ಸೂಪರ್ನೋವಾ, ಬಾಹ್ಯಾಕಾಶ ಅವಶೇಷಗಳು, ಕ್ಷುದ್ರಗ್ರಹಗಳು ಹಾಗೂ ಇತರ ಆಕಾಶ ವಸ್ತುಗಳನ್ನು ವೀಕ್ಷಿಸಲು ಭಾರತವು ತನ್ನ ಮೊದಲ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ಅನ್ನು ಉತ್ತರಾಖಂಡದಲ್ಲಿ ಸ್ಥಾಪಿಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಇದು ಏಷ್ಯಾದ ಅತಿ ದೊಡ್ಡ ದೂರದರ್ಶಕವಾಗಿದೆ.
ಭಾರತ, ಬೆಲ್ಜಿಯಂ ಮತ್ತು ಕೆನಡಾದ ಖಗೋಳಶಾಸ್ತ್ರಜ್ಞರು ಜಂಟಿಯಾಗಿ ಇದನ್ನು ನಿರ್ಮಿಸಿದ್ದಾರೆ. ಇದು ಉತ್ತರಾಖಂಡದ ನೈನಿತಾಲ್‌ನ ದೇವಸ್ಥಾಲ್ ವೀಕ್ಷಣಾಲಯದಲ್ಲಿ 2,450 ಮೀಟರ್ ಎತ್ತರದಲ್ಲಿದೆ.