Wednesday, February 11, 2026
Wednesday, February 11, 2026
Home Blog Page 1806

ಏಷ್ಯನ್ ಕ್ರಿಕೆಟ್ ಕಪ್19 : ಭಾರತ ಶುಭಾರಂಭ

0

ಏಷ್ಯಾ ಕಪ್ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯು ಭಾರತ ಮತ್ತು ಯುಎಇ ತಂಡಗಳ ನಡುವೆ ಪಂದ್ಯ ನಡೆಯಿತು. ಯುಎಇ ತಂಡದ ವಿರುದ್ಧ ಭಾರತ ತಂಡವು ಉತ್ತಮ ಶುಭಾರಂಭ ದೊಂದಿಗೆ ಭರ್ಜರಿ ಜಯ ಸಾಧಿಸಿದೆ.

ಐಸಿಸಿ ಅಕಾಡೆಮಿ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು, ಎದುರಾಳಿ ತಂಡಕ್ಕೆ ಬ್ಯಾಟಿಂಗ್ ಆಡಲು ಅವಕಾಶ ಮಾಡಿಕೊಟ್ಟಿತು.

ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತದ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 282 ಕಳಿಸಿತು.

ಭಾರತ ತಂಡವು ಆರಂಭದ ಇನಿಂಗ್ಸ್ನ ಮೂರನೇ ಓವರ್ ನಲ್ಲಿಯೇ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ, ಹರ್ನೂರ್ ಸಿಂಗ್ (130 ಎಸೆತಗಳಲ್ಲಿ 11 ಬೌಂಡರಿ ಬಾರಿಸಿ 120 ರನ್ ಗಳಿಸಿದರು ಮತ್ತು ರಶೀದ್ 60 ಎಸೆತಗಳಲ್ಲಿ 35 ರನ್ ಗಳಿಸಿ ಇವರಿಬ್ಬರ ರೋಚಕ ಬ್ಯಾಟಿಂಗ್ ಪ್ರದರ್ಶನದ ಜೊತೆಯಾಟದಲ್ಲಿ ತಂಡಕ್ಕೆ 90ರನ್ ಸೇರಿಸಿದರು. ರಶೀದ್ ಔಟಾದ ನಂತರ ಹರ್ನೂರ್ ಜೊತೆಗೂಡಿದ ನಾಯಕ ‘ಯಶ್ ಧುಳ್’ 68 ಎಸೆತಗಳಲ್ಲಿ 63 ರನ್ ಗಳಿಸಿ ಮೂರನೇ ಜೊತೆಯಾಟದಲ್ಲಿ 120 ರನ್ ತಂಡಕ್ಕೆ ಸೇರಿಸಿದರು.

ಇನ್ನಿಂಗ್ಸ್ ನ ಕೊನೆಯಲ್ಲಿ ಮಿಂಚಿದ ರಾಜ್ಯವರ್ಧನ್ ಔಟಾಗದೆ 23 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 48 ರನ್ ಗಳ ಅಬ್ಬರದ ಬ್ಯಾಟಿಂಗ್ ಮಾಡಿದರು, ರಾಜ್ಯವರ್ಧನ್ ಬೌಲಿಂಗ್ ನಲ್ಲೂ ಮಿಂಚಿದರು. 283 ರನ್ ಗಳ ಗೆಲುವಿನ ಗುರಿ ಬೆನ್ನತ್ತಿ ಆಡಿದ ಯುಎಇ 34.3 ಓವರ್ಗಳಲ್ಲಿ 128 ರನ್ ಗಳಿಸಿ ಆಲ್-ಔಟ್ ಆಯಿತು. ಭಾರತ ತಂಡದ ರಾಜವರ್ಧನ್ ಹಂಗರ್ಗೆಕರ್ 24/3 ವಿಕೆಟ್ ಬಳಿಸಿಕೊಂಡರು. ಅವರ ಬೌಲಿಂಗ್ ಮುಂದೆ ಯುಎಇ ತತ್ತರಿಸಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪೂರಕ ಅಂದಾಜು ಚರ್ಚೆ: ಬೊಮ್ಮಾಯಿ ಉತ್ತರ

0

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿಗಮಗಳ ಅನುದಾನ ಕಡಿತ ಮಾಡಲಾಗಿದೆ ಎಂಬ ಅಭಿಪ್ರಾಯ ಇದೆ.ಆದರೆ, ಆ ನಿಗಮಗಳ ಬ್ಯಾಂಕ್ ಖಾತೆಗಳಲ್ಲಿ 950 ಕೋಟಿ ರೂಪಾಯಿ ಇದೆ. ಅದನ್ನು ಬಳಸುವಂತೆ ತಿಳಿಸಲಾಗಿದೆ. ಜೊತೆಗೆ, ಹೆಚ್ಚುವರಿಯಾಗಿ 500 ಕೋಟಿ ರೂಪಾಯಿ ಬಿಡುಗಡೆ ಮಾಡಿ ಕಾರ್ಯಾದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ನಡೆದ 2021-22ನೇ ಸಾಲಿನ 3,577 ಕೋಟಿ ಮೊತ್ತದ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳ ಮೇಲಿನ ಚರ್ಚೆಗೆ ಅವರು ಉತ್ತರ ನೀಡಿದರು.
ಕಳೆದ ನಾಲ್ಕೈದು ತಿಂಗಳಲ್ಲಿ ಸಂಪನ್ಮೂಲ ಕ್ರೋಢೀಕರಣ ಗಣನೀಯವಾಗಿ ಹೆಚ್ಚಳವಾಗಿದೆ. ತೆರಿಗೆ ಸಂಗ್ರಹ ಪ್ರಮಾಣ ನವಂಬರ್ ಅಂತ್ಯಕ್ಕೆ ಶೇ‌.67ಕ್ಕೆ ಏರಿಕೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಅನೇಕ ಕ್ಷೇತ್ರಗಳಲ್ಲಿ ತೆರಿಗೆ ಸಂಗ್ರಹ ಆಗುತ್ತಿರಲಿಲ್ಲ.ಅಲ್ಲೂ ಸಹ ತೆರಿಗೆ ಸಂಗ್ರಹಕ್ಕೆ ಒತ್ತು ನೀಡುವಂತೆ ಸೂಚಿಸಿದ್ದೇನೆ. ಆ ಸೂಚನೆ ನೀಡಿದ ಬಳಿಕ ಅಡಿಕೆಯಲ್ಲಿ ಜಿಎಸ್ ಟಿ ರೂಪದಲ್ಲಿ 8 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಎತ್ತಿನಹೊಳೆ ಯೋಜನೆಯ ಎರಡನೇ ಹಂತದಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಬೇಕಿದೆ. ಭೂ ಸ್ವಾಧೀನದ ಪರಿಹಾರದ ವಿವಾದದಿಂದ ಸಮಸ್ಯೆ ಉಂಟಾಗಿದೆ. ಕ್ಷೇತ್ರಕ್ಕೆ ಒಂದೊಂದು ರೀತಿ ಪರಿಹಾರ ನೀಡಬೇಕು ಎಂಬ ಬೇಡಿಕೆ ಬಂದಿದೆ. ರಾಜಕೀಯ ಕಾರಣದಿಂದ ಈ ಬೇಡಿಕೆ ಬಂದಿದೆ. ಪರಿಹಾರ ಮೊತ್ತವನ್ನು ಹೆಚ್ಚಿಸಿ ಜನವರಿಯಲ್ಲಿ ಸಮಸ್ಯೆ ಬಗೆಹರಿಸುವೆ ಎಂದು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಈ ಸಾಲಿನಲ್ಲಿ 1,492 ಕೋಟಿ ಮೀಸಲಿಡಲಾಗಿದೆ. ಮಂಡಳಿಗೆ 882 ಕೋಟಿ ನೀಡಲಾಗಿದೆ. ಈ ಪೈಕಿ 707 ಕೋಟಿ ರೂಪಾಯಿ ಖರ್ಚಾಗಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿಯಾಗಿ 3000 ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದೆ‌. ಅದರ ಕ್ರಿಯಾಯೋಜನೆ ಸಿದ್ಧವಾಗಿ ನನ್ನ ಬಳಿ ಬಂದಿದೆ. ಆ ಭಾಗದ ಶಾಸಕರ ಜೊತೆಗೆ ಸಮಾಲೋಚನೆ ನಡೆಸಿ ಕ್ರಿಯಾ ಯೋಜನೆಗೆ ಜನವರಿ 15ರೊಳಗೆ ಅನುಮೋದನೆ ನೀಡುತ್ತೇನೆಂದು ತಿಳಿಸಿದರು.
ಅಂಕಿಅಂಶಗಳ ಪ್ರಕಾರ, ಶೇ.71ರಷ್ಟು ವಾಣಿಜ್ಯ ತೆರಿಗೆ, ಶೇ.67ರಷ್ಟು ಅಬಕಾರಿ ತೆರಿಗೆ, ಶೇ.66ರಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಮತ್ತು ಶೇ.54ರಷ್ಟು ಮೋಟಾರು ವಾಹನ ತೆರಿಗೆ ಸಂಗ್ರಹವಾಗಿದೆ ಎಂದು ಹೇಳಲಾಗುತ್ತಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಯು ಟ್ಯೂಬ್ ನಲ್ಲಿ ಹೈಕೋರ್ಟ್ ” ಕಲಾಪ: ರಾಜ್ಯ ಸರ್ಕಾರ ಸಮ್ಮತಿ

0

ಹೈಕೋರ್ಟ್ ನ್ಯಾಯಪೀಠದ ಕಲಾಪಗಳನ್ನು ಯೂಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡುವುದಕ್ಕೆ ಸಂಬಂಧಿಸಿದ ಲೈವ್ ಸ್ಟ್ರೀಮಿಂಗ್ ಮತ್ತು ತ
ಕಲಾಪದ ಪ್ರಕ್ರಿಯೆ ರೆಕಾರ್ಡಿಂಗ್ ನಿಯಮಗಳಿಗೆ ರಾಜ್ಯ ಸರ್ಕಾರ ಸಮ್ಮತಿಸಿದೆ.
ಲೈವ್ ಸ್ಟ್ರೀಮಿಂಗ್ ಮತ್ತು ಕಲಾಪದ ಪ್ರಕ್ರಿಯೆ ರೆಕಾರ್ಡಿಂಗ್ ನಿಯಮಗಳಿಗೆ ಯಾವುದೇ ತಿದ್ದುಪಡಿ ಮಾಡದೇ ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಈ ನಿಯಮಗಳು ಜಾರಿಗೆ ಬರುವ ದಿನಾಂಕವನ್ನು ಉಲ್ಲೇಖಿಸಿ ರಿಜಿಸ್ಟ್ರಾರ್ ಜನರಲ್ ಅಧಿಸೂಚನೆ ಹೊರಡಿಸಬೇಕಿದೆ ಎಂದು ನ್ಯಾಯಪೀಠ ಹೇಳಿದೆ.
ಇದನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸುವುದಕ್ಕೆ ಹೈಕೋರ್ಟ್ ಒಂದು ವಾರ ಗಡುವು ನೀಡಿದೆ.
ನ್ಯಾಯಾಲಯದ ಕಲಾಪವನ್ನು ಲೈವ್ ಸ್ಟ್ರೀಮಿಂಗ್ ಮಾಡುವುದಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ನಿಯಮಗಳಿಗೆ ಕರ್ನಾಟಕ ಹೈಕೋರ್ಟ್ ನ ಪೂರ್ಣ ಪೀಠವು ಸೆಪ್ಟೆಂಬರ್ 17ರಂದು ಒಪ್ಪಿಗೆ ನೀಡಿತ್ತು. ಈ ನಿಟ್ಟಿನಲ್ಲಿ ಪೂರ್ವತಯಾರಿಯ ಭಾಗವಾಗಿ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠದಿಂದ ಆಯ್ದ ಪ್ರಕರಣಗಳನ್ನು ಲೈವ್ ಸ್ಟ್ರೀಮ್ ಮಾಡಲಾಗಿತ್ತು.
ಇ-ಫೈಲಿಂಗ್ ಮತ್ತು ಲೈವ್ ಸ್ಟ್ರೀಮಿಂಗ್ ಗೆ ಸಂಬಂಧಿಸಿದಂತೆ ವಕೀಲ ದಿಲ್ ರಾಜ್ ರೋಹಿತ್ ಸಿಕ್ವೇರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ನಿಯಮಗಳಿಗೆ ಸಂಬಂಧಿಸಿದಂತೆ ತಕ್ಷಣವೇ ಅಧಿಸೂಚನೆ ಹೊರಡಿಸಿ ಒಂದು ವಾರದಲ್ಲಿ ಅಧಿಕೃತ ಗೆಜೆಟ್ ನಲ್ಲಿ ಪ್ರಕಟಿಸಿ ಎಂದು ರಾಜ್ಯಸರ್ಕಾರಕ್ಕೆ ನ್ಯಾಯಪೀಠವು ನಿರ್ದೇಶಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಮ್ಯಾನ್ಮಾರ್ ಗೆ ಭಾರತದಿಂದ ಕೋವಿಡ್ ಲಸಿಕೆ

0

ಭಾರತವು ನೆರೆಯ ರಾಷ್ಟ್ರವಾದ ಮ್ಯಾನ್ಮಾರ್ ಗೆ ಹತ್ತು ಲಕ್ಷ ಡೋಸ್ ಕೋವಿಡ್ ಲಸಿಕೆ, ಹತ್ತು ಸಾವಿರ ಟನ್ ಅಕ್ಕಿ ಹಾಗೂ ಗೋಧಿಯನ್ನು ಕಳುಹಿಸಿಕೊಟ್ಟಿದೆ.

ಮ್ಯಾನ್ಮಾರ್ ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ ಶ್ರಿಂಗ್ಲಾ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ಫೆಬ್ರವರಿ 1ರಂದು ನಡೆದ ಸೇನಾ ದಂಗೆಯಲ್ಲಿ ಚುನಾಯಿತ ಸರ್ಕಾರವನ್ನು ಪದಚ್ಯುತಿಗೊಳಿಸಿ, ಆಂಗ್ ಸಾನ್ ಸೂಕಿ ಅವರನ್ನು ಬಂಧಿಸಿದ ನಂತರ ಇದೆ ಪ್ರಥಮ ಬಾರಿಗೆ ಭಾರತದ ಉನ್ನತ ಮಟ್ಟದ ನಿಯೋಗ ಮ್ಯಾನ್ಮಾರ್ ಗೆ ಭೇಟಿ ನೀಡಿದೆ.

ಮ್ಯಾನ್ಮಾರ್ ನ ರಿಕ್ ರೋಸ್ ಸೊಸೈಟಿಗೆ ಹರ್ಷ ವರ್ಧನ್ ಶ್ರಿಂಗ್ಲಾ ಅವರು ಲಸಿಕೆಗಳನ್ನು ಹಸ್ತಾಂತರಿಸಿದರು. ಭಾರತದೊಂದಿಗೆ ದೀರ್ಘವಾದ ಗಡಿಯನ್ನು ಹಂಚಿಕೊಂಡಿರುವ ಮ್ಯಾನ್ಮಾರ್ ಜನತೆಗೆ ಮಾನವೀಯ ನೆರವು ನೀಡುವುದನ್ನು ನಾವು ಮುಂದುವರಿಸುತ್ತೇವೆ. ಮ್ಯಾನ್ಮಾರ್ ಕೊರೋನಾ ವಿರುದ್ಧ ಹೋರಾಡುತ್ತಿರುವ ದರಿಂದ ಭಾರತದಲ್ಲಿ ತಯಾರಿಸಿದ ಹತ್ತು ಲಕ್ಷ ಡೋಸ್ ಲಸಿಕೆಗಳನ್ನು ಅಲ್ಲಿನ ರೆಡ್ ಕ್ರಾಸ್ ಸೊಸೈಟಿಗೆ ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಡುವು ವಿಸ್ತರಣೆ

0

ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳ ವಿವರಗಳನ್ನು ಪಾವತಿ ವಹಿವಾಟಿನ ಪಾಲುದಾರರು ಟೋಕನ್ ರೂಪದಲ್ಲಿ ಮಾತ್ರ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ತರಲು ನೀಡಿದ್ದ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ 6 ತಿಂಗಳ ಮಟ್ಟಿಗೆ ಮುಂದೂಡಿದೆ.

ಈ ವ್ಯವಸ್ಥೆಯು ಜುಲೈ 1ರಿಂದಲೇ ಜಾರಿಗೆ ಬರಬೇಕಿತ್ತು. ಆದರೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಆರು ತಿಂಗಳ ಕಾಲಾವಕಾಶವನ್ನು ಆರ್ ಬಿಐ ನೀಡಿತ್ತು. ಅದರ ಅನ್ವಯ ಹೊಸ ವ್ಯವಸ್ಥೆಯು ಜನವರಿ ಒಂದರಿಂದ ಜಾರಿಗೆ ಬರಬೇಕಿತ್ತು. ಆದರೆ ಗಡುವು ಮತ್ತೆ ವಿಸ್ತರಣೆ ಮಾಡಬೇಕು ಎಂದು ಬ್ಯಾಂಕಿಂಗ್ ವಲಯವು ಆರ್ ಬಿಐ ಗೆ ಮನವಿ ಸಲ್ಲಿಸಿತ್ತು.

ಇದನ್ನು ಪರಿಗಣಿಸಿರುವ ಆರ್ ಬಿಐ ಈಗ ಗಡುವನ್ನು ಎರಡನೇ ಬಾರಿಗೆ ವಿಸ್ತರಣೆ ಮಾಡಿದೆ. ಇದರ ಅನ್ವಯ ಹೊಸ ವ್ಯವಸ್ಥೆಯು 2022ರ ಜುಲೈ ಒಂದರಿಂದ ಜಾರಿಗೆ ಬರಲಿದೆ ಎಂದು ಆರ್ ಬಿಐ ಮಾಧ್ಯಮ ಮಿತ್ರರಿಗೆ ತಿಳಿಸಿದೆ. 2022ರ ಜೂನ್ 30ರ ನಂತರದಲ್ಲಿ, ಸಂಗ್ರಹಿಸಿ ಇಡಲಾದ ಕಾರ್ಡ್ ವಿವರಗಳನ್ನು ನಾಶಪಡಿಸಲಾಗುತ್ತದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ನೀಡುವ ಕಂಪನಿಗಳು ಮಾತ್ರ ವಿವರಗಳನ್ನು ಸಂಗ್ರಹಿಸಿ ಇರಿಸಿಕೊಳ್ಳಲು ಜೂನ್ 30ರ ನಂತರ ಅವಕಾಶ ಇರಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕೋವಿಡ್ ಮೂರನೇ ಅಲೆ:ವಾಹನೋದ್ಯಮ ಬಾಧಕ

0

ಓಮಿಕ್ರಾನ್ ಹರಡುವುದನ್ನು ತಡೆಯಲು ಸೆಮಿಕಂಡಕ್ಟರ್ ತಯಾರಿಸುವ ದೇಶಗಳು ಲಾಕ್ ಡೌನ್ ಜಾರಿಗೊಳಿಸಿದಲ್ಲಿ ಭಾರತದಲ್ಲಿ ಪ್ರಯಾಣಿಕ ವಾಹನಗಳ ಪೂರೈಕೆ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ ಎಂದು ಭಾರತೀಯ ವಾಹನ ವಿತರಕ ಸಂಘಟನೆಗಳ ಒಕ್ಕೂಟ ತಮ್ಮ ಆತಂಕವನ್ನು ವ್ಯಕ್ತಪಡಿಸಿದೆ.

ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಕೊರತೆಯ ಸಮಸ್ಯೆ ನಿವಾರಣೆ ಯಾಗುವ ನಿರೀಕ್ಷೆಯಿದೆ. ಆದರೆ, ಓಮಿಕ್ರಾನ್ ನಿಯಂತ್ರಿಸಲು ಚಿಪ್ ತಯಾರಿಕಾ ದೇಶಗಳು ಲಾಕ್ ಡೌನ್ ಜಾರಿಗೊಳಿಸಿದರೆ ಅಥವಾ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಗೆ ಬೇಕಾದ ಸಾಧನೆಗಳಿಗೆ ಮಾತ್ರವೇ ಚಿಪ್ ತಯಾರಿಸಲು ಆದ್ಯತೆ ನೀಡಿದ್ದಲ್ಲಿ ಪ್ರಯಾಣಿಕ ವಾಹನಗಳ ಪೂರೈಕೆ ಸಮಸ್ಯೆಯು ಇನ್ನಷ್ಟು ಹೆಚ್ಚಾಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ವಿಂಕೇಶ್ ಗುಲಾಟಿ ಅವರು ತಿಳಿಸಿದ್ದಾರೆ.

ಕೋವಿಡ್ ಸಂಪೂರ್ಣವಾಗಿ ಇಲ್ಲವಾದರೆ 2023ರ ವೇಳೆಗೆ ವಾಹನೋದ್ಯಮ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದೆ. ಕೊರೋನಾ ಪೂರ್ವದ ಮಟ್ಟಕ್ಕೆ ಮರಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಕೋವಿಡ್ ನ ಮೂರನೇ ಅಲೆಯು ಬಂದಲ್ಲಿ ದ್ವಿಚಕ್ರ ವಾಹನ ಬೇಡಿಕೆಯೂ ಇನ್ನಷ್ಟು ಕಡಿಮೆಯಾಗಲಿದೆ ಎಂದು ವಿಂಕೀಶ್ ಗುಲಾಟಿ ಅವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ವಿಶೇಷ ಚೇತನರಿಗೆ ಶೃಂಗೇರಿ ಪೀಠದ ನೆರವು

1

ಶೃಂಗೇರಿ ಶಾರದಾ ಪೀಠವು ಅನೇಕ ಆಸ್ಪತ್ರೆಗಳನ್ನು ತೆರೆದು ಆರೋಗ್ಯ ಸೇವೆ ನೀಡುತ್ತಿದೆ. ಹೆಣ್ಣುಮಕ್ಕಳಿಗೆ ಜಗದ್ಗುರುಗಳ ವರ್ಧಂತಿಯಂದು ಉಚಿತವಾಗಿ ಹೊಲಿಗೆ ಯಂತ್ರ ಮತ್ತು ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡುತ್ತಿದೆ. ವಿಕಲಚೇತನ ಮಕ್ಕಳಿಗೆ ವಿಶೇಷ ಗೌರವ ನೀಡುವಂತೆ ಶೃಂಗೇರಿ ಶ್ರೀ ಶಾರದಾ ಪೀಠದ ಪ್ರತಿನಿಧಿ ಉಮೇಶ್ ಅವರು ತಿಳಿಸಿದ್ದಾರೆ.
ಶಿವಮೊಗ್ಗದ ಸಕ್ಷಮದಿಂದ ಕಲ್ಲಹಳ್ಳಿಯ ಮಾಧವನೆಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಶೃಂಗೇರಿ ಪೀಠದಿಂದ ಫಲಾನುಭವಿಗಳಿಗೆ 10 ಮೂರು ಚಕ್ರದ ಸೈಕಲ್ ವಿತರಿಸಲಾಯಿತು.
1,200 ವರ್ಷಗಳ ಹಿಂದೆ ಧರ್ಮ ಕ್ಷೋಭೆ ಉಂಟಾದಾಗ ಭಗವಂತ ಶಂಕರಾಚಾರ್ಯರ ರೂಪದಲ್ಲಿ ಸನಾತನ ಧರ್ಮವನ್ನು ಕಾಪಾಡಿ ನಾಲ್ಕು ದಿಕ್ಕಿನಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ದಕ್ಷಿಣಾಮ್ನಾಯ ಶೃಂಗೇರಿ ಪೀಠ ಇದುವರೆಗೆ 36 ಜಗದ್ಗುರುಗಳನ್ನು ಕಂಡಿದ್ದು, ಎಲ್ಲರೂ ಸನಾತನ ಧರ್ಮದ ರಕ್ಷಣೆ ಮತ್ತು ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಇದೇ ಈ ಪೀಠದ ಉದ್ದೇಶ ಎಂದರು.
ಶೃಂಗೇರಿ ಸಂಸ್ಥಾನ ಸಾಮಾಜಿಕ, ಆರ್ಥಿಕ, ಆರೋಗ್ಯ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಅಂಗವಿಕಲರಿಗೆ ವಿಶೇಷ ಒತ್ತು ನೀಡುತ್ತಿದೆ ಎಂದರು.

ಸಕ್ಷಮ ಸಂಸ್ಥೆ ಕಾರ್ಯದರ್ಶಿ ಕುಮಾರ ಶಾಸ್ತ್ರಿಯವರು ಮಾತನಾಡಿ, ಅಂಗವಿಕಲರ ಸಂಕಷ್ಟ ಅರಿತು ಕೊರೊನಾ ಸಂದರ್ಭದಿಂದ ಇಲ್ಲಿಯವರೆಗೂ 120 ಜನರಿಗೆ ಪ್ರತಿ ತಿಂಗಳು ಆಹಾರದ ಕಿಟ್ ವಿತರಿಸಲಾಗುತ್ತಿದೆ. ಆರೋಗ್ಯ ಸೌಲಭ್ಯ ಮತ್ತು ಪುಸ್ತಕಗಳು, ಸ್ಟೇಷನರಿ ಸೇರಿದಂತೆ ಮಕ್ಕಳಿಗೆ ಅನೇಕ ಸಹಕಾರವನ್ನು ಸಂಸ್ಥೆ ನೀಡುತ್ತಿದೆ. ಬುದ್ದಿಮಾಂದ್ಯ ಮಕ್ಕಳಿಗೆ ವಿಶೇಷ ಸಲಕರಣಗಳನ್ನು ಒದಗಿಸಿದೆ ಎಂದರು.
ಸಾಗರದ ಅದಮ್ಯ ಚೇತನ ಶಾಲೆಯ 4 ವಿದ್ಯಾರ್ಥಿಗಳು ರಾಷ್ಟ್ರೀಯ ಕೋಚಿಂಗ್ ಕ್ಯಾಂಪ್ ಗೆ ಆಯ್ಕೆಯಾಗಿದ್ದು ಅವರನ್ನು ಅಭಿನಂದಿಸಲಾಯಿತು. ಸಕ್ಷಮ ಸಂಸ್ಥೆಯ ಅಧ್ಯಕ್ಷ ಡಾ. ಪ್ರಶಾಂತ್ ಇಸ್ಲೂರ್ , ರಮೇಶ್ ಪ್ರಭು , ಗಣೇಶ್ ಪ್ರಸಾದ್ , ಉದಯ್ ಕುಮಾರ್ ಹಾಗೂ ಶಿವಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ರಾಜ್ಯದಲ್ಲಿ ಒಮಿಕ್ರಾನ್ ಹೊಸ ಪ್ರಕರಣಗಳು.

0

ಕೊರೊನಾ ವೈರಾಣುವಿನ ರೂಪಾಂತರಿ ಓಮಿಕ್ರಾನ್ ಸೋಂಕಿನ 12 ಹೊಸ ಪ್ರಕರಣಗಳು ರಾಜ್ಯದಲ್ಲಿ ದೃಢಪಟ್ಟಿದೆ. ಹೊಸ ತಳಿಯ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆಯಿಂದ ಬೆಂಗಳೂರಿನಲ್ಲಿ 10, ಮೈಸೂರು ಹಾಗೂ ಮಂಗಳೂರಿನಲ್ಲಿ ತಲಾ ಒಬ್ಬರಲ್ಲಿ ಓಮಿಕ್ರಾನ್ ದೃಢಪಟ್ಟಿದೆ. ಸೋಂಕಿತ 12 ಮಂದಿಯಲ್ಲಿ 9ಮಂದಿ ವಿದೇಶ ಪ್ರಯಾಣ ಮಾಡಿದ್ದರು.
ಕೋವಿಡ್ ದೃಢಪಡುವಿಕೆ ಪ್ರಮಾಣವು ಶೇ 10 ದಾಟುವುದಕ್ಕೆ ಮುನ್ನ ಮತ್ತು ಆಮ್ಲಜನಕ ಲಭ್ಯ ಇರುವ ಹಾಸಿಗೆಗಳ ಭರ್ತಿ ಪ್ರಮಾಣವು ಶೇ 40ಕ್ಕೆ ತಲುಪುವ ಮುನ್ನ ನಿರ್ಬಂಧ ಮತ್ತು ನಿಷೇಧಗಳನ್ನು ಹೇರುವುದಾದರೆ ರಾಜ್ಯಗಳಿಗೆ ಅವಕಾಶವಿದೆ. ಜನದಟ್ಟನೆ ಮತ್ತು ಸ್ಥಳೀಯ ಪರಿಸ್ಥಿತಿಯ ಆಧಾರದಲ್ಲಿ ನಿರ್ಧಾರಗಳನ್ನು ಕೈಗೊಳ್ಳಬಹುದು. ಯಾವುದೇ ನಿರ್ಧಾರಗಳನ್ನು ಹೇರುವುದಾದರೆ, ಕನಿಷ್ಠ 14 ದಿನ ಅದು ಜಾರಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಹೇಳಿದೆ.
ಕೋವಿಡ್-19 ನಿಯಂತ್ರಣಕ್ಕಾಗಿ ಈ ಹಿಂದೆ ಆರಂಭಿಸಿದ್ದ ಕೇಂದ್ರಗಳನ್ನು ಹಲವು ರಾಜ್ಯಗಳು ಸ್ಥಗಿತಗೊಳಿಸಿವೆ.ಈ ಎಲ್ಲಾ ಕೇಂದ್ರಗಳನ್ನು ಕಾರ್ಯಾಚರಣೆಗೆ ಸಿದ್ಧಪಡಿಸಲು ಕ್ರಿಯಾಯೋಜನೆ ರೂಪಿಸಿ, ವೈದ್ಯರು, ಅಂಬುಲೆನ್ಸ್, ಇತ್ಯಾದಿ ಲಭ್ಯ ಇರುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ 11:00 ರಿಂದ ಬೆಳಿಗ್ಗೆ ಐದು ರವರೆಗೆ ಕರ್ಫ್ಯೂ ಹೇರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆ ಹತ್ತಿರದಲ್ಲಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಬರುವುದನ್ನು ತಡೆಯಲು ರಾತ್ರಿ ಕರ್ಫ್ಯೂ ಹೇರಬಹುದು. ಹೆಚ್ಚು ಜನರು ಸೇರುವುದನ್ನು ತಡೆಯಬಹುದು.
ಕಂಟೈನ್ ಮೆಂಟ್ ಮತ್ತು ಬಫರ್ ವಲಯಗಳನ್ನು ರೂಪಿಸಬೇಕು. ಹೊಸ ಕ್ಲಸ್ಟರ್ ಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಸೂಚಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಕಾಬೂಲ್ ಪಾಸ್ ಪೋರ್ಟ್ ಕಛೇರಿಗೆ ಧಾಳಿ

0

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ ಪಾಸ್ ಪೋರ್ಟ್ ಕಚೇರಿಯ ಪ್ರವೇಶ ದ್ವಾರದ ಬಳಿ ಆತ್ಮಹತ್ಯೆ ದಾಳಿಕೋರರನ್ನು ಹತ್ಯೆ ಮಾಡಲಾಗಿದೆ.

ಪಾಸ್ ಪೋರ್ಟ್ ಕಛೇರಿ ಒಳಗೆ ಪ್ರವೇಶಿಸಲು ದಾಳಿ ಕೋರರನ್ನು ಗುಂಡಿಕ್ಕಿ ಆತನನ್ನು ಹತ್ಯೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸ್ಫೋಟದಲ್ಲಿ ಗೃಹ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ.

ಈ ಪ್ರದೇಶದ ಸುತ್ತಮುತ್ತಲಿನ ಕಟ್ಟಡಗಳು ಹಾಗೂ ರಸ್ತೆಗಳನ್ನು ತಾಲಿಬಾನ್ ಭದ್ರತಾಪಡೆಗಳು ಲಾಕ್ಡೌನ್ ಮಾಡಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ವಾತಾವರಣವು ಸಹಜಸ್ಥಿತಿಗೆ ಮರಳಿದ ನಂತರ, ಪಾಸ್ ಪೋರ್ಟ್ ಕಚೇರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅವರನ್ನು ಗುರಿಯಾಗಿಸಿ ದಾಳಿ ಮಾಡುವುದು ಉದ್ದೇಶವಾಗಿರಬಹುದು ಎಂದು ವಕ್ತಾರರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಸಕಾಲ ಈಗ ಸುವೇಗ ಪಡೆದಿದೆ

0

ಸಕಾಲ ಯೋಜನೆಯಲ್ಲಿ ಅರ್ಜಿಗಳ ವಿಲೇವಾರಿ ಸ್ವಲ್ಪ ವೇಗ ಪಡೆದಿದೆ. ಹಲವು ತಿಂಗಳ ಹಿಂದೆ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಂತಹ ಅರ್ಜಿಗಳ ಸಂಖ್ಯೆ ಇಳಿಕೆವಾಗಿದ್ದು, ದಿನನಿತ್ಯ ಸಾವಿರಾರು ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಸಕಾಲ ಯೋಜನೆ ಅರ್ಜಿ ವೇಗ ಹೆಚ್ಚಿರುವುದರಿಂದ ಜನರ ಅಲೆದಾಟ ತಪ್ಪಿದಂತಾಗಿದೆ.

ಇಲ್ಲಿಯವರೆಗೆ ಸಕಾಲ ಯೋಜನೆಯ ಒಟ್ಟು 17,85,101ರಷ್ಟು ಈ ಸಲ್ಲಿಕೆಯಾಗಿದೆ. 17,46,548 ರಷ್ಟು ಅರ್ಜಿಗಳ ವಿಲೇವಾರಿ ಮಾಡಲಾಗಿದೆ ಹಾಗೂ ಕಂದಾಯ ಇಲಾಖೆಯಲ್ಲಿ ಒಟ್ಟು 16,064 ಅರ್ಜಿಗಳು ಬಾಕಿಯಿವೆ ಎಂದು ತಿಳಿದುಬಂದಿದೆ.

ಕಂದಾಯ ಇಲಾಖೆಯಲ್ಲಿ ಪ್ರಸ್ತುತ ತಿಂಗಳಿನಲ್ಲಿ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ರಾಜ್ಯ ಸರ್ಕಾರದ ಸಕಾಲ ಯೋಜನೆಯಡಿ ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಕೆಯಾಗುತ್ತದೆ. ಹಲವು ರೀತಿಯ ಸೇವೆಗಳಿಗೆ ಜನತೆಯ ಮನವಿ ಮಾಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ನಾನಾ ರೀತಿಯ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆಯ ಮೇಲೆ ನಿಯಂತ್ರಣವಿಲ್ಲದಂತಾಗಿತ್ತು. ಈ ಕಾರಣದಿಂದ ಅರ್ಜಿಗಳು ವಿಲೇವಾರಿಯ ಮಾಡಿರಲಿಲ್ಲ.