Friday, October 9, 2026
Friday, October 9, 2026

Dr. Devi Prasad Shetty ಆರೋಗ್ಯ ಕ್ಷೇತ್ರಕ್ಕೆ ರಾಷ್ಟ್ರೀಯ ಆದ್ಯತೆ ನೀಡಿರುವ ಬಜೆಟ್- ಡಾ.ದೇವಿ ಪ್ರಸಾದ್ ಶೆಟ್ಟಿ

Date:

Dr. Devi Prasad Shetty “ಈ ವರ್ಷ ವೈದ್ಯಕೀಯ ಕ್ಷೇತ್ರಕ್ಕೆ ಚಿಂತನಶೀಲವಾಗಿ ಮತ್ತು ಸುದೀರ್ಘ ದೃಷ್ಟಿಕೋನದಿಂದ ಗಮನ ಹರಿಸಿ ಬಜೆಟ್ ಮಂಡಿಸಲಾಗಿದೆ ಎಂದು ನಾರಾಯಣ ಹೆಲ್ತ್ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿಯವರು ತಿಳಿಸಿದ್ದಾರೆ.

ಬಲಿಷ್ಠ ವೈದ್ಯಕೀಯ ವ್ಯವಸ್ಥೆಯು ಭಾರತದ ಆರ್ಥಿಕ ಮತ್ತು ಸಾಮಾಜಿಕ ದೃಢತೆಗೆ ಬಹಳ ಮುಖ್ಯ ಎಂಬುದನ್ನು ಸರ್ಕಾರದ ಗುರುತಿಸಿರುವುದನ್ನು ಈ ಬಜೆಟ್ ಪ್ರತಿಬಿಂಬಿಬಿಸಿದೆ. ಆರೋಗ್ಯ ರಕ್ಷಣೆಯನ್ನು ದೀರ್ಘಕಾಲೀನ ರಾಷ್ಟ್ರೀಯ ಆದ್ಯತೆಯಾಗಿ ಬಲಪಡಿಸುವತ್ತ ಗೌರವಾನ್ವಿತ ಹಣಕಾಸು ಸಚಿವರು ತೋರಿರುವ ಸಮತೋಲಿತ ಗಮನವನ್ನು ನಾವು ಶ್ಲಾಘಿಸುತ್ತೇವೆ. ₹10,000 ಕೋಟಿ ವೆಚ್ಚದ ‘ಬಯೋ ಫಾರ್ಮಾ ಪವರ್’ ಯೋಜನೆಯು ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್‌ಗಳಲ್ಲಿ ದೇಶೀಯವಾದ ಬಲವಾದ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಇದು ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳಿಗೆ ಸುಧಾರಿತ ಚಿಕಿತ್ಸೆಗಳ ಲಭ್ಯತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಖಾಸಗಿ ವಲಯದ ಸಹಭಾಗಿತ್ವದಲ್ಲಿ ಪ್ರಾದೇಶಿಕ ವೈದ್ಯಕೀಯ ಹಬ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಯು ಜಾಗತಿಕ ವೈದ್ಯಕೀಯ ಕ್ಷೇತ್ರದಲ್ಲಿ ಮೌಲ್ಯಯುತ ತಾಣವಾಗಿ ಭಾರತದ ಸ್ಥಾನವನ್ನು ಬಲಪಡಿಸಲಿದೆ. ಜೊತೆಗೆ ದೇಶದೊಳಗೆ ರೋಗ ತಡೆಗಟ್ಟುವಿಕೆ, ಪುನರ್ವಸತಿ ಮತ್ತು ನಿರಂತರ ಆರೈಕೆಯ ಮಾದರಿಗಳನ್ನು ಇದು ಉತ್ತಮಗೊಳಿಸುತ್ತದೆ. ತುರ್ತು ಮತ್ತು ಆಘಾತ ಚಿಕಿತ್ಸಾ ಕ್ಷೇತ್ರದ ಸಾಮರ್ಥ್ಯವನ್ನು 50% ರಷ್ಟು ಹೆಚ್ಚಿಸುವ ಮೂಲಕ ಜಿಲ್ಲಾ ಆಸ್ಪತ್ರೆಗಳನ್ನು ಬಲಪಡಿಸುವುದು, ಇದರೊಂದಿಗೆ ಎರಡನೇ ನಿಮ್ಹಾನ್ಸ್ ಮತ್ತು ಪ್ರಾದೇಶಿಕ ಮಾನಸಿಕ ಆರೋಗ್ಯ ಸೇವಾ ಕೇಂದ್ರಗಳ ಸ್ಥಾಪನೆಯು ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕಾದ ವೈದ್ಯಕೀಯ ಸೇವೆ ದೊರಕಿಸಲಿದೆ ಮತ್ತು ಮಾನಸಿಕ ಆರೋಗ್ಯ ಸೇವೆಯಲ್ಲಿನ ನಿರ್ಣಾಯಕ ಕೊರತೆಗಳನ್ನು ನೀಗಿಸುತ್ತದೆ.

Dr. Devi Prasad Shetty ಅಲೈಡ್ ಹೆಲ್ತ್ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ನಿರ್ಣಾಯಕ ವಿಭಾಗಗಳಲ್ಲಿ ತರಬೇತಿಯನ್ನು ಒದಗಿಸುವ ಕ್ರಮಗಳು ಕ್ಲಿನಿಕಲ್ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಉತ್ತಮ ಗುಣಮಟ್ಟದ ಆರೈಕೆಯನ್ನು ನೀಡಲು ಬೆಂಬಲ ನೀಡುತ್ತವೆ. ವೈದ್ಯಕೀಯ ಉದ್ದೇಶದ ಹಣ ರವಾನೆಗಳ ಮೇಲಿನ ಟಿಸಿಎಸ್ ಅನ್ನು ತರ್ಕಬದ್ಧಗೊಳಿಸಿರುವುದು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಕ್ರಮಗಳು ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಕಡೆಗೆ ಒಂದು ಸುಸಂಬದ್ಧ ಹೆಜ್ಜೆಯಾಗಿದೆ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...