Friday, September 11, 2026
Friday, September 11, 2026

District Consumer Disputes Redressal Commission ಸೇವಾ ನ್ಯೂನತೆ : ವಿಮಾ ಕಂಪನಿಗೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ

Date:

District Consumer Disputes Redressal Commission ಚಿಕಿತ್ಸೆಯ ಬಿಲ್ ಮರುಪಾವತಿ ಮಾಡದೆ ಸೇವಾ ನ್ಯೂನತೆ ಎಸಗಿದ ನಿವ ಭೂಪ ಹೆಲ್ತ್ ಇನ್ಶೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ಹಾಗೂ ಬಡ್ಡಿ ಸಹಿತ ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ಶಿವಮೊಗ್ಗ ಗಾಂಧಿ ಬಜಾರ್‌ನ ನಿವಾಸಿ ವಿವೇಕ ಸಿ.ಬಿ. ಎಂಬುವವರು 2021ರಲ್ಲಿ ರೂ. 53,854 ಪಾವತಿಸಿ, 2024 ರವರೆಗಿನ ಅವಧಿಗೆ ನಿವ ಭೂಪ ಹೆಲ್ತ್ ಇನ್ಸೂರೆನ್ಸ್ ಪಾಲಿಸಿ ಪಡೆದಿದ್ದರು. 2023ರಲ್ಲಿ ಅನಾರೋಗ್ಯದ ಕಾರಣ ಅವರು ಶಿವಮೊಗ್ಗದ ಅಶೋಕ ಸಂಜೀವಿನಿ ಆಸ್ಪತ್ರೆಯಲ್ಲಿ ಎರಡು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆಗೆ ರೂ. 25,000 ವರೆಗೆ ಕಂಪನಿಯು ಅನುಮೋದನೆ ನೀಡಿದ್ದರೂ, ಅಂತಿಮ ಬಿಲ್ ವೆಚ್ಚವಾದ ರೂ. 19,342 ಅನ್ನು ಆಸ್ಪತ್ರೆಗೆ ಪಾವತಿಸಿರಲಿಲ್ಲ.
ವಿಮಾ ಕಂಪನಿಯು ಹಲವು ಬಾರಿ ವಿನಂತಿಸಿಕೊಂಡರೂ ಹಾಗೂ 2025ರಲ್ಲಿ ಕಾನೂನು ನೋಟೀಸ್ ನೀಡಿದರೂ ಹಣ ಪಾವತಿಸದ ಕಾರಣ, ದೂರುದಾರರು ತಮ್ಮ ವಕೀಲರ ಮೂಲಕ ಜಿಲ್ಲಾ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.
ದೂರು ಮತ್ತು ದಾಖಲೆಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ. ಯೋಗಾನಂದ ಅವರನ್ನೊಳಗೊಂಡ ಪೀಠವು, ವಿಮಾ ಸಂಸ್ಥೆಯಿಂದ ಸೇವಾ ನ್ಯೂನತೆಯಾಗಿರುವುದು ಸಾಬೀತಾಗಿದೆ ಎಂದು ತೀರ್ಪು ನೀಡಿದ್ದು, ಈ ಕೆಳಗಿನಂತೆ ಆದೇಶಿಸಿದೆ:
ವಿಮಾ ಕಂಪನಿಯು ಚಿಕಿತ್ಸಾ ವೆಚ್ಚ ರೂ. 19,342 ಅನ್ನು ದಿನಾಂಕ 24/11/2023 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 8 ರಷ್ಟು ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ಶೇ. 10 ರಷ್ಟು ಬಡ್ಡಿಯೊಂದಿಗೆ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ.
District Consumer Disputes Redressal Commission ದೂರುದಾರರಿಗೆ ಉಂಟಾದ ಮಾನಸಿಕ ಹಿಂಸೆಗೆ ರೂ. 10,000 ದಂಡ.
ದೂರಿನ ಖರ್ಚಿಗಾಗಿ ಪ್ರತ್ಯೇಕವಾಗಿ ರೂ. 10,000 ಪಾವತಿಸಬೇಕು.
ನಿವ ಭೂಪ ಕಂಪನಿಯ ನವದೆಹಲಿ, ಗುರುಗ್ರಾಮ್ ಹಾಗೂ ಶಿವಮೊಗ್ಗ ಶಾಖೆಯ ಅಧಿಕಾರಿಗಳು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಈ ಪರಿಹಾರವನ್ನು ನೀಡಬೇಕೆಂದು ಆಯೋಗ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ

S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ...

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...