Wednesday, February 11, 2026
Wednesday, February 11, 2026
Home Blog Page 1805

ಪ್ರೊ ಕಬಡ್ಡಿ ದಬಾಂಗ್ ದೆಹಲಿ,ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್ ಜಯದ ಹೆಜ್ಜೆ

0

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಆವರಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಶುಕ್ರವಾರ 6 ತಂಡಗಳ ನಡುವೆ 3 ಪಂದ್ಯಗಳು ನಡೆದವು.

ಮೊದಲನೇ ಪಂದ್ಯವು:
ಯು ಮುಂಬಾ(27) ಮತ್ತು ದಬಾಂಗ್ ದೆಹಲಿ (31) ತಂಡಗಳ ನಡುವೆ ಪಂದ್ಯ ನಡೆಯಿತು. ಯು ಮುಂಬಾ ತಂಡವು ದಬಾಂಗ್ ದೆಹಲಿ ತಂಡದ ವಿರುದ್ಧ ಸೋಲು ಕಂಡಿತು.
ದಬಾಂಗ್ ದೆಹಲಿ ತಂಡದ ಅಮೋಘ ದಾಳಿ ಸಂಘಟಿಸಿದ ನವೀನ್ ಕುಮಾರ್ ಆಟದ ಬಲದಿಂದ ದಬಾಂಗ್ ದೆಹಲಿ ತಂಡವು ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು,ದೆಹಲಿ ತಂಡವು (31-27) ರಿಂದ ಯು ಮುಂಬಾ ವಿರುದ್ಧ ಜಯಿಸಿತು.ನವೀನ್ ಕುಮಾರ್ ಒಟ್ಟು 17 ಅಂಕಗಳನ್ನು ಗಳಿಸಿದರು.ಅವರು ರೈಡಿಂಗ್ ನಲ್ಲಿ 12 ಪಾಯಿಂಟ್ ಹಾಗೂ ಟ್ಯಾಕಲ್ ನಲ್ಲಿ 11 ಪಾಯಿಂಟ್ ಮತ್ತು 4 ಪಾಯಿಂಟ್ ಬೋನಸ್ ಅಂಕಗಳನ್ನು ಗಿಟ್ಟಿಸಿಕೊಂಡರು, ಜೋಗಿಂದರ್ ಸಿಂಗ್ ನರ್ವಾಲ್ 4 ಟ್ಯಾಕಲ್ ಪಾಯಿಂಟ್ ಗಳಿಸಿ ತಂಡಕ್ಕೆ ಸೇರಿಸಿದರು.

ಎರಡನೇ ಪಂದ್ಯವು:
ತಮಿಳ್ ತಲೈವಾರ್ಸ್(30) ಮತ್ತು ಬೆಂಗಳೂರು ಬುಲ್ಸ್ (38) ತಂಡಗಳ ನಡುವೆ ಪಂದ್ಯ ನಡೆಯಿತು. ತಮಿಳ್ ತಲೈವಾರ್ಸ್ ತಂಡದ ವಿರುದ್ಧ ಬೆಂಗಳೂರು ರೋಚಕ ಜಯ ಸಾಧಿಸಿದೆ.
ನಾಯಕ ಪವನ್ ಶೆರಾವತ್ ಮಿಂಚಿನ ಆಟದ ಬಲದಿಂದ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ನಲ್ಲಿ 8 ಅಂಕಗಳಿಂದ ಮೊದಲ ಜಯ ಸಾಧಿಸಿ ಖಾತೆ ತೆರೆದುಕೊಂಡಿತು.
ಬುಲ್ಸ್ ತಂಡವು ಮೊದಲ ಪಂದ್ಯದಲ್ಲೇ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ಪವನ್ ಚುರುಕಿನ ದಾಳಿ ನಡೆಸಿ 9 ಪಾಯಿಂಟ್ ಗಳಿಸಿದರು.
ತಲೈವಾರ್ಸ್ ತಂಡವು ಮೊದಲಾರ್ಧದಲ್ಲಿ ಕಠಿಣ ಪೈಪೋಟಿಯೊಡ್ಡಿತ್ತು.ತಂಡದ ಭವಾನಿ ರಜಪೂತ್ ದಾಳಿಯಲ್ಲಿ 8 ಅಂಕಗಳನ್ನು ಗಳಿಸಿದರು. ರಕ್ಷಣಾ ವಿಭಾಗದಲ್ಲಿ ಮಿಂಚಿದ ಸಾಗರ್ 5 ಅಂಕ ಪಡೆದರು.
ಬುಲ್ಸ್ ತಂಡವು ಒಟ್ಟು 16 ಬಾರಿ ದಾಳಿ ಮಾಡಿ 8 ರಲ್ಲಿ ಯಶಸ್ವಿಯಾದರು.2 ಬಾರಿ ಖಾಲಿ ಕೈ ನಲ್ಲಿ ಮರಳಿದರು.ಅವರಿಗೆ ಉತ್ತಮ ಜೊತೆ ನೀಡಿದ ಚಂದ್ರನ್ ರಂಜೀತ್ 7 ಅಂಕ ಗಳಿಸಿದರು,ರಕ್ಷಣಾ ವಿಭಾಗದಲ್ಲಿ ಮಿಂಚಿದ ಸೌರಬ್ ನಂದಾಲ್ 5 ಅಂಕ ಗಳಿಸಿ ಮಿಂಚಿದರು.

ಮೂರನೇ ಪಂದ್ಯವು:
ಬೆಂಗಾಲ್ ವಾರಿಯರ್ಸ್(31) ಮತ್ತು ಗುಜರಾತ್ ಜೆಯಂಟ್ಸ್ (28) ತಂಡಗಳ ನಡುವೆ ಪಂದ್ಯ ನಡೆಯಿತು.ಬೆಂಗಾಲ್ ವಾರಿಯರ್ಸ್ ತಂಡವು ಗುಜರಾತ್ ಜೆಯಂಟ್ಸ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಬಲಿಷ್ಠ ಎದುರಾಳಿಗಳ ವಿರುದ್ಧ ಚಾಕಚಕ್ಯ ಆಟವಾಡಿದ ಬೆಂಗಾಲ್ ವಾರಿಯರ್ಸ್ ಗೆಲುವಿನ ನಗೆ ಸೂಚಿತು. 7 ಟಚ್ ಪಾಯಿಂಟ್ ಗಳೊಂದಿಗೆ 8 ಪಾಯಿಂಟ್ ಕಲೆ ಹಾಕಿದ ಮಣಿಂದರ್ ಸಿಂಗ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊಹಮ್ಮದ್ ನಬಿಭಕ್ಷ್ ಮತ್ತು ರಿಂಕು ನರ್ವಾಲ್ ಕ್ರಮವಾಗಿ 4 ಮತ್ತು 3 ಪಾಯಿಂಟ್ಸ್ ಗಳಿಸಿದರು. ಬದಲಿ ಆಟಗಾರರಾಗಿ ಬಂದ ಆಕಾಶ್ ಮತ್ತು ರೋಹಿತ್ ತಲಾ 4 ಪಾಯಿಂಟ್ ಗಳನ್ನು ತಂಡಕ್ಕೆ ನೀಡಿದರು.

ಇಂದು ನಡೆಯಲಿರುವ ತಂಡಗಳೆಂದರೆ:
೧. ಯು.ಪಿ ಯೋಧಾ ಮತ್ತು ಪಟ್ನಾ ಪೈರೇಟ್ಸ್
೨.ತೆಲುಗು ಟೈಟನ್ಸ್ ಮತ್ತು ಪುಣೇರಿ ಪಲ್ಟನ್
೩. ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಹರಿಯಾಣ ಸ್ಟೀಲರ್ಸ್

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಬಹುಮತ ಮುಜುಗರ: ಪಾರಾದ ಸರ್ಕಾರ

0

ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆದ ರಾಜ್ಯಸರ್ಕಾರಕ್ಕೆ ವಿಧಾನಪರಿಷತ್ತಿನಲ್ಲಿ ಭಾರಿ ಗೊಂದಲ ಎದುರಾಗಿದೆ. ಮತಾಂತರ ನಿಷೇಧ ವಿಧೇಯಕಕ್ಕೆ ಪ್ರತಿಪಕ್ಷಗಳ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ರಾಜ್ಯ ಸರ್ಕಾರ ಈ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸುವುದಿಲ್ಲ ಎಂದು ತಿಳಿಸಿದೆ.

ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಪರಿಷತ್ತಿನಲ್ಲಿ ಬಿಜೆಪಿಗೆ ಬಹುಮತ ಇಲ್ಲ. ವಿಧೇಯಕ ಮಂಡನೆಯಾದರೆ ಬಹುಮತವಿಲ್ಲ ದಂತಾಗಿ ಸರ್ಕಾರಕ್ಕೆ ಮುಜುಗರ ಉಂಟಾಗುತ್ತಿತ್ತು. ಹೀಗಾಗಿ ಸರ್ಕಾರದ ಅಜೆಂಡಾದಲ್ಲಿದ್ದರೂ ಸಹ ಮತಾಂತರ ನಿಷೇಧ ವಿಧೇಯಕ ಮನೆಯಿಂದ ತಪ್ಪಿಸಿಕೊಳ್ಳಲು ಸರ್ಕಾರ ವಿಳಂಬ ನೀತಿ ತಂತ್ರವನ್ನು ಅನುಸರಿಸಿದೆ.

ಶುಕ್ರವಾರ ಕಲಾಪದ ಕೊನೆಯ ದಿನ ಆದ್ದರಿಂದ ಮಧ್ಯಾಹ್ನದ ಬಳಿಕ ಕಲಾಪ ಇರುವುದಿಲ್ಲ ಎಂಬ ನೆಲೆಯಲ್ಲಿ ಕೆಲವು ಆಡಳಿತ ಪಕ್ಷದ ಸದಸ್ಯರೇ ತಮ್ಮ ಕ್ಷೇತ್ರಗಳತ್ತ ಮುಖಮಾಡಿದ್ದಾರೆ. ಪ್ರತಿಪಕ್ಷದ ಸದಸ್ಯರು ಕೂಡ ಊರುಗಳತ್ತ ಹೊರಟಿದ್ದಾರೆ. ಆದರೆ ಸದಸ್ಯರ ಅನುಪಸ್ಥಿತಿಯನ್ನು ಬಿಜೆಪಿ ಸರ್ಕಾರ ಲಾಭ ಪಡೆಯಲು ಹೆಚ್ಚಿಸಬಹುದು ಎಂದು ತಿಳಿದು ಪ್ರತಿಪಕ್ಷದ ಸದಸ್ಯರಲ್ಲಿ ಹೆಚ್ಚಿನವರು ಸುವರ್ಣಸೌಧದಲ್ಲಿ ಉಳಿದಿದ್ದರು. ಸದನವನ್ನು ಮಧ್ಯಾಹ್ನದ ಬಳಿಕ ನಿಗದಿತ ಸಮಯಕ್ಕೆ ಪ್ರಾರಂಭಿಸಲು ಒತ್ತಾಯಿಸಿದರು. ಪ್ರತಿಪಕ್ಷಗಳ ಒತ್ತಡದ ನಡುವೆಯೂ ಅಂತಿಮವಾಗಿ ಮತಾಂತರ ನಿಷೇಧ ವಿಧೇಯಕ ಮಂಡನೆ ಆಗಲಿಲ್ಲ.

ಮತಾಂತರ ನಿಷೇಧ ವಿಧೇಯಕ ಮಂಡಿಸಲು ವಿಧಾನಪರಿಷತ್ತಿನಲ್ಲಿ ಬಿಜೆಪಿಗೆ ಬಹುಮತ ಇಲ್ಲದ ಕಾರಣ, ಮುಂದಿನ ಜಂಟಿ ಅಧಿವೇಶನದ ಸಮಯಕ್ಕೆ ಇತ್ತೀಚಿನ ಚುನಾವಣೆಯಲ್ಲಿ ಗೆದ್ದವರು ಸದಸ್ಯರಾಗಿ ಪ್ರವೇಶ ಪಡೆಯುವುದರಿಂದ ಆಡಳಿತ ಪಕ್ಷಕ್ಕೆ ಬಹುಮತ ದೊರೆಯಲಿದೆ. ಈ ನಿಟ್ಟಿನಲ್ಲಿ ಈಗ ಮತಾಂತರ ನಿಷೇಧ ವಿಧೇಯಕ ಮಂಡಿಸಿ ಸಂಕಷ್ಟಕ್ಕೆ ಸಿಲುಕುವ ಬದಲು ಮುಂದಿನ ಜಂಟಿ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ಮಂಡಿಸಲು ಬಿಜೆಪಿ ನಿರ್ಧರಿಸಿದೆ. ಇದರಿಂದಾಗಿ ಸರ್ಕಾರ ಮುಜುಗರದಿಂದ ಪಾರಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಹೊಸ ಕಾಯ್ದೆಯಿಂದ ವ್ಯವಹಾರ ಕುಸಿದಿಲ್ಲ: ಶ್ರೀನಿವಾಸ ಪೂಜಾರಿ

0

ಕರ್ನಾಟಕದಲ್ಲಿ 2020ರ ಎಪಿಎಂಸಿ ಕಾಯ್ದೆ ಜಾರಿಗೊಳಿಸಿದ ನಂತರ ಎಪಿಎಂಸಿ ಗಳ ವ್ಯವಹಾರ ಕುಸಿದಿಲ್ಲ. ಮತ್ತು ಸೆಸ್ ಸಂಗ್ರಹದಲ್ಲೂ ನಷ್ಟವಾಗಿಲ್ಲ ಎಂದು ವಿಧಾನಪರಿಷತ್ತಿನ ಸಭಾನಾಯಕರೂ ಆಗಿರುವ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಹೇಳಿದ್ದಾರೆ.

ವಿಧಾನಪರಿಷತ್ತಿನಲ್ಲಿ ಜೆಡಿಎಸ್ ನ ಗೋವಿಂದರಾಜು ಪ್ರಶ್ನೆಗೆ ಸಹಕಾರ ಸಚಿವ ಪರವಾಗಿ ಉತ್ತರಿಸಿದರು. ‘2017-18 ರಲ್ಲಿ ಎಪಿಎಂಸಿ ಗಳಿಂದ ರಾಜ್ಯ ಸಂಚಿತ ನಿಧಿಗೆ 77 ಕೋಟಿ ರೂ, 2019-20 ರಲ್ಲಿ 60.81 ಕೋಟಿ ರೂ ಮತ್ತು 2020ರ ಜುಲೈ ಅಂತ್ಯದವರೆಗೆ 15.71 ಕೋಟಿ ರೂ. ಸಂಗ್ರಹವಾಗಿತ್ತು ಎಂದು ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.

ಆವರ್ತ ನಿಧಿಗೆ 2018-19ರಲ್ಲಿ 135.61 ಕೋಟಿ ರೂ, 2019-20 ರಲ್ಲಿ 110 ಕೋಟಿ ರೂ. ಹಾಗೂ 2020ರ ಜುಲೈ ಅಂತ್ಯದವರೆಗೆ 88.35 ಕೋಟಿ ರೂ. ಪಾವತಿಯಾಗಿತ್ತು. ಹೊಸ ಕಾಯ್ದೆ ಜಾರಿಯಾದ ನಂತರ ಸಂಚಿತ ನಿಧಿ ಮತ್ತು ಆವರ್ತ ನಿಧಿಗೆ ಪಾವತಿ ಆಗುತ್ತಿರುವ ಮೊತ್ತದಲ್ಲಿ ಇಳಿಕೆಯಾಗಿಲ್ಲ ಎಂದು ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಎಚ್1 ಬಿ ವಿಸಾ ಸಂದರ್ಶನ ಕೈಬಿಡಲಾಗಿದೆ

0

ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದಾಗಿ 2022 ರಲ್ಲಿ ಎಚ್-1 ಬಿ ವಿಸಾ ಕೋರಿರುವ ಅರ್ಜಿದಾರರಿಗೆ ಮತ್ತು ವಿದ್ಯಾರ್ಥಿಗಳಿಗೆ ಮೌಖಿಕ ಸಂದರ್ಶನವನ್ನು ಕೈಬಿಡುವುದಾಗಿ ಅಮೆರಿಕ ಘೋಷಿಸಿದೆ.

ಎಚ್-1 ಬಿ ವಲಸೆ ರಹಿತ ವೀಸಾ ಆಗಿದೆ. ಇದು ಅಮೆರಿಕದ ಕಂಪನಿಗಳಿಗೆ ತಾಂತ್ರಿಕ ಪರಿಣತಿ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿವರ್ಷ 10 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಎಚ್-1 ಬಿ ವೀಸಾ ವನ್ನು ಅವಲಂಬಿಸಿವೆ.

ವಲಸೆರಹಿತ ಕೆಲಸದ ವೀಸಾಗಳಿಗೆ ಮತ್ತು ಕೆಲ ವರ್ಗಗಳಲ್ಲಿ ಮೌಖಿಕ ಸಂದರ್ಶನಗಳನ್ನು ಕೈಬಿಡಲು ದೂತವಾಸ ಅಧಿಕಾರಿಗಳಿಗೆ ತಾತ್ಕಾಲಿಕವಾಗಿ ಅಧಿಕಾರ ನೀಡಲಾಗಿದೆ ಎಂದು ತಿಳಿಸಲಾಗಿದೆ.

ವಿಶೇಷ ಉದ್ಯೋಗದಲ್ಲಿರುವ ವ್ಯಕ್ತಿಗಳು ಎಚ್-1 ಬಿ ವೀಸಾ ತರಬೇತಿದಾರರು ಅಥವಾ ವಿಶೇಷ ಶಿಕ್ಷಣ ಸಂದರ್ಶಕರು ಎಚ್-3 ವೀಸಾ, ಇಂಟ್ರಾ ಕಂಪನಿ ವರ್ಗಾವಣೆ ದಾರರು ಎಲ್ ವೀಸಾ , ಅಸಾಧಾರಣ ಸಾಮರ್ಥ್ಯ ಅಥವಾ ಸಾಧನೆ ಮಾಡಿರುವ ವ್ಯಕ್ತಿಗಳು ಒ ವೀಸಾ, ಕ್ರೀಡಾಪಟುಗಳು ಹಾಗೂ ಕಲಾವಿದರು, ಮನೋರಂಜನೆ ಪಿ ವೀಸಾ, ಮತ್ತು ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ಕ್ಯೂ ವೀಸಾ, ಮೌಕಿಕ ಸಂದರ್ಶನವನ್ನು ಕೈಬಿಡಲಾಗಿದೆ ಎಂದು ಅಮೆರಿಕವು ತಿಳಿಸಿದೆ.

ಅರ್ಜಿದಾರರು ಮಾಹಿತಿಗಾಗಿ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ವೆಬ್ಸೈಟ್ಗಳನ್ನು ಪರಿಶೀಲಿಸಬಹುದು ಎಂದು ದೂತಾವಾಸ ಕಚೇರಿ ಮಾಹಿತಿ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೋವಿಡ್ ಎದುರಿಸಲು ಸನ್ನದ್ಧ.

0

ಕೊರೋನಾ ಎದುರಿಸಲು ಆಸ್ಪತ್ರೆಗಳಲ್ಲಿ 7 ಲಕ್ಷಕ್ಕೂ ಅಧಿಕ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ತಿಳಿಸಿದ್ದಾರೆ.

ಜಗತ್ತಿನಾದ್ಯಂತ ಕೊರೋನಾ ರೂಪಾಂತರ ತಳಿ ಓಮಿಕ್ರಾನ್ ನ 9.64 ಲಕ್ಷ ಪ್ರಕರಣಗಳು ವರದಿಯಾಗಿವೆ. ಪ್ರಪಂಚದಾದ್ಯಂತ ಕೋವಿಡ್ ನ ನಾಲ್ಕನೇ ಅಲೆಗೆ ಸಾಕ್ಷಿಯಾಗಿದೆ. ನಾವು ನಮ್ಮ ಎಚ್ಚರ ಕೈ ಬಿಡಲು ಸಾಧ್ಯವಿಲ್ಲ ಎಂದು ರಾಜೇಶ್ ಭೂಷಣ್ ಅವರು ತಿಳಿಸಿದರು.

ಭಾರತದಲ್ಲಿ ಸೋಂಕಿತರ ಸಂಖ್ಯೆ ಯು ಇಳಿಕೆಯಾಗುತ್ತಿದೆ. ಹಾಗಿದ್ದರೂ ಸಹ ಓಮಿಕ್ರಾನ್ ಪ್ರಕರಣಗಳು ಮಂದಗತಿಯಲ್ಲಿ ಹೆಚ್ಚಾಗುತ್ತಿವೆ.

ಪ್ರಸ್ತುತ ದೇಶದಲ್ಲಿ 358 ಪ್ರಕರಣಗಳು ಧೃಡಪಟ್ಟಿವೆ. ಮಹಾರಾಷ್ಟ್ರ ,ತಮಿಳುನಾಡು ಮತ್ತು ಕರ್ನಾಟಕದಲ್ಲಿಯೇ ಸುಮಾರು 250 ಪ್ರಕರಣಗಳು ವರದಿಯಾಗಿವೆ.

ಕೊರೋನಾ ಪ್ರಕರಣಗಳು ಕೂಡ ಮುಂಬೈ ಹಾಗೂ ದೆಹಲಿಯಲ್ಲಿ ಅಧಿಕವಾಗಿರುವುದು ಕಂಡುಬಂದಿದೆ. ಮುಂಬೈಯಲ್ಲಿ ಸತತ ಮೂರುದಿನಗಳಿಂದ ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ದೆಹಲಿಯಲ್ಲಿ 180 ಪ್ರಕರಣಗಳು ದೃಢಪಟ್ಟಿವೆ. ಇದು ಎರಡು ತಿಂಗಳಲ್ಲಿ ಅತಿ ಹೆಚ್ಚು ಪ್ರಕರಣಗಳಾಗಿದೆ.

ಆಮ್ಲಜನಕ ಸೌಲಭ್ಯ ಇರುವ 4.94 ಲಕ್ಷ ಹಾಸಿಗೆಗಳು ಸಿದ್ಧವಿದೆ. 1.39 ಲಕ್ಷ ಹಾಸಿಗೆಗಳಿವೆ. 1.2 ಲಕ್ಷ ಐಸಿಯು ಹಾಸಿಗೆಗಳನ್ನು ಕೇಂದ್ರ ಸರ್ಕಾರವು ಮಂಜೂರು ಮಾಡಿದೆ ಎಂದು ರಾಜೇಶ್ ಭೂಷಣ್ ಅವರು ತಿಳಿಸಿದರು.

ವೈದ್ಯಕೀಯ ಆಮ್ಲಜನಕ ಸಿದ್ಧಪಡಿಸುವ ಪ್ರತಿದಿನದ ಸಾಮರ್ಥ್ಯ 18 ಸಾವಿರ ಟನ್ ಗೆ ಏರಿದೆ. ಇದು ಎರಡನೆಯ ಅಲಿ ಸಂದರ್ಭದ ಸಾಮರ್ಥ್ಯಕ್ಕಿಂತ ಶೇ. ಎಂಬತ್ತರಷ್ಟು ಹೆಚ್ಚು ಎಂದು ಭೂಷಣ್ ಅವರು ಮಾಹಿತಿ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪಿಎಂ ಸ್ವನಿಧಿ ಸಾಲ ಮರುಪಾವತಿ ಕುಂಠಿತ

0

ಕೋವಿಡ್ ನಿಂದಾಗಿ ದೇಶದಲ್ಲಿ ಲಾಕ್ ಡೌನ್ ನಂತರದ ದಿನಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಬೀದಿಬದಿಯ ವ್ಯಾಪಾರಸ್ಥರಿಗೆ ‘ಪಿಎಂ ಸ್ವನಿಧಿ’ ಯೋಜನೆಯಡಿಯಲ್ಲಿ 10 ಸಾವಿರ ರೂ. ಸಾಲ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ಈಗ ಸಾಲದ ಮರುಪಾವತಿಗೆ ಸವಾಲು ಎದುರಾಗಿದೆ.

ದೇಶದ ಹಲವು ರಾಜ್ಯಗಳಿಂದ ಮೊದಲ ಹಂತದ ಸಾಲದ ಮೊತ್ತ 10 ಸಾವಿರ ರೂಗಳನ್ನು 31,04,204 ಫಲಾನುಭವಿಗಳಿಗೆ ತಲುಪಿಸಲಾಗಿದೆ ಇದರಲ್ಲಿ ಸದ್ಯ 3,18,231 ಮಂದಿ ಬರು ಪಾವತಿಸಿದ್ದಾರೆ ಉಳಿದಂತೆ ಲಕ್ಷಾಂತರ ಮಂದಿ ಮರುಪಾವತಿ ಮಾಡದೆ ಸಾಲವನ್ನ ಬಾಕಿ ಉಳಿಸಿಕೊಂಡಿದ್ದಾರೆ. ಇದರ ಜೊತೆಗೆ ಎರಡನೇ ಹಂತದ ಸಾಲಸೌಲಭ್ಯ ಕುಂಠಿತವಾಗಿದೆ.

ಬೀದಿ ಬದಿ ವ್ಯಾಪಾರಸ್ಥರಿಗೆ ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳಲು ಈ ಯೋಜನೆಗೆ 17 ಪ್ರಮುಖ, 8 ಸಣ್ಣ, ಒಂಬತ್ತು ಹಿಮಾಲಯನ್ ರಾಜ್ಯಗಳೆಂಬ ವಿಭಾಗಗಳನ್ನು ಮಾಡಿಕೊಂಡಿದೆ. 48,30,200 ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯವನ್ನು ಕಲ್ಪಿಸುವ ಗುರಿ ಹೊಂದಿದೆ. 2022ರ ಮಾರ್ಚ್. 31ರವರೆಗೆ ಬೀದಿ ಬದಿ ವ್ಯಾಪಾರಸ್ಥರು ಅರ್ಜಿಸಲ್ಲಿಸಲು ಅವಕಾಶವಿರುವ ಯೋಜನೆಗೆ ಕಳೆದ ವರ್ಷದಿಂದ ಒಟ್ಟು 42,82,976 ಅರ್ಜಿದಾರರು ಅರ್ಹತೆಯನ್ನು ಪಡೆದಿದ್ದಾರೆ. ಅದರಲ್ಲಿ ಈವರೆಗೆ 31,04,204 ಮಂದಿಗೆ 10 ಸಾವಿರ ರೂ. ನೀಡಲಾಗಿದೆ. ಲಕ್ಷಾಂತರ ಮಂದಿ ಮರುಪಾವತಿ ಮಾಡದೇ ಇರುವುದರಿಂದ ದೇಶಾದ್ಯಂತ ಕೋಟ್ಯಂತರ ರೂ. ಹಣ ರಿಕವರಿ ಹುಟ್ಟುವುದು ತಲೆನೋವಾಗಿ ಪರಿಣಮಿಸಿದೆ.

ರಾಜ್ಯದಲ್ಲಿ ಒಟ್ಟು 2.5 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯದ ಗುರಿಯನ್ನು ಹೊಂದಿದೆ. ಈ ಪೈಕಿ ಶೇ.80 ರಷ್ಟು ಬೀದಿ ವ್ಯಾಪಾರಸ್ಥರಿಗೆ 10 ಸಾವಿರ ರೂ. ಮಂಜೂರಾಗಿದೆ ಇದರಲ್ಲಿ ಮರುಪಾವತಿ ಮಾಡಿರುವವರ ಸಂಖ್ಯೆ ಶೇ.60 ರಷ್ಟು ಮಂದಿ ಮಾತ್ರ.

ಹಣ ಮರುಪಾವತಿ ಮಾಡುವಂತಿಲ್ಲ ಎಂಬ ತಪ್ಪು ಕಲ್ಪನೆ, ಹಣ ಪಡೆದವರ ವ್ಯಾಸ ಗಳೇ ಬದಲು, ಮೊಬೈಲ್ ಗೆ ಸಿಗದ ಫಲಾನುಭವಿಗಳು, ಬಾಕಿ ಮೊತ್ತ ಕೆ ಬಡ್ಡಿ ಹೆಚ್ಚಾಗುವ ಸಾಧ್ಯತೆ, ಬ್ಯಾಂಕ್ಗಳಲ್ಲಿ ಡಿಫಾಲ್ಟರ್ ಹಣೆಪಟ್ಟಿ ಹಾಗೂ ಭವಿಷ್ಯದಲ್ಲಿ ಸಾಲ ಸೌಲಭ್ಯಕ್ಕೆ ಅಡ್ಡಿ. ಹಣ ರಿಕವರಿಗೆ ಎಲ್ಲಾ ಸಮಸ್ಯೆಗಳು ಮುಂದಾಗಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಉದ್ಯೋಗದಾತರಿಗೆ ರಾಜ್ಯದಲ್ಲಿ ಪ್ರೋತ್ಸಾಹ – ಸಿಎಂ

0

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಳಗಾವಿಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಮಾತನಾಡಿ ರಾಜ್ಯದಲ್ಲಿ ಆದಷ್ಟು ಬೇಗ ನೂತನ ಉದ್ಯೋಗ ನೀತಿ ಜಾರಿಗೆ ತರಲಾಗುವುದು ನೀತಿಯಡಿ ಖಾಸಗಿ ಸಂಸ್ಥೆಗಳಿಗೆ ಉದ್ಯೋಗದಲ್ಲಿ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ತಿಳಿಸಿದರು.

ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ಅಂತಹ ಉದ್ಯೋಗ ಮೇಳವನ್ನು ಸಿಎಂ ಬೊಮ್ಮಾಯಿ ಉದ್ಘಾಟಿಸಿದರು.

“ಈವರೆಗೂ ಉದ್ಯೋಗದಾತರಿಗೆ ಒಂದು ಸಾಮಾನ್ಯ ಸೂತ್ರದಲ್ಲಿ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು ಇನ್ನು ಮುಂದೆ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ನಿರುದ್ಯೋಗ ಸಮಸ್ಯೆ ನಿವಾರಿಸುವ ಪ್ರಯತ್ನ ಮಾಡಲಾಗುವುದು ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಕೌಶಲ್ಯ ಮತ್ತು ಉದ್ಯೋಗ ಸೃಷ್ಟಿ ಈ ಮೂರು ಅಂಶಗಳು ಸಮನ್ವಯ ಸುಧಾರಿಸುವಂತೆ ವ್ಯವಸ್ಥೆ ರೂಪಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಶಿಕ್ಷಣಕ್ರಮವನ್ನು ಉದ್ಯೋಗದಾತ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಬರೆಯಲಾಗಿದೆ. ಮತ್ತೊಂದೆಡೆ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಜಾಗತಿಕ ಶೈಕ್ಷಣಿಕ ಮಟ್ಟಕ್ಕೆ ನಿರೂಪಿಸುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ಸಿಎಂ ಬೊಮ್ಮಾಯಿ ಅವರು ತಿಳಿಸಿದ್ದಾರೆ.

‘ಪ್ರತಿಯೊಬ್ಬ ವಿದ್ಯಾವಂತರಿಗೂ ಅವರಿಗೆ ಆಸಕ್ತಿ ಇರುವಂತಹ ಉದ್ಯೋಗವೇ ದೊರಕುವಂತಾಗಬೇಕು ಎನ್ನುವುದು ಸರ್ಕಾರದ ಸಂಕಲ್ಪ. ಪ್ರತಿಯೊಬ್ಬರಿಗೂ ಉದ್ಯೋಗ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಐಟಿ-ಬಿಟಿ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಚಿವರಾದಂತಹ ಬೈರತಿ ಬಸವರಾಜ , ಶಶಿಕಲಾ ಜೊಲ್ಲೆ, ಶಾಸಕ ಅಭಯ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೋವಿಡ್ ಲಸಿಕೆ ವಿತರಣೆ: ಬೆಂಗಳೂರು ಜಿಲ್ಲೆ ಗುರಿ ಸಾಧನೆ

0

ಕೋವಿಡ್ ಲಸಿಕೆ ವಿತರಣೆಯಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿದೆ.
ಎರಡನೇ ಡೋಸ್ ವಿತರಣೆಯಲ್ಲೂ ಶೇ100ರಷ್ಟು ಗುರಿ ಸಾಧಿಸಿದೆ. ಈ ಮೂಲಕ ಗೊತ್ತು ಪಡಿಸಲಾದ ಗುರಿ ಸಾಧಿಸಿದ ಮೊದಲ ಜಿಲ್ಲೆಯಾಗಿ ಹೊರಹೊಮ್ಮಿದೆ.
ಎರಡನೇ ಡೋಸ್ ವಿತರಣೆಯಲ್ಲಿ 16 ಜಿಲ್ಲೆಗಳು ರಾಜ್ಯದ ಸರಾಸರಿಗಿಂತ ಅಧಿಕ ಪ್ರಮಾಣದಲ್ಲಿ ಲಸಿಕೆ ನೀಡಿವೆ. ಕಲಬುರ್ಗಿ (ಶೇ.60) ರಾಯಚೂರು (ಶೇ. 64) ಸೇರಿದಂತೆ 15 ಜಿಲ್ಲೆಗಳು ಹಿಂದೆ ಬಿದ್ದಿವೆ. ಮೊದಲ ಡೋಸ್ ವಿತರಣೆಯಲ್ಲಿ ಗದಗ, ವಿಜಯಪುರ, ಬಾಗಲಕೋಟೆ, ಕೊಡಗು ಜಿಲ್ಲೆಗಳು ಕೂಡ ಶೇ100 ರಷ್ಟು ಗುರಿ ಸಾಧನೆ ಮಾಡಿವೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 10.32 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಸೇರಿದಂತೆ 13.26 ಲಕ್ಷ ಮಂದಿಗೆ ಮೊದಲ ಡೋಸ್ (ಶೇ 129) ಹಾಗೂ 10.35 ಲಕ್ಷ ಮಂದಿಗೆ ಎರಡನೇ ಡೋಸ್ ನೀಡಲಾಗಿದೆ.
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 4.89 ಕೋಟಿ ಮಂದಿ ಇದ್ದಾರೆ. ಅವರಲ್ಲಿ 4.73 ಕೋಟಿ ಮೊದಲ ಡೋಸ್ ಪಡೆದಿದ್ದು, ಶೇ.97 ರಷ್ಟು ಗುರಿ ಸಾಧಿಸಲಾಗಿದೆ. 3.67 ಕೋಟಿ ಮಂದಿ ಲಸಿಕೆಯ ಎರಡೂ ಡೋಸ್ ಗಳನ್ನೂ ಪಡೆದುಕೊಂಡಿದ್ದಾರೆ.
ಎರಡನೇ ಡೋಸ್ ವಿತರಣೆಯಲ್ಲಿ ರಾಜ್ಯವು ಶೇ.75ರಷ್ಟು ಗುರಿ ಸಾಧಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಲಂಡನ್ ವಿವಿ: ಒಮಿಕ್ರಾನ್ ಸಂಶೋಧನಾ ವರದಿ

0

ಕೊರೊನಾ ವೈರಾಣುವಿನ ಡೆಲ್ಟಾ ರೂಪಾಂತರ ತಳಿಗೆ ಹೋಲಿಸಿದರೆ ಓಮಿಕ್ರಾನ್ ರೂಪಂತರ ತಳಿಯ ತೀವ್ರತೆ ಕಡಿಮೆ. ಓಮಿಕ್ರಾನ್ ರೂಪಾಂತರ ತಳಿಯಿಂದ ಸೋಂಕಿಗೆ ಒಳಗಾಗಲು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆಯಿದೆ ಎಂದು ಬ್ರಿಟನ್ ನಲ್ಲಿ ನಡೆದ ಎರಡು ಅಧ್ಯಯನಗಳು ಹೇಳಿವೆ.
ಓಮಿಕ್ರಾನ್ ಸೋಂಕು ದೃಡಪಟ್ಟವರು ಡೆಲ್ಟಾ ಸೋಂಕಿತರಿಗೆ ಹೋಲಿಸಿದರೆ ಒಂದು ಅಥವಾ ಅದಕ್ಕಿಂತ ಹೆಚ್ಚು ರಾತ್ರಿಗಳನ್ನು ಆಸ್ಪತ್ರೆಯಲ್ಲಿ ಕಳೆಯಬೇಕಾದ ಪ್ರಮಾಣವು ಶೇ.40ರಿಂದ ಶೇ.45ರಷ್ಟು ಕಡಿಮೆ ಎಂದು ಇಂಪೀರಿಯಲ್ ಕಾಲೇಜಿನ ಅಧ್ಯಯನವು ಹೇಳಿದೆ.
ಲಂಡನ್ ನ ಇಂಪೀರಿಯಲ್ ಕಾಲೇಜು ಮತ್ತು ಎಡಿನ್ ಬ್ರಾ ವಿಶ್ವವಿದ್ಯಾಲಯದ ಈ ಅಧ್ಯಯನ ನಡೆಸಿವೆ.
ಡೆಲ್ಟಾ ತಳಿಗೆ ಹೋಲಿಸಿದರೆ ಓಮಿಕ್ರಾನ್ ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾದ ಸಾಧ್ಯತೆಯು ಮೂರನೇ ಎರಡರಷ್ಟು ಕಡಿಮೆ ಎಂದು ಎಡಿನ್ ಬ್ರಾ ವಿಶ್ವವಿದ್ಯಾಲಯವು ನಡೆಸಿದ ಇನ್ನೊಂದು ಅಧ್ಯಯನವು ತಿಳಿಸಿದೆ. ಆದರೆ ಈ ಅಧ್ಯಯನಕ್ಕೆ 15 ಸೋಂಕು ಪ್ರಕರಣಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳಲಾಗಿದೆ. ಒಮಿಕ್ರಾನ್ ತಳಿಯ ವಿರುದ್ಧ ಲಸಿಕೆಗಳು ಹೆಚ್ಚು ಪರಿಣಾಮಕಾರಿಯಲ್ಲ ಎನ್ನಲಾಗುತ್ತಿದೆ. ಅಲ್ಲದೆ,ಒಮಿಕ್ರಾನ್ ಸೋಂಕಿನ ಹರಡುವಿಕೆ ಹೆಚ್ಚು ತೀವ್ರವಾಗಿದೆ. ಇತ್ತೀಚಿಗೆ ಕಂಡಂತೆ , ಹರಡುವಿಕೆ ತೀವ್ರವಾಗಿದ್ದರೆ ಆರೋಗ್ಯ ಸೇವೆಗಳ ಬೇಡಿಕೆ ಭಾರಿ ಪ್ರಮಾಣದಲ್ಲಿ ಹೆಚ್ಚಬಹುದು ಎಂದು ಇಂಪೀರಿಯಲ್ ಕಾಲೇಜಿನ ಪ್ರಾಧ್ಯಾಪಕ ನೀಲ್ ಫರ್ಗ್ಯೂಸನ್ ಹೇಳಿದ್ದಾರೆ.
ಒಮಿಕ್ರಾನ್ ನ 56,000 ಮತ್ತು ಡೆಲ್ಟಾ 2,69,000 ಪ್ರಕರಣಗಳನ್ನು ಅಧೀನಕ್ಕೆ ಒಳಪಡಿಸಲಾಗಿತ್ತು. ಅಧ್ಯಯನ ಪ್ರಬಂಧವು ಸಹವರ್ತಿ ಪರಾಮರ್ಶೆಗೆ ಒಳಪಟ್ಟಿಲ್ಲ ಎಂದು ತಿಳಿದುಬಂದಿದೆ.
ಬೇರೆ ಬೇರೆ ಸಮುದಾಯಗಳಲ್ಲಿ ಸೋಂಕಿನ ತೀವ್ರತೆಯು ಭಿನ್ನವಾಗಿರಬಹುದು. ಹೆಚ್ಚು ವಯಸ್ಸಾದವರಲ್ಲಿ ಪರಿಣಾಮ ಹೇಗಿರುತ್ತದೆ ಎಂಬ ಬಗ್ಗೆ ಪೂರ್ಣ ಅಧ್ಯಯನ ನಡೆದಿಲ್ಲ ಎಂದು ಜಗತ್ತಿನ ವಿವಿಧ ಭಾಗಗಳ ಸಂಶೋಧಕರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪ್ರಳಯ್ ಖಂಡಾಂತರ ಕ್ಷಿಪಣಿ ಯಶಸ್ವಿ ಪ್ರಯೋಗ

0

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಪ್ರಳಯ್ ಕ್ಷಿಪಣಿ ಯ ಯಶಸ್ವಿ ಪ್ರಯೋಗ ನಡೆಸಿದೆ. ಇದಕ್ಕೆ
ಹೆಚ್ಚು ಸಾಮರ್ಥ್ಯದ ಮೋಟರ್, ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಅತ್ಯಾಧುನಿಕ ದಿಕ್ಸೂಚಿ ಮತ್ತು ಇತರೆ ಸೌಲಭ್ಯಗಳನ್ನು ಈ ಕ್ಷಿಪಣಿ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
ಸ್ವದೇಶಿ ನಿರ್ಮಿತ, ಗರಿಷ್ಠ 500 ಕಿ.ಮೀ. ಅಂತರದ ಗುರಿಯನ್ನು ತಲುಪಬಲ್ಲ, ನೆಲದಿಂದ ಉಡಾವಣೆಗೊಂಡು ಶತ್ರು ನೆಲೆ ಧ್ವಂಸ ಮಾಡಬಲ್ಲ ‘ಪ್ರಳಯ’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಸತತ ಎರಡನೇ ದಿನವೂ ಯಶಸ್ವಿಯಾಗಿ ನಡೆಸಲಾಯಿತು.