Sunday, February 8, 2026
Sunday, February 8, 2026
Home Blog Page 1840

ಸಾಹಿತ್ಯ ಅಕಾಡೆಮಿ : ಉದ್ಯೋಗ ಮುಖಿ ಕನ್ನಡ

0

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ನವೆಂಬರ್ ತಿಂಗಳ ಪೂರ್ತಿ ಕನ್ನಡ ಸಾಹಿತ್ಯ ಅಕಾಡೆಮಿಯ ಯೂಟ್ಯೂಬ್ ಮತ್ತು ಫೇಸ್ಬುಕ್ ಚಾನೆಲ್ ನಲ್ಲಿ ಸರಣಿ ಉದ್ಯೋಗ ಮುಖಿ ಕನ್ನಡ : ಉಪನ್ಯಾಸಮಾಲೆ ಶೀರ್ಷಿಕೆಯಡಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅನ್ನ, ಅರಿವು, ಆನಂದ ಹಿನ್ನೆಲೆಯುಳ್ಳ ಈ ಕಾರ್ಯಕ್ರಮದ ಬಗ್ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ್ ಅವರು ಪ್ರತಿಯೊಬ್ಬ ಕನ್ನಡಿಗರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇನ್ಸುಲಿನ್ ಶತಮಾನದ ಸ್ಮರಣೆ.

0

ಸಕ್ಕರೆ ಕಾಯಿಲೆ, ಡಯಾಬಿಟಿಸ್,ಮಧುಮೇಹ, ಸಕ್ಕರೆ ರೋಗ ಅಂತೆಲ್ಲಾ ಕರೆಸಿಕೊಳ್ಳುವ ಸಕ್ಕರೆ ಕಾಯಿಲೆ ಇರೋರಿಗೆ ಚೆನ್ನಾಗಿ ಗೊತ್ತಿರೋದು ಅವರು ತೆಗೆದುಕೊಳ್ಳುವ ಇನ್ಸುಲಿನ್. ಈ ಪರಿಣಾಮಕಾರಿ ಇನ್ಸುಲಿನ್ ಆವಿಷ್ಕಾರಗೊಂಡು ಇದೇ 2021ನೇ ಇಸವಿ ಗೆ ನೂರು ವರ್ಷ ಆಗುತ್ತದೆ. ಅಂದರೆ ವರದಾನ ಆಗಿರೋ ಇನ್ಸುಲಿನ್ ಇಡೀ ವಿಶ್ವದ ತುಂಬಾ ಪ್ರಚಾರವಾಗಿ ಶತಮಾನೋತ್ಸವ ಆಚರಿಸುತ್ತಿದೆ. 1921 ರಲ್ಲಿ ಟೊರಾಂಟೊ ವಿಶ್ವವಿದ್ಯಾಲಯದ ಸರ್ ಫೆಡರಿಕ್ ಜೆ ಬಾಂಟಿಂಗ್, ಚಾರ್ಲ್ಸ್ ಎಚ್. ಬೆಸ್ಟ್ ಮತ್ತು ಜೆಜೆಆರ್ ಮ್ಯಾಕ್ಲಿಯೋಡ್ ಇನ್ಸುಲಿನ್ ಅನ್ನು ಕಂಡುಹಿಡಿದರು. ಅದೇ ವರ್ಷವೇ ಜೇಮ್ಸ್ ಬಿ. ಕಾಲಿಪ್ ಅವರಿಂದ ಶುದ್ಧೀಕರಿಸಲಾಯಿತು. ಶಿವಮೊಗ್ಗದಲ್ಲಿ ಸಕ್ಕರೆ ರೋಗಕ್ಕೆ ಸೂಕ್ತ ಉಪಚಾರ ಹಾಗೂ ಸಲಹೆ ನೀಡುವ ತಜ್ಞರಿದ್ದಾರೆ. ಅವರೇ ಶಿವಮೊಗ್ಗದ ಡಾಕ್ಟರ್ ಬಿಸಿ ಪೃಥ್ವಿ. ಮೆಟ್ರೋ ಯೂನಿಟ್ ಹೆಲ್ತ್ ಕೇರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು. ಸಲಹಾ ಪಿಜಿಷಿಯನ್. ಡಯಾಬಿಟಿಸ್ ಚಿಕಿತ್ಸಾ ತಜ್ಞರು. ಆತ್ಮೀಯರು ಅವರನ್ನ ಸಕ್ಕರೆ ರೋಗದ ಅಕ್ಕರೆಯ ಡಾಕ್ಟರ್ ಎಂದೇ ಕರೆಯುತ್ತಾರೆ. ಇನ್ಸುಲಿನ್ ಗೆ ನೂರು ತುಂಬಿದ ಆಚರಣೆ ಸಂಬಂಧ ಶಿವಮೊಗ್ಗದ ಮೆಟ್ರೋ ಯೂನಿಟ್ ಹೆಲ್ತ್ ಕೇರ್ ನಲ್ಲಿ ಅವರಿಂದ ಸರಳ ಸಮಾರಂಭ. ಸಾರ್ವಜನಿಕರಿಗೆ ಮಧುಮೇಹದ ಬಗ್ಗೆ ಸರಳ ಮಾಹಿತಿ ನೀಡಿದರು.

ಹಿಂಡನಗಲಿದ ಮರಿಯಾನೆಗೆ ಅರಣ್ಯ ಇಲಾಖೆಯ ಆತಿಥ್ಯ.

0

ಮಡಿಕೇರಿ ರಾಮನಗರ ಜಿಲ್ಲೆಯ ಕನಕಪುರದ ಕಾವೇರಿ ವನ್ಯಜೀವಿ ವಲಯದಲ್ಲಿ ಆನೆ ಹಿಂಡಿನಿಂದ ಬೇರ್ಪಟ್ಟ ಒಂದು ಕಾಡಾನೆಮರಿಯು ಸಂಚರಿಸುತ್ತಿತ್ತು. ಆನೆ ಮರಿಯನ್ನು ಈ ವ್ಯಾಪ್ತಿಯ ಅರಣ್ಯಧಿಕಾರಿ ವೈ .ಕಿರಣ್ ಕುಮಾರ್ ರಕ್ಷಿಸಿದ್ದಾರೆ.

ಮರಿಯ ಆರೋಗ್ಯ ಕ್ಷೇಮವನ್ನು ವನ್ಯಜೀವಿ ತಜ್ಞರಾದ ಡಾ. ನಾಗರಾಜ್ ಮತ್ತು ಡಾ. ರಮೇಶ್ ಅವರು ಪರೀಕ್ಷೆ ಮಾಡಿದ್ದಾರೆ. ಆನೆ ಮರಿಯೂ ಆರೋಗ್ಯವಾಗಿದೆ ಎಂಬುದು ದೃಢಪಟ್ಟಿದೆ. ಈ ಮರಿಗೆ ಪ್ರತಿ ಎರಡು ಗಂಟೆಗೆ ಒಮ್ಮೆ ಒಂದು ಲೀಟರ್ ಹಾಲು ನೀಡಲಾಗುತ್ತಿದೆ. ಆರು ತಿಂಗಳವರೆಗೂ ಇದೆ ಆಹಾರಕ್ರಮವನ್ನು ನೀಡಲಾಗುತ್ತದೆ. ಅನಂತರ ಮೃದು ಆಹಾರವನ್ನು ನೀಡಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಶಿಬಿರದಲ್ಲಿ ಒಂದು ತಿಂಗಳ ಹಿಂದೆ ಕರುವಿಗೆ ಜನ್ಮ ನೀಡಿದ ವರಲಕ್ಷ್ಮಿ ಎಂಬ ಆನೆ ಇದೆ. ಇನ್ನು 22 ಆನೆಗಳಿವೆ. ಅವುಗಳ ಬಳಿ ರಕ್ಷಿಸಿದ ಆನೆ ಮರಿಯನ್ನು ಆರೈಕೆಗಾಗಿ ವರಲಕ್ಷ್ಮಿಯ ಬಳಿ ಬಿಡುವ ಯೋಜನೆಯ ಬಗ್ಗೆ ಮಾತುಕತೆ ನಡೆಯುತ್ತಿದೆ. ಪ್ರಸ್ತುತ ಆನೆ ಮರಿಯನ್ನು ಮಂಜು ಹಾಗೂ ಕಾವಾಡಿ ಮಹದೇವ ಎಂಬುವರರ ಆರೈಕೆ ಯಲ್ಲಿದೆ.

ಏಷಿಯನ್ ಹಾಕಿ ಥಾಯ್ ವಿರುದ್ಧ : ಭಾರತಕ್ಕೆ ಜಯ

0

ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಏಷಿಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮಹಿಳಾ ಹಾಕಿ ತಂಡವು ಗುರ್ಜಿತ್ ಕೌರ್ (2, 14, 24, 25, 58ನೇ ನಿಮಿಷ) ಅವರ 5 ಗೋಲ್ ಗಳ ನೆರವಿನಿಂದ ಥಾಯ್ಲೆಂಡ್ ತಂಡವನ್ನು 13-0 ಗೋಲ್ ಗಳ ಭಾರಿ ಅಂತರದಿಂದ ಮಣಿಸಿದೆ.

ಪಂದ್ಯ ಆರಂಭಗೊಂಡ ಎರಡು ನಿಮಿಷಗಳಿಂದಲೇ ಗೋಲ್ ಬಾರಿಸು ತೊಡಗಿದ ಭಾರತ ತಂಡ ಮೊದಲ ಕ್ವಾರ್ಟರ್ ಮುಗಿಯುವಷ್ಟರಲ್ಲಿ 5-0 ಗೋಲ್ ಆಗಿತ್ತು. ಕಾಯಂ ನಾಯಕಿ ರಾಣಿ ರಾಮ್ ಪಾಲ್ ಉಪಸ್ಥಿತಿಯಲ್ಲಿ ಗೋಲ್ ಕೀಪರ್ ಸವಿತಾ ಪುನಿಯಾ ತಂಡವನ್ನು ಮುನ್ನೆಡೆಸಿದರು ಎರಡನೇ ಕ್ವಾಟರ್ ನಲ್ಲಿ 9-0 ಗೆ ಏರಿಕೆಯಾಯಿತು 3 ಮತ್ತು 4ನೇ ಹಾಗೂ ಕೊನೆಯ ಕ್ವಾರ್ಟರ್ ನಲ್ಲಿ ಮತ್ತೆ ಮೂರು ಗೋಲ್ ಬಾರಿಸಿದರು.

ಪ್ರೋ ಕಬಡ್ಡಿಲೀಗ್ : ಬೆಂಗಳೂರಿಗೆ ತಂಡಗಳ ಆಗಮನ

0

ಪ್ರೊ ಕಬ್ಬಡಿ ಲೀಗ್ ಎಂಟನೇ ಆವೃತ್ತಿಯು ಡಿಸೆಂಬರ್ 22ರಿಂದ ನಡೆಯಲಿದೆ. ಈ ಆವೃತ್ತಿಗೆ ಪಾಲ್ಗೊಳ್ಳುವ ಸಲುವಾಗಿ 12 ತಂಡಗಳ ಆಟಗಾರರು ಭಾನುವಾರ ಬೆಂಗಳೂರಿಗೆ ಆಗಮಿಸಿದರು.

ವೈಟ್ಫೀಲ್ಡ್ ನಲ್ಲಿರುವ ಶೆರ್ಟನ್ ಗ್ರ್ಯಾಂಡ್ ಬೆಂಗಳೂರು ಹೋಟೆಲ್ ನಲ್ಲಿ ಏಳು ದಿನಗಳ ಕಾಲ ಕಡ್ಡಾಯ ಕ್ವಾರಿಂ ಟೆನ್ ಮುಗಿಸಿದ ನಂತರ ಆಟಗಾರರು ಹೋಟೆಲ್ ಆವರಣದಲ್ಲಿ ನಿರ್ಮಿಸಲಾಗಿರುವ ಬಯೋ ಬಬಲ್ (ಜೈವಿಕ ಸುರಕ್ಷತಾ ವಲಯ) ಪ್ರವೇಶಿಸಿದರು. ಕೋವಿಡ್ -19 ನಿಯಮಾನುಸಾರ ಕ್ವಾರಂಟೈನ್ ಸಂದರ್ಭದಲ್ಲಿ ಆಟಗಾರರು ತರಬೇತಿ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಆರ್ ಟಿ ಪಿ ಸಿ ಆರ್ ಪರೀಕ್ಷೆಗೆ ಎಲ್ಲರೂ ಒಳಗಾಗಬೇಕಿದೆ.

ಬ್ಯಾಡ್ಮಿಂಟನ್ : ಸಿಂಧುಗೆ ರಜತ

0

ಇಂಡೋನೇಷಿಯ ಮಹಿಳೆಯರ ಸಿಂಗಲ್ಸ್ ಶಟ್ಲರ್ ಪಂದ್ಯದ ಬಿಡಬ್ಲ್ಯೂಎಸ್ ವರ್ಲ್ಡ್ ಟೂರ್ ಫೈನಲ್ಸ್ ನಲ್ಲಿ ಪಿ.ವಿ.ಸಿಂಧು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಹಾಲಿ ವಿಶ್ವಚಾಂಪಿಯನ್ ಹಾಗೂ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಸಿಂಧು ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ವಿಶ್ವದ ಆರನೇ ಶ್ರೇಯಾಂಕದ ದಕ್ಷಿಣ ಕೊರಿಯಾ ಆಟಗಾರ್ತಿ ಆನ್ ಸೀಯಂಗ್ ಎದುರು 16-21, 12-21 ನೇರ ಗೇಮ್ಗಳ ಸೋಲು ಕಂಡರು. ಇದರೊಂದಿಗೆ ಸೀಯಂಗ್ ವಿರುದ್ಧದ ವಿಶ್ವದ ಏಳನೇ ಶ್ರೇಣಿಯ ಸಿಂಧು ಸತತ ಮೂರು ಬಾರಿ ಸೋಲನ್ನು ಕಂಡಂತಾಗಿದೆ.

ಸಿಂಧು ಅವರ ಮುಂದಿನ ಗುರಿ ವಿಶ್ವಚಾಂಪಿಯನ್ ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಆಗಿರುವ ಅವರು ಈ ಬಾರಿ ಚಾಂಪಿಯನ್ ಪಟ್ಟ ರಕ್ಷಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಸ್ಪೇನ್ ನಲ್ಲಿ ಡಿಸೆಂಬರ್ 12ರಿಂದ ವಿಶ್ವ ಚಾಂಪಿಯನ್ಶಿಪ್ ನಡೆಯಲಿದೆ.

ಭಾರತೀಯರಲ್ಲಿ ಆರ್ಥಿಕ ಸಂಕಷ್ಟತೆ

0

ಗುಜರಾತ್ ನ ಅಹಮದಾಬಾದ್ ವಿಶ್ವವಿದ್ಯಾಲಯದ 11ನೇ ಭಾಷಿಕ ಪದವಿ ಪ್ರಧಾನ ಸಮಾರಂಭ ನಡೆಯಿತು. ಈ ಸಮಾರಂಭಕ್ಕೆ ಆನ್ಲೈನ್ ಸಂವಾದದ ಮೂಲಕ ಅಭಿಜಿತ್ ಬ್ಯಾನರ್ಜಿಯವರು ಅಮೆರಿಕ ದಿಂದಲೇ ಭಾಗವಹಿಸಿದರು.

ಭಾರತೀಯರು ತೀವ್ರ ಸಂಕಷ್ಟದಲ್ಲಿದ್ದಾರೆ. ಹಾಗೂ ಆರ್ಥಿಕತೆ ಈಗಲೂ 2019ರ ಮಟ್ಟಕ್ಕಿಂತ ಕೆಳಗಿದೆ. ಸಣ್ಣ ವ್ಯಾಪಾರಿಗಳು ಮತ್ತಷ್ಟು ಕುಸಿದಿದ್ದಾರೆ ಎಂದು ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ತಿಳಿಸಿದ್ದಾರೆ.

ಇತ್ತೀಚಿಗಷ್ಟೇ ಪಶ್ಚಿಮ ಬಂಗಾಳಕ್ಕೆ ಅಭಿಜಿತ್ ಅವರು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಗಮನಿಸಿದ ಅಂಶಗಳನ್ನು ಅವರು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದ್ದಾರೆ.

ಸಮಾಜಕ್ಕೆ ವಿದ್ಯಾರ್ಥಿಗಳ ಕೊಡುಗೆ ಬೇಕಿದೆ. ಭಾರತದಲ್ಲೀಗ ತೀವ್ರ ಸಂಕಷ್ಟದ ಸ್ಥಿತಿಯಿದೆ. ನಾನು ಪಶ್ಚಿಮಬಂಗಾಳದ ಗ್ರಾಮೀಣ ಪ್ರದೇಶದಲ್ಲಿ ಕೆಲವು ಸಮಯ ಕಳೆದಿದ್ದೇನೆ. ಅಭಿವೃದ್ಧಿಯ ಕನಸು ಕಟ್ಟಿಕೊಂಡವರು ಸಂಕಷ್ಟದಲ್ಲಿದ್ದಾರೆ. ಸಣ್ಣ ವ್ಯಾಪಾರಿಗಳು ಮತ್ತಷ್ಟು ನೊಂದಿದ್ದಾರೆ. ನಾವೀಗ ತೀವ್ರ ಸಂಕಷ್ಟದಲ್ಲಿದ್ದೇವೆ ಎಂದೆನಿಸುತ್ತಿದೆ. 2019ರಲ್ಲಿ ಇದ್ದ ಆರ್ಥಿಕ ಪರಿಸ್ಥಿತಿಗೆ ಹೋಲಿಸಿದರೆ ಅದಕ್ಕಿಂತ ಮಟ್ಟದಲ್ಲಿದ್ದೇವೆ. ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದೇವೆ ಎಂಬುದು ನಮಗೆ ತಿಳಿದಿಲ್ಲ. ಆದರೆ ತೀವ್ರ ಕುಸಿತ ಕಂಡಿದ್ದೇವೆ. ಇದಕ್ಕೆ ನಾನು ಯಾರನ್ನೂ ದೂಷಿಸುವುದಿಲ್ಲ. ನಾನು ವಿಚಾರವನ್ನು ಹೇಳುತ್ತಿದ್ದೇನೆ ಅಷ್ಟೇ ಇಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.

ಬಡ್ಡಿದರ ಬಲಾವಣೆ ಇಲ್ಲ

0

ಕೋವಿಡ್ ವೈರಸ್ ನ ಹೊಸ ರೂಪಾಂತರ ತಳಿ ಓಮಿಕ್ರಾನ್ ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಆರ್ ಬಿ ಐ ನ ಹಣಕಾಸು ನೀತಿ ಸಮಿತಿಯ ಸಭೆಯು ಇಂದಿನಿಂದ ಆರಂಭಗೊಂಡಿದೆ.

ಆರ್ ಬಿ ಐ ಗವರ್ನರ್ ನೇತೃತ್ವದ ಎಂಪಿಸಿ ಸಭೆ ಮೂರು ದಿನ ನಡೆಯಲಿದೆ. ಸಭೆಯ ನಿರ್ಧಾರಗಳು ಬುಧವಾರ ಪ್ರಕಟವಾಗಲಿವೆ. ಅಕ್ಟೋಬರ್ ನಲ್ಲಿ ನಡೆಸಿದ್ದ ಸಭೆಯಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ ಈ ಬಾರಿ ಆರ್ ಬಿಐ ಬಡ್ಡಿ ದರದಲ್ಲಿ ಯಥಾಸ್ಥಿತಿ ಒಂದು ವೇಳೆ ಕಾಯ್ದುಕೊಂಡರೆ ಒಟ್ಟು 9 ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ ಆಗಲಿದೆ. 2020ರ ಮೇ ತಿಂಗಳಿನಲ್ಲಿ ಆರ್ ಬಿಐ ಬಡ್ಡಿ ದರಗಳಲ್ಲಿ ಬದಲಾವಣೆ ಮಾಡಲಾಗಿತ್ತು.

ಈಗ ಕೊರೋನಾದ ಹೊಸ ತಳಿ ಯಿಂದಾಗಿ ಅನಿಶ್ಚಿತ ವಾತಾವರಣ ನಿರ್ಮಾಣಗೊಂಡಿದೆ. ಈ ಕುರಿತು ಸ್ಪಷ್ಟತೆ ಸಿಗುವವರೆಗೂ ಬಡ್ಡಿದರಗಳ ನಿರ್ಧಾರದಲ್ಲಿ ಆರ್ ಬಿಐ ಕಾಡುವ ಸಾಧ್ಯತೆ ಇದೆ ಎಂದು ಕೋಟಕ್ ನ ಆರ್ಥಿಕ ಸಂಶೋಧನೆ ಮೂಲಗಳು ತಿಳಿಸಿದೆ.

ರಿವರ್ಸ್ ರೆಪೋ ದರ ಹೆಚ್ಚಳದ ಮೂಲಕ ನಗದು ಲಭ್ಯತೆಯನ್ನು ಸಹಜ ಸ್ಥಿತಿಗೆ ತರುವ ನಿರ್ಧಾರವನ್ನು ಮುಂದೂಡಬೇಕು ಎಂದು ಎಸ್ ಬಿಐನ ಆರ್ಥಿಕ ತಜ್ಞರು ಆರ್ಬಿಐ ಗೆ ಮನವಿ ಮಾಡಿಕೊಂಡಿದ್ದಾರೆ.

ಆರ್ ಬಿ ಐ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ರಿವರ್ಸ್ ರೆಪೋ ದರದಲ್ಲಿ ಅಲ್ಪ ಏರಿಕೆ ಮಾಡುವ ನಿರೀಕ್ಷೆಯಿದೆ. ಆರ್ಥಿಕ ಚೇತರಿಕೆಗೆ ಓಮಿಕ್ರಾನ್ ವೈರಸ್ ಅಡ್ಡಿಯಾಗಬಹುದು, ಎನ್ನುವ ಕಾರಣಕ್ಕಾಗಿ ಸದ್ಯದ ಪರಿಸ್ಥಿತಿಗೆ ನಿರ್ಧಾರ ತಡೆಹಿಡಿಯುವ ಸಾಧ್ಯತೆಯೂ ಇದೆ. ಆದ್ದರಿಂದ ಗೃಹ ಸಾಲ ಪಡೆಯುವವರು ಇನ್ನೂ ಕೆಲವು ಸಮಯದವರೆಗೆ ಕಡಿಮೆ ಬಡ್ಡಿದರದ ಪ್ರಯೋಜನ ಪಡೆದುಕೊಳ್ಳುವಂತೆ ಆಗಲಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನಾರಾಕ್ ನ ಅಧ್ಯಕ್ಷ ಅನುಜ್ ಪುರಿ ತಿಳಿಸಿದ್ದಾರೆ.

ಯೋಧರಿಗೆ ಕಸಾಪ ಗೌರವ ಸದಸ್ಯತ್ವ.

0

ಮೈಸೂರಿನಲ್ಲಿ ಎಸ್. ಉಮೇಶ್ ಅವರ ‘ಸಿಯಾಚಿನ್’ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು ಪಾಲ್ಗೊಂಡಿದ್ದರು.

ಹಾಲಿ ಹಾಗೂ ಮಾಜಿ ಸೈನಿಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವವನ್ನು ಶುಲ್ಕ ಇಲ್ಲದೆ ನೀಡಲಾಗುವುದು ಎಂದು ಮಹೇಶ್ ಜೋಷಿ ಅವರು ತಿಳಿಸಿದರು.

ಪರಿಷತ್ತಿನ ಸದಸ್ಯತ್ವ ಸಂಖ್ಯೆಯನ್ನು ಒಂದು ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಈ ಕೆಲಸಕ್ಕೆ ಆದ್ಯತೆ ನೀಡಲಾಗುತ್ತದೆ. ಇದರ ಜೊತೆಗೆ ಇತರ ಕನ್ನಡ ಕಾಯಕದಲ್ಲಿ ತೊಡಗಿಸಿಕೊಳ್ಳಲಾಗುವುದು. ಈಗಾಗಲೇ ಹಲವು ಕೆಲಸಗಳನ್ನು ಆರಂಭಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ ಅವರು ತಿಳಿಸಿದ್ದಾರೆ.

ಡ್ರೋನ್ ತಂತ್ರಕ್ಕೆ, ಪ್ರತಿರೋಧ ಅನ್ವೇಷಣೆ

0

ಜೈಸಲ್ಮೇರ್ ನ ಶಹೀದ್ ಪೂನಮ್ ಸಿಂಗ್ ಕ್ರೀಡಾಂಗಣದಲ್ಲಿ ಗಡಿ ಭದ್ರತಾ ಪಡೆಯ 57 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಉಪಸ್ಥಿತರಿದ್ದರು.

‘ಗಡಿಗಳ ಭದ್ರತೆಗೆ ಡ್ರೋನ್ ಗಳ ಮೂಲಕ ಹೊಸದಾಗಿ ಅಪಾಯ ಎದುರಾಗುತ್ತಿದೆ. ಆದ್ದರಿಂದ ಗಡಿ ಭದ್ರತೆ ಹಾಗೂ ಯೋಧರ ರಕ್ಷಣೆಗಾಗಿ ಜಾಗತಿಕ ಮಟ್ಟದ ಅತ್ಯುತ್ತಮ ತಂತ್ರಜ್ಞಾನ ಒದಗಿಸಲು ಸರ್ಕಾರ ಬದ್ಧವಾಗಿದೆ’ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಡ್ರೋನ್ ಪ್ರತಿರೋಧ ವ್ಯವಸ್ಥೆಯನ್ನು ಅಭಿವೃದ್ಧಿಸಲು ಬಿಎಸ್ ಎಫ್, ಎನ್ಎಸ್ ಜಿ ಮತ್ತು ಡಿ ಆರ್ ಡಿಒ ಜೊತೆಯಾಗಿ ಕಾರ್ಯ ಪ್ರವೃತ್ತಿಯಾಗಿವೆ. ಈ ತಂತ್ರಜ್ಞಾನ ಶೀಘ್ರವೇ ಭದ್ರತಾಪಡೆಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕೂಡ ತಿಳಿಸಿದರು.

ಭಾರತದ ಗಡಿ ಹಾಗೂ ಯೋಧರನ್ನು ಯಾರು ಲಘುವಾಗಿ ಪರಿಗಣಿಸಬಾರದು ಎಂಬುದನ್ನು ಪುಲ್ವಾಮಾ, ಉರಿ ಘಟನೆಗಳ ನಂತರ ದೇಶ ನೀಡಿದ ಪ್ರತ್ಯುತ್ತರ ದ ಮೂಲಕ ಮಾನ್ಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೋರಿಸಿಕೊಟ್ಟಿದೆ ಎಂದು ಮಾನ್ಯ ಕೇಂದ್ರ ಗೃಹ ಸಚಿವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಗಡಿ ಬಳಿ ಉತ್ತಮ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
2008ರಿಂದ 2014ರ ಅವಧಿಯಲ್ಲಿ ಗಡಿಗಳ ರಸ್ತೆ ನಿರ್ಮಾಣಕ್ಕಾಗಿ 23,700 ಕೋಟಿ ಹಂಚಿಕೆ ಮಾಡಲಾಗಿತ್ತು. ಮೋದಿ ನೇತೃತ್ವದ ಸರ್ಕಾರ 2014ರಿಂದ 2020ರ ಅವಧಿಯಲ್ಲಿ ಅನುದಾನವನ್ನು 44,600ಕೋಟಿಗೆ ಹೆಚ್ಚಿಸಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿವರಿಸಿದರು.