Wednesday, February 25, 2026
Wednesday, February 25, 2026
Home Blog Page 1636

ದ್ವೇಷಪೂರಿತ ಭಾಷಣ ಹೆಚ್ಚಾಗುತ್ತಿದೆ ರಾಜ್ಯಸಭೆಯಲ್ಲಿ ಕಳವಳ ವ್ಯಕ್ತ

0

ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷಪೂರಿತ ಭಾಷಣಗಳನ್ನು ಮಾಡುವುದು ಹೆಚ್ಚುತ್ತಿದೆ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ತಿಳಿಸಿದರು.

ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ವಿವಾದಾತ್ಮಕ ಸಂತ ಯತಿ ನರಸಿಂಗಾನಂದ ಅವರು ಹಿಂದೂಗಳಿಗೆ ಕರೆ ನೀಡುತ್ತಿರುವುದು ಕಳವಳಕಾರಿ ಎಂದೂ ಕಾಂಗ್ರೆಸ್‌ ಸದಸ್ಯರು ಹೇಳಿದರು.
ನಿಗದಿತ ಕಲಾಪದ ಬದಲಾಗಿ, ನಿಯಮ 267ರಡಿ ಈ ವಿಷಯ ಕುರಿತು ಪ್ರಸ್ತಾಪಿಸಲು ಅವಕಾಶ ನೀಡಬೇಕು’ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅಲ್ಪಸಂಖ್ಯಾತರ ವಿರುದ್ದದ ದ್ವೇಷ ಭಾಷಣ ಹಾಗೂ ಕೆಲ ಆನ್‌ಲೈನ್‌ ಮಾಧ್ಯಮಗಳ ಪತ್ರಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ನೀಡುವಂತೆಯೂ ಅವರು ನೋಟಿಸ್‌ ನೀಡಿದ್ದರು.

ಈ ಮನವಿಯನ್ನು ತಿರಸ್ಕರಿಸಿದ ಸಭಾಪತಿ ವೆಂಕಯ್ಯ ನಾಯ್ಡು ಅವರು, ‘ಯಾವುದೇ ಸಮುದಾಯದ ಹೆಸರು ಸಹ ಕಡತಕ್ಕೆ ಹೋಗುವುದಿಲ್ಲ. ವ್ಯಕ್ತಿಯೊಬ್ಬ ಅರ್ಥಹೀನ ಪದ ಬಳಸಿ ಮಾತನಾಡಿದ್ದರೆ, ಅದನ್ನು ಇಲ್ಲಿ ಹೇಳಬಾರದು. ಅದನ್ನೇ ಸದನದಲ್ಲಿ ಮತ್ತೆ ಪ್ರಸ್ತಾಪಿಸಿ ಚರ್ಚಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ ಇದಕ್ಕೆ ಅವಕಾಶ ನೀಡಿಲ್ಲ ಎಂದರು.

ಖರ್ಗೆ ಅವರಲ್ಲದೇ, ಟಿಎಂಸಿಯ ಸುಷ್ಮಿತಾ ದೇವ್, ಲಿಜಿನ್ಹೊ ಫೆಲಿರೊ ಹಾಗೂ ಮೊಹ್ಮದ್ ನದಿಮುಲ್ ಹಕ್ ಅವರು ಸಹ ಈ ಕುರಿತು ಮಾತನಾಡಲು ಅವಕಾಶ ಕೋರಿ ನೋಟಿಸ್‌ ನೀಡಿದ್ದರು.

ವಾಪಸ್ಸಾಗುವ ಕಾಶ್ಮೀರಿ ಪಂಡಿತ ಕುಟುಂಬಗಳಿಗೆ ಆಸ್ತಿ ಮರುನೀಡಿಕೆ

0

ಕಾಶ್ಮೀರದಿಂದ ವಲಸೆ ಹೋದವರಿಗೆ ಅವರ ಅಸ್ತಿಗಳನ್ನು ಹಿಂದಿರುಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ 610 ಮಂದಿಗೆ ಆಸ್ತಿಯನ್ನು ವಾಪಸ್‌ ನೀಡಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್‌ ರಾಜ್ಯಸಭೆಯಲ್ಲಿ ತಿಳಿಸಿದರು.

ಸರ್ಕಾರ ವಲಸಿಗ ಕಾಶ್ಮೀರಿಗಳಿಗೆ ಆಸ್ತಿಯನ್ನು ಹಿಂದಿರುಗಿಸಲು ಸಮರ್ಥವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳೂ ನಡೆಯುತ್ತಿವೆ’ ಎಂದರು.

ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದ ಅವರು, ವಲಸಿಗರ ಆಸ್ತಿಗಳ ಪಾಲಕರಾಗಿ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ. ವಲಸಿಗರ ದೂರುಗಳನ್ನು ಪರಿಹರಿಸಲು ಸರ್ಕಾರ ಪೋರ್ಟಲ್ ಅನ್ನೂ ಪ್ರಾರಂಭಿಸಿದೆ ಎಂದು ಮಾಹಿತಿ ನೀಡಿದರು.

ವಲಸಿಗರ ದೂರು ನೈಜವಾಗಿದ್ದರೆ, ಅವರ ಆಸ್ತಿ ಹಿಂತಿರುಗಿಸಲಾಗುತ್ತದೆ. ಇಲ್ಲಿಯವರೆಗೆ, 610 ಅರ್ಜಿದಾರರ ಆಸ್ತಿಯನ್ನು ಹಿಂದಿರುಗಿಸಲಾಗಿದೆ ಎಂದರು.

ವಿಶ್ವ ಆರೋಗ್ಯ ದಿನ

0

ಎಲ್ಲರಿಗೂ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಹಲವು ವ್ಯಕ್ತಿಗಳ ಶ್ರಮದಿಂದ ವಿಶ್ವ ಆರೋಗ್ಯ ಸಂಸ್ಥೆಯನ್ನು ಪ್ರಾರಂಭಿಸಲಾಯಿತು.

ವಿಶ್ವದ ಸಕಲ ಮನುಜರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಹಲವು ಯೋಜನೆಗಳನ್ನು ಪ್ರಾರಂಭಿಸಲಾಯಿತು.

1948ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಮಹತ್ವದ ಬಗ್ಗೆ ಸಮಾಲೋಚಿಸಲಾಯಿತು.
ಆಗಿನಿಂದ ಪ್ರತಿವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಆರೋಗ್ಯದ ಕಾಳಜಿಯ ಕುರಿತಾದ ವಿಷಯವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

ಹಲವು ಖ್ಯಾತನಾಮರು ಈ ಕಾರ್ಯಕ್ರಮಗಳಲ್ಲಿ ಯಾವುದೇ ಪ್ರತಿಫಲವಿಲ್ಲದೇ ಭಾಗಿಯಾಗಿ ಜನಹಿತ ಕಾರ್ಯಕ್ರಮಗಳಿಗೆ ಬಂಬಲ ನೀಡುತ್ತಾ ಬಂದಿದ್ದಾರೆ.

ಆರೋಗ್ಯದ ಕುರಿತಾದ ಪ್ರಸ್ತುತಿಗಳು ಜನರ ಮನದಲ್ಲಿ ಹಸಿರಾಗಿ ಉಳಿಯಲು ಕ್ರಮ ಕೈಗೊಳ್ಳಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುರವರೆಲ್ಲಾ ಕೇವಲ ಸೇವಾಮನೋಭಾವನೆ ಮತ್ತು ಕೃತಾರ್ಥತೆ ಅನುಭವಿಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆ. ಅರಿವಿಲ್ಲದೇ ಜನತೆ ಆಚರಿಸುತ್ತಾ ಬಂದಿರುವ ಅನಾರೋಗ್ಯಕರ ಮತ್ತು ಪಿಡುಗುಗಳ ಬಗ್ಗೆ ಮಾಹಿತಿ ನೀಡಿ ಜನರನ್ನು ಸರಿದಾರಿಗೆ ತರಲು ಪ್ರಯತ್ನಪಡುತ್ತಾರೆ.

ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿ, ಕಾಪಾಡಬೇಕಾದ ನೈರ್ಮಲ್ಯ, ಸ್ವಚ್ಛತಾ ಅಭ್ಯಾಸಗಳು, ನೀರಿನ ದುಂದುವೆಚ್ಚ, ಪರಿಸರದ ಸ್ವಚ್ಛತೆ, ಮೊದಲಾದ ವಿಷಯಗಳ ಬಗ್ಗೆ ಕಾಳಜಿವಹಿಸುವ ಮಾಹಿತಿಯನ್ನು ನೀಡುತ್ತಾರೆ.

ಇದರಿಂದ ಸಮಾಜದ ಆರೋಗ್ಯ ಉತ್ತಮಗೊಳ್ಳುತ್ತದೆ. ಆರೋಗ್ಯಕರ ಸಮಾಜ, ದೇಶದ ಶಕ್ತಿಯಾಗುತ್ತದ

ಸದೃಢ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಕಲೆ. ನಮ್ಮ ಜೀವನ ಶೈಲಿ, ಆಹಾರ ಪದ್ಧತಿ ಇತ್ಯಾದಿಗಳೆಲ್ಲವೂ ಆರೋಗ್ಯದ ಮೇಲೆ ನೇರ ಅಥವಾ ಪರೋಕ್ಷ ಪರಿಣಾಮ ಬೀರುತ್ತಲೇ ಇರುತ್ತವೆ. ಅನಾರೋಗ್ಯಕ್ಕೆ ತುತ್ತಾದಾಗ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ.

ಕಾಯಿಲೆ ಬರುವ ಮೊದಲೇ ಅದರ ಬಗ್ಗೆ ಎಚ್ಚರ ವಹಿಸಿ, ತಡೆಗಟ್ಟಲು ಜಾಗೃತರಾಗುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ವರ್ಷ “ಸಮಾಜದ ಯೋಗಕ್ಷೇಮ’ ಎಂಬ ಪರಿಕಲ್ಪನೆಯಡಿ ಇಂದು ವಿಶ್ವ ಆರೋಗ್ಯ ದಿನಾಚರಣೆ ಆಚರಿಸಲಿದೆ.

ಕೊರೊನಾ ಮಹಾಮಾರಿಯ ನಂತರ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಆದರೆ, ಕೊರೊನಾ ಅಲ್ಲದೇ ಅದೆಷ್ಟೋ ರೋಗಗಳು ಸಮಾಜದಲ್ಲಿ ತಾಂಡವವಾಡುತ್ತಿವೆ.. ನೆನಪಿರಲಿ, ಆರೋಗ್ಯವೇ ಭಾಗ್ಯ. ಆರೋಗ್ಯ ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ನಾವು ಆರೋಗ್ಯವಾಗಿದ್ದರೆ ಮಾತ್ರ ಎಲ್ಲವನ್ನೂ ಸಾಧಿಸಬಹುದು.

ಐಪಿಎಲ್-2022 ಮುಂಬೈ ವಿರುದ್ಧ ಕೆಕೆಆರ್ ಜಯ

0

ಪ್ಯಾಟ್ ಕಮಿನ್ಸ್ ಹಾಗೂ ವೆಂಕಟೇಶ್ ಅಯ್ಯರ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಬಲದಿಂದ ಮಿಂಚಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐ ಪಿಎಲ್ 15 ನೇ ಆವೃತ್ತಿಯ 14ನೇ ಹಣಾಹಣಿಯಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ ಗಳಿಸಿಕೊಂಡಿತ್ತು. ಇದರೊಂದಿಗೆ ಶ್ರೇಯಸ್ ಅಯ್ಯರ್ ಬಳಗ ಇದುವರೆಗೆ ಆಡಿದ 4 ಪಂದ್ಯಗಳ ಪೈಕಿ 3ರಲ್ಲಿ ಜಯಗಳಿಸಿದಂತಾಗಿದೆ. ಅತ್ತ ರೋಹಿತ್ ಶರ್ಮಾ ಪಡೆ ಸತತ ಮೂರನೇ ಸೋಲಿಗೆ ಗುರಿಯಾಯಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ 5 ಬಾರಿಯ ಚಾಂಪಿಯನ್ ಮುಂಬಯಿ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 161ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ ಕೊಲ್ಕತ್ತಾ ತಂಡ 24 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಗೆ 162ರನ್ ಕಲೆ ಹಾಕಿ ವಿಜಯೋತ್ಸವವನ್ನು ಆಚರಿಸಿತು.

ಬೌಲಿಂಗ್ ವೇಳೆ ಎರಡು ವಿಕೆಟ್ ಉರುಳಿಸಿದ್ದ ಪ್ಯಾಟ್ ಕಮಿನ್ಸ್, ಬ್ಯಾಟಿಂಗ್ ನಲ್ಲೂ ಮಿಂಚಿದ್ದಾರೆ. ಕೇವಲ 15 ಎಸೆತಗಳಲ್ಲಿ ಆರು ಮನಮೋಹಕ ಸಿಕ್ಸರ್, 4 ಫೋರ್ ಸಹಿತ ಅಜೇಯ 56ರನ್ ಸಿಡಿಸಿದ್ದಾರೆ. ಇವರಿಗೆ ಸಾಥ್ ನೀಡಿದ ವೆಂಕಟೇಶ್ ಅಯ್ಯರ್ ಸಹ ಅರ್ಧಶತಕದ ಕೊಡುಗೆ ನೀಡಿದರು.

ಪ್ರಥಮ ಜಯದ ನಿರೀಕ್ಷೆಯಲ್ಲಿ ಕ್ರಿಸಿ ಗಿಳಿದ ಮುಂಬಯಿ ತಂಡಕ್ಕೆ ಕೆಕೆಆರ್ ವೇಗಿ ಉಮೇಶ್ ಯಾದವ್ ಪ್ರಾರಂಭದಲ್ಲಿ ಹೊಡೆತ ನೀಡಿದರು. ರಕ್ಷಣಾತ್ಮಕ ಆಟಕ್ಕೆ ಒತ್ತುಕೊಟ್ಟು 12 ಎಸೆತಗಳಲ್ಲಿ ಕೇವಲ ಮೂರು ರನ್ ಗಳಿಸಿದ್ದ ನಾಯಕ ರೋಹಿತ್ ಶರ್ಮ ಮೂರನೇ ಓವರ್ ನ ಐದನೇ ಎಸೆತದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಆಗ ತಂಡದ ಮೊತ್ತ ಕೇವಲ ಆರು ರನ್.

ಎರಡನೇ ವಿಕೆಟ್ ಗೆ ಜೊತೆಗೂಡಿದ ಇಶಾನ್ ಕಿಶಾನ್ ಹಾಗೂ ಡೆ ವಾಲ್ಡ್ ಬ್ರೇವಿಸ್ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಲು ಶ್ರಮಿಸಿದರು. ಆದರೆ ಬ್ರೇವಿಸ್ ಅವರು ಸ್ಪಿನ್ನರ್ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸುವುದರೊಂದಿಗೆ 39 ರನ್ಗಳ ಜೊತೆಯಾಟ ಕೊನೆಗೊಂಡಿತ್ತು. ಕೇವಲ 10 ರನ್ ಗಳ ಅಂತರದಲ್ಲಿ ಇಶಾನ್ ಕಿಶಾನ್ ಕೂಡ ಔಟಾದರು.

ಪದವಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಆದೇಶಕ್ಕೆ ತಡೆ

0

ವೈದ್ಯಕೀಯ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳ ಅರ್ಜಿ ಸಲ್ಲಿಕೆ ವಿಧಾನವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರಳೀಕರಣ ಮಾಡಿರುವುದು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯಾಗಿದೆ.

ಸದ್ಯ ವೈದ್ಯಕೀಯ ಪರೀಕ್ಷೆಗಾಗಿ ನೀಟ್‌ಗೆ ಒಂದು ಪ್ರವೇಶ ಅರ್ಜಿ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ನಡೆಸುವ ಸಿಇಟಿಗೆ ಬೇರೊಂದು ಅರ್ಜಿ ಸಲ್ಲಿಕೆ ಮಾಡಬೇಕಾಗಿತ್ತು.

ಇನ್ನು ಮುಂದೆ ಸಿಇಟಿ, ಪಿಜಿ ಸಿಇಟಿ, ನೀಟ್‌, ಪಿಜಿ ನೀಟ್‌ಗಳಿಗೆ ಒಂದೇ ಅರ್ಜಿ ಸಲ್ಲಿಸಿದರೆ ಸಾಕು ಎನ್ನಲಾಗುತ್ತಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಈ ನಿರ್ಧಾರ ಜಾರಿಗೆ ಬರಲಿದ್ದು, ವಿದ್ಯಾರ್ಥಿಗಳ ಸಮಯ ಮತ್ತು ಪರಿಶ್ರಮವೆರಡೂ ಉಳಿತಾಯವಾಗಲಿದೆ.
ಶುಲ್ಕ ಪಾವತಿಯೂ ಸರಳೀಕರಣವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಸದ್ಯ ತಂತ್ರಜ್ಞಾನ ಅಳವಡಿಕೆ ವಿಚಾರದಲ್ಲಿ ಬೇರೆಲ್ಲ ಇಲಾಖೆಗಳಿಗಿಂತ, ಕೆಇಎ ಮುಂದಿದೆ ಎಂಬುದು ಖುಷಿಯ ವಿಚಾರ. ಕೆಇಎ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿಶಿಷ್ಟ ಸಂಖ್ಯೆಯನ್ನು ನೀಡಲಿದೆ.ಇದೇ ನಂಬರ್‌ ಅನ್ನು ಬಳಸಿ ವಿದ್ಯಾರ್ಥಿ ಸಿಇಟಿ, ನೀಟ್‌ಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ದತ್ತಾಂಶಗಳನ್ನು ಕನಿಷ್ಠ 5 ವರ್ಷದ ವರೆಗೆ ಕಾಪಿಡಲಾಗುತ್ತದೆ.

ಈ ಅವಧಿಯಲ್ಲಿ ಪ್ರಾಧಿಕಾರ ನಡೆಸುವ ಎಲ್ಲಾ ಪರೀಕ್ಷೆಗಳಲ್ಲೂ ವಿಶಿಷ್ಟ ಕೋಡ್‌ ಅನ್ನು ಬಳಸಿಯೇ ಅರ್ಜಿ ಸಲ್ಲಿಕೆ ಮಾಡಬಹುದು. ಒಮ್ಮೆ ಯೂನಿಕ್‌ ನಂಬರ್‌ ಅನ್ನು ಬಳಕೆ ಮಾಡಿ ಹೆಸರು, ವಿಳಾಸ ಮೊಬೈಲ್‌ ಸಂಖ್ಯೆ, ಪೋಷಕರ ಹೆಸರು, ಎಸ್‌ಎಸ್ಎಲ್‌ಸಿ ಅಂಕಪಟ್ಟಿ, ಜಾತಿ, ಮೀಸಲಾತಿ ಸೇರಿದಂತೆ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ.

ಇದರೊಂದಿಗೆ ಶುಲ್ಕ ಪಾವತಿ ವಿಧಾನವನ್ನು ಕೂಡ ಸರಳಗೊಳಿಸಲಾಗುವುದು. ಫೋನ್‌ಪೇ, ಗೂಗಲ್‌ ಪೇ, ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡುಗಳ ಮೂಲಕವೂ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಡೆಬಿಟ್‌ ಕಾರ್ಡ್‌ ಅಥವಾ ಬ್ಯಾಂಕ್‌ಗಳ ಮೂಲಕ ಮಾತ್ರ ಪಾವತಿ ಮಾಡಬೇಕಿತ್ತು.

ಈ ಎಲ್ಲ ಸಂಗತಿಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತಮವಾದ ನಿರ್ಧಾರಗಳೇ ಆಗಿವೆ. ಯಾವುದೇ ಕೋರ್ಸ್‌ಗೆ ಸೇರುವ ಮುನ್ನ ವಿದ್ಯಾರ್ಥಿಗಳ ಈ ಅರ್ಜಿ ಸಲ್ಲಿಕೆ ಪ್ರಕ್ರಿಯೆಯೇ ತಲೆನೋವಿಗೆ ಕಾರಣವಾಗುತ್ತಿತ್ತು.

ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು, ಇದರಲ್ಲಿ ಏನಾದರೂ ತಿದ್ದುಪಡಿಗಳಿದ್ದರೆ ಅವುಗಳನ್ನು ಸರಿ ಮಾಡಿಸುವ ಯತ್ನ. ಈ ಸಂಗತಿಗಳಲ್ಲೇ ಹೆಚ್ಚಿನ ಕಾಲ ವ್ಯಯವಾಗುತ್ತದೆ. ಅಲ್ಲದೆ, ಕೆಲವೊಂದು ದಾಖಲೆಗಳು ನಿಗದಿತ ಸಮಯಕ್ಕೆ ಸಿಗದೇ ಪರದಾಡುವಂತಾಗುತ್ತದೆ.

ಈಗ 5 ವರ್ಷದವರೆಗೆ ದತ್ತಾಂಶಗಳನ್ನು ವೆಬ್‌ಸೈಟ್‌ನಲ್ಲೇ ಸಂಗ್ರಹಿಸಿ ಇಡುವುದರಿಂದ ಪ್ರತೀ ವರ್ಷ ಈ ದಾಖಲೆಗಳಿಗಾಗಿ ಪರದಾಡುವುದು ತಪ್ಪುತ್ತದೆ.

ಹೇಗೂ ಸಿಇಟಿ ಮತ್ತು ನೀಟ್‌ಗೆ ಅರ್ಜಿ ಸಲ್ಲಿಸುವಾಗ ಎಲ್ಲ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದೇ ದಾಖಲೆಗಳು ಪಿಜಿ ಸಿಇಟಿ ಮತ್ತು ಪಿಜಿ ನೀಟ್‌ಗೆ ಹೋಗುವಾಗ ಮತ್ತೂಮ್ಮೆ ನೀಡಬೇಕಾದ ಅಗತ್ಯತೆಯೂ ಬೇಕಾಗಿಲ್ಲ. ಇದಕ್ಕೆ ಬದಲಾಗಿ ವಿಶಿಷ್ಟ ನಂಬರ್‌ ನೀಡಿದರೆ ಸಾಕು.

ಸಿಇಟಿ ವೇಳೆಯಲ್ಲಿ ಸರ್ವರ್‌ ಕೈಕೊಡುವುದು ಸೇರಿದಂತೆ ಕೆಲವೊಂದು ಸಮಸ್ಯೆಗಳು ಕಾಣಿಸುತ್ತಲೇ ಇರುತ್ತವೆ. ಇವುಗಳನ್ನು ಸರಿಪಡಿಸಿಕೊಂಡು ಉತ್ತಮವಾಗಿ ವ್ಯವಸ್ಥೆ ನೀಡುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೊಣೆಯಾಗಿದೆ.

ಗರೀಬ್ ಕಲ್ಯಾಣ ಯೋಜನೆ ಐಎಂಎಫ್ ಶ್ಲಾಘನೆ

0

ಯೋಜನೆಗಳ ಭರವಸೆಯನ್ನು ಚುನಾವಣಾ ಸಮಯದಲ್ಲಿ ಎಲ್ಲ ಪಕ್ಷಗಳೂ ಕೊಡುತ್ತವೆ. ಬದ್ಧತೆ ತೋರಿಸಲು ಪ್ರಣಾಳಿಕೆಯಲ್ಲಿ ನಮೂದಿಸುತ್ತವೆ. ಹಲವು ಬಾರಿ ಕೆಲವು ಜಾರಿಯಾಗುತ್ತದೆ. ಹಲವು ಮರೆತೇ ಹೋಗಿ ಬಿಡುತ್ತವೆ.
ಆದರೆ, ಜಾರಿಯಾದ ಹಲವು ಕಾರ್ಯಕ್ರಮಗಳು ಅಡಳಿತಶಾಹಿಯ ಹಂತದಲ್ಲಿ ಏನಾದರೂ ದುರ್ಬಲವಾದರೆ
ಉತ್ತಮ ಯೋಜನೆಗಳು ವೈಫಲ್ಯಕಾಣುತ್ತವೆ.

ಈಗ, ಎಪ್ಪತ್ತೈದು ವರ್ಷಗಳ ನಮ್ಮ ರಾಜಕೀಯ ಇತಿಹಾಸದಲ್ಲಿ ಇವೆಲ್ಲವನ್ನೂ
ಜನತೆ ವೀಕ್ಷಿಸುತ್ತಾ ಬಂದಿದೆ.

ಜೀತವಿಮುಕ್ತಿ, ತಲೆಯಮೇಲೆ ಮಲಹೊರುವ ಅಮಾನವೀಯ
ಪದ್ಧತಿಗಳು ತೊಲಗಿವೆ.
ಇಷ್ಟಾದರೂ ಹಸಿವಿನ ಕೂಗು ಅಡಗಿಸುವ
ಬಗ್ಗೆ ಪ್ರಬಲ ಯೋಜನೆಗಳು ನಾಟುವಂತಹ ಕೆಲಸ ಮಾಡಿರಲಿಲ್ಲ.

ಈಗ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆ ಒಂದಿಷ್ಟು ಬಡವರ
ಹೊಟ್ಟೆ ತಣಿಸುವಲ್ಲಿ ಸಾಫಲ್ಯಕಾಣುತ್ತಿದೆ.
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ
ಭಾರತದ ಈ ಯೋಜನೆಯ ಬಗ್ಗೆ ಒಂದು ವರದಿಯನ್ನೇ ಹೊರತಂದಿದೆ.

ಈ ವರದಿಯ ಪ್ರಕಾರ ಭಾರತದಲ್ಲಿ
142 ರೂಪಾಯಿಗಿಂತ ಕಡಿಮೆ ಸರಾಸರಿ ಆದಾಯ ಇರುವ ಕಡುಬಡವರ ಸಂಖ್ಯೆ ಕೊರೋನಾ ಬಿಕ್ಕಟ್ಟಿನ 2020ರ ವರ್ಷದಲ್ಲಿಯೂ ಕೊರೋನಾ ಪೂರ್ವ 2019ರ ಮಟ್ಟದಲ್ಲಿ ಉಳಿದುಕೊಂಡಿದೆ‌. ಗರೀಬ್ ಕಲ್ಯಾಣ ಯೋಜನೆ ಬಡತನವನ್ನು ದೂರ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

2020 ರ ಮಾರ್ಚ್ ನಲ್ಲಿ ಅನ್ನ ಯೋಜನೆ ಆರಂಭಿಸಿ ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರಧಾನ್ಯಗಳನ್ನು ಉಚಿತವಾಗಿ ವಿತರಿಸಲಾಗಿದೆ. 80 ಕೋಟಿ ಜನ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.

ನೂರ ಮೂವತ್ತು ಕೋಟಿ ಜನಸಂಖ್ಯೆಯಲ್ಲಿ ಎಂಭತ್ತು ಕೋಟಿ ಮಂದಿ ಈ ಯೋಜನೆಯ ಲಾಭ ಪಡೆದಿದ್ದಾರೆ. ಅಕ್ಕಿ ಕೊಟ್ಟು ಜನರನ್ನ ಸೋಮಾರಿಗಳನ್ನಾಗಿ ಮಾಡುತ್ತಿದೆ
ಎಂಬ ಟೀಕೆಯನ್ನೂ ರಾಜ್ಯ ಎದುರಿಸಿತ್ತು.
ಆದರೆ ಬಡವರ ತುತ್ತಿನ ಚೀಲದ ಅಗತ್ಯದ ಬಗ್ಗೆ ಜರೂರು ಇಂತಹ ಕೆಕಸ ಪರಿಹಾರ ನೀಡಬಲ್ಲದು.

ಮುಂದೆ ಅವಲಂಬಿತರಾಗದಂತೆ ಅವರ ಯೋಚನೆಯ ದಿಕ್ಕನ್ನ ಬದಲಿಸುವ
ಯೋಜನೆಗಳನ್ನ ಕೊಡಬೇಕು.

ಜೀವನ ದರ್ಶನ ಮತ್ತು ವಸ್ತ್ರ ನೇಯ್ಗೆ ಕೌಶಲ ನೀಡಿದವರು ದೇವರ ದಾಸಿಮಯ್ಯ

0

ವಚನ ಸಾಹಿತ್ಯದ ಜಗದ್ಗುರು ಎಂದೇ ಕರೆಯಬಹುದಾದ ಶ್ರೀ ದೇವರ ದಾಸಿಮಯ್ಯನವರು ಜೀವನಕ್ಕೆ ಬೇಕಾದ ವಚನಗಳು ಮತ್ತು ಸಮಾಜದ ಗೌರವ ಹೆಚ್ಚಿಸುವ, ನಾಗರೀಕತೆಗೆ ಶಕ್ತಿ ನೀಡುವ ವಸ್ತ್ರ ನೇಯುವ ಕೌಶಲ್ಯ ಎರಡನ್ನೂ ನೀಡಿದ ಮಹಾನ್ ಪುರುಷ ಎಂದು ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ ಅವರು ವರ್ಣಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೇಕಾರ ಸಮುದಾಯಗಳ ಒಕ್ಕೂಟ ಶಿವಮೊಗ್ಗ, ಇವರ ಸಂಯುಕ್ತಾಶ್ರಯದಲ್ಲಿ ನಿನ್ನೆ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇವಾಂಗ ಸಮುದಾಯ ಸೇರಿದಂತೆ ನೇಕಾರ ಸಮುದಾಯಗಳು ಉತ್ತರ ಕರ್ನಾಟಕದಲ್ಲಿ ಹೊರತುಪಡಿಸಿ ಹೆಚ್ಚಾಗಿ ನೇಕಾರಿಕೆ ವೃತ್ತಿಯನ್ನು ಮಾಡುತ್ತಿಲ್ಲ. ವಿಭಿನ್ನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಬಸವಣ್ಣನವರಿಗಿಂತಲೂ ಮುಂಚಿತವಾಗಿ 10 ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ವಚನಕಾರ ದೇವರದಾಸಿಮಯ್ಯ. ಸುಮಾರು 167 ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಆದರೆ, ಇದು ಸಮುದಾಯದ ಜನತೆಯಿಂದ ಹೆಚ್ಚು ಪ್ರಚಾರಕ್ಕೆ ಬಾರದೇ ಜನಮನ ತಲುಪಿಲ್ಲ. ಪ್ರಚಲಿತವಾಗಿಲ್ಲ. ನೇಕಾರ ಸಮುದಾಯ ದೇವರ ದಾಸಿಮಯ್ಯ ಅವರ ವಚನಗಳನ್ನು, ಜೀವನಾದರ್ಶಗಳನ್ನು ಜನಮನಕ್ಕೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದರು.

ದಾಸಿಮಯ್ಯನವರು ಆಧ್ಯಾತ್ಮ ಶಕ್ತಿ ಸಂಪಾದನೆಯೊಂದಿಗೆ ವಚನ ಸಾಹಿತ್ಯವನ್ನೂ ಬೆಳೆಸಿದರು. ಜೀವನಕ್ಕೆ ಬೇಕಾದ ಎಲ್ಲ ಕಲೆ, ಮೌಲ್ಯಗಳು, ತತ್ವಗಳು ಅವರ ವಚನದಲ್ಲಿ ಅಡಗಿದೆ. ಇದನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ. ದೇವರ ದಾಸಿಮಯ್ಯನವರ ವಚನ ಗಾಯನ, ವಾಚನದಂತಹ ಕಾರ್ಯಕ್ರಮಗಳ ಮೂಲಕ ಅವರ ವಚನ ಸಾಹಿತ್ಯವನ್ನು ಎಲ್ಲರಿಗೆ ತಿಳಿಸುವ ಕೆಲಸವನ್ನು ನೇಕಾರ ಸಮುದಾಯಗಳು ಒಟ್ಟಾಗಿ, ಸಂಘಟಿತರಾಗಿ ಮಾಡಬೇಕಿದೆ ಎಂದು ತಿಳಿಸಿದರು.

ಸೊರಬದ ಯುವ ವಾಗ್ಮಿ ಭರತ್ ಕಾರೇಕೊಪ್ಪ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ನಾವೆಲ್ಲ ಕೇವಲ ವರ್ತಮಾನಕ್ಕೆ ಸೀಮಿತವಾಗದೆ ಇತಿಹಾಸದೆಡೆ ನೋಡಿ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳು, ಮೌಲ್ಯಗಳನ್ನು ತಿಳಿಯಬೇಕು. 10 ನೇ ಶತಮಾನದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರಿನಲ್ಲಿ ಜನಿಸಿದ ದೇವರ ದಾಸಿಮಯ್ಯನವರು ಸುಮಾರು 176 ರಿಂದ 200 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆಂದು ಪುರಾಣಗಳು ಹೇಳುತ್ತವೆ.

ವಚನ ಸಾಹಿತ್ಯದ ಸೃಷ್ಟಿಕರ್ತ ದೇವರ ದಾಸಿಮಯ್ಯ ಎಂದು ಹೇಳಬಹುದಾಗಿದೆ. ವಚನಗಳಲ್ಲಿ ಜೀವನದ ಇಡೀ ಮೌಲ್ಯಗಳನ್ನು ಕಾಣಬಹುದು. ನಮ್ಮ ಜೀವನದಲ್ಲಿ ಇವನ್ನು ಅಳವಡಿಸಿಕೊಂಡಲ್ಲಿ ಜೀವನಕ್ಕೆ ದಾರಿದೀಪವಾಗಲಿದೆ. ವಿ.ಕೃ.ಗೋಕಾಕರ ಪ್ರಕಾರ ಇಡೀ ವಿಶ್ವಕ್ಕೆ ನಮ್ಮ ರಾಜ್ಯದ ಕೊಡುಗೆ ಏನೆಂದರೆ ವೈಚಾರಿಕತೆ ಮತ್ತು ಜಾತ್ಯಾತೀತತೆಯಿಂದ ಕೂಡಿದ ವಚನ ಸಾಹಿತ್ಯವಾಗಿದೆ.

ನಮ್ಮ ಮಕ್ಕಳಿಗೆ ನಾವು ಸಾವಿರಾರು ಖರ್ಚು ಮಾಡಿ ಮೊಬೈಲ್ ಕೊಡಿಸುತ್ತೇವೆ. ಬದಲಾಗಿ ನೂರಾರು ಖರ್ಚು ಮಾಡಿ ಇಡೀ ಜೀವನಸಾರ ತಿಳಿಸುವ ವಚನಗಳು, ಭಗವದ್ಗೀತೆಯನ್ನು ಕೊಡಿಸುವುದಿಲ್ಲ. ಮನೆಯ ಮಕ್ಕಳಿಗೆ ವಚನ ಸಾಹಿತ್ಯದಂತಹ ಪುಸ್ತಕಗಳನ್ನು ಕೊಡಿಸಬೇಕು ಎಂದ ಅವರು ಶರಣರ ನುಡಿಮುತ್ತುಗಳನ್ನು ಅಳವಡಿಸಿಕೊಳ್ಳುವ ಮೂಲಕ ಬಲಿಷ್ಟ ಭಾರತ ನಿರ್ಮಾಣ ಮಾಡಬೇಕೆಂದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ಪಂಡಿತ, ಪಾಮರರಿಗೆ ಮಾತ್ರ ಸೀಮಿತವಾಗಿದ್ದ ಸಾಹಿತ್ಯವನ್ನು ವಚನ ಸಾಹಿತ್ಯದ ಮೂಲಕ ಆಡುಭಾಷೆಯಲ್ಲಿ ಜನಸಾಮಾನ್ಯರಿಗೆ ತಿಳಿಸಿದವರು ದೇವರ ದಾಸಿಮಯ್ಯನಂತಹ ವಚನ ಸಾಹಿತಿಗಳು ಎಂದರು.

ಪಟ್ಟಸಾಲಿ ಸಮಾಜದ ಜಿಲ್ಲಾಧ್ಯಕ್ಷ ಕಾಂತೇಶ್ ಕದರಮಂಡಲಗಿ ಮಾತನಾಡಿ, ನೇಕಾರ ಸಮುದಾಯದಲ್ಲಿ ಸುಮಾರು 30 ಉಪಪಂಗಡಗಳಿದ್ದು ಎಲ್ಲರೂ ಒಟ್ಟಾಗಿ ಸಂಘಟಿತರಾಗಬೇಕಿದೆ. ಮುಂದಿನ ಬಾರಿ ಜಿಲ್ಲೆಯಲ್ಲಿ ಎಲ್ಲರೂ ಒಟ್ಟಾಗಿ ವಿಜೃಂಭಣೆಯಿಂದ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸುವ ಸಂಕಲ್ಪ ಮಾಡಬೇಕು ಎಂದು ಸಮಾಜ ಬಾಂಧವರಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ ಅವರು ಮಾತನಾಡಿ, ಸಮಾಜದ ದಾರ್ಶನಿಕರು, ಮಹಾನ್ ವ್ಯಕ್ತಿಗಳ ಜೀವಾದರ್ಶಗಳು, ಮೌಲ್ಯಗಳು, ವಿಚಾರಧಾರೆಗಳನ್ನು ಇಡೀ ಜನತೆಗೆ ತಿಳಿಸುವ ಉದ್ದೇಶದಿಂದ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದೆ. ಆದರೆ ನೋವಿನ ಸಂಗತಿ ಎಂದರೆ ಈ ಮಹಾನ್ ವ್ಯಕ್ತಿಗಳನ್ನು ಕೆಲವು ಜಾತಿ-ಜನಾಂಗಕ್ಕೆ ಸೀಮಿತಗೊಳಿಸಿ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಇದಾಗಬಾರದು. ಯಾವುದೇ ಜಾತಿಗೆ ಈ ದಾರ್ಶನಿಕರನ್ನು ಸೀಮಿತಗೊಳಿಸದೇ ಎಲ್ಲರೂ ಸೇರಿ ಜಯಂತಿಗಳನ್ನು ಆಚರಿಸಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಪಾಲಿಸುವಂತೆ ಆಗಬೇಕು. ಹಾಗೂ ಮುಂದಿನ ಪೀಳಿಗೆಯಲ್ಲಿಯೂ ಇಂತಹ ಮಹಾನ್ ದಾರ್ಶನಿಕರು ಬೆಳೆಯಬೇಕು ಎಂದು ಆಶಿಸಿದರು.

ಕರ್ನಾಟಕ ಕಲಾಶ್ರೀ ಪುರಸ್ಕೃತ ರಾಗಿ ಎಸ್.ಎಸ್.ಶಿವಾನಂದ ಸ್ವಾಮಿ ಮತ್ತು ತಂಡದವರು ವಚನ ಗಾಯನ ನಡೆಸಿಟ್ಟರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಟಿ.ಎಸ್.ಗಿರಿಯಪ್ಪ, ದೇವಾಂಗ ಸಮಾಜದ ಉಪಾಧ್ಯಕ್ಷ ಹಾಲೇಶಪ್ಪ, ಪದ್ಮಸಾಲಿ ಸಮಾಜದ ಅಧ್ಯಕ್ಷ ಜೆ.ರಾಮಕೃಷ್ಣ, ಮುಖಂಡರಾದ ರವೀಂದ್ರನಾಥ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್.ಹೆಚ್, ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಂಬೈ ಆರೋಹಿ ಸಂಗೀತ ಉತ್ಸವದಲ್ಲಿ ಶಿವಮೊಗ್ಗ ಪ್ರತಿಭೆಗಳ ಗಾಯನ

0

ಮುಂಬೈನ ಆರೋಹಿ ಸಂಗೀತ ಮಹೋತ್ಸವದಲ್ಲಿ ಶಿವಮೊಗ್ಗದ ನೌಶಾದ್ ಮತ್ತು ನಿಶಾದ್ ಹರ್ಲಾಪುರ್ ಸಹೋದರರ ಸಂಗೀತ ಕಾರ್ಯಕ್ರಮ ಏ.8 ಮತ್ತು 9 ರಂದು ನಡೆಯಲಿದೆ. ದೇಶದ ಶ್ರೇಷ್ಠ ಹಿಂದೂಸ್ತಾನಿ ಸಂಗೀತ ಮಹೋತ್ಸವದ 20ನೇ ವರ್ಷದ ಆರೋಹಿ ಸಂಗೀತ ಸಮ್ಮೇಳನ ಇದಾಗಿದ್ದು, ಹರ್ಲಾಪುರ್ ಸಹೋದರರು ಇದರಲ್ಲಿ ಹಾಡಲಿದ್ದಾರೆ.

ಪ್ರಖ್ಯಾತ ತಬಲಾ ವಾದಕರಾದ ಯಶವಂತ್ ವೈಷ್ಣವ್, ಹರ‍್ಮೋನಿಯಂ ಅನ್ನು ಅಭಿನವ್ ರಾಂವಡೆ ನುಡಿಸಲಿದ್ದಾರೆ. ಪಂಚಮ್ ನಿಷಾದ್ ಎಂಬ ಸಂಸ್ಥೆ ಈ ಸಮ್ಮೇಳನವನ್ನು ಆಯೋಜಿಸಿದೆ.

ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಹಿಂಪಡೆಯಲಾಗಿದೆ

0

ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಜಾರಿಗೆ ತಂದಿದ್ದ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಅಧ್ಯಕ್ಷ ಗೊಟಬಯ ರಾಜಪಕ್ಸ ಯಾವುದೇ ಕಾರಣಕ್ಕೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸರ್ಕಾರ ಪುರುಚ್ಚರಿಸಿದೆ.

ಸರ್ಕಾರದ ಮುಖ್ಯ ವಿಪ್​ ಹಾಗು ಹೆದ್ದಾರಿ ಖಾತೆ ಸಚಿವ ಜಾನ್ಸ್​ಟನ್ ಫೆರ್ನಾಂಡೋ ಈ ವಿಚಾರವಾಗಿ ಮಾತನಾಡಿದರು.

ದ್ವೀಪರಾಷ್ಟ್ರವು ಆರ್ಥಿಕ ದಿವಾಳಿಯಾಗಿದೆ. ಅಗತ್ಯ ವಸ್ತುಗಳಿಗೆ ನಾಗರಿಕರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಪರಿಣಾಮ, ರಸ್ತೆಗಿಳಿದು ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದು ಹಿಂಸಾಚಾರವೂ ನಡೆದಿತ್ತು.

ಹೀಗಾಗಿ ಏ.1ರಂದು ತುರ್ತು ಪರಿಸ್ಥಿತಿ ಜಾರಿಗೊಳಿಸಿ ಅಧ್ಯಕ್ಷ ಗೊಟಬಯ ರಾಜಪಕ್ಸ ಆದೇಶಿಸಿದ್ದರು. ಇದೀಗ ಇದನ್ನು ಹಿಂಪಡೆದು ಗೆಜೆಟ್​ ಅಧಿಸೂಚನೆ​ ಹೊರಡಿಸಲಾಗಿದೆ.

ಸಂಸತ್ತಿನಲ್ಲಿ ರಾಜಪಕ್ಸ ಸಾರಥ್ಯದ ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನಾ ಪಕ್ಷ (ಎಸ್‌ಎಲ್‌ಪಿಪಿ) ಬಹುಮತ ಕಳೆದುಕೊಂಡಿದೆ. ಆದರೂ, ಅಧ್ಯಕ್ಷರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸರ್ಕಾರದ ಮುಖ್ಯ ವಿಪ್​ ಆಗಿರುವ ಹೆದ್ದಾರಿ ಖಾತೆ ಸಚಿವ ಜಾನ್ಸ್​ಟನ್ ಫೆರ್ನಾಂಡೋ ಅವರು ತಿಳಿಸಿದ್ದಾರೆ.

ರಾಜಪಕ್ಸ ಅವರಿಗೆ 6.9 ಮಿಲಿಯನ್​ ಜನರು ಮತ ಹಾಕಿದ್ದಾರೆ. ಈ ವಿಚಾರವನ್ನು ನಾನು ಸರ್ಕಾರದ ಭಾಗವಾಗಿ ಸ್ಪಷ್ಟಪಡಿಸುತ್ತಿದ್ದೇನೆ. ಯಾವುದೇ ಪರಿಸ್ಥಿತಿಯಲ್ಲೂ ಅಧ್ಯಕ್ಷರು ರಾಜೀನಾಮೆ ನೀಡುವುದಿಲ್ಲ. ಏನೇ ಆದರೂ ನಾವು ಅದನ್ನು ಎದುರಿಸುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನೀರಿಗೆ ಬರ ಪರಸ್ಥಿತಿ ಸುಧಾರಿಸಲು ದೇವೇಗೌಡರ ಆಗ್ರಹ

0

ಅಮೆರಿಕದ ಪ್ರಸಿದ್ಧ ಚಿಪ್​ ಮೇಕರ್​ ಕಂಪನಿಯಾದ ಇಂಟೆಲ್​ ಕಾರ್ಪೊರೇಷನ್​​ ರಷ್ಯಾದಲ್ಲಿ ತನ್ನ ವಹಿವಾಟನ್ನು ಸ್ಥಗಿತಗೊಳಿಸಿರೋದಾಗಿ ಘೋಷಿಸಿದೆ.

ಈ ಮೂಲಕ ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ರಷ್ಯಾದಿಂದ ಗಂಟುಮೂಟೆ ಕಟ್ಟಿಕೊಂಡು ಹೊರಬಂದ ಕಂಪನಿಗಳ ಸಾಲಿಗೆ ಸೇರಿಕೊಂಡಿದೆ ಇಂಟೆಲ್​.

ಜೊತೆಗೆ ರಷ್ಯಾ ಆಕ್ರಮಣವನ್ನ ಖಂಡಿಸುವ ಕಂಪನಿಗಳ ಪಟ್ಟಿಗೆ ಸೇರಿದೆ. ಕಳೆದ ತಿಂಗಳಷ್ಟೇ ರಷ್ಯಾ ಮತ್ತು ಅದರ ಫ್ರೆಂಡ್​ ಬೆಲಾರುಸ್​​ನಲ್ಲಿರೋ ಗ್ರಾಹಕರಿಗೆ ಚಿಪ್ ಕೊಡೋದನ್ನ ನಿಲ್ಲಿಸಿರೋದಾಗಿ ಕಂಪನಿ ಹೇಳಿಕೊಂಡಿತ್ತು. ಇದೀಗ ರಷ್ಯಾದಲ್ಲಿ ವಹಿವಾಟನ್ನು ಬಂದ್​ ಮಾಡಿದೆ. ಇತ್ತೀಚೆಗೆ ಐಬಿಎಂ ಕೂಡ ರಷ್ಯಾಗೆ ತನ್ನ ಶಿಪ್​ಮೆಂಟ್ಸ್​​ ಸ್ಥಗಿತಗೊಳಿಸಿತ್ತು.

ರಷ್ಯಾದ ಕಂಪನಿಗಳು ಮತ್ತು ಸರ್ಕಾರಿ ಏಜೆನ್ಸಿಗಳು ಪಾಶ್ಚಿಮಾತ್ಯ ದೇಶಗಳು ಅಭಿವೃದ್ಧಿಪಡಿಸಿರೋ ತಂತ್ರಜ್ಞಾನದ ಮೇಲೆ ದೀರ್ಘಕಾಲದಿಂದ ಡಿಪೆಂಡ್​ ಆಗಿವೆ.

ಐಬಿಎಂ, ಡೆಲ್​ ಟೆಕ್ನಾಲಜೀಸ್​ ಮತ್ತು ಹೆಚ್​ಪಿ ಎಂಟರ್​​ಪ್ರೈಸಸ್​​ನ ಸರ್ವರ್​ಗಳು ರಷ್ಯಾದ ಮಾರ್ಕೆಟ್​​ನಲ್ಲಿ ಟಾಪ್​​ ಆಗಿವೆ. ಆದ್ದರಿಂದ, ಅಮೆರಿಕದ ಕ್ಲೌಡ್​ ಕಂಪ್ಯೂಟಿಂಗ್ ಮತ್ತು ಸಾಫ್ಟ್​ವೇರ್​ ಕಂಪನಿಗಳು ರಷ್ಯಾ ಜೊತೆಗಿನ ಸಂಬಂಧವನ್ನ ಕಟ್​ ಮಾಡಬೇಕು ಅಂತ ಉಕ್ರೇನ್​ ಆಗ್ರಹಿಸುತ್ತಾ ಬಂದಿದೆ.