ಇಂದು ಮತ್ತು ನಾಳೆ ಆಯೋಜಿಸಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿಗೆ ತೆರಳಿದ್ದಾರೆ.
ಒಟ್ಟು 3 ದಿನಗಳ ಪ್ರವಾಸ ಇದಾಗಿದೆ. ಶೃಂಗಸಭೆಯ ನಂತರ ಜೂನ್ 28 ಕ್ಕೆ ಯುಎಇ ಗೂ ಭೇಟಿ ನೀಡಲಿದ್ದಾರೆ.
ಜಿ7 ಶೃಂಗಸಭೆಯಲ್ಲಿ ಮೋದಿ ಅವರು ಜಿ7 ಮತ್ತು ಅತಿಥಿ ರಾಷ್ಟ್ರಗಳೊಂದಿಗೆ ಸಭೆ ನಡೆಸಲಿದ್ದಾರೆ ಮತ್ತು ಸಮಕಾಲೀನ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ನಾನು ಜಿ7 ದೇಶಗಳು, ಜಿ7 ಪಾಲುದಾರ ರಾಷ್ಟ್ರಗಳು ಮತ್ತು ಅತಿಥಿ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪರಿಸರ, ಇಂಧನ, ಹವಾಮಾನ, ಆಹಾರ ಭದ್ರತೆ, ಆರೋಗ್ಯ, ಭಯೋತ್ಪಾದನೆ ನಿಗ್ರಹ, ಲಿಂಗ ಸಮಾನತೆ ಹಾಗೂ ಪ್ರಜಾಪ್ರಭುತ್ವದಂತಹ ಸಾಮಯಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇನೆ. ನಾನು ಜಿ7 ನಾಯಕರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇನ್ನೂ, ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ಬಳಿಕ ಮೋದಿಯವರು ಜೂನ್ 28ರಂದು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಪ್ರಯಾಣಿಸಲಿದ್ದು, ಯುಎಇಯ ಹೊಸ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರರಾಗಿ ಆಯ್ಕೆಯಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಅಭಿನಂದಿಸಲಿದ್ದಾರೆ’ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.
ಜಿ7 ಶೃಂಗಸಭೆಯ ಆಹ್ವಾನವು ಭಾರತ ಮತ್ತು ಜರ್ಮನಿ ನಡುವಿನ ಬಲವಾದ ಮತ್ತು ನಿಕಟ ಪಾಲುದಾರಿಕೆ ಮತ್ತು ಉನ್ನತ ಮಟ್ಟದ ರಾಜಕೀಯ ಸಂಪರ್ಕಗಳ ಸಂಪ್ರದಾಯಕ್ಕೆ ಅನುಗುಣವಾಗಿದೆ.
ಮೇ 2 ರಲ್ಲಿ ನಡೆದ ಭಾರತ
ಹಾಗೂ ಜರ್ಮನಿ ಅಂತರ ಸರ್ಕಾರಿ ಸಮಾಲೋಚನೆಗಳ 6ನೇ ಆವೃತ್ತಿಗಾಗಿ ಪ್ರಧಾನಿ ಮೋದಿಯವರು ಜರ್ಮನಿಗೆ ನೀಡಿದ ಕೊನೆಯ ಭೇಟಿಯಾಗಿತ್ತು.