JCI Shivamogga ದಿನಾಂಕ 11, 12 ಶನಿವಾರ ಮತ್ತು ಭಾನುವಾರ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆಸಿಐ ಭಾರತದ ವಲಯ 24ರ ವಲಯ-ಸಮ್ಮೇಳನ 2025 ನಡೆಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ ಜೆಸಿಐ ಸದಸ್ಯರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಈ ಸಮ್ಮೇಳನದ ಅಧ್ಯಕ್ಷತೆ ಜೆಸಿ ಗೌರೀಶ್ ಭಾರ್ಗವ್ ವಲಯ ಅಧ್ಯಕ್ಷ, ಮುಖ್ಯ ಅತಿಥಿಗಳಾಗಿ ಮಂಜುನಾಥ್ ಭಂಡಾರಿ ಎಂ.ಎಲ್.ಸಿ, ಉದ್ಘಾಟನೆ ಕೆ ಎಸ್ ಈಶ್ವರಪ್ಪ ಮಾಜಿ ಉಪ ಮುಖ್ಯಮಂತ್ರಿ, ಮುಖ್ಯ ಅತಿಥಿಗಳಾಗಿ ಬಿ.ವೈ ರಾಘವೇಂದ್ರ ಸಂಸದರು, ಕಾಂತೇಶ್ ಕೆ.ಇ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಮಹಾಬಲೇಶ್ವರ ಉದ್ಯಮಿ, ಮುಖ್ಯ ಭಾಷಣಕಾರರಾಗಿ ಓಂ ಗಣೇಶ್ ಉಪ್ಪುಂದ ನಟ, ಸಾಹಿತಿ ಆಗಮಿಸುತ್ತಿದ್ದಾರೆ, ಹಾಗೂ ಜೆಸಿ ವರ್ಷ ಮೆನನ್, ಜೆಸಿ ಚನ್ನವೀರೇಶ, ಜೆಸಿ ಪ್ರಭು ಹಲಗೇರಿ ಉಪಸ್ಥಿತರಿರುತ್ತಾರೆ.
ಸಮ್ಮೇಳನದಲ್ಲಿ ಮೊದಲ ದಿನ ಉದ್ಘಾಟನಾ ಕಾರ್ಯಕ್ರಮ, ವಲಯ ಅಧ್ಯಕ್ಷರ ಮೆರವಣಿಗೆ, ಪರಿಣಾಮಕಾರಿ ಭಾಷಣ ಸ್ಪರ್ಧೆ, ಟ್ಯಾಲೆಂಟ್ ಹಂಟ್, ಅವಾರ್ಡ್ ನೈಟ್, ನಡೆಯಲಿದೆ. JCI Shivamogga ಎರಡನೇ ದಿನ ವಲಯ ಅಧ್ಯಕ್ಷರ ವರದಿ ಒಪ್ಪಿಸುವುದು, 2026 ರ ವಲಯ ಮಂಡಳಿಯ ಚುನಾವಣೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದಿಂದ ಸಾವಿರಾರು ಜನ ಜೆಸಿಐ ಸದಸ್ಯರು ಭಾಗವಹಿಸುತ್ತಿದ್ದಾರೆ.
ಜೆಸಿ ನವೀನ್ ಕುಮಾರ್ ಎನ್ ವಿ, ಪೂರ್ವ ವಲಯ ಅಧಿಕಾರಿ, ರಾಜ್ಯದ್ಯಂತ ವಲಯ ಸಮ್ಮೇಳನಕ್ಕೆ ಆಗಮಿಸುತ್ತಿರುವ ಜೆಸಿ ಮಿತ್ರರಿಗೆ ಸ್ವಾಗತ ಕೋರುತ್ತಿದ್ದಾರೆ. ಈ ಮೂಲಕ ಮಾಧ್ಯಮ ಮಿತ್ರರಿಗೂ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿ ಮಾಡಿಕೊಡಲು ಮನವಿ ಮಾಡಿಕೊಳ್ಳುತ್ತಿದ್ದಾರೆ.
JCI Shivamogga ರಾಜ್ಯಮಟ್ಟದ ಜೆಸಿಐ ವಲಯ ಸಮ್ಮೇಳನ 2025
Date:
