ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದು ಬೇಡ ಎಂಬ ಆರ್ಎಸ್ಎಸ್ ಮುಖ್ಯಸ್ಥರಾದ ಸರಸಂಘಚಾಲಕ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಮುಸ್ಲಿಮ್ ನಾಯಕ ಅಬ್ದುಲ್ ರಜಾಕ್ ಖಂಡಿಸಿದ್ದಾರೆ.
ಈ ವಿಷಯದ ಕುರಿತು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ವಿವಾದ ಆರಂಭಿಸುವುದೇ ಇವರು. ಈಗ ತಡೆಯೋಣ ಎನ್ನುವುದೂ ಇವರೇ. ಈಗ ಚರ್ಚೆಯಲ್ಲಿರುವ ವಿವಾದಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಇವರಿಗೆ ಚೆನ್ನಾಗಿ ಗೊತ್ತು ಎಂದು ಅವರು ಹೇಳಿದ್ದಾರೆ.
ವಿಡಿಯೋ ಸರ್ವೇ ನಂತರ ಅದು ಲಿಂಗ ಎಂದು ಹೇಳುತ್ತಿದ್ದಾರೆ. ಸರ್ಕಾರಗಳು ಇಂಥ ವಿಚಾರಗಳನ್ನು ಕೈಬಿಟ್ಟು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗಮನಹರಿಸಬೇಕು. ಇಷ್ಟು ದಿನದಿಂದ ಮೋಹನ್ ಭಗವತ್ ಏನು ಮಾಡುತ್ತಿದ್ದರು? ಈಗ ಬಂದು ಶಿವಲಿಂಗ ಹುಡುಕುವುದು ಬೇಡ ಎಂದು ಹೇಳಿದ್ದಾರೆ. ಇಷ್ಟು ದಿನದ ನಮ್ಮ ನೆಮ್ಮದಿ ಹಾಳಾಗಿದೆ. ಜನರ ಭಾವನೆಗಳ ಜೊತೆಗೆ ಯಾರೂ ಆಟವಾಡಬಾರದು ಎಂದು ತಿಳಿಸಿದ್ದಾರೆ.
ತಡವಾದರೂ ಪರವಾಗಿಲ್ಲ, ಈಗಲಾದರೂ ಅವರು ಮಾತಾಡಿದ್ದಾರೆ. ರಾಜ್ಯದಲ್ಲಿ ಸೃಷ್ಟಿಯಾಗಿರುವ ವಿವಾದನಗಳಿಗೆ ಕಡಿವಾಣ ಹಾಕಲು ಏನಾದರೂ ಮಾಡಲಿ. ಮಂಡ್ಯ, ಮಂಗಳೂರು, ಚಾಮರಾಜಪೇಟೆ ವಿವಾದಗಳು ನಿಲ್ಲಲಿ ಎಂದು ಹೇಳಿದ್ದಾರೆ.