Friday, February 13, 2026
Friday, February 13, 2026
Home Blog Page 1772

60 ವರ್ಷ ಮೇಲ್ಪಟ್ಟವರಿಗೆ ಜ.10 ರಿಂದ ಬೂಸ್ಟರ್ ಡೋಸ್ ನೀಡಿಕೆ

0

ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆಗೆ ಜನವರಿ 10ರಂದು ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ಈಗಾಗಲೇ ರಚಿಸಲಾಗಿರುವ ಟಾಸ್ಕ್ ಫೋರ್ಸ್ ಮತ್ತೆ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಅದರಲ್ಲಿರುವ ಅಧಿಕಾರಿಗಳು ಸಮರ್ಥವಾಗಿ ಕರ್ತವ್ಯ ನಿರ್ವಹಿಸಬೇಕು. ಈ ಕುರಿತು ಯಾವುದೇ ದೂರುಗಳು ಬರಬಾರದು ಎಂದರು.
ಈಗಾಗಲೇ ಎರಡನೇ ಡೋಸ್ ಪಡೆದು 90 ದಿನಕಳೆದು ಇರುವವರು ಬೂಸ್ಟರ್ ಡೋಸ್ ಪಡೆಯಬಹುದು. ಬೂಸ್ಟರ್ ಡೋಸ್ ಪಡೆಯಲು ಜಿಲ್ಲೆಯಲ್ಲಿ ಒಟ್ಟು 2 ಲಕ್ಷ ಫಲಾನುಭವಿಗಳಿದ್ದಾರೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ನೀಡಲು ವ್ಯವಸ್ಥೆ ಮಾಡಲಾಗುವುದು.
ಇದೇ ರೀತಿ ಈಗಾಗಲೇ 15 ರಿಂದ 18 ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯ ನಡೆಯುತ್ತಿದ್ದು, ಡಿ.12ರೊಳಗೆ ಎಲ್ಲಾ 83,831 ಮಂದಿಗೆ ಲಸಿಕೆ ನೀಡುವ ಕಾರ್ಯ ಪೂರ್ಣಗೊಳಿಸಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಮಾತನಾಡಿ,ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 1,382 ಬೆಡ್ ಗಳು ಲಭ್ಯವಿದ್ದು, ಅವುಗಳಲ್ಲಿ 640 ಬೆಡ್ ಗಳು ಕೋವಿಡ್ ಗಾಗಿ ಮೀಸಲಿರಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 94 ಸಾವಿರ ಕಿಲೋಮೀಟರ್ ಆಕ್ಸಿಜನ್ ಸಂಗ್ರಹಣಾ ಸಾಮರ್ಥ್ಯದ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸಮರ್ಪಕ ನಿರ್ವಹಣೆಗೆ ವಾರ್ ರೂಮ್ ಆರಂಭಿಸಲಾಗಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಸಜ್ಜುಗೊಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಅಶೋಕ್ ನಾಯ್ಕ್, ರುದ್ರೇಗೌಡ, ಡಿ.ಎಸ್. ಅರುಣ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ ಮತ್ತು ಎಸ್.ಪಿ. ಲಕ್ಷ್ಮೀಪ್ರಸಾದ್ ಅವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಧಾರ್ ಓಕೆ ಮತ್ತೊಂದು ಐಡಿ ಯಾಕೆ?

0

ಪ್ರತಿ ವ್ಯಕ್ತಿಗೆ ನೀಡಲಾದ ಆಧಾರ್ ಸಂಖ್ಯೆಯಂತೆ ಇನ್ನು ಮುಂದೆ ಪ್ರತಿ ಕುಟುಂಬಕ್ಕೂ ಒಂದು ಐಡಿ ನಂಬರ್ ಒದಗಿಸಲಾಗುತ್ತದೆ. ಇದರಿಂದ ಸರ್ಕಾರದ ಸೌಲಭ್ಯಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಆಧಾರ್ ಇದ್ದರೆ ಸಾಕು ಎನ್ನುವ ಕಾಲದಲ್ಲಿ ಇದೀಗ ರಾಜ್ಯದ ಆಡಳಿತ ಕೇಂದ್ರ ಇನ್ನೊಂದು ಸಂಖ್ಯೆ ನೀಡಲು ಮುಂದಾಗಿರುವುದು ಜನರಲ್ಲಿ ಗೊಂದಲ ಮೂಡಿಸಿದೆ.
ಈಗಾಗಲೇ ರೇಷನ್ ಕಾರ್ಡ್ ಇರುವವರ ಕುಟುಂಬ ಐಡಿ ಜನರೇಟ್ ಆಗಿವೆ. ರೇಷನ್ ಕಾರ್ಡ್ ಇರದವರು ಈ ನಂಬರನ್ನು ಸುಲಭವಾಗಿ ಪಡೆಯಬಹುದು. ತಾವೇ ವೆಬ್ ಸೈಟ್ ಗೆ ಭೇಟಿ ನೀಡಿ ಪಡೆಯಬಹುದು. ಎಲ್ಲ ನಾಗರಿಕ ಸೇವಾ ಕೇಂದ್ರ ಗಳಲ್ಲೂ ಪಡೆಯಬಹುದು. ಇದು ಉಚಿತ ಸೇವೆಯಾಗಿದೆ ಎಂದು ಇಡಿಸಿಎಸ್ ನ ಅಸಿಸ್ಟೆಂಟ್ ಪ್ರಾಜೆಕ್ಟ್ ಮ್ಯಾನೇಜರ್ ಆದ ಅನೀಜ್ ಅಹ್ಮದ್ ಶೇಖ್ ಅವರು ತಿಳಿಸಿದ್ದಾರೆ.
ಎಲ್ಲೂ ಸರಕಾರಿ ಸೇವೆಗಳನ್ನು ಈ ನಂಬರ್ ಹೇಳಿ ಪಡೆದುಕೊಳ್ಳಬಹುದು. ಜನನ, ಮರಣ ನೊಂದಣಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಸೇವೆ, ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ, ವಸತಿ ಸೌಲಭ್ಯ, ವಿದ್ಯಾರ್ಥಿವೇತನ, ಕೃಷಿ ಸೌಲಭ್ಯ, ವಾಹನ ನೋಂದಣಿ, ಚಾಲನಾ ನೋಂದಣಿ, ಇತ್ಯಾದಿ ಎಲ್ಲಾ ಸೇವೆಗಳನ್ನು ಪಡೆಯಬಹುದು.
ಒಂದು ಕುಟುಂಬಕ್ಕೆಒಂದೇ ಐಡಿ ಇರುತ್ತದೆ. ಕುಟುಂಬದಲ್ಲಿ ಏನಾದರೂ ಬದಲಾವಣೆಯಾದರೆ ಮಗಳು ಮದುವೆಯಾಗಿ ಬೇರೆ ಮನೆಗೆ ಹೋದರೆ, ಸೊಸೆ ಬಂದರೆ, ಜನನವಾದರೆ, ಮರಣವಾದರೆ ಎಲ್ಲೋ ತಿದ್ದುಪಡಿ ಅಥವಾ ನವೀಕರಣ ಮಾಡಲು ಯೋಚನೆಯಲ್ಲಿ ಅವಕಾಶವಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮನೆಮನೆಗೆ ಚೀಟಿ ಅಂಟಿಸುವ ಒಂದು ವಿಚಿತ್ರ ಪ್ರಸಂಗ

0

ರಾಜ್ಯ ಸರ್ಕಾರದಿಂದ ಅವಕಾಶ ಗಿಟ್ಟಿಸಿಕೊಂಡ ಎಸ್.ಬಿ.ನಂಬರಿಂಗ್ ವರ್ಕ್ಸ್ ಪ್ರೈ.ಲಿ. ಎನ್ನುವ ಕಂಪನಿ ಗ್ರಾಮೀಣ ಭಾಗದಲ್ಲಿ ಕಳಪೆಮಟ್ಟದ ಚೀಟಿ ಅಂಟಿಸಿ ದುಡ್ಡನ್ನು ವಸೂಲಿ ಮಾಡುತ್ತಿದೆ. ಆದರೆ, ಆ ಕಂಪನಿಗೆ ರಾಜ್ಯಸರ್ಕಾರವೇ ಅವಕಾಶ ಕೊಟ್ಟಿದೆ ಎನ್ನುವ ಕಾರಣಕ್ಕೆ ಸ್ಥಳೀಯ ಅಧಿಕಾರಿಗಳು ಬಾಯಿ ಮುಚ್ಚಿಕೊಂಡಿದ್ದಾರೆ. ಇದೆಲ್ಲ ಯಾತಕ್ಕಾಗಿ ಎಂದು ತಿಳಿಯದೆ ಜನರು ತಲೆ ಕೆಡೆಸಿಕೊಳ್ಳುವಂತಾಗಿದೆ.
ಎಸ್.ಬಿ. ನಂಬರಿಂಗ್ ವರ್ಕ್ಸ್ ಪ್ರೈ.ಲಿ. ಕಂಪನಿ ಸಿಬ್ಬಂದಿ ಮನೆಗಳಿಗೆ 5 ರೂ. ಕೂಡ ಖರ್ಚಿಲ್ಲದ ಕೈಬರಹದ ಸಣ್ಣ ಚೀಟಿ ಅಂಟಿಸಿ 50 ರೂ. ಪಡೆಯುತ್ತಿದ್ದಾರೆ. ಇದೆಲ್ಲಾ ಹಂತಹಂತವಾಗಿ ಒಂದೊಂದು ಜಿಲ್ಲೆಯಲ್ಲಿ ಆರಂಭಿಸಲಾಗುತ್ತಿದೆ.
ಕಳೆದ ನಾಲ್ಕು ತಿಂಗಳಿಂದ ಮನೆ ನಂಬರ್ ಅಂಟಿಸುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳ ಸರ್ವೆ ಸಂದರ್ಭದಲ್ಲಿ ಮನೆ ನಂಬರ್ ಉಪಯೋಗಕ್ಕೆ ಬರುತ್ತದೆ. ಈ ಹಿಂದೆ ದೇಶದಲ್ಲಿ ಅನಕ್ಷರಸ್ಥರೇ ಹೆಚ್ಚಿದ್ದರಿಂದ ಮನೆ ನಂಬರ್ ಇರುವ ಸ್ಪೀಲ್ ಪಟ್ಟಿಯನ್ನು ಮನೆಬಾಗಿಲಿಗೆ ಆಂಟಿಸುತ್ತಿದ್ದರು. ಎಲ್ಲಿಯೂ ಕಾಗದದ ಚೀಟಿ ಅಂಟಿಸುವುದಿಲ್ಲ. ಇಂತಹ ತಾತ್ಕಾಲಿಕ ಚೀಟಿಯಿಂದ ಜನರಿಗೆ ಯಾವುದೇ ಪ್ರಯೋಜನ ಇಲ್ಲ. ಇದಲ್ಲದೆ ಹಣವೂ ವ್ಯರ್ಥ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಪ್ರಸ್ತಾವ ಬಂದಾಕ್ಷಣ ರಾಜ್ಯ ಸರ್ಕಾರವು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮವಹಿಸಿ ಎಂಬರ್ಥ ಬರುವಂತಹ ಸೂಚನೆಯನ್ನ ಪ್ರಾದೇಶಿಕ ಆಯುಕ್ತರಿಗೆ ಕಳಿಸಿತು.
ಅದನ್ನ ಜಿಲ್ಲಾಪಂಚಾಯಿತಿಗಳಿಗೆ ಕಳಿಸಲಾಯಿತು.
ಹೀಗೆ ಇದು ಅಗತ್ಯವೇ ಸೂಕ್ತವೇ ಎಂಬ ವಿವೇಚನೆ ಮಾಡದೇ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆದೇ ಬಿಟ್ಟಿತು. ಒಂದು ವರದಿ ಪ್ರಕಾರ ಈ ಚೀಟಿ ಮನೆಗಳಿಗೆ ಕಡ್ಡಾಯವೆಂದು ಹೇಳಿಯೇ ಇಲ್ಲ.
ಆದೇಶವೆಂದು ಭಾವಿಸಿ ಜಾರಿಗೆ ತರಲಾಯಿತು.
ಪಂಚಾಯತ್ ರಾಜ್
ಪ್ರಧಾನ ಕಾರ್ಯದರ್ಶಿಗಳು
ಈ ತರಹ ಆದೇಶವನ್ನ ಖಾಸಗಿ ಕಂಪನಿಗೆ ಕೊಟ್ಟಿಲ್ಲ.ಪರಿಶೀಲಿಸಿ ಕ್ರಮ ಕೈಗೋಳ್ಳುವೆ ಎಂದು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ವಾರ್ ರೂಮ್ ನಿರ್ವಹಣೆ ಕರ್ನಾಟಕ ನಂ.1

0

ಹೈದರಾಬಾದ್ ನಲ್ಲಿ ನಡೆದ ಇ-ಆಡಳಿತದ 24ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಕೋವಿಡ್ -19 ವಾರ್ ರೂಮ್ ಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.ಕೋವಿಡ್ ನಿರ್ವಹಣೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಬಳಸುವ ವಿಭಾಗದಲ್ಲಿ ಮನ್ನಣೆ ಗಳಿಸಿದೆ.
ಕೋವಿಡ್ ವಾರ್ ರೂಮ್ ಮುಖ್ಯಸ್ಥ ಮುನೀಶ್ ಮೌದ್ಗಿಲ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಇ-ಆಡಳಿತ ವಿಧಾನವು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಕೋವಿಡ್ ವಾರಿಯರ್ಸ್ ಗೆ ನಾವು ಸಪೋರ್ಟ್ ನೆಟ್ವರ್ಕ್ ಆಗಿದ್ದೇವೆ. ಸರಿಯಾದ ಸಮಯಕ್ಕೆ ಸೂಕ್ತ ಮಾಹಿತಿಯನ್ನು ನೀಡಿ ಜೀವವುಳಿಸುವ ಪ್ರಯತ್ನ ಮಾಡುತ್ತಿದ್ದೇವೆ.ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ದಿನದ 24 ಗಂಟೆ ಕೆಲಸ ಮಾಡುತ್ತಿದ್ದು, ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ಹೆಚ್ಚಿನ ಸಿಬ್ಬಂದಿಗಳು ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.
2020 ರ ಮಾರ್ಚ್ ನಲ್ಲಿ ಕೋವಿಡ್ ಮೊದಲನೇ ರಾಜ್ಯಕ್ಕೆ ಅಪ್ಪಳಿಸಿತ್ತು. ಮೊದಲನೇ ಆರಂಭವಾದ ಎರಡು ಮೂರು ದಿನಗಳಲ್ಲಿ ವಾರ್ ರೂಮ್ ಸ್ಥಾಪಿಸಲಾಗಿತ್ತು.ಕೊರೊನಾ ವಾಚ್ ಮೊಬೈಲ್ ಅಪ್ಲಿಕೇಶನ್ ಅನ್ನು ಮೊದಲು ರಚಿಸಲಾಯಿತು. ಸೋಂಕಿತರ ಸಂಪರ್ಕ ಪತ್ತೆ ಹಚ್ಚುವಿಕೆಗಾಗಿ ಅಪ್ಲಿಕೇಶನ್ ಅನ್ನು ಬಳಸುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ತಪ್ಪಿನ ಮೇಲೆ ತಪ್ಪೆಸಗಿದ ಅಪರಾಧಿಗೆ ಶಿಕ್ಷೆ ವಿನಾಯಿತಿ ಇಲ್ಲ

0

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿಯೊಬ್ಬ 15 ದಿನದ ಪೆರೋಲ್ ಮೇಲೆ ಹೊರಬಂದು ಸುಮಾರು ಐದೂವರೆ ವರ್ಷ ತಪ್ಪಿಸಿಕೊಂಡು ಮತ್ತೆ ಬಂಧನವಾದ ಪ್ರಕರಣವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಇವೆರಡೂ ಅಪರಾಧಗಳಿಗೂ ಶಿಕ್ಷೆಗಳನ್ನು ಜೊತೆಯಾಗಿ ಪರಿಗಣಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
2005ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ವಿಜಯಪುರದ ಒಂದನೇ ಹೆಚ್ಚುವರಿ ನ್ಯಾಯಾಲಯವು ಬಂದೇನವಾಜ್ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಈ ಮಧ್ಯೆ ಆತ 2011ರಲ್ಲಿ ನವೆಂಬರ್ 1 ರಿಂದ 21ರವರೆಗೆ 15 ದಿನ ಪೆರೋಲ್ ಪಡೆದು ಜೈಲಿನಿಂದ ಹೊರಗೆ ಬಂದಿದ್ದ. ಆದರೆ ಒಂದೂವರೆ ವರ್ಷ ಕಳೆದರೂ ಆತ ಮತ್ತೆ ಜೈಲಿಗೆ ಹೋಗಿರಲಿಲ್ಲ. 2017ರಲ್ಲಿ ಪೊಲೀಸರು ಮತ್ತೆ ಆತನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು.
ಪೆರೋಲ್ ನಿಯಮ ಉಲ್ಲಂಘನೆ ಆರೋಪದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಮುಗಿದ ಬಳಿಕ ಮತ್ತೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿದ ಅಪರಾಧಿ, ಎರಡು ಶಿಕ್ಷೆಗಳನ್ನು ಒಟ್ಟಾಗಿ ಪರಿಗಣಿಸಬೇಕೆಂದು ಕೋರಿದ್ದನು.
ಪೆರೋಲ್ ಮೇಲೆ ತಪ್ಪಿಸಿಕೊಂಡು ಅಪರಾಧದ ಮೇಲೆ ಅಪರಾಧ ಎಸಗಿದ ವ್ಯಕ್ತಿಯನ್ನು ಸಜಾಬಂಧಿ ಅಪರಾಧ ದಂಡ ಸಹಿತೆ ಸೆಕ್ಷನ್ 427ರ ಅನ್ವಯ ಪರಿಗಣಿಸಲಾಗದು ಎಂದು ಆದೇಶಿಸಿದೆ.
ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಬಾಲಗನೂರು ಗ್ರಾಮದ ಬಂದೇನವಾಜ್ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ಆಲಿಸಿದ ನ್ಯಾ.ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಇಂಥವರಿಗೆ ಸ್ವಲ್ಪ ಉದಾರತೆ ತೋರಿದರೆ, ಅದು ನ್ಯಾಯಾಂಗವನ್ನು ಅಣಕ ಮಾಡಿದಂತಾಗುತ್ತದೆ. ಹಾಗಾಗಿ ಯಾವುದೇ ವಿನಾಯಿತಿ ನೀಡಲಾಗದು ಎಂದು ನ್ಯಾಯಪೀಠ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ದೇಶದ ಐದು ರಾಜ್ಯ ಗಳಿಗೆ ವಿಧಾನ ಸಭಾ ಚುನಾವಣೆ ಘೋಷಣೆ

0

ಕೊರೊನಾ ಅಲೆ ಭೀತಿಯ ನಡುವೆಯೇ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯ ವಿಧಾನಸಭೆ ಎಲೆಕ್ಷನ್ ಗೆ ಕೇಂದ್ರ ಚುನಾವಣಾ ಆಯೋಗವು ದಿನಾಂಕಗಳನ್ನು ಪ್ರಕಟಿಸಿದೆ.
ಫೆಬ್ರುವರಿ 10 ರಿಂದ ಮಾರ್ಚ್ ಏಳರವರೆಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ ಎಂದು ತಿಳಿದುಬಂದಿದೆ.
ಎಲೆಕ್ಷನ್ ಬಗ್ಗೆ ಮಾಹಿತಿ ನೀಡಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ, ಕೋವಿಡ್ ಮೂರನೇ ಅಲೆಯ ಹಿನ್ನೆಲೆಯಲ್ಲಿ ಜನವರಿ 15ರ ವರೆಗೆ ಜಾಥಾ ನಿಷೇಧಿಸಲಾಗಿದೆ.
ಆನಂತರ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು. ಒಂದೊಮ್ಮೆ ಅನುಮತಿ ನೀಡಿದರೂ, ಕೋವಿಡ್ ಕಟ್ಟುನಿಟ್ಟು ಮಾರ್ಗದರ್ಶಿ ಅನ್ವಯದಂತೆಯೇ ಜಾಥಾ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸಿವೆ.
ನಾಲ್ಕು ರಾಜ್ಯಗಳಲ್ಲಿ ಆಡಳಿತಾರೂಢವಾಗಿರುವ ಬಿಜೆಪಿ, ಒಂದು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಗೆ ಈ ಚುನಾವಣೆ ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಭಾರೀ ಮಹತ್ವದ್ದಾಗಿದೆ.
5 ರಾಜ್ಯಗಳ ಪೈಕಿ ಅತಿ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶವು ಏಳು ಹಂತದ ಚುನಾವಣೆ ಎದುರಿಸಲಿದೆ. ಮಣಿಪುರ ಎರಡು ಹಂತ ಹಾಗೂ ಪಂಜಾಬ್, ಉತ್ತರಾಖಂಡ, ಗೋವಾ ರಾಜ್ಯಗಳ ಚುನಾವಣೆ ಒಂದೇ ಹಂತದಲ್ಲಿ ಪೂರ್ಣಗೊಳ್ಳಲಿದೆ.
ಎಲೆಕ್ಷನ್ ನಡೆಯುವ ರಾಜ್ಯಗಳಲ್ಲಿ ಶನಿವಾರದಿಂದಲೇ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಆಯೋಗ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹೆಣ್ಣುಮಕ್ಕಳಿಗೋಸ್ಕರ ನೂರು ಸೈನಿಕ ಶಾಲೆಗಳ ಸ್ಥಾಪನೆ

0

ಭಾರತದ ಸಶಸ್ತ್ರ ಪಡೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶಾವಕಾಶ ಹೆಚ್ಚಿಸುವ ಉದ್ದೇಶದಿಂದ ದೇಶದಾದ್ಯಂತ ಶೀಘ್ರವೇ ನೂರು ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಿಳಿಸಿದ್ದಾರೆ.

ಮಹಿಳಾ ಅಧಿಕಾರಿಗಳಿಗೆ ಸೇನೆಯಲ್ಲಿ ಕಾಯಂ ಹುದ್ದೆಗೆ ಪೂರ್ವಕವಾಗಿ ಕ್ರಮ ಕೈಗೊಳ್ಳಲಾಗುತ್ತಿರುವಂತೆ ಸೈನಿಕ ಶಾಲೆಗಳ ಮೂಲಕ ಪ್ರಥಮ ತರಬೇತಿ ನೀಡಿ ಹೆಣ್ಣುಮಕ್ಕಳನ್ನು ಸೇನೆ ಸೇರಲು ಸನ್ನದ್ಧವಾಗಿಸುವ ಯತ್ನ ಸೈನಿಕ ಶಾಲೆಗಳ ಮೂಲಕ ನಡೆಯಲಿದೆ ಎಂದು ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಗ್ನಿಆಕಸ್ಮಿಕ ಪರಿಹಾರ ಕೊಡಿಸುವಲ್ಲಿ ಶಾಸಕ ಯಶಸ್ವಿ

0

ಭದ್ರಾವತಿ ಮಂಜುನಾಥ ಸಾಮಿ ಲ್ ನ ರಾತ್ರಿಯ ವೇಳೆ ಸಂಭವಿಸಿದ್ದ ಬೆಂಕಿಯ ಜ್ವಾಲೆಗೆ ಆಹುತಿಯಾಗಿದ್ದ ಅಂಗನವಾಡಿ, ಮನೆ ಮತ್ತು ಕಟ್ಟಡ ಮಾಲೀಕರುಗಳಿಗೆ ಸಾಮಿಲ್ ಮಾಲೀಕರಿಂದ ಶಾಸಕ ಸಂಗಮೇಶ್ವರ್ ಪರಿಹಾರವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಗನವಾಡಿಗಳ ಹಿಂಭಾಗದಲ್ಲಿರುವ ಮಂಜುನಾಥ ಸಾಮಿಲ್ ನಲ್ಲಿ ಕೋಟ್ಯಾಂತರ ರೂಪಾಯಿಗಳ ಬೆಲೆಬಾಳುವ ಸಾಗುವಾನಿ, ಬೀಟೆ ಹಾಗೂ ಮತ್ತಿತರ ಬೆಲೆಬಾಳುವ ಜಾತಿಯ ನಾಟ ಮರದ ದಿಮ್ಮಿಗಳು ಮತ್ತು ಗ್ರಾಹಕರಿಗೆ ಸಿದ್ಧಪಡಿಸಿದ್ದ ಮರದ ತುಂಡುಗಳಿಂದ ಆಕಸ್ಮಿಕ ಬೆಂಕಿ ತಾಗಿ 5 ಅಂಗಡಿಗಳು ಮತ್ತು ಎರಡು ಮನೆಗಳಿಗೆ ಹಾನಿ ಉಂಟಾಗಿದೆ.

ಅಂಗಡಿ ಮಾಲೀಕರ ಮನವಿಗೆ ಸ್ಪಂದಿಸಿದ ಶಾಸಕ ಬಿ.ಕೆ. ಸಂಗಮೇಶ್ವರ್ , ಸಾ ಮಿಲ್ ಮಾಲೀಕರಾದ ನಾಗರಾಜ್ ಅವರ ಜೊತೆ ಚರ್ಚೆ ನಡೆಸಿ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಐದು ಅಂಗಡಿಗಳ ಪೈಕಿ ಮೂರು ಅಂಗಡಿಗಳ ವಸ್ತು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದರಿಂದ ತಲಾ 10 ಲಕ್ಷ ರೂಪಾಯಿಗಳನ್ನು, ಮತ್ತು ಎರಡು ಅಂಗಡಿಗಳಿಗೆ ತಲಾ 2 ಲಕ್ಷ ರೂಪಾಯಿ, ಒಂದು ಮನೆಗೆ ಎರಡು ಲಕ್ಷ ರೂಪಾಯಿ, ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ ಮನೆಗೆ 25 ಸಾವಿರ ರೂಪಾಯಿ ಮತ್ತು ಕಟ್ಟಡ ಮಾಲಿಕ ವಿಠಲ್ ಎಂಬುವರಿಗೆ 2 ಲಕ್ಷ ರೂಪಾಯಿ ಪರಿಹಾರ ಚೆಕ್ಗಳನ್ನು ಶಾಸಕರು ಕೊಡಿಸಿದ್ದಾರೆ.

ಈ ಸಂದರ್ಭದಲ್ಲಿ ತಹಸೀಲ್ದಾರ ಆರ್. ಪ್ರದೀಪ್ ನಿಕ್ಕಮ್, ಸಾರ್ವಜನಿಕ ಕುಂದುಕೊರತೆ ಹೋರಾಟ ಸಮಿತಿ ಅಧ್ಯಕ್ಷ ಬಾಲಕೃಷ್ಣ, ಕಟ್ಟಡ ಕಾರ್ಮಿಕರ ಸಂಘದ ಅಭಿಲಾಷ್, ನಗರಸಭಾ ಅಧ್ಯಕ್ಷ ಆರ್. ಶ್ರೇಯಸ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಉತ್ತರಪ್ರದೇಶಕ್ಕೆ ರಾಷ್ಟ್ರೀಯ ಜಲ ಶಕ್ತಿ ಪ್ರಶಸ್ತಿ

0

ಕೇಂದ್ರ ಜಲ ಶಕ್ತಿ ಸಚಿವಾಲಯವು 2020ನೇ ಸಾಲಿನ ರಾಷ್ಟ್ರೀಯ ಜಲ ಪ್ರಶಸ್ತಿ ಘೋಷಿಸಿದೆ.
ಜನ ಸಂರಕ್ಷಣೆಗಾಗಿ ಉತ್ತರ ಪ್ರದೇಶವು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ರಾಜಸ್ಥಾನ ಹಾಗೂ ತಮಿಳುನಾಡು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.
ಪಶ್ಚಿಮ ವಲಯದಲ್ಲಿ ಮಧ್ಯಪ್ರದೇಶದ ಇಂದೋರ್ ಮೊದಲ ಸ್ಥಾನ ಪಡೆದರೆ, ಗುಜರಾತ್ ನ ವಡೋದರ ಹಾಗೂ ರಾಜಸ್ಥಾನದ ಬನ್ಸ್ ವಾರ ಜಿಲ್ಲೆಗಳು ಜಂಟಿಯಾಗಿ ದ್ವಿತೀಯ ಸ್ಥಾನ ಗಳಿಸಿವೆ. ಈಶಾನ್ಯ ವಲಯದಲ್ಲಿ ಅಸ್ಸಾಂನ ಗೋಪಾಲ್ ಪರ ಮತ್ತು ಅರುಣಾಚಲ ಪ್ರದೇಶದ ಸಿಯಾಂಗ್ ಮೊದಲ ಹಾಗೂ ಎರಡನೇ ಅಗ್ರ ಜಿಲ್ಲೆಯಾಗಿ ಹೊರಹೊಮ್ಮಿವೆ.
ಜಲ ಸಂರಕ್ಷಣೆಗಾಗಿ ಹೆಚ್ಚಿನ ಶ್ರಮ ವಹಿಸಿದ ಜಿಲ್ಲೆಗಳಲ್ಲಿ ದಕ್ಷಿಣ ವಲಯದಲ್ಲಿ ಕೇರಳದ ತಿರುವನಂತಪುರಂ ಪ್ರಥಮ ಸ್ಥಾನದಲ್ಲಿದೆ. ಆಂಧ್ರಪ್ರದೇಶದ ಕಡಪ ಎರಡನೇ ಸ್ಥಾನ ಪಡೆದಿದೆ. ಹಾಗೆಯೇ, ಉತ್ತರ ವಲಯದಲ್ಲಿ ಉತ್ತರ ಪ್ರದೇಶದ ಮುಜಫ್ಫರ್ ನಗರ, ಪಂಜಾಬ್ ನ ಶಹೀದ್ ಭಗತ್ ಸಿಂಗ್ ನಗರ, ಪೂರ್ವದಲ್ಲಿ ಬಿಹಾರದ ಪೂರ್ವ ಚಂಪಾರಣ್, ಜಾರ್ಖಂಡ್ ನ ಗೊಡ್ಡ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿವೆ.
ಪ್ರಶಸ್ತಿ ಘೋಷಣೆ ಬಳಿಕ ಮಾತನಾಡಿದ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್, ದೇಶಾದ್ಯಂತ ಕೃಷಿ, ನೀರಾವರಿ, ಕೈಗಾರಿಕೆ, ಕುಡಿಯುವ ನೀರು ಸೇರಿದಂತೆ ಹಲವು ಕ್ಷೇತ್ರಗಳಿಗೆ ವಾರ್ಷಿಕ 1,000 ಶತಕೋಟಿ ಕ್ಯುಬಿಕ್ ಮೀಟರ್ ನೀರಿನ ಅವಶ್ಯಕತೆ ಇದೆ. ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ವಾಗುತ್ತಿರುವ ಕಾರಣ ಬೇಡಿಕೆಗಿಂತ ಲಭ್ಯತೆ ಕಡಿಮೆ ಇದೆ.
ಅದರಲ್ಲೂ,2050ರ ವೇಳೆಗೆ ಬೇಡಿಕೆ ಪ್ರಮಾಣ 1,400-1,500 ಶತಕೋಟಿ ಕ್ಯುಬಿಕ್ ಮೀಟರ್ ಗೆ ತಲುಪುವ ಸಾಧ್ಯತೆಯಿದೆ. ಹಾಗಾಗಿ ಜಲಸಂರಕ್ಷಣೆಗೆ ಎಲ್ಲರೂ ಒಗ್ಗೂಡಿ, ಸಕಾರಾತ್ಮಕ ಮನೋಭಾವದಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಾರ್ಚ ಆರಂಭದಲ್ಲಿ ಕೊರೊನಾ ಕೇಸ್ ಇಳಿಕೆ-ವರದಿ

0

ಕೊರೊನಾ ಮೂರನೇ ಅಲೆಯು ಇದೇ ತಿಂಗಳ ಅಂತ್ಯದ ವೇಳೆಗೆ ಉತ್ತುಂಗ ತಲುಪಿ, ಮಾರ್ಚ್ ಆರಂಭದಲ್ಲಿ ಇಳಿಮುಖವಾಗಲಿದೆ ಎಂದು ಅಧ್ಯಯನಗಳು ಅಂದಾಜಿಸಿವೆ.
ಕಡಿಮೆ ಜನಸಂಖ್ಯೆಯ ರಾಷ್ಟ್ರಗಳಲ್ಲಿ ಬೂಸ್ಟರ್ ಮೇಲೆ ಬೂಸ್ಟರ್ ನೀಡುತ್ತಲೇ ಇದ್ದರೆ ಕೊರೊನಾ ಸಾಂಕ್ರಾಮಿಕವು ಅಂತ್ಯಗೊಳ್ಳಲ್ಲ. ವಿಶ್ವದ ಉಳಿದ ರಾಷ್ಟ್ರಗಳಲ್ಲಿನ ನೂರಾರು ಕೋಟಿ ಜನರು ಲಸಿಕೆಯಿಂದ ವಂಚಿತರಾಗುತ್ತಾರೆ. ಓಮಿಕ್ರಾನ್ ನಂತರ ಇನ್ನೂ ಹೆಚ್ಚು ರೂಪಾಂತರಿಗಳ ದಾಳಿ ನಿಶ್ಚಿತ ಎಂದು ಡಬ್ಲ್ಯೂ ಎಚ್ಒ ಮುಖ್ಯಸ್ಥರಾದ ಟೆಡ್ರೂಸ್ ಅಧಾನೊಮ್ ಘೆಬ್ರಯೆಸುಸ್ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ಅಂಕಿಅಂಶಗಳ ಸಂಸ್ಥೆಗಳು ನಡೆಸಿರುವ ಅಧೀನದ ಪ್ರಕಾರ ದೇಶದಲ್ಲಿ ಓಮಿಕ್ರಾನ್ ನಿಂದ ಹೆಚ್ಚುತ್ತಿರುವ ಕೊರೊನಾ ಕೇಸ್ ಗಳು ಇದೆ ತಿಂಗಳ ಅಂತ್ಯದಲ್ಲಿ ಉತ್ತುಂಗ ಮುಟ್ಟಲಿವೆ. ಆ ವೇಳೆ ನಿತ್ಯ 10 ಲಕ್ಷ ಸೋಂಕಿತರು ವರದಿ ಆಗಲಿದ್ದಾರೆ.
ಫೆಬ್ರವರಿ ಮೊದಲ ವಾರದವರೆಗೂ ಇದೆ ಆತಂಕಕಾರಿ ಪರಿಸ್ಥಿತಿ ಮುಂದುವರೆಯಲಿದೆ. ವಿವಿಧ ರಾಜ್ಯಗಳಲ್ಲಿ ಗರಿಷ್ಠ ಸೊಂಕಿತರ ಸಂಖ್ಯೆ ವಿಭಿನ್ನ ಪ್ರಮಾಣದಲ್ಲಿ ಗರಿಷ್ಠ ಮಟ್ಟ ತಲುಪಲಿದೆ.
ಮಾರ್ಚ್ ಆರಂಭದಲ್ಲಿ ಕೊರೊನಾ ಕೇಸ್ ಗಳು ಇಳಿಕೆ ಕಾಣಲು ಶುರುವಾಗಲಿದೆ ಎಂದು ವರದಿ ಹೇಳಿದೆ.
ಕಾನ್ಪುರದ ಐಐಟಿ ನಡೆಸಿರುವ ಇಂಥದ್ದೇ ಮತ್ತೊಂದು ಅಧ್ಯಯನದಲ್ಲಿ ಕೊರೊನಾ ಮೂರನೇ ಅಲೆಯ ಪೀಕ್ ಫೆ.3ರಂದು ಸಂಭವಿಸಲಿದೆ. ಸರ್ಕಾರದ ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡೆಲ್ ಸಮಿತಿಯು ಕೂಡ ಫೆಬ್ರುವರಿಯಲ್ಲಿ ದೇಶದಲ್ಲಿ ಮೂರನೇ ಅಲೆಯು ಉತ್ತುಂಗಕ್ಕೆ ತಲುಪುವ ಎಚ್ಚರಿಕೆ ನೀಡಿದೆ.