Saturday, February 7, 2026
Saturday, February 7, 2026
Home Blog Page 1850

ಶುಲ್ಕ ಏರಿಕೆ ಬರೆ

0

ಇತ್ತೀಚೆಗಷ್ಟೇ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರ, ಈಗ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕವನ್ನು ಇದ್ದಕ್ಕಿದ್ದಂತೆ 10 ಸಾವಿರ ರೂ.ಗಳಷ್ಟು ಹೆಚ್ಚಿಸಿದೆ.

ಸರ್ಕಾರಿ ಕಾಲೇಜುಗಳಿಗೆ ಈ ಹಿಂದೆ ವಿದ್ಯಾರ್ಥಿಗಳು ಒಟ್ಟು 23,810 ರೂ.ಗಳನ್ನು ಪಾವತಿ ಮಾಡಬೇಕಿತ್ತು. ಈಗ ಶುಲ್ಕ ಹೆಚ್ಚಿಸಿರುವುದರಿಂದ 33,810 ರೂ.ಗಳನ್ನು ಪಾವತಿಸಬೇಕಿದೆ.

ಖಾಸಗಿ ಎಂಜಿನಿಯರಿಂಗ್ ಕಾಲೇಜ್ ಮತ್ತು ಡೀಮ್ಡ್ ವಿವಿಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೂ ಈ ನಿಯಮ ಅನ್ವಯವಾಗಲಿದೆ.

ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳದ ಬಗ್ಗೆ ಸರ್ಕಾರ ಕಾಲೇಜುಗಳ ಅಭಿವೃದ್ಧಿಯ ನೆಪ ಹೇಳುತ್ತಿದೆ.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಸೇರುವ ಬಹುತೇಕರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಕೋವಿಡ್ ನಿಂದಾಗಿ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಶುಲ್ಕ ಹೆಚ್ಚಿಸಿರುವುದು ಯಾವ ನ್ಯಾಯ? ಎಂದು ಸರ್ಕಾರದ ಈ ನಿರ್ಧಾರದಿಂದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ರಾಜ್ಯ ಸರ್ಕಾರ ಏಕಾಏಕಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳ ಮಾಡಿರುವುದು ವಿದ್ಯಾರ್ಥಿ ವಿರೋಧಿ ಮತ್ತು ಶಿಕ್ಷಣ ವಿರೋಧಿ ನಿಲುವಾಗಿದೆ. ಶುಲ್ಕ ಏರಿಕೆಯನ್ನು ವಾಪಸ್ ಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ” ಎಂದು ಎ ಐಡಿ ಎಸ್ ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದ್ದಾರೆ.

ಹೊಸ ಶಿಕ್ಷಣ ನೀತಿ ನಮಗೆಷ್ಟು ಅನುಕೂಲ

0

ಪೀಠಿಕೆ


ಒಂದು ದೇಶದ ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲಿಯ
ರಾಜಕೀಯ ಸಾಮಾಜಿಕ ಸಾಂಸ್ಕೃತಿಕ,ಆಥಿ೯ಕ
ಬದುಕನ್ನು ಸುಸ್ಥಿರವಾಗಿ ಕಟ್ಟಿಕೊಡುವುದಲ್ಲದೆ
ಆ ದೇಶದ ಸಾಂವಿಧಾನಿಕ ಆಶಯ ಮತ್ತು ಉದ್ದೇಶಗಳನ್ನು ಗಟ್ಟಿಗೊಳಿಸುವ ಒಂದು ಪ್ರಮುಖ ಸಾಧನವಾಗಿದೆ.
ಜುಲೈ,೨೦೨೦ ರಂದು ಕೇಂದ್ರ ಸರ್ಕಾರ ಸಚಿವ ಸಂಪುಟವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು
ಅಂಗೀಕರಿಸಿದ ನಂತರ ಎಲ್ಲೆಡೆ ,ಚಚೆ೯ಗಳು
ಪ್ರಾರಂಭವಾಗಿವೆ.
ಇದರನ್ವಯ ಭಾರತದಲ್ಲಿ ಶಾಲಾ ವ್ಯವಸ್ಥೆಯ ಹೊರಗಿರುವ ಎರಡು ಕೋಟಿ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಬೇಕು.
ಗಣತಂತ್ರ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ರೂಪಿಸುವ
ನೀತಿಗಳು ನಮ್ಮ ರಾಜ್ಯದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಎಷ್ಟರಮಟ್ಟಿಗೆ ಪೂರಕ ಎಂಬುದನ್ನು ಜನಗಳು ತೀಮಾ೯ನಿಸಬೇಕಿದೆ.ಅಲ್ಲದೆ ಈ ನೀತಿ ನಮ್ಮ ರಾಜ್ಯಸರ್ಕಾರವನ್ನು ಎಷ್ಟರಮಟ್ಟಿಗೆ ನಿಬಂಧನೆಗೊಳಪಡಿಸುತ್ತವೆ ಎಂಬುದನ್ನು ಭಾರತದ ಸಾಂವಿಧಾನಿಕ ಚೌಕಟ್ಟಿನಲ್ಲಿ ನೋಡಬೇಕು
ಮುಖ್ಯ ಅಂಶಗಳು
1.ಭಾರತ ಸಂವಿಧಾನದ 246ನೆ ವಿಧಿ ಅನ್ವಯ
ಶಿಕ್ಷಣ ಸಮವತಿ೯ ಪಟ್ಟಿಯಲ್ಲಿ ಸೇರಿಸಲಾಗಿದೆ.
ಹೀಗಾಗಿ ರಾಜ್ಯ ಶಾಸಕಾಂಗವು ಇಲ್ಲಿಯ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಶಿಕ್ಷಣ ವಿಷಯದಲ್ಲಿ ಕಾನೂನು ಮಾಡುವ ಪೂರ್ಣ ಅಧಿಕಾರವನ್ನು ಹೊಂದಿರುತ್ತದೆ. ಈ ಅಮೂಲ್ಯ ಹಕ್ಕು
ಕಾಪಾಡಿಕೊಳ್ಳವ ಅವಕಾಶ ಕಲ್ಪಿಸಬೇಕು.
2.ರಾಷ್ಟ್ರದ ಎಲ್ಲೆಡೆಯಿದ್ದಂತೆ ಕನಾ೯ಟಕದಲ್ಲಿಯೂ
ಶೇಕಡಾ ೮೦ಕ್ಕೂ ಹೆಚ್ಚು ಮಕ್ಕಳು ಸಕಾ೯ರಿ ಶಾಲೆಗಳಲ್ಲಿ
ಕಲಿಯುತ್ತಾರೆ.ಅವರೆಲ್ಲಾ ಹಿಂದುಳಿದ ಹಾಗೂ ಮಧ್ಯಮ
ವಗ೯ದ ಕುಟುಂಬದಿಂದ ಬರುವವರು.ಹೀಗಾಗಿ
ಸಕಾ೯ರಿ ಶಾಲೆಗಳ ಬಲವಧ೯ನೆಗೆ ಗಟ್ಟಿಯಾದ
ನೀತಿ ಇಂದಿನ ಅಗತ್ಯ. ಈ ಬಗ್ಗೆ ಸಡಿಲತೆ ತೋರಿದಲ್ಲಿ ಕಾಪೋ೯ರೇಟ್ ವ್ಯವಸ್ಥೆ ಮೇಲುಗೈ ಪಡೆಯುತ್ತದೆ ಹಾಗೂ ಶಿಕ್ಷಣ ವ್ಯಾಪಾರೀಕರಣವಾಗಿ ಮಾಪ೯ಟ್ಟು
ಸಾಮಾನ್ಯರು ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ವಿಫಲರಾಗುತ್ತಾರೆ.
ಆಥಿ೯ಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ನಿದಿ೯ಷ್ಟವಾದ ನೀತಿ ಬೇಕಾಗಿದೆ.
3.ಕನಾ೯ಟಕ ರಾಜ್ಯದಲ್ಲಿ ಪಂಚಾಯತ್ ಆಡಳಿತ ವ್ಯವಸ್ಥೆ ಗಟ್ಟಿಯಾಗಿದೆ.ಇವರ ಮಾಗ೯ದಶ೯ನಕ್ಕೊಳಪಡುವ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಗಳು ಶಿಕ್ಷಣ ವ್ಯವಸ್ಥೆಯನ್ನು ಸಬಲಗೊಳಿಸಲು ಸಹಾಯಕವಾಗಿವೆ ಇದರಲ್ಲಿ ಮಕ್ಕಳು, ಶಿಕ್ಷಕರು,ಪಾಲಕರು ಜನಪ್ರತಿನಿಧಿಗಳು ಸೇರಿರುತ್ತಾರೆ.
ಅಲ್ಲದೆ ತಳಮಟ್ಟದಲ್ಲಿ ಸೇವೆ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಇದೆ.ಈ ಬಗ್ಗೆ ಶಿಕ್ಷಣ ನೀತಿ
ಯಲ್ಲಿ ಸ್ಪಷ್ಟ ನಿರೂಪಣೆ ಬೇಕು.
4.ಪೂವ೯ ಪ್ರಾಥಮಿಕ ಶಿಕ್ಷಣ ಕಾಯ೯ಕ್ರಮವನ್ನು
ಶಾಲಾ ಮಾತೆಯರನ್ನು ನಿಯುಕ್ತಿ ಗೊಳಿಸುವ ಮೂಲಕ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.ಹೊಸ ನೀತಿಯಲ್ಲಿ ಇದು ಸೇರಿದೆಯಾದರೂ ಬದ್ಧತೆ ಹಾಗೂ ದಶ೯ನದ ಆವಶ್ಯಕತೆ ಕಾಣುತ್ತದೆ.
ಮುಖ್ಯವಾಗಿ ೩ರರಿಂದ ೧೮ ವಷ೯ದ ಎಲ್ಲಾ ಮಕ್ಕಳಿಗೂ ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದ ವರೆಗೆ
ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒಂದು ಕಾನೂನು ಬದ್ಧ ಹಾಗೂ ನ್ಯಾಯ ಸಮ್ಮತ ಹಕ್ಕನ್ನಾಗಿಸುವಲ್ಲಿ ಸಂವಿಧಾನದ ತಿದ್ದುಪಡಿ ಬಗ್ಗೆ ಪ್ರಸ್ತಾವನೆಗೆ ಒತ್ತಾಸೆ
ಅಗತ್ಯವಿದೆ.
5) ಶಾಲಾ ಶಿಕ್ಷಣ ಬಗ್ಗೆ ಹೊಸ ನೀತಿ
1) ಈಗಿರುವ “10 + 2” ರಚನೆಯನ್ನು “5 + 3 + 3 + 4” ಮಾದರಿಯೊಂದಿಗೆ ಬದಲಾಯಿಸಲಾಗುತ್ತದೆ. ಇದನ್ನು ಈ ಕೆಳಗಿನಂತೆ ಕಾರ್ಯಗತಗೊಳಿಸಲಾಗುತ್ತದೆ:
.ಅಡಿಪಾಯ ಹಂತ: ಇದನ್ನು ಮತ್ತಷ್ಟು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: 3 ವರ್ಷಗಳ ಪ್ರಿಸ್ಕೂಲ್ ಅಥವಾ ಅಂಗನವಾಡಿ, ನಂತರ ಪ್ರಾಥಮಿಕ ಶಾಲೆಯಲ್ಲಿ 1 ಮತ್ತು 2 ತರಗತಿಗಳು. ಇದು 3-8 ವರ್ಷದ ಮಕ್ಕಳನ್ನು ಒಳಗೊಳ್ಳುತ್ತದೆ. ಅಧ್ಯಯನದ ಗಮನವು ಚಟುವಟಿಕೆ ಆಧಾರಿತ ಕಲಿಕೆಯಲ್ಲಿರುತ್ತದೆ.
.ಪೂರ್ವಸಿದ್ಧತಾ ಹಂತ: 3 ರಿಂದ 5 ನೇ ತರಗತಿಗಳು, ಇದು 8-11 ವರ್ಷ ವಯಸ್ಸಿನವರನ್ನು ಒಳಗೊಂಡಿರುತ್ತದೆ. ಇದು ಕ್ರಮೇಣ ಮಾತನಾಡುವುದು, ಓದುವುದು, ಬರೆಯುವುದು, ದೈಹಿಕ ಶಿಕ್ಷಣ, ಭಾಷೆಗಳು, ಕಲೆ, ವಿಜ್ಞಾನ ಮತ್ತು ಗಣಿತದಂತಹ ವಿಷಯಗಳನ್ನು ಪರಿಚಯಿಸುತ್ತದೆ.
.ಮಧ್ಯ ಹಂತ: 6 ರಿಂದ 8 ನೇ ತರಗತಿಗಳು, 11-14 ವರ್ಷದೊಳಗಿನ ಮಕ್ಕಳನ್ನು ಒಳಗೊಳ್ಳುತ್ತದೆ. ಇದು ಗಣಿತ, ವಿಜ್ಞಾನ, ಸಾಮಾಜಿಕ ವಿಜ್ಞಾನ, ಕಲೆ ಮತ್ತು ಮಾನವಿಕ ವಿಷಯಗಳಲ್ಲಿ ಹೆಚ್ಚು ಅಮೂರ್ತ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತದೆ.
.ದ್ವಿತೀಯ ಹಂತ: 9 ರಿಂದ 12 ನೇ ತರಗತಿಗಳು, 14-18 ವರ್ಷ ವಯಸ್ಸಿನವರು. ಇದನ್ನು ಮತ್ತೆ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: 9 ಮತ್ತು 10 ನೇ ತರಗತಿಗಳು ಮೊದಲ ಹಂತವನ್ನು ಒಳಗೊಂಡಿದ್ದರೆ 11 ಮತ್ತು 12 ನೇ ತರಗತಿಗಳು ಎರಡನೇ ಹಂತವನ್ನು ಒಳಗೊಂಡಿವೆ. ಈ 4 ವರ್ಷಗಳ ಅಧ್ಯಯನವು ಆಳ ಮತ್ತು ವಿಮರ್ಶಾತ್ಮಕ ಚಿಂತನೆಯೊಂದಿಗೆ “ಮಲ್ಟಿಡಿಸಿಪ್ಲಿನರಿ” (ವೈವಿಧ್ಯಪೂರ್ಣ) ಅಧ್ಯಯನವನ್ನು ಪ್ರಚೋದಿಸಲು ಉದ್ದೇಶಿಸಿದೆ. ವಿಷಯಗಳ ಬಹು ಆಯ್ಕೆಗಳನ್ನು ಒದಗಿಸಲಾಗುವುದು.
.ಪ್ರತಿ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಗಳು ನಡೆಯುವ ಬದಲು, ಶಾಲಾ ವಿದ್ಯಾರ್ಥಿಗಳು 3, 5 ಮತ್ತು 8 ನೇ ತರಗತಿಗಳಲ್ಲಿ ಕೇವಲ ಮೂರು ಪರೀಕ್ಷೆಗಳಿಗೆ ಉತ್ತರಿಸುತ್ತಾರೆ.
.ಬೋರ್ಡ್ ಪರೀಕ್ಷೆಗಳನ್ನು 10 ಮತ್ತು 12 ನೇ ತರಗತಿಗಳಿಗೆ ಮುಂದುವರಿಸಲಾಗುವುದು ಆದರೆ ಅದನ್ನು ಮರು ವಿನ್ಯಾಸಗೊಳಿಸಲಾಗುವುದು. ಇದಕ್ಕಾಗಿ ಮಾನದಂಡಗಳನ್ನು ಪರಾಖ್ (PARAKH) ಎಂಬ ಮೌಲ್ಯಮಾಪನ ಸಂಸ್ಥೆ ಸ್ಥಾಪಿಸುತ್ತದೆ. ಅವುಗಳನ್ನು ಸುಲಭಗೊಳಿಸಲು, ಈ ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ, ವಿದ್ಯಾರ್ಥಿಗಳಿಗೆ ಎರಡು ಪ್ರಯತ್ನಗಳಿಗೆ ಅವಕಾಶ ನೀಡಲಾಗುತ್ತದೆ. ಪರೀಕ್ಷೆಯು ಎರಡು ಭಾಗಗಳನ್ನು ಹೊಂದಿರುತ್ತದೆ, ಅವುಗಳೆಂದರೆ ವಸ್ತುನಿಷ್ಠ ಮತ್ತು ವಿವರಣಾತ್ಮಕ ಉತ್ತರವಿರುವ ಪ್ರಶ್ನೆಗಳು.
.ಈ ನೀತಿಯು ವಿದ್ಯಾರ್ಥಿಗಳ ಪಠ್ಯಕ್ರಮದ ಹೊರೆ ಕಡಿಮೆ ಮಾಡುವುದು ಮತ್ತು ಅವರಿಗೆ ಹೆಚ್ಚು “ಅಂತರ-ಶಿಸ್ತು” ಮತ್ತು “ಬಹುಭಾಷಾ” ಆಗಲು ಅನುವು ಮಾಡಿಕೊಡುತ್ತದೆ. ನೀಡಲಾದ ಒಂದು ಉದಾಹರಣೆಯೆಂದರೆ “ಒಬ್ಬ ವಿದ್ಯಾರ್ಥಿಯು ಭೌತಶಾಸ್ತ್ರದೊಂದಿಗೆ ಫ್ಯಾಷನ್ ಅಧ್ಯಯನವನ್ನು ಮಾಡಲು ಬಯಸಿದರೆ, ಅಥವಾ ರಸಾಯನಶಾಸ್ತ್ರದೊಂದಿಗೆ ಬೇಕರಿ ಕಲಿಯಲು ಬಯಸಿದರೆ, ಅವರಿಗೆ ಹಾಗೆ ಮಾಡಲು ಅನುಮತಿಸಲಾಗುವುದು.” ವರದಿ ಕಾರ್ಡ್‌ಗಳು “ಸಮಗ್ರ” ವಾಗಿರುತ್ತವೆ, ಇದರ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
ವಿದ್ಯಾರ್ಥಿಯ ಕೌಶಲ್ಯಗಳು ಸಂಪಾದಿಸಿ
6 ನೇ ತರಗತಿಯಿಂದ ಕೋಡಿಂಗ್‍ಅನ್ನು(Coding) ಪರಿಚಯಿಸಲಾಗುವುದು ಮತ್ತು ಅನುಭವಿ ಕಲಿಕೆಯನ್ನು ಅಳವಡಿಸಿಕೊಳ್ಳಲಾಗುವುದು.
ಬೆಳಗಿನ ಉಪಾಹಾರ (ಬ್ರೇಕ್‌ಫಾಸ್ಟ್‌)ಗಳನ್ನು ಸೇರಿಸಲು ಮಧ್ಯಾಹ್ನದ ಊಟದ ಯೋಜನೆಯನ್ನು ವಿಸ್ತರಿಸಲಾಗುವುದು. ಸಲಹೆಗಾರರು ಮತ್ತು ಸಾಮಾಜಿಕ ಕಾರ್ಯಕರ್ತರ ನಿಯೋಜನೆಯ ಮೂಲಕ ವಿದ್ಯಾರ್ಥಿಗಳ ಆರೋಗ್ಯಕ್ಕೆ, ವಿಶೇಷವಾಗಿ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಒಟ್ಟಿನಲ್ಲಿ ಈ ಬಗ್ಗೆ ಎಲ್ಲಾ ಹಂತಗಳಲ್ಲೂ ಎಲ್ಲಾ ಭಾಗಿದಾರರನ್ನು ನಂಬಿಕೆಗೆ ತೆಗೆದುಕೊಂಡು ವ್ಯಾಪಕ ಚರ್ಚೆ ನಡೆಸುವುದು ಇಂದಿನ ಅವಶ್ಯಕತೆಯಾಗಿದೆ.

ಪರಿಚಯ

ಶ್ರಿ ತಿರುಮಲರಾವ್ ಎಂಎ, ಬಿಎಡ್ ಪದವೀಧರರು. ಅವರ ಆಸಕ್ತಿ ವೈವಿಧ್ಯಮಯ. ಸಮಾಜಸೇವೆ, ಸಾಹಿತ್ಯ, ರಾಜಕೀಯ, ಧಾರ್ಮಿಕ ಹೀಗೆ ಲಾಲಿತ್ಯ ತುಂಬಿದ ವ್ಯಕ್ತಿತ್ವ. ಇಂಗ್ಲೀಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಕನ್ನಡ ಮತ್ತು ಇಂಗ್ಲೀಷ್ ವಿಷಯದಲ್ಲಿ ಸವ್ಯಸಾಚಿ ಎನಿಸಿದ್ದಾರೆ.
ಮೊದಲಿಗೆ ಸಾಂಖ್ಯಿಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಅಂಕಿಅಂಶ ಸಂಗ್ರಹಣೆಗೆ ರಾಜ್ಯ ವ್ಯಾಪ್ತಿ ಸಂಚರಿಸಿದ್ದಾರೆ. ಹಲವು ರೀತಿಯ ಊರು ಮಂದಿಯ ಸಂಪರ್ಕ ಅವರ ನಿರರ್ಗಳ ಮಾತಿಗೆ ಮತ್ತು ಬರವಣಿಗೆಯ ಮೂಲದ್ರವ್ಯ. ಅದೇ ಅನುಭವ ಅವರಿಗೆ ಅನೇಕ ಜನರ ಪ್ರೀತಿ ಮತ್ತು ಅಭಿಮಾನವನ್ನು ಗಳಿಸಿಕೊಟ್ಟಿದೆ. ಮತ್ತೊಂದು ವಿಶೇಷವೆಂದರೆ ರಾವ್ ಅವರು ಶಿಕ್ಷಣ ಇಲಾಖೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆಯಾದರು. ಸಹಾಯಕ ಶಿಕ್ಷಣಾಧಿಕಾರಿ, ಜಿಲ್ಲಾ ಉಪ ನಿರ್ದೇಶಕರಾಗಿ ,ವಯಸ್ಕರ ಶಿಕ್ಷಣ ಅಧಿಕಾರಿಯಾಗಿ ಮತ್ತು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದಾರೆ.
ವೃತ್ತಿಜೀವನದ ಸಾಧನೆಗಳು ಅನೇಕ. ಸೇವಾದಳ, ಸ್ಕೌಟಿಂಗ್ ಮುಂತಾದ ಸ್ವಯಂಸೇವಾ ಸಂಸ್ಥೆಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ರೋಟರಿ ಯುವ ತಂಡದಲ್ಲಿ ಪರಸ್ಪರ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾ ಪ್ರವಾಸಗೈದು ವಿದೇಶದಲ್ಲೂ ಭಾರತೀಯ ಶಿಕ್ಷಣದ ಹಿರಿಮೆಯನ್ನು ಪಸರಿಸಿದ್ದಾರೆ.
ಸರಳ ಸಜ್ಜನಿಕೆಗೆ ರಾವ್ ಮತ್ತೊಂದು ಹೆಸರು. ಅವರದ್ದು ಬದುಕನ್ನ ಗಹನ ಹಾಗೂ ಜನೋಪಯೋಗಿಯಾಗಿ ಸಾಗಿಸಬೇಕೆಂಬ ಮನೋಧರ್ಮ. ಮೂಲ ಚನ್ನಗಿರಿಯ ಶಾನುಭೋಗ ವಂಶಸ್ಥರು. ಜನಾನುರಾಗಿ ಗಳಾಗಿ ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಇಸ್ಕಾನ್ ಅಕ್ಷಯಪಾತ್ರ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪರಿಚಯ ಲೇಖಕರು : ಶ್ರೀ ತಿರುಮಲರಾವ್.
ಪರಿಚಯ ಲೇಖಕರು : ಶ್ರೀ ತಿರುಮಲರಾವ್.

ರಾಷ್ಟ್ರಾದ್ಯಂತ ಎನ್ ಆರ್ ಸಿ ಬಗ್ಗೆ ತೀರ್ಮಾನ ಇಲ್ಲ

0

ಇಡೀ ದೇಶದಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದನ್ನು ಎನ್ಆರ್ ಸಿ (ರಾಷ್ಟ್ರೀಯ ನಾಗರಿಕ ನೊಂದಣಿ) ಯನ್ನು ದೇಶಾದ್ಯಂತ ಜಾರಿಗೊಳಿಸುವ ಕುರಿತು ಇದುವರೆಗೂ ಯಾವುದೇ ರೀತಿಯ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್ ಅವರು ” ಅಸ್ಸಾಂನಲ್ಲಿ ಮಾತ್ರ ಎನ್ಆರ್ಸಿ ಜಾರಿಗೊಳಿಸಲಾಗಿದೆ. ಆದರೆ ಇದನ್ನು ದೇಶಾದ್ಯಂತ ಜಾರಿಗೊಳಿಸುವ ಕುರಿತು ಅಂತಿಮವಾಗಿ ನಿರ್ಧಾರ ತೆಗೆದುಕೊಂಡಿಲ್ಲ. ಅದರ ಕುರಿತು ಚರ್ಚೆ, ಸಿದ್ಧತೆ ಸಹ ನಡೆಸಿಲ್ಲ” ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

“ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)-2019 ಕುರಿತು 2019ರ ಡಿಸೆಂಬರ್ 12 ರಂದು ಅಧಿಸೂಚನೆ ಹೊರಡಿಸಲಾಗಿದೆ. 2020ರ ಜನವರಿ 10ರಿಂದ ಜಾರಿಯಾಗಿದೆ. ಆದರೆ ಸಿಎಎ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿದ ಬಳಿಕ ಅರ್ಜಿ ಸಲ್ಲಿಸಬಹುದು” ಎಂದು ನಿತ್ಯಾನಂದ ರಾಯ್ ಮಾಹಿತಿ ತಿಳಿಸಿದ್ದಾರೆ.

ದೇಶದ ಪೌರತ್ವ ಪಡೆಯಲು ಕಳೆದ ಐದು ವರ್ಷದಲ್ಲಿ 10,645 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಈವರೆಗೂ 4,177 ಜನಕ್ಕೆ ಪೌರತ್ವ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಆರು ಲಕ್ಷಕ್ಕೂ ಅಧಿಕ ಭಾರತೀಯರು ಕಳೆದ ಐದು ವರ್ಷದಲ್ಲಿ ದೇಶದ ಪೌರತ್ವ ತೊರೆದಿದ್ದಾರೆ ಎಂದು ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದರ ಮಾಹಿತಿ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೇಂದ್ರದ ಸಲಹೆಗೆ ರಾಜ್ಯ ಬದ್ಧ. ಲಾಕ್ ಡೌನ್ ಪ್ರಸ್ತಾಪವಿಲ್ಲ.

0

ವಿದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಹೊಸ ವೈರಸ್ ಒಮಿಕ್ರಾನ್ ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ವಿದೇಶಗಳಿಂದ ಬಂದವರು ಕಡ್ಡಾಯವಾಗಿ ಆರ್ ಟಿಸಿ ಆರ್ ಟೆಸ್ಟ್ ಮಾಡಿಸಿಕೊಳ್ಳಬೇಕು. ನೆಗೆಟಿವ್ ವರದಿ ಬಂದರೂ ಏಳು ದಿನ ಮನೆಯಲ್ಲೇ ಕ್ವಾರೈಂಟನ್ ಆಗಬೇಕು ಎಂದು ಸೂಚಿಸಿದೆ.
ದೇಶದಲ್ಲಿ ಓಮಿಕ್ರಾನ್ ನ ಒಂದು ಪ್ರಕರಣವೂ ದಾಖಲಾಗಿಲ್ಲ. ಆದರೂ ಅಂತರಾಷ್ಟ್ರೀಯ ಪ್ರಯಾಣಿಕರ ತಪಾಸಣೆ, ಅವರಿಗೆ ಕೊರೊನಾ ದೃಢಪಟ್ಟರೆ ಜಿನೋಮ್ ಸೀಕ್ವೆನ್ಸಿಂಗ್ ಸೇರಿ ಹಲವು ರೀತಿಯಲ್ಲಿ ನಿಗಾ ಇಡಲು ಸೂಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರಾದ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಲಸಿಕೆ ಪಡೆಯದ ಅವರಿಗೆ ಸರ್ಕಾರದ ಸವಲತ್ತು ನೀಡಬಾರದು. ಲಸಿಕೆ ಹಾಕಿಸಿಕೊಳ್ಳದವರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಬೇಕು.
ಶಾಲಾ ಮಕ್ಕಳು, ಶಿಕ್ಷಕರಿಗೂ ಶೇ.5ರಷ್ಟು ಟೆಸ್ಟಿಂಗ್ ಮಾಡಿಸಬೇಕು.
ಲಾಕ್ ಡೌನ್ ಮಾಡದೇ ವೈರಸ್ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕು.
ಹೊಸ ವೈರಸ್ ಸೋಂಕಿತರ ಚಿಕಿತ್ಸೆಗೆ ಬೇಕಾದ ಆರೋಗ್ಯ ಸೌಲಭ್ಯ ಸಿದ್ಧಪಡಿಸಿಕೊಳ್ಳಬೇಕು ಎಂಬ ಸಲಹೆಗಳನ್ನು ಸರ್ಕಾರ ನೀಡಿದೆ.
ಮನ್ಸುಖ್ ಮಾಂಡವಿಯಾ ಅವರ ಹೇಳಿಕೆಯ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ
ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ನಾವು ಸಜ್ಜಾಗಿದ್ದೇವೆ. ಲಾಕ್ ಡೌನ್ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ತಾಲೂಕು ರಚನೆ, ಸೂಕ್ತ ಸಿದ್ಧತೆ ಕೊರತೆ – ಹೈಕೋರ್ಟ್ ಚಾಟಿ.

0

ರಾಜ್ಯದಲ್ಲಿ ಹೊಸದಾಗಿ ಘೋಷಿಸಿರುವ 50 ತಾಲೂಕು ಕೇಂದ್ರಗಳಿಗೆ ಇನ್ನೂ ಅಗತ್ಯ ಮೂಲ ಸೌಕರ್ಯ ಕಲ್ಪಿಸದ ರಾಜ್ಯ ಸರ್ಕಾರದ ವಿಳಂಬ ಧೋರಣೆ ವಿರುದ್ಧ ಹೈಕೋರ್ಟ್ ಸಿಡಿದೆದ್ದಿದೆ.
ಸರ್ಕಾರದ ಬಳಿ ಹಣವಿಲ್ಲವೆಂದರೆ ಹೊಸ ತಾಲೂಕುಗಳ ರಚನೆ ಆದೇಶವನ್ನು ರದ್ದು ಪಡಿಸಿ. ಹಣಕಾಸು ಲಭ್ಯವಾದ ನಂತರ ತಾಲೂಕು ಕಚೇರಿ ಹಾಗೂ ಮೂಲಸೌಕರ್ಯ ಒದಗಿಸುವ ಬಗ್ಗೆ ಯೋಚಿಸಿ ಎಂದು ಹೈಕೋರ್ಟ್ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
2018ರಲ್ಲಿ ಸರ್ಕಾರವು ಹೊಸ 50 ತಾಲೂಕುಗಳನ್ನು ಘೋಷಣೆ ಮಾಡಿತ್ತು. ಆದರೆ ಮೂರು ವರ್ಷಗಳ ಬಳಿಕವೂ ಮೂಲ ಸೌಕರ್ಯ ಕಲ್ಪಿಸಲಾಗಿಲ್ಲ ಎಂದು ಆರೋಪಿಸಿ ಬೀದರ್ ನ ಸಾಮಾಜಿಕ ಕಾರ್ಯಕರ್ತ ಗುರುನಾಥ್ ವಡ್ಡೆ ಪಿಐಎಲ್ ದಾಖಲಿಸಿದ್ದರು. ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ಈ ಅರ್ಜಿ ವಿಚಾರಣೆ ಬಂದಿತ್ತು.
ಸರ್ಕಾರದ ಪ್ರಮಾಣಪತ್ರ ಸಮಾಧಾನ ತಂದಿಲ್ಲ. ಹೊಸ ತಾಲೂಕುಗಳಿಗೆ ಕಛೇರಿ ಸ್ಥಾಪಿಸಲು ಗರಿಷ್ಟ ಕಾಲಮಿತಿ ಹಾಕಿಕೊಳ್ಳಲು 2020 ರೈ ಫೆಬ್ರುವರಿ 3ರಂದು ನಿರ್ದೇಶನ ನೀಡಲಾಗಿತ್ತು. ಆದರೆ ಸರ್ಕಾರ ಹಣ ಬಿಡುಗಡೆ ಮಾಡಲಾಗಿದೆ ಕ್ರಮಕೈಗೊಳ್ಳಲಾಗುತ್ತಿದೆ ಎಂದಷ್ಟೇ ಹೇಳಿದ್ದು, ಅಫಿಡೆವಿಟ್ ಅಸ್ಪಷ್ಟವಾಗಿದೆ. ಆದ್ದರಿಂದ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದ ಹೈಕೋರ್ಟ್ ವಿಚಾರಣೆಯನ್ನು 2022ರ ಜ.14ಕ್ಕೆ ಮುಂದೂಡಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮುಷ್ಕರ ಮುಂದುವರೆಸಿದ ನಿವಾಸಿ ವೈದ್ಯರು.

0

ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ನಿವಾಸಿ ವೈದ್ಯರು ರಾಜ್ಯ ನಿವಾಸಿ ವೈದ್ಯರ ಒಕ್ಕೂಟದ ನೇತೃತ್ವದಲ್ಲಿ ಕೈಗೊಂಡಿರುವ ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರಿದಿದೆ.
ಮೊದಲ ದಿನ ಆಸ್ಪತ್ರೆಗಳ ತುರ್ತು ಸೇವೆಗಳಿಗೆ ಅಡ್ಡಿಯಾಗದೆ ಒಪಿಡಿ ಮತ್ತು ಎಲೆಕ್ಟಿವ್ ಓಟಿಗಳಿಂದ ಹೊರಗೆ ಉಳಿದಿದ್ದ ಅವರು ಎರಡನೆಯ ದಿನ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.
2018 19 ನೇ ಶೈಕ್ಷಣಿಕ ವರ್ಷದ ಪ್ರಕಾರ ಶೈಕ್ಷಣಿಕ ಶುಲ್ಕವನ್ನು ಪುನಾರಚಿಸಬೇಕು. ನಿವಾಸಿ ವೈದ್ಯರಿಗೆ ಕೋವಿಡ್ ಭತ್ಯೆಯನ್ನು ನೀಡಬೇಕು. ನೀಟ್ ಮತ್ತು ಪಿಜಿ ಕೌನ್ಸಲ್ಲಿಂಗ್ ಅನ್ನು ತ್ವರಿತಗೊಳಿಸಬೇಕೆಂದು ಆಗ್ರಹಿಸಿದರು. ಕೊವಿಡ್ ಭತ್ಯೆ ಕೊಡುವುದಾಗಿ ಆರೋಗ್ಯ ಸಚಿವರು ನೀಡಿದ ಭರವಸೆ ಕೇವಲ ಮಾತಿನಲ್ಲಿ ಉಳಿದಿದೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಶೈಕ್ಷಣಿಕ ಶುಲ್ಕಗಳನ್ನು ಪುನಾರಚಿಸುವವರೆಗೆ ಮುಷ್ಕರವನ್ನು ಮುಂದುವರಿಸಲಾಗುವುದು ಎಂದರು.
ಪ್ರತಿಭಟನೆಯನ್ನು ಸ್ಥಾನಿಕ ವೈದ್ಯರ ಸಂಘದ ಅಧ್ಯಕ್ಷ ಡಾ. ನವೀನ್ ಪ್ರಸಾದ್, ಪ್ರಮುಖರಾದ ಡಾ. ನಮೃತಾ ಡಾ. ಅವಿನಾಶ್ ಹಾಗೂ ಡಾ.ರಾಹುಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಜಪಾನ್ ಮತ್ತು ಫ್ರಾನ್ಸ್ ಗಳಲ್ಲಿ ಓಮಿಕ್ರಾನ್ ಸುಳಿವು.

0

ಕೊರೋನಾ ವೈರಸ್ ಹೊಸ ರೂಪಾಂತರಿ ಎಲ್ಲೆಡೆ ಭಯವನ್ನು ಸೃಷ್ಟಿಸಿದೆ. ಇದರ ಜೊತೆಜೊತೆಗೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಈ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಕೆಲವು ದೇಶಗಳಲ್ಲಿ ಈ ತಳಿ ಸೋಂಕಿನ ಪ್ರಕರಣಗಳ ಸಂಖ್ಯೆಗಳು ಹೆಚ್ಚಾಗಿದೆ. ಈ ಪ್ರಕರಣಗಳನ್ನು ತಡೆಯಲು ಕೆಲ ದೇಶಗಳು ಮತ್ತಷ್ಟು ಕಠಿಣ ನಿಯಮಗಳನ್ನು ಒಳಗೊಂಡಿದೆ.

ಜಪಾನ್ ಮತ್ತು ಫ್ರಾನ್ಸ್ ನಲ್ಲಿ ಓಮಿಕ್ರಾನ್ ತಳಿ ಸೋಂಕಿನ ಮೊದಲ ಪ್ರಕರಣಗಳು ವರದಿಯಾಗಿವೆ. ಹಿಂದೂ ಮಹಾಸಾಗರ ದಲ್ಲಿರುವ ಫ್ರಾನ್ಸ್ ಆಡಳಿತಕ್ಕೆ ಒಳಪಟ್ಟಿರುವ ಫ್ರೆಂಚ್ ರಿಯೂನಿಯನ್ ದ್ವೀಪದಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೊಜಾಂಬಿಕ್ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಐದು ವರ್ಷದಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ಕ್ವಾರಂಟೈನ್ ಒಳಪಡಿಸಲಾಗಿದೆ ಎಂದು ರೋಗಗಳ ಸಂಶೋಧನಾ ಕೇಂದ್ರದ ಮೈಕ್ರೋಬಯೋಲಾಜಿಸ್ಟ್ ಪ್ಯಾಟ್ರಿಕ್ ಮ್ಯಾವಿನ್ ಗುಯಿ ತಿಳಿಸಿದ್ದಾರೆ.

ನಮೀಬಿಯಾಕ್ಕೆ ಬೇಟಿ ನೀಡಿದ 30 ವರ್ಷದ ವ್ಯಕ್ತಿಯನ್ನು ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಪಾನ್ ಸರ್ಕಾರ ತಿಳಿಸಿದೆ.

ಐಪಿಎಲ್ ಟೀಮ್ ಆಯ್ಕೆಯ ಕ್ರಿಕೆಟ್ ಪಟುಗಳು

0

ಇಂಡಿಯನ್ ಪ್ರೀಮಿಯರ್ ಲೀಗ್ IPL ಕ್ರಿಕೆಟ್ ಟೂರ್ನಿಯ 2022 ರ ಆವೃತ್ತಿಗೆ ಯಾವ ಆಟಗಾರರನ್ನು ಯಾವ ತಂಡಗಳಲ್ಲಿ ಉಳಿದು ಕೊಳ್ಳಬೇಕು ಎಂಬ ಪ್ರಕ್ರಿಯೆ ಮಂಗಳವಾರ ನಡೆಯಿತು.

ಇದರಲ್ಲಿ (CSK) ಮಹೇಂದ್ರ ಸಿಂಗ್ ಧೋನಿ ಮತ್ತು (RCB) ವಿರಾಟ್ ಕೊಹ್ಲಿ ತಮ್ಮದೇ ಆದ ತಂಡಗಳಲ್ಲಿ ಉಳಿದು ಕೊಂಡಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಸುನಿಲ್ ನಾರಾಯಣ್,ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್ ತಂಡಗಳಲ್ಲಿ ಉಳಿಸಿ ಕೊಳ್ಳಲಾಗಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ:- ನಾಯಕ ರೋಹಿತ್ ಶರ್ಮಾ, ವೇಗಿ ಜಸ್ಪ್ರೀತ್ ಬುಮ್ರಾ, ಆಲ್-ರೌಂಡರ್ ಕಿರಣ್ ಪೊಲಾರ್ಡ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ತಂಡದಲ್ಲಿ ಉಳಿದು ಕೊಂಡಿದ್ದಾರೆ.

ಡೆಲ್ಲಿ ತಂಡದಲ್ಲಿ:- ರಿಷಬ್ ಪಂತ್, ಪೃಥ್ವಿ ಶಾ, ಅಕ್ಷರ್ ಪಟೇಲ್, ಎಂಡ್ರಿ ಕ್ಲಾರ್ಕಿಯ ತಂಡದಲ್ಲಿ ಉಳಿದು ಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ:- ನಾಯಕ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಋತುರಾಜ ಗಾಯಕ್ವಾಡ್. ಮೋಹಿನ್ ಅಲಿ ಅವರನ್ನು ತಂಡದಲ್ಲಿ ಉಳಿದು ಕೊಂಡಿದ್ದಾರೆ.

ಪಂಜಾಬ್ ತಂಡದಲ್ಲೇ ಕನ್ನಡಿಗ ಮಯಾಂಕ್ ಅಗರ್ವಾಲ್ ಕಿಂಗ್ಸ್ ನಲ್ಲಿ ಉಳಿದಿದ್ದಾರೆ.

ಎರಡನೇ ಅಲೆ ನಂತರ ಆರ್ಥಿಕ ಬೆಳವಣಿಗೆ

0

ಭಾರತದ ಆರ್ಥಿಕ ಬೆಳವಣಿಗೆಗೆ ಕಳೆದ ಜುಲೈ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಶೇ.8.4ಕ್ಕೆ ವೃದ್ಧಿಸಿದೆ. ಸತತ ನಾಲ್ಕು ತ್ರೈಮಾಸಿಕದಿಂದ ಆರ್ಥಿಕತೆಯ ವಿಸ್ತರಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಡಿಪಿ ಮೈನಸ್ ಶೇ. 7.3 ರಷ್ಟು ಕುಸಿದಿತ್ತು.
ಕೋವಿಡ್ ಸೋಂಕಿನ ಪ್ರಕರಣಗಳು ಇಳಿದಿರುವುದು, ಖಾಸಗಿ ವಲಯದ ವೆಚ್ಚ ಏರಿಕೆಯಾಗಿರುವುದು, ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿ, ಲಸಿಕೆ ಅಭಿಯಾನ ವ್ಯಾಪಕವಾಗಿರುವುದು ಮತ್ತು ನಿರ್ಬಂಧಗಳನ್ನು ತೆರವುಗೊಳಿಸಿರುವುದು ಆರ್ಥಿಕತೆಯ ಚೇತರಿಕೆಗೆ ಕಾರಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದರೊಂದಿಗೆ ಕೋವಿಡ್ ಎರಡನೇ ಅಲೆಯ ನಂತರ ಕುಸಿದಿದ್ದ ಆರ್ಥಿಕತೆ ಈಗ ಬೆಳವಣಿಗೆಯಾಗುತ್ತಿರುವುದನ್ನು ಅಂಕಿಅಂಶಗಳು ಬಿಂಬಿಸಿವೆ.
ಈ ವರ್ಷ ಅಕ್ಟೋಬರ್ ನಲ್ಲಿ ಮೂಲಸೌಕರ್ಯ ವಲಯದ 8 ಕ್ಷೇತ್ರ ಶೇಕಡ 7.5 ಬೆಳವಣಿಗೆ ದಾಖಲಿಸಿದೆ.

ಗೋ ಕಳ್ಳಸಾಗಣೆ, ತೀರ್ಥಹಳ್ಳಿಯಲ್ಲಿ ಪ್ರತಿಭಟನೆ

0

ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಬಳಿ ಅಕ್ರಮವಾಗಿ ಗೋ ಸಾಗಾಣಿಕೆಗೆ ಯತ್ನಿಸುತ್ತಿದ್ದ, ಪಿಕಪ್ ವಾಹನವನ್ನು ತಡೆಯಲು ಮುಂದಾದ ಭಜರಂಗದಳದ ಇಬ್ಬರು ಕಾರ್ಯಕರ್ತರ ಮೇಲೆ ಗೋಕಳ್ಳರು ವಾಹನ ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದಾರೆ.

ಸ್ಥಳೀಯರ ನೆರವಿನಿಂದ ಇಬ್ಬರೂ ಗೋಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಘಟನೆಯಲ್ಲಿ ಗಂಭೀರವಾಗು ಗಾಯಗೊಂಡಿರುವ ಚರಣ್ ಹಾಗೂ ಕಿರಣ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾನ್ಯ ಗೃಹಸಚಿವ ಅರಗ ಜ್ಞಾನೆಂದ್ರ ಅವರು ಆಸ್ಪತ್ರೆಗೆ ತೆರಳಿ, ಗಾಯಗೊಂಡ ಸಹೋದರರ ಆರೋಗ್ಯ ವಿಚಾರಿಸಿದ್ದಾರೆ.

ರಾಜ್ಯದಲ್ಲಿ ಅಕ್ರಮ ಗೋ ಸಾಗಾಣಿಕೆ ವಿರುದ್ಧ ಕಠಿಣ ಕಾನೂನು ಜಾರಿಯಾಗಿದೆ. ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಲು ನಿರ್ದೇಶನ ನೀಡಲಾಗಿದೆ. ತೀರ್ಥಹಳ್ಳಿ ತಾಲೂಕು ಮೇಳಿಗೆ ಗ್ರಾಮದಿಂದ ಅಕ್ರಮವಾಗಿ ದನಗಳನ್ನು ಸಾಗಾಣಿಕೆ ಮಾಡುತ್ತಿದ್ದರು. ಇದನ್ನು ತಡೆಯಲು ಯತ್ನಿಸಿದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆದಿದೆ. ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಮಾನ್ಯ ಗೃಹ ಸಚಿವರು ತಿಳಿಸಿದರು.

ಗಂಭೀರ ಗಾಯಗೊಂಡ ಇಬ್ಬರು ಯುವಕರು ತೀರ್ಥಹಳ್ಳಿ ಸಮೀಪದ ಕಿತ್ತನಗದ್ದೆ ಗ್ರಾಮದ ಚರಣ್ ಹಾಗೂ ಕಿರಣ್. ಮೇಳಿಗೆ ಯಿಂದ ಗೋವುಗಳ ಸಾಗಾಣಿಕೆ ವಿಷಯ ತಿಳಿದು ಬುಲೆಟ್ ಬೈಕಿನಲ್ಲಿ ಬೆನ್ನಟ್ಟಿ ದ್ದಾರೆ. ಈ ವಿಷಯ ತಿಳಿದ ಜಾನುವಾರು ಕಳ್ಳರು ಬೆಜ್ಜವಳ್ಳಿ ಯ ಸಮೀಪ ಬೈಕ್ ಸವಾರರ ಮೇಲೆ ವಾಹನ ಹತ್ತಿಸಿ ಪರಾರಿಯಾಗಿದ್ದಾರೆ.

ಅಲ್ಲಿನ ಸ್ಥಳೀಯರು ಘಟನಾ ಸ್ಥಳದಿಂದ ಪರಾರಿಯಾಗುತ್ತಿದ್ದ ಶಿವಮೊಗ್ಗ ನಗರದ ನವೀನ್ ಎಂಬುವವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೋರ್ವ ತೀರ್ಥಹಳ್ಳಿಯ ಶ್ರೀಧರ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಅವರು ಪ್ರತಿಭಟನೆಯನ್ನು ನಡೆಸಿದರು.