Sunday, May 24, 2026
Sunday, May 24, 2026

ಕಾಯಕವೇ ಕೈಲಾಸ ಎಂದು ನಂಬಿದ ಸೋಮಣ್ಣ

Date:

ವಿದ್ಯಾರ್ಥಿಗಳು, ಶಿಕ್ಷಕರು, ಸಹ ಸಿಬ್ಬಂದಿಯ ಪಾಲಿಗೆ ನೆಚ್ಚಿನವರಾಗಿದ್ದರು, ಸೋಮಣ್ಣ. 30 ವರ್ಷಗಳ ಕಾಲ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಸೋಮಣ್ಣ ಅವರು ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ.

ಮತ್ತೊಂದು ವಿಶೇಷ ಎಂದರೆ ತಮ್ಮ ಸುದೀರ್ಘ ಕರ್ತವ್ಯದ ಹಾದಿಯಲ್ಲಿ ಸೋಮಣ್ಣ ಅವರು ಒಂದು ದಿನವೂ ಕೂಡ ರಜೆ ಹಾಕಿಲ್ಲ. ಕಚೇರಿಯ ಕೆಲಸದ ಅವಧಿಯಲ್ಲಿ ನೆಪ ಹೇಳಿ ಹೊರಗೆ ಹೋಗಿ ಕಾಲಹರಣ ಮಾಡಿಲ್ಲ. ಕಾಫಿ, ಟೀ ಎಂದು ಹೊರ ಹೋದವರಲ್ಲ.

ಸೋಮಣ್ಣ ಅವರು ಮೂಲತಃ ಸೊರಬ ಸಮೀಪದ ಹಳೆಯ ಸೊರಬದವರು. ಅವರು ಅಮ್ಮನ ಮಡಿಲಲ್ಲಿ ಇದ್ದಾಗಲೇ ಅವರ ತಾಯಿ ತೀರಿಕೊಂಡರು. ಆದ್ದರಿಂದ ಇವರಿಗೆ ತಾಯಿಯ ಮುಖವು ನೆನಪಿಲ್ಲವಂತೆ. ಇವರ ಅಪ್ಪ ಇನ್ನೊಂದು ಮದುವೆ ಆಗಿ ಮನೆ ಅಳಿಯ ಆಗಿದ್ದರಂತೆ. ಸೋಮಣ್ಣ ಅವರು ಅಜ್ಜ-ಅಜ್ಜಿಯ ಅಕ್ಕರೆಯಲ್ಲಿ ಬೆಳೆದಿದ್ದಾರೆ.

ಪದವಿ ಪಡೆದ ನಂತರ ಜ್ಞಾನ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಹಂಗಾಮಿ ನೌಕರರಾಗಿ 1991ರ ನವೆಂಬರ್ ನಲ್ಲಿ ಕೆಲಸಕ್ಕೆ ಸೇರಿಕೊಂಡರು. 1995ರ ಆಗಸ್ಟ್ 8ರಂದು ಇವರ ಕೆಲಸ ಕಾಯಂ ಆಯಿತು.

ಕುವೆಂಪು ವಿವಿಯ ಕ್ಯಾಂಪಸ್ ನ ನೌಕರರ ವಸತಿಗೃಹದಲ್ಲಿ ಕ್ಯಾಂಪಸ್ ನೌಕರರ ವಸತಿಗೃಹದಲ್ಲಿ ವಾಸವಿದ್ದರು.

ಸೋಮಣ್ಣ ಅವರು ಅವಿವಾಹಿತರು. ನಿತ್ಯ ಮನೆಯಲ್ಲಿಯೇ ತಾವೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು. ಕಚೇರಿಗೆ ಊಟ ಹೊತ್ತು ತರುತ್ತಿದ್ದರು.

ನನಗೆ ಕೆಲಸ ಬಿಟ್ಟರೆ ಯಾವುದು ಹವ್ಯಾಸ ಇಲ್ಲ. ಮದುವೆ ಆಗಿದ್ದರೆ ಹೀಗೆ ಒಂದು ದಿನವೂ ರಜೆ ಪಡೆಯದೆ ಕೆಲಸ ಮಾಡಲು ಆಗುತ್ತಿರಲಿಲ್ಲ ಎಂದು ಸೋಮಣ್ಣ ಅವರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ತಾತ್ಕಾಲಿಕ ನೇರ ನೇಮಕಾತಿ ಮೂಲಕಖಾಯಂ ಶಿಕ್ಷಕರ ನೇಮಕಾತಿವರೆಗೆ ಅತಿಥಿ ಶಿಕ್ಷಕರ ನೇಮಕ

Shimoga News 2026-27ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು...

Klive Special Article ನೇಪಾಳದಲ್ಲಿ ಶೃಂಗೇರಿ ಜಗದ್ಗುರುಗಳು.

ವಿಶೇಷ ವರದಿ: ಪ್ರಭಾಕರ ಕಾರಂತ Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ...

Eshwara Khandre ಶ್ರಾವ್ಯಾ ಸಾಗರ್ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಜೀವವೈವಿಧ್ಯ ಪ್ರಶಸ್ತಿ.

Eshwara Khandre ಕರ್ನಾಟಕ ಸರ್ಕಾರದ ಜೀವವೈವಿದ್ಯ ಮಂಡಳಿ ಕೊಡಮಾಡುವ ೨೦೨೫-೨೬ನೇ ಸಾಲಿನ...