Sunday, February 8, 2026
Sunday, February 8, 2026
Home Blog Page 1841

ಲಸಿಕಾಕರಣ , ಮುನ್ನಡೆಯಲ್ಲಿ ಕರ್ನಾಟಕ

0

ಅರ್ಹ ವಯಸ್ಕರಿಗೆ ಕೊರೋನಾ ಎರಡು ಲಸಿಕೆ ನೀಡಿರುವುದರಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗಿಂತ ಮುಂದಿದೆ.

ಕರ್ನಾಟಕದಲ್ಲಿ 4. 72 ಕೋಟಿ ವಯಸ್ಕರಲ್ಲಿ ಶೇ. 66ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆಗಳನ್ನು ನೀಡಲಾಗಿದೆ.

ಕೇರಳದಲ್ಲಿ ಶೇ.63 ರಷ್ಟು ಮತ್ತು ತೆಲಂಗಾಣದಲ್ಲಿ ಶೇ. 60ರಷ್ಟು ವಯಸ್ಕರಿಗೆ ಲಸಿಕೆಯನ್ನು ನೀಡಲಾಗಿದೆ. ಆದರೆ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಶೇ. 50ಕ್ಕೂ ಕಡಿಮೆ ವಯಸ್ಕರಿಗೆ ಲಸಿಕೆ ನೀಡಲಾಗಿದೆ.

25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.50ಕ್ಕೂ ಹೆಚ್ಚು ವಯಸ್ಕರಿಗೆ ಇಲ್ಲ ಸಿಕ್ಕಿ ಏನು ನೀಡಲಾಗಿದೆ. ಹನ್ನೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ. 75ಕ್ಕೂ ಅಧಿಕ ವಯಸ್ಕರಿಗೆ ಎರಡೂ ಲಸಿಕೆ ನೀಡುವಲ್ಲಿ ತನ್ನ ಗುರಿಯನ್ನು ಸಾಧಿಸಿದೆ.

ದೇಶದಲ್ಲಿ ಕೋವಿಡ್ ರೂಪಾಂತರ ತಳಿ ಓಮಿಕ್ರಾನ್ ನ ಆತಂಕ ಹೆಚ್ಚುತ್ತಿರುವಂತೆ ಲಸಿಕೆ ಪ್ರಗತಿಯ ಅಂಕಿಅಂಶಗಳು ಪ್ರಕಟಗೊಂಡಿದೆ.

‘ಈಗ ಲಭ್ಯವಿರುವ ಲಸಿಕೆ ರೋಗ ತಡೆಯುತ್ತಿಲ್ಲ ಎಂದು ಗಮನದಲ್ಲಿಟ್ಟುಕೊಳ್ಳಬೇಕು. ಲಸಿಕೆ ಪಡೆದಿದ್ದರೂ ಮಾಸ್ಕ್ ಧರಿಸುವುದು. ಅಂತರ ಕಾಯ್ದುಕೊಳ್ಳುವುದು ಹೀಗೆ ಅನೇಕ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಗುಂಪು ಸೇರುವಿಕೆ ಯನ್ನು ಆದಷ್ಟು ತಪ್ಪಿಸಬೇಕು’ ಎಂದು ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ನ ಹಿರಿಯ ಸಂಶೋಧಕ ಒಮೆನ್ ಜಾನ್ ತಿಳಿಸಿದ್ದಾರೆ.

ಪರಾಗ್ ಸಾಧನೆಗೆ ಮೆಚ್ಚುಗೆ ಇದೆ : ನಾರಾಯಣಮೂರ್ತಿ

0

ಟ್ವಿಟರ್ ನ ನೂತನ ಸಿಇಒ ಪರಾಗ್ ಅಗರ್ವಾಲ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ನಂತರ ಕಾರ್ಯಕಾರಿ ಮಂಡಳಿಯ ಪುನರ್ ರಚನೆ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪನಿಯ ವಿನ್ಯಾಸ ವಿಭಾಗದ ಮುಖ್ಯಸ್ಥ ಡಾಂಟ್ಲ್ ಡೇವಿಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮೈಕೆಲ್ ಮೋಂಟನೊ ರಾಜೀನಾಮೆ ನೀಡಿದ್ದಾರೆ. ಕಂಪನಿಯ ಉತ್ತರದಾಯಿತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ನಿರ್ವಹಣೆಯ ಅಧ್ಯಕ್ಷತೆ ಸುಧಾರಿಸಲು ಪುನರ್ ರಚನೆಯಾಗುತ್ತದೆ ಎಂದು ಕಂಪನಿ ಹೇಳಿದೆ.

ಪರಾಗ್ ಅಗರ್ವಾಲ್ ಅವರು ಟ್ಟೀಟರ್ ನ ನೂತನ ಸಿಇಒ ಆದ ಬಳಿಕ “ಪ್ರತಿಭಾವಂತ ಭಾರತೀಯರು ವಿದೇಶಕ್ಕೆ ತೆರಳಿ ಅಲ್ಲಿನ ಕಂಪನಿಗಳ ಉನ್ನತ ಹುದ್ದೆಗಳನ್ನು ಹೊಂದುವುದು ತಪ್ಪಲ್ಲ” ಎಂದು ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.

ಅಲ್ಲದೇ ಪರಾಗ್ ಅವರು ಭಾರತದ ಬ್ರ್ಯಾಂಡ್ ಗಳ ರಾಯಭಾರಿಗಳಂತೆ, ವಿದೇಶಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಭಾರತೀಯರ ಬಗ್ಗೆ ಕಳವಳಕ್ಕಿಂತ, ಅವರನ್ನು ಭಾರತಕ್ಕೆ ಮರಳುವಂತೆ ಒತ್ತಾಯಿಸುವುದಕ್ಕಿಂತ, ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಬೆಂಬಲಿಸುವುದು ಸೂಕ್ತ ಎಂದು ನಾರಾಯಣಮೂರ್ತಿ ಹೇಳಿದ್ದಾರೆ.

ಉಗ್ರರೆಂದು ಭಾವಿಸಿ ನಾಗರಿಕರತ್ತ ಗುಂಡು!

0

ಅರ್ಹ ವಯಸ್ಕರಿಗೆ ಕೊರೋನಾ ಎರಡು ಲಸಿಕೆ ನೀಡಿರುವುದರಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗಿಂತ ಮುಂದಿದೆ.

ಕರ್ನಾಟಕದಲ್ಲಿ 4. 72 ಕೋಟಿ ವಯಸ್ಕರಲ್ಲಿ ಶೇ. 66ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆಗಳನ್ನು ನೀಡಲಾಗಿದೆ.

ಕೇರಳದಲ್ಲಿ ಶೇ.63 ರಷ್ಟು ಮತ್ತು ತೆಲಂಗಾಣದಲ್ಲಿ ಶೇ. 60ರಷ್ಟು ವಯಸ್ಕರಿಗೆ ಲಸಿಕೆಯನ್ನು ನೀಡಲಾಗಿದೆ. ಆದರೆ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಶೇ. 50ಕ್ಕೂ ಕಡಿಮೆ ವಯಸ್ಕರಿಗೆ ಲಸಿಕೆ ನೀಡಲಾಗಿದೆ.

25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.50ಕ್ಕೂ ಹೆಚ್ಚು ವಯಸ್ಕರಿಗೆ ಇಲ್ಲ ಸಿಕ್ಕಿ ಏನು ನೀಡಲಾಗಿದೆ. ಹನ್ನೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ. 75ಕ್ಕೂ ಅಧಿಕ ವಯಸ್ಕರಿಗೆ ಎರಡೂ ಲಸಿಕೆ ನೀಡುವಲ್ಲಿ ತನ್ನ ಗುರಿಯನ್ನು ಸಾಧಿಸಿದೆ.

ದೇಶದಲ್ಲಿ ಕೋವಿಡ್ ರೂಪಾಂತರ ತಳಿ ಓಮಿಕ್ರಾನ್ ನ ಆತಂಕ ಹೆಚ್ಚುತ್ತಿರುವಂತೆ ಲಸಿಕೆ ಪ್ರಗತಿಯ ಅಂಕಿಅಂಶಗಳು ಪ್ರಕಟಗೊಂಡಿದೆ.

‘ಈಗ ಲಭ್ಯವಿರುವ ಲಸಿಕೆ ರೋಗ ತಡೆಯುತ್ತಿಲ್ಲ ಎಂದು ಗಮನದಲ್ಲಿಟ್ಟುಕೊಳ್ಳಬೇಕು. ಲಸಿಕೆ ಪಡೆದಿದ್ದರೂ ಮಾಸ್ಕ್ ಧರಿಸುವುದು. ಅಂತರ ಕಾಯ್ದುಕೊಳ್ಳುವುದು ಹೀಗೆ ಅನೇಕ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಗುಂಪು ಸೇರುವಿಕೆ ಯನ್ನು ಆದಷ್ಟು ತಪ್ಪಿಸಬೇಕು’ ಎಂದು ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ನ ಹಿರಿಯ ಸಂಶೋಧಕ ಒಮೆನ್ ಜಾನ್ ತಿಳಿಸಿದ್ದಾರೆ.

ಹೊಸ ಶಿಕ್ಷಣ ನೀತಿ : ಆರಂಭಿಕ ತೊಡಕು

0

ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಅಲ್ಲಲ್ಲಿ ವಿರೋದವಿದ್ದರೂ ಸಹ ಸರ್ಕಾರ ಅದನ್ನ ಜಾರಿಗೊಳಿಸಿದೆ. ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಎನ್ಇಪಿ ಅನ್ವಯ ವಿಷಯಗಳ ಆಯ್ಕೆಗೆ ಮುಕ್ತ ಅವಕಾಶ ಕಲ್ಪಿಸಿದೆ, ನಿರ್ದಿಷ್ಟ ವಿಷಯಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿರುವುದು ಕೇಳಿಬರುತ್ತಿದೆ.

ಕೋರ್ಸ್ ಗೆ ಸಂಬಂಧಿಸಿದ ಪೂರಕವಾದ ಓಪನ್ ಎಲೆಕ್ಟಿವ್ ಗಳ ಆಯ್ಕೆಗೂ ಶಿಕ್ಷಣ ಸಂಸ್ಥೆಗಳು ತಕರಾರು ಮಾಡುತ್ತಿವೆ ಎಂಬ ಆರೋಪ ವಿದ್ಯಾರ್ಥಿಗಳು ಮತ್ತು ಪೋಷಕರ ಕಡೆಯಿಂದ ಕೇಳಿಬರುತ್ತಿದೆ.

ಎನ್ ಇ ಪಿಗೆ ವಿರುದ್ಧವಾಗಿ ನಿರ್ದಿಷ್ಟ ವಿಷಯಗಳನ್ನು ತೆಗೆದುಕೊಳ್ಳುವಂತೆ ಕಾಲೇಜುಗಳು ಒತ್ತಡ ಹಾಕುತ್ತಿವೆ. ಲಭ್ಯವಿರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ವಿಷಯಗಳ ಆಯ್ಕೆ ಪ್ರಕ್ರಿಯೆಯು ಸಮಸ್ಯೆ ಕಾರಣ ಕಾಲೇಜುಗಳಲ್ಲಿ ಪಾಠಗಳು ಆರಂಭ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಯಶಸ್ವಿನಿಗೆ ಪುನಃಶ್ವೇತನ

0

ಬಡ ಮತ್ತು ಮಧ್ಯಮ ವರ್ಗದವರ ಆರೋಗ್ಯ ಸಮಸ್ಯೆಗೆ ಸಂಜೀವಿನಿಯಾಗಿದ್ದ ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಗೆ ಈಗ ಮರುಜೀವ ತುಂಬಲು ಸರ್ಕಾರ ಮುಂದಾಗಿದೆ.

ಸರ್ಕಾರದ ಸೂಚನೆ ಮೇರೆಗೆ ಯಶಸ್ವಿನಿ ಯೋಜನೆ ಜಾರಿಗಾಗಿ ಸಲ್ಲಿಸಿರುವ ಸಹಕಾರ ಇಲಾಖೆಯು ಬರುವಂತಹ ಬಜೆಟ್ ನಲ್ಲಿ 300 ಕೋಟಿ ರು ಅನುದಾನ ಮೀಸಲಿಡುವಂತೆ ಮನವಿ ಮಾಡಿಕೊಂಡಿದೆ.

ಖಾಸಗಿ ಆಸ್ಪತ್ರೆಗೆ ದಾಖಲಾಗಲು ಸರ್ಕಾರಿ ಆಸ್ಪತ್ರೆ ಅನುಮತಿ ಅಗತ್ಯವಿಲ್ಲ. ಈ ಯೋಜನೆಯಿಂದ ಸಮಯದ ಉಳಿತಾಯ ಹಾಗೂ ಪರಿಣಾಮಕಾರಿ ಶಸ್ತ್ರಚಿಕಿತ್ಸೆ ಸಾಧ್ಯ. ರಾಜ್ಯದ ಬೃಹತ್ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ. ರೋಗಿಗಳು ಗಂಭೀರ ಕಾಯಿಲೆಗಳಿಗೆ ನಗದು ಹೊಂದಿಸುವ ಕಷ್ಟದಿಂದ ಮುಕ್ತಿ ಈ ಯೋಜನೆಯಿಂದ ಸಿಗಲಿದೆ.

ಯಶಸ್ವಿನಿ ಯೋಜನೆಯಿಂದ ವೈದ್ಯಕೀಯ ಕ್ಷೇತ್ರದ ಹದಿನಾಲ್ಕು ವಿಭಾಗಗಳಲ್ಲಿ ಗುರುತಿಸಿದ 295 ಕಾಯಿಲೆಗಳ 823 ಶಸ್ತ್ರಚಿಕಿತ್ಸೆಗೆ ನಗದು ರಹಿತ ಸೌಲಭ್ಯ ಪಡೆಯಬಹುದಾಗಿದೆ. ಮೊದಲಿದ್ದ 905 ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳ ಸಂಖ್ಯೆಯನ್ನು 1800ಕ್ಕೆ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಗ್ರಾಮೀಣ ಯಶಸ್ವಿನಿ ಯೋಜನೆಯಡಿಯಲ್ಲಿ ಪರೀಕ್ಷೆಗೆ ಒಳಗಾದ 1.25 ಲಕ್ಷ ರೂ. ಮಿತಿ ಹಾಗೂ ಒಂದಕ್ಕಿಂತ ಹೆಚ್ಚು ಬಾರಿ ಚಿಕಿತ್ಸೆಗೆ ಒಳಗಾದರೆ 2 ಲಕ್ಷ ರೂ ನಗದು ರಹಿತ ಚಿಕಿತ್ಸೆ ಸೌಲಭ್ಯ ಪಡೆಯಬಹುದಾಗಿದೆ.

ರಾಜ್ಯದಲ್ಲಿ ಓಮಿಕ್ರಾನ್ ತನ್ನ ಬಾಹು ಚಾಚುತ್ತಿದೆ !

0

ಸದ್ದಿಲ್ಲದೆ ವಿಶ್ವದಾದ್ಯಂತ ಓಮಿಕ್ರಾನ್ ತನ್ನ ದುಷ್ಪರಿಣಾಮ ಬೀರುತ್ತಿದೆ. ಭಾರತದಲ್ಲೂ ಕೂಡ ರೂಪಾಂತರಿ ವೈರಸ್ ಓಮಿಕ್ರಾನ್ ಸಂಖ್ಯೆ ಏರಿಕೆಯಾಗಿದೆ.

ರಾಜಸ್ಥಾನದ ಜೈಪುರದಲ್ಲಿ 9, ಮಹಾರಾಷ್ಟ್ರದ ಪುಣೆಯಲ್ಲಿ 7 ಹಾಗೂ ದಿಲ್ಲಿಯಲ್ಲಿ ಒಬ್ಬರಿಗೆ ಓಮಿಕ್ರಾನ್ ದೃಢಪಟ್ಟಿದೆ. ಮೊದಲು ಬೆಂಗಳೂರಿನಲ್ಲಿ ಒಬ್ಬರಿಗೊಬ್ಬರಿಗೆ, ಗುಜರಾತ್ ಮತ್ತು ಮುಂಬೈನಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿತ್ತು.

ಓಮಿಕ್ರಾನ್ ಸೋಂಕಿನ ಜೊತೆಯಲ್ಲೇ ಕೊರೋನಾ ಸೋಂಕು ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಸೀಗೋಡು ಜವಹಾರ್ ನವೋದಯ ವಿದ್ಯಾಲಯದಲ್ಲಿ 60 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 68 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ರಾಜ್ಯದ ರಾಜಧಾನಿಯಲ್ಲು ಕೋವಿಡ್ ಪ್ರಕರಣ ಕಳೆದ 24 ಗಂಟೆಗಳಲ್ಲಿ 256 ಸೇರಿ 456 ಹೊಸ ಕೇಸ್ ಪತ್ತೆಯಾಗಿವೆ. ಆರು ಮಂದಿ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,132ಕ್ಕೆ ತಲುಪಿದೆ.

ಮಹಾಮಾರಿ ಕೋವಿಡ್ ತನ್ನ ಕರಾಳ ರೂಪವನ್ನು ತೋರುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದರು ಸಹ ಜನರು ಮಾತ್ರ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ಪಾಲಿಸದೆ ಮೈಮರೆತು ಓಡಾಡುತ್ತಿರುವುದು ಆಂತಕ ಮೂಡಿಸಿದೆ.

ಶಿವಮೊಗ್ಗದಲ್ಲಿ ಖಾದ್ಯಮೇಳ

0

ಶಿವಮೊಗ್ಗ ಒಕ್ಕಲಿಗರ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಸಹಯೋಗದಲ್ಲಿ, ಜಿಲ್ಲಾ ಚುಂಚಾದ್ರಿ ಮಹಿಳಾ ವೇದಿಕೆಯಿಂದ ಖಾದ್ಯ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಮೇಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ್ ಅವರು ಭಾಗಿಯಾಗಿದ್ದರು.

ಗಾಂಧೀಜಿ ಕಂಡ ಗ್ರಾಮಸ್ವರಾಜ್ಯದ ಕನಸು ಇಂತಹ ಕಾರ್ಯಕ್ರಮಗಳ ಮೂಲಕ ಸಾಕಾರಗೊಳಿಸುತ್ತಿದೆ. ಗೃಹ ಬಳಕೆ ವಸ್ತು, ಕರಕುಶಲ ವಸ್ತು, ಇತರೆ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ. ಇದರ ಮೂಲಕ ಜೀವನ ಸ್ವಾವಲಂಬಿಯಾಗಿದೆ ಎಂದು ಮಂಜುನಾಥ್ ಅವರು
ತಿಳಿಸಿದರು.

ಕೊರೋನಾದಂತಹ ಅನೇಕ ಸವಾಲುಗಳ ನಡುವೆ ಇಂತಹ ಸಾಂಸ್ಕೃತಿಕ ವಾತಾವರಣ ಉಂಟು ಮಾಡುವುದು ಒಳ್ಳೆಯ ಕೆಲಸ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ. ಜೊತೆಗೆ ತರಹೇವಾರಿ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಸಮಾಜದಲ್ಲಿ ಲವಲವಿಕೆ ತರಲು ಸಹಾಯವಾಗುತ್ತದೆ ಎಂದು ಕೂಡ ತಿಳಿಸಿದರು.

ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡಗಳ ನಿರ್ಮಾಣವಾದರೆ ಸಾಲದು. ಇದರ ಜೊತೆಗೆ ಭಾಷೆ, ಸಂಸ್ಕೃತಿ ಕೂಡ ಬೆಳೆಯಬೇಕು. ಆಗ ಮಾತ್ರ ಅದು ಸರ್ವತೋಮುಖ ಅಭಿವೃದ್ಧಿ ಅನಿಸಿಕೊಳ್ಳುತ್ತದೆ. ಕನ್ನಡ ಸಾರಸ್ವತ ಲೋಕ ಕ್ಕಾಗಿ ಶ್ರಮಿಸಲು ನೀಡಿರುವ ಅವಕಾಶವನ್ನು ಬಳಸಿಕೊಂಡು ರಾಜ್ಯಕ್ಕೆ ಮಾದರಿಯಾಗಬಲ್ಲ ಪರಿಷತ್ತನ್ನು ಕಟ್ಟಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ್ ಅವರು ಭರವಸೆ ನೀಡಿದರು.

ಖಾದ್ಯ ಮೇಳದಲ್ಲಿ ಭಾರತಿ ರಾಮಕೃಷ್ಣ, ಶ್ರೀಕಾಂತ್, ಡಾ. ಮೋಹನ್ ಚಂದ್ರಗುತ್ತಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಭಾರತ- ರಷ್ಯ ಮಹತ್ವದ ಒಪ್ಪಂದಕ್ಕೆ ತಯಾರಿ

0

ಭಾರತವು ರಷ್ಯಾ ಜೊತೆಗೆ ಮೂಲಸೌಕರ್ಯ ಹಂಚಿಕೆಯ ಒಪ್ಪಂದವನ್ನು ಮಾಡಿಕೊಳ್ಳಲಿದೆ. ಐದು ವರ್ಷಗಳ ಹಿಂದೆಯೇ ಅಮೆರಿಕ ಜೊತೆಗೆ ಇಂತಹ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಚರ್ಚಿಸಲು ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಜೊತೆ ಶೃಂಗಸಭೆಯನ್ನು ನಡೆಸಲಿದ್ದಾರೆ.

ಈ ಸಭೆಯಲ್ಲಿ ಸುಮಾರು 10 ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ರಕ್ಷಣಾ ಮೂಲಸೌಕರ್ಯ ಹಂಚಿಕೆ ಒಪ್ಪಂದವೂ ಇದರಲ್ಲಿ ಒಂದಾಗಿದೆ.

ಈ ಒಪ್ಪಂದಕ್ಕೆ ಸಹಿ ಮಾಡಿದರೆ, ಭಾರತ ಮತ್ತು ರಷ್ಯಾದ ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಗಳು ಪರಸ್ಪರ ರಕ್ಷಣಾ ಮೂಲಸೌಕರ್ಯಗಳನ್ನು ಬಳಸಿಕೊಳ್ಳಲು ಅವಕಾಶವನ್ನು ಹೊಂದಿದೆ.

ರಷ್ಯಾದ ಕೆಎ 226ಟಿ ಎಚ್ ಎ ಎಲ್ ತುಮಕೂರು ಘಟಕದಲ್ಲಿ ತಯಾರಿಸುವ ಯೋಜನೆ ಕುರಿತು ಇಂದಿಗೂ ಅನಿಶ್ಚಿತ ಸ್ಥಿತಿಯಲ್ಲಿದೆ. ಆದ್ದರಿಂದ ರಷ್ಯಾದಿಂದ ಕೆಲವು ಹೆಲಿಕ್ಯಾಪ್ಟರ್ ಗಳನ್ನು ಖರೀದಿಸುವ ಸಾಧ್ಯತೆ ಇದೆ. 60 ಹೆಲಿಕಾಪ್ಟರ್ ಖರೀದಿ ಹಾಗೂ 200 ಹೆಲಿಕ್ಯಾಪ್ಟರ್ ಗಳನ್ನು ಎಚ್ಎಎಲ್ ನಲ್ಲಿ ತಯಾರಿಸಲಾಗುತ್ತದೆ. ಈ ಒಪ್ಪಂದವನ್ನು ಭಾರತ ಮತ್ತು ರಷ್ಯಾ ಸರ್ಕಾರದ ನಡುವೆ 2015 ರಲ್ಲಿ ನಡೆದಿತ್ತು. ದರ ಹಾಗೂ ಭಾರತದಲ್ಲಿ ತಯಾರಾಗುವ ಹೆಲಿಕ್ಯಾಪ್ಟರ್ ಗಳಲ್ಲಿ ದೇಶಿಯವಾಗಿ ತಯಾರಾದ ಬಿಡಿಭಾಗಗಳನ್ನು ಯಾವ ಪ್ರಮಾಣದಲ್ಲಿ ಬಳಸಬೇಕು ಎಂಬ ಬಗೆಗಿನ ಭಿನ್ನಭಿಪ್ರಾಯ ಏರ್ಪಟ್ಟಿದ್ದು, ಅದನ್ನು ಬಗೆಹರಿಸಲು ಇನ್ನೂ ಸಾಧ್ಯವಾಗಿಲ್ಲ.

ರಕ್ಷಣಾ ಮೂಲಸೌಕರ್ಯ ಹಂಚಿಕೆ ಒಪ್ಪಂದದಿಂದಾಗಿ ಆರ್ಕ್ ಟಿಕ್ ಸಾಗರದಲ್ಲಿ ರಷ್ಯಾ ಹೊಂದಿರುವ ಬಂದರೂ ಸೌಲಭ್ಯವೂ ಭಾರತ ದ ಬಳಕೆಗೆ ದೊರೆಯುತ್ತದೆ. ಈ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚಾಗಿದೆ. ಹಾಗಾಗಿ ರಷ್ಯದ ಜೊತೆಗಿನ ಒಪ್ಪಂದದಿಂದ ಭಾರತಕ್ಕೆ ಅನುಕೂಲ ಆಗಲಿದೆ.

ಲಸಿಕೆಗೆ ಡಿಮ್ಯಾಂಡ್..

0

ಕೋವಿಡ್ ಸೋಂಕು ತಗ್ಗುತ್ತಿದಂತೆಯೇ ಜನ ಲಸಿಕೆಯನ್ನೇ ಮರೆತಿದ್ದರು. ಮೊದಲ ಡೋಸ್ ಲಸಿಕೆ ಪಡೆದಿದ್ದವರು, ಎರಡನೇ ಡೋಸ್ ಹಾಕಿಸಿಕೊಳ್ಳಲು ಮನಸ್ಸು ಮಾಡಲಿಲ್ಲ. ಆದರೆ ಈಗ ಕೋವಿಡ್ ವೈರಾಣುವಿನ ರೂಪಾಂತರಿ ಒಮಿಕ್ರಾನ್ ಪ್ರತ್ಯಕ್ಷವಾಗುತ್ತಲ್ಲೇ ಲಸಿಕೆ ಪಡೆಯಲು ಮುಗಿಬಿದ್ದಿದ್ದಾರೆ.
ಕೋವಿಡ್ ಲಸಿಕೆಯ ಬಗ್ಗೆ ಉದಾಸೀನ ತೋರುತ್ತಿದ್ದ ಜನ ಈಗ ಲಸಿಕೆ ಪಡೆಯಲು ಸರದಿ ಸಾಲಿನಲ್ಲಿ ಕಾದು ನಿಲ್ಲುತ್ತಿದ್ದಾರೆ.
ಕೋವಿಡ್ ಎರಡನೇ ಅಲೆ ಕಾಣಿಸಿಕೊಳ್ಳುವ ಮುನ್ನ ದಿನಕ್ಕೆ
ಒಂದು ಸಾವಿರ ಲಸಿಕೆ ನೀಡುತ್ತಿದ್ದೆವು. ಕಳೆದ ಎರಡು ತಿಂಗಳಲ್ಲಿ ಲಸಿಕೆ ಪಡೆಯುವವರ ಸಂಖ್ಯೆ 100ಕ್ಕಿಂತ ಕಡಿಮೆಯಾಗಿತ್ತು.ಆದರೆ,ಕಳೆದ ಮೂರು ದಿನಗಳಿಂದ ಮತ್ತೆ ಏರಿಕೆಯಾಗುತ್ತಿದೆ. ಸದ್ಯ 500ಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದರು.
ಓಮಿಕ್ರಾನ್ ರೂಪಾಂತರಿಯ ಹಿನ್ನೆಲೆಯಲ್ಲಿ ಮೂರನೇ ಅಥವಾ ಬೂಸ್ಟರ್ ಡೋಸ್ ಬಗ್ಗೆ ಚರ್ಚೆ ತೀವ್ರಗೊಂಡಿದೆ. ಆದರೆ ಬೂಸ್ಟರ್ ಡೋಸ್ ಗಿಂತಲೂ ಗರಿಷ್ಠ ಸಂಖ್ಯೆ ಜನರಿಗೆ 2 ನೇ ಡೋಸ್ ನೀಡುವುದರತ್ತಲೇ ಸರ್ಕಾರ ಗಮನಹರಿಸಬೇಕು. ಆ ಮೂಲಕ ಹೆಚ್ಚಿನ ಜನಸಂಖ್ಯೆಯಲ್ಲಿ ಪ್ರತಿರೋಧಕತೆ ಬೆಳೆಸಬೇಕು ಎಂದು ತಜ್ಞರ ಸಮಿತಿಯು ಸರಕಾರಕ್ಕೆ ಸಲಹೆ ನೀಡಿದೆ.

ಇಂಡೋನೇಷ್ಯ ಬ್ಯಾಡ್ಮಿಂಟನ್ : ಫೈನಲ್ಸ್ ಗೆ ಸಿಂಧು

0

ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ಗೆ ಭಾರತದ ಪಿ.ವಿ.ಸಿಂಧು ಲಗ್ಗೆಯಿಟ್ಟಿದ್ದಾರೆ.

ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಹಣಾಹಣಿ ಪಂದ್ಯದಲ್ಲಿ ಜಪಾನ್ ನ ಅಕಾನೆ ಯಾಮಗುಚಿ ಅರೊಂದಿಗೆ ಪಿ.ವಿ.ಸಿಂಧು ಹತ್ತು ನಿಮಿಷಗಳ ಕಾಲ ರೋಚಕ ಆಟ ಪ್ರದರ್ಶಿಸಿ 21-15, 15-21, 21-19 ರಿಂದ ಗೆಲುವು ಸಾಧಿಸಿದರು.

ಈ ಪಂದ್ಯದ ಮೊದಲ ಗೇಮ್ ನಲ್ಲಿ 0-4 ರಿಂದ ತೀರಾ ಹಿನ್ನಡೆಯಲ್ಲಿದ ಪಿ.ವಿ.ಸಿಂಧು ಬಳಿಕ 4-4 ರ ಸಮಬಲ ಸಾಧಿಸಿದರು. ನಂತರ 18-15 ರ ಮೇಲುಗೈ ಪಡೆದರು.

ಮೂರನೇ ಹಾಗೂ ನಿರ್ಣಾಯಕ ಗೇಮ್ ನಲ್ಲಿ 5-5 ರಿಂದ ಸಾಗಿದ್ದ ಗೇಮ್ ನಲ್ಲಿ ಸಿಂಧೂ ಸತತ 7 ಪಾಯಿಂಟ್ಸ್ ಕಲೆಹಾಕಿ ಮುನ್ನಡೆ ಸಾಗಿದರು. ಜಪಾನ್ ನ ಅಕಾನೆ ಚೇತರಿಕೆ ಆಟವಾಡಿ 11-13ಕ್ಕೆ ಹಿನ್ನಡೆ ತಗ್ಗಿಸಿದರು. ಆದರೆ ಮತ್ತೆ ಛಲಬಿಡದೆ ಆಟವಾಡಿದ ಸಿಂಧು 17-12 ಮುನ್ನಡೆಸಿದರು. ಒಂದು ಹಂತದಲ್ಲಿ 19-19 ರಿಂದ ಸಮಬಲಕ್ಕೆ ಬಂದಿದ್ದ ಗೇಮ್ ನಲ್ಲಿ 2 ಪಾಯಿಂಟ್ ಗಳಿಸುವ ಮೂಲಕ ಭಾರತದ ಸಿಂಧು ಗೆಲುವನ್ನು ತಮ್ಮದಾಗಿಸಿಕೊಂಡರು.