Saturday, February 14, 2026
Saturday, February 14, 2026
Home Blog Page 1770

ಮೂರನೇ ಡೋಸ್ ಲಸಿಕೆ ಪಡೆಯಲು ಮಾಹಿತಿ

0

ಕೋವಿಡ್ ಲಸಿಕೆಯ ಮೂರನೇ ಡೋಸ್ ವಿತರಣೆ ರಾಜ್ಯದಲ್ಲಿ ಇದೇ ಸೋಮವಾರದಿಂದ (ಜ.10) ಪ್ರಾರಂಭವಾಗಲಿದೆ. ಸದ್ಯ ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ 21 ಲಕ್ಷ ಮಂದಿ ಮತ್ತೊಂದು ಡೋಸ್ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ.
ರಾಜ್ಯದಲ್ಲಿ 2021ರ ಜ.16ರಿಂದ ಲಸಿಕೆ ವಿತರಿಸಲಾಗುತ್ತಿದೆ. 18 ವರ್ಷಗಳು ಮೇಲ್ಪಟ್ಟ 4.89 ಕೋಟಿ ಮಂದಿಗೆ ಲಸಿಕೆ ವಿತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಅವರಲ್ಲಿ 4.8 ಕೋಟಿ ಮಂದಿಗೆ ಮೊದಲ ಡೋಸ್ ಮತ್ತು 3.9 ಕೋಟಿ ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇದೇ ಜನವರಿ 3ರಿಂದ 15ರಿಂದ 18 ವರ್ಷದವರೆಗೆ ಲಸಿಕೆ ವಿತರಣೆ ಪ್ರಾರಂಭಿಸಲಾಗಿದ್ದು,31.75 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಅವರಲ್ಲಿ 15.5 ಲಕ್ಷ ಮಂದಿಗೆ ಮೊದಲನೇ ಡೋಸ್ ಲಸಿಕೆ ನೀಡಲಾಗಿದೆ‌.
6 ಲಕ್ಷ ಆರೋಗ್ಯ ಕಾರ್ಯಕರ್ತರು, 7 ಲಕ್ಷ ಮುಂಚೂಣಿ ಕಾರ್ಯಕರ್ತರು ಮತ್ತು 8 ಲಕ್ಷ 60 ವರ್ಷಗಳು ಮೇಲ್ಪಟ್ಟ ಅಸ್ವತ್ಥರು ರಾಜ್ಯದಲ್ಲಿ ಎರಡೂ ಡೋಸ್ ಲಸಿಕೆ ಪಡೆದು ಒಂಬತ್ತು ತಿಂಗಳು ಕಳೆದಿವೆ. ಇವರು ಮೂರನೇ ಡೋಸ್ ಪಡೆಯಲು ಅರ್ಹರಾಗಿದ್ದಾರೆ.
ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ಪಡೆದವರು ಮಾತ್ರ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅರ್ಹರಾಗಿರುತ್ತಾರೆ. ಸ್ಪುಟ್ನಿಕ್ ಲಸಿಕೆ ಪಡೆದವರು ಮೂರನೇ ಡೋಸ್ ಮಾಡುವಂತಿಲ್ಲ. ಎಲ್ಲ ಜಿಲ್ಲೆಗಳಲ್ಲಿಯೂ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮೂರನೇ ಡೋಸ್ ಲಸಿಕೆ ಪಡೆಯಲು ಹೊಸದಾಗಿ ನೋಂದಣಿ ಮಾಡಬೇಕಾಗಿಲ್ಲ. 9 ತಿಂಗಳು ಪೂರೈಸಿದವರಿಗೆ ಕೋವಿನ್ ಪೋರ್ಟಲ್ ನಿಂದ ಸಂದೇಶ ರವಾನೆಯಾಗುತ್ತದೆ.
ಫಲಾನುಭವಿಗಳು ಪೋರ್ಟಲ್ ನೆರವಿನಿಂದ ತಮ್ಮ ಸಮಯವನ್ನು ಕಾಯ್ದಿರಿಸುವ ಅವಕಾಶ ಇರುತ್ತದೆ. ನೇರವಾಗಿ ಕೇಂದ್ರಗಳಿಗೆ ತೆರಳಿಯೂ ಲಸಿಕೆ ಪಡೆದುಕೊಳ್ಳಬಹುದು.
ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಒದಗಿಸಲಾಗುತ್ತದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸೋಗಾನೆ ಭೂಮಿಹಕ್ಕು ರೈತ ಸಮಿತಿಯ ಎಚ್ಚರಿಕೆ

0

ಶಿವಮೊಗ್ಗ ವಿಮಾನ ನಿಲ್ದಾದ ಸಲುವಾಗಿ ಭೂಮಿ ಕಳೆದುಕೊಂಡ ರೈತರಿಗೆ ಕೊಟ್ಟ ಭರವಸೆಯಂತೆ ನಿವೇಶನ ನೀಡದಿದ್ದಲ್ಲಿ ಸಂತ್ರಸ್ತರು ಕಾಮಗಾರಿ ನಡೆಯುವ ಜಾಗದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಸೋಗಾನೆ ಭೂಮಿ ಹಕ್ಕು ರೈತರ ಹೋರಾಟ ಸಮಿತಿ ಎಚ್ಚರಿಕೆ ನೀಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಎಲ್ಲಾ ಸಂತ್ರಸ್ಥರಿಗೆ ನಿವೇಶನ ನೀಡುವುದಾಗಿ ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿಯಾದಾಗ ಭರವಸೆ ನೀಡಿದ್ದರು. ವಿಳಂಬವಾದಾಗ ರೈತರ ನ್ಯಾಯಾಲಯಕ್ಕೆ ಹೋಗಿದ್ದು, ಘನ ನ್ಯಾಯಾಲಯ ನಿವೇಶನ ನೀಡುವಂತೆ ಆದೇಶ ಮಾಡಿದೆ. ಆದರೂ ನಿರ್ಲಕ್ಷ್ಯ ತಾಳಿದ ಸರಕಾರದ ವಿರುದ್ಧ ರೈತರು ಪ್ರತಿ ಭಟನೆ ಮಾಡಿದ್ದ ಸಂದರ್ಭ ಅಧಿಕಾರಿಗಳು ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರೂ ನ್ಯಾಯ ಕೊಡಿಸುವುದಾಗಿ ಹೇಳಿದ್ದರು. ಈಗ ಮತ್ತೆ ಅದೇ ತಾತ್ಸಾರ ಮುಂದುವರಿದ ಕಾರಣ ರೈತರು ನ್ಯಾಯ ಸಿಗುವವರೆಗೆ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಣಯಿಸಲಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಈ ಸಂದರ್ಭ ಸಮಿತಿಯ ಅಧ್ಯಕ್ಷ ಎಂ.ಬಿ.ಕೃಷ್ಣಪ್ಪ, ಪ್ರಸನ್ನಕುಮಾರ್,ಮುರೇಗೇಶಪ್ಪ, ಮಹಾದೇವ್, ರಾಮಣ್ಣ ಮತ್ತಿತರರು ಇದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕರುನಾಡು ಇನ್ನು ಹುಲಿರಾಯನ ಬೀಡು

0

ದೇಶದಲ್ಲಿ ನಾಲ್ಕು ವರ್ಷಕ್ಕೊಮ್ಮೆ ನಡೆಸುವ ಹುಲಿ ಗಣತಿ ಮಾಹಿತಿ ಬಹಿರಂಗಕ್ಕೆ ಮುನ್ನವೇ ಕರ್ನಾಟಕ ರಾಜ್ಯ ಮತ್ತೊಮ್ಮೆ ಹುಲಿ ರಾಜಧಾನಿಯಾಗಿ ಹೊರಹೊಮ್ಮಲಿದೆ ಎಂದು ವನ್ಯಜೀವಿ ತಜ್ಞರು ಅಂದಾಜಿಸಿದ್ದಾರೆ.

2018ರ ಹುಲಿಗಣತಿ ಮಾಹಿತಿ ಪ್ರಕಾರ ಮಧ್ಯಪ್ರದೇಶದಲ್ಲಿ 256 ಹುಲಿಗಳಿದ್ದವು, ಕರ್ನಾಟಕದಲ್ಲಿ 524 ಹುಲಿಗಳಿವೆ. ಆದರೆ ಈ ಬಾರಿ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕ ಭೂ 2010 ಮತ್ತು 2016ರ ಹುಲಿ ಗಣತಿ ಸಂಖ್ಯೆಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನ ಗಳಿಸಿತ್ತು. ಈ ಬಾರಿಯ ಹುಲಿ ಗಣತಿಯಲ್ಲಿ ಮಧ್ಯಪ್ರದೇಶವನ್ನು ಹಿಂದಿಕ್ಕಿ ಕರ್ನಾಟಕ ಅಗ್ರಸ್ಥಾನಕ್ಕೆ ಏರಲಿದೆ ಎಂದು ತಿಳಿಸಿದ್ದಾರೆ.

“ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಕರ್ನಾಟಕದಲ್ಲಿ ಸಂಘರ್ಷಕ್ಕಿಳಿಯುವ, ದಾಳಿಮಾಡುವ ಹುಲಿಗಳನ್ನು ಕಡಿಮೆ ಹುಲಿಗಳು ಇರುವ ಪ್ರದೇಶಕ್ಕೆ ಸಾಗಿಸದೆ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಿರುವುದೆ ಹುಲಿಗಳ ಸಂಖ್ಯೆ ಹೆಚ್ಚಾಗಲು ಕಾರಣ” ಎಂದು ತಿಳಿಸಿದೆ.

“ಕರ್ನಾಟಕದಲ್ಲಿ 36 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಇದರ ನಾಲ್ಕು ಲಕ್ಷ ಹೆಕ್ಟೇರ್ ನಲ್ಲಿ ಐದು ಹುಲಿ ಸಂರಕ್ಷಿತ ಪ್ರದೇಶಗಳಿವೆ. ಇದಲ್ಲದೆ, ಹುಲಿಗಳ ಆವಾಸಸ್ಥಾನ ಗುರುತಿಸಿ ಅವುಗಳ ರಕ್ಷಣೆ, ಸಂತತಿ ಹೆಚ್ಚಳದ ದೆಸೆಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಬಂಡಿಪುರ, ನಾಗರಹೊಳೆ ಸೇರಿ ಹಲವೆಡೆ ಹುಲಿಗಳ ಸಂಖ್ಯೆ ಹೆಚ್ಚಾಗುವ ವಿಶ್ವಾಸವಿದೆ” ಎಂದು ಕರ್ನಾಟಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಕುಮಾರ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಭಾರತ ಜೋಡಿ ಬೋಪಣ್ಣ – ರಾಮ್ ಗೆ ಅಡಿಲೇಡ್ ಪ್ರಶಸ್ತಿ

0

ಅಡಿಲೇಡ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ’ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ರಾಮ್ ಕುಮಾರ್ ರಾಮನಾಥನ್ ರವರು “ಟೆನಿಸ್ ಪ್ರಶಸ್ತಿಯನ್ನ” ತಮ್ಮದಾಗಿಸಿಕೊಂಡಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಬಾರಿ ಜೊತೆಯಾಗಿ ಕಣಕ್ಕೆ ಇಳಿದ ಭಾರತದ ಜೋಡಿಗಳು ಇವಾನ್ ದೊಡಿಗ್ ಮತ್ತು ಮೊರ್ಸೆಲೊ ಮೆಲೂ ಅವರನ್ನು 7-6(6),6-1 ರಲ್ಲಿ ಮಣಿಸಿದರು.
ರೋಹನ್,ರಾಮಕುಮಾರ್ ಜೋಡಿ 13 ಲಕ್ಷ 88.000 ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ.ಇಬ್ಬರಿಗೂ 250 ಶ್ರೇಯಾಂಕ ಕೂಡ ಸಿಗಲಿದೆ.
ಕನ್ನಡಿಗ ರೋಹನ್ ಬೋಪಣ್ಣ ಅವರಿಗೆ ಇದು (ATP) ಟೂರ್ನಿಯಲ್ಲಿ 20 ನೇ ಡಬಲ್ಸ್ ಕಿರೀಟವಾಗಿದ್ದು ರಾಮ್ ಕುಮಾರ್ ರವರಿಗೆ ಇದು ಮೊದಲ ಪ್ರಶಸ್ತಿಯಯಾಗಿದೆ.
2018ರಲ್ಲಿ ನಡೆದ ಹಾಲ್ ಆಫ್ ಫೇಮ್ ಟೆನಿಸ್ ಚಾಂಪಿಯನ್ ಷಿಪ್ ನಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದ ಅವರು ರನ್ನರ್ ಆಫ್ ಆಗಿದ್ದರು. ಈ ಹಂತದ ಟೂರ್ನಿಯಲ್ಲಿ ಇದು ರಾಮಕುಮಾರ್ ಅವರ ಎರಡನೇ ಫೈನಲ್.
ಇದೇ ತಿಂಗಳಲ್ಲಿ ಆರಂಭವಾಗಲಿರುವ ‘ಆಸ್ಟ್ರೇಲಿಯನ್ ಓಪನ್ ಟೂರ್ನಿಯ’ ಅರ್ಹತಾ ಸುತ್ತಿನಲ್ಲಿ ಆಡಲು ಸಜ್ಜಾಗುತ್ತಿರು ರಾಮಕುಮಾರ್ ಅವರಿಗೆ ಈ ಜಯದಿಂದ ಭರವಸೆ ತುಂಬಿ ಬೀಗುತ್ತಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಂಸತ್ತಿನ ಕಚೇರಿಯ ಕೆಲವು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು

0

ಸಂಸತ್ತಿನ ಸುಮಾರು 400 ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರ ಹಿಂದೆಯೇ ಸಿಬ್ಬಂದಿ ಹಾಜರಾತಿಗೆ ಸಂಬಂಧಿಸಿದ ಸರ್ಕಾರದಿಂದ ನಿರ್ಬಂಧ ಹೇರಿದೆ.
ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಈ ಬೆಳವಣಿಗೆ ನಡೆದಿದೆ. ಬಜೆಟ್ ಅಧಿವೇಶನ ಸಾಮಾನ್ಯವಾಗಿ ಜನವರಿಯಲ್ಲಿ ಇದರ ಹಿಂದೆಯೇ ರಾಜ್ಯಸಭೆ ಸಚಿವಾಲಯವು, ಕಾರ್ಯದರ್ಶಿ ಮತ್ತು ಅದರ ಕೆಳಹಂತದ ಸಿಬ್ಬಂದಿಯು ಮಾಸಾಂತ್ಯದವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಆದೇಶಿಸಿದೆ. ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ನಿಯಂತ್ರಣ ಕ್ರಮಗಳಿಗೆ ಸೂಚಿಸಿದ್ದಾರೆ.
ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ , ಎಲ್ಲರೂ ಮಾಸ್ಕ್ ಧರಿಸಿದರೆ ಲಾಕ್ ಡೌನ್ ಅಗತ್ಯವಿಲ್ಲ. ಸದ್ಯ ಆಸ್ಪತ್ರೆಗೆ ಸೇರುವವರ ಸಂಖ್ಯೆಯು ಕಡಿಮೆ ಇದೆ ಎಂದು ಹೇಳಿದರು.
ಮೂಲಗಳ ಪ್ರಕಾರ, ರಾಜ್ಯಸಭೆಯ 65, ಲೋಕಸಭೆಯ 200 ಮಂದಿ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ, ಇತರೆ 133 ಸಿಬ್ಬಂದಿಗೂ ಸೋಂಕು ಇರುವುದು ಪತ್ತೆಯಾಗಿದೆ.
ಲೋಕಸಭೆ ಸಚಿವಾಲಯವು, ಅಧೀನ ಕಾರ್ಯದರ್ಶಿ ಹಾಗೂ ಕೆಳಗಿನ ಹಂತದ ಶೇ 50ರಷ್ಟು ಸಿಬ್ಬಂದಿ ಪಾಳಿ ಆಧಾರದಲ್ಲಿ ಕಾರ್ಯನಿರ್ವಹಿಸಬೇಕು. ಈ ಬಗ್ಗೆ ಆಯಾ ಇಲಾಖೆಗಳ ಮುಖ್ಯಸ್ಥರು ನಿರ್ಧರಿಸಬೇಕು ಎಂದು ಸೂಚಿಸಿದೆ.
ಕೋವಿಡ್ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗರ್ಭಿಣಿಯರು ಮತ್ತು ಅಂಗವಿಕಲ ನೌಕರರಿಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಿದೆ. ಈ ನೌಕರರು ಮನೆಯಿಂದಲೇ ಕೆಲಸ ನಿರ್ವಹಿಸಬಹುದು ಎಂದು ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಅಲ್ಲದೆ, ಕಂಟೈನ್ ಮೆಂಟ್ ವಲಯದಲ್ಲಿ ವಾಸವಿರುವ ಸಿಬ್ಬಂದಿಗೂ, ಆ ಪ್ರದೇಶ ಕೋವಿಡ್ ನಿಂದ ಮುಕ್ತವಾಗುವವರೆಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಿಬ್ಬಂದಿ ಲಭ್ಯತೆ ಆಧರಿಸಿ ಆಯಾ ಇಲಾಖೆಗಳು ಪಾಳಿ ನಿರ್ಧರಿಸಬೇಕು. ಮನೆಯಿಂದಲೇ ಕೆಲಸ ಮಾಡುವವರು ಕಚೇರಿ ಜೊತೆಗೆ ದೂರವಾಣಿ ಸಂಪರ್ಕಕ್ಕೆ ಲಭ್ಯವಿರಬೇಕು ಎಂದು ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕನ್ನಡಪ್ರೀತಿಯ ಲೇಖಕ-ಚಂಪಾ ನಿಧನ

0

ಕನ್ನಡದ ಹಿರಿಯ ಸಾಹಿತಿ ನಾಟಕಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದಂತಹ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

1939 ರಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹತ್ತಿಮತ್ತೂರಿನಲ್ಲಿ ಜನಿಸಿದರು. ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ಚಂಪಾ ಅವರು ನೀಡಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಚಂಪಾ ಅವರು ಪ್ರಾಧ್ಯಾಪಕರಾಗಿ, ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಂಕ್ರಮಣ ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕತ್ವದ ಸಾರಥ್ಯವನ್ನು ಅವರು ವಹಿಸಿದ್ದರು. ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಚಂದ್ರಶೇಖರ ಪಾಟೀಲರು 1957 ರಲ್ಲಿ ಹೊಂಗನಸ ಹಡಗು, ನಾಳಿಗಿದೋ ಸ್ವಾಗತ, ಸೇರಿದಂತೆ ಹಲವಾರು ಕಾವ್ಯಗಳನ್ನು ರಚಿಸಿದ್ದಾರೆ.

ಅಪ್ಪ, ಕುಂಟ ಕುಂಟ ಕುರವತ್ತಿ, ಗುರುತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ ಸೇರಿದಂತೆ ಹಲವು ನಾಟಕಗಳನ್ನು ರಚಿಸಿದ್ದಾರೆ.

ಕನ್ನಡ ನಾಡು-ನುಡಿ, ಸಂಸ್ಕೃತಿಯ ರಕ್ಷಣೆಗಾಗಿ ನಿರಂತರ ಹೋರಾಡುತ್ತಾ ಬಂದಿರುವ ಚಂಪಾ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ.ಶಂಕರಗೌಡ ರಂಗಭೂಮಿ ಪ್ರಶಸ್ತಿ, ಸಂದೇಶ್ ಮಾಧ್ಯಮ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಚಂದ್ರಶೇಖರ ಪಾಟೀಲರು ಭಾಜನರಾಗಿದ್ದಾರೆ.

ಚಂಪಾ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದು, “ಚಂಪಾ ಒಬ್ಬ ಕ್ರಾಂತಿಕಾರಿ ಸಾಹಿತಿ. ಕನ್ನಡ ನಾಡು-ನುಡಿಗೆ ಅವರು ಸಲ್ಲಿಸಿದ ಕೊಡುಗೆ ಅಪಾರ. ಗೋಕಾಕ್ ಚಳುವಳಿ ಸೇರಿದಂತೆ ಕನ್ನಡಕ್ಕಾಗಿ ನಡೆದ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಾಗಿ ನಿಂತವರು. ರಾಜ್ಯದಲ್ಲಿ ಕನ್ನಡ ಭಾಷಾ ಮಾಧ್ಯಮ ಕಲಿಕೆಗೆ ಒತ್ತು ನೀಡಿದರು. ಚಂಪಾ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅವರ ಅಭಿಮಾನಿ ಮತ್ತು ಶಿಷ್ಯರಿಗೆ ಆ ದೇವರು ಕರುಣಿಸಲಿ” ಎಂದು ಪ್ರಾರ್ಥಿಸಿದ್ದಾರೆ.

ಕನ್ನಡದ ಕವಿ, ನಾಟಕಕಾರ, ವಿಮರ್ಶಕ, ಹೋರಾಟಗಾರ, ಚಂಪಾ ಎಂದೇ ಖ್ಯಾತರಾಗಿದ್ದ ಶ್ರೀ ಚಂದ್ರಶೇಖರ ಪಾಟೀಲ ವಿಧಿವಶರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ನಾಡು ಒಬ್ಬ ಹಿರಿಯ ಕನ್ನಡದ ಧ್ವನಿಯನ್ನು ಕಳೆದುಕೊಂಡಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು, ಕುಟುಂಬದವರಿಗೆ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

“ಅನ್ಯಾಯ, ಅಸಮಾನತೆ,‌‌ ಸರ್ವಾಧಿಕಾರದ ವಿರುದ್ದ ಸಿಡಿಯುತ್ತಲೇ ಇದ್ದ ಹುಟ್ಟು ಬಂಡಾಯಗಾರ, ವೈಚಾರಿಕ ಗುರು ಮತ್ತು ನನ್ನ ದೀರ್ಘಕಾಲದ ಸ್ನೇಹಿತರಾಗಿದ್ದ ಪ್ರೊ.ಚಂದ್ರಶೇಖರ ಪಾಟೀಲ್ ನಿಧನದಿಂದ ದು:ಖಿತನಾಗಿದ್ದೇನೆ.ಇವರ ಕುಟುಂಬ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಕ್ಕಳಿಗೆ ಲಸಿಕೆ: ಮಂದಗತಿ ಸಾಗುತ್ತಿರುವ ಅಭಿಯಾನ

0

15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋರೋನಾ ಲಸಿಕೆ ನೀಡುವ ಅಭಿಯಾನ ರಾಜ್ಯದಲ್ಲಿ ಜನವರಿ 3ರಿಂದ ಆರಂಭವಾಗಿದೆ. ಆದರೆ , ನಿರೀಕ್ಷಿತ ವೇಗ ಪಡೆಯುವಲ್ಲಿ ವಿಫಲವಾಗಿದೆ. ಆರಂಭದ ದಿನ 4 ಲಕ್ಷಕ್ಕೂ ಹೆಚ್ಚಿನ ಮಕ್ಕಳಿಗೆ ಲಸಿಕೆಯನ್ನು ಹಾಕಲಾಗಿತ್ತು. ಪ್ರಸ್ತುತ ಇದರ ಸಂಖ್ಯೆ 6ನೇ ದಿನಕ್ಕೆ 17,477ಕ್ಕೆ ಕಡಿಮೆಯಾಗಿದೆ.

ಸರ್ಕಾರ ಪ್ರತಿದಿನ 5 ರಿಂದ 6 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಂಡಿತ್ತು. ಅಭಿಯಾನ ಆರಂಭವಾದ ದಿನದಿಂದ ಇಲ್ಲಿಯವರೆಗೆ ಗುರಿ ಮುಟ್ಟುವುದಕ್ಕೆ ಸಾಧ್ಯವಾಗಿಲ್ಲ.

ಅಭಿಯಾನದ ಮೊದಲನೇ ದಿನ 6.38 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಗುರಿ ತಲುಪಿದ್ದು ಕೇವಲ 4.38 ಲಕ್ಷ. ಅನಂತರ ದ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಕಡಿಮೆಯಾಗುತ್ತಿದೆ.

ಜನವರಿ 8ರಂದು ಕೇವಲ 17,477 ಮಕ್ಕಳಿಗೆ ಮಾತ್ರ ಲಸಿಕೆ ನೀಡಲಾಗಿತ್ತು. ರಾಜ್ಯದಲ್ಲಿ 30.75 ಲಕ್ಷ ಮಕ್ಕಳು ಲಸಿಕೆ ಪಡೆಯುವುದಕ್ಕೆ ಅರ್ಹರಾಗಿದ್ದಾರೆ. 4 ಸಾವಿರ ಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳ ಮೂಲಕ ಸುಲಭವಾಗಿ ಫಲಾನುಭವಿಗಳನ್ನು ಗುರುತಿಸಿ ಲಸಿಕೆ ನೀಡುವ ಯೋಜನೆ ರೂಪಿಸಿದ್ದರು ಕೂಡ ಲಸಿಕಾ ಅಭಿಯಾನ ವೇಗ ಪಡೆದುಕೊಳ್ಳುತ್ತಿಲ್ಲ.

ಸರ್ಕಾರ ನಿಗದಿಪಡಿಸಿದ ಗುರಿಯಂತೆ ಪ್ರತಿದಿನ 5 ಲಕ್ಷ ಲಸಿಕೆಗಳನ್ನು ನೀಡಿದರೆ, ಜನವರಿ 8ರ ವೇಳೆಗೆ ಶೇಕಡ 98ರಷ್ಟು ಲಸಿಕೆ ನೀಡಬೇಕಿತ್ತು. ಆದರೆ ಪ್ರಸ್ತುತ 15.51 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.
ಈ ಮೂಲಕ ಶೇಕಡಾ 50 ರಷ್ಟು ಮಾತ್ರ ಗುರಿ ತಲುಪಿದಂತಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ಹೊಸ ಲಕ್ಷಣಗಳು ಗಂಭೀರವಾಗಿಲ್ಲ – ಡಾ ವಿದ್ಯಾಸಾಗರ್

0

ಭಾರತದಲ್ಲಿ ದಿನನಿತ್ಯವೂ ಲಕ್ಷಾಂತರ ಸಂಖ್ಯೆಯಲ್ಲಿ ಕೋರೋನಾ ಸೋಂಕಿನ ಹೊಸ ಪ್ರಕರಣಗಳು ವರದಿಯಾಗುತ್ತಿದ್ದರೂ ಹೆದರುವ ಅಗತ್ಯವಿಲ್ಲ.
ಈ ಬಾರಿ ಸೋಂಕಿನಿಂದ ಉಂಟಾಗುತ್ತಿರುವ ರೋಗಲಕ್ಷಣಗಳು ಅತ್ಯಂತ ಗಂಭೀರವಾಗಿಲ್ಲ ಎಂದು ರಾಷ್ಟ್ರೀಯ ಕೋರೋನಾ ಸೂಪರ್ ಮಾಡೆಲ್ ಸಮಿತಿ ಅಧ್ಯಕ್ಷ ಡಾ. ವಿದ್ಯಾಸಾಗರ್ ಎಂ. ಅಭಿಪ್ರಾಯಪಟ್ಟಿದ್ದಾರೆ.

ಹೈದ್ರಾಬಾದ್ ಐಐಟಿ ಪ್ರಾಧ್ಯಾಪಕರಾಗಿರುವ ಡಾ. ವಿದ್ಯಾಸಾಗರ್ ಅವರು, “ನಿತ್ಯ ಒಂದು ಲಕ್ಷ ವರದಿ ಆಗುವುದನ್ನು ಕಂಡು ಆತಂಕದಿಂದ ಶಾಲೆಗಳನ್ನು ಮುಚ್ಚುವುದು, ಕಛೇರಿ ನಿರ್ಬಂಧ ಹೇರುವುದು ಹಾಗೂ ಲಾಕ್ಡೌನ್ ವಿಧಿಸುವುದು ಅಗತ್ಯವಿಲ್ಲ. ರೋಗನಿರೋಧಕತೆ ಕ್ಷೀಣಿಸಿದ ವರಲ್ಲಿ ಕೋರೋನಾ ವೇಗವಾಗಿ ಪ್ರಸರಣ ಮಾಡುತ್ತಿದೆ ಅಷ್ಟೇ. ಇದು ಮಾರಣಾಂತಿಕ ಅಲೆ ಎನ್ನುವ ಸಾಕ್ಷ್ಯಗಳಿಲ್ಲ. ಜೊತೆಗೆ ಲಾಕ್ಡೌನ್, ಕರ್ಫ್ಯೂ ಗಳಿಂದ ವೈರಸ್ ಪ್ರಸರಣ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸದ್ಯ ಸೋಂಕಿತರಲ್ಲಿ ಮಾರಣಾಂತಿಕ ಎನ್ನುವಂತಹ ಲಕ್ಷಣಗಳಾಗಲಿ, ಅಡ್ಡಪರಿಣಾಮಗಳಾಗಲಿ ಕಂಡುಬರುತ್ತಿಲ್ಲ. ಜನರು ಕ್ಷಿಪ್ರಗತಿಯಲ್ಲೇ ಓಮಿಕ್ರಾನ್ ಮತ್ತು ಕೋವಿಡ್ ಸೋಂಕಿನಿಂದ ಪೂರ್ಣ ಚೇತರಿಕೆ ಕಾಣುತ್ತಿದ್ದಾರೆ. ಆದ್ದರಿಂದ ಜನರನ್ನು ಲಾಕ್ ಡೌನ್, ಕರ್ಫ್ಯೂ ಗಳೆಂಬ ಆತಂಕಕ್ಕೆ ಆಡಳಿತಗಳು ದೂಡುವುದು ಬೇಕಿಲ್ಲ ಎಂದು ವಿದ್ಯಾಸಾಗರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅದಮಾರು ಮಠದ ಭೂಮಿ ಗೇಣಿ ಹಕ್ಕಿಗೆಮಾನ್ಯವಲ್ಲ

0

ಅನರ್ಹರನ್ನು ಗೇಣಿದಾರ ರೆಂದು ತೋರಿಸಿ ಭೂಸುಧಾರಣೆ ಕಾಯ್ದೆ ಇನ್ನೂ ದುರ್ಬಳಿಕೆ ಸಾಧನವನ್ನಾಗಿ ಮಾಡಿಕೊಳ್ಳಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ.

ಇಷ್ಟಲ್ಲದೆ ಭೂಮಂಜೂರಾತಿ ಪ್ರಶ್ನಿಸಿ ಉಡುಪಿಯ ಅದಮಾರು ಮಠ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದೆ.

ಭೂ ನ್ಯಾಯ ಮಂಡಳಿ ಆದೇಶ ಪ್ರಶ್ನಿಸಿ ಅದಮಾರು ಮಠ ನೀಡಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ಮತ್ತು ನ್ಯಾ. ಪಿ. ಕೃಷ್ಣಭಟ್ ಅವರಿದ್ದ ಪೀಠ ಈ ಆದೇಶವನ್ನು ನೀಡಿದೆ.

ಭೂ ಸುಧಾರಣಾ ಕಾಯ್ದೆಯ ಉದ್ದೇಶ ಭೂಮಿಯನ್ನು ಗೇಣಿಗೆ ಮಾಡಿಕೊಂಡು ಕೃಷಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಫಾರಂನಲ್ಲಿ ನಂ.7 ರಲ್ಲಿ ಅರ್ಜಿ ಸಲ್ಲಿಸಿದರೆ ಆಗ ಅಂಥವರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರಿಗೆ ಪ್ರಯೋಜನವನ್ನು ಒದಗಿಸಿಕೊಡುವುದಾಗಿದೆ.

ಶಾಸನವನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಪೀಠ ಹೇಳಿದೆ. ಈ ಪ್ರಕರಣದಲ್ಲಿ ಭೂಮಾಲೀಕರ ಜಾಗದಲ್ಲಿ ಮಠವಿದೆ. ಅದು ಧಾರ್ಮಿಕ ಮತ್ತು ಚಾರಿಟಬಲ್ ಸಂಸ್ಥೆಯಾಗಿದೆ. ಭೂಮಿಯಿಂದ ಬರುವ ಪ್ರಯೋಜನಗಳನ್ನು ಮಠದ ಭಕ್ತರ ಸೌಕರ್ಯಕ್ಕೆ ಬಳಸಬೇಕು. ಭಕ್ತರ ಆಶಯವೂ ಅದೇ ಆಗಿರುತ್ತದೆ. ಜೊತೆಗೆ ಭೂಮಿ ನಗರ ಪ್ರದೇಶದಲ್ಲಿದೆ. ಅದು ಕರ್ನಾಟಕ ಭೂ ಸುಧಾರಣೆ ಕಾಯ್ದೆ ಸೆಕ್ಷನ್ 2 ಎ 18ರ ವ್ಯಾಪ್ತಿಗೆ ಒಳಪಡುವುದಿಲ್ಲ. ಮಠ ಹಾಗೂ ಅರ್ಜಿದಾರರ ನಡುವೆ ಗೇಣಿದಾರ ಸಂಬಂಧ ಇತ್ತು ಎನ್ನುವುದಕ್ಕೆ ಯಾವುದೇ ಲಿಖಿತ ದಾಖಲೆಗಳು ಇಲ್ಲ ಎಂದು ಹೇಳಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಯಜ್ಞಗಳಿಂದ ಪ್ರಯೋಜನವೆ? ಪತಂಜಲಿ ಸಂಸ್ಥೆ ಉತ್ತರವಿದೆ

0

ಪತಂಜಲಿ ರಿಸರ್ಚ್ ಇನ್ ಸ್ಟಿಟ್ಯೂಟ್ ನ ವಿಜ್ಞಾನಿಗಳು ಯಜ್ಞದಿಂದ ಪರಿಸರಕ್ಕೆ ಆಗುವ ಪ್ರಯೋಜನವನ್ನು ಅಧ್ಯಯನದ ಮೂಲಕ ಸಾಬೀತುಪಡಿಸಿದ್ದಾರೆ.

ಬ್ಯಾಕ್ಟೀರಿಯಾ ಹಾಗೂ ಶಿಲಿಂಧ್ರ ಗಳಂತಹ ಸೂಕ್ಷ್ಮ ಜೀವಿಗಳು ರೋಗಕಾರಕ ಗಳಾಗಿವೆ. ಇವುಗಳೂ ಸೇರಿದಂತೆ ವಾತಾವರಣವನ್ನು ಯಜ್ಞಗಳ ಮೂಲಕ ಶುದ್ಧೀಕರಿಸಬಹುದು. ಇದೊಂದು ಪರಿಸರಸ್ನೇಹಿ ಮಾರ್ಗ ಎಂಬ ಅಂಶಗಳನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಅಲ್ಲದೇ, ವೈರಸ್ ಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳ ವಿರುದ್ಧವೂ ಯಜ್ಞಗಳು ಪರಿಣಾಮಕಾರಿ ಎಂದು ಹೇಳಲಾಗಿದೆ.

ಪುರಾತನವಾದ ಯಜ್ಞವು ಪರಿಸರವನ್ನು ಶುದ್ಧೀಕರಿಸುವ ಮಾರ್ಗವಾಗಿದೆ ಎಂಬುದಕ್ಕೆ ಇದೇ ಮೊದಲ ವೈಜ್ಞಾನಿಕ ಪುರಾವೆಯಾಗಿದೆ ಇಂದು ಪತಂಜಲಿ ಸಂಸ್ಥೆಯ ಪ್ರಮುಖರಾದ ಬಾಲಕೃಷ್ಣ ಅವರು ತಿಳಿಸಿದ್ದಾರೆ.

ಪತಂಜಲಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡವು ಪರಿಸರದಲ್ಲಿರುವ ವಿವಿಧ ರೋಗಕಾರಕ ಭಾರತೀಯ ಮತ್ತು ಶಿಲಿಂಧ್ರಗಳ ಮೇಲೆ ಹೋಮ ಹವನದ ಪರಿಣಾಮಗಳನ್ನು ಅಧ್ಯಯನ ಮಾಡಿದ್ದಾರೆ.
ಅದನ್ನು ಜನರಲ್ ಆಫ್ ಎವಿಡೆನ್ಸ್ ಬೇಸ್ಡ್ ಇಂಟಿಗ್ರೇಟೆಡ್ ಮೆಡಿಸಿನ್ ಎನ್ನುವ ಅಮೆರಿಕದ ಜನಪ್ರಿಯ ವೈಜ್ಞಾನಿಕ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.

ಯಜ್ಞಗಳನ್ನು ಆಗಾಗ ನಡೆಸುವ ಮೂಲಕ ಪರಿಸರವನ್ನು ಶುದ್ಧೀಕರಿಸುವ ಪ್ರಾಚೀನ ಭಾರತೀಯ ಪರಂಪರೆಯ ಅಧ್ಯಯನದಲ್ಲಿ ಆಚಾರ್ಯ ಬಾಲಕೃಷ್ಣ ಅವರು ತೊಡಗಿಸಿಕೊಂಡಿದ್ದಾರೆ.

ಹೋಮ ಅನ್ನುವುದು ಮಾನಸಿಕ ಶಾಂತಿಯನ್ನು ಪಡೆಯುವ ಆಧ್ಯಾತ್ಮಿಕ ಮಾರ್ಗ ಮಾತ್ರವಲ್ಲ. ಅದು ಸಮಗ್ರ ದೈಹಿಕ ಆರೋಗ್ಯಕ್ಕೂ ಪೂರಕವಾಗಿದೆ ಎಂದು ಆಚಾರ್ಯ ಬಾಲಕೃಷ್ಣ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.