Monday, August 10, 2026
Monday, August 10, 2026
Home Blog Page 203

Bangalore Film Festival ಸಂಗೀತ ಸಾಮ್ರಾಟ್ “ಹಂಸಲೇಖಾ” ಗೆ ಜೀವಮಾನ ಸಾಧನೆ ಪ್ರಶಸ್ತಿ

0

Bangalore Film Festival ಕನ್ನಡದ ಖ್ಯಾತ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ವತಿಯಿಂದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಕಳೆದ ಗುರುವಾರ (ಜನವರಿ 29) ಪ್ರಾರಂಭವಾದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವು ಶುಕ್ರವಾರ (ಫೆಬ್ರವರಿ ೦6) ಸಮಾರೋಪ ಕಾಣಲಿದ್ದು, ಈ ಸಮಾರಂಭದಲ್ಲಿ ಹಂಸಲೇಖ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಈ ಸಂಬಂಧ ಇಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್‌ ವಿನೋದ್‌ ಚಂದ್ರ ಮತ್ತು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾದ ಮುರಳಿ ಅವರು ಹಂಸಲೇಖ ಅವರನ್ನು ಭೇಟಿ ಮಾಡಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿದರು.

ಕಳೆದ ಒಂದು ವಾರದಿಂದ ಸಿನಿಮಾಸಕ್ತರ ಮನಸ್ಸು ಗೆದ್ದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಸಮಾರಂಭ, ಇಂದು ಸಂಜೆ ಆರಕ್ಕೆ ಚಿತ್ರ ಪ್ರದರ್ಶನ ನಡೆಯುತ್ತಿರುವ ಲುಲು ಮಾಲ್‌ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಹಂಸಲೇಖ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Bangalore Film Festival ಈ ಚಿತ್ರೋತ್ಸವದಲ್ಲಿ ಏಷ್ಯನ್‌ ಸಿನಿಮಾ, ಭಾರತೀಯ ಸಿನಿಮಾ ಮತ್ತು ಕನ್ನಡ ಸಿನಿಮಾ ಎಂಬ ಮೂರು ಸ್ಪರ್ಧಾ ವಿಭಾಗಗಳಿದ್ದು, ಈ ವಿಭಾಗಗಳಲ್ಲಿ ಸ್ಪರ್ಧಿಸಿ, ಪ್ರಶಸ್ತಿ ಗೆದ್ದವರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಕಾರ್ಯಕಮದ ಅಧ್ಯಕ್ಷತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೃಾದ ದಿನೇಶ್‌ ಗೂಂಡೂರಾವ್‌ ವಹಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಡಾ. ಸಾಧು ಕೋಕಿಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲಾ, ಚಿತ್ರೋತ್ಸವದ ರಾಯಭಾರಿ ಪ್ರಕಾಶ್‌ ರಾಜ್‌ ಮುಂತಾದವರು ಭಾಗವಹಿಸಲಿದ್ದಾರೆ.

Ideal Play Abacus India. Pvt. LTD ಶಿವಮೊಗ್ಗದ ಐಡಿಯಲ್ ಪ್ಲೇ ಅಬಾಕಸ್ ತಂಡಕ್ಕೆ ಸಮಗ್ರ ಪ್ರಶಸ್ತಿ.

0

Ideal Play Abacus India. Pvt. LTD ಐಡಿಯಲ್ ಪ್ಲೇ ಅಬಾಕಸ್ ಪ್ರೈವೇಟ್ ಲಿಮಿಟೆವಿಡ್ ಸಂಸ್ಥೆಯು ಇತ್ತೀಚೆಗೆ ಪಾಂಡಿಚೆರಿಯಲ್ಲಿ ನಡೆಸಿದ ರಾಷ್ಟ್ರಮಟ್ಟದ ಅಬಾಕಸ್ ಹಾಗೂ ವೇದಗಣಿತ ಸ್ಪರ್ಧೆಯಲ್ಲಿ ಶಿವಮೊಗ್ಗದ ಜಯನಗರ ಐಡಲ್ ಪ್ಲೇ ಅಬಾಕಸ್ ಸೆಂಟರ್‌ನ 35 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Ideal Play Abacus India. Pvt. LTD ಅದರಲ್ಲಿ ದೃತಿನ ಶ್ರೇಯಸ್ ಮತ್ತು ತನ್ಮಯ್ ಚಿನ್ನದ ಪದಕ ಪಡೆಯುವ ಮೂಲಕ ಚಾಂಪಿಯನ್ ಆಫ್ ಚಾಂಪಿಯನ್ ಆಗಿದ್ದಾರೆ.
ಜೊತೆಗೆ 6ಪ್ರಥಮ ಸ್ಥಾನ 12 ದ್ವಿತೀಯ ಸ್ಥಾನ 9 ತೃತೀಯ ಸ್ಥಾನ 2 ನಾಲ್ಕನೆಯ ಸ್ಥಾನ 2 ಐದನೇ ಸ್ಥಾನವನ್ನು ಪಡೆದು ಸಮಗ್ರ ಪ್ರಶಸ್ತಿ ಗೆದ್ದಿರುತ್ತಾರೆ. ಬೆಸ್ಟ್ ಪ್ರಾಂಚೈಸಿ ಅವಾರ್ಡ್ ಪಡೆದ ಸೆಂಟರ್‌ನ ಜ್ಯೋತಿ ಉಮೇಶ್ ಅವರು ವಿಜೇತ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಿದ್ದಾರೆ.

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

0

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ ಫ್ಯೂಚರ್ ಜನರಲ್ ಇನ್ಶೂರೆನ್ಸ್ ಕಂ.ಲಿ. ಹುಬ್ಬಳ್ಳಿ ಇವರು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ದೂರುದಾರರಾದ ಶಿಕಾರಿಪುರ ತಾಲ್ಲೂಕಿನ ಅಮ್ಟೆಕೊಪ್ಪ ನಿವಾಸಿ ರತ್ನಮ್ಮ ಇವರ ಮಗ ಮಂಜುನಾಥ ಲೈಲ್ಯಾಂಡ್ ವಾಹನಕದ ಮಾಲೀಕರಾಗಿದ್ದು ಎದುರುದಾರ ಫ್ಯೂಚರ್ ಜನರಲ್ ಇನ್ಶೂರೆನ್ಸ್ ಕಂ.ಲಿ. ಹುಬ್ಬಳ್ಳಿ ಇವರ ಬಳಿ ವಿಮೆಯನ್ನು ಪಡೆದಿದ್ದು ವಿಮೆಯು ದಿ: 28-04-2023 ರಿಂದ 27-04-2024 ರವರೆಗೆ ಚಾಲ್ತಿಯಲ್ಲಿರುತ್ತದೆ. ಮಂಜುನಾಥರವರು ದಿ: 28-10-2023 ರಂದು ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾಗಿ ತೀವ್ರ ಸ್ವರೂಪದ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದುತ್ತಾರೆ. ವಾಹನ ಅಪಘಾತದ ಬಗ್ಗೆ ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ.
ದೂರುದಾರರ ಮಗ ಮಂಜುನಾಥನವರ ನಿಧನದಿಂದಾಗಿ ಎದುರುದಾರರ ಬಳಿ ವೈಯಕ್ತಿಕ ಅಪಘಾತ ವಿಮಾ ಮೊತ್ತ ರೂ.15,00,000/- ಗಳನ್ನು ನೀಡಲು ಸಂಬAಧಿಸಿದ ದಾಖಲೆಗಳನ್ನು ಸಲ್ಲಿಸಿದಾಗ, ವಿಮಾ ಮೊತ್ತವನ್ನು ಕೊಡುವುದಾಗಿ ಭರವಸೆ ನೀಡಿದ್ದರು. ನಂತರ ವಿಮಾ ಮೊತ್ತ ನೀಡದೇ ಇರುವುದರಿಂದ ಲೀಗಲ್ ನೋಟಿಸ್ ನೀಡಲಾಗುತ್ತದೆ. ಆದರೆ ಎದುರುದಾರರು ಯಾವುದೇ ಪ್ರತ್ಯುತ್ತರ ಅಥವಾ ವಿಮಾ ಮೊತ್ತ ನೀಡದೇ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ದೂರುದಾರರು ಆಯೋಗದ ಮುಂದೆ ದೂರು ಸಲ್ಲಿಸಲಾಗುತ್ತದೆ.
Shimoga News ಆಯೋಗವು ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ, ದಾಖಲೆಗಳನ್ನು ಪರಿಶೀಲಿಸಿ, ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ, ಎದುರುದಾರರು ದೂರುದಾರರಿಗೆ ವೈಯಕ್ತಿಕ ಅಪಘಾತ ವಿಮಾ ಪರಿಹಾರವನ್ನು ನಿಗದಿತ ಅವಧಿಯಲ್ಲಿ ಪಾವತಿಸದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆಂದು ತೀರ್ಮಾನಿಸಿ, ದೂರುದಾರರಿಗೆ ವೈಯಕ್ತಿಕ ಅಪಘಾತ ವಿಮಾ ಮೊತ್ತ ರೂ. ರೂ.15,00,000/- ಗಳನ್ನು ದಿ: 24-02-2025 ರಿಂದ ವಾರ್ಷಿಕ ಶೇ.7 ರಂತೆ ಬಡ್ಡಿ ಸೇರಿಸಿ, ಈ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸಲು, ತಪ್ಪಿದಲ್ಲಿ ವಾರ್ಷಿಕ ಶೇ.9 ರ ಬಡ್ಡಿಯೊಂದಿಗೆ ಈ ಆದೇಶವಾದ ದಿನದಿಂದ ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು ಹಾಗೂ ರೂ.35,000 ಗಳನ್ನು ಮಾನಸಿಕ ಹಿಂಸೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಪಾವತಿಸತಕ್ಕದೆಂದು ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಘೂ ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರ ಪೀಠವು ಜ.30 ರಂದು ಆದೇಶಿಸಿದೆ.

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

0

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್ ಮತ್ತು ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ವತಿಯಿಂದ ದಿನಾಂಕ 07.05.2026 ರಿಂದ 23.05.2026 ರ ವರೆಗೆ ಚಾರ್‌ಧಾಮ್ ಯಾತ್ರಾ ಪ್ರವಾಸವನ್ನು ಏರ್ಪಡಿಸಲಾಗಿದೆ.

ಯಾತ್ರೆಯುಲ್ಲಿ ಹರಿದ್ವಾರ, ಋಷಿ ಕೇಶ, ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿ, ಗುಪ್ತಕಾಶಿ, ಕೇದಾರನಾಥ, ಮತ್ತು ಬದರೀನಾಥ, ನೋಡಿಕೊಂಡು ಬರಲಾಗುವುದು.

ಆಸಕ್ತರು ದಿನಾಂಕ 10.02.2026 ರ ಒಳಗಾಗಿ ತಮ್ಮ ಹೆಸರನ್ನು ರವೀಂದ್ರ ದೂರವಾಣಿ ಸಂಖ್ಯೆ 9916929220 ಇವರಲ್ಲಿ ನೊಂದಾಯಿಸುವಂತೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅಧ್ಯಕ್ಷರಾದ ಎನ್.ಗೋಪಿನಾಥ್ ತಿಳಿಸಿದ್ದಾರೆ.

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

0

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅತ್ಯಂತ ಪೂರಕವಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಂ ಎಸ್ ಸಂತೋಷ್ ಹೇಳಿದರು.

ರಂಗಾಯಣ ಶಿವಮೊಗ್ಗ ರೆಪರ್ಟರಿ ಕಲಾವಿದರು ಬುಧವಾರದಂದು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಪ್ರದರ್ಶಿಸಿದ ಡಾ. ಡಿ. ಎಸ್. ಚೌಗಲೆ ರಚನೆಯ ಮತ್ತು ಚಿದಂಬರರಾವ್ ಜಂಬೆ ನಿರ್ದೇಶನದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿಯವರ ಮೂಲ ಶಿಕ್ಷಣದ ಪರಿಕಲ್ಪನೆ, ಅಸ್ಪೃಶ್ಯತಾ ನಿವಾರಣೆ, ಮಾನವೀಯ ಧರ್ಮ ಮುಂತಾದ ಚಿಂತನೆಗಳು ಸಮಾಜ ನಿರ್ಮಾಣಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

M.S.Santosh ರಂಗಾಯಣದ ಆಡಳಿತಾಧಿಕಾರಿಗಳಾದ ಡಾ. ಶೈಲಜಾ ಎ ಸಿ ಮಾತನಾಡಿ, ರಂಗಾಯಣದ ವತಿಯಿಂದ ಪ್ರತಿ ವರ್ಷ ಆಯ್ದ ಮೂರು ನಾಟಕಗಳನ್ನು ರಾಜ್ಯದ ವಿವಿಧ ಭಾಗದಲ್ಲಿ ಪ್ರದರ್ಶಿಸಲಾಗುತ್ತದೆ. ಈ ವರ್ಷ ನನ್ನೊಳಗೊಬ್ಬ ಗಾಂಧಿ ನಾಟಕವನ್ನು ರಂಗಕರ್ಮಿ ಚಿದಂಬರರಾವ್ ಜಂಬೆ ನಿರ್ದೇಶನದಲ್ಲಿ ರಿಪರ್ಟರಿ ಕಲಾವಿದರು ಅಭಿನಯಿಸುತ್ತಿದ್ದು, 30ನೇ ಪ್ರದರ್ಶನವನ್ನು ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ.

ರಂಗಾಯಣ ವತಿಯಿಂದ ಜೈಲಿನ ಬಂಧಿವಾಸಿಗಳಿಗೆ ನಾಟಕ ತರಬೇತಿ ನೀಡಿ ಪ್ರದರ್ಶನ ಏರ್ಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕರಾದ ಡಾ. ಪಿ. ರಂಗನಾಥ್, ಐ ಎ ಎಸ್ ಅಧಿಕಾರಿಗಳಾದ ನಾಗೇಂದ್ರರಾವ್, ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಪರಮೇಶ್ವರಪ್ಪ, ಮಹಿಳಾ ಕೇಂದ್ರ ಕಾರಾಗೃಹದ ಅಧೀಕ್ಷಕಿ ಭವ್ಯ, ಸಹಾಯಕ ಅಧೀಕ್ಷಕಿ ಪ್ರೀತಿ, ಕೇಂದ್ರ ಕಾರಾಗೃಹದ ಶಿಕ್ಷಕ ಗೋಪಾಲಕೃಷ್ಣ ಇತರರು ಹಾಜರಿದ್ದರು.

Hole Honnur Police Station ಕಳೆದ ಮೊಬೈಲ್ ಪತ್ತೆ.ಮಾಲೀಕರಿಗೆ ವಾಪಸ್ ನೀಡಿದ ಪೊಲೀಸ್ ಇಲಾಖೆ.

0

Hole Honnur Police Station ಹೊಳೆಹೊನ್ನೂರು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಗಳು CEIR ಪೋರ್ಟಲ್ ನ ಸಹಾಯದಿಂದ ಮೊಬೈಲ್ ಫೋನ್ ಅನ್ನು ಪತ್ತೆ ಮಾಡಿ, ಮೊಬೈಲ್ ಫೋನ್ ನ ಮಾಲೀಕರಿಗೆ ಹಿಂದಿರುಗಿಸಿ ನೀಡಿದ್ದಾರೆ.

Yadava School of Chess ಜೂಮ್ ಆ್ಯಪ್ ನಲ್ಲಿ ವಾಟ್ಸ್ ಆ್ಯಪ್ ಮೂಲಕ ಫೆಬ್ರವರಿ 12 ರಿಂದ ಚೆಸ್ ತರಬೇತಿ ಕಾರ್ಯಾಗಾರ.

0

Yadava School of Chess ಶಿವಮೊಗ್ಗ ನಗರದ ಯಾದವ ಸ್ಕೂಲ್ ಆಫ್ ಚೆಸ್ ವತಿಯಿಂದ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ಫೆ. 12ರಿಂದ 21ರವರೆಗೆ ಒಟ್ಟು 10 ದಿನಗಳವರೆಗೆ ಪ್ರತಿದಿನ ರಾತ್ರಿ 7ರಿಂದ 8ರವರೆಗೆ ಜೂಮ್ ಆ್ಯಪ್ ಮೂಲಕ ವ್ಯಾಟ್ಸಾಪ್‌ನಲ್ಲಿ ಚೆಸ್ ಕಾರ್ಯಾಗಾರ ನಡೆಸಲಾಗುವುದು. 10 ದಿನಗಳ ಈ ಚೆಸ್ ತರಬೇತಿಯಲ್ಲಿ ಚೆಸ್ ಆಟವನ್ನು ಆಡುವ ಬಗ್ಗೆ ಹಾಗೂ ಅಂತರ ರಾಷ್ಟಿçÃಯ ಚೆಸ್ ಸಂಸ್ಥೆಯ ನೂತನ ನಿಯಮಗಳು ಮತ್ತು ಅರಿವು, ತಿಳುವಳಿಕೆ ಬಗ್ಗೆ, ಅಂತರಶಾಲಾ, ಕಾಲೇಜು ಆಯ್ಕೆ ಚೆಸ್ ಪಂದ್ಯಾವಳಿಗಳನ್ನು ಆಡಿಸುವುದರ ಬಗ್ಗೆ ಹಾಗೂ ಚೆಸ್ ಆಟದ ಟೀಸ್ (ಪೈರಿಂಗ್) ಹಾಕುವುದರ ಬಗ್ಗೆ ಸೂಕ್ತ ಮಾರ್ಗಧರ್ಶನ ಮತ್ತು ಪ್ರಾಯೋಗಿಕವಾಗಿ ತಿಳಿಸಿಕೊಡಲಾಗುವುದು.

Yadava School of Chess ತರಬೇತಿಯ ನೋಟ್ಸ್ ಮತ್ತು ವೀಡಿಯೋಗಳನ್ನು ವ್ಯಾಟ್ಸಾಪ್ ಮೂಲಕ ಕಳಿಸಲಾಗುವುದು. ತರಬೇತಿಗೆ ಕೇವಲ 30 ಶಿಕ್ಷಕರಿಗೆ ಮಾತ್ರ ಅವಕಾಶವಿದ್ದು, ಆಸಕ್ತ ಶಿಕ್ಷಕರು ಅಂತರ ರಾಷ್ಟ್ರೀಯ ಚೆಸ್ ತೀರ್ಪುಗಾರ ಮತ್ತು ಚೆಸ್ ತರಬೇತುದಾರರಾದ ಪ್ರಾಣೇಶ್ ಯಾದವ್ ಮೊ. 9242401702, 974381978ರಲ್ಲಿ ಹೆಸರು ನೊಂದಾಯಿಸಲು ಕೋರಲಾಗಿದೆ.

Shivamogga Rangayana “ಸ್ವಾತಂತ್ರ್ಯದ ಓಟ” ನಾಟಕದಲ್ಲಿ ಅಭಿನಯಿಸಲು ಅರ್ಜಿ ಸಲ್ಲಿಸಿದವರಿಗೆ ಸಂದರ್ಶನಕ್ಕೆ ಕರೆ.

0

Shivamogga Rangayana ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೊಳುವಾರು ಮೊಹಮ್ಮದ್ ಕುಂಞ ಅವರ ಸ್ವಾತಂತ್ರ್ಯದ ಓಟ ಕಾದಂಬರಿಯನ್ನು ನಾಟಕ ರೂಪದಲ್ಲಿ ರಂಗಾಯಣ, ಶಿವಮೊಗ್ಗ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶಿಸುವ ಯೋಜನೆ ಹಮ್ಮಿಕೊಂಡಿದ್ದು, ಆಸಕ್ತ ರಂಗ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಿದ ಕಲಾವಿದರಿಗೆ ಫೆ. 11 ರಂದು ಬೆಳಗ್ಗೆ 10.00 ರಿಂದ ಸಂಜೆವರೆಗೆ ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಹೆಲಿಪ್ಯಾಡ್ ಹಿಂಭಾಗ, ಅಶೋಕನಗರ, ಶಿವಮೊಗ್ಗ 577201 ಇಲ್ಲಿ ಸಂದರ್ಶನವನ್ನು ಏರ್ಪಡಿಸಲಾಗಿದೆ.

Shivamogga Rangayana ಅರ್ಜಿ ಸಲ್ಲಿಸಿರುವ ಕಲಾವಿದರು ತಮ್ಮ ಮೂಲ ದಾಖಲಾತಿಗಳೊಂದಿಗೆ ನಿಗದಿತ ಸಮಯದಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ. ಸಿ. ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ರಂಗಾಯಣ, ಶಿವಮೊಗ್ಗ ಕಚೇರಿ, ದೂರವಾಣಿ ಸಂಖ್ಯೆ : 08182-256353 ನ್ನು ಸಂಪರ್ಕಿಸುವುದು.

JCI Shivamogga ಜೆಸಿಐ ಚಿರಂತನ ಅಧ್ಯಕ್ಷರಾಗಿ ಪೃಥ್ವಿ ನಾಗರಾಜ್ ಆಯ್ಕೆ.

0

JCI Shivamogga ಶಿವಮೊಗ್ಗ ನಗರದ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜೆ ಸಿ ಐ ಶಿವಮೊಗ್ಗ ಚಿರಂತನ ಘಟಕದ ಐದನೇ ಪದಗ್ರಹಣ ಸಮಾರಂಭದಲ್ಲಿ 2026 ರ ಅಧ್ಯಕ್ಷರಾಗಿ ಪೃಥ್ವಿ ನಾಗರಾಜ್ ಹಾಗೂ ಕಾರ್ಯದರ್ಶಿಯಾಗಿ ಮಮತಾ ವಿ ಶಾನುಭೋಗ್ ಪ್ರಮಾಣವಚನ ಸ್ವೀಕರಿಸಿದರು.

ಘಟಕ ನಿರ್ವಹಣೆ ಉಪಾಧ್ಯಕ್ಷರಾಗಿ ಜೆಸಿ ತ್ರಿವೇಣಿ ಬೆಳವಣಿಗೆ ಹಾಗೂ ಅಭಿವೃದ್ಧಿ ಉಪಾಧ್ಯಕ್ಷರಾಗಿ ಜೆಸಿ ಡಾಕ್ಟರ್ ವಾಸುದೇವಪ್ರಸಾದ ಉಪಾಧ್ಯಕ್ಷರು ವ್ಯವಹಾರ ಜೆಸಿ ನಿಶಾಂತ್ ತರಬೇತಿ ಉಪಾಧ್ಯಕ್ಷರಾಗಿ ಜೆಸಿ ಚಂದನ್ ಎನ್ ಹೊಳ್ಳ ಸಮುದಾಯ ಅಭಿವೃದ್ಧಿ ಉಪಾಧ್ಯಕ್ಷರಾಗಿ ಜೆಸಿ ಸೌಮ್ಯ ಗುರುರಾಜ್ ಪಿಆರ್ ಮಾರ್ಕೆಟಿಂಗ್ ಉಪಾಧ್ಯಕ್ಷರಾಗಿ ಜೆಸಿ ವೈಷ್ಣವಿ ಚಂದನ್ ಸಹಕಾರ್ಯದರ್ಶಿಯಾಗಿ ಜೆಸಿ ಶೃತಿ ರುದ್ರೇಶ್ ತರಬೇತಿ ನಿರ್ದೇಶಕರಾಗಿ ಜೆ. ಸಿ. ಡಾಕ್ಟರ್ ಮಾಧವ್ ನಿರ್ದೇಶಕರು ವ್ಯವಹಾರ ಜೆ.ಸಿ. ಮಂಜುನಾಥ್ ಬಿ. ಆರ್. ನಿರ್ದೇಶಕರು ಸಮುದಾಯ ಅಭಿವೃದ್ಧಿ ಜೆಸಿ ನಯನ ವಿನೋದ್ ನಿರ್ದೇಶಕರು ಪಿ ಆರ್ ಮಾರ್ಕೆಟಿಂಗ್ ಜೆಸಿ ಶರಣ ನಿರ್ದೇಶಕರು ಬೆಳವಣಿಗೆ ಹಾಗು ಅಭಿವೃದ್ಧಿ ಜೆ.ಸಿ. ಭವಾನಿ ಪ್ರಶಾಂತ್ ಜೂನಿಯರ್ ಜೆ.ಸಿ. ಕನಿಷ್ಕ ವಿ ಶಾನುಭೋಗ ಸಲಹಾ ಮಂಡಳಿಯ ಸದಸ್ಯರಾಗಿ ಶಾಂತ ಶೆಟ್ಟಿ ಜೆ.ಸಿ. ಭಾಗ್ಯಲಕ್ಷ್ಮಿ ಜಿಸಿ ಡಾ. ನಾಗರಾಜ್ ಅಂಗಡಿ ಜೆ. ಸಿ. ಡಾಕ್ಟರ್ ಯತೀಶ್ ಬಿ. ಎಲ್. ಜೆ. ಸಿ.ಹರ್ಷಕರಣೆ ಆಯ್ಕೆಯಾಗಿರುತ್ತಾರೆ.

JCI Shivamogga ಸಮಾರಂಭದ ಅಧ್ಯಕ್ಷ ವಹಿಸಿದ್ದ ಜೆಸಿ ರುದ್ರೇಶ್ ಸಿ ಕೋರಿ ಮಾತನಾಡಿ 2025 ಜೆ ಸಿ ಐ ಚಿರಂತನದ ಕಾರ್ಯಗಳನ್ನು ಹಾಗೂ ಸಾಧನೆಗಳನ್ನು ತಿಳಿಸಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಜೆ ಸಿ ಐ ವಲಯ ಅಧ್ಯಕ್ಷ ಜೆಎಫ್ಎಸ್ ಮಧುಸೂದನ್ ನಾವಡ, ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಶಿವಮೊಗ್ಗ ಶ್ರೀ ಕಲಗೋಡು ರತ್ನಾಕರ ಗೌರವಾನ್ವಿತ ಅತಿಥಿಗಳಾಗಿ ಜೆಎಫ್ಎಸ್ ಸಿಎ ಗೌರೀಶ್ ಭಾರ್ಗವ ಜೆಎಫ್ಎಂ ಪ್ರಮೋದ್ ಶಾಸ್ತ್ರಿ ಎಸ್ಎ ಹಾಗೂ ಜೆಸಿ ಕುಮಾರ್ ಬೆಣ್ಣೆ ಅವರು ಉಪಸ್ಥಿತರಿದ್ದರು

Social Welfare Department ಶುಲ್ಕ ಮರುಪಾವತಿ ಯೋಜನೆ ಸೌಲಭ್ಯ.ಆನ್ ಲೈನ್ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

0

Social Welfare Department ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸ್ಗಳಲ್ಲಿ ಓದುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳಿಂದ ಶುಲ್ಕ ಮರುಪಾವತಿ ಯೋಜನೆಯ ಸೌಲಭ್ಯಕ್ಕಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಫೆ. 15 ರವರೆಗೆ ವಿಸ್ತರಿಸಲಾಗಿದೆ.

ಆಸಕ್ತರು https://ssp.postmatric.karnataka.gov.in ಮೂಲಕ ಫೆ. 15ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂ.: 8050770004, ತಂತ್ರಾಂಶ ಸಹಾಯವಾಣಿ 1902 ನ್ನು ಸಂಪರ್ಕಿಸುವುದು.