Tuesday, February 24, 2026
Tuesday, February 24, 2026
Home Blog Page 1637

ಶ್ರೀಲಂಕಾಗೆ ಭಾರತದಿಂದ 1.5 ಬಿಲಿಯನ್ ಡಾಲರ್ ನೆರವು

0

ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾಗೆ ಭಾರತ ಸುಮಾರು 1.5 ಬಿಲಿಯನ್ ಡಾಲರ್ ಮೊತ್ತದ ನೆರವಿನ ಪ್ಯಾಕೇಜ್ ನೀಡುತ್ತಿದೆ.

ಆರ್ಥಿಕ ಬಿಕ್ಕಟ್ಟಿನಲ್ಲಿ ತತ್ತರಿಸುತ್ತಿರುವ ಶ್ರೀಲಂಕಾಕ್ಕೆ ಭಾರತವು ತನ್ನ ಆರ್ಥಿಕ ಪ್ಯಾಕೇಜ್ ಅನ್ನು ವಿಸ್ತರಿಸಿದ್ದು, ಅದು ಕೆಲವು ತಕ್ಷಣದ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಅದರ ದೇಶೀಯ ಆರ್ಥಿಕತೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈ ಕಮಿಷನರ್ ಗೋಪಾಲ್ ಬಾಗ್ಲೇ ತಿಳಿಸಿದರು.

ಇಂಧನ ಮತ್ತು ಆಹಾರ ಸಂಗ್ರಹಣೆಗಾಗಿ ಭಾರತವು ಬಿಕ್ಕಟ್ಟು ಪೀಡಿತ ಶ್ರೀಲಂಕಾಕ್ಕೆ ತನ್ನ ನೆರವಿನ ಕ್ರೆಡಿಟ್ ಲೈನ್ಸ್ ಪ್ರಸ್ತುತ ಒಟ್ಟು 1.5 ಶತಕೋಟಿ ಡಾಲರ್ ಗೆ ಏರಿಕೆ ಮಾಡಿದೆ.

ಅಂತೆಯೇ ಸರಕುಗಳ ರವಾನೆ ಮತ್ತಷ್ಟು ಮುಂದುವರಿಯಲಿವೆ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈ ಕಮಿಷನರ್ ಗೋಪಾಲ್ ಬಾಗ್ಲೇ ಅವರು ತಿಳಿಸಿದ್ದಾರೆ.

ಭಾರತೀಯ ರಾಯಭಾರಿ ಮೊದಲೇ ತಿಳಿಸಿದ್ದಂತೆ ಈ ವರ್ಷದ ಜನವರಿಯಿಂದ ಶ್ರೀಲಂಕಾಕ್ಕೆ ಭಾರತದಿಂದ ಆರ್ಥಿಕ ನೆರವು 2.5 ಶತಕೋಟಿ ಡಾಲರ್ ಮೀರಿತ್ತು.

ಫೆಬ್ರವರಿಯಲ್ಲಿ ಇಂಧನ ಖರೀದಿಗಾಗಿ 500 ಮಿಲಿಯನ್ ಡಾಲರ್ ಸಾಲಕ್ಕೆ ಸಹಿ ಹಾಕಲಾಗಿತ್ತು. ಮಾರ್ಚ್ ಆರಂಭದಿಂದ, ಒಟ್ಟು 150,000 ಟನ್ಗಳಷ್ಟು ಜೆಟ್ ವಿಮಾನ ಇಂಧನ, ಡೀಸೆಲ್ ಮತ್ತು ಪೆಟ್ರೋಲ್ ಸೇರಿದಂತೆ ಒಟ್ಟು ನಾಲ್ಕು ಸರಕುಗಳು ಶ್ರೀಲಂಕಾಕ್ಕೆ ಬಂದಿವೆ ಎಂದು ಬಾಗ್ಲೇ ಮಾಹಿತಿ ನೀಡಿದ್ದಾರೆ.

ಮೇ ತಿಂಗಳವರೆಗೆ ಇನ್ನೂ ಐದು ರವಾನೆಗಳನ್ನು ಪೂರ್ಣಗೊಳಿಸಿದ್ದು, ಇದರಲ್ಲಿ ಆಹಾರ, ಔಷಧ ಮತ್ತು ಅಗತ್ಯ ವಸ್ತುಗಳ ಮತ್ತೊಂದು ಸಾಲದ 1 ಬಿಲಿಯನ್ ಡಾಲರ್ ಗೆ ಕಳೆದ ತಿಂಗಳು ಸಹಿ ಹಾಕಲಾಗಿದೆ. ಶ್ರೀಲಂಕಾಗೆ 1 ಬಿಲಿಯನ್ ಡಾಲರ್ ಸಾಲವು ಅವರ ಆಹಾರದ ಬೆಲೆಗಳು ಮತ್ತು ಇಂಧನ ವೆಚ್ಚಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಈ ಕ್ರೆಡಿಟ್ ಸೌಲಭ್ಯದ ಅಡಿಯಲ್ಲಿ ಭಾರತದಿಂದ ಅಕ್ಕಿಯ ಮೊದಲ ರವಾನೆಯು ಶ್ರೀಲಂಕಾಕ್ಕೆ ಶೀಘ್ರದಲ್ಲೇ ಆಗಮಿಸುವ ನಿರೀಕ್ಷೆಯಿದೆ ಎಂದು ಬಾಗ್ಲೇ ಅವರು ತಿಳಿಸಿದರು.

ರಷ್ಯದಿಂದ ಹೊರಬಿದ್ದ ಸಾಫ್ಟ್ ವೇರ್ ದಿಗ್ಗಜ ಇಂಟೆಲ್ ಕಾರ್ಪೋರೇಷನ್

0

ಅಮೆರಿಕದ ಪ್ರಸಿದ್ಧ ಚಿಪ್​ ಮೇಕರ್​ ಕಂಪನಿಯಾದ ಇಂಟೆಲ್​ ಕಾರ್ಪೊರೇಷನ್​​ ರಷ್ಯಾದಲ್ಲಿ ತನ್ನ ವಹಿವಾಟನ್ನು ಸ್ಥಗಿತಗೊಳಿಸಿರೋದಾಗಿ ಘೋಷಿಸಿದೆ.

ಈ ಮೂಲಕ ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ರಷ್ಯಾದಿಂದ ಗಂಟುಮೂಟೆ ಕಟ್ಟಿಕೊಂಡು ಹೊರಬಂದ ಕಂಪನಿಗಳ ಸಾಲಿಗೆ ಸೇರಿಕೊಂಡಿದೆ ಇಂಟೆಲ್​.

ಜೊತೆಗೆ ರಷ್ಯಾ ಆಕ್ರಮಣವನ್ನ ಖಂಡಿಸುವ ಕಂಪನಿಗಳ ಪಟ್ಟಿಗೆ ಸೇರಿದೆ. ಕಳೆದ ತಿಂಗಳಷ್ಟೇ ರಷ್ಯಾ ಮತ್ತು ಅದರ ಫ್ರೆಂಡ್​ ಬೆಲಾರುಸ್​​ನಲ್ಲಿರೋ ಗ್ರಾಹಕರಿಗೆ ಚಿಪ್ ಕೊಡೋದನ್ನ ನಿಲ್ಲಿಸಿರೋದಾಗಿ ಕಂಪನಿ ಹೇಳಿಕೊಂಡಿತ್ತು. ಇದೀಗ ರಷ್ಯಾದಲ್ಲಿ ವಹಿವಾಟನ್ನು ಬಂದ್​ ಮಾಡಿದೆ. ಇತ್ತೀಚೆಗೆ ಐಬಿಎಂ ಕೂಡ ರಷ್ಯಾಗೆ ತನ್ನ ಶಿಪ್​ಮೆಂಟ್ಸ್​​ ಸ್ಥಗಿತಗೊಳಿಸಿತ್ತು.

ರಷ್ಯಾದ ಕಂಪನಿಗಳು ಮತ್ತು ಸರ್ಕಾರಿ ಏಜೆನ್ಸಿಗಳು ಪಾಶ್ಚಿಮಾತ್ಯ ದೇಶಗಳು ಅಭಿವೃದ್ಧಿಪಡಿಸಿರೋ ತಂತ್ರಜ್ಞಾನದ ಮೇಲೆ ದೀರ್ಘಕಾಲದಿಂದ ಡಿಪೆಂಡ್​ ಆಗಿವೆ.

ಐಬಿಎಂ, ಡೆಲ್​ ಟೆಕ್ನಾಲಜೀಸ್​ ಮತ್ತು ಹೆಚ್​ಪಿ ಎಂಟರ್​​ಪ್ರೈಸಸ್​​ನ ಸರ್ವರ್​ಗಳು ರಷ್ಯಾದ ಮಾರ್ಕೆಟ್​​ನಲ್ಲಿ ಟಾಪ್​​ ಆಗಿವೆ. ಆದ್ದರಿಂದ, ಅಮೆರಿಕದ ಕ್ಲೌಡ್​ ಕಂಪ್ಯೂಟಿಂಗ್ ಮತ್ತು ಸಾಫ್ಟ್​ವೇರ್​ ಕಂಪನಿಗಳು ರಷ್ಯಾ ಜೊತೆಗಿನ ಸಂಬಂಧವನ್ನ ಕಟ್​ ಮಾಡಬೇಕು ಅಂತ ಉಕ್ರೇನ್​ ಆಗ್ರಹಿಸುತ್ತಾ ಬಂದಿದೆ.

ಭದ್ರತಾ ಮಂಡಳಿಗೆ ರಷ್ಯದ ದಾಳಿ ಬಗ್ಗೆ ಮಾಹಿತಿ ನೀಡಿದ ಝೆಲೆನ್ಸ್ಕಿ

0

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬುಚಾ ಹತ್ಯಾಕಾಂಡವು ಪೂರ್ವ ಯುರೋಪಿಯನ್ ದೇಶದ ನಗರಗಳಲ್ಲಿ ರಷ್ಯಾದ ಪಡೆಗಳು ಮಾಡಿದ ಅನೇಕ ಯುದ್ಧ ಅಪರಾಧಗಳಲ್ಲಿ ಕೇವಲ ಒಂದು ಎಂದು ಅವರು ತಿಳಿಸಿದರು.

ಜನರು ತಮ್ಮ ಅಪಾರ್ಟ್‌ಮೆಂಟ್‌ಗಳು, ಮನೆಗಳಲ್ಲಿ ಕೊಲ್ಲಲ್ಪಟ್ಟರು. ನಾಗರಿಕರು ತಮ್ಮ ಕಾರುಗಳಲ್ಲಿ ರಸ್ತೆಯ ಮಧ್ಯದಲ್ಲಿ ಕುಳಿತಿರುವಾಗ ಟ್ಯಾಂಕ್‌ಗಳ ದಾಳಿಗೆ ಒಳಗಾದರು ಎಂದು ಝೆಲೆನ್ಸ್ಕಿ ಕೌನ್ಸಿಲ್‌ಗೆ ತಿಳಿಸಿದರು.

ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು (ಯುಎನ್‌ಎಸ್‌ಸಿ) ಉದ್ದೇಶಿಸಿ ಮಾತನಾಡಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಪಡೆಗಳು ನಮ್ಮ ದೇಶಕ್ಕೆ ಸೇವೆ ಸಲ್ಲಿಸಿದ ಎಲ್ಲರನ್ನು ಕೊಲ್ಲುತ್ತಿದೆ ಎಂದು ಹೇಳಿದರು.

ಉಕ್ರೇನ್ ಅಧ್ಯಕ್ಷರು ರಷ್ಯಾವು ಅಪರಾಧದಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪತ್ರಕರ್ತರಿಗೆ ಸಂಪೂರ್ಣ ಪ್ರವೇಶಕ್ಕಾಗಿ ಕರೆ ನೀಡಿದರು.

ಬುಚಾದಲ್ಲಿನ ಹತ್ಯೆಗಳ ಫೋಟೋಗಳನ್ನು ಪ್ರದರ್ಶಿಸಿ, ಉಕ್ರೇನ್ ಪಡೆಗಳು ಪ್ರಚಾರ ಮಾಡುತ್ತಿದೆ ಎಂಬ ಮಾಸ್ಕೋದ ಹೇಳಿಕೆಯನ್ನು ಉಲ್ಲೇಖಿಸಿದ ಝೆಲೆನ್ಸ್ಕಿ, ಇದು 2022, ಈ ಸಂದರ್ಭದಲ್ಲಿ ರಷ್ಯಾದ ಅಮಾನುಷ ಕೃತ್ಯಗಳನ್ನು ತೋರಿಸಲು, ಸಾಬೀತುಪಡಿಸಲು ಉಪಗ್ರಹ ಚಿತ್ರಗಳು ಸೇರಿದಂತೆ ನಿರ್ಣಾಯಕ ಪುರಾವೆಗಳಿವೆ ಎಂದರು.

ಯುಎನ್‌ಎಸ್‌ಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲವನ್ನೂ ಮಾಡಬೇಕಾಗಿದೆ ಎಂದು ಹೇಳುವ ಮೂಲಕ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಷ್ಯಾಕ್ಕೆ ವೀಟೋ ನೀಡುವ ತನ್ನ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಮತ್ತು ಸುಧಾರಿಸಲು ಅಧ್ಯಕ್ಷರು ಅಂತರರಾಷ್ಟ್ರೀಯ ಒಕ್ಕೂಟಕ್ಕೆ ಒತ್ತಾಯ ಮಾಡಿದರು.

ಬುಚಾ ನಗರದ ಮೇಲೆ ರಷ್ಯದ ದಾಳಿ, ಸರಣಿ ಸಾವುಗಳನ್ನ ಭಾರತ ಖಂಡಿಸುತ್ತದೆ

0

ಜಾಗತಿಕವಾಗಿ ಅಥವಾ ರಾಷ್ಟ್ರಮಟ್ಟದಲ್ಲಿ ಯಾವುದೇ ರೀತಿಯ ಸಂಕೀರ್ಣ ಪರಿಸ್ಥಿತಿ ಎದುರಾದಾಗ ಪ್ರತಿ ದೇಶಗಳೂ ತಮ್ಮದೇ ಆದ ಒಂದು ನೀತಿಯನ್ನು ಅಳವಡಿಸಿಕೊಳ್ಳುತ್ತವೆ. ಅದು ಆಯಾ ದೇಶದ ಜನರ ಸುರಕ್ಷತೆಗೆ ಪೂರಕವಾಗಿರುವಂಥದ್ದಾಗಿರುತ್ತದೆ ಎಂದು ಜೈಶಂಕರ್ ಅವರು ತಿಳಿಸಿದ್ದಾರೆ.

ರಷ್ಯಾ ಉಕ್ರೇನ್​ ಮೇಲೆ ಯುದ್ಧ ಸಾರಿ 39ದಿನಗಳೇ ಕಳೆದು ಹೋಗಿವೆ. ಅಲ್ಲಿನ ಪರಿಸ್ಥಿತಿ ಭೀಕರ. ರಷ್ಯಾ ಸೈನಿಕರಿಗೆ ಉಕ್ರೇನ್​ ಸೇನೆ, ನಾಗರಿಕರು, ಬೇರೆ ದೇಶಗಳ ಕೆಲವು ಸ್ವಯಂಸೇವಕರು ತೀವ್ರ ಪ್ರತಿರೋಧವನ್ನೂ ಒಡ್ಡುತ್ತಿದ್ದಾರೆ.

ಹೀಗಿದ್ದೂ, ಉಕ್ರೇನ್​ನಲ್ಲಿ ಆಗುತ್ತಿರುವ ಹಾನಿ, ನಷ್ಟ ಅಪಾರ. ಅದರಲ್ಲೂ ಕೀವ್​​ನಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಬುಚಾ ನಗರವಂತೂ ಯುದ್ಧ ಭೀಕರತೆಗೆ ಸಾಕ್ಷಿಯಾಗಿ ನಿಂತಿದೆ.

ಬಾಂಬ್​, ಶೆಲ್ಲಿಂಗ್​ ದಾಳಿಗೆ ಸುಟ್ಟು ಕರಕಲಾಗಿ ನಿಂತ ವಾಹನಗಳು ಇಲ್ಲಿ ರಸ್ತೆಯುದ್ದಕ್ಕೂ ಕಾಣುತ್ತವೆ. ರಸ್ತೆಯ ಮೇಲೆಲ್ಲ ಹೆಣಗಳು ಬಿದ್ದಿವೆ. ನೀರಿಲ್ಲ, ಗ್ಯಾಸ್​ ಸಂಪರ್ಕವಿಲ್ಲ. ಜನರು ಕಷ್ಟಕ್ಕೆ ಸ್ಪಂದಿಸುವವರಿಲ್ಲದಂತಾಗಿದೆ.

ಇದುವರೆಗೂ ಬುಚಾದಲ್ಲಿ 400ಕ್ಕೂ ಅಧಿಕ ನಾಗರಿಕರ ಹತ್ಯೆಯಾಗಿದ್ದಾಗಿ ವರದಿಯಾಗಿದೆ.

ಬುಚಾ ನಗರದಲ್ಲಿ ನಡೆಯುತ್ತಿರುವ ದಾಳಿ, ಸರಣಿ ಸಾವನ್ನು ಭಾರತದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್ ಖಂಡಿಸಿದ್ದಾರೆ.

ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ಉಕ್ರೇನ್​ನ ಬುಚಾ ನಗರದಲ್ಲಿ ನಡೆಯುತ್ತಿರುವ ಹತ್ಯೆಯನ್ನು ಭಾರತ ತೀವ್ರವಾಗಿ ವಿರೋಧಿಸುತ್ತದೆ. ಯುದ್ಧದ ಹೆಸರಲ್ಲಿ ನಡೆಯುತ್ತಿರುವ ಈ ಕೊಲೆಗಳ ಬಗ್ಗೆ ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ನಾವು ಆಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ.

ರಷ್ಯಾ ಮತ್ತು ಉಕ್ರೇನ್​ ನಡುವಿನ ಮಾತುಕತೆಯನ್ನು ನಾವು ಪ್ರೋತ್ಸಾಹಿಸುತ್ತೇವೆ. ತಕ್ಷಣವೇ ಯುದ್ಧ ನಿಲ್ಲಬೇಕು. ಈ ವಿಚಾರದಲ್ಲಿ ಭಾರತ ಯಾವುದೇ ರೀತಿಯ ಸಹಾಯ ಮಾಡಲು ಸಿದ್ಧ. ಇದನ್ನು ರಷ್ಯಾದ ವಿದೇಶಾಂಗ ಇಲಾಖೆ ಸಚಿವ ಲಾರ್ವೋವ್​ ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕೂಡ ಹೇಳಲಾಗಿದೆ ಎಂದು ಜೈಶಂಕರ್​ ತಿಳಿಸಿದರು.

ಬುಚಾದಲ್ಲಿ ನಡೆದ ಹತ್ಯಾಕಾಂಡವನ್ನು ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಟಿ.ಎಸ್.ತಿರುಮೂರ್ತಿಯವರೂ ಖಂಡಿಸಿದ್ದಾರೆ. ಯುಎನ್​​ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಉಕ್ರೇನ್​ನ ಬುಚಾದಲ್ಲಿ ನಡೆಯುತ್ತಿರುವ ನಾಗರಿಕರ ಹತ್ಯೆನ್ನು ನಾವು ಖಂಡಿಸುತ್ತೇವೆ. ಇದನ್ನು ಸ್ವತಂತ್ರ ತನಿಖೆಗೆ ಒಳಪಡಿಸಬೇಕು ಎಂದು ಹೇಳಿದ್ದರು.

75 ಕೆರೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯಕ್ಕೆ ಪ್ರಧಾನಿ ಸೂಚನೆ

0

ಪ್ರಧಾನಮಂತ್ರಿಗಳು ಎಲ್ಲರಿಗೂ ಒಂದೊಂದು ಟಾಸ್ಕ್ ನೀಡಿದ್ದು ರಾಜ್ಯ ಗಳಲ್ಲಿ 75 ಕೆರೆಕಟ್ಟೆಗಳನ್ನು ಅಭಿವೃದ್ಧಿಗೊಳಿಸಲು ಸೂಚಿಸಿದ್ದಾರೆ.

ಕೋಲಾರದಲ್ಲಿ ಕೆರೆಗೆಳ ಅಭಿವೃದ್ಧಿ ಗೆ ವಿಶೇಷ ಕಾರ್ಯಕ್ರಮ ಅವರ ನೇತೃತ್ವದಲ್ಲಿ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಇಂದು ನವದೆಹಲಿಯ ಕರ್ನಾಟಕ ಭವನದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲಾ ಪ್ರಮುಖರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಆರ್ಥಿಕ ಇಲಾಖೆಯ ಅನುಮೋದನೆಯಾಗಬೇಕು ಎಂಬ ವಿಷಯವನ್ನು ಗಮನಕ್ಕೆ ತರಲಾಯಿತು.

ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಿಂದ ಘೋಷಿಸುವ ಅಂತಿಮ ಘಟ್ಟದಲ್ಲಿದೆ ಎಂದು ತಿಳಿಸಿದರು.

ದೇಶಸೇವೆಯೇ ಬಿಜೆಪಿಯ ಪಯಣದ ಗುರಿ-ಅಮಿತ್ ಶಾ

0

ದೇಶಸೇವೆಯೇ ಭಾರತೀಯ ಜನತಾ ಪಾರ್ಟಿಯ ಪಯಣವಾಗಿದೆ. ಕಳೆದ 7 ದಶಕಗಳಿಂದ ಸಮಾಜದ ಬಡವರು, ರೈತರು, ತುಳಿತಕ್ಕೊಳಗಾದವರು ಮತ್ತು ಮಹಿಳೆಯರ ಆಶೋತ್ತರಗಳನ್ನು ಈಡೇರಿಸಲು ಪಕ್ಷ ಕೆಲಸ ಮಾಡುತ್ತಾ ಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ.

ಇಂದು ಭಾರತೀಯ ಜನತಾ ಪಕ್ಷದ 42ನೇ ಸಂಸ್ಥಾಪನಾ ದಿನ. ಈ ವೇಳೆಯಲ್ಲಿ ಪಕ್ಷದ ಸ್ಥಾಪನೆ, ಬೆಳವಣಿಗೆ ಬಗ್ಗೆ ಸರಣಿ ಟ್ವೀಟ್ ಗಳ ಮೂಲಕ ಅಮಿತ್ ಶಾ ಅವರು ತಮ್ಮ ಅಭಿಪ್ರಾಯಗಳನ್ನು ಬರೆದುಕೊಂಡಿದ್ದಾರೆ.

ಪಕ್ಷದ 42ನೇ ಸ್ಥಾಪನಾ ದಿನ ದಂದು ಬಿಜೆಪಿಯನ್ನು ಆಲದ ಮರವನ್ನಾಗಿ ಮಾಡಿದ ಎಲ್ಲ ಮಹಾನ್ ನಾಯಕರಿಗೆ ನಮನಗಳು. ನರೇಂದ್ರ ಮೋದಿ ಮತ್ತು ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿ ಜನರ ಕಲ್ಯಾಣ ಮತ್ತು ರಾಷ್ಟ್ರದ ಪ್ರಗತಿಯೊಂದಿಗೆ ಮುನ್ನಡೆಯುತ್ತಿದೆ. ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಸಂಸ್ಥಾಪನಾ ದಿನದ ಶುಭಾಶಯಗಳನ್ನು ಕೋರುತ್ತೇನೆ ಎಂದು ಶಾ ಅವರು ಬರೆದುಕೊಂಡಿದ್ದಾರೆ.

ಏಳು ದಶಕಗಳಿಂದ ವಂಚಿತರಾಗಿರುವ ದೇಶದ ಕೋಟ್ಯಂತರ ಬಡವರು, ರೈತರು, ದೀನದಲಿತರು ಮತ್ತು ಮಹಿಳೆಯರ ಆಕಾಂಕ್ಷೆಗಳನ್ನು ಈಡೇರಿಸುವ ಮಾಧ್ಯಮವಾಗಿ 2014 ರಿಂದ ಬಿಜೆಪಿ ಶ್ರಮಿಸುತ್ತಿದೆ.

ಬಿಜೆಪಿಯ ಈ 42 ವರ್ಷಗಳ ಪಯಣ ದೇಶಸೇವೆ, ರಾಷ್ಟ್ರೋತ್ಥಾನ ಮತ್ತು ರಾಷ್ಟ್ರೀಯ ಪುನರ್ ನಿರ್ಮಾಣದ ಪಯಣವಾಗಿದೆ. 2014ರಿಂದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯು ಕೋಟ್ಯಂತರ ಬಡವರು, ರೈತರು, ದೀನದಲಿತರು ಮತ್ತು ಮಹಿಳೆಯರ ಆಕಾಂಕ್ಷೆಗಳನ್ನು ಈಡೇರಿಸುವ ಪಕ್ಷವಾಗಿದೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಬಡವರಿಗೆ ಮನೆ, ವಿದ್ಯುತ್, ಗ್ಯಾಸ್, ಶೌಚಾಲಯ, ಬ್ಯಾಂಕ್ ಖಾತೆ, ಆರೋಗ್ಯ ವಿಮೆ ಕಲ್ಪಿಸುವ ಕೆಲಸ ಮಾಡಿದೆ. 2014ರ ಮೊದಲು ಎರಡು ಹೊತ್ತಿನ ಊಟ ಬಡವರ ಪಾಲಿಗೆ ದೊಡ್ಡ ಹೋರಾಟವಾಗಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಬಿಜೆಪಿ ಸರ್ಕಾರವು ಮನೆ, ವಿದ್ಯುತ್ ಸಂಪರ್ಕ, ಅಡುಗೆ ಅನಿಲ, ಶೌಚಾಲಯ, ಬ್ಯಾಂಕ್ ಖಾತೆ ಮತ್ತು ಆರೋಗ್ಯ ವಿಮೆಯನ್ನು ಒದಗಿಸುವ ಕೆಲಸ ಮಾಡುತ್ತಿದೆ. ದೇಶದ ಬಡವರಿಗೆ ಸುರಕ್ಷಿತ ಮತ್ತು ಗೌರವಯುತ ಜೀವನಕ್ಕಾಗಿ ಉಚಿತ ಪಡಿತರ ನೀಡುತ್ತಿದೆ ಎಂದು ಶಾ ಅವರು ವಿವರಿಸಿದ್ದಾರೆ.

ರಾಯಲ್ ಚಾಲೇಂಜರ್ಸ್ ಗೆ ಜಯದ ನಿಟ್ಟುಸಿರು

0

ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 4 ವಿಕೆಟ್ ಜಯ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 15ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ಗಳ ಜಯ ದಾಖಲಿಸಿತು. ಸೋಲಿನ ಸುಳಿಯಲ್ಲಿ ಸಿಲುಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭರ್ಜರಿಯಾಗಿ ಬ್ಯಾಟ್ ಬೀಸಿದ ದಿನೇಶ್ ಕಾರ್ತಿಕ್ (44) ಹಾಗೂ ಶಹಬಾಜ್ (45) ಗೆಲುವಿನ ರೂವಾರಿಯಾದರು ಆರ್ಸಿಬಿ ಪಾಲಿಗೆ ಟೂರ್ನಿಯಲ್ಲಿ ಇದು ಸತತ ಎರಡನೇ ಜಯ.

ಮಂಗಳವಾರ ವಾಂಖಡೆ ಸ್ಟೇಡಿಯಂನಲ್ಲಿ ಸೋತು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರುಗಳಲ್ಲಿ ಮೂರು ವಿಕೆಟ್ ಗೆ 169 ರನ್ ಗಳಿಸಿತು ಪ್ರತಿಯಾಗಿ ಹಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಓವರ್ಗಳಲ್ಲಿ 6 ವಿಕೆಟ್ಗೆ 173 ರನ್ ಬಾರಿಸಿ ಗೆಲುವಿನ ಸಂಭ್ರಮ ಆಚರಿಸಿತು.
ಆರ್ಸಿಬಿ ಆರಂಭಿಕರಾದ ಫ್ಲಾಫ್ ಡುಪ್ಲೆಸಿಸ್ (29) ಹಾಗೂ ಅನುಜ್ ರವತ್ (26) ಮೊದಲ ವಿಕೆಟ್ ಗೆ 55 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ, ವಿರಾಟ್ ಕೊಹ್ಲಿ (5) ಡೇವಿಡ್ ಮಿಲ್ಲಿ (0) ರೋಮರಿಯೊ ಶಫರ್ಡ್ (5) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರುವ ಮೂಲಕ ತಂಡವನ್ನು ಆತಂಕಕ್ಕೆ ದೂಡಿದರು ಆದರೆ ಅಹಮದ್ ಹಾಗೂ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗೆಲುವು ತಂದು ಕೊಟ್ಟರು ಹರ್ಷಲ್ ಪಟೇಲ್ ಸಿಕ್ಸರ್ ಸಮೇತ ಅಜೇಯ 9 ರನ್ ಬಾರಿಸಿದರು.

ರಾಜಸ್ಥಾನ ತಂಡದ ಯಜುವೇಂದ್ರ ಚಹಲ್ ಹದಿನೈದು ರನ್ಗಳಿಗೆ ಎರಡು ವಿಕೆಟ್ ಪಡೆದು ಮಿಂಚಿದರು ಉಳಿದವರಿಂದ ಅವರಿಗೆ ಉತ್ತಮ ಸಾಥ್ ಸಿಗಲಿಲ್ಲ.

ಆಡಳಿತಕ್ಕೆ ರೀತಿ ನೀತಿಗಳಿವೆ, ಅದರಂತೆ ನಮ್ಮ ಆಡಳಿತ-ಬೊಮ್ಮಾಯಿ

0

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ನವದೆಹಲಿಯಲ್ಲಿ ಇಂದು ಹಲಾಲ್ ಮತ್ತು ಹಿಜಾಬ್ ವಿಚಾರಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಅವರು ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು ಧಾರ್ಮಿಕ ವಿಚಾರವಾಗಿದೆ. ಕಾನೂನು ಎಲ್ಲರಿಗೂ ಒಂದೇ, ಕಾನೂನಿಗೆ ಎಲ್ಲರೂ ತಲೆಬಾಗಿ ನಡೆಯಲೇಬೇಕು. ನಮ್ಮ ಸರ್ಕಾರ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಲು ಪ್ರಾಮುಖ್ಯತೆ ನೀಡುತ್ತದೆ ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಸಮಾಜದಲ್ಲಿ ಶಾಂತಿ ಕೆಡುತ್ತಿರುವ ಬಗ್ಗೆ ಸರ್ಕಾರ ಕೈ ಕಟ್ಟಿ ಕುಳಿತಿದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆಗೆ ಉತ್ತರಿಸಿದ ಮಾನ್ಯ ಮುಖ್ಯಮಂತ್ರಿ ಅವರು, ಕುಮಾರಸ್ವಾಮಿ ಏನಾದರೂ ಅಂದುಕೊಳ್ಳಲಿ. ವೈಯಕ್ತಿಕ ವಿಚಾರಗಳನ್ನು ಜನ ತೀರ್ಮಾನಿಸುತ್ತಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಮಾನ್ಯ ಮುಖ್ಯಮಂತ್ರಿ ಅವರು ಹೇಳಿದ್ದಾರೆ.

ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ಹಲವಾರು ವಿಚಾರಗಳು ಬಂದಾಗ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದೇವೆ. ಹೇಳಿಕೆ ಕೊಟ್ಟರಷ್ಟೇ ಆಡಳಿತ ಅಲ್ಲ. ಆಡಳಿತ ಮಾಡಲು ರೀತಿ ನೀತಿಗಳಿವೆ. ಅದರಂತೆ ನಾವು ಆಡಳಿತ ಮಾಡುತ್ತೇವೆ ಎಂದು ಬಸವರಾಜ್ ಬೊಮ್ಮಾಯಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಚಿಕ್ಕಮಗಳೂರು ಕಡೆ ಮತ್ತೆ ಮಳೆಯಾಗಲಿದೆ

0

ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ನಾಲ್ಕು ದಿನ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ, ಮಲೆನಾಡು, ಬೆಂಗಳೂರು, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಇಂದಿನಿಂದ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇಂದು ಬೆಂಗಳೂರು, ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ, ರಾಮನಗರ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನ ಹಲವೆಡೆ ಇಂದಿನಿಂದ 4 ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿಎಂಟಿಸಿಯಲ್ಲಿ ಪ್ರಯಾಣಿಕರಿಗೆ ಮೊಬೈಲ್ ಪಾಸ್ ಸೌಲಭ್ಯ ಜಾರಿಗೆ

0

ಸಿಲಿಕಾನ್ ಸಿಟಿ ಜನರಿಗೆ ಬಿಎಂಟಿಸಿ ಸಂತೋಷದ ಸಮಾಚಾರ ನೀಡಿದೆ. ಪ್ರಯಾಣಿಕರಿಗೆ ಮೊಬೈಲ್ ಪಾಸ್ ಜಾರಿಗೆ ತರಲು ಬಿಎಂಟಿಸಿ ಮುಂದಾಗಿದೆ. ಇಂದು ಮೊಬೈಲ್ ಪಾಸ್ ಗೆ ಚಾಲನೆ ನೀಡಲಿದೆ.

ಬಿಎಂಟಿಸಿಯ ಮೊಬೈಲ್ ಪಾಸ್ ಅನ್ನು ಪ್ರಯಾಣಿಕರು ಮೊಬೈಲ್ ಅಪ್ಲಿಕೇಶನ್ ಮೂಲಕ ಪಾಸ್ ಖರೀದಿ ಮಾಡಬಹುದಾಗಿದೆ. ಮೊಬೈಲ್ ನಲ್ಲೇ ಪಾಸ್ ತೋರಿಸಿ ಬಿಎಂಟಿಸಿ ಬಸ್ ನಲ್ಲಿ ಇನ್ಮುಂದೆ ಪ್ರಯಾಣಿಸಬಹುದು.

ಮೊಬೈಲ್‌ Appನನ್ನು ಬಸ್‌ನ ನಿರ್ವಾಹಕರ ಬಳಿಯ ಎಲೆಕ್ಟ್ರಾನಿಕ್‌ ಟಿಕೆಟ್‌ ಮಿಷನ್‌ನಲ್ಲಿ ಸ್ಕ್ಯಾನ್‌ ಮಾಡಿ ಪ್ರಯಾಣಿಬಹುದಾಗಿದೆ. ಇದರಿಂದ ಬಸ್‌ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್‌ ಖರೀದಿಸುವ ಅಗತ್ಯವಿಲ್ಲವಾಗಲಿದೆ. ಇಷ್ಟು ದಿನ ಪೇಪರ್​ ರೂಪದಲ್ಲಿ ಬಿಎಂಟಿಸಿ ಬಸ್​ ನೀಡಲಾಗುತಿತ್ತು.ಆದರೆ, ಈಗ ಬಸ್ ಪಾಸ್​ ನನ್ನು ಮೊಬೈಲ್​ನಲ್ಲೇ ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡಬಹುದಾಗಿದೆ.