡ ಕೆಲಸ ನಿರ್ವಹಿಸುತ್ತಿದ್ದಾರೆ. ಅಡುಗೆ ಮಾಡುವಾಗ ಬೆಂಕಿ ಹತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಇಂದು ಬೆಳಗ್ಗೆ ಬಾಳಗಾರಿನಲ್ಲಿ ಸಂಜೆ ಮೇಲಿನಕುರುವಳ್ಳಿಯಲ್ಲಿ ಒಂದೇ ರೀತಿಯಲ್ಲಿ ಘಟನೆ ನಡೆದಿದೆ.
ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳ ಅಭ್ಯರ್ಥಿಗಳಾಗಿ ಅಪೂರ್ಣ ಅರ್ಜಿ ಸಲ್ಲಿಸಿದವರಿಗೆ ವಿಶೇಷ ಮಾಹಿತಿ
ಶಿವಮೊಗ್ಗ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಅಪೂರ್ಣ ಅರ್ಜಿ ಪೂರ್ಣಗೊಳಿಸಲು ಫೆಬ್ರವರಿ 3 ರಿಂದ 12 ರವರೆಗೆ 10 ದಿನಗಳ ಕಾಲವಕಾಶ ನೀಡಲಾಗಿದೆ.
ಅಭ್ಯರ್ಥಿಗಳು https://karnemakaone.kar.nic.in/abcd/ ವೆಬ್ಸೈಟ್ ಮೂಲಕ 4 ಹಂತಗಳನ್ನು ಪೂರೈಸಿ ಅಪೂರ್ಣ ಅರ್ಜಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಬಣಕಾರ್ ತಿಳಿಸಿದ್ದಾರೆ.
B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ
B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ತಮ್ಮ 9ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಆತ್ಮನಿರ್ಭರ, ವಿಕಸಿತ ಭಾರತ ಮತ್ತು ಸ್ವಾವಲಂಬನೆಯನ್ನು ಗುರಿಯಾಗಿ ಇಟ್ಟುಕೊಂಡು ಅತ್ಯುತ್ತಮ ಬಜೆಟ್ ಮಂಡಿಸಿದ್ದಾಗಿ ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಅವರು ಮಾತನಾಡಿದರು. ಅಸ್ಪಷ್ಟತೆಯಿಂದ ಸ್ಪಷ್ಟತೆ ಕಡೆಗೆ, ಆಡಂಬರದಿಂದ ಸುಧಾರಣೆಯತ್ತ, ಜನಪ್ರಿಯತೆಗಿಂತ ಜನಹಿತ ಮುಖ್ಯ ಎಂಬುದನ್ನು ನಿನ್ನೆ ಮತ್ತೊಮ್ಮೆ ಅವರು ಋಜುವಾತು ಮಾಡಿದ್ದಾರೆ ಎಂದು ವಿಶ್ಲೇಷಿಸಿದರು. ಜಾಗತಿಕ ಪರಿಸ್ಥಿತಿಯನ್ನೂ ನಾವು, ನೀವೆಲ್ಲರೂ ಗಮನಿಸಬೇಕಿದೆ. ಅಮೆರಿಕ ಅಧ್ಯಕ್ಷ ಟ್ರಂಪ್, ಭಾರತದ ವಿರುದ್ಧ ಸಾರಿರುವ ಸುಂಕ- ವಾಣಿಜ್ಯ ಸಮರಕ್ಕೆ ಎದೆಗುಂದದೆ 2047ಕ್ಕೆ ವಿಕಸಿತ ಭಾರತ ಆಗಬೇಕೆಂಬ ಪ್ರಧಾನಮಂತ್ರಿಯವರ ಗುರಿಯತ್ತ ಸಾಗುವ ನಿಟ್ಟಿನಲ್ಲಿ ಅನೇಕ ಸುಧಾರಣೆಗಳನ್ನು ಮಾನ್ಯ ಹಣಕಾಸು ಸಚಿವರು ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಕೈಗಾರಿಕೆ, ಪ್ರವಾಸೋದ್ಯಮ, ಸೆಮಿ ಕಂಡಕ್ಟರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕೃಷಿ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದಾರೆ. ಆರ್ಥಿಕ ಶಿಸ್ತು ಕಾಪಾಡುವ ಮಹತ್ವದ ಜವಾಬ್ದಾರಿ ಹಣಕಾಸು ಸಚಿವರ ಮೇಲೆ ಇತ್ತು. ಆ ಪ್ರಥಮ ಆದ್ಯತೆ ಇಟ್ಟುಕೊಂಡು, ಹಣಕಾಸು ಕೊರತೆ ಶೇ 4.4ಕ್ಕೆ ತಂದಿರುವುದು ಇದಕ್ಕೆ ಸಾಕ್ಷಿ ಎಂದು ನುಡಿದರು.
ರಾಜ್ಯದ ತೆರಿಗೆ ಪಾಲು ಶೇ 3.65ರಿಂದ 4.13 ಶೇಕಡಾಕ್ಕೆ ಹೆಚ್ಚಳ
ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ತೆಂಗು ಬೆಳೆಗಾರರಿದ್ದಾರೆ. ಅದೇರೀತಿ ಗೋಡಂಬಿ, ಕೊಕ್ಕೊ, ಮೀನು ಸಾಕಣೆ ಮಾಡುವವರು, ಶ್ರೀಗಂಧ ಬೆಳೆಗಾರರಿಗೆ ಈ ಬಜೆಟ್ ಅನುಕೂಲ ಕಲ್ಪಿಸಿದೆ. ಇದು ಅತ್ಯಂತ ಸ್ವಾಗತಾರ್ಹ. ಕಳೆದ 2.5 ವರ್ಷದಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಬಂದ ಬಳಿಕ ಕೇಂದ್ರ ಸರಕಾರವನ್ನು ಪದೇಪದೇ ಟೀಕಿಸುವುದನ್ನು ನೋಡಿದ್ದೇವೆ. 16ನೇ ಹಣಕಾಸು ಆಯೋಗವು ಜಿಡಿಪಿ ಕೊಡುಗೆಗೆ ಶೇ. 10 ರಷ್ಟು ಸುಧಾರಣೆ ಮೊತ್ತ ಪ್ರಕಟಿಸಿದೆ. ಇದರಿಂದ ನಮ್ಮ ರಾಜ್ಯದ ತೆರಿಗೆ ಪಾಲು ಶೇ 3.65ರಿಂದ 4.13 ಶೇಕಡಾಕ್ಕೆ ಹೆಚ್ಚಾಗಿದೆ. ಪ್ರತಿ ವರ್ಷ ಕರ್ನಾಟಕಕ್ಕೆ 7,387 ಕೋಟಿ ರೂ. ಹೆಚ್ಚುವರಿಯಾಗಿ ಲಭಿಸಲಿದೆ. 5 ವರ್ಷಕ್ಕೆ ಹೆಚ್ಚುವರಿಯಾಗಿ 63,050 ಕೋಟಿ ರೂ. ದೊರಕಲಿದೆ ಎಂದು ತಿಳಿಸಿದರು.
ಮೂಲಭೂತ ಸೌಕರ್ಯ ವಿಷಯದಲ್ಲಿ ಕ್ರಾಂತಿಕಾರಿ ನಿರ್ಧಾರ
2014 ಪೂರ್ವದಲ್ಲಿ ಹಿಂದಿನ ಯುಪಿಎ ಸರಕಾರ ಇದ್ದಾಗ ದೇಶದಲ್ಲಿ ಮೂಲಭೂತ ಸೌಕರ್ಯ ನಿರ್ಮಿಸಲು ಸುಮಾರು 2 ಲಕ್ಷ ಕೋಟಿ ಹಣ ನೀಡುತ್ತಿದ್ದರು. ಆದರೆ, ನರೇಂದ್ರ ಮೋದಿಜೀ ಅವರ ನೇತೃತ್ವದ ಎನ್‍ಡಿಎ ಸರಕಾರ ಬಂದ ಬಳಿಕ 12 ಲಕ್ಷ ಕೋಟಿಯನ್ನು ದೇಶದ ಮೂಲಭೂತ ಸೌಕರ್ಯಕ್ಕೆ ನೀಡಲಾಗಿದೆ. ನಿನ್ನೆ ಮಂಡಿಸಿದ ಬಜೆಟ್‍ನಲ್ಲಿ ಇನ್ನೂ ಹೆಚ್ಚು ಮನ್ನಣೆ, ಮಹತ್ವ ನೀಡಿದ್ದಾರೆ. 12.2 ಲಕ್ಷ ಕೋಟಿಗೆ ಏರಿಸಿರುವುದು ಕ್ರಾಂತಿಕಾರಿ ನಿರ್ಧಾರ ಎಂದು ತಿಳಿಸಿದರು. ರಸ್ತೆ, ರೈಲು, ಬಂದರು, ವಿಮಾನನಿಲ್ದಾಣ- ಈ ರೀತಿ ಅಭಿವೃದ್ಧಿಗೆ ಹೆಚ್ಚು ಹಣ ಮೀಸಲಿಟ್ಟಿದ್ದಾರೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯಲು ಪೂರಕ ನಿರ್ಧಾರ ಮಾಡಿದ್ದಾರೆ ಎಂದು ವಿವರಿಸಿದರು.
ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ
ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಒಂದು ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ಆಹಾರ, ವಾಣಿಜ್ಯ ಮತ್ತು ಮೀನುಗಾರಿಕಾ ಕ್ಷೇತ್ರಕ್ಕೆ ಶೇ 6ರಷ್ಟು ಹೆಚ್ಚುವರಿ ಹಣಕಾಸಿನ ಕೊಡುಗೆಯನ್ನು ಈ ಬಜೆಟ್‍ನಲ್ಲಿ ನೀಡಿದ್ದಾರೆ. ಈ ದೇಶ ಅಭಿವೃದ್ಧಿ ಆಗಬೇಕೆಂದರೆ, ಬಡವರು, ರೈತರು, ಮಹಿಳೆಯರು ಮತ್ತು ಯುವಜನತೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ನರೇಂದ್ರ ಮೋದಿಜೀ ಅವರು ಯಾವಾಗಲೂ ಹೇಳುತ್ತಾರೆ. ಈ ನಿಟ್ಟಿನಲ್ಲಿ ಹಣಕಾಸು ಸಚಿವರು ಮಹಿಳೆಯರಿಗೆ ಉದ್ಯಮ ಸ್ಥಾಪನೆಗಾಗಿ, ಅವರನ್ನು ಸಮಾಜದ ಮುಂಚೂಣಿಗೆ ತರಲು ಶೀ ಮಾರ್ಟ್ ಮೂಲಕ ಮಹಿಳಾ ಉದ್ಯಮ ಮತ್ತು ಉದ್ಯೋಗ ಹೆಚ್ಚಳಕ್ಕೆ ಮುಂದಾಗಿದ್ದಾರೆ ಎಂದು ಶ್ಲಾಘಿಸಿದರು.
B.Y. Vijayendra ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ ಬಜೆಟ್
ಪ್ರತಿ ಜಿಲ್ಲೆಗೊಂದು ಮಹಿಳಾ ಹಾಸ್ಟೆಲ್ ಸ್ಥಾಪನೆ ಮೂಲಕ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಉನ್ನತ ಶಿಕ್ಷಣವನ್ನು ಆದ್ಯತಾ ವಲಯವೆಂದು ಪರಿಗಣಿಸಿ ಶೇ 13ರಷ್ಟು ಹೆಚ್ಚಿನ ಹಣಕಾಸಿನ ನೆರವನ್ನು ಬಜೆಟ್‍ನಲ್ಲಿ ಘೋಷಿಸಿದ್ದು ಸ್ವಾಗತಾರ್ಹ. ಹೈಸ್ಪೀಡ್ ರೈಲುಗಳ ಬಗ್ಗೆಯೂ ನಿನ್ನೆ ಉಲ್ಲೇಖಿಸಿದ್ದಾರೆ. ನಮ್ಮ ಕರ್ನಾಟಕಕ್ಕೆ ವಿಶೇಷವಾಗಿ ಹೈದರಾಬಾದ್- ಬೆಂಗಳೂರು, ಚೆನ್ನೈ- ಬೆಂಗಳೂರು, ಇವೆರಡು ಹೈಸ್ಪೀಡ್ ರೈಲುಗಳನ್ನು ಘೋಷಿಸಿದ್ದಾರೆ. ಇದರಿಂದ ಅತಿ ಹೆಚ್ಚು ತೆರಿಗೆ ಕೊಡುವ ಬೆಂಗಳೂರಿಗೆ ಇನ್ನೂ ಹೆಚ್ಚು ಉದ್ಯಮಗಳು ಬರಲು ಅವಕಾಶವಾಗಲಿದೆ ಎಂದು ವಿಶ್ಲೇಷಿಸಿದರು. ಯುವಜನರು, ಮಹಿಳೆಯರು, ರೈತರಿಗೂ ಆದ್ಯತೆ ನೀಡಿ ವಿಕಸಿತ ಭಾರತಕ್ಕೆ ಪೂರಕ ಬಜೆಟ್ ನೀಡಿದ್ದಾರೆ ಎಂದು ತಿಳಿಸಿದರು.
Women and Child Development Department ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳ ಅಭ್ಯರ್ಥಿಗಳಾಗಿ ಅಪೂರ್ಣ ಅರ್ಜಿ ಸಲ್ಲಿಸಿದವರಿಗೆ ವಿಶೇಷ ಮಾಹಿತಿ.
Women and Child Development Department ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಅಪೂರ್ಣ ಅರ್ಜಿ ಪೂರ್ಣಗೊಳಿಸಲು ಫೆಬ್ರವರಿ 3 ರಿಂದ 12 ರವರೆಗೆ 10 ದಿನಗಳ ಕಾಲವಕಾಶ ನೀಡಲಾಗಿದೆ.
ಅಭ್ಯರ್ಥಿಗಳು https://karnemakaone.kar.nic.in/abcd/ ವೆಬ್ಸೈಟ್ ಮೂಲಕ 4 ಹಂತಗಳನ್ನು ಪೂರೈಸಿ ಅಪೂರ್ಣ ಅರ್ಜಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಬಣಕಾರ್ ತಿಳಿಸಿದ್ದಾರೆ.
S.N. Channabasappa ವಿಕಸಿತ ಭಾರತಕ್ಕೆ ಪೋಷಕವಾದ ಬಜೆಟ್ : ಎಸ್.ಎನ್.ಚನ್ನಬಸಪ್ಪ
S.N. Channabasappa ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ 2026–27 ಭಾರತದ ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯನ್ನು ಸಮತೋಲನಗೊಳಿಸುವ ಜವಾಬ್ದಾರಿಯುತ ಹಾಗೂ ಭವಿಷ್ಯಮುಖಿ ಹಣಕಾಸು ದೃಷ್ಟಿಕೋಣವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್. ಚೆನ್ನಬಸಪ್ಪನವರು ತಿಳಿಸಿದ್ದಾರೆ.
ಜಿಡಿಪಿಯ 4.3% ರಷ್ಟು ಹಣಕಾಸು ಕೊರತೆಯನ್ನು ಗುರಿಯಾಗಿ ನಿಗದಿಪಡಿಸಿರುವುದು ಹಣಕಾಸು ಶಿಸ್ತು ಮತ್ತು ಸಾಲದ ಸಮಗ್ರ ನಿರ್ವಹಣೆಗೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ರಾಜ್ಯಗಳಿಗೆ ₹1.4 ಲಕ್ಷ ಕೋಟಿ ತೆರಿಗೆ ಹಂಚಿಕೆ, ಒಟ್ಟು ಶುದ್ಧ ತೆರಿಗೆ ಆದಾಯವನ್ನು ₹28.7 ಲಕ್ಷ ಕೋಟಿ ಎಂದು ಅಂದಾಜು ಮಾಡಿರುವುದು ಹಾಗೂ ಒಟ್ಟು ಬಜೆಟ್ ಗಾತ್ರವನ್ನು ₹53.5 ಲಕ್ಷ ಕೋಟಿಗೆ ವಿಸ್ತರಿಸಿರುವುದು ಅಭಿವೃದ್ಧಿ ವೆಚ್ಚ ಮತ್ತು ಹಣಕಾಸು ಶಿಸ್ತಿನ ನಡುವೆ ಸಮತೋಲನ ಸಾಧಿಸಲು ಕೈಗೊಂಡ ಪ್ರಾಮಾಣಿಕ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ತೆರಿಗೆದಾರರಿಗೆ ಸಹಾನುಭೂತಿಯ ದೃಷ್ಟಿಯಿಂದ, ಐಟಿಆರ್ ತಿದ್ದುಪಡಿ ಸಲ್ಲಿಕೆ ಅವಧಿಯನ್ನು ಡಿಸೆಂಬರ್ 31ರಿಂದ ಮಾರ್ಚ್ 31ರವರೆಗೆ ವಿಸ್ತರಿಸಿ ಅಲ್ಪ ಶುಲ್ಕದೊಂದಿಗೆ ಅವಕಾಶ ನೀಡಿರುವುದು ನಿಜವಾದ taxpayer-friendly ಕ್ರಮವಾಗಿದೆ. ಜೊತೆಗೆ, ಸಾಫ್ಟ್‌ವೇರ್ ಅಭಿವೃದ್ಧಿ, ಐಟಿ ಸಕ್ರಿಯ ಸೇವೆಗಳು (ITES), ಜ್ಞಾನ ಪ್ರಕ್ರಿಯಾ ಔಟ್‌ಸೋರ್ಸಿಂಗ್ (KPO) ಮತ್ತು ಕಾನ್ಟ್ರಾಕ್ಟ್ R&D ಸೇವೆಗಳನ್ನು ಒಗ್ಗೂಡಿಸಿ “Information Technology Services” ಎಂಬ ಒಂದೇ ವರ್ಗದಲ್ಲಿ ಸೇರಿಸಿ 15.5% ಸಾಮಾನ್ಯ safe harbour margin ನಿಗದಿ ಮಾಡಿರುವುದು ಭಾರತದ ಜಾಗತಿಕ ಐಟಿ ಕ್ಷೇತ್ರಕ್ಕೆ ನೀತಿ ಸ್ಪಷ್ಟತೆ ಮತ್ತು ಸ್ಪರ್ಧಾತ್ಮಕ ಬಲ ನೀಡಲಿದೆ ಎಂದಿದ್ದಾರೆ.
ಈ ಬಜೆಟ್‌ನ ಮಾನವೀಯ ಆಯಾಮಗಳು ಇನ್ನಷ್ಟು ಗಮನಾರ್ಹ. ದಿವ್ಯಾಂಗಜನರಿಗೆ ಗೌರವಯುತ ಜೀವನೋಪಾಯ ಅವಕಾಶಗಳನ್ನು ಸೃಷ್ಟಿಸಲು ವಿಶೇಷ ಕ್ರಮಗಳನ್ನು ಘೋಷಿಸಿರುವುದು ಸಮಾನ ಅವಕಾಶಗಳತ್ತ ಸರ್ಕಾರದ ಬದ್ಧತೆಯನ್ನು ದೃಢಪಡಿಸುತ್ತದೆ. ಮಹಿಳಾ ಸಬಲೀಕರಣ, ಕೌಶಲ್ಯಾಭಿವೃದ್ಧಿ ಮತ್ತು ಸಣ್ಣ ಉದ್ಯಮಗಳಿಗೆ ಹಣಕಾಸು ಬೆಂಬಲದ ಮೂಲಕ ಸಮಾಜದ ವಿವಿಧ ವರ್ಗಗಳನ್ನು ಅಭಿವೃದ್ಧಿಯ ಪ್ರಧಾನ ಪ್ರವಾಹಕ್ಕೆ ತರಲು ಬಜೆಟ್ ಪ್ರಯತ್ನಿಸುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆ, ಔಷಧೋದ್ಯಮ ಮತ್ತು ಪರಂಪರಾ ವೈದ್ಯಕೀಯ ಮೂಲಸೌಕರ್ಯಗಳಿಗೆ ನೀಡಿರುವ ಉತ್ತೇಜನ ದೇಶದ ಆರೋಗ್ಯ ಭದ್ರತೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಉದ್ಯೋಗ ಮತ್ತು ಯುವಶಕ್ತಿ ದೃಷ್ಟಿಯಿಂದ, ಮೂಲಸೌಕರ್ಯ ಹೂಡಿಕೆ, ತಯಾರಿಕಾ ವಲಯದ ವಿಸ್ತರಣೆ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೀತಿ ಸ್ಪಷ್ಟತೆ ನೀಡಿರುವುದು ಹೊಸ ಉದ್ಯೋಗಾವಕಾಶಗಳು ಮತ್ತು ಉನ್ನತ ಕೌಶಲ್ಯದ ವೃತ್ತಿಗಳಿಗೆ ದಾರಿ ಮಾಡಿಕೊಡುತ್ತದೆ. ಶಿಕ್ಷಣ ಮತ್ತು ನವೀನತೆಯ ಮೇಲೆ ಒತ್ತು ನೀಡಿರುವುದು ಯುವಜನತೆಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
S.N. Channabasappa ಪರಿಸರ ಹಾಗೂ ಹಸಿರು ತಂತ್ರಜ್ಞಾನಗಳ ದಿಕ್ಕಿನಲ್ಲಿ, ಮುಂದಿನ ಐದು ವರ್ಷಗಳಲ್ಲಿ Carbon Capture, Utilization and Storage (CCUS) ತಂತ್ರಜ್ಞಾನಗಳಿಗೆ ₹20,000 ಕೋಟಿ ಮೀಸಲಿಡಲಾಗಿದೆ ಎಂಬ ಘೋಷಣೆ ಭಾರತವನ್ನು ಹವಾಮಾನ ಬದಲಾವಣೆಗೆ ತಾಂತ್ರಿಕ ಪರಿಹಾರಗಳನ್ನು ರೂಪಿಸುವ ಮುಂಚೂಣಿ ರಾಷ್ಟ್ರಗಳ ಸಾಲಿಗೆ ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿದೆ. ಒಟ್ಟಾರೆ, ಈ ಬಜೆಟ್ ಆರ್ಥಿಕ ಜವಾಬ್ದಾರಿ, ತಂತ್ರಜ್ಞಾನ ನಾಯಕತ್ವ, ಪರಿಸರ ಬದ್ಧತೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆ — ಈ ನಾಲ್ಕು ಸ್ತಂಭಗಳ ಮೇಲೆ ನಿರ್ಮಿತವಾದ ಈ ಕರ್ತವ್ಯದ ಬಜೆಟ್ ಸಮಗ್ರ, ಜನಕೇಂದ್ರಿತ ಮತ್ತು ಭವಿಷ್ಯಮುಖಿ ಅಭಿವೃದ್ಧಿ ರೂಪರೇಷೆಯನ್ನು ದೇಶಕ್ಕೆ ನೀಡುತ್ತದೆ ಎಂದಿದ್ದಾರೆ.
ಈ ಕರ್ತವ್ಯದ ಬಜೆಟ್ಅನ್ನು ದೇಶದ ಜನತೆಗೆ ಅರ್ಪಿಸಿದ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರಕ್ಕೆ ಶಿವಮೊಗ್ಗ ನಗರದ ನಾಗರೀಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
Dr. Devi Prasad Shetty ಆರೋಗ್ಯ ಕ್ಷೇತ್ರಕ್ಕೆ ರಾಷ್ಟ್ರೀಯ ಆದ್ಯತೆ ನೀಡಿರುವ ಬಜೆಟ್- ಡಾ.ದೇವಿ ಪ್ರಸಾದ್ ಶೆಟ್ಟಿ
Dr. Devi Prasad Shetty “ಈ ವರ್ಷ ವೈದ್ಯಕೀಯ ಕ್ಷೇತ್ರಕ್ಕೆ ಚಿಂತನಶೀಲವಾಗಿ ಮತ್ತು ಸುದೀರ್ಘ ದೃಷ್ಟಿಕೋನದಿಂದ ಗಮನ ಹರಿಸಿ ಬಜೆಟ್ ಮಂಡಿಸಲಾಗಿದೆ ಎಂದು ನಾರಾಯಣ ಹೆಲ್ತ್ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿಯವರು ತಿಳಿಸಿದ್ದಾರೆ.
ಬಲಿಷ್ಠ ವೈದ್ಯಕೀಯ ವ್ಯವಸ್ಥೆಯು ಭಾರತದ ಆರ್ಥಿಕ ಮತ್ತು ಸಾಮಾಜಿಕ ದೃಢತೆಗೆ ಬಹಳ ಮುಖ್ಯ ಎಂಬುದನ್ನು ಸರ್ಕಾರದ ಗುರುತಿಸಿರುವುದನ್ನು ಈ ಬಜೆಟ್ ಪ್ರತಿಬಿಂಬಿಬಿಸಿದೆ. ಆರೋಗ್ಯ ರಕ್ಷಣೆಯನ್ನು ದೀರ್ಘಕಾಲೀನ ರಾಷ್ಟ್ರೀಯ ಆದ್ಯತೆಯಾಗಿ ಬಲಪಡಿಸುವತ್ತ ಗೌರವಾನ್ವಿತ ಹಣಕಾಸು ಸಚಿವರು ತೋರಿರುವ ಸಮತೋಲಿತ ಗಮನವನ್ನು ನಾವು ಶ್ಲಾಘಿಸುತ್ತೇವೆ. ₹10,000 ಕೋಟಿ ವೆಚ್ಚದ ‘ಬಯೋ ಫಾರ್ಮಾ ಪವರ್’ ಯೋಜನೆಯು ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್‌ಗಳಲ್ಲಿ ದೇಶೀಯವಾದ ಬಲವಾದ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಇದು ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳಿಗೆ ಸುಧಾರಿತ ಚಿಕಿತ್ಸೆಗಳ ಲಭ್ಯತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಖಾಸಗಿ ವಲಯದ ಸಹಭಾಗಿತ್ವದಲ್ಲಿ ಪ್ರಾದೇಶಿಕ ವೈದ್ಯಕೀಯ ಹಬ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಯು ಜಾಗತಿಕ ವೈದ್ಯಕೀಯ ಕ್ಷೇತ್ರದಲ್ಲಿ ಮೌಲ್ಯಯುತ ತಾಣವಾಗಿ ಭಾರತದ ಸ್ಥಾನವನ್ನು ಬಲಪಡಿಸಲಿದೆ. ಜೊತೆಗೆ ದೇಶದೊಳಗೆ ರೋಗ ತಡೆಗಟ್ಟುವಿಕೆ, ಪುನರ್ವಸತಿ ಮತ್ತು ನಿರಂತರ ಆರೈಕೆಯ ಮಾದರಿಗಳನ್ನು ಇದು ಉತ್ತಮಗೊಳಿಸುತ್ತದೆ. ತುರ್ತು ಮತ್ತು ಆಘಾತ ಚಿಕಿತ್ಸಾ ಕ್ಷೇತ್ರದ ಸಾಮರ್ಥ್ಯವನ್ನು 50% ರಷ್ಟು ಹೆಚ್ಚಿಸುವ ಮೂಲಕ ಜಿಲ್ಲಾ ಆಸ್ಪತ್ರೆಗಳನ್ನು ಬಲಪಡಿಸುವುದು, ಇದರೊಂದಿಗೆ ಎರಡನೇ ನಿಮ್ಹಾನ್ಸ್ ಮತ್ತು ಪ್ರಾದೇಶಿಕ ಮಾನಸಿಕ ಆರೋಗ್ಯ ಸೇವಾ ಕೇಂದ್ರಗಳ ಸ್ಥಾಪನೆಯು ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕಾದ ವೈದ್ಯಕೀಯ ಸೇವೆ ದೊರಕಿಸಲಿದೆ ಮತ್ತು ಮಾನಸಿಕ ಆರೋಗ್ಯ ಸೇವೆಯಲ್ಲಿನ ನಿರ್ಣಾಯಕ ಕೊರತೆಗಳನ್ನು ನೀಗಿಸುತ್ತದೆ.
Dr. Devi Prasad Shetty ಅಲೈಡ್ ಹೆಲ್ತ್ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ನಿರ್ಣಾಯಕ ವಿಭಾಗಗಳಲ್ಲಿ ತರಬೇತಿಯನ್ನು ಒದಗಿಸುವ ಕ್ರಮಗಳು ಕ್ಲಿನಿಕಲ್ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಉತ್ತಮ ಗುಣಮಟ್ಟದ ಆರೈಕೆಯನ್ನು ನೀಡಲು ಬೆಂಬಲ ನೀಡುತ್ತವೆ. ವೈದ್ಯಕೀಯ ಉದ್ದೇಶದ ಹಣ ರವಾನೆಗಳ ಮೇಲಿನ ಟಿಸಿಎಸ್ ಅನ್ನು ತರ್ಕಬದ್ಧಗೊಳಿಸಿರುವುದು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಕ್ರಮಗಳು ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಕಡೆಗೆ ಒಂದು ಸುಸಂಬದ್ಧ ಹೆಜ್ಜೆಯಾಗಿದೆ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.
Narayana Health Insurance ವೈದ್ಯಕೀಯ ಸಾಮರ್ಥ್ಯ ವೃದ್ಧಿಸುವ ಅಂಶಗಳಿರುವ ಬಜೆಟ್-ರವಿ ವಿಶ್ವನಾಥ್.
Narayana Health Insurance “ಈ ವರ್ಷದ ಬಜೆಟ್, ದೇಶದ ವೈದ್ಯಕೀಯ ಮೂಲಸೌಕರ್ಯ ವ್ಯವಸ್ಥೆ ಮತ್ತು ವಿಶೇಷ ವೈದ್ಯಕೀಯ ಸಾಮರ್ಥ್ಯವನ್ನು ವೃದ್ಧಿಸುವ ಸರ್ಕಾರದ ದೀರ್ಘಕಾಲೀನ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವಂತೆ ಮೂಡಿಬಂದಿದೆ ಎಂದು ನಾರಾಯಣ ಹೆಲ್ತ್ ಇನ್ಶೂರೆನ್ಸ್ ನ ಮಂಡಳಿ ಸದಸ್ಯರು ಹಾಗೂ ನಿರ್ದೇಶಕರಾದ ರವಿ ವಿಶ್ವನಾಥ್ ಅವರು ತಿಳಿಸಿದ್ದಾರೆ.
ವಿಶೇಷವಾಗಿ 2025-26ರ ಸುಧಾರಣಾ ವೇಗವನ್ನು ಅದೇ ಆವೇಗದಲ್ಲಿ ಮುಂದುವರಿಸಲು ನೆರವಾಗಲಿದೆ. ಈ ಹೂಡಿಕೆಗಳು ಅತ್ಯಗತ್ಯವಾಗಿದ್ದರೂ, ಭಾರತದಲ್ಲಿ ಆರೋಗ್ಯ ವಿಮೆಯ ವ್ಯಾಪ್ತಿ ಇನ್ನೂ ಕಡಿಮೆ ಇದೆ. ಅನೇಕ ಉದ್ಯಮ ಅಂದಾಜಿನ ಪ್ರಕಾರ ಇದು ಜಿಡಿಪಿಯ 1%ಗಿಂತಲೂ ಕಡಿಮೆಯಿದೆ. ಅಲ್ಲದೇ, ರಾಷ್ಟ್ರೀಯ ಆರೋಗ್ಯ ಲೆಕ್ಕಪತ್ರ 2021-22ರ ಪ್ರಕಾರ, ಒಟ್ಟು ವೈದ್ಯಕೀಯ ವೆಚ್ಚದಲ್ಲಿ ಶೇ. 39.4ರಷ್ಟು ಹಣವನ್ನು ಜನರು ಇಂದಿಗೂ ತಮ್ಮ ಸ್ವಂತ ಉಳಿತಾಯದಿಂದಲೇ ಭರಿಸುತ್ತಿದ್ದಾರೆ.
ಒಂದು ಬೃಹತ್ ಆಸ್ಪತ್ರೆ ಸಮೂಹದ ಭಾಗವಾಗಿರುವ ವಿಮಾ ಸಂಸ್ಥೆಯ ದೃಷ್ಟಿಕೋನದಿಂದ ನೋಡುವುದಾದರೆ, ಉತ್ತಮ ಗುಣಮಟ್ಟದ ಚಿಕಿತ್ಸೆ ಲಭ್ಯವಿದ್ದರೂ ಸಹ, ಚಿಕಿತ್ಸೆ ವಿಳಂಬವಾಗಲು ಮತ್ತು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಲು ಸೂಕ್ತವಾದ ಆರ್ಥಿಕ ರಕ್ಷಣೆಯ ಕೊರತೆಯೇ ಮುಖ್ಯ ಕಾರಣವಾಗಿದೆ ಎಂದಿದ್ದಾರೆ.
Narayana Health Insurance ಆರೋಗ್ಯ ರಕ್ಷಣಾ ಸಾಮರ್ಥ್ಯವು ಬೆಳೆಯುತ್ತಿರುವ ಈ ಸಂದರ್ಭದಲ್ಲಿ, ಮುಂದಿನ ಹಂತದ ಸುಧಾರಣೆಗಳು ವಿಮೆಯನ್ನು ಇನ್ನಷ್ಟು ಸರಳವಾಗಿ, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮತ್ತು ಚಿಕಿತ್ಸಾ ಪದ್ಧತಿಗೆ ಪೂರಕವಾಗಿರುವಂತೆ ಮಾಡುವತ್ತ ಗಮನ ಹರಿಸಬೇಕು. ಉತ್ತಮ ಆರೋಗ್ಯ ಚಿಕಿತ್ಸಾ ಫಲಿತಾಂಶಗಳನ್ನು ಪಡೆಯಲು, ಮನೆಮಂದಿಯ ಆರ್ಥಿಕ ಹೊರೆಯನ್ನು ತಗ್ಗಿಸಲು ಮತ್ತು ‘ಎಲ್ಲರಿಗೂ ವಿಮೆ’ ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸಲು ಆಸ್ಪತ್ರೆಗಳು ಮತ್ತು ವಿಮಾ ಸಂಸ್ಥೆಗಳ ನಡುವೆ ನಿಕಟ ಸಮನ್ವಯವು ಬಹಳ ನಿರ್ಣಾಯಕವಾಗಿದೆ ಎಂದು ತಿಳಿಸಿದ್ದಾರೆ.
