Wednesday, February 11, 2026
Wednesday, February 11, 2026
Home Blog Page 1804

ಬಡಾವಣೆಗಳ ಮೂಲಸೌಕರ್ಯದ ಬಗ್ಗೆ ಜಾಗೃತಿ ವಹಿಸಿ ಸ್ಪೀಕರ್

0

ಗ್ರಾಮ ಪಂಚಾಯಿತಿಯಲ್ಲಿ ನಿರ್ಮಾಣವಾಗುತ್ತಿರುವಂತಹ ದೊಡ್ಡ ಬಡಾವಣೆಗಳ ಮೂಲ ಸೌಕರ್ಯಕ್ಕೂ ನಿಯಮಗಳ ಅಳವಡಿಕೆಯ ಬಗ್ಗೆ ಚಿಂತನೆ ನಡೆಸಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶುಕ್ರವಾರ ನಡೆದ ಅಧಿವೇಶನದಲ್ಲಿ ಸರ್ಕಾರಕ್ಕೆ ಸೂಚಿಸಿದ್ದಾರೆ.

ನಗರಕ್ಕೆ ಹೊಂದಿಕೊಂಡ ಪಂಚಾಯಿತಿಯ ಭಾಗಗಳಲ್ಲಿ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಮುಂದೆ ಅವು ನಗರದ ವ್ಯಾಪ್ತಿಗೆ ಒಳಪಡುತ್ತವೆ. ಆಗ ಮೂಲಸೌಕರ್ಯ ಒದಗಿಸುವ ಸಮಸ್ಯೆ ಬರುತ್ತದೆ. ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಒಳಿತು ಎಂದು ಸ್ಪೀಕರ್ ತಿಳಿಸಿದ್ದಾರೆ.

ಈ ವೇಳೆ “ಯೋಜನಾ ನಿರ್ದೇಶಕರು, ಅನಧಿಕೃತ ಬಡಾವಣೆಗಳು ನಿರ್ಮಾಣವಾಗುವವರೆಗೆ ಸುಮ್ಮನಿದ್ದು, ಎಲ್ಲಾ ಮುಗಿದ ಮೇಲೆ ಎಚ್ಚೆತ್ತುಕೊಳ್ಳುತ್ತಾರೆ” ಎಂದು ಬಿಜೆಪಿಯ ಕುಮಾರ್ ಬಂಗಾರಪ್ಪ ಅವರು ಬೇಸರ ವ್ಯಕ್ತಪಡಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಯೋಜನೆ ತರವಾದರೆ ವೆಚ್ಚ ಏರಿಕೆ : ಸಿಎಂ ಆತಂಕ

0

ರಾಜ್ಯದಲ್ಲಿ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಲು ಯೋಜನಾ ವರದಿ ಸಿದ್ಧತೆ, ಭೂಸ್ವಾಧೀನ, ಆಡಳಿತ ತಾಂತ್ರಿಕ ಸಮಸ್ಯೆ ಸೇರಿದಂತೆ ನಾನಾ ಕಾರಣಗಳಿಂದ ತಡವಾಗುತ್ತಿದೆ. ಹೀಗಾಗಿ ಯೋಜನೆಗೆ ಅನುಮತಿ ದೊರೆತ ನಂತರ ಅನುಷ್ಠಾನದ ಸಂದರ್ಭದಲ್ಲಿ ವೆಚ್ಚವು ಏರಿಕೆ ಆಗುತ್ತಿದೆ. ಇದು ಹಣಕಾಸು ಇಲಾಖೆಗೆ ಹೊರೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಧನವಿನಿಯೋಗ ವಿಧೇಯಕ-2021ರ ಪರ್ಯಾಲೋಚನೆ ವೇಳೆ ಪ್ರತಿಪಕ್ಷ ಸದಸ್ಯರು ಕೇಳಿದ ಪ್ರಶ್ನೆಗೆ “ಉನ್ನತ ಅಧಿಕಾರಿಗಳ ಸಭೆ ನಡೆಸಲಾಗಿದೆ. ಆಯಾ ಕಾಲಮಿತಿಯಲ್ಲಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ ಎಲ್ಲ ರೀತಿಯ ಆಶ್ರಮ ವಹಿಸಲಾಗುತ್ತಿದೆ” ಎಂದು ಸಿಎಂ ಬೊಮ್ಮಾಯಿ ಉತ್ತರಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸಿ ಆರ್ ಪಿ ಎಫ್ ನಲ್ಲಿ ಸಂಸ್ಕಾರ ಶಾಲೆಗಳು

0

ಸಿ ಆರ್ ಪಿ ಎಫ್ ನ ಯೋಧರ ಕಲ್ಯಾಣ ವಿಭಾಗವು ಭಾರತದ ಅತಿ ದೊಡ್ಡ ಅರೆಸೇನಾ ಪಡೆಯಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿ ಆರ್ ಪಿ ಎಫ್) ಪ್ರತಿ ಘಟಕ ಹಾಗೂ ಬೆಟಾಲಿಯನ್ ಗಳಲ್ಲಿ ‘ಸಂಸ್ಕಾರ ಶಾಲೆ’ ಸ್ಥಾಪಿಸಲು ನಿರ್ಧರಿಸಿದೆ.

ಕಿರಿಯ ಯೋಧರು ಖಿನ್ನತೆಗೆ ಒಳಗಾಗುವುದನ್ನು ತಡೆಯಲು ಹಾಗೂ ಹಿರಿಯ ಮತ್ತು ಕಿರಿಯರ ನಡುವೆ ಆಪ್ತಸಮಾಲೋಚನೆಗೆ ಸೂಕ್ತ ವೇದಿಕೆ ಸೃಷ್ಟಿಸುವುದು ‘ಸಂಸ್ಕಾರ ಶಾಲೆಯ’ ಮುಖ್ಯ ಉದ್ದೇಶವಾಗಿದೆ. ನೈತಿಕ ಮೌಲ್ಯಗಳು, ರಾಷ್ಟ್ರಭಕ್ತಿ, ವೈಯಕ್ತಿಕ ವಿಚಾರ ಹಾಗೂ ದೇಶಸೇವೆಯ ಕರ್ತವ್ಯದ ನಡುವೆ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡುವ ಮೂಲಕ ಸಿ ಆರ್ ಪಿ ಎಫ್ ನ ಎಲ್ಲಾ ಬೆಟಾಲಿಯನ್ ಗಳಲ್ಲಿ ಉತ್ತಮ ಕರ್ತವ್ಯ ಸ್ನೇಹಿ ವಾತಾವರಣ ಸೃಷ್ಟಿ ಮಾಡುವುದು ಸಂಸ್ಕಾರ ಶಾಲೆಗಳ ಸ್ಥಾಪನೆಯೇ ಮುಖ್ಯಗುರಿ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

2020 ರಿಂದ ಈವರಿಗೆ ಸಿ ಆರ್ ಪಿ ಎಫ್ ನಲ್ಲಿ 101ಮಂದಿಯ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. 2017 ರಿಂದ 2019ರ ಅವಧಿಯಲ್ಲಿ 116 ಆತ್ಮಹತ್ಯೆಗಳ ಪ್ರಕರಣ ವರದಿಯಾಗಿದ್ದವು. ಕಳೆದ ವರ್ಷ ಅತಿಹೆಚ್ಚು ಸಿ ಆರ್ ಪಿ ಎಫ್ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಿರಿಯ ಅಧಿಕಾರಿಗಳನ್ನು ಚಿಂತೆಗೆ ಒಳಪಡಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ವಿಜಯ್ ಹಜಾರೆ ಟ್ರೋಫಿ ಫೈನಲ್ಸ್ ತಮೀಳ್ನಾಡು- ಹಿಮಾಚಲ ಪ್ರದೇಶ

0

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಹಂತದ ಹಣಾಹಣಿಯು ನಿನ್ನೆ ತಮಿಳುನಾಡು ಮತ್ತು ಸೌರಾಷ್ಟ್ರ ತಂಡಗಳ ನಡುವೆ ಪಂದ್ಯ ನಡೆಯಿತು. ಸೌರಾಷ್ಟ್ರದ ವಿರುದ್ಧ ತಮಿಳುನಾಡು ಜಯ ಸಾಧಿಸಿ ಫೈನಲ್ ಹಂತ ತಲುಪಿದೆ.

K.L ಸೈನಿ ಮೈದಾನದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಹಂತದ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ತಂಡ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿಕೊಂಡಿತು.

ದೊಡ್ಡ ಮೊತ್ತದ ಗುರಿ ಬೆನ್ನತ್ತಿ ಆಟ ಆಡಿದ ತಮಿಳುನಾಡು ತಂಡ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 314 ರನ್ ಬಾರಿಸಿ ಜಯ ಸಾಧಿಸಿದೆ.

ತಮಿಳುನಾಡು ತಂಡಕ್ಕೆ ಬಾಬಾ ಅಪರಾಜಿತ್ 124 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 122 ರನ್ ಗಳಿಸಿ ಕೊಂಡರು ಮತ್ತು ಬಾಬಾ ಇಂದ್ರಜಿತ್ 58 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 50 ರನ್ ಗಳನ್ನೂ ಗಳಿಸಿಕೊಂಡರು ಮತ್ತು ವಾಷಿಂಗ್ಟನ್ ಸುಂದರ್ 61 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ 70 ರನ್ ಗಳಿಸಿಕೊಂಡರು. ಇವರುಗಳ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಗೆಲುವು ಸಾಧಿಸಿ ಫೈನಲ್ ಹಂತಕ್ಕೆ ದಾಪುಗಾಲಿಟ್ಟಿದೆ. ಹಾಗೆಯೇ
ವಿಜಯ ಹಜಾರೆ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಹಂತದ 2 ನೇ ಪಂದ್ಯವು ಹಿಮಾಚಲ ಪ್ರದೇಶ ಮತ್ತು ಸರ್ವಿಸಸ್ ತಂಡಗಳ ನಡುವೆ ಪಂದ್ಯ ನಡೆಯಿತು. ಸರ್ವಿಸಸ್ ತಂಡದ ವಿರುದ್ಧ ಹಿಮಾಚಲ ಪ್ರದೇಶ ಜಯ ಸಾಧಿಸಿ ಫೈನಲ್ ಹಂತಕ್ಕೆ ಕಾಲಿಟ್ಟಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಹಿಮಾಚಲ ಪ್ರದೇಶವು ರಿಷಿ ಧವನ್ (84 ಮತ್ತು 27 ಕ್ಕೆ 4) ಅವರ ಅಲ್- ರೌಂಡ್ ಆಟದ ಬಲದಿಂದ ಹಿಮಾಚಲ ಪ್ರದೇಶ ತಂಡವು 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿಕೊಂಡು ಸರ್ವಿಸಸ್ ವಿರುದ್ಧ ಜಯ ಸಾಧಿಸಿ ಫೈನಲ್ ಹಂತಕ್ಕೆ ದಾಪುಗಾಲಿಟ್ಟಿದೆ.

282 ರನ್ ಗಳ ಗೆಲುವಿನ ಗುರಿ ಬೆನ್ನತ್ತಿ ಆಡಿದ ಸರ್ವಿಸಸ್ ಕೇವಲ 46.1 ಓವರ್ ಗಳಲ್ಲಿ 204 ರನ್ ಗಳಿಸಿ ಆಲ್ ಔಟಾಯಿತು.

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಹಂತದಲ್ಲಿ ತಮಿಳುನಾಡು ತಂಡ ಮತ್ತು ಹಿಮಾಚಲ ಪ್ರದೇಶ ತಂಡ‌ ಮುಖಾಮುಖಿಯಾಗಲಿದ್ದು ವಿಜಯ ಹಜಾರೆ ಟ್ರೋಫಿ ಕಿರೀಟ ಯಾವ ತಂಡದ ಮೇಲೆ ಬೀಳಲಿದೆ ಎಂಬುವುದನ್ನು ಕಾದು ನೋಡಬೇಕಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೊಳಚೆ ನಿವಾಸಿಗಳಿಗೆ ಬೇಗ ಮನೆ ನಿರ್ಮಿಸಿ

0

ಕೊಳಚೆ ಪ್ರದೇಶದ ನಿವಾಸಿಗಳಿಗೆ ಸರ್ಕಾರ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ ತಿಳಿಸಿದ್ದಾರೆ.

ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳನ್ನು ಕಟ್ಟಿಕೊಡಲು ತುಂಬಾ ನಿಧಾನವಾಗುತ್ತಿದೆ.1, 590 ಮನೆಗಳಲ್ಲಿ 940 ಫಲಾನುಭವಿಗಳು ಪಾವತಿಸಬೇಕಾದ ಹಣವನ್ನು ಈಗಾಗಲೇ ಕೊಳಗೇರಿ ಮಂಡಳಿ ಖಾತೆಗೆ ಜಮೆ ಮಾಡಿದ್ದಾರೆ. ಉಳಿದ 650 ಜನರು ಈಗಿನ ಎಸ್ಆರ್ ದರದ ಹಣದ ಆಧಾರದಲ್ಲಿ ಕಟ್ಟಬೇಕಾಗಿದೆ. ಈಗಿನ ಎಸ್ಆರ್ ದರಕ್ಕೂ, 2017ರ ಎಸ್ಆರ್ ದರಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ಗುತ್ತಿಗೆದಾರ ಮನೆಯನ್ನು ನಿಲ್ಲಿಸಿಬಿಟ್ಟಿದ್ದಾರೆ. ಇದರಿಂದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆ ಸಿಗುವುದು ಕನಸಿನ ಮಾತಾಗಿದೆ ಎಂದು ಧೀರರಾಜ್ ತಮ್ಮ ಆತಂಕವನ್ನು ವ್ಯಕ್ತಪಡಿಸಿದರು.

ಸರ್ಕಾರ ವ್ಯತ್ಯಾಸದ ಹಣವನ್ನು ತಾನೇ ಕಟ್ಟಿಕೊಡಬೇಕು. ಈಗಾಗಲೇ ಸಾಲಸೋಲ ಮಾಡಿ ಹಣ ಕಟ್ಟಿದವರು ಮಾನಸಿಕವಾಗಿ ನೊಂದಿದ್ದಾರೆ. ಮನೆ ಯಾವಾಗ ಸಿಗುತ್ತದೆಯೋ ಎಂದು ಕಾಯುತ್ತಿದ್ದಾರೆ. ಬ್ಯಾಂಕ್ ನಿಂದ ಸಾಲ ಪಡೆಯುವುದು ಕೂಡ ಕಷ್ಟವಾಗುತ್ತಿದೆ. ದಾಖಲೆಗಳು ಸಿಗುತ್ತಿಲ್ಲ. ಸರ್ಕಾರ ಮಧ್ಯಪ್ರವೇಶ ಮಾಡಬೇಕು. ತಕ್ಷಣ ಕಾಮಗಾರಿ ಆರಂಭಿಸಬೇಕು ಎಂದು ಧೀರರಾಜ್ ಅವರು ಆಗ್ರಹಿಸಿದರು.

ಕೊಳಚೆ ಪ್ರದೇಶದ ನಿವಾಸಿಗಳಿಗೆ 600 ಚದರ ಅಡಿ ಅಳತೆಯ ನಿವೇಶನ ನೀಡಲು ಪರಿಶಿಷ್ಟ ಹಾಗೂ ಅಂಗವಿಕಲರಿಂದ ಐದು ಸಾವಿರ ಇತರ ವರ್ಗದಿಂದ ಹತ್ತು ಸಾವಿರ ಕಟ್ಟಿಸಿಕೊಂಡು ಹಕ್ಕು ಪತ್ರ ನೀಡಲಾಗುತ್ತಿದೆ.

ಸರ್ಕಾರ ಈಗ 1,200 ಚದರ ಅಡಿ ಅಳತೆಯ ನಿವೇಶನ ನೀಡಲು ಆದೇಶ ಹೊರಡಿಸಿದೆ. ಆದರೆ, ಕೊಳಚೆ ನಿರ್ಮೂಲನ ಮಂಡಳಿ ಕೇವಲ 600 ಚದರ ಅಡಿಯ ನಿವೇಶನ ನೀಡುತ್ತಿದೆ. ಸಚಿವ ಈಶ್ವರಪ್ಪ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭೀಮಣ್ಣ, ಸುರೇಶ್, ರಘುಪತಿ, ಪ್ರಸಾದ್ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಖ್ಯಾತ ಗಾಯಕಿ ಶ್ರೀಮತಿ ಲೀಲಾವತಿ : ಕೆಎಸ್ ನ ಪ್ರಶಸ್ತಿ

0

ಸುಗಮ ಸಂಗೀತ ಕ್ಷೇತ್ರದ ಖ್ಯಾತ ಗಾಯಕಿ ಎಚ್. ಆರ್. ಲೀಲಾವತಿಯವರನ್ನು ನರಸಿಂಹಸ್ವಾಮಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನರಸಿಂಹಸ್ವಾಮಿ ಕಾವ್ಯಗಾಯನ ಪ್ರಶಸ್ತಿ 2020ಕ್ಕೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು 25 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಡಿಸೆಂಬರ್ 27ರಂದು ಸಂಜೆ ಐದು ಮೂವತ್ತಕ್ಕೆ ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತೆ ಬಿಆರ್ ಪೂರ್ಣಿಮಾ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಟ್ರಸ್ಟ್ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಇನ್ನು ಟ್ರಸ್ಟ್ ನ ಸದಸ್ಯ ಸಂಚಾಲಕ ನಾರಾಯಣ ಕಿಕ್ಕೇರಿ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಉತ್ತರ ಕರ್ನಾಟಕ: ಚರ್ಚೆಗೆ ಸಮಾಯಾಭಾವ

0

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಲು ಹೆಚ್ಚು ಸಮಯ ನೀಡಲಿಲ್ಲ ಎಂದು ಆಕ್ರೋಶಗೊಂಡ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಸದಸ್ಯರ ಧರಣಿಯ ಮಧ್ಯೆ ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೆ ತೆರೆ ಬಿದ್ದಿದೆ.

ಸುಮಾರು ಒಂದು ಗಂಟೆಗಳ ಕಾಲ ಮಾತನಾಡಿದ ಸಿದ್ದರಾಮಯ್ಯ, ‘ಉತ್ತರ ಕರ್ನಾಟಕ ಭಾಗದ ಇನ್ನೂ ಅನೇಕ ಸಮಸ್ಯೆಗಳು ಮತ್ತು ನೀರಾವರಿ ಯೋಜನೆಗಳ ಬಗ್ಗೆ ಮಾತನಾಡ ಬೇಕಿದೆ. ಆದ್ದರಿಂದ ಇನ್ನೂ ಒಂದು ಗಂಟೆಗಳ ಕಾಲ ಮಾತನಾಡಲು ಅವಕಾಶ ನೀಡಿ ಎಂದು ಹೇಳಿದರು. ಆದರೆ ಮಾತು ಮುಂದುವರಿಸಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ತಾವೇ ನೇರವಾಗಿ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಕೂತರು. ಕಾಂಗ್ರೆಸ್ ನ ಇತರೆ ಸದಸ್ಯರು ಕೂಡ ಅವರೊಂದಿಗೆ ಜೊತೆಗೂಡಿದರು.

ಈ ಹಂತದಲ್ಲಿ ಉತ್ತರ ನೀಡಲು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮುಂದಾದಾಗ ಅವರಿಗೆ ಘೋಷಣೆಗಳನ್ನು ಮೂಲಕ ತಿರುಗೇಟು ನೀಡಿದರು.
ಬೇಕೇ ಬೇಕು ಚರ್ಚೆ ಬೇಕು. ದಿಕ್ಕಾರ ದಿಕ್ಕಾರ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ. ಉತ್ತರ ಕರ್ನಾಟಕ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ಕಾರಜೋಳ ಅವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಸರ್ಕಾರದ ಉತ್ತರ ಕೇಳದೆ ಪಲಾಯನ ಮಾಡುತ್ತಿದ್ದೀರಿ. ಈ ಭಾಗಕ್ಕೆ ಅನ್ಯಾಯ ಆಗಿದ್ದರೆ ಅದು ಕಾಂಗ್ರೆಸ್ ನಿಂದಲೇ. ಕೃಷ್ಣ ಮೇಲ್ದಂಡೆ ಗೆ ವರ್ಷಕ್ಕೆ 50 ಸಾವಿರ ಕೋಟಿ ರೂಪಾಯಿ ಕೊಡ್ತೀರಿ ಎಂದು ಕೇವಲ 7,728 ಕೋಟಿ ರೂಪಾಯಿ ಕೊಟ್ಟಿದ್ದೀರಿ. ನಿಮಗೆ ನಾಚಿಕೆ ಆಗಬೇಕು. ಇದರ ಬಗ್ಗೆ ಮಾತನಾಡಲು ನಿಮಗೆ ನೈತಿಕ ಅಧಿಕಾರ ಇಲ್ಲ ಎಂದು ಕಾರಜೋಳ ಅವರು ಹೇಳಿದರು.

ಬರೀ ಸುಳ್ಳು ಬರೀ ಸುಳ್ಳು ಕೈಗೊಂಬೆ ಆರ್ ಎಸ್ಎಸ್ ಕೈಗೊಂಬೆ ಎಂದು ಕಾಂಗ್ರೆಸ್ನ ಕೃಷ್ಣಬೈರೇಗೌಡ, ಡಾ. ರಂಗನಾಥ್, ಯತೀಂದ್ರ ಸಿದ್ದರಾಮಯ್ಯ ಮುಂತಾದವರು ಘೋಷಣೆಗಳನ್ನು ತಮ್ಮ ಮುಂದುವರಿಸಿದರು.

ಇಷ್ಟಕ್ಕೆ ಸಿದ್ದರಾಮಯ್ಯ ಅವರು ಸುಮ್ಮನಾಗಲಿಲ್ಲ. ಎರಡೂವರೆ ವರ್ಷಗಳ ನಂತರ ಬೆಳಗಾವಿ ಅಧಿವೇಶನ ನಡೆದಿದೆ. ಉತ್ತರ ಕರ್ನಾಟಕದ ಬಗ್ಗೆ ಮಾತನಾಡಲು ಹೆಚ್ಚಿನ ಕಾಲಾವಕಾಶ ನೀಡಬೇಕು. ಭೋಜನ ವಿರಾಮದ ನಂತರವೂ ಕೂಡ ಕಲಾಪ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಆದರೆ ಅದಕ್ಕೆ ಅವಕಾಶವನ್ನು ನೀಡಿದ ಸಭಾಧ್ಯಕ್ಷರು ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೂ ಮುಂದೂಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅತಿಥಿ ಉಪನ್ಯಾಸಕ ಆತ್ಮಹತ್ಯೆ: ಪರಿಹಾರಕ್ಕೆ ಮನವಿ

0

ರಾಜ್ಯ ಸರ್ಕಾರದ ನಿರ್ಲಕ್ಷ್ಯಯಿಂದ ಅತಿಥಿ ಉಪನ್ಯಾಸಕರ ಕುಟುಂಬ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ತಕ್ಷಣ ಬೇಡಿಕೆ ಈಡೇರಿಸಬೇಕು ಎಂದು ಅತಿಥಿ ಉಪನ್ಯಾಸಕರ ಸಂಘ ಆಗ್ರಹಿಸಿತ್ತು.

ತೀರ್ಥಹಳ್ಳಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿಯೆದುರು ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದ್ದಾರೆ.

ಕೆಲವು ವರ್ಷಗಳಿಂದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸತತವಾಗಿ ಸೇವೆ ಸಲ್ಲಿಸಿದ್ದೇವೆ ಉಪನ್ಯಾಸಕರಿಗೆ ಸೇವಾ ಭದ್ರತೆ ಸಿಗುತ್ತಿಲ್ಲ. ಅತಿಥಿ ಉಪನ್ಯಾಸಕರ ಕರ್ತವ್ಯವನ್ನು ಸರ್ಕಾರ ಕೇವಲವಾಗಿ ಪರಿಗಣಿಸಿದೆ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ತೀರ್ಥಹಳ್ಳಿ ಪಟ್ಟಣದ ಬಾಳೆಬೈಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಹರ್ಷ ಶಾನುಭೋಗ್ ಸರ್ಕಾರದ ಧೋರಣೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಗುಜರಿ ನೀತಿ ಬರುವ ಏಪ್ರಿಲ್ ನಿಂದ ಜಾರಿಗೆ

0

ವಾಹನಗಳ ಗುಜರಿ ನೀತಿಯು 2022ರ ಏಪ್ರಿಲ್ ಒಂದರಿಂದ ರಾಷ್ಟ್ರದಾದ್ಯಂತ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರ 2021ರ ಬಜೆಟ್ ನಲ್ಲೇ ಈ ನೀತಿಯನ್ನು ಘೋಷಿಸಿದೆ. ಆದರೆ, ಅದರ ಅನುಷ್ಠಾನಕ್ಕೆ ಅಗತ್ಯವಿರುವ ಪೂರ್ವಸಿದ್ಧತೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನೂ ಪೂರ್ಣಗೊಳಿಸಿಲ್ಲ. ಇದು ವಾಹನ ಮಾಲೀಕರನ್ನು ಗೊಂದಲಕ್ಕೆ ಕಾರಣವಾಗಿದೆ.

2021ರ ಬಜೆಟ್ನಲ್ಲಿ ಗುಜರಿ ನೀತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಈ ನೀತಿ ಜಾರಿ ಸಂಬಂಧ ನಿಯಮಗಳನ್ನು ರೂಪಿಸಿ, ಸೆಪ್ಟೆಂಬರ್ 23 ಹಾಗೂ ಅಕ್ಟೋಬರ್ 4 ರಂದು ಎರಡು ಸೂಚನೆಗಳನ್ನು ಹೊರತುಪಡಿಸಿದೆ. ಆದರೆ ಎರಡು ಸರ್ಕಾರಗಳು ನೀತಿ ಜಾರಿಗೆ ಸಿದ್ಧತೆಯಲ್ಲಿ ಹಂತದಲ್ಲಿ ಇದೆ. ಏಪ್ರಿಲ್ ನಿಂದ ಜಾರಿಗೊಳಿಸುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಗುಜರಿ ನೀತಿ ಜಾರಿಗೆ ಬಂದ ನಂತರ ಹದಿನೈದು ವರ್ಷ ಮೀರಿದ ಎಲ್ಲರೀತಿಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕಿ, ಸವಲತ್ತುಗಳನ್ನು ಪಡೆಯಲು ಇಚ್ಚಿಸುವವರು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೆ ಬರಲಿದೆ.

ಅದಕ್ಕೆ ಬೇಕಿರುವ ಪೋರ್ಟಲ್ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಿಲ್ಲ. ಜನ ಕಚೇರಿಗೆ ಅಲೆದಾಡುವುದು ತಪ್ಪಲಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿ ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

2022ರ ಏಪ್ರಿಲ್ 1 ರಿಂದಲೇ ಗುಜರಿ ನೀತಿ ಜಾರಿಗೆ ಬರಲಿದೆ ಎಂದು ಈಗಲೇ ಹೇಳಲಾಗದು. ಇದಕ್ಕೆ ಸಾಕಷ್ಟು ಪೂರ್ವತಯಾರಿ ಅಗತ್ಯವಿದೆ. ನೀತಿಯನ್ನು ಏಕಾಏಕಿ ಕಾರ್ಯರೂಪಕ್ಕೆ ತರುವುದು ಕಷ್ಟ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಹದಿನೈದು ವರ್ಷ ಮೀರಿದ ವಾಹನಗಳನ್ನು ಹಸಿರು ತೆರಿಗೆ ಪಾವತಿಸಿ ಬಳಸಲು ನೀತಿಯಲ್ಲಿ ಅವಕಾಶ ಇದೆ. ವಾಹನಗಳು ಸುಸ್ಥಿತಿಯಲ್ಲಿ ಎಂಬುದನ್ನು ತಪಾಸಣೆಗೆ ಒಳಪಡಿಸಲು ಸಂಪೂರ್ಣ ಸ್ವಯಂ ಚಾಲಿತ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಬೇಕು. ಈ ಬಗ್ಗೆ ತಯಾರಿ ನಡೆದಿಲ್ಲ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಒಮಿಕ್ರಾನ್:ರಾಜ್ಯಗಳಿಗೆ ಕೇಂದ್ರ ಮಾರ್ಗಸೂಚಿ

0

ಕೇಂದ್ರ ಸರ್ಕಾರವು ‘ಕೋವಿಡ್ ನ ರೂಪಾಂತರಿ ವೈರಸ್ ಡೆಲ್ಟಾಗಿಂತಲೂ ಅತೀ ವೇಗವಾಗಿ ಹರಡುತ್ತಿರುವ ಓಮಿಕ್ರಾನ್ ವಿಶ್ವದಾದ್ಯಂತ ಕೊರುನಾ ನಾಲ್ಕನೇ ಅಲೆ ಸೃಷ್ಟಿಸುವ ಆತಂಕ ಮೂಡಿಸಿದೆ. ಇಂತಹ ಸಮಯದಲ್ಲಿ ನಾವು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ’ ಎಂದು ಎಚ್ಚರಿಕೆ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು “ದೇಶದಲ್ಲಿ ಕೇವಲ 24 ಗಂಟೆಗಳಲ್ಲಿ 112 ಓಮಿಕ್ರಾನ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 358 ಏರಿಕೆಯಾಗಿದೆ. ಹೀಗಾಗಿ ಓಮಿಕ್ರಾನ್ ಪ್ರಸರಣವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಜಗತ್ತು ನಾಲ್ಕನೇ ಅಲೆಯನ್ನು ಎದುರಿಸುತ್ತಿದ್ದರೂ, ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳ ಆಪಾದನೆಯಿಂದ ಭಾರತದಲ್ಲಿ ಮೂರನೇ ಅಲೆಯೂ ಆರಂಭವಾಗಿಲ್ಲ. ಈ ಹಂತದಲ್ಲಿ ಸ್ವಲ್ಪ ಮೈಮರೆತರೂ ಒಮಿಕ್ರೋನ್ ಅತ್ಯಂತ ವೇಗವಾಗಿ ಹರಡುವ ಅಪಾಯ ಇದೆ” ಎಂದು ತಿಳಿಸಿದರು.

ದೆಹಲಿ ಮತ್ತು ಮಹಾರಾಷ್ಟ್ರಗಳಲ್ಲಿ ಕೆಲವು ದಿನಗಳಿಂದ ಸತತವಾಗಿ ಕೊರೋನಾ ಸೋಂಕು ಏರಿಕೆಯಾಗಿದೆ. ದೆಹಲಿಯಲ್ಲಿ 180 ಪ್ರಕರಣಗಳು ದಾಖಲಾಗಿರುವುದು, ಆರು ತಿಂಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ಮುಂಬೈನಲ್ಲಿ 24 ಗಂಟೆ ಅವಧಿಯೊಳಗೆ 480 ಜನರಲ್ಲಿ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದು ಕಳೆದ 78 ಗಂಟೆಗಳಲ್ಲಿ ಗರಿಷ್ಠ ಏರಿಕೆಯಾಗಿದೆ. ಕೊರೊನಾ ಸೋಂಕು ಏರಿಕೆಯಾದ ಪರಿಣಾಮ ದೆಹಲಿಯಲ್ಲಿ ಕ್ರಿಸ್ಮಸ್ ಮತ್ತು ಹೊಸವರ್ಷಾಚರಣೆಯನ್ನು ನಿಷೇಧಿಸಿದೆ. ಮಹಾರಾಷ್ಟ್ರದಲ್ಲಿ 9 ರಿಂದ ಬೆಳಗ್ಗೆ 8 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ. ಹರಿಯಾಣದಲ್ಲಿ ಲಸಿಕೆ ಪಡೆಯದ ವ್ಯಕ್ತಿಗಳಿಗೆ ಸಾರ್ವಜನಿಕ ಸ್ಥಳದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ.

ಕೋವಿಡ್ ರೂಪಾಂತರಿ ಓಮಿಕ್ರಾನ್ ಸೋಂಕು ಹೆಚ್ಚಾಗಿ ಕಂಡಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪಂಚ ಸೂತ್ರ ಗಳನ್ನು ಹೊರಡಿಸಿದೆ. ನೈಟ್ ಕರ್ಫ್ಯೂ ಅಗತ್ಯತೆ ಪರಿಶೀಲಿಸಿ ಕೂಡಲೇ ಜಾರಿ ಮಾಡಬೇಕು. ಜನಜಂಗುಳಿ ಬೇಡ, ಧಾರ್ಮಿಕ, ಸಾಮಾಜಿಕ, ರಾಜಕೀಯ ಸಭೆಗಳ ನಿಯಂತ್ರಣ ಕಡ್ಡಾಯ. ಜಿಲ್ಲಾವಾರು ಆಸ್ಪತ್ರೆಗಳಲ್ಲಿ ಸೋಂಕಿತರ ಪ್ರಾಥಮಿಕ ಚಿಕಿತ್ಸೆ ಅಗತ್ಯ ವ್ಯವಸ್ಥೆ ಉನ್ನತೀಕರಿಸಿ, ಬೆಡ್ ಗಳ ಸಂಖ್ಯೆ ಕೂಡ ಹೆಚ್ಚಿಸಬೇಕು. ಜಿಲ್ಲಾವಾರು ಆಸ್ಪತ್ರೆಗಳಿಗೆ ಅಗತ್ಯವಾದ ವೈದ್ಯಕೀಯ ಸಾಧನಗಳನ್ನು ತ್ವರಿತಗತಿಯಲ್ಲಿ ಪೂರೈಕೆ ಮಾಡಬೇಕು. ಗ್ರಾಮೀಣ ಭಾಗಕ್ಕೆ ಸೋಂಕು ಲಗ್ಗೆ ಇಡದಂತೆ ನಿಗಾವಹಿಸಬೇಕು. ಕೊರೋನಾ ಮುನ್ನೆಚ್ಚರಿಕೆ ಕ್ರಮಗಳ ತಮಾ ಸುಧಾರಣೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯಗೊಳಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿ ಹೊರಡಿಸಿದೆ.

‘ಕರ್ನಾಟಕ, ಕೇರಳ ಮಹಾರಾಷ್ಟ್ರ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಒಟ್ಟು 20 ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಾರದ ಸರಾಸರಿ ಪಾಸಿಟಿವ್ 5-10% ನಡುವೆಯಿದೆ ಇದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.