ಲಾಕ್ ಡೌನ್ ಸಂದರ್ಭದಲ್ಲಿ ಎಚ್ಐವಿ ಸೋಂಕಿತ ದಂಪತಿಗಳು ರಾಯಗಡದಲ್ಲಿರುವ ತಮ್ಮ ಸ್ಥಳೀಯ ಸ್ಥಳಕ್ಕೆ ಆಗಮಿಸಿದ್ದರು. ಆದರೆ ಅವರು ತಮ್ಮ ಆಂಟಿರೆಟ್ರೋವೈರಲ್ ಚಿಕಿತ್ಸೆಯನ್ನು ಮುಂದುವರಿಸುವ ಬಗ್ಗೆ ಚಿಂತಿತರಾಗಿದ್ದರು. ಆಂಟಿರೆಟ್ರೋವೈರಲ್ ಚಿಕಿತ್ಸೆಯು ಏಡ್ಸ್ ಸೋಂಕಿತರಿಗೆ ಅತ್ಯವಶ್ಯಕವಾಗಿದೆ. ಆಂಟಿರೆಟ್ರೋವೈರಲ್ ಚಿಕಿತ್ಸೆ ಇಲ್ಲದೆ, ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸುತ್ತದೆ. ಆ ಸಮಯದಲ್ಲಿ ಮುಂಬೈನ ಜಿಲ್ಲಾ ಏಡ್ಸ್ ನಿಯಂತ್ರಣ ಸಂಸ್ಥೆಯು ಅಂಚೆ ಮೂಲಕ ಔಷಧಿಯನ್ನು ತಲುಪಿಸಿ ಮಾನವೀಯತೆ ಮೆರೆದಿದೆ. ಈ ಸಂಸ್ಥೆಯು ರೋಗಿಗಳ ಗೌಪ್ಯತೆಯನ್ನು ಕಾಪಾಡಿಕೊಂಡು ಅಗತ್ಯ ಔಷಧಿ ಗಳನ್ನು ಮನೆಬಾಗಿಲಿಗೆ ತಲುಪಿಸುತ್ತದೆ.
ಈ ಸಂಸ್ಥೆಯು ರೋಗಿಗಳ ಗುರುತಿನ ಮೇಲೆ ರಾಜಿ ಮಾಡಿಕೊಳ್ಳದೆ ಎಚ್‌ಐವಿ ಔಷಧಿಗಳನ್ನು ತಲುಪಿಸಲು ಹೊಸ ಮಾರ್ಗಗಳನ್ನು ಕಂಡುಕೊಂಡಿದೆ.
ಪರ್ಯಾಯ ಮಾರ್ಗಗಳನ್ನು ಅನುಸರಿಸಿ ರೋಗಿಗಳಿಗೆ ಅಗತ್ಯ ಸಮಯಕ್ಕೆ ಔಷಧಿಗಳನ್ನು ತಲುಪಿಸುವಲ್ಲಿ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ. ಕಳೆದ ವರ್ಷದಿಂದ, 95 ರೋಗಿಗಳು ಮನೆ ಬಾಗಿಲಿಗೆ ಔಷಧಿ ವಿತರಣೆಯಿಂದ ಪ್ರಯೋಜನ ಪಡೆದಿದ್ದಾರೆ. ಉತ್ತರಪ್ರದೇಶ, ಬಿಹಾರ, ಬಂಗಾಳ ಮತ್ತು ಮಹಾರಾಷ್ಟ್ರದ ದೂರದ ಜಿಲ್ಲೆಗಳ ರೋಗಿಗಳು ಮುಂಬೈನಲ್ಲಿ ಎಚ್ಐವಿ ಚಿಕಿತ್ಸೆಗಾಗಿ ನೋಂದಾಯಿಸಿಕೊಳ್ಳುತ್ತಾರೆ.
ಈ ಸಂಸ್ಥೆಯ ವತಿಯಿಂದ ಸ್ಪೀಡ್ ಪೋಸ್ಟ್ ಮೂಲಕ ಔಷಧಿಗಳು ತಲುಪಿಸಲಾಗುತ್ತದೆ.
ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ ಅಸಂಖ್ಯ ಪೆಟ್ಟಿಗೆಗಳನ್ನು ಸರಿಯಾದ ವಿಳಾಸಕ್ಕೆ ಆದರೆ, ಅವುಗಳು ಒಳಗೊಂಡಿರುವ ಔಷಧಿಗಳ ಸುಳಿವು ಯಾರಿಗೂ ಗೊತ್ತಾಗದಂತೆ ನೋಡಿಕೊಳ್ಳಲಾಗುತ್ತದೆ. ಮನೆಬಾಗಿಲಿಗೆ ಔಷಧಿ ವಿತರಿಸುವ ಕಾರ್ಯವು ART ಮಿತ್ರ ಎಂಬ ಕಾರ್ಯಕ್ರಮದ ಅಡಿಯಲ್ಲಿ ಪ್ರಾರಂಭವಾಯಿತು. HIV ರೋಗಿಗಳು ART ಮಿತ್ರ ಚಿಕಿತ್ಸಾಲಯಗಳಿಂದ ತಮ್ಮ ಔಷಧಿಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡು ಹೋಗಬಹುದಾಗಿದೆ. ಆದರೆ ಕಳೆದ ಮಾರ್ಚ್‌ನಲ್ಲಿ ಪ್ರಯಾಣದ ನಿರ್ಬಂಧಗಳು ಅಡ್ಡಿಪಡಿಸಿದ್ದರಿಂದ, ಎಲ್ಲಾ ಏಡ್ಸ್ ರೋಗಿಗಳಿಗೆ ಮುಂಬೈ ಜಿಲ್ಲೆಯ ಏಡ್ಸ್ ನಿಯಂತ್ರಣ ಸೊಸೈಟಿ ಸ್ಪೀಡ್ ಪೋಸ್ಟ್ ಮೂಲಕ ಔಷಧಿಗಳನ್ನು ಹಸ್ತಾಂತರಿಸಿದೆ. ಮನೆಯಲ್ಲಿ ಇದ್ದು ಔಷಧಿಗಳನ್ನು ಪಡೆಯಲು ಸಾಧ್ಯವಾಗದ ಪಕ್ಷದಲ್ಲಿ ಆರ್ಟ್ ಮಿತ್ರ ಚಿಕಿತ್ಸಾಲಯದ ಸಿಬ್ಬಂದಿಗಳೇ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಐವಿ ರೋಗಿಯನ್ನು ಭೇಟಿಯಾಗಿ ಔಷಧಿಗಳನ್ನು ಹಸ್ತಾಂತರಿಸುತ್ತಾರೆ.
ಮುಂಬೈನ ಸಂಸ್ಥೆಯ ಸೇವೆ ದೇಶದ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ.
ಅಂಚೆಯ ಮೂಲಕ ಆಪತ್ಬಾಂಧವ ಸೇವೆ
ಓಮಿಕ್ರಾನ್ ಎದುರಿಸಲು ದೆಹಲಿ ಸನ್ನದ್ಧ. -ಕೇಜ್ರಿವಾಲ್
ಕೊರೋನಾ ವೈರಸ್ ನ ಓಮಿಕ್ರಾನ್ ತಳಿ ಹರಡುವ ಭಯವಿದೆ. ಇದನ್ನು ಎದುರಿಸಲು ದೆಹಲಿ ಸರ್ಕಾರ ಸಜ್ಜಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಿಳಿಸಿದ್ದಾರೆ.
ಆಮ್ಲಜನಕ ಸೌಲಭ್ಯವಿರುವ 30000 ಹಾಸಿಗೆಗಳು ಹಾಗೂ ಆಮ್ಲಜನಕ ಪೂರೈಕೆ, ಸಂಗ್ರಹ ವ್ಯವಸ್ಥೆಯನ್ನು ಸಿದ್ಧಪಡಿಸಿ ಇರಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.
ಕೇಜ್ರಿವಾಲ್ ಅವರು ಸರ್ಕಾರದ ವಿವಿಧ ಇಲಾಖೆಗಳ ಜೊತೆಗೆ ಸಿದ್ಧತಾ ಪರಿಶೀಲನಾ ಸಭೆ ನಡೆಸಿದ್ದಾರೆ. 30000 ಹಾಸಿಗೆಗಳಲ್ಲಿ, ಹತ್ತು ಸಾವಿರ ಐಸಿಯು ಹಾಸಿಗೆಗಳು ಒಳಗೊಂಡಿದೆ. ಇನ್ನೂ 6800 ಹಾಸಿಗೆಗಳು ಫೆಬ್ರವರಿ ತಿಂಗಳ ಸಮಯದಲ್ಲಿ ಸಿದ್ಧವಾಗಲಿದೆ ಎಂದು ಕೂಡ ತಿಳಿಸಿದರು.
ಪ್ರತಿ ವಾರ್ಡ್ ನಲ್ಲೂ ನೂರು ಆಮ್ಲಜನಕ ಸೌಲಭ್ಯವಿರುವ ಹಾಸಿಗೆಗಳನ್ನು ಎರಡು ವಾರದಲ್ಲಿ ಸಿದ್ಧಪಡಿಸಲಾಗುತ್ತದೆ. 270 ವಾರ್ಡ್ ಗಳಿಂದ 25000 ಹಾಸಿಗೆಗಳು ಸಿದ್ಧವಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಿಳಿಸಿದ್ದಾರೆ.
ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಹರಿಕುಮಾರ್
ಭಾರತೀಯ ನೌಕಾಪಡೆಯ 25ನೇ ಮುಖ್ಯಸ್ಥರಾಗಿ ಅಡ್ಮಿರಲ್ ಆರ್.ಹರಿಕುಮಾರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
“ಸಾಗರ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಒದಗಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತೇನೆ. ಹಾಗೆಯೇ ಸಾಗರ ಪ್ರದೇಶಗಳಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಕುರಿತು ಸಹ ಹೆಚ್ಚಿನ ಆದ್ಯತೆ ನೀಡಲಾಗುವುದು” ಎಂದು ಅಡ್ಮಿರಲ್ ಆರ್.ಹರಿಕುಮಾರ್ ತಿಳಿಸಿದ್ದಾರೆ.
ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿರುವಂತಹ ಅಡ್ಮಿರಲ್ ಹರಿಕುಮಾರ್ ಅವರು1983 ರ ಜನವರಿ.1 ರಂದು ನೌಕಾಪಡೆಗೆ ಸೇರ್ಪಡೆಯಾದರು. ಹಡಗು ಕಾರ್ಯಾಚರಣೆ ಅಧಿಕಾರಿಯಾಗಿ, ಐ ಎನ್ ಎಸ್ ನಿಶಾಂಕ್, ಐ ಎನ್ ಎಸ್ ಕೋರಾ, ಐಎನ್ಎಸ್ ಎರಡು ರಣವೀರ್ ಸೇರಿ ಹಲವು ಯುದ್ಧನೌಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ನೌಕಾಪಡೆಯಲ್ಲಿ ಹಲವು ಉನ್ನತ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಕಂದಾಯ ಇಲಾಖೆ ಈಗ App ಸೌಲಭ್ಯ.
ವಿವಿಧ ಸೇವೆಗಳ ಅರ್ಜಿ ಶುಲ್ಕವನ್ನು ಡಿಜಿಟಲ್ ಪಾವತಿ ಅವಕಾಶಕ್ಕೆ ಶಿಫಾರಸ್ಸು ಮಾಡಲಾಗಿದೆ.
ಕಂದಾಯ ಇಲಾಖೆಯ ಎಲ್ಲಾ ಸೇವೆಗಳು ಮೊಬೈಲ್ app
ಮೂಲಕ ನೀಡಬೇಕು. ಹಾಗೂ ಇಲಾಖೆಯ ವಿವಿಧ ಸೇವೆಗಳು ಅರ್ಜಿ ಶುಲ್ಕವನ್ನು ನಗದು ಪಾವತಿಯ ಬದಲು ಡಿಜಿಟಲ್ ಪಾವತಿಗೆ ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗವು, ಕಂದಾಯ ಇಲಾಖೆಗೆ ಸಂಬಂಧಿಸಿದ ವರದಿಯಲ್ಲಿ ಶಿಫಾರಸ್ಸು ಮಾಡಿದೆ.
ಬಳಕೆದಾರರಿಗೆ ಅನುಕೂಲವಾಗಬೇಕು. ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಮೊಬೈಲ್ ಮೂಲಕ ಲಭಿಸುವಂತೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಇ-ಆಡಳಿತ ಇಲಾಖೆಯು ಮೊಬೈಲ್ ಆಪ್ ಅನ್ನು ಪುನರಾಭಿವೃದ್ಧಿಗೊಳಿಸಬೇಕು ಎಂದು ತಿಳಿಸಿದೆ.
ಇಷ್ಟಲ್ಲದೇ ಕಂದಾಯ ಇಲಾಖೆಯ ಎಲ್ಲಾ ಆನ್ಲೈನ್ ಸೇವೆಗಳಿಗೂ ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಗೂಗಲ್ ಪೇ ಇವುಗಳ ಮೂಲಕ ಪಾವತಿಸಲು ಅವಕಾಶ ಕಲ್ಪಿಸಬೇಕು ಎಂದು ವರದಿಯಲ್ಲಿ ತಿಳಿಸಿದೆ.
ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಪಿಂಚಣಿ ಸೇವೆಗಳನ್ನು ‘ನವೋದಯ’ app ಅಡಿ ತರಬೇಕು. ಅರ್ಜಿದಾರರ ಅರ್ಜಿಯ ವಸ್ತುಸ್ಥಿತಿ, ನಿರಾಕರಣೆ, ಅನುಮೋದನೆ ಇನ್ನು ಹೆಚ್ಚುವರಿ ದಾಖಲೆಗಳ ಕುರಿತು ಎಸ್ಎಂಎಸ್ ಸೌಲಭ್ಯ ಅಥವಾ ದೂರವಾಣಿ ಕರೆ ಸೌಲಭ್ಯ ಕಲ್ಪಿಸಬೇಕು. ಮೊಬೈಲ್ App ಮೂಲಕ ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ತಂತ್ರಾಂಶದಲ್ಲಿ ಅವಕಾಶ ನೀಡಬೇಕು. ಪ್ರಮಾಣಪತ್ರಗಳ ಸಾಫ್ಟ್ ಪ್ರತಿಯನ್ನು ಇಮೇಲ್ ಮೂಲಕ ಪಿಡಿಎಫ್ ರೂಪದಲ್ಲಿ ಅರ್ಜಿದಾರರ ಮೊಬೈಲ್ ಗೆ ಎಸ್ಎಂಎಸ್ ಮೂಲಕ ಕಳುಹಿಸಬೇಕು. ಇವುಗಳು ಪ್ರಮುಖ ಶಿಫಾರಸುಗಳಾಗಿವೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಭಾರತ ವಾಯುಪಡೆಗೆ ಹೆರಾನ್ ಸೇರ್ಪಡೆ
ಭಾರತದ ವಾಯುಪಡೆಗೆ ಮತ್ತಷ್ಟು ಬಲ ತುಂಬಲಿರುವ ಹೆರಾನ್. ಇಸ್ರೇಲ್ ಭಾರತಕ್ಕೆ ತಂತ್ರಜ್ಞಾನವುಳ್ಳ ಹೆರಾನ್ ಡ್ರೋನ್ ಗಳನ್ನು ಪೂರೈಕೆ ಮಾಡಿದೆ.
“ಇಸ್ರೇಲ್ ನಿಂದ ಬಂದಿರುವ ಅತ್ಯಾಧುನಿಕ ಡ್ರೋನ್ ಗಳು ಭಾರತೀಯ ಸೇನೆ ಸೇರಿವೆ. ಅಲ್ಲದೆ ಅವುಗಳನ್ನು ಲಡಾಕ್ ನ ಪೂರ್ವ ವಲಯಕ್ಕೆ ನಿಯೋಜನೆ ಮಾಡುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ” ಎಂದು ಮೂಲಗಳು ತಿಳಿಸಿವೆ.
ಹೆರಾನ್ ಡ್ರೋನ್ ಗಳು ಅತ್ಯಾಧುನಿಕವಾಗಿದ್ದು, ಇದುವರೆಗೆ ಬಳಕೆ ಮಾಡುತ್ತಿದ್ದ ಡ್ರೋನ್ ಗಳಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿದೆ. ಈ ಡ್ರೋನ್ ಗಳಲ್ಲಿ anti-jamming ವ್ಯವಸ್ಥೆಯು ವಿದೇಶಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿವೆ.
ಭಾರತದ ಗಡಿಭಾಗದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕ್ಯಾತೆ ತೆಗೆಯುವ ಚೀನಾಕ್ಕೆ ಹೆರಾನ್ ನಿಗಾ ಇರಿಸುವ ಮೂಲಕ ತಕ್ಕ ಪಾಠ ಕಲಿಸಲಿದೆ.
ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್
ಟ್ವಿಟರ್ ನ ನೂತನ ಸಿಇಒ ಆಗಿ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರು ನೇಮಕವಾಗಿದ್ದಾರೆ.ಅವರಿಗೆ ವಾರ್ಷಿಕ ಒಂದು ದಶಲಕ್ಷ ಡಾಲರ್ ವೇತನ (7.5 ಕೋಟಿ ರೂ.) ನೀಡಲಾಗುವುದು ಎಂದು ಕಂಪನಿಯು ಅಮೇರಿಕಾದ ಸೆಕ್ಯೂರಿಟೀಸ್ ಆಂಡ್ ಎಕ್ಸ್ಚೇಂಜ್ ಕಮಿಷನ್ ಗೆ ತಿಳಿಸಿದೆ.
ಪರಾಗ್ ಅಗರ್ವಾಲ್ ಗೆ 12.5 ದಶಲಕ್ಷ ಡಾಲರ್ ಮೌಲ್ಯದ ಶೇರುಗಳು ಸಿಗಲಿವೆ.
ಪರಾಗ್ ಅಗರವಾಲ್ ಅವರು ಟ್ವಿಟರ್ ನ ಸಹ-ಸಂಸ್ಥಾಪಕ ಜಾಕ್ ಡೋರ್ಸಿ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ. ನಾನು ಹತ್ತು ವರ್ಷದ ಹಿಂದೆ ಕಂಪನಿಗೆ ಸೇರಿದೆ. ನನ್ನ ಎಲ್ಲಾ ಸೋಲು-ಗೆಲುವುಗಳಲ್ಲಿ ಡೋರ್ಸಿ ಅವರ ಮಾರ್ಗದರ್ಶನ ಇದೆ. ಆದರೆ, ಟ್ವಿಟ್ಟರ್ ಈಗ ಅನೂಹ್ಯ ಅವಕಾಶಗಳನ್ನು ನಮ್ಮೆಲ್ಲರ ಮುಂದೆ ತೆರೆದಿಟ್ಟಿದೆ ಎಂದು ಹೇಳಿದ್ದಾರೆ.
ಅಯೋಧ್ಯ ತೀರ್ಪು ಕಾನೂನಾತ್ಮಕ
ರಾಮ ಜನ್ಮಭೂಮಿ ವಿವಾದ ಕುರಿತು ತೀರ್ಪನ್ನು ಕಾನೂನು ಆಧಾರದ ಮೇಲೆ ನೀಡಲಾಗಿದೆ. ಧರ್ಮದ ಆಧಾರದ ಮೇಲೆ ಅಲ್ಲ ಎಂದು ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯಿ ತಿಳಿಸಿದ್ದಾರೆ.
“ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ನೀಡಿದ ತೀರ್ಪು ನನ್ನ ವೈಯಕ್ತಿಕ ನಿರ್ಧಾರವಾಗಿರಲಿಲ್ಲ. ಅದು ಸುಪ್ರೀಂ ಕೋರ್ಟ್ ನ ನಿರ್ಧಾರವಾಗಿತ್ತು ” ಎಂದು ಹೇಳಿದರು.
ನ್ಯಾಯ ಪೀಠದಲ್ಲಿದ್ದ 50 ನ್ಯಾಯಮೂರ್ತಿಗಳು 3-4 ತಿಂಗಳ ಅವಧಿಯಲ್ಲಿ 900 ಪುಟಗಳ ತೀರ್ಪು ಬರೆದಿದ್ದಾರೆ. ದೇಶದ ಸಂವಿಧಾನ ಮತ್ತು ಕಾನೂನಿನ ಆಧಾರದ ಮೇಲೆ ಈ ತೀರ್ಪನ್ನು ನೀಡಲಾಗುತ್ತದೆ. ಇದರ ಹೊರತು ಧರ್ಮ ಆಧರಿಸಿಲ್ಲ. ಒಬ್ಬ ನ್ಯಾಯಾಧೀಶರಿಗೆ ಸಂವಿಧಾನವೇ ಧರ್ಮವಾಗಿರುತ್ತದೆ ಎಂದು ಮಾಜಿ ಮುಖ್ಯ ನ್ಯಾಯಮೂರ್ತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಿವೃತ್ತಿ ಹೊಂದಿದ ಆರು ತಿಂಗಳ ನಂತರ ರಾಜ್ಯ ಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಅವರ ಈ ನಡೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗಳಿಗೆ ವ್ಯಕ್ತವಾಗಿದ್ದವು. ಈ ಸಂದರ್ಭದಲ್ಲಿ ಆಗ ಚುನಾವಣೆಗೆ ಸ್ಪರ್ಧಿಸುವ ತಮ್ಮ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು.
ಪ್ರೊ.ನಿರಂಜನ ವಾನಳ್ಳಿ: ಬೆಂಗಳೂರು ಉತ್ತರ ವಿವಿ ಕುಲಪತಿ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ. ನಿರಂಜನ ವಾನಳ್ಳಿ ಅವರನ್ನು ನೇಮಿಸಲಾಗಿದೆ. ಕುಲಪತಿ ಶೋಧನಾ ಸಮಿತಿ ಶಿಫಾರಸ್ಸಿನ ಆಧಾರದಂತೆ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕ ನಿರಂಜನ ವಾನಳ್ಳಿ ಅವರನ್ನು ನೇಮಕಮಾಡಿದೆ.
ನಿರಂಜನ ವಾನಳ್ಳಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ, ದೂರ ಶಿಕ್ಷಣ ವಿಭಾಗದ ನಿರ್ದೇಶಕರಾಗಿ ಹಾಗೂ ಹರಿಯಾಣ ವಿಶ್ವವಿದ್ಯಾಲಯಕ್ಕೆ ಪ್ರೆಸಿಡೆಂಟ್ ನಾಮಿನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 33 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಮದ್ಯದ ದೊರೆ ಮಲ್ಯ ಅವರಿಗೆ ಮತ್ತೊಂದು ಅವಕಾಶ
ಒಂದು ಕಾಲದಲ್ಲಿ ಮದ್ಯೊತ್ಪನ್ನ ಮತ್ತು
ವಿಮಾನಯಾನಕ್ಕೆ ಹೆಸರಾಗಿದ್ದ ಕಿಂಗ್ ಫಿಷರ್ ಸಂಸ್ಥೆ ಈಗ ಮುಂಚಿನ ಪ್ರಚಾರದ ಬಿರುಸಿನಲ್ಲಿಲ್ಲ.
ಅದರ ಮಾಲಿಕ ಶ್ರೀ. ವಿಜಯ ಮಲ್ಯ ಅವರು ಭಾರತದ ಬ್ಯಾಂಕುಗಳಿಂದ
ಒಂಭತ್ತು ಕೋಟಿ ರೂ
ಸಾಲ ಪಡೆದಿದ್ದರು.
ಅದನ್ನ ಮರುಪಾವತಿ ಮಾಡಿರಲಿಲ್ಲ. ಬ್ಯಾಂಕುಗಳಿಗೆ ಸಾಲ ಪಾವತಿಸದೇ ನಾಪತ್ತೆಯಾಗಿದ್ದರು.
ಈ ಕುರಿತು ಭಾರತೀಯ ಬ್ಯಾಂಕುಗಳು ಕೋರ್ಟಿನ ಮೆಟ್ಟಿಲೇರಿದ್ದವು.
ಕ್ರಮೇಣ ಅದು ನ್ಯಾಯಾಂಗ ನಿಂದನೆ ಪ್ರಕರಣದ ಹಂತವನ್ನು ಮುಟ್ಟಿತ್ತು.
ಈ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ವರ್ಷ ಜನವರಿ 18ರಂದು ನಡೆಸುವುದಾಗಿ ತಿಳಿಸಿದೆ.
ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮಲ್ಯ ಅವರು ತಮ್ಮ ಮಕ್ಕಳಿಗೆ 40 ದಶಲಕ್ಷ ಡಾಲರ್ ವರ್ಗಾಯಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ 2017ರಲ್ಲಿ ಮಲ್ಯ ಅವರನ್ನು ತಪ್ಪಿತಸ್ಥ ಎಂದು ಆದೇಶಿಸಿತು. ಅದನ್ನು ಪ್ರಶ್ನಿಸಿದ ಮಲ್ಯ ಅವರ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ಈ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ 2017 ರಿಂದ ಸಾಕಷ್ಟು ಸಮಯ ಕಾದಿದೆ. ಇನ್ನೂ ಹೆಚ್ಚಿನ ಸಮಯ ಕಾಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಯು.ಯು. ಲಲಿತ್, ಎಸ್.ಆರ್. ಭಟ್,ಬೇಲಾ ಎಂ. ತ್ರಿವೇದಿ ಅವರ ನ್ಯಾಯಪೀಠ ತಿಳಿಸಿದೆ.
ವಿಜಯ್ ಮಲ್ಯ ಅವರು ಮುಂಚೆಯೇ ತಮ್ಮ ವಾದ ಮಂಡಿಸಲು ಮುಕ್ತರಾಗಿದ್ದಾರೆ. ಒಂದು ವೇಳೆ ಅದರಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗದೆ ಹೋದರೆ, ಅವರ ಪರವಾಗಿ ವಕೀಲರು ವಾದ ಮಂಡಿಸಬಹುದು ಎಂದು ನ್ಯಾಯಪೀಠ ಹೇಳಿದೆ.
ಅಸ್ಸಾಂನ ಕೃಷಿ ತಾಂತ್ರಿಕತೆ : ಕರ್ನಾಟಕ ನವೋದ್ಯಮ ನೆರವು
ಕರ್ನಾಟಕದ ಉನ್ನತ ಶಿಕ್ಷಣ ಮತ್ತು ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ (ಎನ್ಇಪಿ-2020) ಹಾಗೂ ಐಟಿ- ಬಿಟಿ, ನವೋದ್ಯಮ ಬೆಳವಣಿಗೆ ಕುರಿತ ವಿಚಾರಗಳನ್ನು ಹಂಚಿಕೊಂಡರು.
ಹಿಮಂತ ಬಿಸ್ವ ಶರ್ಮ ಅವರು ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಶ್ವತ್ಥನಾರಾಯಣ ಅವರನ್ನು ಅಸ್ಸಾಂಗೆ ಬಂದು ವಿಚಾರ ವಿನಿಮಯ ಮಾಡಿಕೊಳ್ಳುವಂತೆ ಆಹ್ವಾನಿಸಿದ್ದರು.
ಆ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳ ತಂಡದೊಂದಿಗೆ ಗುವಾಹಟಿಗೆ ಅಧಿಕೃತವಾಗಿ ಭೇಟಿ ಕೊಟ್ಟಿದ್ದರು.
ಮುಖ್ಯವಾಗಿ, ಹೊಸ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಹೊರಟಾಗ ಎದುರಾದ ಪ್ರಶ್ನೆಗಳು, ಅನುಮಾನಗಳು, ಅವುಗಳಿಗೆ ಉತ್ತರ ಕಂಡುಕೊಳ್ಳಲಾದ ಬಗೆ ಇನ್ನಿತರ ವಿಷಯಗಳನ್ನು ಅವರು ಹಂಚಿಕೊಂಡರು.
ಡಿಸಿಪ್ಲೀನ್ ಕೋರ್ ವಿಷಯಗಳು, ಓಪನ್ ಎಲೆಕ್ಟೀವ್ಸ್, ಮಲ್ಟಿ ಎಂಟ್ರಿ- ಮಲ್ಟಿ ಎಕ್ಸಿಟ್, ರಾಷ್ಟ್ರೀಯ ಕೌಶಲ ಅರ್ಹತಾ ರೂಪುರೇಷೆ (ಎನ್.ಎಸ್.ಕ್ಯು.ಎಫ್)ಗೆ ಅನ್ವಯಿಸಲಾದ ಪಠ್ಯಕ್ರಮ, ಅಧಿಕೃತ ಆನ್ ಲೈನ್ ಕೋರ್ಸ್ ಕುರಿತು ಸಚಿವರು ವಿವರಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸೇರಿದಂತೆ ಅಸ್ಸಾಂ ಸರ್ಕಾರದ ಅಧಿಕಾರಿಗಳಿಗೆ ಇದ್ದ ಅನುಮಾನಗಳಿಗೆ ಅವರು ಉತ್ತರಿಸಿದರು.
ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವುದಕ್ಕಾಗಿ ಕರ್ನಾಟಕದಲ್ಲಿ ಮಾಡಲಾಗಿರುವ ತಾಂತ್ರಿಕ ನೆರವುಗಳ ಕುರಿತು ಗಮನ ಸೆಳೆದ ಅವರು, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್), ಸ್ಮಾರ್ಟ್ ಕ್ಲ್ಯಾಸ್ ರೂಮ್ ಗಳ ಸ್ಥಾಪನೆ, ಡಿಜಿಟಲ್ ಬೋಧನೆ-ಕಲಿಕೆಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ನೀಡಿರುವುದು, ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್ಎಂಎಸ್), ಬೋಧನೆ-ಕಲಿಕೆ ಪ್ರಕ್ರಿಯೆಯ ಮೌಲ್ಯಮಾಪನಕ್ಕೆ ಕೊಡಲಾಗಿರುವ ಒತ್ತು, ಆ ಮೂಲಕ ಕಲಿಕಾ ಸರಪಳಿಯ ಯಾವ ಕೊಂಡಿಯೂ ತಪ್ಪಿಹೋಗದಂತೆ ಹೇಗೆ ಕ್ರಮ ವಹಿಸಲಾಗಿದೆ ಎಂಬ ಬಗ್ಗೆ ತಿಳಿಸಿದರು.
ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣದಲ್ಲಿ ರಾಜ್ಯವು ದೇಶದಲ್ಲೇ ಮೊದಲ ಹೆಜ್ಜೆ ಇರಿಸಿದ್ದು, ಇದು ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ರಾಜ್ಯದಿಂದ ಹಾಗೂ ಅಮೆರಿಕ ಪೆನ್ಸಿಲ್ವೇನಿಯಾದ ಮಾಂಟ್ಗೊಮೇರಿ ವಿ.ವಿ.ಯಿಂದ ಟ್ವಿನ್ನಿಂಗ್ ಡಿಪ್ಲೊಮಾ ಪಡೆಯಲು ಅನುವು ಮಾಡಿಕೊಟ್ಟು, ಅವರ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಮಾವೇಶಗಳು ಹಾಗೂ ಕಾರ್ಯಾಗಾರಗಳನ್ನು ಏರ್ಪಡಿಸಿದ್ದು, ಪ್ರಶ್ನಾವಳಿಗಳ ಮೂಲಕ ಅನುಮಾನಗಳನ್ನು ಪರಿಹರಿಸಲು ಗಮನ ಕೇಂದ್ರೀಕರಿಸಿದ್ದು ಇತ್ಯಾದಿ ಕುರಿತು ತಿಳಿಸಿದರು.
ಅಸ್ಸಾಂನ ಹೆಚ್ಚಿನ ಜನರು ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿದ್ದಾರೆ.
ಐಟಿ- ಬಿಟಿ, ಕೃಷಿ ತಾಂತ್ರಿಕತೆ
ಕರ್ನಾಟಕವು, ಐಟಿ- ಬಿಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ಆ ಬಗ್ಗೆಯೂ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಲಾಯಿತು. ಬೆಂಗಳೂರು ದೇಶದಲ್ಲೇ ನವೋದ್ಯಮಗಳ ತವರು ಎಂದು ಹೆಸರಾಗಿದೆ. ಇದರಲ್ಲಿ ಸಾಕಷ್ಟು ಕಂಪನಿಗಳು ಕೃಷಿ ತಾಂತ್ರಿಕತೆಯಲ್ಲಿ (ಅಗ್ರಿ ಟೆಕ್) ಮುಂಚೂಣಿಯಲ್ಲಿವೆ. ಹೀಗಾಗಿ, ಕೃಷಿ ಪ್ರಧಾನವೂ ಹಾಗೂ ಈಶಾನ್ಯ ರಾಜ್ಯಗಳಲ್ಲೇ ಅತ್ಯಂತ ದೊಡ್ಡದಾದ ಅಸ್ಸಾಂನಲ್ಲಿ ಕೃಷಿ ತಾಂತ್ರಿಕತೆಯನ್ನು ಅಳವಡಿಸಲು ಕರ್ನಾಟಕದ ನವೋದ್ಯಮಗಳು ನೆರವು ನೀಡಬಲ್ಲವು ಎಂಬುದರ ಬಗ್ಗೆಯೂ ಅಶ್ವತ್ಥ ನಾರಾಯಣ ಅವರು ತಿಳಿಸಿದರು.
ರೈತ ಉತ್ಪಾದಕ ಸಂಘ ( ಎಫ್ ಪಿ ಒ) ಗಳ ಪ್ರಗತಿ ಬಗ್ಗೆ ರಾಜ್ಯ ನವೋದ್ಯಮಗಳ ದೂರದರ್ಶಿ ಮಂಡಳಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಅವರು ಮಾಹಿತಿ ನೀಡಿದರು.ಕೃಷಿ ಕಲ್ಪ ಯೋಜನೆ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಮಂಡಳಿ ಆಯುಕ್ತ ಪಿ. ಪ್ರದೀಪ್, ಐಟಿ/ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಅವರು ಪ್ರಸೆಂಟೇಷನ್ ಮಾಡಿದರು.
ಅಸ್ಸಾಂನ ವಿವಿಧ ಇಲಾಖೆಗಳ ಮಂತ್ರಿಗಳು, ಹಿರಿಯ ಅಧಿಕಾರಿಗಳು ಇದ್ದು ಅವರು ಕೂಡ ಅವರ ಇಲಾಖೆಗಳ ಮಾಹಿತಿಯನ್ನು ವಿನಿಮಯ ಮಾಡಿಕೊಂಡರು.
