Wednesday, February 11, 2026
Wednesday, February 11, 2026
Home Blog Page 1807

ಮತಾಂತರ ನಿಷೇಧ ವಿಧಾನಸಭೆ ಒಪ್ಪಿಗೆ

0

ಮತಾಂತರವನ್ನು ನಿಷೇಧಿಸುವ, ಮತಾಂತರ ಮಾಡುವವರನ್ನು ಗರಿಷ್ಠ 10 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲು ಅವಕಾಶ ಇರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ಮಸೂದೆ 2021ಕ್ಕೆ ಅಂಗೀಕಾರ ದೊರೆತಿದೆ.
ವಿಧಾನಪರಿಷತ್ತಿನಲ್ಲಿ ಮಸೂದೆಗೆ ಒಪ್ಪಿಗೆ ಸಿಕ್ಕಿದ ಬಳಿಕವಷ್ಟೇ ಕಾಯ್ದೆ ಜಾರಿಯಾಗಲಿದೆ . ಪರಿಷತ್ತಿನಲ್ಲಿ ಮಸೂದೆ ಮಂಡಿಸುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಕಲಾಪ ಆರಂಭವಾಗುತ್ತಿದ್ದಂತೆ, ಮಸೂದೆಯ ಕುರಿತು ಪ್ರಾರ್ಥಮಿಕ ವಿವರಣೆ ನೀಡಿದ ಗೃಹ ಸಚಿವ ಅರಗ ಜ್ಞಾನೆಂದ್ರ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೀಡಲಿದ್ದಾರೆ ಎಂದರು.
ಈ ಮಸೂದೆಯನ್ನು ಸಿದ್ದರಾಮಯ್ಯ ಅವಧಿಯಲ್ಲೇ ರೂಪಿಸಲಾಗಿತ್ತು. ಅಂದಿನ ಕಾನೂನು ಸಚಿವರು ಮಸೂದೆ ಪರಿಶೀಲನೆ ನಡೆಸಿ, ಸಚಿವ ಸಂಪುಟದ ಮುಂದೆ ತರಲು ಹೊರಟಿದ್ದರು. ಮಂಡಿಸುವಂತೆ ಸಿದ್ದರಾಮಯ್ಯ ಅವರೇ ಸಹಿ ಮಾಡಿದ್ದರು. ಅದನ್ನು ನಾವು ಪರಿಷ್ಕರಿಸಿ ಮಂಡಿಸಿದ್ದೇವೆ ಎಂದು ಮಾಧುಸ್ವಾಮಿ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ನ ಪ್ರತಿಭಟನಾ ಧರಣಿ ಹಾಗೂ ಜೆಡಿಎಸ್ ವಿರೋಧದ ಮಧ್ಯೆಯೇ ಈ ಮಸೂದೆಗೆ ಅಂಗೀಕಾರ ದೊರೆತಿದೆ.
ವಿಧಾನ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದ ಕಾಂಗ್ರೆಸ್ ಸದಸ್ಯರು ಸರ್ಕಾರ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಸೂದೆ ವಿರೋಧಿಸಿದರೂ ಏನು ಮಾಡಬೇಕು ಎಂಬ ಗೊಂದಲಕ್ಕೆ ಒಳಗಾದ ಜೆಡಿಎಸ್ ನ ಒಂದಿಬ್ಬರು ಸದಸ್ಯರು ಧರಣಿಯಲ್ಲಿ ಭಾಗಿಯಾಗಿದ್ದರು.
ಮತಾಂತರ ನಿಷೇಧ ಕಾಯ್ದೆ ತರಬೇಕು ಎಂಬುದು ಆರ್ ಎಸ್ ಎಸ್ ನ ರಹಸ್ಯ ಕಾರ್ಯಸೂಚಿಯಲ್ಲ. ಬಹಳ ಹಿಂದಿನಿಂದಲೂ ನಾಯಕರು ಅದನ್ನು ಪ್ರತಿಪಾದಿಸಿಕೊಂಡು ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಿಮ್ಮ ಅವಧಿಯಲ್ಲಿ ಮಸೂದೆ ರೂಪಿಸಿದಿರಿ, ಆಗ ನೀವು ಈ ಕಾಯ್ದೆ ಮಾಡಲು ಮುಂದಾಗಿದ್ದು ಏಕೆಂದರೆ, ಆಗ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದರು ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪುಲ್ವಾಮಜಿಲ್ಲೆಯಲ್ಲಿ ಸ್ಫೋಟಕ ಪತ್ತೆ

0

ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಮಗ್ರಿ ಪತ್ತೆಯಾಗಿದೆ. ಭದ್ರತಾಪಡೆಗಳು ಸ್ಪೋಟಕವನ್ನು ನಾಶಪಡಿಸುವ ಮೂಲಕ ದೊಡ್ಡ ಪ್ರಮಾಣದ ಅನಾಹುತವನ್ನು ತಪ್ಪಿಸಿವೆ.

ಗುಪ್ತಚರ ದಳದ ಖಚಿತ ಮಾಹಿತಿ ಮೇರೆಗೆ, ವಾನ್ ಪೋರಾ ಪ್ರದೇಶದ ನೆವಾ ಶ್ರೀನಗರ ರಸ್ತೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಸುಮಾರು ಐದು ಕೆ.ಜಿ ತೂಕದ ಸುಧಾರಿತ ಸ್ಫೋಟಕ ಪತ್ತೆಯಾಗಿದೆ. ಡಬ್ಬಿಯೊಂದರಲ್ಲಿ ಹಾಕಿಡಲಾಗಿತ್ತು. ದೊಡ್ಡಗಾತ್ರದ ಸ್ಫೋಟಕವನ್ನು ಭದ್ರತಾಪಡೆಗಳು ಪತ್ತೆ ಹಚ್ಚುವ ಮೂಲಕ ದೊಡ್ಡ ಪ್ರಮಾಣದ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ತಿಳಿಸಿದರು.

ಪತ್ತೆಯಾದ ಸ್ಪೋಟಕವನ್ನು ಪೊಲೀಸ್ ಹಾಗೂ ಸೇನೆಯ ಬಾಂಬ್ ನಿಷ್ಕ್ರಿಯ ತಂಡ ನಾಶಪಡಿಸಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಪಕ್ಷದಿಂದ ಸಚಿವರ ಖಾತೆ ನಿರ್ವಹಣೆ ಪರಾಮರ್ಶೆ

0

ಜನರಿಂದ ಚುನಾಯಿತರಾದ ಅಂತಹ ರಾಜಕೀಯ ನಾಯಕರಿಗೆ ರಾಜ್ಯ ಸರ್ಕಾರ ವಹಿಸಿ ಕೊಟ್ಟಿರುವ ಇಲಾಖೆಯಲ್ಲಿ ಕ್ರಿಯಾಶೀಲತೆಯಿಂದ ಕೆಲಸ ಮಾಡದೆ, ವಿನಾಕಾರಣ ಜಾತಿ ಮಾಡುತ್ತಾ ಸರ್ಕಾರದ ಘನತೆ ಕುಗ್ಗಿಸುವಂತಹ ಕೆಲಸ ಮಾಡುವ ಇವರನ್ನ ಅಧಿಕಾರದಿಂದ ಕೈ ಬಿಡುವ ಕುರಿತು ಕೇಂದ್ರ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ರಾಜ್ಯದ ಸಚಿವರು ಇಲಾಖೆಗಳಲ್ಲಿ ಉತ್ತಮ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಬೇಕು. ಆದರೆ ಸಚಿವರು ಆಂತರಿಕ ಸಮಸ್ಯೆ ಸೃಷ್ಟಿಸುವುದು ಪಕ್ಷಕ್ಕೆ ಮುಜುಗರ ಉಂಟುಮಾಡುತ್ತದೆ. ಸದ್ಯಕ್ಕೆ ನಾಯಕತ್ವ ಚಲಾವಣೆ ಇಲ್ಲ ಮುಂದಿನ ವಿಧಾನಸಭೆ ಚುನಾವಣೆವರೆಗೂ ಬೊಮ್ಮಾಯಿ ಅವರೇ ಮುಂದುವರಿಯಲಿದ್ದಾರೆ ಎಂದು ಪಕ್ಷದ ವರಿಷ್ಟರು ಸ್ಪಷ್ಟಪಡಿಸಿದರೂ, ಕೆಲ ಸಚಿವರು ಜನರಲ್ಲಿ ಗೊಂದಲ ಮೂಡಿಸುವಂತೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಸಚಿವರ ಈ ವರ್ತನೆಯಿಂದ ಕೇಂದ್ರದಲ್ಲಿರುವ ಬಿಜೆಪಿ ವರಿಷ್ಠರು ಬೇಸರ ವ್ಯಕ್ತಪಡಿಸಿದ್ದಾರೆ.

ಜನವರಿಯ ಮೊದಲನೇ ವಾರದಲ್ಲಿ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಸಚಿವರ ಸಾಧನೆ ಕುರಿತಂತೆ ಕಾರ್ಯವೈಖರಿ ಪರಾಮರ್ಶೆ ನಡೆಸಿ ಕಳಪೆ ಸಾಧನೆ ಮಾಡಿದ ಸಚಿವರನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಲುಧಿಯಾನ ಕೋರ್ಟ್ ನಲ್ಲಿ ಸ್ಫೋಟ

0

ಲುಧಿಯಾನ ಜಿಲ್ಲಾ ಕೋರ್ಟ್ ನಲ್ಲಿ ಬಾಂಬ್ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 12.22ಕ್ಕೆ ಕೋರ್ಟ್ ಕಲಾಪಗಳು ನಡೆಯುತ್ತಿದ್ದ ಸಮಯದಲ್ಲಿ ಕೋರ್ಟ್ ನ ಮೂರನೇ ಮಹಡಿಯಲ್ಲಿರುವ ಶೌಚಾಲಯದಲ್ಲಿ ಬಾಂಬ್ ಸ್ಪೋಟ ಸಂಭವಿಸಿದೆ.

ಬಾಂಬ್ ಸ್ಫೋಟದಿಂದಾಗಿ ಶೌಚಾಲಯದ ಗೋಡೆಗಳು ಕುಸಿದು ಬಿದ್ದಿತು ಅಕ್ಕಪಕ್ಕದ ಕೊಠಡಿಗಳಿಗೆ ಹಾನಿಯುಂಟಾಗಿದೆ. ಈ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದರೆ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟ ಸಂಭವಿಸಿದ ಬಳಿಕ ಲುಧಿಯಾನ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ಕೇಂದ್ರ ಗೃಹ ಸಚಿವಾಲಯವು ಕೋರ್ಟ್ ಸ್ಫೋಟ ಘಟನೆ ಕುರಿತಂತೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಸ್ಪೋಟ ಕುರಿತಂತೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಸ್ಫೋಟ ಕುರಿತಂತೆ ಸೂಕ್ತ ತನಿಖೆಗೆ ಆದೇಶಿಸುವಂತೆ ಪಂಜಾಬ್ ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ನಿರ್ದೇಶನ ನೀಡಿದ್ದಾರೆ.

“ಕೋರ್ಟ್ ನಲ್ಲಿ ಬಾಂಬ್ ಸ್ಫೋಟ ಕುರಿತಂತೆ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಯಾರೋ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳುಗೆಡವುತ್ತಿದ್ದಾರೆ. ಉಗ್ರರ ದಾಳಿ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು” ಎಂದು ಪ್ರತಿಕ್ರಿಯಿಸಿದ್ದಾರೆ.

‘ಗಡಿ ರಾಜ್ಯದಲ್ಲಿರುವ ನಾವು ಹೊರಗಿನವರ ಕೈವಾಡವನ್ನು ತಳ್ಳಿಹಾಕುವಂತಿಲ್ಲ. ಉಗ್ರರಿಂದ ಆತ್ಮಹತ್ಯೆ ದಾಳಿ ನಡೆದಿರುವ ಸಾಧ್ಯತೆಯಿದೆ. ಪೂರ್ಣ ಪಂಜಾಬ್ ಹೈಅಲರ್ಟ್ ನಲ್ಲಿದೆ’ ಪಂಜಾಬ್ ನ ಉಪಮುಖ್ಯಮಂತ್ರಿ ಸುಕ್ ಸುಖ್ ಜಿಂದರ್ ಸಿಂಗ್ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಒಮಿಕ್ರಾನ್ ಗಡಿಭಾಗ: ಕಟ್ಟುನಿಟ್ಟು ಕ್ರಮ

0

ಓಮಿಕ್ರಾನ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ರಾಜ್ಯದ ಗಡಿಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ರಾಜ್ಯದ ಗಡಿ ಪ್ರವೇಶಿಸುವ ಪ್ರತಿಯೊಬ್ಬರು ನಿರೋಧಕ ಲಸಿಕೆಗಳನ್ನು ಕಡ್ಡಾಯವಾಗಿ ಪಡೆದಿರಬೇಕು ಎಂದು ಸರ್ಕಾರ ನಿರ್ಬಂಧನೆ ಹೇರಿದೆ. ಆದರೆ ಲಸಿಕೆ ಪಡೆಯುವ ಮೊದಲೇ ಸರ್ಟಿಫಿಕೇಟ್ ಜನರೇಟ್ ಆಗುತ್ತಿರುವುದರಿಂದ ಎರಡನೇ ಡೋಸ್ ಪಡೆಯದಿದ್ದರೂ ಅಡ್ಡಾಡಬಹುದಾಗಿದೆ. ಇದರಿಂದ ಎರಡನೇ ಡೋಸ್ ಪಡೆಯುವವರೆಗೂ ತೊಂದರೆ ಎದುರಾಗಿದೆ.

ಮಹಾರಾಷ್ಟ್ರ, ಕೇರಳ ಗಡಿಯಿಂದ ಬರುವ ಜನರಿಗೆ ವರದಿ ಕಡ್ಡಾಯ ಮಾಡಲಾಗಿದೆ. ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ನಿಯಂತ್ರಣ ಲಸಿಕೆಯ ಎರಡು ಡೋಸ್ ಪಡೆದ ಸರ್ಟಿಫಿಕೇಟ್ ಇರಲೇಬೇಕು.

ರಾಜ್ಯದಲ್ಲಿ ಈವರೆಗೆ 18 ವರ್ಷ ಮೇಲ್ಪಟ್ಟ 4.89 ಕೋಟಿ ಜನರನ್ನು ಗುರುತಿಸಲಾಗಿದೆ. ಅದರಲ್ಲಿ 4.70 ಕೋಟಿ ಜನರಿಗೆ 2 ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆರೋಗ್ಯ ಸೇತು ತಂತ್ರಾಂಶದಲ್ಲಿ 2 ಡೋಸ್ ಲಸಿಕೆ ಪಡೆಯಲಾಗಿದೆ ಎಂಬ ಮಾಹಿತಿ ತೋರಿಸಿದ್ದರಿಂದ ಮತ್ತೆ ಅವರಿಗೆ ಲಸಿಕೆಯನ್ನು ತಂತ್ರಾಂಶದಲ್ಲಿ ಅವಕಾಶ ಇಲ್ಲ ಇದರಿಂದ ಜನರು ತೊಂದರೆಗೊಳಗಾಗಿದ್ದಾರೆ. ಕೆಲವರು ಅಧಿಕಾರಿಗಳ ಬೆನ್ನುಬಿದ್ದು ತಾಂತ್ರಿಕ ಸಮಸ್ಯೆ ಸರಿ ಮಾಡಿಸಿಕೊಂಡು ಲಸಿಕೆ ಪಡೆಯುತ್ತಿದ್ದರೆ, ಲಸಿಕೆಯ ಭಯ ಇದ್ದವರು ಮತ್ತೊಮ್ಮೆ ಲಸಿಕೆ ಪಡೆಯುವ ಸಾಹಸವೇ ಮಾಡುತ್ತಿಲ್ಲ ಎಂದು ತಿಳಿದುಬಂದಿದೆ.

‘ಲಸಿಕೆ ನೀಡುವ ಮೊದಲೇ 2 ಡೋಸ್ ಪಡೆದ ಸರ್ಟಿಫಿಕೇಟ್ ಜನರೇಟ್ ಆಗುತ್ತಿದೆ. ಇದರಿಂದ ಎರಡನೇ ಡೋಸ್ ವಿತರಣೆ ಸಮಸ್ಯೆ ಆಗಿದೆ. ಕೆಲ ವೈದ್ಯರಿಗೂ ಇದೇ ರೀತಿ ಆಗಿತ್ತು. ಕೊನೆಗೆ ತಾಂತ್ರಿಕ ಸಿಬ್ಬಂದಿ ಕಸರತ್ತು ಮಾಡಿ ಎರಡನೇ ಡೋಸ್ ಕೊಡಿಸಿದ್ದಾರೆ. ಈ ಬಗ್ಗೆ ಕೇಂದ್ರ ಆರೋಗ್ಯ ಸೇತು ಭಾಗಕ್ಕೂ ತಿಳಿಸಲಾಗಿದೆ. ಸಮಸ್ಯೆ ನಿಭಾಯಿಸುವುದೇ ಕಷ್ಟವಾಗುತ್ತಿದೆ’ ಎಂದು ಕಾರವಾರ ಡಿ.ಹೆಚ್.ಒ ಶರದ ನಾಯಕ ಅವರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಅಡಿಕೆ ಬೆಳೆ ಹಾನಿ : ಪರ್ಯಾಯ ಯೋಜನೆ

0

ರಾಜ್ಯ ಸರ್ಕಾರ ಅಡಿಕೆಗೆ ಪರ್ಯಾಯ ಬೆಳೆ ಬೆಳೆಸುವ ನಿಟ್ಟಿನಲ್ಲಿ ಬೆಳೆಗಾರರಿಗೆ 16 ಕೋಟಿ ರೂ. ವೆಚ್ಚದ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ಪರಿಷತ್ತಿನಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ.

“ಅಧಿವೇಶನದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಕೇಳಿದ ಪ್ರಶ್ನೆಗೆ ರೋಗದಿಂದಾಗಿ ಶೇ.60ಕ್ಕಿಂತ ಹೆಚ್ಚಿನ ಬೆಳೆ ಹಾನಿ ಉಂಟಾದ ಪ್ರದೇಶದಲ್ಲಿ ಪರ್ಯಾಯ ಬೆಳೆ ಬೆಳೆಸಲು ಪ್ರೋತ್ಸಾಹ ಧನ ನೀಡಲಾಗುತ್ತದೆ. ಇದಕ್ಕಾಗಿ 16 ಕೋಟಿ ರೂ. ಯೋಜನೆ ತಯಾರಿಸಿ ಹಣಕಾಸು ಇಲಾಖೆಗೆ ಅನುಮೋದನೆಗೆ ಕಳಿಸಿದ್ದೇವೆ” ಎಂದು ಸಚಿವ ಮುನಿರತ್ನ ಉತ್ತರಿಸಿದ್ದಾರೆ.

ಅಡಿಕೆ ಹಳದಿ ರೋಗ ದ ಸಂಶೋಧನೆ ನಡೆಸುವ ನಿಟ್ಟಿನಲ್ಲಿ 8.17 ಕೋಟಿ ರೂ. ಪ್ರಯೋಗಾಲಯಗಳಿಗೆ ಮೀಸಲಿಟ್ಟಿದ್ದೇವೆ. ಹಿಂದಿನ ಬಜೆಟ್ನಲ್ಲಿ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ 55 ಕೋಟಿ ರೂ ಘೋಷಣೆ ಮಾಡಲಾಗಿತ್ತು. ಆ ಹಣವನ್ನು ಬಿಡುಗಡೆ ಮಾಡಲು ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ. ಹಣ ಮಂಜೂರಾದ ತಕ್ಷಣ ಸಂಶೋಧನಾ ಉದ್ದೇಶಕ್ಕಾಗಿ ಅದನ್ನು ಬಳಸಲಾಗುವುದು ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ.

ಮುನಿರತ್ನ ಅವರ ಉತ್ತರಕ್ಕೆ “ನಾನು ಕೂಡ ಅಡಿಕೆ ಬೆಳೆಗಾರನ ಆದಕಾರಣ ಕಾಳಜಿಯಿಂದ ಮಾತನಾಡುತ್ತೇನೆ. ನೀವು 25 ಕೋಟಿ ಆರ್ಥಿಕ ಇಲಾಖೆಯಿಂದ ಬರುತ್ತದೆ ಎಂದು ಕಾದು ಕುಳಿತರೆ ಅದು ಬರುವುದೇ ಇಲ್ಲ. ಆರ್ಥಿಕ ಇಲಾಖೆಯಲ್ಲಿದೆ ಎಂದು ನಿಮಗೆ ಗೊತ್ತೇ” ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾಲೆಳೆದಿದ್ದಾರೆ.

“ಅಡಿಕೆ ಹಳದಿ ರೋಗದ ಬಗ್ಗೆ ಸಂಶೋಧನೆ ಮಾಡಲು 3 ಕೋಟಿ ರೂ. ಮಂಜೂರು ಮಾಡಿದ್ದು, ಅದನ್ನು ಕೇರಳದ ಕಾಸರಗೋಡಿನಲ್ಲಿರುವ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರಕ್ಕೆ ನೀಡಲಾಗಿದೆ. ಇದು ಸರಿಯಲ್ಲ. ಈ ಮೊತ್ತವನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಸಂಶೋಧನಾ ಸಂಸ್ಥೆಗಳಿಗೆ ನೀಡಬೇಕು. ಟಿಎಸ್ಎಸ್, ಮ್ಯಾಮ್ಕೋಸ್, ಕ್ಯಾಂಪ್ಕೋ ಮುಂತಾದ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡಲು ಸಿದ್ಧರಿದ್ದಾರೆ ಸಂಜೀವ ಮಠಂದೂರು ಅವರು ಸರ್ಕಾರದ ಗಮನಕ್ಕೆ ತಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಜೀವನವೇ ಕಾನೂನು ಮಯ – ಕೆ.ಎನ್. ಸರಸ್ವತಿ

0

ಹುಟ್ಟಿನಿಂದ ಸಾಯುವವರೆಗೆ ಕಾನೂನು ಅಡಿಯಲ್ಲಿ ಮನುಷ್ಯ ಜೀವಿಸಿದರೂ ಶೋಷಣೆ, ದೌರ್ಜನ್ಯಗಳು ತಪ್ಪಿಲ್ಲ. ಇದಕ್ಕೆ ಕಾನೂನು ಅರಿವಿನ ಕೊರತೆಯೇ ಕಾರಣ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಸರಸ್ವತಿ ಅವರು ಹೇಳಿದ್ದಾರೆ.

ಶಿವಮೊಗ್ಗದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ನ್ಯಾಯವಾದಿಗಳ ಸಂಘ, ಒಕ್ಕಲಿಗರ ಸಂಘ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ಇ- ಗವರ್ನೆನ್ಸ್, ಆರ್. ಟಿ. ಐ. ಮತ್ತು ಸಿವಿಸಿ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

‘ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾವಿರಾರು ಕಾನೂನುಗಳಿವೆ. ನಮಗೆ ಗೊತ್ತಿಲ್ಲದ ಹಾಗೆ ತಾಯಿಯ ಗರ್ಭದಿಂದ ಹಿಡಿದು ಸಾಯುವವರೆಗೆ ಕಾನೂನಿನ ಅಡಿಯಲ್ಲಿ ಇರುತ್ತೇವೆ. ಜನನ, ಮರಣ ನೊಂದಣಿ ಎಷ್ಟು ಅಗತ್ಯವೋ, ಇಷ್ಟಪಡಲಿ ಅಥವಾ ಬಿಡಲಿ ಕಾನೂನಿಲ್ಲದೆ ಜೀವನ ನಡೆಸಲಾಗುವುದಿಲ್ಲ ಎಂದು ಕೆ.ಎನ್. ಸರಸ್ವತಿ ಅವರು ತಿಳಿಸಿದರು.

ನಿಸರ್ಗದಿಂದಲೂ ನಮಗೆ ಅನೇಕ ಹಕ್ಕುಗಳು ಲಭಿಸಿವೆ. ಗೌರವಯುತವಾಗಿ ಜೀವಿಸುವ ಹಕ್ಕು, ಎಲ್ಲ ಜಾತಿ, ಧರ್ಮ, ಲಿಂಗ, ಭಾಷೆಯವರಿಗೆ ಕಾನೂನು ಸಮಾನವಾಗಿದೆ. ಮತ್ತೊಬ್ಬ ವ್ಯಕ್ತಿಯ ಹಕ್ಕಿಗೆ ಚ್ಯುತಿ ಮಾಡಲು ಕಾನೂನು ಅವಕಾಶಕೊಡುವುದಿಲ್ಲ ಎಂದು ಕೆ. ಎನ್. ಸರಸ್ವತಿ ಅವರು ಹೇಳಿದರು.

ಭ್ರಷ್ಟಾಚಾರ ನಿಯಂತ್ರಣಕ್ಕೆ ಆರ್ ಟಿಐ ಮೂಲಕ ದಕ್ಷತೆಯನ್ನು ಕಾಣುವ ವ್ಯವಸ್ಥೆ ಇದೆ. ಸಿವಿಸಿ ಮೂಲಕ ಭ್ರಷ್ಟಾಚಾರ ನಿಯಂತ್ರಣ ಮಾಡಲು ಕೂಡ ಕಾನೂನು ಇದೆ. ಸಿಬಿಐ, ಇಡಿ , ಇವುಗಳೆಲ್ಲವೂ ಸಿವಿಸಿ ಅಡಿಯಲ್ಲಿ ಕಾರ್ಯಾಚರಣೆ ಮಾಡುತ್ತವೆ. ಸರ್ಕಾರದ ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪಲು ಡಿಜಿಟಲೀಕರಣ ಮಾಡಲಾಗುತ್ತಿದೆ. ಇ- ಗವರ್ನೆನ್ಸ್ ಮೂಲಕ ಪಾರದರ್ಶಕತೆ ಅಳವಡಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

ಕೌಟುಂಬಿಕ ಮೌಲ್ಯ ನಶಿಸುತ್ತಿರುವ ಸಂದರ್ಭದಲ್ಲಿ ಸಮಾಜಕ್ಕೆ ನೀತಿ, ಸಂಸ್ಕಾರ ಮತ್ತು ಸಂಸ್ಕೃತಿಯಲ್ಲಿ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದೆ. ಶಿಕ್ಷಕರ ಬೋಧನೆ ವಿದ್ಯಾರ್ಥಿಗಳ ಜೀವನದಲ್ಲಿ ಪರಿಣಾಮಕಾರಿಯಾಗಲಿದೆ. ಜೀವನದ ಜೊತೆಗೆ ಸಮಾಜಕ್ಕೆ ನಾವು ಕೈಲಾದಮಟ್ಟಿಗೆ ಏನಾದರೂ ಕೊಡುಗೆ ನೀಡುವುದು ಎಲ್ಲರ ಜವಾಬ್ದಾರಿ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್. ಹೊನ್ನಳ್ಳಿ, ವಕೀಲ ಜಯಪ್ರಕಾಶ್, ಕಾಲೇಜು ಪ್ರಾಂಶುಪಾಲರಾದ ಮಧು, ಡಾ. ಪರಿಸರ ನಾಗರಾಜ್ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಭದ್ರಾವತಿ ನಗರಸಭೆ ವೈಫಲ್ಯ : ಬಿಜೆಪಿ ಪ್ರತಿಭಟನೆ

0

ಭದ್ರಾವತಿ ನಗರಸಭೆ ಆಡಳಿತ ವೈಖರಿ ಹಾಗೂ ಅಸಮರ್ಪಕ ಕಾಮಗಾರಿ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ನಗರಸಭೆ ಮುಂಭಾಗ ಪ್ರತಿಭಟನೆಯನ್ನು ನಡೆಸಲಾಯಿತು.

ನಗರಸಭೆ ಆಸ್ತಿ ತೆರಿಗೆ ಖಾತೆಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ಮಾಡಿದ್ದರೂ ಅದನ್ನು ದಾಖಲಿಸುವ ಕೆಲಸ ನಡೆಯದೆ ಕಂದಾಯ ಪಾವತಿ ಮಾಡಿದ ನಾಗರಿಕರು ಇ ಸ್ವತ್ತು ಮಾಡಿಸಲು ಪರದಾಟ ಸಿಗುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ನಗರಸಭೆ ದಿನಗೂಲಿ ನೌಕರರು ಕೆಲಸಕ್ಕೆ ಗೈರಾದರೂ ಹಾಜರಾತಿ ಪುಸ್ತಕದಲ್ಲಿ ಹಾಜರಿ ನಮೂದಿಸಿ ಭ್ರಷ್ಟಾಚಾರ ನಡೆಸಲಾಗಿದೆ. ಕುಡಿಯುವ ನೀರಿನ ಪೈಪ್ ಅಳವಡಿಕೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ. ರಸ್ತೆ ವಿಸ್ತರಣೆ ಕಾಮಗಾರಿ ವೈಫಲ್ಯದಿಂದ ಕೂಡಿದೆ. ಯುಜಿಡಿ ಕಾಮಗಾರಿ ಕಳೆದ ಎಂಟು ವರ್ಷದಿಂದ ಪೂರ್ಣವಾಗದೆ ಕಳಪೆಯಿಂದ ಕೂಡಿದೆ ಎಂದು ಪ್ರತಿಭಟನಾಕಾರರು ದೂಷಿಸಿದರು.

14 ಬೇಡಿಕೆಗಳ ಮನವಿಯನ್ನು ತಹಶೀಲ್ದಾರ ಪ್ರದೀಪ್ ಮತ್ತು ಪೌರಾಯುಕ್ತ ಪರಮೇಶ್ ಅವರಿಗೆ ಸಲ್ಲಿಸಿದ ಪ್ರತಿಭಟನಾಕಾರರು ಸೂಕ್ತ ಉತ್ತರ ಸಿಗದಿದ್ದಲ್ಲಿ ಭಾರಿ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಕಡಿಮೆ ಇಂಚಿನ ಪೈಪ್ಲೈನ್ ಅಳವಡಿಸಿ ಅದಕ್ಕೆ ಕರ ವಸೂಲಿ ಮಾಡುವ ಪ್ರವೃತ್ತಿ ಹೆಚ್ಚಿದೆ. ಇದರ ಕುರಿತು ಅಧಿಕಾರಿಗಳು ಸಮರ್ಪಕ ಉತ್ತರ ನೀಡದೆ ನಾಗರಿಕರನ್ನು ವಂಚಿಸುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷರಾದ ಎಸ್. ಪ್ರಭಾಕರ ಅವರು ತಿಳಿಸಿದ್ದಾರೆ.

ತಾಲೂಕು ಕಚೇರಿ ರಸ್ತೆಯಲ್ಲಿ ಅಸಮರ್ಪಕ ಕಾಮಗಾರಿ ನಡೆದಿದೆ. ರಸ್ತೆ ವಿಸ್ತರಣೆ ಸಮರ್ಪಕವಾಗಿಲ್ಲ. ಈ ಕುರಿತು ಸಾಕಷ್ಟು ಪ್ರತಿಭಟನೆ ನಡೆಸಿದರು ಮೌನವಹಿಸಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಆರ್. ಎಸ್ ಶೋಭಾ ಅವರು ತಿಳಿಸಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಕಂಡರೆ ಯಾರದೋ ಸುತ್ತಿಗೆ ಘಟಾನುಘಟಿಗಳು ಬೇಲಿ ಹಾಕಿಕೊಂಡು ತಮ್ಮದನ್ನಾಗಿ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಿದೆ. ಇದರಲ್ಲಿ ನಗರಸಭೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಜಿ. ಧರ್ಮ ಪ್ರಸಾದ್ ಅವರು ತಿಳಿಸಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ಶ್ರೀನಾಥ್, ವಿ. ಕದಿರೇಶ್, ನಾರಾಯಣಪ್ಪ, ಟಿ. ವೆಂಕಟೇಶ್ ಇನ್ನು ಮುಂತಾದವರು ಹಾಜರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಚಾಯ್ ಬೇಕಾ ಚಾಯ್

0

ಸೇವೆ ಕಾಯಂಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಚಹಾ ಮಾರಾಟ ಮಾಡುವ ಮುಖಾಂತರ ಚಾಯ್ ಬೇಕಾ ಚಾಯ್ ಎಂದು ಅತಿಥಿ ಉಪನ್ಯಾಸಕರು ಪ್ರತಿಭಟನೆಯನ್ನು ನಡೆಸಿದ್ದಾರೆ.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಿರಂತರವಾಗಿ ಧರಣಿ ನಡೆಯುತ್ತಿರುವ ಅತಿಥಿ ಉಪನ್ಯಾಸಕರು ಐದನೇ ದಿನ ಮಜ್ಜಿಗೆ ಮಾರಾಟ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಈ ಬಾರಿ ಚಾಯ್ ಬೇಕಾ ಚಾಯ್ ಎಂದು ಚಹಾ ಮಾರಾಟ ಮಾಡುವ ಮುಖಾಂತರ ತಮ್ಮ ಪ್ರತಿಭಟನೆ ನಡೆಸಿದ್ದಾರೆ.

“ರಾಜ್ಯದ 430 ಪ್ರಥಮದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಜೀವನಕ್ಕೆ ಭದ್ರತೆ ಇಲ್ಲದಂತಾಗಿದೆ. ಸರ್ಕಾರದ ಯಾವುದೇ ಸೌಲಭ್ಯಗಳು ಅವರಿಗೆ ಸಿಗುತ್ತಿಲ್ಲ.
ಅತಿಥಿ ಉಪನ್ಯಾಸಕರ ಸೇವೆಯನ್ನು ನಿಯಮ 14ರ ಅಡಿಯಲ್ಲಿ ವಿಲೀನಗೊಳಿಸಬೇಕು. ಅವರನ್ನು ಕಾಯಂಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಸೇವಾ ವಿಲೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವವರೆಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯನ್ನು ತಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷರಾದ ಡಾ. ಎಚ್. ಸೋಮಶೇಖರ್ ಶಿಮೊಗ್ಗಿ, ಸತೀಶ್ ಕುಮಾರ್, ದೀಪಾ, ಅನ್ನಪೂರ್ಣ, ಜಿಲ್ಲಾ ಘಟಕದ ಅಧ್ಯಕ್ಷ ಸರ್ವಜ್ಞಮೂರ್ತಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

ಗೋ ಸಂಪತ್ತು ಬಹು ಜನರ ಜೀವನಾಧಾರ – ಮೋದಿಜಿ

0

ಗೋವು ಹಲವರಿಗೆ ತಾಯಿ ಸಮಾನ ಹಾಗೂ ಪವಿತ್ರ. ಯಾರು ಇದರಲ್ಲಿ ತಪ್ಪನ್ನು ಹುಡುಕುತ್ತಾರೋ, ಅವರಿಗೆ ಜಾನುವಾರು ಗಳಿಂದಲೇ ಜೀವನ ನಿರ್ವಹಣೆಯಾಗುತ್ತದೆ ಎಂಬ ಸತ್ಯ ತಿಳಿದಿಲ್ಲ ಎಂದು ಮಾನ್ಯ ಪ್ರಧಾನಿ ನರೇಂದ್ರ ಮೋದಿಜಿ ಅವರು ತಿಳಿಸಿದ್ದಾರೆ.

ಅವರು ವಾರಣಾಸಿಯ ಕಾರ್ಕಿಯಾಂವ್ ನಲ್ಲಿ 475 ಕೋಟಿ ವೆಚ್ಚದ ‘ಬನಾಸ್ ಡೇರಿ ಸಂಕುಲ್’ ಹಾಲಿನ ಘಟಕದ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು. ಜೊತೆಗೆ ಸುಮಾರು 2,095 ಕೋಟಿ ಮೊತ್ತದ 27 ಯೋಜನೆಗಳಿಗೆ ಅವರು ಚಾಲನೆ ಹಾಗೂ ಶಿಲಾನ್ಯಾಸ ನೆರವೇರಿಸಿದ್ದರು.

ಹಿಂದೂ ಧರ್ಮದ ಪ್ರಾಚೀನ ಗ್ರಂಥಗಳನ್ನು ಉಲ್ಲೇಖಿಸಿದ ಅವರು, ಜನರು ನಮ್ಮ ಸುತ್ತಲೂ ಗೋವುಗಳು ಇರಬೇಕು ಎಂದು ಬಯಸುತ್ತಿದ್ದರು. ಇದು ಗೋವುಗಳಿಗೆ ನೀಡುವ ಮಹತ್ವವಾಗಿದೆ ಎಂದು ಮೋದಿಜಿ ಅವರು ತಿಳಿಸಿದರು.

ಭಾರತ 8.5 ಲಕ್ಷ ಕೋಟಿ ಮೌಲ್ಯದ ಹಾಲು ಉತ್ಪಾದನೆ ಮಾಡಿದೆ. 8 ಕೋಟಿಗೂ ಅಧಿಕ ಕುಟುಂಬಗಳ ಜೀವನ ಪಶುಸಂಗೋಪನೆ ಮೇಲೆ ಆಧಾರಿತವಾಗಿದೆ ಎಂದು ಹಾಲು ಉತ್ಪಾದನೆಯ ಕುರಿತು ಮೋದಿಜಿ ಅವರು ಮಾಹಿತಿಯನ್ನು ಹೇಳಿದರು.

ರಾಜ್ಯದ ಅಭಿವೃದ್ಧಿಗೆ ನಮ್ಮ ಡಬಲ್ ಇಂಜಿನ್ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳಿಂದ ಕೆಲ ಜನರಿಗೆ ಅತೃಪ್ತಿಗೆ ಕಾರಣವಾಗಿದೆ. ರಾಜ್ಯದ ಪ್ರಗತಿಗೆ ನಾವು ತೆಗೆದುಕೊಂಡ ಮತ್ತಷ್ಟು ಕ್ರಮಗಳನ್ನು ನೋಡಿ ಆ ಅತೃಪ್ತಿ ಮತ್ತಷ್ಟು ಹೆಚ್ಚಿದೆ ಎಂದು ಪ್ರತಿ ಪಕ್ಷಗಳ ವಿರುದ್ಧ ಮೋದಿಜಿ ಅವರು ವಾಗ್ದಾಳಿ ನಡೆಸಿದರು.

ವಿಪಕ್ಷಗಳ ನಿಘಂಟಿನಲ್ಲಿ ಅಭಿವೃದ್ಧಿ ಎಂದರೆ ನೋಟು, ಮಾಫಿಯಾ ರಾಜ್ಯ, ಸ್ವಜನ ಪಕ್ಷಪಾತಕ್ಕೆ ಉತ್ತೇಜನ, ಮನೆಗಳು ಹಾಗೂ ಭೂಮಿಯನ್ನು ಕಬಳಿಸುವುದು ಎಂದರ್ಥ. ಆದರೆ ನಮ್ಮ ಆದ್ಯತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂದರೆ ಎಲ್ಲರ ಜೊತೆ, ಎಲ್ಲರ ವಿಕಾಸ ಎಂದು ಮೋದಿಜಿ ಅವರು ಹೇಳಿದರು.

ನಮ್ಮ ಎದುರಾಳಿಗಳಿಗೆ ಕಾಶಿ ವಿಶ್ವನಾಥ ದೇವಾಲಯ ವೈಭವ ಹೆಚ್ಚಿಸುವುದು ಇಷ್ಟವಿಲ್ಲ ಎಂದು ಮೋದಿಜಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.