Mescom ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿದ್ದು, ಫೆ. 07 ರಂದು ಬೆಳಗ್ಗೆ 09.00 ರಿಂದ ಸಂಜೆ 5.00 ರವರೆಗೆ ಚಿಕ್ಕಲ್ಲು, ಗುರುಪುರ, ಪುರಲೆ, ಸಿದ್ದೇಶ್ವರನಗರ, ಶಾಂತಮ್ಮ ಲೇಔಟ್, ವೆಂಕಟೇಶ್ವರನಗರ, ವಿದ್ಯಾನಗರ, ಗಣಪತಿ ಲೇಔಟ್, ಕಂಟ್ರಿಕ್ಲಬ್ ರಸ್ತೆ, ಎಂ.ಆರ್.ಎಸ್. ವಾಟರ್ ಸಪ್ಲೈ, ಎಂ.ಆರ್.ಎಸ್. ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಬಿ.ಹೆಚ್.ರಸ್ತೆ (ಗ್ರಾಯತ್ರಿ ಕಲ್ಯಾಣ ಮಂದಿರದಿಂದ ಅಮೀರ್ ಅಹಮದ್ ವೃತ್ತದವರೆಗೆ), ಬಾಲ್‌ರಾಜ್ ಅರಸು ರಸ್ತೆ (ಮಹಾವೀರ್ ವೃತ್ತದಿಂದ ಗೋಪಿ ವೃತ್ತದವರೆಗೆ), ನೆಹರು ರಸ್ತೆ, ದುರ್ಗಿಗುಡಿ ಮುಖ್ಯರಸ್ತೆ, ಪಾರ್ಕ್ ಬಡಾವಣೆ ಸರ್.ಎಂ.ವಿ.ರಸ್ತೆ, (ವೀರಭದ್ರೇಶ್ವರ ಟಾಕೀಸ್‌ನಿಂದ ಮಹಾವೀರ್ ವೃತ್ತದವರೆಗೆ), (ಮಹಾವೀರ್ ವೃತ್ತದಿಂದ ಗೋಪಿ ವೃತ್ತದವರೆಗೆ), ಗಾಂದಿಪಾರ್ಕ್, ಲೂರ್ದು ನಗರ, ಕಾನ್ವಂಟ್ ರಸ್ತೆ, ಬಾಪೂಜಿನಗರ, ಚರ್ಚ್ Mescom ಕಾಂಪೌಂಡ್, ಟಿ.ಜಿ.ಎನ್. ಬಡಾವಣೆ, ಜೋಸೆಫ್ ನಗರ, ಟ್ಯಾಂಕ್ ಬೌಂಡ್ ರಸ್ತೆ, ಕುವೆಂಪು ರಂಗಮಂದಿರ, ಮಹಾನಗರ ಪಾಲಿಕೆ ಕಚೇರಿ ಸುತ್ತಮುತ್ತ, ಮೀನಾಕ್ಷಿ ಭವನ, ಶಂಕರಮಠ ರಸ್ತೆ, ಹಳೆ ಹೊನ್ನಾಳಿ ರಸ್ತೆ, ಬಾಲರಾಜ್ ಅರಸ್ ರಸ್ತೆ, ಮೆಹದಿ ನಗರ, ಬಾಪೂಜಿನಗರ, ಬಸವನಗುಡಿ, ವಿನಾಯಕ ಪಾರ್ಕ್, ವಿನಾಯಕನಗರ, ಅಮೀರ್ ಅಹಮದ್ ಕಾಲೋನಿ, ಸೋಮಯ್ಯ ಬಡಾವಣೆ, ಟ್ಯಾಂಕ್ ಬಂಡ್ ರಸ್ತೆ, ಟ್ಯಾಂಕ್ ಮೊಹಲ್ಲಾ, ಕೋರ್ಟ್ ಕಚೇರಿ, ಆರ್.ಟಿ.ಓ.ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
Prabhuling Kavalikatti ಕಾರು ಮತ್ತು ಬೈಕ್ ಅಪಘಾತ. ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ.
Prabhuling Kavalikatti ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಸೊರಬ ತಾಲ್ಲೂಕಿನ ಉಳವಿಯ ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾಗರ ದಿಂದ ಸೊರಬ ಹೋಗುವ ಮಾರ್ಗ ಮಧ್ಯೆ ಸಾಗುತ್ತಿರುವಾಗ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತವನ್ನು ಗಮನಿಸಿದ ಅವರು, ತಮ್ಮ ವಾಹನವನ್ನು ನಿಲ್ಲಿಸಿ, ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
Prabhuling Kavalikatti ನಂತರ ಸೊರಬ ತಾಲ್ಲೂಕು ಕಚೇರಿಗೆ ಭೇಟಿ ನೀಡಿ, ತಹಶೀಲ್ದಾರ್ ಮತ್ತು ಇತರೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರಗತಿ ಪರಿಶೀಲನೆ ಕೈಗೊಂಡು ಅಧಿಕಾರಿಗಳಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದರು.
ತದನಂತರ ಅಧಿಕಾರಿಗಳೊಂದಿಗೆ ಸೊರಬದಲ್ಲಿರುವ ‘ಬಂಗಾರಧಾಮ ಉದ್ಯಾನ’ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶಿರಸ್ತೇದಾರ್(ಆಡಳಿತ) ಚೇತನ್ , ಇತರೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
Image of District Dispute Redressal Department ರೂ 216 ಹೆಚ್ಚುವರಿ ಪಡೆದ ಸಂಸ್ಥೆಗೆ ಬಡ್ಡಿ ಸಹಿತ ವಾಪಸ್.ಅಲ್ಲದೇ ದೂರಿನ ಖರ್ಚು ಸೇರಿ ರೂ 25,000 ದಂಡ.
Image of district dispute redressal department ಶಿವಮೊಗ್ಗ ಜಿಲ್ಲೆಯ ಮಂಡಘಟ್ಟದ ಶಿವಕುಮಾರ್ ಎಸ್. ಎಂಬುವವರು ಬೆಂಗಳೂರು ಫ್ಲಿಪ್‌ಕಾರ್ಟ್ ಮುಖ್ಯ ವ್ಯವಸ್ಥಾಪಕರು ಹಾಗೂ ಉತ್ತರ ಪ್ರದೇಶದ ಮುಜಫರ್‌ನಗರದ ಶ್ರೀ ಲಕ್ಷ್ಮೀ ಪೈಂಟ್ಸ್ ಹೌಸ್ ಇವರುಗಳ ವಿರುದ್ಧ ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್‌ಗೆ ಎಂ.ಆರ್.ಪಿ ಗಿಂತ ಹೆಚ್ಚಿನ ಹಣ ಪಡೆದಿರುತ್ತಾರೆ ಎಂದು ನೀಡಿದ ದೂರನ್ನು ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ನೀಡಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಂದ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು ಎದುರುದಾರರಿಂದ ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್‌ಗೆ ಶೇ. 76 ರಷ್ಟು ರಿಯಾಯಿತಿದರದಲ್ಲಿ ರೂ. 540/- ಹಾಗೂ ಶಿಪ್ಪಿಂಗ್ ಚಾರ್ಚ್ ರೂ. 41/- ಸೇರಿ ರೂ. 540/- ಗಳನ್ನು ಪಾವತಿಸಿ ಖರೀದಿಸಿರುತ್ತಾರೆ.
ಆದರೆ ಪರೀಶೀಲಿದಾಗ ಎಂ.ಆರ್.ಪಿ. ಬೆಲೆಯನ್ನು ಅಳಿಸಿ, ಬಿಳಿ ಕಾಗದವನ್ನು ಅಂಟಿಸಿರುತ್ತಾರೆ. ಅದರ ನಿಜವಾದ ಬೆಲೆ 324/- ರೂ.ಗಳಿದ್ದು ರೂ. 216/-ಗಳ ಹೆಚ್ಚಿನ ಮೊತ್ತ ಪಡೆದಿದ್ದು, ಈ ಕುರಿತು ಎದುರುದಾರರಿಗೆ ಹೆಚ್ಚಿನ ಹಣವನ್ನು ಮರುಪಾವತಿಸುವಂತೆ ಲೀಗಲ್ ನೋಟೀಸ್ ನೀಡಿರುತ್ತಾರೆ. ಆದರೆ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
Image of district dispute redressal department ಆಯೋಗವು ದೂರುದಾರರ ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ದೂರುದಾರರ ವಾದವನ್ನು ಆಲಿಸಿ, ಎದುರುದಾರರ ಎಂಆರ್‌ಪಿ ಗಿಂತ ಹೆಚ್ಚಿ ಹಣವನ್ನು ಪಡೆದು ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, ದೂರನ್ನು ಭಾಗಶಃ ಪುರಸ್ಕರಿಸಿ, ಎದುರುದಾರರು ದೂರುದಾರರಿಂದ ಪಡೆದಿರುವ ಹೆಚಿನ ಮೊತ್ತ ರೂ. 216/-ಗಳಿಗೆ ದಿ:13/09/2024ರಿಂದ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣವನ್ನು ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಹಾಗೂ ರೂ. 25,000/- ಗಳನ್ನು ಮಾನಸಿಕ ಹಿಂಸೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಡಿ.31 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಗಂಗಾಧರ ನಾಯ್ಕ್ ಎಂ.ಟಿ. ತಿಳಿಸಿದ್ದಾರೆ.
Shivamogga News ಬಲಿಷ್ಢ ವ್ಯವಹಾರ ಮತ್ತು ಬಲಿಷ್ಢ ಕುಟುಂಬ ಇದ್ದಾಗಲೇ ಸಂತೋಷ ಲಭ್ಯ- ಬಿ.ಗೋಪಿನಾಥ್
Shivamogga News ಕುಟುಂಬವು ನಮಗೆ ಭಾವನಾತ್ಮಕ ಶಕ್ತಿ ಹಾಗೂ ಬೆಂಬಲ ನೀಡುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಶಿವಮೊಗ್ಗ ಜಿಲ್ಲಾ ವಿತರಕರ ಸಂಘದಿಂದ ಆಯೋಜಿಸಿದ್ದ ವಿತರಕರ ದಿನಾಚರಣೆ ಮತ್ತು ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಬಲಿಷ್ಠ ವ್ಯವಹಾರ ಸಂಪತ್ತು ನಿರ್ಮಿಸುತ್ತದೆ. ಬಲಿಷ್ಠ ಕುಟುಂಬ ಸುಂದರ ಜೀವನ ನಿರ್ಮಿಸುತ್ತದೆ. ಎರಡರ ನಡುವೆ ಸಮತೋಲನ ಇದ್ದಾಗ ಸಂತೋಷ ಸ್ವಾಭಾವಿಕವಾಗಿ ದೊರೆಯುತ್ತದೆ. ವ್ಯವಹಾರ ನಮಗೆ ಉದ್ದೇಶ, ಗೌರವ ಹಾಗೂ ಆರ್ಥಿಕ ಭದ್ರತೆ ನೀಡುತ್ತದೆ. ಸಂತೋಷ ಎಂದರೆ ಸಾಧನೆಗಳು ಮಾತ್ರವಲ್ಲ. ಮನಸ್ಸಿನ ಶಾಂತಿಯಲ್ಲಿ ದೊರಕುವ ಅನುಭವ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ದೇವರಾಜ ಎಂ ಸಿ ಮಾತನಾಡಿ, ವಿತರಕರ ಸಂಘದ ಇತಿಹಾಸದಲ್ಲಿ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲಾ ವಿತರಕರ ಸಂಘವು ವಿತರಕರ ಕುಟುಂಬ ಮಿಲನ ಕಾರ್ಯಕ್ರಮ ಆಯೋಜಿಸಿದೆ. ಮುಂಬರುವ ದಿನಗಳಲ್ಲಿ ವಿಭಿನ್ನ ರೀತಿ ಕಾರ್ಯಕ್ರಮಗಳನ್ನು ನೀಡುತ್ತೇವೆ ಎಂದು ಹೇಳಿದರು.
ಲೆಕ್ಕ ಪರಿಶೋಧಕ ಗೌರೀಶ್ ಭಾರ್ಗವ್ ಕೆ ವಿ ಮಾತನಾಡಿ, ಸಾಂಪ್ರದಾಯಕ ವ್ಯವಹಾರ ಪದ್ಧತಿಯ ಜೊತೆಗೆ ಆಧುನಿಕ ಸ್ಪರ್ಶತೆ ನೀಡಿ ವ್ಯವಹಾರ ಮಾಡಿದ್ದಲ್ಲಿ ಯಾವುದೇ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮದೇ ಆದ ಛಾಪು ಮೂಡಿಸಬಹುದು ಎಂದು ತಿಳಿಸಿದರು.
ಕೆಸಿಪಿಡಿಎಫ್ ಅಧ್ಯಕ್ಷ ಗಿರೀಶ್ ಸುಂಕದ ಮಾತನಾಡಿ, ಕುಟುಂಬ ಮಿಲನದಂತಹ ಕಾರ್ಯಕ್ರಮಗಳು ನಮ್ಮ ಸಂಘಟನೆಗಳನ್ನು ಸದೃಢಗೊಳಿಸುತ್ತವೆ. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾಮಟ್ಟದ ಸಂಘಟನೆಗಳ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು.
Shivamogga News ಕೆಎಫ್‌ಡಬ್ಲ್ಯೂಡಿಎ ಅಧ್ಯಕ್ಷ ಜಯಂತ್ ಗಾಣಿಗ್ ಮಾತನಾಡಿ, ಸರ್ಕಾರಗಳಿಗೆ ತೆರಿಗೆ ನೀಡಿ ತೆರಿಗೆ ಶೇಖರಿಸಿ ಕೊಡುವಲ್ಲಿ ಸರ್ಕಾರದ ಆದಾಯದ ಮೂಲದಲ್ಲಿ ನಾವು ಕೂಡ ಪ್ರಮುಖ ಭಾಗಿಯಾಗಿದ್ದೇವೆ. ಸರ್ಕಾರದಿಂದ ನಮಗೂ ಕೂಡ ಸೌಲಭ್ಯಗಳು ದೊರೆಯಬೇಕು ಎಂದು ತಿಳಿಸಿದರು.
ವಿತರಕರ ಸಂಘದ ಗೌರವ ಕಾರ್ಯದರ್ಶಿ ಶ್ರೀನಿವಾಸ್ ಕೆಎಸ್, ಉಪಾಧ್ಯಕ್ಷ ಬದರಿನಾಥ್ ಬಿ ಆರ್, ಕಾರ್ಯದರ್ಶಿ ಗಿರೀಶ್ ಒಡೆಯರ್, ಸಹಕಾರ್ಯದರ್ಶಿ ಅರವಿಂದ ಎಸ್ ವಿ, ಖಜಾಂಚಿ ಚಂದ್ರಶೇಖರ್ ಕೆ ಕೆ, ನಿಕಟಪೂರ್ವ ಅಧ್ಯಕ್ಷ ಶಿವರಾಜ್ ಉಡುಗಣಿ, ಮಾಜಿ ಅಧ್ಯಕ್ಷ ಪ್ರಕಾಶ್ ಎಎನ್, ನಿರ್ದೇಶಕರಾದ ಮೋಹನ್ ಕುಮಾರ್ ಕೆಎಸ್, ಸುರೇಂದ್ರನಾಥ್, ಕುಮಾರ್, ರಾಘವೇಂದ್ರ, ಬಿ ವೈ ನವೀನ್ ಜವಳಿ, ಮಹಾರುದ್ರಪ್ಪ ಕೆ ವಿ, ಮಹಮದ್ ಇಕ್ಬಾಲ್, ವೆಂಕಟೇಶ್ ಕೆ ಎಮ್, ಚೇತನ್ ಕುಮಾರ್ ಹಾಗೂ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸೊರಬ ಕಾಲಿಗ್ಗೇರಿ ಗ್ರಾಮದ ಹಿಂದೂ ರುದ್ರಭೂಮಿಯನ್ನ ಅನ್ಯ ಬಳಕೆ ಮಾಡದಿರಲು ಮನವಿ
ಸೊರಬ ನೂರಾರು ವರ್ಷಗಳಿಂದ ಹಿಂದೂ ರುದ್ರಭೂಮಿಯಾಗಿ ಬಳಸುತ್ತಿರುವ ಪ್ರದೇಶವನ್ನು ಇತರೆ ಉದ್ದೇಶಕ್ಕೆ ಬಳಸದಂತೆ ಆಗ್ರಹಿಸಿ ತಾಲೂಕಿನ ಜಡೆ ಗ್ರಾಪಂ ವ್ಯಾಪ್ತಿಯ ಕಾಲಿಗ್ಗೇರಿ ಗ್ರಾಮಸ್ಥರು ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಗ್ರಾಮದ ಹಿರಿಯ ಹಾಗೂ ಗ್ರಾಪಂ ಮಾಜಿ ಸದಸ್ಯ ಕೆ. ಪ್ರಭಾಕರ್ ರಾಯ್ಕರ್ ಮಾತನಾಡಿ, ಸುಮಾರು ನೂರಾರು ವರ್ಷಗಳಿಂದ ಕಾಲಿಗ್ಗೇರಿ ಗ್ರಾಮದ ಸರ್ವೆ ನಂ. 2ರ ಗೋಮಾಳ ಪ್ರದೇಶವನ್ನು ಹಿಂದೂ ರುದ್ರಭೂಮಿಯಾಗಿ ಬಳಕೆ ಮಾಡಲಾಗುತ್ತಿದೆ. ಈವರೆಗೂ ಯಾವುದೇ ಸಮಸ್ಯೆಗಳು ಎದುರಾಗಿರಲಿಲ್ಲ. ಆದರೆ ಇತ್ತೀಚೆಗೆ ಎಪಿಎಂಸಿಯವರು ಸ್ಥಳಕ್ಕೆ ಆಗಮಿಸಿ ಹಿಂದೂ ರುದ್ರಭೂಮಿಯನ್ನು ತಮ್ಮದೆಂದು ಕಾಂಪೌಂಡ್ ಹಾಕಲು ಮುಂದಾಗಿದ್ದಾರೆ. ಇದಕ್ಕೆ ಸ್ಥಳೀಯ ಗ್ರಾಮಸ್ಥರು ವಿರೋಧವನ್ನು ವ್ಯಕ್ತಪಡಿಸಿದರು. ಮಾತ್ರವಲ್ಲದೇ ಜಡೆ ಗ್ರಾಪಂ ಮತ್ತು ತಹಶೀಲ್ದಾರ್ ಕಚೇರಿಗೆ ಮಾಹಿತಿ ನೀಡಿ ಕಾಂಪೌಂಡ್ ನಿರ್ಮಾಣಕ್ಕೆ ತಡೆಯನ್ನು ಮಾಡಿದ್ದಾರೆ. ಭಾವನಾತ್ಮಕವಾಗಿ ಹಾಗೂ ಪೂರ್ವಿಜರನ್ನು ಸಂಸ್ಕಾರ ಮಾಡಿದ ಸ್ಥಳವು ಹಿಂದೂಗಳಿಗೆ ಮೀಸಲು ಮಾಡಬೇಕು ಎಂದು ಆಗ್ರಹಿಸಿದರು.
ಕಾಲಿಗ್ಗೇರಿ ಗ್ರಾಮದ ರುದ್ರಭೂಮಿಯಲ್ಲಿ ಜಡೆ, ಜಿಗರಿಕೊಪ್ಪ, ಸಾಲಿಗೆ, ಹಣಜಿ ಸೇರಿದಂತೆ ಕೆಲ ಗ್ರಾಮಸ್ಥರು ಮೃತರ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿಕೊಂಡು ಬಂದಿದ್ದಾರೆ. ಸುತ್ತಲಿನ ಪ್ರದೇಶದಲ್ಲಿ ರುದ್ರಭೂಮಿಗಾಗಿ ಯಾವುದೇ ಪ್ರದೇಶವಿಲ್ಲ. ಆದ್ದರಿಂದ ಅಧಿಕಾರಿಗಳು ತಲಾಂತರದಿಂದ ಬಳಕೆ ಮಾಡುತ್ತಿರುವ ರುದ್ರಭೂಮಿಯನ್ನು ರುದ್ರಭೂಮಿಗಾಗಿಯೇ ಮೀಸಲಿಟ್ಟು ಅಭಿವೃದ್ಧಿಗೊಳಿಸಬೇಕು. ಅನ್ಯತ ಯೋಜನೆಗಳಿಗೆ ಬಳಕೆ ಮಾಡಬಾರದು ಎಂದು ಒತ್ತಾಯಿಸಿದರು.
ತಾಪಂ ಮಾಜಿ ಸದಸ್ಯ ಕೋಟೆ ಬಸವಂತಪ್ಪ, ಜಡೆ ಗ್ರಾಪಂ ಮಾಜಿ ಸದಸ್ಯ ಕೆ.ಪಿ. ಜಯಕುಮಾರ್, ಪ್ರಮುಖರಾದ ಸುರೇಶ, ವೀರಪ್ಪಗೌಡ, ಮಂಜಪ್ಪ, ಶಿವಪ್ಪ, ಮೈಲಾರಪ್ಪ, ಸತೀಶ ಸೇರಿದಂತೆ ಇತರರಿದ್ದರು.
Acharya Tulsi National College of Commerce ಸಾಹಿತ್ಯ, ಶಿಕ್ಷಣ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ- ಸಿ.ಎಸ್.ಷಡಾಕ್ಷರಿ
Acharya Tulsi National College of Commerce ಶಿಕ್ಷಣ, ಸಾಹಿತ್ಯ, ಕಲೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡಲು ಹಾಗೂ ಸೇವಾ ಕಾರ್ಯಗಳಿಗೆ ಸದಾ ಸಿದ್ಧನಿದ್ದೇನೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿ ಬಳಗದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನೌಕರರ ಭವನ ನೀಡಿ ಪ್ರೋತ್ಸಾಹಿಸಿದ್ದಕ್ಕಾಗಿ ಬಳಗದ ಅಧ್ಯಕ್ಷ ಎಸ್.ಎಸ್.ವಾಗೇಶ್ ಅವರಿಂದ ಗೌರವ ಸ್ವೀಕರಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯ ಹಿರಿಯ ಮುತ್ಸದ್ದಿಗಳು, ವಿದ್ವಾಂಸರು, ಸಾಹಿತಿಗಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರೆಲ್ಲರ ಸೇವೆಯನ್ನು ಸದಾ ಸ್ಮರಿಸುವ, ಉಳಿಸಿ ಬೆಳೆಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತೇನೆ. ಶಿವಮೊಗ್ಗ ಸಾಂಸ್ಕೃತಿಕ ರಾಜಧಾನಿಯಾಗಲು ಜನರು ಸದಾ ದುಡಿಯುತ್ತಿದ್ದಾರೆ. ಅವರೊಂದಿಗೆ ತಾವು ಅಳಿಲು ಸೇವೆಯಲ್ಲಿ ತೊಡಗಿಕೊಂಡಿದ್ದೇನೆ ಎಂದು ತಿಳಿಸಿದರು.
ವಾಗೇಶ್ ಮಾತನಾಡಿ, ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹಲವಾರು ಉದ್ಯೋಗದಲ್ಲಿ ತೊಡಗಿಸಿ ದೇಶಾದ್ಯಂತ ಕೆಲಸ ಮಾಡುತ್ತಿದ್ದು, ಅವರನ್ನು ಒಗ್ಗೂಡಿಸಲು ಬೆಂಗಳೂರಿನಲ್ಲಿ ಸೇರಿದ ಸಭೆ ಯಶಸ್ವಿಯಾಗಿದ್ದು, ಹಲವು ಉದ್ಯೋಗದಾತರು ಕರೆ ನೀಡಿ, ನಮ್ಮ ಕಾಲೇಜಿನ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತರಿಗೆ ಉದ್ಯೋಗ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಸಂಯೋಜಕ ಸಮನ್ವಯ ಕಾಶಿ ಮಾತನಾಡಿ, ಸಿ.ಎಸ್.ಷಡಾಕ್ಷರಿ ಅವರು ಉತ್ತಮ ಕೆಲಸ ಮಾಡುತ್ತಿದ್ದು, ಸರ್ಕಾರಿ ನೌಕರರ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಉಪಾಧ್ಯಕ್ಷ ಕೇಶವಮೂರ್ತಿ, ನಿರ್ದೇಶಕ ಜಿ.ವಿಜಯಕುಮಾರ್, ಸಿ.ಎನ್.ಸುರೇಶ್, ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ
Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರಂಭಿಕ ಹಂತದಲ್ಲಿ ಮೂಳೆ ಸಂಬಂಧಿತ ಸಮಸ್ಯೆಗಳನ್ನು ಪತ್ತೆಹಚ್ಚುವ ಉದ್ದೇಶದಿಂದ, ಶಿವಮೊಗ್ಗದ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ಉಚಿತ ಮೂಳೆ ಸಾಂದ್ರತಾ ಪರೀಕ್ಷೆ (Free BMD Test) ಮತ್ತು ವೈದ್ಯಕೀಯ ಸಮಾಲೋಚನಾ ಶಿಬಿರವನ್ನು ಆಯೋಜಿಸಲಾಗಿದೆ.
ಉಚಿತ ಶಿಬಿರವು ಫೆಬ್ರವರಿ 07 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಕುವೆಂಪು ರಸ್ತೆಯ ನಂಬಿಯಾರ್ ಅಟ್ರಿಯಂ ನಲ್ಲಿರುವ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ನಡೆಯಲಿದೆ.
ಶಿಬಿರದ ವೈಶಿಷ್ಟ್ಯಗಳು: ಈ ಶಿಬಿರದಲ್ಲಿ ನುರಿತ ಕೀಲು ಮೂಳೆ ಮತ್ತು ಕೀಲು ಮರುಜೋಡಣೆ ತಜ್ಞ ವೈದ್ಯರಾದ ಡಾ. ನಾಗೇಂದ್ರ ಪ್ರಸಾದ್ ಎಂ ಆರ್ ಅವರು ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಿರಲಿದ್ದಾರೆ. ಶಿಬಿರಕ್ಕೆ ಬರುವ ಸಾರ್ವಜನಿಕರಿಗೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ಯಾವುದೇ ಶುಲ್ಕವಿರುವುದಿಲ್ಲ.
ಈ ಕೆಳಗಿನ ಲಕ್ಷಣಗಳಿರುವವರು ಈ ಉಚಿತ ಶಿಬಿರದ ಪ್ರಯೋಜನವನ್ನು ಪಡೆಯಬಹುದು:
ದೀರ್ಘಕಾಲದ ಮಂಡಿ ಮತ್ತು ಸೊಂಟ ನೋವಿನಿಂದ ಬಳಲುತ್ತಿರುವವರು. ಮೆಟ್ಟಿಲು ಹತ್ತಲು ಅಥವಾ ಇಳಿಯಲು ಕಷ್ಟವಾಗುತ್ತಿರುವವರು. ಮೂಳೆಗಳ ಕಾರ್ಯಕ್ಷಮತೆ ಕ್ಷೀಣಿಸುತ್ತಿರುವವರು.
ಋತುಚಕ್ರ ನಿಂತ ಮಹಿಳೆಯರಲ್ಲಿ ಮೂಳೆ ಸವಕಳಿ ಕಂಡುಬಂದಲ್ಲಿ. ವಯಸ್ಸಾದಂತೆ ಮೂಳೆ ಸವಕಳಿ ಎದುರಿಸುತ್ತಿರುವ ಪುರುಷರು ಮತ್ತು ಮಹಿಳೆಯರು.
Narayana Super Specialty Hospital ಮೊಣಕಾಲು ನೋವಿನಿಂದ ಸಂಪೂರ್ಣ ಸ್ವಾತಂತ್ರ್ಯ ಪಡೆಯಲು ಮತ್ತು ನಿಮ್ಮ ಮೂಳೆಗಳ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಆಸ್ಪತ್ರೆ ಪ್ರಕಟಣೆಯಲ್ಲಿ ವಿನಂತಿಸಿದೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ನೋಂದಣಿಗಾಗಿ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ: ದೂರವಾಣಿ ಸಂಖ್ಯೆ: 98864 13131
Shivamogga Youth Empowerment and Sports Department ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಪ.ಜಾ/ಪ.ಪಂ. ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಪ್ರಕಟಣೆ.
Shivamogga Youth Empowerment and Sports Department ವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿಯಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ಫೆ. 10 ರವರೆಗೆ ವಿಸ್ತರಿಸಲಾಗಿದೆ.
ಆಸಕ್ತ ಕ್ರೀಡಾಪಟುಗಳು ಸೇವಾಸಿಂದು https://sevasindhu.karnataka.gov.in ಮೂಲಕ ಫೆ. 10 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿರುತ್ತಾರೆ.
MESCOM ಫೆಬ್ರವರಿ 6.ಶಿವಮೊಗ್ಗ ನ್ಯೂಮಂಡ್ಲಿ ಮೆಸ್ಕಾಂ ಕಚೇರಿಯಲ್ಲಿ ಜನಸಂಪರ್ಕ ಸಭೆ
MESCOM ಶಿವಮೊಗ್ಗ ಎನ್.ಟಿ.ರಸ್ತೆ, ನ್ಯೂಮಂಡ್ಲಿ, ಮೆಸ್ಕಾಂ ಉಪವಿಭಾಗ -2 ಕಛೇರಿಯಲ್ಲಿ ಫೆ.06 ರಂದು ಬೆಳಿಗ್ಗೆ 11.00ರಿಂದ 01.00 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ. ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.
