Saturday, February 14, 2026
Saturday, February 14, 2026
Home Blog Page 1766

ಕೋರ್ಟ್ ನಲ್ಲಿ ವಿಸಾ ಕೇಸ್ ಗೆದ್ದ ಕ್ರೀಡಾಳು ಜೊಕೋವಿಕ್

0

ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ವಿಶ್ವದ ಒಂದನೇ ನಂಬರ್ ಟೆನಿಸ್ ಆಟಗಾರ. ಇವರು ಕೋವಿಡ್ ಲಸಿಕೆ ಕೇಸ್ ಗೆ ಸಂಬಂಧಿಸಿ ವಿವಾದದಲ್ಲಿ ಸಿಲುಕಿದ್ದರು.ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಜಯ ಸಾಧಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 21 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಬಂದಿದ್ದರು.
ಜೊಕೋವಿಕ್ ಅವರು ಲಸಿಕೆ ಹಾಕಿಸಿಕೊಂಡಿಲ್ಲ ಎಂಬ ಆರೋಗ್ಯದ ಪ್ರಬಲ ಕಾರಣಕ್ಕೆ ಅವರಿಗೆ ಆಸ್ಟ್ರೇಲಿಯಾ ಒಳಗೆ ಪ್ರವೇಶ ನಿರಾಕರಿಲಾಯಿತು.
ಜೊಕೋವಿಕ್ ಸ್ಥಳೀಯ ಕೋರ್ಟ್ ಮೊರೆ ಹೋದರು.
ವಿಚಾರಣೆ ನಡೆಯಿತು.

ಫೆಡರಲ್ ಸರ್ಕಿಟ್ ಕೋರ್ಟ್ ನ ನ್ಯಾಯಾಧೀಶ ಯಾಂಟಿನ್ ಕೆಲಿ ಅವರು ವಿಸಾ ಮರಳಿಸುವಂತೆ ಸೂಚಿಸಿದರು.

ಜೊಕೋವಿಕ್ ಲಸಿಕೆ ಹಾಕಿಕೊಂಡಿರಲಿಲ್ಲ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಸ್ಪಷ್ಟವಾಗಿದೆ.ಲಸಿಕೆ ಹಾಕಿಸಿಕೊಳ್ಳದ ಆಸ್ಟ್ರೇಲಿಯನ್ನರು ಓಡಾಟಕ್ಕೆ ಕಠಿಣ ನಿರ್ಬಂಧಗಳು ಇವೆ.ಹೀಗಿರುವಾಗ ಜೊಕೋವಿಕ್ ಅವರಿಗೆ ರಿಯಾಯಿತಿ ನೀಡಿರುವುದು ಸರಿಯಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆದಿರುವುದು ಕಡ್ಡಾಯ.ಆದರೆ,ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದ ಜೊಕೋವಿಕ್ ವೈದ್ಯಕೀಯ ವಿನಾಯಿತಿ ಪಡೆದುಕೊಂಡು ಬಂದಿದ್ದರು.ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಅಧಿಕಾರಿಗಳು ವಿಸಾ ತಡೆ ಹಿಡಿದು ಹೋಟೆಲ್ ನಲ್ಲಿ ಇರಿಸಿದ್ದರು.ಇದರ ವಿರುದ್ಧ ಜೊಕೋವಿಕ್ ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು.

ಆದರೆ,ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ಅವರಿಗೆ ಅವಕಾಶ ನೀಡುವಂತೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಒಮಿಕ್ರಾನ್ ಪ್ರಸರಣ ವೇಗ ಪಡೆಯುತ್ತಿದೆ

0

ಮ್ಯಾನ್ಮಾರ್ ನ್ಯಾಯಾಲವು ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ನಾಲ್ಕು ವರ್ಷಗಳ ಕಾರಾಗೃಹ ವಾಸ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.

ಕಾನೂನುಬಾಹಿರವಾಗಿ ವಾಕಿ-ಟಾಕಿ ಗಳನ್ನು ಆಮದು ಮಾಡಿಕೊಂಡ ಹಾಗೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಸೂಕಿ ಅವರಿಗೆ ಅಲ್ಲಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಮ್ಯಾನ್ಮಾರ್ ಸೇನಾ ಆಡಳಿತವು ಸೂಕಿ ವಿರುದ್ಧ 12 ಪ್ರಕರಣಗಳನ್ನು ದಾಖಲಿಸಿ, ಗೃಹಬಂಧನದಲ್ಲಿ ಇರಿಸಿದೆ. ಮೊಬೈಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ 76 ವರ್ಷದ ಸೂಕಿ ಅವರಿಗೆ ಕಳೆದ ತಿಂಗಳು ಪ್ರತ್ಯೇಕ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಸೂಕಿ ಅವರ ಅಭಿಮಾನಿಗಳು “ಸೂಕಿ ಅವರಿಗೆ ಸಕ್ರಿಯ ರಾಜಕಾರಣಕ್ಕೆ ಮರಳುವುದನ್ನು ತಡೆಯುವ ಉದ್ದೇಶದಿಂದಲೇ ಸುಳ್ಳು ಆರೋಪ ಹೊರಿಸಿ ಜೈಲು ಶಿಕ್ಷೆ ವಿಧಿಸಲಾಗಿದೆ” ಎಂದು ಆರೋಪಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಡೇಟಾಬೇಸ್ ವ್ಯವಸ್ಥೆಗೆ ಆಧಾರ್ ಕಾರ್ಡ್ ದಾರರ ಅನುಮತಿಯಾಚನೆ

0

ಕೇಂದ್ರ ಸರ್ಕಾರವು ಮುಂಬರುವ ಯೋಜನೆಗಳಿಗೆ ಆಧಾರ್ ಮಾಹಿತಿ ಜೋಡಣೆ ಮಾಡುವ ನಿಟ್ಟಿನಲ್ಲಿ ಜನರ ‘ಸ್ವಯಂಪ್ರೇರಿತ ಒಪ್ಪಿಗೆ’ ಪಡೆಯಲು ನಿರ್ಧರಿಸಿದೆ. ಜೊತೆಗೆ ಸರ್ಕಾರವು ಸಂಯೋಜಿತ ಡೇಟಾಬೇಸ್ ಸಿದ್ದಪಡಿಸುವ ಆಶಯ ವ್ಯಕ್ತಪಡಿಸಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಕ್ಕೆ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯ ಹಾಗೂ ಇಲಾಖೆಗಳು ಆಧಾರ್ ಮಾಹಿತಿ ಸಂಗ್ರಹಿಸುವ ಕುರಿತಂತೆ ಮನವಿ ಸಲ್ಲಿಸಿತ್ತು. ಆದ್ದರಿಂದ ಯುಐಡಿಎಐ ಇಂತಹ ಕ್ರಮಕ್ಕೆ ಮುಂದಾಗಿದೆ.

ಕೇಂದ್ರದಿಂದ ಶೀಘ್ರವೇ ಜನರಿಗೆ ಸಮ್ಮತಿ ಫಾರ್ಮ್ಸ್ ವಿತರಣೆಯಾಗಲಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

“ಕೇಂದ್ರ ಸರ್ಕಾರವು ಶೀಘ್ರದಲ್ಲೇ ಜನರಿಗೆ ಇ-ಮೇಲ್ ಮೂಲಕ ಸಮ್ಮತಿ ಫಾರ್ಮ್ ಕಳುಹಿಸಲಿದೆ. ಜೊತೆಗೆ ಎಸ್ಎಂಎಸ್ ಸಂದೇಶ ಕಳುಹಿಸಿ ಆಧಾರ್ ವೆಬ್ಸೈಟ್ ನಲ್ಲಿಯೇ ಫಾರ್ಮ್ ಭರ್ತಿ ಮಾಡಲು ಮನವಿ ಮಾಡಲಿದೆ. ಜನರು ಒಪ್ಪಿಗೆ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಪ್ರತಿ ಯೋಜನೆಗೂ ಪ್ರತ್ಯೇಕವಾಗಿ ಆಧಾರ್ ಮಾಹಿತಿ ನೀಡುವುದು ತಪ್ಪುತ್ತದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಮ್ಮತಿ ಫಾರ್ಮ್ ನಲ್ಲಿ ಆಧಾರ್ ಸಂಖ್ಯೆ, ಕುಟುಂಬ ಸದಸ್ಯರ ಸಂಖ್ಯೆ ಹಾಗೂ ಅರ್ಜಿದಾರರ ಒಂದು ಭಾವಚಿತ್ರ ಒದಗಿಸಬೇಕಾಗುತ್ತದೆ. ಇದಾದ ಬಳಿಕ ಸರ್ಕಾರದ ಎಲ್ಲಾ ಯೋಜನೆಗಳಿಗೆ ಮಾಹಿತಿ ಒದಗಿಸಿ ಸಂಯೋಜಿತ ಡೇಟಾಬೇಸ್ ರಚಿಸುವುದು ಸರ್ಕಾರದ ಉದ್ದೇಶವಾಗಿದೆ. ಡೇಟಾಬೇಸ್ ಮಾಹಿತಿಯನ್ನು ಆಯಾ ರಾಜ್ಯಗಳು ಬಳಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮೇಕೇದಾಟು ಪಾದಯಾತ್ರೆ:30 ಮಂದಿ ವಿರುದ್ಧ ಕೇಸ್ ದಾಖಲೆ

0

ರಾಜ್ಯ ಸರ್ಕಾರದ ವಿರೋಧದ ನಡುವೆಯೂ ಮೇಕೆದಾಟು ಪಾದಯಾತ್ರೆ ಎರಡನವೂ ಮುಂದುವರೆದಿತ್ತು. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಪಾದಯಾತ್ರೆಯಲ್ಲಿ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ 30 ಮಂದಿ ವಿರುದ್ಧ ಸರ್ಕಾರ ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದ್ದಾರೆ ಎಂದು ಎಫ್ಐಆರ್ ದಾಖಲಿಸಿದೆ.

‘ನಮ್ಮ ನೀರು ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ಎರಡನೆ ದಿನವೂ ಪಾದಯಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಈ ಪಾದಯಾತ್ರೆಯು ರಾತ್ರಿ ಕನಕಪುರದವನ್ನು ತಲುಪಿತ್ತು.

ಪಾದಯಾತ್ರೆ ವೇಳೆ ಡಿ.ಕೆ.ಶಿವಕುಮಾರ್ ಅವರು ದೊಪ್ಪಲೇಗೌಡನ ದೊಡ್ಡಿಯಲ್ಲಿನ ವಿಶ್ವೋದಯಾ ಶಾಲಾ ಮಕ್ಕಳೊಂದಿಗೆ ಡಿ.ಕೆ. ಶಿವಕುಮಾರ್ ಅವರು ಕೆಲಕಾಲ ಕಾಲ ಕಳೆದರು. ಈ ವೇಳೆ ಶಾಲಾ ಮಕ್ಕಳು ನಮ್ಮ ನೀರು ನಮ್ಮ ಹಕ್ಕು ಘೋಷಣೆಯ ಜೊತೆಗೆ ಡಿಕೆಡಿಕೆ ಎಂದು ಕೂಗಿದರು. ಈ ಬಗ್ಗೆ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಹಾಗೂ ಡಿ.ಕೆ.ಶಿವಕುಮಾರ್ ಅವರು ಶಾಲಾ ಮಕ್ಕಳೊಂದಿಗೆ ಇರುವಂತಹ ವಿಡಿಯೋವನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಆಕ್ಷೇಪ ವ್ಯಕ್ತಪಡಿಸಿದೆ.

“ಯಾವುದೇ ಮುಂಜಾಗ್ರತೆ ಇಲ್ಲದೆ ಮಕ್ಕಳೊಂದಿಗೆ ಬೆರೆಯುತ್ತಿದ್ದೀರಿ. ಇದು ಸೋಂಕಿಗೆ ಕಾರಣವಾದರೆ ಹೊಣೆ ಹೊರುತ್ತೀರಾ?”ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಪ್ರಶ್ನಿಸಿದ್ದಾರೆ.

“ಕೋವಿಡ್ ನಿಯಮವನ್ನು ಸಾಮಾನ್ಯರೇ ಇರಲಿ, ದೊಡ್ಡ ಲೀಡರೇ ಇದ್ದರೂ ಉಲ್ಲಂಘಿಸಿದವರ ಮೇಲೆ ಭೇದವಿಲ್ಲದೆ ಕ್ರಮ ಜರುಗಿಸಲಾಗುವುದು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮ ಮಿತ್ರರಿಗೆ ಹೇಳಿದ್ದಾರೆ.

ಪಾದಯಾತ್ರೆ ಕೈಗೊಂಡಿರುವ ಪೈಕಿ 30 ಜನರ ಮೇಲೆ ಎಫ್ಐಆರ್ ದಾಖಲಾಗಿದೆ ಸಂಘಟಕರು ಕಾನೂನು ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಎರಡನೇ ದಿನದ ಮೇಕೆದಾಟು ಪಾದಯಾತ್ರೆ ವೇಳೆ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆ ಸಂಬಂಧ ಸಾತನೂರು ಠಾಣೆಯಲ್ಲಿ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಸುರೇಶ್, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಈಶ್ವರ ಖಂಡ್ರೆ, ಉಮಾಶ್ರೀ, ಬಿ.ಕೆ.ಹರಿಪ್ರಸಾದ್, ಎಂ.ಬಿ.ಪಾಟೀಲ್, ರಾಮಲಿಂಗೇಗೌಡ ಸೇರಿದಂತೆ ಒಟ್ಟು 30 ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಿಎಂ ಬೋಮ್ಮಾಯಿ ಅವರಿಗೆ ಕೋವಿಡ್ ಸೋಂಕು

0

ಕೋವಿಡ್ ಸೋಂಕು ಹಾಗೂ ರೂಪಾಂತರಿ ತಳಿ ಓಮಿಕ್ರಾನ್ ಸೋಂಕು ರಾಜ್ಯದಲ್ಲಿ ಅಧಿಕವಾಗಿದೆ. ಸೋಮವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿಯವರು “ನನಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ಟ್ವೀಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

“ದಿನೇದಿನೇ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುವ ಅವರ ಸಂಖ್ಯೆ ಶೇ. 5-10 ರಷ್ಟಿದೆ. ಮುಂದಿನ ದಿನಗಳಲ್ಲಿ ಎರಡನೇ
ಅಲೆಗಿಂತ ತೀವ್ರವಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ” ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಡೆಲ್ಟಾ ಹಾಗೂ ಓಮಿಕ್ರಾನ್ ಕುರಿತು ರಾಜ್ಯಗಳಿಗೆ ಪತ್ರ ಬರೆಯುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಐಐಟಿ ಕಾನ್ಪುರದ ಪ್ರೊ. ಮನೀಂದ್ರಾ ಅಗರ್ವಾಲ್ ಅವರು ಕೋವಿಡ್ ಮೂರನೇ ಅಲೆಯು ಜನವರಿ ಅಂತ್ಯದ ವೇಳೆಗೆ ಅಧಿಕವಾಗಲಿದೆ. “ದೇಶದಲ್ಲಿ 34 ದಿನದಲ್ಲಿಯೇ ಸೋಂಕಿತರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಮೂರನೇ ಅಲೆಯ ಉತ್ತುಂಗದ ಸಮಯವನ್ನು ಅಂದಾಜಿಸಬಹುದು. ಈಗಿನ ಪರಿಸ್ಥಿತಿ ನೋಡಿದರೆ ತಿಂಗಳಾತ್ಯಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಲಿದೆ” ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಸೋಮವಾರ ಒಟ್ಟು 11,698 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. 146 ಜನರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಕೋವಿಡ್ ಗೆ ರಾಜ್ಯದಲ್ಲಿ ನಾಲ್ವರು ಬಲಿಯಾಗಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದಲ್ಲಿ ಕೋವಿಡ್: ಸಿಎಂ ತುರ್ತು ವರ್ಚುವಲ್ಸಭೆ

0

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ವರ್ಚುವಲ್ ಆಗಿ ತುರ್ತು ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮತ್ತು ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಸತತ ಎರಡು ಗಂಟೆಗಳವರೆಗೆ ಚರ್ಚೆ ನಡೆಸಲಾಗಿದೆ.

ಕೋವಿಡ್ ಕುರಿತಂತೆ ರಾಜ್ಯದಲ್ಲಿ ಕಠಿಣ ನಿಯಮಗಳ ಜಾರಿಗೊಳಿಸುವ ಅಗತ್ಯವಿದೆ ಎಂದು ಸಿಎಂ ಅವರಿಗೆ ತಜ್ಞರು ಸಭೆಯಲ್ಲಿ ಸಲಹೆ ನೀಡಿದ್ದಾರೆ.

ಸಭೆಯಲ್ಲಿ ಶಾಲಾ ಕಾಲೇಜುಗಳು ಬಂದ್ ಕುರಿತಂತೆ ಸದ್ಯಕ್ಕೆ ಶಾಲಾ ಕಾಲೇಜುಗಳು ಬಂದ್ ಮಾಡೋದು ಬೇಡ. ಕೋವಿಡ್ ಸಂಖ್ಯೆ ಹೆಚ್ಚಾದರೆ ಅದರ ಬಗ್ಗೆ ಆ ಬಳಿಕ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ ಶಾಲಾ ಕಾಲೇಜುಗಳು ಬಂದ್ ಮಾಡುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರವನ್ನು ಕೊಡಲಾಗಿದೆ.

ರಾಜ್ಯದ 11 ಜಿಲ್ಲೆಗಳ ಕೋವಿಡ್ ಸೋಂಕಿನ ಪ್ರಮಾಣ ಸಾಗಿದ್ದು ಡೇಂಜರ್ ಜೋನ್ ನಲ್ಲಿವೆ ಹಾಗಾಗಿ ತಜ್ಞರು ಶೇ.5 ಕ್ಕಿಂತ ಹೆಚ್ಚು ಪಾಸಿಟಿವಿಟಿ ಇರುವ ಪ್ರದೇಶಗಳಲ್ಲಿ ಲಾಕ್ ಡೌನ್ ಅಗತ್ಯ ಇದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ತಲೈವಾರ್ಸ್ ಗೆಲುವು ಪ್ಯಾಂಥರ್ಸ್ ಜಯ

0

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಸೋಮವಾರ 4 ತಂಡಗಳ ನಡುವೆ ಪಂದ್ಯ ನಡೆಯಿತು.

ತಲೈವಾರ್ಸ್ ಮಣಿದ ಸ್ಟೀಲರ್ಸ್

ತಮಿಳ್ ತಲೈವಾರ್ಸ್(45) ಮತ್ತು ಹರಿಯಾಣ ಸ್ಟೀಲರ್ಸ್(26) ತಂಡಗಳ ನಡುವೆ ಪಂದ್ಯ ನಡೆಯಿತು.ಹರಿಯಾಣ ಸ್ಟೀಲರ್ಸ್ ವಿರುದ್ಧ ತಮಿಳ್ ತಲೈವಾರ್ಸ್ ಭರ್ಜರಿ ಜಯ ಸಾಧಿಸಿದೆ.

ಮೊದಲಾರ್ಧದಲ್ಲೇ ತಮಿಳ್ ತಲೈವಾರ್ಸ್ 10 ರೇಡಿಂಗ್ ಪಾಯಿಂಟ್ ಮತ್ತು 9 ಟ್ಯಾಕ್ಲಿಂಗ್ ಪಾಯಿಂಟ್ ಗಳೊಂದಿಗೆ ಬಿಗಿ ಹಿಡಿತ ಸಾಧಿಸಿ ಮುನ್ನಡೆಯಲ್ಲಿತ್ತು.

ತಮಿಳ್ ತಲೈವಾರ್ಸ್ ತಂಡದ ರೇಡರ್ ಮಂಜೀತ್ ಸೂಪರ್ 10 ಮೂಲಕ ಮಿಂಚಿದರೆ ರಕ್ಷಣಾ ವಿಭಾಗದ ಇಬ್ಬರು ಸಮರ್ಥ ಆಟಗಾರರಿಂದ ಸುರ್ಜೀತ್ ಸಿಂಗ್ ಮತ್ತು ಸಾಗರ್ ಅವರು ‘ಹೈ ಫೈವ್’ ಸಾಧನೆ ಮಾಡಿದರು.ಇವರ ಉತ್ತಮ ರೇಡಿಂಗ್ ಪ್ರದರ್ಶನದಿಂದ ಕ್ರಮವಾಗಿ 8 ಮತ್ತು 7 ಪಾಯಿಂಟ್ ಗಳಿಸಿ ತಂಡದ ಗೆಲುವಿಗೆ ರೂವಾರಿಯಾದರು.

ಡೆಲ್ಲಿಗೆ ಮೊದಲ ಸೋಲುಣಿಸಿದ ಪ್ಯಾಂಥರ್ಸ್

ಜೈಪುರ್ ಪಿಂಕ್ ಪ್ಯಾಂಥರ್ಸ್ (30) ಮತ್ತು ದಬಾಂಗ್ ಡೆಲ್ಲಿ(28) ತಂಡಗಳ ನಡುವೆ ಪಂದ್ಯ ನಡೆಯಿತು. ದಬಾಂಗ್ ಡೆಲ್ಲಿಗೆ ಮೊದಲ ಬಾರಿ ಸೋಲಿಸಿ ನಡೆದ ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು.

ಡೆಲ್ಲಿ ಪರವಾಗಿ ಆಶು ಮಲಿಕ್ 8 ಪಾಯಿಂಟ್ ಮತ್ತು ನವೀನ್ ಕುಮಾರ್ 7 ಪಾಯಿಂಟ್ ಹಾಗೂ ಮಂಜೀತ್ ಚಿಲ್ಲರ್ 4 ಪಾಯಿಂಟ್ ಇವರುಗಳ ತಂಡದ ಗೆಲುವಿಗೆ ಬಹಳಷ್ಟು ಪ್ರಯತ್ನಿಸಿದರು.ಆದರೆ,ಎಷ್ಟೇ ಹೋರಾಡಿದರು.ಗೆಲುವು ಪಡೆದುಕೊಳ್ಳಲು ಸಾಧ್ಯವಾಗದೇ ಜೈಪುರ್ ಪಿಂಕ್ ಪ್ಯಾಂಥರ್ಸ್ ಗೆ ತಲೆಬಾಗಬೇಕಾಯಿತು.

ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಪರವಾಗಿ ದೀಪಕ್ ಹೂಡಾ 9 ಪಾಯಿಂಟ್,ಸಾಹುಲ್ ಕುಮಾರ್ 8 ಪಾಯಿಂಟ್ ಮತ್ತು ದೇಶ್ವಾಲ್ 7 ಪಾಯಿಂಟ್ ಇವರುಗಳ ಹೋರಾಟಕ್ಕೆ ಫಲವಾಗಿ ತಂಡದ ಗೆಲುವಿಗೆ ಕಾರಣರಾದರು.

ಇಂದು ನಡೆಯಲಿರುವ ಪಂದ್ಯಗಳು:
೧. ಪಟ್ನಾ ಪೈರೇಟ್ಸ್ ಮತ್ತು ಯು.ಮುಂಬಾ
ಸಮಯ:7.30
೨. ತೆಲುಗು ಟೈಟನ್ಸ್ ಮತ್ತು ಗುಜರಾತ್ ಜಯಂಟ್ಸ್
ಸಮಯ:8.30

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯವನ್ನು ಸುರಕ್ಷಾ ಚಕ್ರದೊಳಗೆ ತರುವ ಗುರಿ- ಬೊಮ್ಮಾಯಿ

0

ರಾಜ್ಯಾದ್ಯಂತ ಸೋಮವಾರದಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ತೀವ್ರ ಆರೋಗ್ಯ ಸಮಸ್ಯೆ ಇರುವ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ.
21 ಲಕ್ಷ ಜನರು ಮುನ್ನೆಚ್ಚರಿಕೆ ಡೋಸ್ ಪಡೆಯನ್ನು ಅರ್ಹರಾಗಿದ್ದು, ಮೊದಲ ದಿನ ಒಟ್ಟು 68,644 ಜನರಿಗೆ 3ನೇ ಡೋಸ್ ನೀಡಲಾಯಿತು.
ಕರ್ನಾಟಕದಲ್ಲಿ ಲಸಿಕೆ ಕಾರ್ಯಕ್ರಮವನ್ನು ಶೇ.99ರಷ್ಟು ಯಶಸ್ವಿಗೊಳಿಸಲಾಗಿದೆ. ಜ.31ರೊಳಗೆ ಶೇ.100ರಷ್ಟು ಸರಿ ಮಾಡಲಾಗುವುದು. ಶೇ.77ರಷ್ಟು ಎರಡನೇ ಡೋಸ್ ಆಗಿದ್ದು, ಜನವರಿ ಅಂತ್ಯಕ್ಕೆ ಶೇ.80 ಸಾಧಿಸುವ ಗುರಿ ಇದ್ದು ಫೆಬ್ರವರಿಯಲ್ಲಿ ಎರಡನೇ ಡೋಸ್ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.
ಕರ್ನಾಟಕ ರಾಜ್ಯವನ್ನು ಸುರಕ್ಷಿತ ಚಕ್ರದೊಳಗೆ ತರಬೇಕೆನ್ನುವ ಸರಕಾರದ ಗುರಿಯನ್ನು ಮುಟ್ಟಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅಭಿಯಾನದ ಮೊದಲ ದಿನ 47,513 ಜನ ಆರೋಗ್ಯ ಕಾರ್ಯಕರ್ತರು, 11,109 ಕೋವಿಡ್ ಮುಂಚೂಣಿ ಕಾರ್ಯಕರ್ತರು ಹಾಗೂ 10,022 ಮಂದಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಲಸಿಕೆ ಪಡೆದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ಚಾಲನೆ ನೀಡಿದರು. ಕರ್ನಾಟಕವನ್ನು ಸುರಕ್ಷಿತಾ ಚಕ್ರದೊಳಗೆ ತರುವುದೇ ಸರ್ಕಾರದ ಗುರಿ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಬಜೆಟ್ ಮಂಡನೆ: ಬಿಡದೇ ಕಾಡುತ್ತಿರುವ ಕೋವಿಡ್!

0

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು 2022-23ರ ಕೇಂದ್ರ ಬಜೆಟ್ ಮಂಡಿಸುವ ನಿರೀಕ್ಷೆಯಿದೆ. ಹಣಕಾಸು ಸಚಿವರು ಮಂಡಿಸುತ್ತಿರುವ 4ನೇ ಬಜೆಟ್ ಇದಾಗಿದ್ದು, ಕೋವಿಡ್ -19ರ ಮೂರನೆ ಅಲೆಯ ನೆರಳು ಸೋಂಕಿದೆ.
ಕೋವಿಡ್ -19ರ ಎರಡನೇ ಅಲೆಯಿಂದ ಜರ್ಜರಿತವಾಗಿದ್ದ ಆರ್ಥಿಕತೆಯು ಹಬ್ಬದ ಸೀಸನ್ ನಲ್ಲಿ ಚೇತರಿಸಿತ್ತು. ಆದರೆ ಇದೀಗ ಕೋವಿಡ್ ಮೂರನೆಯ ಅಲೆ ಜೋರಾಗುತ್ತಿರುವುದು ಆಗುತ್ತಿರುವುದು ಆತಂಕ ಸೃಷ್ಟಿಸಿದೆ. ಇದನ್ನು ತಡೆಯಲು ಸರ್ಕಾರಗಳು ಮತ್ತಷ್ಟು ನಿರ್ಬಂಧಗಳನ್ನು ಹೇರುವ ಸಂಭವ ಇದೆ. ಆರ್ಥಿಕ ಚಟುವಟಿಕೆಗಳು ಮತ್ತೆ ಮುಗ್ಗರಿಸಲಿವೆ.
ಓಮಿಕ್ರಾನ್ ವೈರಸ್ ಹರಡುತ್ತಿರುವುದು ಮತ್ತು ಇದರಿಂದಾಗಿ ಕೋವಿಡ್ ಮೂರನೆಯ ಅಲೆ ಉಂಟಾಗಿರುವುದು ಬಜೆಟ್ ಮೇಲೆ ಒತ್ತಡ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ಹೇಳಿದ್ದಾರೆ.
ಆದರೆ ಈಗಾಗಲೇ ವಿತ್ತೀಯ ಕೊರತೆ ಎದುರಿಸುತ್ತಿರುವ ಸರ್ಕಾರಕ್ಕೆ ಕೋವಿಡ್ ಮೂರನೇ ಅಲೆ ಎದುರಿಸಲು ಬೇಕಾದ ವಿತ್ತೀಯ ವ್ಯವಸ್ಥೆ ಏರ್ಪಡಿಸುವುದು ಮತ್ತಷ್ಟು ಸವಾಲಾಗಿ ಪರಿಣಮಿಸಲಿದೆ ಎನ್ನಲಾಗುತ್ತಿದೆ.
ಈಗಾಗಲೇ ಹಣದುಬ್ಬರ ಏರುಗತಿಯಲ್ಲಿದೆ. ನಾನಾ ಉತ್ಪನ್ನ ಮತ್ತು ಸೇವೆಗಳ ದರಗಳು ಏರಿಕೆಯಾಗುತ್ತಿವೆ. ಚಾಲ್ತಿ ಖಾತೆ ಕೊರತೆ ಉಂಟಾಗಿದೆ. ವಿತ್ತೀಯ ಕೊರತೆಯ ಸವಾಲಿದೆ .

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗೃಹಸಾಲದ ಬಡ್ಡಿ: ವಿನಾಯಿತಿ ಮಿತಿ ಹೆಚ್ಚಿಸಲು ಮನವಿ

0

ರಿಯಲ್ ಎಸ್ಟೇಟ್ ಡೆವಲಪರ್ ಗಳು 2022-23ರ ಕೇಂದ್ರ ಬಜೆಟ್ ನಲ್ಲಿ ಗೃಹ ಸಾಲದ ಬಡ್ಡಿಯಲ್ಲಿ ತೆರಿಗೆ ರಿಬೇಟ್ ನ ಮಿತಿಯನ್ನು ಈಗಿನ 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಏರಿಸಲು ಬೇಡಿಕೆ ಮುಂದಿಟ್ಟಿದ್ದಾರೆ. ಒಂದು ವೇಳೆ ಬೇಡಿಕೆಯನ್ನು ಬಜೆಟ್ ಮೂಲಕ ಸರ್ಕಾರ ಪರಿಗಣಿಸಿದರೆ, ಗೃಹ ಖರೀದಿ ದಾರರಿಗೆ ಅನುಕೂಲವಾಗಲಿದೆ.
ರಿಯಲ್ ಎಸ್ಟೇಟ್ ಕುರಿತ ದೀರ್ಘಾವಧಿಯ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಪ್ರಮಾಣವನ್ನು ಕಡಿತಗೊಳಿಸಬೇಕು. ಬಾಡಿಗೆ ಮನೆಗಳ ವಲಯವನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ.
ರಿಯಾಲ್ಟಿ ಡೆವಲಪರ್ ಗಳ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕ್ರೆಡಾಯ್, ಹಣಕಾಸು ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ, ರಿಯಲ್ ಎಸ್ಟೇಟ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ ಗಳಲ್ಲಿ ಮಾಡುವ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿಯನ್ನು ನಿರೀಕ್ಷಿಸಿದೆ.
ಗೃಹ ಖರೀದಿದಾರರಿಗೆ ಸೆಕ್ಷನ್ 24 (ಬಿ) ಅಡಿಯಲ್ಲಿ ಬಡ್ಡಿ ದರದಲ್ಲಿ ತೆರಿಗೆ ರಿಬೇಟ್ ಅನ್ನು ನೀಡುವುದರಿಂದ ರಿಯಾಲ್ಟಿ ವಲಯದ ಚೇತರಿಕೆಗೆ ಸಹಕಾರಿಯಾಗಲಿದೆ. ಮನೆ ಖರೀದಿಸುವವರಿಗೂ ಅನುಕೂಲ ದೊರೆಯಲಿದೆ ಎಂದು ಕ್ರೆಡಾಯ್ ಅಧ್ಯಕ್ಷ ಹರ್ಷವರ್ಧನ್ ಪಟೋಡಿಯಾ ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರ ಎಲ್ಲರಿಗೂ ಮನೆ ಒದಗಿಸುವ ಕನಸನ್ನು ನನಸುಗೊಳಿಸಲು ಮತ್ತು ಆರ್ಥಿಕತೆಯ ಚೇತರಿಕೆ ಗೆ ರಿಯಾಲ್ಟಿ ವಲಯಕ್ಕೆ ತೆರಿಗೆ ರಿಯಾಯಿತಿ ಉಪಕ್ರಮಗಳನ್ನು ಘೋಷಿಸಬೇಕು ಎಂದರು.
ಕಡಿಮೆ ದರದ ಮನೆ ಅಥವಾ ಅಫರ್ಡಬಲ್ ಹೌಸಿಂಗ್ ಎಂದರೆ ಮೆಟ್ರೋ ನಗರ ಮತ್ತು ಇತರ ಕಡೆಗಳಲ್ಲಿ ಭಿನ್ನ ವ್ಯಾಖ್ಯಾನಗಳು ಈಗ ಇವೆ. ಉದಾಹರಣೆಗೆ ಮೆಟ್ರೋ ನಗರಗಳಲ್ಲಿ 45 ಲಕ್ಷ ರೂ. ತನಕದ ಮೌಲ್ಯವಿರುವ ಮನೆಗಳು ಅಫರ್ಡಬಲ್ ಹೌಸಿಂಗ್ ಎನಿಸುತ್ತದೆ. ಈ ಮಿತಿಯನ್ನು 1.50 ಕೋಟಿ ರೂ.ಗೆ ವಿಸ್ತರಿಸಬೇಕು ಎಂದು ಡೆವಲಪರ್ ಗಳು ತಿಳಿಸಿದ್ದಾರೆ.