Friday, February 20, 2026
Friday, February 20, 2026
Home Blog Page 198

Sadbhavana Diwas ಸದ್ಭಾವನಾ ದಿನದ ಅಂಗವಾಗಿ ಸೀಎಂ ಸಿದ್ಧರಾಮಯ್ಯ ಅವರಿಂದ ಅಧಿಕಾರಿ & ಸಿಬ್ಬಂದಿಗಳಿಗೆ ಪ್ರತಿಜ್ಞಾವಿಧಿ ಬೋಧನೆ

0

Sadbhavana Diwas ಸದ್ಭಾವನಾ ದಿನಾಚರಣೆಯ ಅಂಗವಾಗಿ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಸೌಧದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ
ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

Sadbhavana Diwas ಈ ಸಂದರ್ಭದಲ್ಲಿ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಇಂಧನ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರಎ.ಎಸ್. ಪೊನ್ನಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Karnataka State Forest Industries Corporation Limited ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ನವೀಕೃತ ವೆಬ್ ಸೈಟ್ ಗೆ ಚಾಲನೆ

0

Karnataka State Forest Industries Corporation Limited ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ (KSFIC)ದ ನವೀಕೃತ ವೆಬ್ ಸೈಟ್ ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ವಿಕಾಸಸೌಧ ಕಚೇರಿಯಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಗೋಪಾಲಕೃಷ್ಣ ಬೇಲೂರು, ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್. ವೆಂಕಟೇಶನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಉಪಸ್ಥಿತರಿದ್ದರು.

Veereshwara Punyashrama Sanskrit Path School ಆಗಸ್ಟ್ 23, ವೀರೇಶ್ವರ ಪುಣ್ಯಾಶ್ರಮದಲ್ಲಿ ಅಮಾವಾಸ್ಯೆ ಸಂಗೀತ ಸಂಜೆ

0

Veereshwara Punyashrama Sanskrit Path School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ ಪಾಠ ಶಾಲೆಯಲ್ಲಿ ಏ. 23ರ ಶನಿವಾರ ಸಂಜೆ 6:30ಕ್ಕೆ ಗಾನಲಹರಿ 111ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಸೀತಾರಾಮ ಕ್ಷತ್ರಿಯ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಲಿದೆ. ಆಶ್ರಮದ ಅಂಧ ಮಕ್ಕಳಿಂದ ಪ್ರಾರ್ಥನೆ ನಡೆಯಲಿದೆ.
ನಗರದ ಯುವ ಗಾಯಕ ಶ್ರೀನಿವಾಸ ಹಂಪಿಹೊಳ್ಳಿ ಅವರಿಂದ ಸಂಗೀತ ಸೇವೆ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಮಣ್ಣ ಭಜಂತ್ರಿ ಶಹನಾಯಿ, ರಾಘವೇಂದ್ರ ರಂಗಧೋಳ್, ತುಕಾರಾಮ್ ರಂಗಧೋಳ್ ಮತ್ತು ವಿನಾಯಕ್ ಭಟ್‌ರಿಂದ ತಬಲ ಸೇವೆ, ವೀರಭದ್ರಯ್ಯ ಶಾಸ್ತ್ರೀಗಳಿಂಧ ವೇದಘೋಷ, ಸಿದ್ದಣ ಬಡಿಗೇರ್ ಹರ‍್ಮೋನಿಯಂನೊಂದಿಗೆ ಸಾಥ್ ನೀಡಲಿದ್ದಾರೆ. ಮೇಘನಾ ಬಸವರಾಜ್ ನಿರೂಪಿಸಲಿದ್ದಾರೆ.

University of Mysore ಮೈಸೂರಿನ ಸರ್ಕಾರಿ ದೃಶ್ಯ ಕಲಾ ಕಾಲೇಜಿನಲ್ಲಿನ ಮಾಸ್ಟರ್ ಆಫ್ ವಿಜುಯಲ್ ಆರ್ಟ್ಸ್ ಪದವಿಗೆ ಪ್ರವೇಶಾತಿ ಅರ್ಜಿಗೆ ಆಹ್ವಾನ

0

University of Mysore ಮೈಸೂರು ವಿಶ್ವವಿದ್ಯಾನಿಲಯಕ್ಕೆ ಶಾಶ್ವತ ಸಂಯೋಜನೆಗೊಂಡಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಸಿದ್ದಾರ್ಥನಗರ, ಮೈಸೂರು ಸಂಸ್ಥೆಯಲ್ಲಿ ಮಾಸ್ಟರ್ ಆಫ್ ವಿಜುಯಲ್ ಆರ್ಟ್ಸ್ ಎರಡು ಶೈಕ್ಷಣಿಕ ವರ್ಷದ ನಾಲ್ಕು ಸೆಮಿಸ್ಟರ್ ಸಿ.ಬಿ.ಸಿ.ಎಸ್ ಪದ್ಧತಿಯ ದೃಶ್ಯ ಕಲೆಯಲ್ಲಿ 2025-26 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಸ್ನಾತಕೋತ್ತರ ಪದವಿ ಪ್ರವೇಶಾತಿಗಾಗಿ ಬಿ.ವಿ.ಎ.ಪದವಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಆಫ್ ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದು ಚಿತ್ರಕಲೆ ವಿಭಾಗ, ಗ್ರಾಫಿಕ್ಸ್ ವಿಭಾಗ ಮತ್ತು ಶಿಲ್ಪಕಲೆ ವಿಭಾಗಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕೋತ್ತರ ಪದವಿಯಾಗಿರುತ್ತದೆ. ಪ್ರಥಮ ವರ್ಷದ ಮಾಸ್ಟರ್ ಆಫ್ ವಿಜುಯಲ್ ಆರ್ಟ್ಸ್‌ (ಎಂ.ವಿ.ಎ) ಪ್ರವೇಶಾತಿಗಾಗಿ ಚಿತ್ರಕಲೆ ವಿಭಾಗ, ಗ್ರಾಫಿಕ್ಸ್ ವಿಭಾಗ ಮತ್ತು ಶಿಲ್ಪಕಲೆ ವಿಭಾಗಗಳಿಗೆ ಕಛೇರಿಯಿಂದ ಅರ್ಜಿಗಳನ್ನು ಪಡೆದು ಸಲ್ಲಿಸಲು ದಿನಾಂಕ: 30-08-2025 ರಂದು ಅಂತಿಮ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ ಹಾಗೂ ವೈಯುಕ್ತಿಕ ಸಂದರ್ಶನದ ದಿನಾಂಕವನ್ನು ತಿಳಿಸಲಾಗುವುದು.

University of Mysore ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕಾರ್ಯಾಲಯದ ದೂರವಾಣಿ ಸಂಖ್ಯೆ 0821-2438931 ಯನ್ನು ಸಂಪರ್ಕಿಸಬಹುದೆಂದು ಕಾಲೇಜಿನ ಡೀನ್ ತಿಳಿಸಿದ್ದಾರೆ.

Bharat Scouts And Guides ಸದ್ಭಾವನೆ ದಿನಾಚರಣೆಯು ಸೌಹಾರ್ದತೆ & ರಾಷ್ಟ್ರೀಯ ಏಕತೆಯನ್ನ ಸಾರುತ್ತದೆ- ಎಸ್.ಜಿ.ಆನಂದ್

0

Bharat Scouts And Guides ಸೌಹಾರ್ದತೆ ಶಾಂತಿ ರಾಷ್ಟ್ರೀಯ ಏಕತೆಗಳ ಮಹತ್ವವನ್ನು ಸಾರುವ ಈ ಸದ್ಭಾವನ ದಿನಾಚರಣೆ ಈಗಿನ ದಿನಕ್ಕೆ ಅತಿ ಅಗತ್ಯವಾಗಿದೆ ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಸ್ಕೌಟ್ ಆಯುಕ್ತರಾದ ಎಸ್ ಜಿ ಆನಂದ್ ಅಭಿಮತ ವ್ಯಕ್ತಪಡಿಸಿದರು. ಇಂದು ದೇಶ ದೇಶಗಳ ಮಧ್ಯೆ ಯುದ್ಧಗಳು ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವುದರಿಂದ ಸಾಕಷ್ಟು ಸಾವು ನೋವುಗಳು ಉಂಟಾಗುತ್ತಿವೆ ಪ್ರಕೃತಿ ಪರಿಸರ ಹಾಗೂ ವಾತಾವರಣ ಸಂಪೂರ್ಣ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಎಲ್ಲವನ್ನೂ ಮರೆತು ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಶಾಂತಿ ನೆಲೆಸುವಂತಹ ಕಾರ್ಯದಲ್ಲಿ ಮುಂದಾಗೋಣ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸ್ ಅವರ ಜನ್ಮದಿನವೂ ಕೂಡ ಹೌದು ಎಂದು ನುಡಿದರು ಇದೇ ಸಂದರ್ಭದಲ್ಲಿ ಕೇಂದ್ರ ಸ್ತಾನಿಕ ಆಯುಕ್ತರಾದ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ಈ ದಿನ ರಾಜೀವ್ ಗಾಂಧಿ ಫೌಂಡೇಶನ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ರಾಜೀವ್ ಗಾಂಧಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಸಹ ಗೌರವಿಸಲಾಗುತ್ತದೆ ಅಲ್ಲದೆ ತಮ್ಮ ಆಡಳಿತ ಅವಧಿಯಲ್ಲಿ ರಾಷ್ಟ್ರೀಯ ಸೌಹಾರ್ದತೆ ಗೆ ಶ್ರಮಿಸಿದ ಅವರಿಗೆ ಗೌರವ ನೀಡುವ ಸಲುವಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಸದ್ಭಾವನಾ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಗಿತ್ತು ಎಂದರು. Bharat Scouts And Guides ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಅವನತಿ ಅವರು ಮಾತನಾಡುತ್ತಾ ಜಾತಿ ಧರ್ಮ ಭಾಷೆ ರಾಧೇಶಿಕತೆಗಳ ಹೆಸರಿನಲ್ಲಿ ಒಡೆದು ಹೋಗುತ್ತಿರುವ ನಮ್ಮ ದೇಶಕ್ಕೆ ಏಕತೆಯ ತಂದು ಕೊಡುವುದೇ ಈ ಸೌಹಾರ್ದತೆ ಮತ್ತು ಸದ್ಭಾವನೆಗಳು ದೇಶದ ಪ್ರತಿಯೊಬ್ಬ ಪ್ರಜೆಗಳು ಈ ಗುಣವನ್ನು ತಮ್ಮಲ್ಲಿ ಅಳವಡಿಸಿಕೊಂಡರೆ ನಮ್ಮ ದೇಶ ವಿಶ್ವದಲ್ಲೇ ಒಂದು ಪ್ರಬಲ ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ ಎಂದರು. ಜಿಲ್ಲಾ ಕಾರ್ಯದರ್ಶಿಗಳಾದ ಕೆವಿ ಚಂದ್ರಶೇಖರಯ್ಯನವರು ಹಾಗೂ ಜೀವನ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

VISL Bhadravati ಜಿಲ್ಲೆಯ ವಿವಿಧೆಡೆ ಸೈಲ್- ವಿಐಎಸ್ಎಲ್ ನಿಂದ ನಡೆದ ಸಾಂಸ್ಥಿಕ ಸಾಮಾಜಿಕ ಹೊಣೆಯ ಚಟುವಟಿಕೆ ಮಾಹಿತಿ

0

VISL Bhadravati ಆಗಸ್ಟ್ 2025ರಲ್ಲಿ ವಿಐಎಸ್ ಎಲ್ ನಿಂದ ಸಾಂಸ್ಥಿಕ ಸಾಮಾಜಿಕ ಕಳಕಳಿಯ ಅಡಿಯಲ್ಲಿ ಚಟುವಟಿಕೆಗಳನ್ನು ನಡೆಸಲಾಯಿತು.

01) ಬೆಂಚುಗಳು ಮತ್ತು ಮೇಜುಗಳ ಹಸ್ತಾಂತರ:
ಆಗಸ್ಟ್ ೧೧, ೨೦೨೫ರಂದು ಬಂಡಿಗುಡ್ಡದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಆರು ಡೆಸ್ಕ್ ಮತ್ತು ಮೇಜುಗಳನ್ನು ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಐಎಸ್‌ಎಲ್‌ನ ಕಾರ್ಯಪಾಲಕ ನಿರ್ದೇಶಕ ಶ್ರೀ ಬಿ.ಎಲ್. ಚಾಂದವಾನಿ, ಭದ್ರಾವತಿಯ ಕ್ಷೇತ್ರ ಶಿಕ್ಷಣ ಅಧಿಕಾರಿ ಶ್ರೀ ನಾಗೇಂದ್ರಪ್ಪ, ಭದ್ರಾವತಿಯ ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ಶ್ರೀ ಈರಪ್ಪ, ವಿಐಎಸ್‌ಎಲ್‌ನ ಉಪ ಪ್ರಧಾನ ವ್ಯವಸ್ಥಾಪಕ (ಗಣಿ) ಶ್ರೀ ಅನಿಲ್ ಕುಮಾರ್ ರೆಡ್ಡಿ, ವಿಐಎಸ್‌ಎಲ್ ಸಿಎಸ್‌ಆರ್‌ನ ನೋಡಲ್ ಅಧಿಕಾರಿ ಶ್ರೀ ಎಮ್.ಎಲ್.ಯೋಗೀಶ್ ಮತ್ತು ವಿಐಎಸ್‌ಎಲ್‌ನ ಗಣಿಗಾರಿಕೆ ಸಹಾಯಕ ಶ್ರೀ ಪ್ರಸಾದ್ ಭಾಗವಹಿಸಿದ್ದರು.

೨) ವಿಶೇಷ ಸಹಾಯಕ ಸಾಧನಗಳ ಹಸ್ತಾಂತರ:
ಶಿಕಾರಿಪುರ ಮತ್ತು ಹೊಸನಗರದಲ್ಲಿರು ಕರ್ನಾಟಕ ಸರ್ಕಾರಿ ಶಾಲೆಗಳ ೨೫ ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿಶೇಷ ಸಹಾಯಕ ಸಾಧನಗಳು ಮತ್ತು ಭದ್ರಾವತಿಯ ೨೨ ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿಶೇಷ ಸಹಾಯಕ ಸಾಧನಗಳನ್ನು ಕ್ರಮವಾಗಿ ದಿನಾಂಕ ೭-೮-೨೦೨೫ ಮತ್ತು ೧೧-೮-೨೦೨೫ ರಂದು ಶಿಕಾರಿಪುರ ಮತ್ತು ಭದ್ರಾವತಿಯಲ್ಲಿ ಹಸ್ತಾಂತರಿಸಲಾಯಿತು.

ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಐಎಸ್‌ಎಲ್‌ನ ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಹೆಚ್.ಆರ್ ಮತ್ತು ಪಿ.ಆರ್), ಹೆಚ್ಚುವರಿ ಮುಖ್ಯ ವೈಧ್ಯಾಧಿಕಾರಿ ಡಾ|| ಕೆ.ಎಸ್. ಸುಜೀತ್ ಕುಮಾರ್ ಮತ್ತು ಶ್ರೀ ಎಮ್.ಎಲ್. ಯೋಗೀಶ್, ಕ್ಷೇತ್ರ ಶಿಕ್ಷಣ ಅಧಿಕಾರಿ ಲೋಕೇಶ್.ಬಿ.ಆರ್, ಕ್ಷೇತ್ರ ಸಂಪನ್ಮೂಲ ಸಂಯೋಜಕ (ಬಿ.ಆರ್.ಸಿ), ಶ್ರೀ ಕೊಟ್ರೇಶಿ, ಶಿಕಾರಿಪುರದ ಬಿಐಇಆರ್‌ಟಿ, ಡಾ|| ಮಂಜುನಾಥ್, ಸರ್ಕಾರಿ ತಾಲ್ಲೂಕು ಆರೋಗ್ಯ ಅಧಿಕಾರಿ ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕ ಶ್ರೀ ಬಿ.ಎಲ್. ಚಾಂದವಾನಿ, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಮತ್ತು ಸಿ.ಎಸ್.ಆರ್ ಅಪೆಕ್ಸ್ ಸಮಿತಿಯ ಅಧ್ಯಕ್ಷರು, ಶ್ರೀ ಎಲ್. ಪ್ರವೀಣ್ ಕುಮಾರ್, ಶ್ರೀಮತಿ ಶೋಭ ಶಿವಶಂಕರನ್, ಮಹಾಪ್ರಬಂಧಕರು (ಎಫ್ ಮತ್ತು ಎ), ಶ್ರೀ ಅಜಯ್ ಡಿ. ಸೋಂಕುವಾರ್, ಉಪಮಹಾಪ್ರಬಂಧಕರು ಪ್ರಭಾರಿ (ಎಮ್.ಎಮ್ ಮತ್ತು ಸಿಸಿ), ಶ್ರೀ ಜೆ. ಜಗದೀಶ, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ, ಶ್ರೀ ಪಾರ್ಥಸಾರಥಿ ಮಿಶ್ರಾ, ಅಧ್ಯಕ್ಷರು, ವಿಐಎಸ್‌ಎಲ್ ಅಧಿಕಾರಿಗಳ ಸಂಘ ಮತ್ತು ಶ್ರೀ ಎಮ್.ಎಲ್.ಯೋಗೀಶ್. ಭದ್ರಾವತಿಯ ಶಿಕ್ಷಣ ಇಲಾಖೆಯಿಂದ ಶ್ರೀ ನಾಗೇಂದ್ರಪ್ಪ ಕ್ಷೇತ್ರ ಶಿಕ್ಷಣ ಅಧಿಕಾರಿ, ಶ್ರೀ ದಯಾನಂದ, ಇಸಿಒ, ಶ್ರೀ ಪಂಚಾಕ್ಷರಿ, ಬಿಆರ್‌ಸಿ, ಶ್ರೀ ತೀರ್ಥಪ್ಪ ಮತ್ತು ಶ್ರೀಮತಿ ಜಯಲಕ್ಷ್ಮಿ ಬಿಐಈಆರ್‌ಟಿ. ತರಂಗ ಶಾಲೆಯಿಂದ ಶಾಲಾ ಶಿಕ್ಷಕರಾದ ಶ್ರೀ ಬಸವರಾಜಪ್ಪ ಉಪಸ್ಥಿತರಿದ್ದರು.

೩) ತಾರೀಕಟ್ಟೆ ಗ್ರಾಮದಲ್ಲಿ ಉಚಿತ ವೈಧ್ಯಕೀಯ ಆರೋಗ್ಯ ಶಿಬಿರ:
ಆಗಸ್ಟ್ ೧೭ ರಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ (ಶಿವಮೊಗ್ಗ), ಶಂಕರ ಕಣ್ಣಿನ ಆಸ್ಪತ್ರೆ (ಶಿವಮೊಗ್ಗ), ಭದ್ರಾವತಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮತ್ತು ವಿಐಎಸ್‌ಎಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ಭದ್ರಾವತಿಯ ತಾರೀಕಟ್ಟೆ ಗ್ರಾಮದಲ್ಲಿ ಸಮಗ್ರ ಉಚಿತ ವೈಧ್ಯಕೀಯ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.

VISL Bhadravati ಹೃದಯ ಶಾಸ್ತ್ರ, ಮೂಳೆ ಚಿಕಿತ್ಸೆ, ಸಾಮಾನ್ಯ ತಪಾಸಣೆ, ನೇತ್ರವಿಜ್ಞಾನ, ದಂತವೈದ್ಯಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತçದಂತಹ ಕ್ಷೇತ್ರಗಳಲ್ಲಿ ಅನುಭವಿ ತಜ್ಞವೈದ್ಯರು ಭಾಗವಹಿಸುವ ಮೂಲಕ ಆರೋಗ್ಯ ಸಮಾಲೋಚನೆ ಮತ್ತು ರೋಗನಿರ್ಣಯ ಸೇವೆಗಳನ್ನು ನೀಡಲಾಯಿತು.

ಈ ಉಪಕ್ರಮದ ಭಾಗವಾಗಿ ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಕಣ್ಣಿನ ಪರೀಕ್ಷೆ, ದಂತ ತಪಾಸಣೆ, ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ), ೨ಡಿ ಎಕೋಕಾರ್ಡಿಯೋಗ್ರಫಿ (೨ಡಿ ಎಕೋ) ತಪಾಸಣೆಗಳನ್ನು ಮಾಡಲಾಯಿತು.

ಶ್ರೀ ಬಿ.ಎಲ್. ಚಾಂದವಾನಿ, ಕಾರ್ಯಪಾಲಕ ನಿರ್ದೇಶಕರು, ವಿಐಎಸ್‌ಎಲ್ ಮತ್ತು ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ವಿಐಎಸ್‌ಎಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿಐಎಸ್‌ಎಲ್‌ನ ಅಧಿಕಾರಿಗಳಾದ ಶ್ರೀ ಎಲ್. ಪ್ರವೀಣ್ ಕುಮಾರ್, ಡಾ|| ಕೆ.ಎಸ್. ಸುಜೀತ್ ಕುಮಾರ್, ಡಾ|| ಸುಷ್ಮಾ, ಉಪ ಮುಖ್ಯ ವೈದ್ಯಾಧಿಕಾರಿ, ಡಾ|| ಎಸ್.ಎನ್. ಸುರೇಶ್, ದಂತ ವೈದ್ಯರು. ಶ್ರೀ ಎಮ್.ಎಲ್. ಯೋಗೀಶ್, ಶ್ರೀಮತಿ ಅಪರ್ಣ, ಸಹಾಯಕ ಪ್ರಬಂಧಕರು (ವೈಧ್ಯಕೀಯ). ಶಂಕರ ಕಣ್ಣಿನ ಆಸ್ಪತ್ರೆಯ ಡಾ|| ಶೈರಿನ್ ನಾಝ್, ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಡಾ|| ಸುಪ್ರೇಥ್, ಡಾ|| ಬಸವರಾಜ್, ಭದ್ರಾವತಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಸೂಪರಿನ್‌ಟೆಂಡೆಂಟ್ ಶ್ರೀಮತಿ ಪ್ರೇಮಲತಾ. ಶ್ರೀಮತಿ ಭಾಗ್ಯಮ್ಮ, ಅಧ್ಯಕ್ಷೆ, ಹಿರಿಯೂರು ಗ್ರಾಮ ಪಂಚಾಯ್ತಿ, ತಾರೀಕಟ್ಟೆ ಶ್ರೀ ರಾಮ ದೇವಸ್ಥಾನ ಸೇವಾ ಟ್ರಸ್ಟ್ನ ಅಧ್ಯಕ್ಷರು ಶ್ರೀ ಜಯರಾಮ್, ತಾರೀಕಟ್ಟೆ ಗ್ರಾಮ ಪಂಚಾಯ್ತಿ ಸದಸ್ಯರಾದ ಶ್ರೀ ಬಿ.ಸುರೇಶ್, ಶ್ರೀ ವೆಂಕಟೇಶ್, ಕಾರ್ಯದರ್ಶಿ, ತಾರೀಕಟ್ಟೆ ಶ್ರೀ ರಾಮ ದೇವಸ್ಥಾನ ಸೇವಾ ಟ್ರಸ್ಟ್ ಭಾಗವಹಿಸಿದ್ದರು.

‘ಹಸಿರೆಡೆಗೆ-ನಮ್ಮ ನಡೆ’ (‘ಉo-ಉಡಿeeಟಿ’) ಉಪಕ್ರಮದಡಿಯಲ್ಲಿ ೭೫೦ ನುಗ್ಗೆ, ಪಪ್ಪಾಯ, ಹಲಸು, ಮಾವು, ತುಳಸಿ ಸಸಿಗಳನ್ನು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಾಯಿತು

The Institute of Indian Foundrymen Shivamogga ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಉನ್ನತ ಸಾಧನೆಗೈಯಲು ಪೋಷಕರು ಪ್ರೋತ್ಸಾಹಿಸಬೇಕು- ಡಾ.ಹರೀಶ್ ದೇಲಂತಬೆಟ್ಟು

0

The Institute of Indian Foundrymen Shivamogga ಮಕ್ಕಳ ಸರಿಯಾದ ಪೋಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಪೋಷಕರ ಪಾತ್ರ ಮಹತ್ತರ ಎಂದು ಸುಬ್ಬಯ್ಯ ಮೆಡಿಕಲ್ ಕಾಲೇಜು ಮಾನಸಿಕ ವೈದ್ಯಕೀಯ ವಿಭಾಗ ಪ್ರೊಫೆಸರ್ ಹಾಗೂ ಮುಖ್ಯಸ್ಥ ಡಾ. ಹರೀಶ್ ಡೆಲಂತಬೆಟ್ಟು ಹೇಳಿದರು.
ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ದಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಚಾಪ್ಟರ್ ವತಿಯಿಂದ ಏರ್ಪಡಿಸಿದ್ದ 76ನೇ ರಾಷ್ಟ್ರೀಯ ಫೌಂಡ್ರಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪೋಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಉನ್ನತ ಸಾಧನೆ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ನೈಟೆಕ್ ಫೆರೋಕಾಸ್ಟಿಂಗ್ಸ್ ಪ್ರೈವೇಟ್ ಲಿಮಿಟೆಡ್ ನ ಹಿರಿಯ ಫೌಂಡ್ರಿಮೆನ್ ಮಹೇಶಪ್ಪ, ಅತ್ಯುತ್ತಮ ಕಾರ್ಮಿಕರಾಗಿ ಪ್ರಿಸಿಶನ್ ಕಾಸ್ಟಿಂಗ್ಸ್ ನ ಮುಡ್ಲಿಗಿರಿ ಶಿವಮೊಗ್ಗ ಹಾಗೂ ಅತ್ಯುತ್ತಮ ಕುಶಲ್ ಕಾರ್ಮಿಕರಾಗಿ ಪ್ರಗತಿ ಸ್ಟೀಲ್ ಕಾಸ್ಟಿಂಗ್ಸ್ ರುದ್ರೇಶ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಟಲ್ ಬ್ಯಾಡ್ಮಿಂಟನ್ ಮತ್ತು ಕ್ವಿಜ್ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
The Institute of Indian Foundrymen Shivamogga ದಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಚಾಪ್ಟರ್ ಖಜಾಂಚಿ ಅರುಣ್ ಎಂ ಎಸ್ ಅವರು ರಾಷ್ಟ್ರೀಯ ಫೌಂಡ್ರಿ ದಿನದ ಕುರಿತು ಮಾಹಿತಿ ನೀಡಿದರು. ರಾಗ ರಂಜನಿ ಟ್ರಸ್ಟ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿತು.
ದಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಚಾಪ್ಟರ್ ಅಧ್ಯಕ್ಷ ಎಂ.ವಿ.ರಾಘವೇAದ್ರ ಸ್ವಾಗತಿಸಿದರು. ಚೇತನ ಸಿ.ಆರ್. ಕಾರ್ಯಕ್ರಮ ನಿರೂಪಿಸಿದರು. ಸಮೃದ್ಧಿ ಜೈನ್ ಮತ್ತು ಸನ್ನಿಧಿ ಜೈನ್ ಪ್ರಾರ್ಥನಾ ಗೀತೆ ಹಾಡಿದರು. ಗೌರವ ಕಾರ್ಯದರ್ಶಿ ಮಹಾವೀರ ಜೈನ್ ವಂದನಾರ್ಪಣೆ ನಡೆಸಿಕೊಟ್ಟರು.ಧನ್ಯವಾದಗಳನ್ನು ಅರ್ಪಿಸಿದರು.
ಫೌಂಡ್ರಿ ಉದ್ಯಮದ ಅನೇಕ ಗಣ್ಯರಾದ ಶ್ರೀನಾಥ್ ಗಿರಿಮಾಜಿ, ದಾಮೋದರ್ ಬಾಳಿಗ, ಶಶಿಧರ್ ಭೂಪಾಳಂ, ಡಿ ಎಸ್ ಚಂದ್ರಶೇಖರ್, ಪರಮಶೇಖರ್, ಬೆನಕಪ್ಪ ಡಿ ಜಿ, ಸದಸ್ಯರಾದ ಇಲಂಗೋನ್ ನಂಜುಂಡೇಶ್ವರ, ಶಾಂತಿಕಿರಣ್, ಜಗದೀಶ್ವರಪ್ಪ, ನವೀನ್, ಚೇತನ್ ಮತ್ತಿತರರು ಪಾಲ್ಗೊಂಡಿದ್ದರು.

Sri Adichunchanagiri Mahasansthan Math ಮಕ್ಕಳಲ್ಲಿನ ನಾಯಕತ್ವ ಗುಣ & ಆತ್ಮ ವಿಶ್ವಾಸವನ್ನ ದೈಹಿಕ ಶಿಕ್ಷಕ ಬೆಳೆಸಲು ಸಹಕರಿಸುತ್ತಾನೆ – ಶ್ರೀಪ್ರಸನ್ನನಾಥಶ್ರೀ

0

Sri Adichunchanagiri Mahasansthan Math ಒಬ್ಬ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕನು ಕೇವಲ ಕ್ರೀಡಾ ಚಟುವಟಿಕೆಗಳನ್ನು ಕಲಿಸುವುದಲ್ಲದೆ, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತಾನೆ. ಅವರು ವಿದ್ಯಾರ್ಥಿಗಳಲ್ಲಿ ದೈಹಿಕ ಚಟುವಟಿಕೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಮತ್ತು ಜೀವನದುದ್ದಕ್ಕೂ ಅದನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಾರೆ.
ಒಬ್ಬ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕನು ಕೇವಲ ವಿದ್ಯಾರ್ಥಿಗಳ ದೈಹಿಕ ಆರೋಗ್ಯವನ್ನು ಸುಧಾರಿಸುವುದಿಲ್ಲ, ಆದರೆ ಅವರ ಆತ್ಮವಿಶ್ವಾಸ, ನಾಯಕತ್ವದ ಗುಣಗಳು ಮತ್ತು ಶಿಸ್ತನ್ನು ಬೆಳೆಸಲು ಸಹಾಯ ಮಾಡುತ್ತಾನೆ. ಆದ್ದರಿಂದ ಜಿಲ್ಲೆಯ ನಿವೃತ್ತಿ ಹೊಂದಿದ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರ ಸೇವೆಯನ್ನು ಪರಿಗಣಿಸಿ, ಈ ವರ್ಷವೂ ಸಹ ಕ್ರೀಡಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಚುಂಚಾದ್ರಿ ಕಪ್ ಸಮಾರೋಪ ಸಮಾರಂಭದ ಕಾರ್ಯಕ್ರಮದಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥಸ್ವಾಮೀಜಿ, ಬೆಕ್ಕಿನಕಲ್ಮಠದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ, ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಭಾಸ್ಕ‌ರ್ ಜಿ. ಕಾಮತ್, ಕಾರ್ಯದರ್ಶಿ ಕೆ.ಎಸ್. ಶಶಿ ಹಾಗೂ ಅತಿಥಿ ಗಣ್ಯರಿಂದ ಸನ್ಮಾನಿಸಿ, ಗೌರವಿಸಲಾಯಿತು.

Rotary Club Shimoga ವಿದ್ಯಾರ್ಥಿಗಳ ಶಿಕ್ಷಣ, ಕ್ರೀಡೆ, ಪಠ್ಯೇತರ ಚಟುವಟಿಕೆಗಳಿಗೆ ರೋಟರಿ ಸಂಸ್ಥೆ ಸದಾ ಬೆಂಬಲಿಸುತ್ತದೆ – ಕೆ.ಎಸ್.ವಿಶ್ವನಾಥ ನಾಯಕ್

0

Rotary Club Shimoga ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರೆಪಿಸುವಲ್ಲಿ ಇಂಟರಾಕ್ಟ್ ಕ್ಲಬ್ ನೆರವಾಗುತ್ತದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಸಂಸ್ಥೆ ವತಿಯಿಂದ ಮಲವಗೊಪ್ಪದ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಇಂಟರಾಕ್ಟ್ ಕ್ಲಬ್ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ನಮ್ಮ ಕ್ಲಬ್ ಸದಾ ಬೆಂಬಲವಾಗಿ ನಿಂತಿದೆ. ಇಂಟರಾಕ್ಟ್ ಕ್ಲಬ್ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯ ಎಂದು ತಿಳಿಸಿದರು.

ಎರಡು ವರ್ಷಗಳ ಹಿಂದೆ ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಇಂಟರಾಕ್ಟ್ ಕ್ಲಬ್ ಅನ್ನು ಪ್ರಾರಂಭಿಸಿ ಮಕ್ಕಳ ವೈಯಕ್ತಿಕ ಅಭಿವೃದ್ಧಿಗೆ ಅವಕಾಶ ಕಲ್ಪಿಸಿದೆ. ಇಂಟರಾಕ್ಟ್ ಕ್ಲಬ್ ಮುಖಾಂತರ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

Rotary Club Shimoga ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ, ವಲಯ ಸೇನಾನಿ ಎಸ್.ಪಿ.ಶಂಕರ್, ರೋಟರಿ ಕ್ಲಬ್ ರಿವರ್ ಸೈಡ್ ಕಾರ್ಯದರ್ಶಿ ನಿತಿನ್ ಯಾದವ್, ಮುಖ್ಯಶಿಕ್ಷಕಿ ಲೀನಾ ರಾಬರ್ಟ್ ಹಾಗೂ ಶಾಲಾ ಅಧ್ಯಕ್ಷ ನಿಂಗರಾಜು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ ಟೀಚರ್ ಕೋಆರ್ಡಿನೇಟರ್‌ಗಳಿಗೆ ಪದವಿ ಪ್ರದಾನ ನೆರವೇರಿಸಲಾಯಿತು.

ಇಂಟರಾಕ್ಟ್ ಕ್ಲಬ್‌ನ ಪದವಿ ಪ್ರದಾನ ಕಾರ್ಯಕ್ರಮ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು. ಶಾಲೆಯ ಆವರಣದಲ್ಲಿ 25ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

Department of School Education and Literacy ಗ್ರಾಮೀಣ ಮಕ್ಕಳಲ್ಲಿನ ಪ್ರತಿಭೆಗೆ ಶಿಕ್ಷಕರು & ಪೋಷಕರು ಪ್ರೋತ್ಸಾಹಿಸಬೇಕು – ಬಿಇಓ ರಮೇಶ್

0

Department of School Education and Literacy ಶಿಕ್ಷಣದ ಜೊತೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಹೇಳಿದರು.

ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಕುಂಸಿ ಕ್ಲಸ್ಟರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಾಮೇನಹಳ್ಳಿ ಬಾಳೆಕೊಪ್ಪ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 14 ವರ್ಷ ವಯೋಮಿತಿ ಒಳಗಿನ ಕುಂಸಿ ಹಾರನಹಳ್ಳಿ ಚೋರಡಿ ವಲಯ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಬಾಲಕ ಬಾಲಕಿಯರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಮಕ್ಕಳಲ್ಲೂ ಸಹ ಸಾಕಷ್ಟು ಪ್ರತಿಭೆ ಇರುತ್ತದೆ. ಶಿಕ್ಷಕರು ಹಾಗೂ ಪಾಲಕರು ಪ್ರೋತ್ಸಾಹ ನೀಡಿ ಕ್ರೀಡಾ ಆಸಕ್ತಿ ಬೆಳೆಸಬೇಕು. ಇದರಿಂದ ಅವರ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು.
ಚಾಮೇನಹಳ್ಳಿ ಎಸ್‌ಡಿಎಂಸಿ ಅಧ್ಯಕ್ಷ ತುಷಾರ್ ಎಮ್ ಆರ್ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸದಾ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೆಚ್ಚಿನ ಅವಕಾಶಗಳಿವೆ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಗ್ರಾಮೀಣ ಪ್ರದೇಶದ ಪ್ರತಿಭೆಗಳು ರಾಷ್ಟ್ರ‌ಮಟ್ಟದಲ್ಲಿ ಉತ್ತಮ ಸ್ಥಾನ ಹೊಂದಿದ್ದಾರೆ. ಇಲ್ಲಿ ವಿಜೇತರಾದ ಮಕ್ಕಳು ಮುಂದೆ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸುವುದರ ಮುಖಾಂತರ ಸಾಧನೆ ಮಾಡಬೇಕು ಎಂದು ತಿಳಿಸಿದರು.

Department of School Education and Literacy ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಚಂದ್ರಕಾಂತ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಿನೇಶ್, ಬಾಳೆಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಗುತ್ತೇಶ್, ಉಪಾಧ್ಯಕ್ಷ ಹನುಮಂತಪ್ಪ, ಆಶಾ ಬಾಗೇಶ್, ಆಶಾ ಜಯಪ್ಪ, ಕವಿತಾ ವಾಸಪ್ಪ, ಪ್ರಕಾಶ್ ಧರ್ಮಪ್ಪ, ಮುಖ್ಯಶಿಕ್ಷಕ ಜಿ.ನಾಗರಾಜಪ್ಪ, ಶಿಕ್ಷಕರಾದ ಯಶೋಧ ಚಂದ್ರಶೇಖರ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಯಪ್ಪ, ದೈಹಿಕ ಶಿಕ್ಷಕರು, ಕುಂಸಿ, ಹಾರನಹಳ್ಳಿ, ಚೋರಡಿ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.