Sunday, October 11, 2026
Sunday, October 11, 2026

ಇಸ್ರೆಲ್ ಸಂಸತ್ ವಿಸರ್ಜನೆ

Date:

ಇಸ್ರೇಲ್‌ನ ಸಂಸತ್‌ ಅನ್ನು ಮತ್ತೆ ವಿಸರ್ಜಿಸಲಾಗಿದೆ. ಈ ನವೆಂಬರ್‌ನಲ್ಲಿ ಮತ್ತೂಮ್ಮೆ ಸಂಸತ್‌ ಚುನಾವಣೆ ನಡೆಸಲು ಅವಿರೋಧವಾಗಿ ಸಮ್ಮತಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಐದನೇ ಬಾರಿ ಇಸ್ರೇಲ್‌ ಚುನಾವಣೆಗೆ ಸಿದ್ಧವಾಗಿದೆ ಎನ್ನುವುದು ವಿಶೇಷ.
ಶುಕ್ರವಾರ ಮಧ್ಯರಾತ್ರಿಯಿಂದ ವಿದೇಶಾಂಗ ಸಚಿವ ಯೈರ್‌ ಲಾಪಿಡ್‌ ಹಂಗಾಮಿ ಪ್ರಧಾನಿಯಾಗಿರಲಿದ್ದಾರೆ. ಅಲ್ಲಿಗೆ ಅವರು ಇಸ್ರೇಲಿನ 14ನೇ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ಹಾಲಿ ಪ್ರಧಾನಿ ನಫ್ಟಾಲಿ ಬೆನ್ನೆಟ್‌ ಅವರು, ದೇಶದ ಅತ್ಯಂತ ಕಡಿಮೆ ಅವಧಿಯ ಪ್ರಧಾನಿ ಎನಿಸಿಕೊಂಡಿದ್ದಾರೆ.

ಇಸ್ರೇಲ್‌ನಲ್ಲಿ ಬೆಂಜಮಿನ್‌ ನೆತನ್ಯಾಹು 12 ವರ್ಷ ಪ್ರಧಾನಿಯಾಗಿ ಸ್ಥಿರ ಸರ್ಕಾರ ನಡೆಸಿದ್ದರು. ಅವರನ್ನು ಆ ಸ್ಥಾನದಿಂದ ಇಳಿಸಿದ ನಂತರ ವಿವಿಧ ಪಕ್ಷಗಳು ಸೇರಿ ಸಮ್ಮಿಶ್ರ ಸರ್ಕಾರ ರಚಿಸಿಕೊಂಡವು. ಇದರಲ್ಲಿ ಅರಬ್ಬರಿಗೆ ಬೆಂಬಲ ನೀಡುವ ಪಕ್ಷವೂ ಸೇರಿದೆ. ಆದರೆ ಈ ಪಕ್ಷಗಳ ನಡುವೆ ಪದೇಪದೆ ಭಿನ್ನಮತ ತಲೆದೋರಿದ್ದರಿಂದ ಸರ್ಕಾರಗಳು ಉರುಳಿ ಮತ್ತೆಮತ್ತೆ ಚುನಾವಣೆ ನಡೆದಿವೆ.

ಕಳೆದ ವರ್ಷದ ಜೂ.13ರಂದು ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ನಡುವೆ, ನ.1ರಂದು ನಡೆಯುವ ಸಂಸತ್‌ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಫ್ಟಾಲಿ ಬೆನ್ನೆಟ್‌ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...