ಕೊರೋನಾ ವೈರಸ್ ನ ಓಮಿಕ್ರಾನ್ ತಳಿ ಹರಡುವ ಭಯವಿದೆ. ಇದನ್ನು ಎದುರಿಸಲು ದೆಹಲಿ ಸರ್ಕಾರ ಸಜ್ಜಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಿಳಿಸಿದ್ದಾರೆ.
ಆಮ್ಲಜನಕ ಸೌಲಭ್ಯವಿರುವ 30000 ಹಾಸಿಗೆಗಳು ಹಾಗೂ ಆಮ್ಲಜನಕ ಪೂರೈಕೆ, ಸಂಗ್ರಹ ವ್ಯವಸ್ಥೆಯನ್ನು ಸಿದ್ಧಪಡಿಸಿ ಇರಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.
ಕೇಜ್ರಿವಾಲ್ ಅವರು ಸರ್ಕಾರದ ವಿವಿಧ ಇಲಾಖೆಗಳ ಜೊತೆಗೆ ಸಿದ್ಧತಾ ಪರಿಶೀಲನಾ ಸಭೆ ನಡೆಸಿದ್ದಾರೆ. 30000 ಹಾಸಿಗೆಗಳಲ್ಲಿ, ಹತ್ತು ಸಾವಿರ ಐಸಿಯು ಹಾಸಿಗೆಗಳು ಒಳಗೊಂಡಿದೆ. ಇನ್ನೂ 6800 ಹಾಸಿಗೆಗಳು ಫೆಬ್ರವರಿ ತಿಂಗಳ ಸಮಯದಲ್ಲಿ ಸಿದ್ಧವಾಗಲಿದೆ ಎಂದು ಕೂಡ ತಿಳಿಸಿದರು.
ಪ್ರತಿ ವಾರ್ಡ್ ನಲ್ಲೂ ನೂರು ಆಮ್ಲಜನಕ ಸೌಲಭ್ಯವಿರುವ ಹಾಸಿಗೆಗಳನ್ನು ಎರಡು ವಾರದಲ್ಲಿ ಸಿದ್ಧಪಡಿಸಲಾಗುತ್ತದೆ. 270 ವಾರ್ಡ್ ಗಳಿಂದ 25000 ಹಾಸಿಗೆಗಳು ಸಿದ್ಧವಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಿಳಿಸಿದ್ದಾರೆ.