Friday, February 13, 2026
Friday, February 13, 2026
Home Blog Page 1771

ಪ್ರೊ ಕಬಡ್ಡಿ ಲೀಗ್ ದಿಲ್ಲಿ ದಬಾಂಗ್ ಜಯ ಮುಂಬಾ ಗೆಲುವು

0

ನವೀನ್ ಕುಮಾರ್ ಅವರ ಮಿಂಚಿನ ಆಟದ ನೆರವಿನಿಂದ ದಬಾಂಗ್ ದಿಲ್ಲಿ ಬಳಗ ಪ್ರೊ ಕಬ್ಬಡ್ಡಿ ಲೀಗ್ ನ 40ನೇ ಪಂದ್ಯದಲ್ಲಿ ಯು.ಪಿ. ಯೋಧಾ ತಂಡವನ್ನು 37-33 ಅಂಕಗಳ ಅಂತರದಿಂದ ಮಣಿಸಿತು.
ಬೆಂಗಳೂರಿನ ಶೆರಟಾನ್ ಹೋಟೆಲ್ ನ ಸಭಾಂಗಣದಲ್ಲಿ ನಡೆದ ಮೊದಲ ಪಂದ್ಯ ಕೊನೆಕ್ಷಣದವರೆಗೂ ಕೌತುಕಮಯವಾಗಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಸಂಘಟಿತ ಪ್ರದರ್ಶನ ನೀಡಿದ ದಿಲ್ಲಿ ತಂಡ ಗೆಲುವಿನ ಸವಿಯುಂಡು, ಪೂರ್ಣ 5 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು. ಈ ವಿಜಯವೂ ಸೇರಿ ದಿಲ್ಲಿತಂಡ ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 5 ಜಯ, ಎರಡು ಟೈ ಫಲಿತಾಂಶಗಳಿಂದ ಒಟ್ಟು 31 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ದಿನದ ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡ ತೆಲುಗು ಟೈಟನ್ಸ್ ವಿರುದ್ಧ 48-38 ಅಂಕಗಳ ಅಂತರದಿಂದ ಜಯ ಗಳಿಸಿತು.
ಆರಂಭದಿಂದಲೇ ಅತ್ಯುತ್ಸಾಹದಿಂದ ಆಡಿದ ಮುಂಬಾ ಬಳಗ ನಿರಂತರ ಪಾಯಿಂಟ್ ಗಳನ್ನು ಗಳಿಸುತ್ತಾ ಸಾಗಿತು. ರೇಡರ್ ಗಳಾದ ಅಭಿಷೇಕ್ ಸಿಂಗ್ (13) ಹಾಗೂ ವಿ.ಅಜಿತ್ (8) ಪ್ರತಿ ಹಂತದಲ್ಲೂ ತಂಡ ಮುನ್ನಡೆಯಲ್ಲಿರುವಂತೆ ನೋಡಿಕೊಂಡರು.
ಹೀಗಾಗಿ ಮೊದಲಾರ್ಧದಲ್ಲಿ ಮುಂಬಾ ಬಳಗ 28-13 ಅಂಕಗಳ ಭರ್ಜರಿ ಮುನ್ನಡೆ ಪಡೆದುಕೊಂಡಿತು. ದ್ವಿತೀಯಾರ್ಧದಲ್ಲಿ ತೆಲುಗು ಪಡೆ ಮರು ಹೋರಾಟ ಸಂಘಟಿಸಿ 25 ಅಂಕಗಳನ್ನು ಗಳಿಸಿದರೂ ಗೆಲುವಿಗೆ ಅವು ಸಾಕಾಗಲಿಲ್ಲ.
ಪಂದ್ಯದ ಆರಂಭದಲ್ಲಿ ಯು.ಪಿ.ಯೋಧಾ ಆಕ್ರಮಣಕಾರಿ ಹೋರಾಟದ ಮೂಲಕ ಅಂಕಗಳನ್ನು ಸಂಪಾದಿಸಿತು. ಹೀಗಾಗಿ ಮೊದಲಾರ್ಧ ಮುಕ್ತಾಯದ ವೇಳೆಗೆ 18-13 ಅಂಕಗಳ ಮುನ್ನಡೆ ಗಳಿಸಿಕೊಂಡಿತು.
ಆರಂಭಿಕ ಹಿನ್ನಡೆಯ ಹೊರತಾಗಿಯೂ ಗೆಲುವಿನ ಭರವಸೆಯೊಂದಿಗೆ ದ್ವಿತೀಯಾರ್ಧದಲ್ಲಿ ಚೇತೋಹಾರಿ ಪ್ರದರ್ಶನ ನೀಡಿದ ದಿಲ್ಲಿ ತಂಡ ಎದುರಾಳಿ ರೇಡರ್ ಗಳಿಗೆ ಕಡಿವಾಣ ಹಾಕುವ ಜೊತೆಗೆ ರೇಡಿಂಗ್ ನಲ್ಲೂ ನಿರಂತರ ಇಸ್ಸು ಸಾಧಿಸಿತು.
ಮೊದಲಾರ್ಧದಲ್ಲಿ ಮಾಡಿದ ತಪ್ಪುಗಳಿಗೆ ಉತ್ತರ ಕಂಡುಕೊಂಡು ಹೋರಾಟ ಸಂಘಟಿಸಿತು. ಈ ಅವಧಿಯಲ್ಲಿ ದಿಲ್ಲಿ ದಬಾಂಗ್ ತಂಡ 24 ಅಂಕಗಳನ್ನು ಗಳಿಸಿದರೆ, ಯೋಧಾ ಪಾಲಿಗೆ 15 ಅಂಕಗಳು ಮಾತ್ರ ದೊರೆತವು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭದ್ರಾವತಿ ತಾಲೂಕಿನಲ್ಲಿ ಕೋವಿಡ್ ಮುನ್ನೆಚ್ಚರಿಕೆ

0

ಭದ್ರಾವತಿ ತಾಲೂಕಿನಾದ್ಯಂತ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರ ಆರ್. ಪ್ರದೀಪ್ ನಿಕ್ಕಮ್ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆರ್. ಪ್ರದೀಪ್ ನಿಕ್ಕಮ್ ಅವರು ಭದ್ರಾವತಿ ತಾಲೂಕು ಕಚೇರಿ ಸಭಾಂಗಣದಲ್ಲಿ ಕೊರೋನಾ ನಿಯಂತ್ರಣ ಸಂಬಂಧ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.

‘ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯದ ಕರ್ಫ್ಯೂ ಯಶಸ್ವಿಗೊಳಿಸಲು ಎಲ್ಲ ಇಲಾಖೆಗಳು ಹೆಚ್ಚಿನ ಗಮನಹರಿಸಬೇಕು. ಸಾರ್ವಜನಿಕರ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಬೇಕು. ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಟ್ಟು ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚಿಸಿದ್ದಾರೆ.

ತಹಸೀಲ್ದಾರ್ ಗ್ರೇಡ್-2 ರಂಗಮ್ಮ, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ. ಅಶೋಕ್ ಇನ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪಾದಯಾತ್ರೆ ಬಿಡಲ್ಲ- ಡಿಕೆಶಿ ಸೋಂಕು ನಿಯಂತ್ರಣಕ್ಕೆ ಸಹಕರಿಸಿ-ಗೃಹಸಚಿವ

0

ಮೇಕೆದಾಟು ಪಾದಯಾತ್ರೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್ ನಾಯಕರು, ಜೈಲಿಗೆ ಹೋಗಲು ಸಿದ್ಧ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಬಲಿಗರೊಂದಿಗೆ ದೇವಸ್ಥಾನ, ಚರ್ಚ್, ಮಸೀದಿಗೆ ಭೇಟಿ ನೀಡಿದರು. ಏನೇ ಆದರೂ ಪಾದಯಾತ್ರೆಯನ್ನು ನಡೆಸಿಯೇ ತೀರಬೇಕೆಂಬ ಪಟ್ಟು ಹೊಂದಿರುವುದರಿಂದ ನಮ್ಮನ್ನು ಬಂಧಿಸಿದರೂ ಸಹ ಪಾದಯಾತ್ರೆ ಮುಂದುವರಿಸುತ್ತೇವೆ ಎಂದರು.
ರಾಜ್ಯ ಸರ್ಕಾರದ ಆದೇಶದಂತೆ ಮಾಸ್ಕ್, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಪಾದಯಾತ್ರೆ ನಡೆಸುವುದಾಗಿ ತಿಳಿಸಿದರು.
ನಾನು ಯಾರು ಬಳಿಯುವ ಅನುಮತಿ ಕೇಳಿಲ್ಲ. ಅದರ ಅವಶ್ಯಕತೆ ನನಗಿಲ್ಲ. ನಮ್ಮೂರಿನಲ್ಲಿ ನಾನು ನಡೆದುಕೊಂಡು ಹೋಗಲು ಯಾರಪ್ಪನ ಅಪ್ಪಣೆಯೂ ಬೇಕಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.
ಕಾಂಗ್ರೆಸ್ ನ ರಣತಂತ್ರಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ನೋಟಿಸ್ ಜಾರಿ ಮಾಡಿಸಿದ್ದು ಕಾರ್ಯಕ್ರಮಕ್ಕೆ ಎಚ್ಚರಿಕೆಯನ್ನು ನೀಡಿದೆ.
ಕೋವಿಡ್ ಕರ್ಫ್ಯೂ ಹಿನ್ನಲೆಯಲ್ಲಿ ಹೊರಜಿಲ್ಲೆಯ ಕಾರ್ಯಕರ್ತರು ಪಾಲ್ಗೊಳ್ಳದೆ ಕೇವಲ ರಾಮನಗರ ಜಿಲ್ಲೆಯವರಷ್ಟೇ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ನಾವು ಎಲ್ಲದಕ್ಕೂ ಬದ್ಧ. ಎಲ್ಲದಕ್ಕೂ ಸಿದ್ಧ. ನಾವು ಹೆಜ್ಜೆ ಇಟ್ಟಿದ್ದು ಆಯ್ತು. ಈಗ ಹೋರಾಟವಷ್ಟೇ ನಮ್ಮ ಮುಂದೆ ಇದೆ ಎಂದು ಸಂಸದ ಡಿ.ಕೆ. ಸುರೇಶ್ ಅವರು ತಿಳಿಸಿದ್ದಾರೆ.
ಹೊರ ಜಿಲ್ಲೆಗಳಿಂದ ಬರುವ ವಾಹನಗಳನ್ನು ತಡೆಯಲು ಪೊಲೀಸರು ಯೋಜನೆ ರೂಪಿಸಿಲ್ಲ. ಬದಲಿಗೆ ಬೆಂಡಗೂಡು ಚೆಕ್ ಪೋಸ್ಟ್ ನಲ್ಲಿ ಹೊರಜಿಲ್ಲೆಯ ವಾಹನಗಳು ಹಾಗೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಮೇಕೆದಾಟು ವಿವಾದ ಸುಪ್ರೀಂ ಕೋರ್ಟ್ ನ್ಯಾಯಾಲಯದ ಅಂಗಳದಲ್ಲಿದೆ. ಕಾಂಗ್ರೆಸ್ ನಾಯಕರು ಹಠ ಬಿಟ್ಟು ಸೋಂಕು ನಿಯಂತ್ರಣ ಕಾರ್ಯದಲ್ಲಿ ಸರ್ಕಾರದ ಜೊತೆ ಸಹಕರಿಸಿ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಹೇಗಿತ್ತು?

0

ಜನರ ತೀವ್ರ ವಿರೋಧದ ನಡುವೆಯೇ ಜಾರಿಗೊಂಡ ವೀಕೆಂಡ್ ಕರ್ಫ್ಯೂ ವಿನ ಮೊದಲ ದಿನ ರಾಜ್ಯಾದ್ಯಂತ ಬಹುತೇಕ ಬಂದ್ ನ ವಾತಾವರಣ ಸೃಷ್ಟಿಯಾಗಿತ್ತು.
ಬೆಳಗ್ಗಿನ ಸ್ವಲ್ಪ ಹೊತ್ತು ದಿನ ಬಳಕೆಯ ವಸ್ತುಗಳ ವ್ಯಾಪಾರ ಸಣ್ಣ ಮಟ್ಟಿಗೆ ನಡೆದರೆ ಬಳಿಕ ಬಾಗಿಲು ಮುಚ್ಚಲಾಯಿತು.
ಪೊಲೀಸರು ನಗರಗಳಲ್ಲಿ ತೀವ್ರ ಕಣ್ಣಿಟ್ಟಿದ್ದರಿಂದ ವಾಹನಗಳ ತಪಾಸಣೆ ನಡೆಯಿತು. ಕೆಲವೆಡೆ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು. ಬಸ್ ಸಂಚಾರಕ್ಕೆ 50% ಅವಕಾಶವಿತ್ತಾದರೂ ಜನರು ಇರಲಿಲ್ಲ. ಆಟೋ, ಟ್ಯಾಕ್ಸಿ ಸಂಚಾರ ವಿರಳವಾಗಿತ್ತು. ಕರ್ಫ್ಯೂ ಇದ್ದರೂ ಜನರು ದೇಗುಲಗಳಿಗೆ ಭೇಟಿ ನೀಡಿ ದರ್ಶನ ಪಡೆದರು.
ಬೆಂಗಳೂರು ನಗರದಲ್ಲಿ ಅಗತ್ಯವಸ್ತುಗಳ ಅಂಗಡಿಗಳು ತೆರೆದಿದ್ದರಿಂದ ಬೆಳಗ್ಗಿನ ಹೊತ್ತು ಸ್ವಲ್ಪ ಜನ ಸಂಚಾರ ಹೆಚ್ಚಿತ್ತು.
ಶಿವಮೊಗ್ಗ, ಚಿಕ್ಕಮಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ಗದಗ್, ಹಾವೇರಿ, ಚಿತ್ರದುರ್ಗ, ಬಾಗಲಕೋಟೆ, ದಾವಣಗೆರೆ, ಕೋಲಾರ ಜಿಲ್ಲೆಗಳಲ್ಲಿ ಬಹುತೇಕವಾಗಿ ಬಂದ್ ಈ ಸ್ಥಿತಿ ಇತ್ತು.
ಚಿಕ್ಕಮಗಳೂರಿನಲ್ಲಿ ಹೋಂ ಸ್ಟೇ, ರೆಸಾರ್ಟ್, ವಸತಿಗೃಹಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಇದ್ದರೂ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಬೆಂಗಳೂರು ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಪ್ರಧಾನ ರಸ್ತೆಗಳನ್ನು ಹೊರತುಪಡಿಸಿ ಉಳಿದೆಡೆ ಜನಜೀವನ ಸಹಜವಾಗಿಯೇ ಇತ್ತು. ಕೆಲವು ಜಿಲ್ಲೆಗಳಲ್ಲಿ ಕರ್ಫ್ಯೂ ಗೆ ಮನ್ನಣೆ ದೊರೆಯಲಿಲ್ಲ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜಿಲ್ಲೆಯಲ್ಲಿ ಕರ್ಫ್ಯೂ ಕರಾಮತ್ತು,!

0

ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ವಾರಾಂತ್ಯದ ಕರ್ಫ್ಯೂ ಮೊದಲ ದಿನವೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಶಿವಮೊಗ್ಗ ಜಿಲ್ಲಾದ್ಯಂತ ವಾಣಿಜ್ಯ ಮತ್ತು ವ್ಯಾಪಾರ ಕೇಂದ್ರಗಳು ಸಂಪೂರ್ಣ ಬಂದ್ ಆಗಿದ್ದವು.
ದಿನಸಿ, ತರಕಾರಿ, ಹಣ್ಣಿನ ಅಂಗಡಿಗಳು ಮಾತ್ರ ತೆರೆದಿದ್ದವು. ಜನರು ವಾಹನಗಳ ಸಂಚಾರ ವಿರಳವಾಗಿತ್ತು. ಆಟೋ ರಿಕ್ಷಾಗಳು ಮತ್ತು ನಗರ ಸಾರಿಗೆ ಬಸ್ ಗಳ ಸಂಚಾರವು ಕಡಿಮೆ ಇತ್ತು.
ಶಿವಮೊಗ್ಗ ಅಲ್ಲದೆ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರ ಮತ್ತು ಪಟ್ಟಣಗಳಲ್ಲಿ ಇದೇ ಪರಿಸ್ಥಿತಿ ಇತ್ತು. 7:00 ರಿಂದ ರಾತ್ರಿ 10 ರವರೆಗೆ ವಾಹನಗಳಿಂದ ಕೂಡಿರುತ್ತಿದ್ದ ರಸ್ತೆಗಳಲ್ಲಿ ಬೀದಿನಾಯಿಗಳು ದನಕರುಗಳು ಮಲಗಿದ್ದವು.
ರಾಜ್ಯ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ ನಿಲ್ದಾಣಗಳ ತುಂಬಾ ಬಸ್ ಗಳು ನಿಂತಿದ್ದರೂ ಪ್ರಯಾಣಿಕರು ಮಾತ್ರ ಇರಲಿಲ್ಲ. ಹೊರ ಜಿಲ್ಲೆಗಳಿಂದ ಬಂದ ಪ್ರಯಾಣಿಕರು ತಮ್ಮ ಊರಿಗೆ ತೆರಳಲು ಗ್ರಾಮಾಂತರ ಬಸ್ಸುಗಳಿಗೆ ಗಂಟೆಗಟ್ಟಲೆ ಕಾಯಬೇಕಾಯಿತು‌.
ಸರಕು ಸಾಮಗ್ರಿಗಳನ್ನು ಸಾಗಿಸುವ ವಾಹನಗಳು ಮತ್ತು ಪ್ರಾಣಿಗಳು ಸಹ ಅಪರೂಪವಾಗಿದ್ದವು.
ವಾಹನಗಳ ಸಂಚಾರ ನಿಯಂತ್ರಿಸುವ ಸಲುವಾಗಿ ಪೊಲೀಸರು ನಗರ ಪ್ರವೇಶಿಸುವ ಪ್ರಮುಖ ರಸ್ತೆಗಳು, ನಗರದೊಳಗಿನ ಪ್ರಮುಖ ರಸ್ತೆಗಳ ಆರಂಭ ಮತ್ತು ವೃತ್ತಗಳಲ್ಲಿ ಬ್ಯಾರಿಕೇಡ್ ಗಳನ್ನು ಅಡ್ಡ ಇಟ್ಟಿದ್ದರು.
ಭದ್ರತೆ ನಡುವೆಯೂ ಸಂಚರಿಸುತ್ತಿದ್ದ ದ್ವಿಚಕ್ರವಾಹನ, ಕಾರುಗಳನ್ನು ತಡೆದು ವಿಚಾರಿಸಿ ಬಿಡುತ್ತಿದ್ದರು. ವಿನಾಕಾರಣ ತಿರುಗಾಡುವವರಿಗೆ ಬೈದು ವಾಪಸ್ಸು ಕಳುಹಿಸುತ್ತಿದ್ದರು.
ಬಹಳಷ್ಟು ಜನರ ಮೇಲೆ ಹೆಲ್ಮೆಟ್, ಡಿಎಲ್, ವಿಮೆ ಇಲ್ಲದ ಕಾರಣವೊಡ್ಡಿ ದಂಡ ವಿಧಿಸಿದರು.
ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಿದ್ದರಿಂದ ಬಹಳಷ್ಟು ಹೋಟೆಲ್ ಗಳು ಬಂದ್ ಆಗಿದ್ದವು.
ಕರ್ಫ್ಯೂ ಜನಸಾಮಾನ್ಯರ ಮೇಲೆ ಬಂದಷ್ಟು ಪರಿಣಾಮ ಬೀರಿರಬಹುದು.
ಆದರೆ ನಿರ್ಗತಿಕರನ್ನಂತೂ ಉಪವಾಸ ಕೆಡವಿದೆ. ನಗರ ಪ್ರದೇಶದ ಬಸ್ ನಿಲ್ದಾಣ, ಸಂದಿಗೊಂದಿಗಳಲ್ಲಿ ಆಶ್ರಯ ಪಡೆದುಕೊಂಡು ಬಿಕ್ಷೆ ಬೇಡಿ, ಅದರಲ್ಲಿ ಬಂದ ಹಣದಿಂದ ಅತ್ವ ಅವರಿವರು ಕೊಟ್ಟಿದ್ದನ್ನು ತಿನ್ನುತ್ತಿದ್ದ ನಿರ್ಗತಿಕರಿಗೆ ಕರ್ಫ್ಯೂ ಕಾರಣದಿಂದ ಉಪವಾಸ ಇರುವಂತಾಗಿದೆ.
ಹೀಗಾಗಿ ಮುಖ್ಯ ಬಸ್ ನಿಲ್ದಾಣ, ಮರಗಳು ಮತ್ತು ರಸ್ತೆಬದಿಗಳಲ್ಲಿ ಉಪವಾಸದಿಂದ ಮಂಕಾಗಿ ಕುಳಿತಿದ್ದರು.
ಲಾಕ್ ಡೌನ್ ಅವಧಿಯಲ್ಲಿ ಸಂಘ-ಸಂಸ್ಥೆಗಳು ಇವರಿಗೆ ಊಟ ಒದಗಿಸಿದ್ದವು. ಆದರೆ ಈ ಬಾರಿ ಕರ್ಫೂ ಮೊದಲ ದಿನವಾದ್ದರಿಂದ ನಿರ್ಗತಿಕರು ಉಪವಾಸ ಇರುವಂತಾಯಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಟೀಸಿ ನೀಡಲೊಪ್ಪದ ಶಾಲೆಗಳ ಮೇಲೆ ಕ್ರಮ ಬೇಡ

0

ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೂ ವರ್ಗಾವಣೆ ಪ್ರಮಾಣ ಪತ್ರ ನೀಡಲು ಖಾಸಗಿ ಶಾಲೆಗಳ ಮೇಲೆ ಒತ್ತಡ ಹೇರದಂತೆ ಕೋರಿ ಕ್ಯಾಮ್ಸ್ ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಹೈಕೋರ್ಟ್ ಶಿಕ್ಷಣ ಇಲಾಖೆಗೆ ನಿರ್ದೇಶಿಸಿದೆ.

ಇಷ್ಟಲ್ಲದೇ, ಅಲ್ಲಿವರೆಗೆ ಆ ಶಾಲೆಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಹುದು ಎಂದು ಆದೇಶ ನೀಡಿದೆ.

ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸುವಂತೆ ಸೂಚಿಸಿ ನೋಟಿಸ್ ಜಾರಿಗೊಳಿಸಿದ ಶಿಕ್ಷಣ ಇಲಾಖೆಯ ಕ್ರಮ ಪ್ರಶ್ನಿಸಿ ಕ್ಯಾಮ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಗಳನ್ನು ಒಳಗೊಂಡ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜಿ. ಆರ್. ಮೋಹನ್, ಕೋವಿಡ್ ಕಾರಣದಿಂದ ಈಗಾಗಲೇ ಶಾಲೆಗಳು ಸಾಕಷ್ಟು ನಷ್ಟ ಅನುಭವಿಸಿವೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಪೋಷಕರು ಇದುವರೆಗೂ ಶುಲ್ಕ ಪಾವತಿಸಿಲ್ಲ. ಇದರಿಂದ, ಶಾಲೆ ನಿರ್ವಹಣೆ ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ನೀಡಲು ಸಮಸ್ಯೆಯಾಗುತ್ತಿದೆ. ಪರಿಸ್ಥಿತಿಯೇ ಹೀಗಿರುವಾಗ, ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೂ ಕೂಡ ಪ್ರಮಾಣಪತ್ರ ವಿತರಿಸುವಂತೆ ಇಲಾಖೆಯ ಬಿಇಒ ಗಳ ಮೂಲಕ ಒತ್ತಡ ಹೇರುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದಾರೆ.

ಒಮ್ಮೆ ಟೀಸಿ ನೀಡಿದರೆ ಅಂತಹ ವಿದ್ಯಾರ್ಥಿಗಳ ಪೋಷಕರು ಮತ್ತು ಶುಲ್ಕ ಪಾವತಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇದರಿಂದ, ಶಾಲೆಗಳಿಗೆ ಮತ್ತಷ್ಟು ನಷ್ಟವಾಗುತ್ತದೆ. ಪ್ರಮಾಣ ಪತ್ರ ವಿತರಿಸಲು ಒತ್ತಡ ಹೇರದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ 2021ರ ನ.16ರಂದು ಮನವಿ ಸಲ್ಲಿಸಲಾಗಿದೆ.

ಆದರೆ ಮನವಿ ಪರಿಗಣಿಸಿ ಸಮಸ್ಯೆ ಬಗೆಹರಿಸುವ ಬದಲು ನವೆಂಬರ್ 25ರಂದು ನೆನಪೋಲೆ ಕಳಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಪ್ರಮಾಣ ಪತ್ರ ವಿತರಿಸಿದ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದರ ಹಿನ್ನೆಲೆಯಲ್ಲಿ ಮತ್ತೊಂದು ಮನವಿ ಸಲ್ಲಿಸಲಾಗಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.

ಅರ್ಜಿದಾರರು ಸಲ್ಲಿಸಿರುವ ಎರಡು ಮನವಿಗಳನ್ನು ಶೀಘ್ರ ಪರಿಗಣಿಸಿ, ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಅಲ್ಲಿಯವರೆಗೆ ಪ್ರಮಾಣ ಪತ್ರ ವಿತರಿಸದ ಖಾಸಗಿ ಶಾಲೆಗಳ ವಿರುದ್ಧ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ಶಿಕ್ಷಣ ಇಲಾಖೆಗೆ ಸೂಚಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅಂತಾರಾಷ್ಟ್ರೀಯಟೆನಿಸ್ ಪಂದ್ಯ: ಭಾರತೀಯ ಜೋಡಿ ಫೈನಲ್ ಗೆ

0

ಭಾರತದ ಹೊಸ ಟೆನಿಸ್ ಜೋಡಿ ರೋಹನ್ ಬೋಪಣ್ಣ ಮತ್ತು ರಾಮ್ ಕುಮಾರ್ ರಾಮನಾಥನ್ ಅಡಿಲೇಡ್ ಇಂಟರ್ನ್ಯಾಷನಲ್ ಒನ್ ಎಟಿಪಿ ಟೂರ್ನಿಯ ಪುರುಷರ ಡಬಲ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ನಲ್ಲಿ, ಭಾರತೀಯ ಜೋಡಿ ಟೂರ್ನಿಯ ನಾಲ್ಕನೇ ಶ್ರೇಯಾಂಕದ ಬೋಸ್ನಿಯಾ -ಮೆಕ್ಸಿಕೋ ಜೋಡಿ ಟೊಮಿಸ್ಲಾವ್ ಬ್ರಿಕ್ ಮತ್ತು ಸ್ಯಾಂಟಿಯಾಗೊ ಗೊನ್ಜಾಲೆಜ್ ವಿರುದ್ಧ 6-2,6-4 ನೇರ ಸೆಟ್ ಗಳಿಂದ ಜಯ ಸಾಧಿಸಿತು.
ರಾಮನಾಥನ್ ಮತ್ತು ಬೋಪಣ್ಣ ಜೋಡಿಗೆ ಫೈನಲ್ ನಲ್ಲಿ ಅಗ್ರಶ್ರೇಯಾಂಕದ ಕೊಯೇಷ್ಯಾ -ಬ್ರೆಜಿಲ್ ಜೋಡಿ ಇವಾನ್ ಡೋದಿಗ್ ಮತ್ತು ಮಾರ್ಸೆಲೊ ಮೆಲೊ ಸವಾಲು ಎದುರಾಗಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ಮಾದರಿ ಹೆಜ್ಜೆ

0

ಗ್ರಾಮೀಣಾಭಿವೃದ್ಧಿಗೆ ಸಮರ್ಥ ಯೋಜನೆ ರೂಪಿಸಿರುವ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ಯಶಸ್ಸಿನ ಹೆಜ್ಜೆಗಳನ್ನು ಹಾಕುತ್ತಿದೆ. ನರೇಗಾ ಹಾಗೂ ವಿವಿಧ ಇಲಾಖೆಗಳ ಅನುದಾನದ ಸದ್ಬಳಕೆ ಮಾಡಿಕೊಂಡು ರಾಜ್ಯಕ್ಕೆ ಮಾದರಿಯಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2021-22ನೇ ಸಾಲಿನಲ್ಲಿ 2359.72 ಲಕ್ಷ ವೆಚ್ಚದಲ್ಲಿ 10,451 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಲ ಸಂರಕ್ಷಣೆ ಯೋಜನೆಯಡಿ ಬದು ನಿರ್ಮಾಣ, ಕೃಷಿ ಹೊಂಡ, ಕಲ್ಯಾಣಿ ಅಭಿವೃದ್ಧಿ, ನೀರುಗಾಲುವೆ,ಕೆರೆ, ಗೋಕಟ್ಟೆ, ಮಲ್ಟಿ ಆರ್ಚ್ ಚೆಕ್ ಡ್ಯಾಮ್, ವೈಯಕ್ತಿಕ ಕೃಷಿ ಬಾವಿ, ವಯಕ್ತಿಕ ಸೋಕ್ ಫಿಟ್, ಮಳೆ ನೀರು ಕೊಯ್ಲು ಇದರಲ್ಲಿ ಸೇರಿವೆ. 226 ಗ್ರಾಮಪಂಚಾಯಿತಿಗಳ ಒಟ್ಟು 1117 ಗ್ರಾಮಗಳಲ್ಲಿ 34,435 ನಿವೇಶನ ರಹಿತರಿದ್ದು, ಸರ್ಕಾರಿ ಉದ್ದೇಶಗಳಿಗೆ ಮಂಜೂರಾದ ಜಮೀನುಗಳ ವಿವರ ಸಂಗ್ರಹಿಸಿ 205.35 ಎಕರೆಯನ್ನು ದುರಸ್ತಿ ಪಡಿಸಲಾಗುತ್ತಿದೆ. ಇದರಲ್ಲಿ ನರೇಗಾ ಮೂಲಕ ಬಡಾವಣೆ ನಿರ್ಮಿಸಿ 5 ಸಾವಿರ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
226 ಗ್ರಾಮಪಂಚಾಯಿತಿಗಳನ್ನು ಪ್ಲಾಸ್ಟಿಕ್ ನಿಯಂತ್ರಣ, ನೈರ್ಮಲ್ಯ ಕಾಪಾಡುವುದು, ಚರಂಡಿ, ಸರ್ಕಾರಿ ಕಟ್ಟಡಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಚಿಕ್ಕಮಂಗಳೂರು ಜಿಲ್ಲಾ ಪಂಚಾಯತ್ ಸಿಇಓ ಜೆ.ಪ್ರಭು ಅವರು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 226 ಗ್ರಾಮಪಂಚಾಯಿತಿಗಳಿದ್ದು, ಈಗಾಗಲೇ 150 ಡಿಜಿಟಲ್ ಗ್ರಂಥಾಲಯ ಪೂರ್ಣಗೊಂಡಿವೆ. ಜನವರಿ ಅಂತ್ಯದೊಳಗೆ ಎಲ್ಲಾ ಗ್ರಾಮ ಪಂಚಾಯಿತಿಗಳೂ ಡಿಜಿಟಲ್ ಲೈಬ್ರರಿ ಹೊಂದಲಿವೆ. 140 ಗ್ರಂಥಾಲಯಗಳು ಎನ್ ಡಿಎಲ್ ಮತ್ತು ಕರ್ನಾಟಕ ಡಿಜಿಟಲ್ ಲೈಬ್ರರಿ ಲಾಗಿನ್ ಹೊಂದಿವೆ. 52,486 ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ಓದುವ ಬೆಳಕು ಅಭಿಯಾನದಲ್ಲಿ ಪ್ರತಿ ಶನಿವಾರ ಡಿಜಿಟಲ್ ಗ್ರಂಥಾಲಯಕ್ಕೆ ಮಕ್ಕಳ ಭೇಟಿ, ಪುಸ್ತಕ ಅಧ್ಯಯನ, ಆಡಳಿತ ವ್ಯವಸ್ಥೆಯ ಅರಿವು ಮೂಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ 1446 ಸರ್ಕಾರಿ ಶಾಲೆಗಳಿದ್ದು, ನರೇಗಾ ಹಾಗೂ ವಿವಿಧ ಅನುದಾನ ಬಳಸಿಕೊಂಡು 382 ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸುಸಜ್ಜಿತ ಕೊಠಡಿ ನಿರ್ಮಾಣ, ಕೊಠಡಿ ದುರಸ್ತಿ, ಸುಸಜ್ಜಿತ ಶೌಚಾಲಯ ನಿರ್ಮಾಣ, ಪೌಷ್ಟಿಕ ತೋಟ, ಕಾಂಪೌಂಡ್, ಕುಡಿಯುವ ನೀರು, ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯ, ಗ್ರಂಥಾಲಯ, ಪೀಠೋಪಕರಣಗಳನ್ನು ಒದಗಿಸಲಾಗಿದೆ.
ಪ್ರತಿ ಶಾಲೆಗೆ ಯಾವುದಾದರೂ ಒಂದು ಕ್ರೀಡೆಗೆ ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ಸುಸಜ್ಜಿತ ಆಟದ ಮೈದಾನ ನಿರ್ಮಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ಮಾಹಿತಿ ರಾಜ್ಯದಲ್ಲಿ 38,507 ಪ್ರಕರಣಗಳು

0

ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತದೆ. ಸೋಂಕಿನ ಪ್ರಮಾಣ ಶೇ.5.42ಕ್ಕೆ ಏರಿಕೆಯಾಗಿದೆ. ಶನಿವಾರ 1.64 ಲಕ್ಷ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು,8,906 ಹೊಸ ಪ್ರಕರಣಗಳು ದಾಖಲಾಗಿವೆ. ಕೋವಿಡ್ ನಿಂದ ನಾಲ್ವರು ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 38,507ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ 3 ಹಾಗೂ ಕಲಬುರ್ಗಿಯಲ್ಲಿ ಒಬ್ಬ ಸೋಂಕಿತ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ 7,113 ಪ್ರಕರಣಗಳು ದಾಖಲಾಗಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದ ಹಲವೆಡೆ ಮಳೆ ಸಂಭವ

0

ರಾಜ್ಯದಲ್ಲಿ ಒಣ ಹವೆ ಮುಂದುವರಿಯಲಿದೆ. ಉತ್ತರ ಒಳನಾಡಿನ ಕೆಲವು ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶನಿವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ಗರಿಷ್ಠ 33.6 ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಶನಿವಾರ ಬೆಂಗಳೂರು ನಗರದಲ್ಲಿ ಮೋಡಕವಿದ ವಾತಾವರಣವಿತ್ತು. ಗರಿಷ್ಠ 28.2, ಕನಿಷ್ಠ 18.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ರಾಜಧಾನಿಯಲ್ಲಿ ಜನವರಿ 9ರ ಭಾನುವಾರ ಕೂಡ ಮೋಡವಿತ್ತು. ಬೆಳಗಿನಜಾವ ದಟ್ಟ ಮಂಜಿನಿಂದ ಕೂಡಿತ್ತು.
ಜ.10 ಮತ್ತು ಜ.11ರಂದು ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳ ಕೆಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.