Sunday, February 8, 2026
Sunday, February 8, 2026
Home Blog Page 1842

ಸೆಮಿಕಂಡಕ್ಟರ್ ವಲಯಕ್ಕೆ ಉತ್ತೇಜನ

0

ಭಾರತೀಯ ಎಲೆಕ್ಟ್ರಾನಿಕ್ ಉದ್ಯಮಗಳ ಒಕ್ಕೂಟ ಇದ್ದಂತಹ ‘ಸೆಮಿಕಂಡಕ್ಟರ್ ವಲಯದಲ್ಲಿ ಭಾರತಕ್ಕಿರುವ ಅವಕಾಶಗಳು’ ಕುರಿತಂತೆ ವೆಬಿನಾರ್ ನಲ್ಲಿ ಮಾತನಾಡಿದ ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ. ಅಶ್ವತ್ಥನಾರಾಯಣ ಅವರು ರಾಜ್ಯದಲ್ಲಿ ಸೆಮಿಕಂಡಕ್ಟರ್ ವಲಯವನ್ನು ಉತ್ತೇಜಿಸಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 200 ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ ಎಂದು ತಿಳಿಸಿದರು.

‘ಈ ಕ್ಷೇತ್ರದ ಹೂಡಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2 ಸಾವಿರ ಕೋಟಿ ಸಬ್ಸಿಡಿ ಕೊಡಲಾಗುತ್ತಿದೆ. ಸೆಮಿಕಂಡಕ್ಟರ್ ವಲಯದ ಕಂಪನಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ಕುರಿತು ಸರ್ಕಾರದೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ’ ಎಂದರು.

ಈ ವಲಯವನ್ನು ಸದೃಢವಾಗಿ ಬೆಳೆಸಲು ಈಗಾಗಲೇ ಮೈಸೂರಿನಲ್ಲಿ ಉತ್ಪನ್ನಗಳ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದ್ದು, ಅಗತ್ಯವೆನಿಸಿದರೆ ಇನ್ನೂ ಹಲವೆಡೆ ಇಂತಹ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.

ಗುಜರಾತ್: ಓಮಿಕ್ರಾನ್ ಸುಳಿವು.

0

ಗುಜರಾತ್‌ನ ಜಾಮ್‌ನಗರದ 72 ವರ್ಷದ ವ್ಯಕ್ತಿ ಮತ್ತು ವ್ಯಕ್ತಿ ಮತ್ತು ಮುಂಬೈ ಸಮೀಪದ ಕಲ್ಯಾಣ್ ಡೊಂಬಿವಿಲಿ ಪುರಸಭೆಯ 33 ವರ್ಷದ ವ್ಯಕ್ತಿ ಗೆ ಓಮಿಕ್ರಾನ್ ರೂಪಾಂತರಿಯು ದೃಢಪಟ್ಟಿದೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಇಬ್ಬರಿಗೆ ಈ ಸೋಂಕು ತಗುಲಿರುವುದು ಪತ್ತೆಯಾದ ನಂತರ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಈಗ ನಾಲ್ಕಕ್ಕೆ ತಲುಪಿದೆ. ಹೆಚ್ಚಿನ ಅಪಾಯದ ದೇಶವಾದ ಜಿಂಬಾಬ್ವೆಯಿಂದ ಗುಜರಾತ್‌ಗೆ ಆಗಮಿಸಿದ ಕೆಲವೇ ದಿನಗಳಲ್ಲಿ ಜಾಮ್‌ನಗರದ ವ್ಯಕ್ತಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಸೋಂಕು ದೃಡಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇವರು ನವೆಂಬರ್ 28 ರಂದು ಜಿಂಬಾಬ್ವೆಯಿಂದ ಗುಜರಾತ್‌ಗೆ ಆಗಮಿಸಿದ್ದರು ಮತ್ತು ಡಿಸೆಂಬರ್ 2 ರಂದು ಕೊರೊನಾ ಪರೀಕ್ಷೆ ನಡೆಸಿದ ನಂತರ ಅವರನ್ನು ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಓಮಿಕ್ರಾನ್ ರೂಪಾಂತರಿ ಪರೀಕ್ಷೆ ಮಾಡಿದ ಮುಂಬೈ ವ್ಯಕ್ತಿ, ಪ್ರಸ್ತುತ ಮುಂಬೈನಲ್ಲಿರುವ ವೈದ್ಯಕೀಯ ಐಸೋಲೇಶನ್ ಫೆಸಿಲಿಟಿಯಲ್ಲಿದ್ದಾರೆ. 33 ವರ್ಷದ ಈ ವ್ಯಕ್ತಿಯು ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಿಂದ ದುಬೈ ಮತ್ತು ದೆಹಲಿ ಮೂಲಕ ಮುಂಬೈಗೆ ಬಂದಿದ್ದರು.ಅವರನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಜೀನೋಮ್ ಚಿಕಿತ್ಸೆಗೆ ಕಳುಹಿಸಲಾಗಿದೆ. ಕಾಶ್ಮೀರ, ಒಡಿಶಾ ಮತ್ತು ಮಿಜೋರಾಂ, ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಟೆಸ್ಟ್-ಟ್ರ್ಯಾಕ್ – ಟ್ರೀಟ್ – ಲಸಿಕೆ – ಕೋವಿಡ್ ಸೂಕ್ತವಾದ ನಡವಳಿಕೆಯ ತಂತ್ರದ ಅಡಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಕಡಿಮೆಯಾದ ಸಾವಿನ ಪ್ರಕರಣಗಳು, ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳು, ದುರ್ಬಲ ಧನಾತ್ಮಕತೆಯ ದರಗಳ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸೂಕ್ಷ್ಮವಲಯ ಘೋಷಣೆ : ಚರ್ಚೆಯ ನಂತರ ಕ್ರಮ

0

ಡಾಕ್ಟರ್ ಕಸ್ತೂರಿರಂಗನ್ ಅವರ ವರದಿಯನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ವಿರೋಧಿಸಿದೆ.

ಪಶ್ಚಿಮಘಟ್ಟಗಳಲ್ಲಿ ಪರಿಸರ ಸೂಕ್ಷ್ಮವಲಯಗಳ ಘೋಷಣೆಗೆ ಸಂಬಂಧಿಸಿದ ಈ ವರದಿಯನ್ನು ತಿರಸ್ಕರಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಮುಂದೆ ಬೇಡಿಕೆ ಇಟ್ಟಿದೆ.

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದರು.

“ಉಪಗ್ರಹ ಚಿತ್ರಗಳ ಆಧಾರದ ಮೇಲೆ ಕಸ್ತೂರಿರಂಗನ್ ವರದಿ ಸಿದ್ಧಪಡಿಸಲಾಗಿದೆ ವಾಸ್ತವಿಕತೆ ದೂರವಾಗಿದೆ. ಈ ವರದಿ ಆಧಾರದಲ್ಲಿ ಪರಿಸರ ಸೂಕ್ಷ್ಮ ವಲಯ ಗಳನ್ನು ಘೋಷಿಸಿದರೆ ಪಶ್ಚಿಮಘಟ್ಟ ಪ್ರದೇಶದ ಜನರ ಜೀವನೋಪಾಯಕ್ಕೆ ಧಕ್ಕೆಯಾಗುತ್ತದೆ. ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮತ್ತು ಈ ಭಾಗದ ಜನರ ವಿರೋಧವಿದೆ” ಎಂದು ಬೊಮ್ಮಾಯಿ ಅವರು ಕೇಂದ್ರ ಸಚಿವರಿಗೆ ತಿಳಿಸಿದರು.

ಈ ಕುರಿತಂತೆ ನಿರ್ಣಯಕ್ಕೂ ಮುನ್ನ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಕರ್ನಾಟಕಕ್ಕೆ ಕಳುಹಿಸಿ ಚರ್ಚಿಸಲಾಗುವುದು. ಆ ಬಳಿಕವೇ ತೀರ್ಮಾನಿಸಲಾಗುವುದು ಎಂದು ಕೇಂದ್ರ ಸಚಿವರು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ್ದಾರೆ.

ಹೊಸ ಕೋವಿಡ್ ಪ್ರಕರಣ: ಕೇಂದ್ರದಿಂದ ರಾಜ್ಯಗಳಿಗೆ ಪತ್ರ.

0

ಹೊಸ ಕೊವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಪತ್ರ ಬರೆದಿದೆ.
ಸೋಂಕು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರ್ನಾಟಕ, ತಮಿಳು ನಾಡು ಮಿಜೋರಾಂ ಕೇರಳ, ಓಡಿಶಾ, ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಆರೋಗ್ಯ ಸಚಿವಾಲಯ ಸೂಚಿಸಿದೆ.
ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಹೆಚ್ಚಿಸಬೇಕು.ಕೊವಿಡ್ ಹಾಟ್ ಸ್ಪಾಟ್ ಗಳ ಮೇಲ್ವಿಚಾರಣೆ ಮಾಡಬೇಕು.ಕೋವಿಡ್ ಪಾಸಿಟಿವ್ ವ್ಯಕ್ತಿಯ ಸಂಪರ್ಕಿತ ರನ್ನು ಪತ್ತೆಹಚ್ಚಬೇಕು, ಎಲ್ಲಾ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಕಳುಹಿಸಬೇಕು. ಆರೋಗ್ಯ ಮೂಲ ಸೌಕರ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಏರಿಸಬೇಕು ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೂಸ್ಟರ್ ಡೋಸ್ ಗೂ ಮುನ್ನ ದೇಶದ ಅಧಿಕ ಸಂಖ್ಯೆಯ ಜನರು ಇನ್ನು ಲಸಿಕೆ ಹಾಕಿಸಿಕೊಳ್ಳುವುದು ಬಾಕಿಯಿದ್ದು, ಅವರೆಲ್ಲರಿಗೂ ಎರಡೂ ಡೋಸ್ ಲಸಿಕೆ ನೀಡಲು ಸರ್ಕಾರ ಚಿಂತನೆ ನಡೆಸಬೇಕು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮೂರು ಕೋವಿಡ್ ಪ್ರಕರಣ ಪತ್ತೆ: ಒಂದು ಕ್ಲಸ್ಟರ್ ಪರಿಗಣನೆ

0

ಓಮಿಕ್ರಾನ್ ವೈರಸ್ ಹಿನ್ನೆಲೆಯಲ್ಲಿ ಶಾಲೆ, ಹಾಸ್ಟೆಲ್ ಕ್ಲಸ್ಟರ್ ಹಾಗೂ ಬೆಂಗಳೂರಿನ ಅಪಾರ್ಟ್ ಮೆಂಟ್ ಕ್ಲಸ್ಟರ್ ಗಳ ನಿರ್ವಹಣೆಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಮೂರು ಪ್ರಕರಣ ಪತ್ತೆಯಾದರೆ ಕ್ಲಸ್ಟರ್ ಎಂದು ಪರಿಗಣಿಸಿ ನಿರ್ವಹಣೆ ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮೊದಲು ಸತ್ತು ಪ್ರಕರಣ ಕಂಡುಬಂದರೆ ಕ್ಲಸ್ಟರ್ ಎಂದು ಪರಿಗಣಿಸಲಾಗುತ್ತಿತ್ತು. ಈಗ ಮೂರು ಪ್ರಕರಣ ಪತ್ತೆಯಾದರೂ ಕ್ಲಸ್ಟರ್ ಎಂದು ಪರಿಗಣಿಸಿ ಅಲ್ಲಿರುವ ಎಲ್ಲರನ್ನು ಪರೀಕ್ಷಿಸುವ ಜೊತೆಗೆ ಚಿಕಿತ್ಸೆ ಕೊಡಿಸಲು ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದ್ದು, ಇಲ್ಲಿಗೆ ಹೊರ ದೇಶದಿಂದ ಬಂದವರು ನಾಪತ್ತೆಯಾಗಿದ್ದಾರೆ. ಏರ್ ಪೋರ್ಟ್ ನಲ್ಲಿ ಬ್ರಷ್ಟಾಚಾರ ಇರಬೇಕು. ಹೀಗಾಗಿಯೇ ಬಂದವರನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.
ಮುನ್ನೆಚರಿಕೆಯೊಂದಿಗೆ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಬೆಳಗಾವಿಯಲ್ಲಿಯೇ ವಿಧಾನಮಂಡಲ ಅಧಿವೇಶನ ನಡೆಸಲಾಗುವುದು. ಸ್ಯಾನಿಟೈಸೇಷನ್ ಜೊತೆಗೆ ಡಬಲ್ ಡೋಸ್. ಪಡೆದವರಿಗಷ್ಟೇ ಪ್ರವೇಶ ಕಲ್ಪಿಸಲಾಗುವುದು ಎಂದು ಬೊಮ್ಮಾಯಿಯವರು ತಿಳಿಸಿದ್ದಾರೆ.

ಶಿವಮೊಗ್ಗ ಬೆಂಗಳೂರು ರೈಲ್ವೆ ಸಂಚಾರ

0

ಶಿವಮೊಗ್ಗ- ತುಮಕೂರು ನಡುವೆ ಹೊಸ ರೈಲು ಸಂಚಾರ ಡಿಸೆಂಬರ್ 13ರಿಂದ ಆರಂಭವಾಗಲಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ರೈಲ್ವೆ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈಲ್ವೆಯಲ್ಲಿ ಒಟ್ಟು 12 ಭೋಗಿಗಳು ಇರಲಿವೆ. ಹಾಗೂ ಮುಂಚಿತವಾಗಿಯೇ ಸೀಟ್ ಕಾಯ್ದಿರಿಸುವ ವ್ಯವಸ್ಥೆ ಬಗ್ಗೆ ಇರುವುದಿಲ್ಲ.
ನಿತ್ಯ ಬೆಳಿಗ್ಗೆ ಸಂಜೆ 6.40ಕ್ಕೆ ತುಮಕೂರಿನಿಂದ ಹೊರಟು ಹೆಗ್ಗೇರೆ ಹಾಲ್ಟ್ , ಮಲ್ಲಸಂದ್ರ,ಗುಬ್ಬಿ, ನಿಟ್ಟೂರು, ಸಂಪಿಗೆ ರೋಡ್, ಅಮ್ಮಸಂದ್ರ, ಬಾಣಸಂದ್ರ, ಅರಳಗುಪ್ಪೆ, ಕರಡಿ, ಬನಶಂಕರಿ ಹಾಲ್ಟ್, ತಿಪಟೂರು, ಶ್ರೀಶಾರದಾನಗರ ಹಾಲ್ಟ್, ಹೊನ್ನವಳ್ಳಿ ರೋಡ್, ಆದಿಹಳ್ಳಿ, ಅರಸೀಕೆರೆ, ಬಾಣವರ, ದೇವನೂರು, ಬಳ್ಳೇಕೆರೆ, ಕಡೂರು,ಬೀರೂರು, ಶಿವಪುರ, ಕೋರನಹಳ್ಳಿ, ತರಿಕೆರೆ, ಮಸರಹಳ್ಳಿ, ಭದ್ರಾವತಿ, ಶಿವಮೊಗ್ಗ ಹಾಲ್ಟ್, ಶಿವಮೊಗ್ಗ ಟೌನ್ ಗೆ ಶಿವಮೊಗ್ಗಕ್ಕೆ 11: 50 ಗಂಟೆಗೆ ತಲುಪಲಿದೆ.
ರೈಲ್ವೆ ಸಂಖ್ಯೆ 06591 ತುಮಕೂರಿನಿಂದ ಶಿವಮೊಗ್ಗಕ್ಕೆ ಸಂಚಾರ ನಡೆಸಲಿದೆ. ಅದೇ ರೀತಿ ರೈಲು ಸಂಖ್ಯೆ 06592 ಶಿವಮೊಗ್ಗದಿಂದ ತುಮಕೂರು ಡಿಸೆಂಬರ್ 14ರಿಂದ ಪ್ರಾರಂಭವಾಗಲಿರುವ ರೈಲ್ವೆ ಶಿವಮೊಗ್ಗದಿಂದ ಬೆಳಿಗ್ಗೆ ನಾಲ್ಕಕ್ಕೆ ಹೊರಟು ತುಮಕೂರಿಗೆ ಬೆಳಗ್ಗೆ 9.45 ತಲುಪಲಿದೆ.

ಭಾರತೀಯ ಮೂಲದ ಗಣಿತಜ್ಞರಿಗೆ ಪ್ರಶಸ್ತಿ

0

ಭಾರತೀಯ ಮೂಲದ ಗಣಿತಶಾಸ್ತ್ರಜ್ಞ ನಿಖಿಲ್ ಶ್ರೀವಾತ್ಸವ ಅವರಿಗೆ ಪ್ರತಿಷ್ಠಿತ ಅಮೇರಿಕನ್ ಮ್ಯಾಥಮೆಟಿಕಲ್ ಸೊಸೈಟಿ ನೀಡುವ ‘ಸಿಪ್ರಿಯಾನ್ ಪೊಯಾಸ್’ಪ್ರಶಸ್ತಿ ಲಭಿಸಿದೆ.
ಆಪರೇಟರ್ ಥಿಯರಿ ವಿಭಾಗದಲ್ಲಿನ ವಿಶಿಷ್ಟ ಸಾಧನೆಗಾಗಿ ನಿಖಿಲ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಎಎಂಎಸ್ ಮಾಹಿತಿ ನೀಡಿದೆ.
ಕಬ್ಬಿಣದ ಕಡಲೆಯಾಗಿ ಬಹುತೇಕರ ಉದಾಸೀನಕ್ಕೆ ಒಳಗಾಗಿರುವ ಗಣಿತ, ನಾವು ಉಳಿಸಿಕೊಳ್ಳಬೇಕಾದ ಅದ್ಭುತ ವಿಜ್ಞಾನ. ಇದರಲ್ಲಿ ಹಲವು ಭಾಗಗಳನ್ನು ಗುರುತಿಸಿ, ಸಾಧಕರಿಗೆ ಪ್ರಶಸ್ತಿ ನೀಡುವ ಪರಿಪಾಠವನ್ನು ಆರಂಭಿಸಲಾಗಿದೆ. ಈ ಸಾಲಿನ ಚೊಚ್ಚಲ ಪ್ರಶಸ್ತಿ ನಿತಿನ್ ಶ್ರೀವಾತ್ಸವ ಸೇರಿ ಮೂವರಿಗೆ ನೀಡಲಾಗುತ್ತಿದೆ ಎಂದು ಮ್ಯಾಥಮೆಡಿಕಲ್ ಸೊಸೈಟಿ ತಿಳಿಸಿದೆ.
ಅಮೆರಿಕದ ಡೇನಿಯಲ್ ಸ್ಪೀಲ್ ಮನ್ ಮತ್ತು ಸ್ವಿಜರ್ಲ್ಯಾಂಡ್ ನ ಆಡಮ್ ಮಾರ್ಕಸ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಶ್ವ ಮಣ್ಣಿನ ದಿನ

0

ಮಣ್ಣಿನಿಂದ  ಜೀವ, ಮಣ್ಣಿನಿಂದ ಕಾಯ, ಮಣ್ಣು  ಅಳಿದರೆ ಮಾನವ ಅಳಿದಂತೆ.ಮಣ್ಣು ಒಮ್ಮೆ ನಾಶವಾದರೆ, ಪುನಃ ಪಡೆಯಲಾಗದ ಅಮೂಲ್ಯ ಸಂಪತ್ತಾಗಿರುವುದರಿಂದ ಇದನ್ನು ಉಳಿಸಲೇಬೇಕಾದ ಮಹತ್ತರ ಜವಾಬ್ದಾರಿ‌ ಹಾಗೂ ಕರ್ತವ್ಯ ಪ್ರತಿಯೊಬ್ಬರದ್ದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.
ಪ್ರತಿ ವರ್ಷ ಧ್ಯೇಯವಾಕ್ಯದೊಂದಿಗೆ ಈ ದಿನ ಆಚರಣೆಗೊಳ್ಳುತ್ತದೆ. ವಿಶ್ವ ಮಣ್ಣು ದಿನ-2021‌‌ ಡಿ.5 ರ ಧ್ಯೇಯ ‘ಮಣ್ಣಿನ ಸವುಳಾಗುವಿಕೆಯನ್ನು ತಡೆಗಟ್ಟಿ, ಮಣ್ಣಿನ ಉತ್ಪಾದಕತೆ ಹೆಚ್ಚಿಸಿ’ ಎಂದು ಘೋಷಿಸಿದೆ.
ಮಣ್ಣು  ಪ್ರಕೃತಿಯ ಒಂದು ಅಮೂಲ್ಯ ಕೊಡುಗೆ. ಮನುಷ್ಯ , ಪ್ರಾಣಿ, ಜೀವಿಗಳು, ಸಸ್ಯಗಳಿಗೆ ಆಧಾರವೇ ಮಣ್ಣು . ಮಣ್ಣಿನಿಂದ  ಜೀವ, ಮಣ್ಣಿನಿಂದ ಕಾಯ, ಮಣ್ಣು  ಅಳಿದರೆ ಮಾನವ ಅಳಿದಂತೆ ಎಂದು ತಿಳಿಸಿದ ಶ್ರೀ ಪುರಂದರದಾಸರ ಮಾರ್ಮಿಕ ನಿಲುವು ನಿತ್ಯ ಸತ್ಯವಾಗಿದೆ. ಜಗತ್ತಿನ ಶೇ. 95 ರಷ್ಟು ಆಹಾರ ಮಣ್ಣಿನಿಂದಲೇ ದೊರಕುವುದು. ಈಗಾಗಲೇ ಶೇ.33 ರಷ್ಟು ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಡಿರುವುದು ಕಂಡುಬಂದಿರುವುದರಿಂದ ಉತ್ಪಾದಕತೆಯಲ್ಲಿ ಶೇ.17 ರಷ್ಟು ಕಡಿಮೆಯಾಗಿದೆ.ಮಣ್ಣು ಒಮ್ಮೆ ನಾಶವಾದರೆ, ಪುನಃ ಪಡೆಯಲಾಗದ ಅಮೂಲ್ಯ ಸಂಪತ್ತು. ಸಸ್ಯ ಸೇರಿದಂತೆ ಸಕಲ ಜೀವಿಗಳಿಗೆ ಜೀವವಾಗಿದೆ. ಮಣ್ಣಿನ ಫಲವತ್ತತೆ ಪೋಷಕಾಂಶಗಳು ಮಾತ್ರವಲ್ಲ, ಅನುಕೂಲಕರ ಜೀವಿಗಳು, ನೀರು ಹಾಗೂ ಗಾಳಿಯ ಸಂಬಂದಗಳನ್ನು ಒಳಗೊಂಡಿದೆ. ಸಜೀವ ಮಣ್ಣು  ಸಕಲ  ಜೀವಿಗಳಿಗೆ ಆಹಾರ, ಮೇವು, ವಸತಿ, ಇಂಧನ ಇತ್ಯಾದಿ ಒದಗಿಸುತ್ತಿದೆ. ಮಳೆ ನೀರನ್ನು ಸಂಗ್ರಹಿಸಿ  ಶುದ್ಧ ಮಾಡುತ್ತದೆ. ಸಾವಯವ ವಸ್ತುವನ್ನು  ಪೋಷಕಾಂಶಗಳಾಗಿ ಬದಲಿಸುತ್ತದೆ. ಪ್ರವಾಹಗಳನ್ನು ಹಾಗೂ ಹವಾಮಾನ ಏರುಪೇರನ್ನು ತಡೆಯುತ್ತದೆ. ಭೂಮಿ ಮೇಲಿನ ಜೀವ ಜಂತುಗಳಿಗೆ ಆಶ್ರಯ  ನೀಡುತ್ತದೆ. ಆದ್ದರಿಂದ ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಮಣ್ಣಿನ ದಿನವನ್ನು ಆಚರಿಸುವಂತೆ ಅಂತಾರಾಷ್ಟ್ರೀಯ ಮಣ್ಣು ವಿಜ್ಞಾನ ಸಂಸ್ಥೆ 2002ರಲ್ಲೇ ಶಿಫಾರಸು ಮಾಡಿದ್ದು, ನಂತರ 2014ರ ಡಿಸೆಂಬರ್ 5 ರಂದು ಮೊದಲ ಬಾರಿಗೆ ಅಧಿಕೃತವಾಗಿ ಅಂತರಾಷ್ಟ್ರೀಯ ಮಣ್ಣು ದಿನವನ್ನು ಆಚರಿಸಲಾಯಿತು. . ಮಣ್ಣಿನ ಸವಕಳಿ, ರಾಸಾಯನಿಕ ಗೊಬ್ಬರದ ಅಸಮತೋಲನ ಬಳಕೆಯಿಂದ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಲಕ್ಷಣಗಳು ನಾಶವಾಗುತ್ತಿದೆ. ಮಣ್ಣಿನಲ್ಲಿ ಸವುಳು, ಜವುಳು, ಆಮ್ಲ ಮತ್ತು ಕ್ಷಾರಮಯ ವಾಗಿ  ಬೆಳೆಗಳ ಉತ್ಪಾದನೆ ಕುಂಠಿತವಾಗುತ್ತಿದೆ. ಕರಗುವ ಲವಣಗಳನ್ನು ಭೂಮಿಯಲ್ಲಿ ಉಳಿಸಿಕೊಂಡಾಗ ಮಣ್ಣಿನ ಸವುಳು ಸಂಭವಿಸುತ್ತದೆ. ಇದು ನೈಸರ್ಗಿಕವಾಗಿ ಅಥವಾ ಅನುಚಿತ ಮಾನವ ಚಟುವಟಿಕೆಗಳಿಂದ, ವಿಶೇಷವಾಗಿ ಕೃಷಿ ಪದ್ಧತಿಗಳಿಂದ ಸಂಭವಿಸುತ್ತದೆ. ಇದಲ್ಲದೆ, ಕಡಿಮೆ ಉಪ್ಪು ಕರಗುವಿಕೆಯಿಂದಾಗಿ ಕೆಲವು ಭೂಮಿಗಳು ಆರಂಭದಲ್ಲಿ ಚೌಳಾಗುತ್ತದೆ ಆದ್ದರಿಂದ ಕೃಷಿಕರು ಮಣ್ಣು ಸವುಳಾಗುವುದನ್ನು ತಪ್ಪಿಸುವುದನ್ನು ಗಮನದಲ್ಲಿಟ್ಟುಕೊಂಡೇ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಬೇಕು.ಮಣ್ಣು ಸವುಕಳಿ ತಪ್ಪಿಸಲು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಅಮೆರಿಕದಲ್ಲಿ ಪೆಗಾಸಸ್ ಜಾಲ!

0

ಅಮೇರಿಕದ 11 ಸಚಿವಾಲಯಗಳ ಸರ್ಕಾರಿ ನೌಕರರ ಮೇಲೂ ಪೆಗಾಸಸ್ ಸ್ಪೈವೇರ್ ಬಳಸಿ ಬೇಹುಗಾರಿಕೆ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ.
ಉಗಾಂಡದಲ್ಲಿ ಅಮೆರಿಕಾದ ವಿವಿಧ ಇಲಾಖೆಗಳ ನೌಕರರು, ಅಧಿಕಾರಿಗಳು ಯೋಜನೆ ನಿಮಿತ್ತ ಕಾರ್ಯನಿರ್ವಹಿಸುತ್ತಿದ್ದಾಗ ಅವರ ಫೋನ್ ಗಳನ್ನು ಸಾಫ್ಟ್ವೇರ್ ಮೂಲಕ ಹ್ಯಾಕ್ ಮಾಡಲಾಗಿತ್ತು. ಈ ಮೂಲಕ ಅವರ ಸಂವಹನ, ಚಲನವಲನಗಳ ಮೇಲೆ ನಿಗಾ ಇರಿಸಲಾಗಿತ್ತು. ಈ ಬಗ್ಗೆ ಪೆಗಾಸಸ್ ಮಾತೃಸಂಸ್ಥೆ ಎನ್ ಎಸ್ ಒ ಗ್ರೂಪ್ನಿಂದ ಆಂತರಿಕ ತನಿಖೆ ಕೂಡ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಮೇರಿಕದ ಸುದ್ದಿವಾಹಿನಿಗಳಲ್ಲಿ ಈ ಬಗ್ಗೆ ವರದಿ ಕೂಡಲೇ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಪಾಕಿ ಸಾಕಿ ಅವರು, ವಾಣಿಜ್ಯ ಬಳಕೆಯ ಪೆಗಾಸಸ್ ಸಾಫ್ಟ್ವೇರ್ ಬಗ್ಗೆ ಬಹಳ ಆತಂಕ ಮೂಡಿದೆ. ಇದು ದೇಶದ ಆಂತರಿಕ ಭದ್ರತೆ ಮತ್ತು ಗುಪ್ತಚರ ವಿಭಾಗಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು ಎನ್ನುವ ಮೂಲಕ ಸಾಫ್ಟ್ವೇರ್ ಪೂರ್ಣ ನಿರ್ಬಂಧ ಹೇರುವ ಸುಳಿವು ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪಿಯು ಪರೀಕ್ಷೆ : ವೇಳೆ ಬದಲು

0

ಪ್ರಥಮ ಮತ್ತು ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಯ ಸಮಯವನ್ನ ಬದಲಾವಣೆ ಮಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ.

ನಂಬರ್ 9 ರಿಂದ 23 ರವರೆಗೆ ನಡೆಯಲಿರುವ ಮಧ್ಯವಾರ್ಷಿಕ ಪರೀಕ್ಷೆಯ ಸಮಯವನ್ನು ಈ ಹಿಂದೆ ಬೆಳಿಗ್ಗೆ 9 ರಿಂದ 12.15ರ ಬದಲಿಗೆ 9.30 ರಿಂದ 12.45 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಮಳೆಯ ಕಾರಣದಿಂದ ಸಮಯ ಬದಲಿಸಲು ಸಾರ್ವಜನಿಕರು ಅಧಿಕಾರಿಗಳನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ ಹಾಗೂ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಿದ್ದಾರೆ.