Wednesday, February 25, 2026
Wednesday, February 25, 2026
Home Blog Page 1635

ಸದೃಢ ಆರ್ಥಿಕತೆ , ಸುಸ್ಥಿರ ಅಭಿವೃದ್ಧಿಗೆ ಆಹಾರ ತಂತ್ರಜ್ಞಾನ ಮುಖ್ಯ -ಡಾ. ರವಿಶಂಕರ್ ಗೋಕರೆ

0

ಆಹಾರ ತಂತ್ರಜ್ಞಾನ ಹಾಗೂ ಕೃಷಿ ಅಧ್ಯಯನ ಒಂದಕ್ಕೊಂದು ಅವಲಂಬಿತವಾಗಿದೆ. ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ವಿಶ್ವ ಬ್ಯಾಂಕ್ ನ ಅಂತರಾಷ್ಟ್ರೀಯ ಸಲಹೆಗಾರ ಡಾ. ರವಿಶಂಕರ್ ಗೋಕರೆ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಜೀವರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಇತ್ತೀಚೆಗೆ ‌ಬಸವ ಭವನದಲ್ಲಿ‌ ‘ಜೀವರಸಾಯನ ಶಾಸ್ತ್ರ ಸಂಶೋಧನೆಯ ಇತ್ತೀಚಿನ ಪ್ರವೃತ್ತಿಗಳು’ ಕುರಿತು ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಆಹಾರ ತಂತ್ರಜ್ಞಾನವು ಅನ್ವಯಿಕ ಶಾಸ್ತ್ರವಾಗಿದ್ದು, ದೇಶಕ್ಕೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಆಹಾರ ಸಂರಕ್ಷಣೆ, ಪೌಷ್ಟಿಕಾಂಶ ವೃದ್ಧಿ, ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಂಶೋಧನೆಗಳ ಮೂಲಕ ಸುಸ್ಥಿರ ಅಭಿವೃದ್ಧಿಗೆ ಸಹಕಾರಿಯಾಗಲಿದೆ.‌

ಕುವೆಂಪು ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಆಹಾರ ತಂತ್ರಜ್ಞಾನ ವಿಭಾಗವು ಈ ನಿಟ್ಟಿನಲ್ಲಿ ನುರಿತ ತಂತ್ರಜ್ಞರನ್ನು ತಯಾರು ಮಾಡುವತ್ತ ಕಾರ್ಯೋನ್ಮುಖವಾಗಲಿ ಎಂದು ಆಶಿಸಿದರು.

ಕುಲಪತಿ‌ ಪ್ರೊ.‌ ಬಿ. ಪಿ. ವೀರಭದ್ರಪ್ಪ ಮಾತನಾಡಿ, ದೇಶದಲ್ಲಿ ವ್ಯವಸಾಯಕ್ಕೆ ಬಳಕೆಯಾಗದ ಅನುಪಯುಕ್ತ ಭೂಮಿಯ ಪ್ರಮಾಣವು ಹೆಚ್ಚಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಹಾರ ತಂತ್ರಜ್ಞಾನ ಸಂಶೋಧನೆಗಳ ಮೇಲಿನ ನೀರಿಕ್ಷೆ ಹೆಚ್ಚಾಗಿದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಪ್ರೊ. ಮಧುಸೂದನ, ಡಾ. ರಮಾನಂದ್ ನಾಡಿಗ, ಮಂಗಳೂರು ವಿವಿಯ ಪ್ರೊ. ಮಂಜುನಾಥ್ ಹಾಗೂ ಪ್ರೊ. ಗೋಪಾಲ್ ಮರಾಠೆ ಮಾತನಾಡಿದರು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪ್ರಾರಂಭಿಸಲಾಗಿರುವ ಸ್ನಾತಕೋತ್ತರ ಆಹಾರ ತಂತ್ರಜ್ಞಾನ ವಿಭಾಗವನ್ನು ಈ ಸಂದರ್ಭದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.

ಕುಲಸಚಿವೆ ಜಿ.‌ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ.‌ಎಸ್. ಕೆ. ನವೀನ್ ಕುಮಾರ್, ಜೀವರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನೀಲಗುಂದ್, ಪ್ರೊ. ನಿರಂಜನ್, ಪ್ರೊ. ತಿಪ್ಪೇಸ್ವಾಮಿ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಧಾನಿಯವರಿಂದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸೂಚನೆ

0

ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೂಡಲೇ ಕ್ರಮಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ ಖಾಸಗಿ ವಲಯಕ್ಕೆ ಉತ್ತೇಜನ ನೀಡುವಂತೆ ಪ್ರಧಾನಮಂತ್ರಿ ಅವರು ಖಾಸಗಿ ವಲಯವನ್ನು ಕೋರಿದ್ದಾರೆ ಎಂದು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ತಿಳಿಸಿದ್ದಾರೆ.

ಏಪ್ರಿಲ್ 2 ರಂದು ನಡೆದ ಸಭೆಯಲ್ಲಿ ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿನ ಉದ್ಯೋಗದ ಬಗ್ಗೆ ಗಮನ ಹರಿಸುವಂತೆ ಪ್ರಧಾನಿ ಕೇಳಿಕೊಂಡರು. ಗೌಬಾ ಅವರು ಪ್ರಧಾನ ಮಂತ್ರಿಗಳ ಸಲಹೆಗಳನ್ನು ಜಾರಿಗೆ ತರಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಏಪ್ರಿಲ್ 4ರ ಪತ್ರದಲ್ಲಿ ಸಣ್ಣಪುಟ್ಟ ಅಪರಾಧ ಮತ್ತು ಉಲ್ಲಂಘನೆ ಪ್ರಕರಣಗಳನ್ನು ನಿರ್ಲಕ್ಷಿಸಬೇಕು ಎಂದು ಉಲ್ಲೇಖಿಸಲಾಗಿದೆ. ಇಂತಹ ಎಲ್ಲ ನಿಬಂಧನೆಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ್ದಾರಂತೆ. ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಪತ್ರದಲ್ಲಿ ಕೋರಲಾಗಿದೆ.

ಗೃಹಸಚಿವರ ಮನೆಗೆ ಪೊಲೀಸ್ ಭದ್ರತೆ

0

ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಗೊಂದಲದ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವರ ಮನೆಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಗೃಹ ಸಚಿವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯಮಹಲ್ ಬಳಿ ಇರುವ ಗೃಹ ಸಚಿವರ ನಿವಾಸಕ್ಕೆ ಪೊಲೀಸರಿಂದ ಭಾರಿ ಭದ್ರತೆ ಕಲ್ಪಿಸಲಾಗಿದೆ.

ಜೆ.ಜೆ.ನಗರದಲ್ಲಿ ನಡೆದಿದ್ದ ಚಂದ್ರು ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಉರ್ದು ಭಾಷೆ ಮಾತನಾಡಿಲ್ಲ ಎಂಬ ಕಾರಣಕ್ಕೆ ಚೂರಿಯಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಆತ ಒಬ್ಬ ದಲಿತ ಯುವಕ ಎಂದು ಹೇಳಿಕೆ ನೀಡಿದ್ದರು.

ಗೃಹ ಸಚಿವರ ಬೇಜವಾಬ್ದಾರಿಯ ಹೇಳಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.

ನಾವು ಮಂಡ್ಯದಲ್ಲಿ ಸೌಹಾರ್ದದಿಂದ್ದೇವೆ ಮುಸ್ಕಾನ್ ತಂದೆ ಹುಸೇನ್ ಖಾನ್ ಪ್ರತಿಕ್ರಿಯೆ

0

ಹಿಜಾಬ್‌ ವಿವಾದದ ಪ್ರತಿಭಟನೆ ನಡೆಯುವ ವೇಳೆ ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಭಾರೀ ಸುದ್ದಿ ಮಾಡಿದ್ದಳು. ಆಕೆಯ ಹೆಸರು ಮುಸ್ಕಾನ್.

ಇದೀಗ ಇದೇ ವಿದ್ಯಾರ್ಥಿನಿ ಹೆಸರು ಮತ್ತೆ ಸುದ್ದಿಯಲ್ಲಿದೆ. ಅದು ಜಗತ್ತಿನ ಮೋಸ್ಟ್ ವಾಟೆಂಡ್‌ ಉಗ್ರ ಸಂಘಟನೆ ಆಲ್ ಖೈದಾದ ಉಗ್ರನೊಬ್ಬ ಈ ವಿದ್ಯಾರ್ಥಿನಿ ಮುಸ್ಕಾನ್‌ಳನ್ನು ಹಾಡಿ ಹೊಗಳಿದ್ದಾರೆ. ಅಲ್ ಖೈದಾ ಮುಖ್ಯಸ್ಥ ಅಮನ್-ಅಲ್-ಜವಾಹಿರಿಯು ಮುಸ್ಕಾನ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದೇ ಇದೀಗ ಮತ್ತೆ ಚರ್ಚೆಗೆ ಕಾರಣವಾಗಿದೆ.

ಅಲ್ ಖೈದಾ ಉಗ್ರನ ಹೇಳಿಕೆಗೆ
ಮಂಡ್ಯದಲ್ಲಿ ಮೊಳಗಿದ “ಜೈ ಶ್ರೀರಾಮ್” ಎಂಬ ಘೋಷಣೆಗೆ ಪ್ರತಿಯಾಗಿ “ಅಲ್ಲಾಹು ಅಕ್ಬರ್” ಎಂದು ಕೂಗಿದ ಮುಸ್ಕಾನ್ ಮುಸ್ಲಿಂ ಸಮುದಾಯಕ್ಕೆ ರಾತ್ರೋ ರಾತ್ರಿ ಹೀರೋ ಆದಳು. ಹಲವು ಮುಸ್ಲಿಂ ಸಂಘಟನೆಗಳು, ಮುಸ್ಲಿಂ ರಾಜಕಾರಣಿಗಳು ಲಕ್ಷ ಲಕ್ಷ ಬಹುಮಾನ ನೀಡಿದ್ದರು.

ಅಲ್ ಖೈದಾ ಮುಖ್ಯಸ್ಥ ಅಮನ್-ಅಲ್-ಜವಾಹಿರಿಯು ಮುಸ್ಕಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಈ ಸಂಬಂಧ ಆಲ್ ಖೈದಾ ಮುಖವಾಣಿ ಅಸ್-ಸಾಹಬ್ ಎಂಬ ಸೋಷಿಯಲ್ ಮೀಡಿಯಾದಲ್ಲಿ ಅಮನ್-ಅಲ್- ಜವಾಹಿರಿ ಮಾತನಾಡಿದ್ದಾರೆ. 9 ನಿಮಿಷಗಳ ವಿಡಿಯೋದಲ್ಲಿ “ಮುಸ್ಕಾನ್ ಮೊಳಗಿಸಿರುವ ಘೋಷಣೆ ಮೆಚ್ಚುಗೆ ಪಡುವಂತದ್ದು, ಅವಳು ಜಿಹಾದ್ ಚೈತನ್ಯವನ್ನು ಹುರಿದುಂಬಿಸಿದ್ದಾಳೆ. ಮುಸ್ಕಾನ್‌ಳ ಘೋಷಣೆ ನನ್ನಲ್ಲಿ ಸ್ಪೂರ್ತಿ ತುಂಬಿದೆ. ಆಕೆಗಾಗಿ ನಾನು ಕೆಲವು ಸಾಲುಗಳ ಕವಿತೆ ಬರೆದಿದ್ದೇನೆ ಎಂದು ಹೇಳಿದ್ದಾನೆ.

ಇನ್ನು ಉಗ್ರನ ಹೇಳಿಕೆ ಬಗ್ಗೆ ವಿದ್ಯಾರ್ಥಿನಿ ತಂದೆ ಹುಸೇನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಅಲ್‌ಖೈದಾ ಏನು ಅಂತ ನಮಗೆ ಗೊತ್ತಿಲ್ಲ. ಮಾಧ್ಯಮದ ಮೂಲಕವೇ ನನಗೂ ಗೊತ್ತಾಗಿದ್ದು. ಈ ರೀತಿ ಮಾಡುತ್ತಿರುವುದು ತಪ್ಪು. ನಮ್ಮ ನಮ್ಮಲ್ಲಿ ತಂದು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಮುಸ್ಕಾನ್‌ ತಂದೆ ಹುಸೇನ್‌ ಖಾನ್‌ ಹೇಳಿದ್ದಾರೆ.

ನಮಗೆ ಅವರು ಯಾರು ಅಂತಾನೇ ಗೊತ್ತಿಲ್ಲ. ನಾವು ಅವರ ಬಗ್ಗೆ ಏನು ಹೇಳೋದು? ಇದೇ ಫಸ್ಟ್ ಟೈಮ್ ನಾವು ನೋಡಿದ್ದು ಅವರನ್ನು. ಅವರು ಏನೋ ಏನೋ ಮಾತನಾಡ್ತಾರೆ. ನಾವು ಮಂಡ್ಯದಲ್ಲಿ ಹಿಂದೂ ಮುಸ್ಲಿಮರು ಅಣ್ಣ-ತಮ್ಮಂದಿರ ರೀತಿ ಪ್ರೀತಿಯಿಂದ ಇದ್ದೇವೆ. ಈ ವಿಚಾರವಾಗಿ ನಮಗೆ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದೇನೆ ಎಂದಿದ್ದಾರೆ.

ಈ ರೀತಿಯ ಘಟನೆಗಳು ಕುಟುಂಬದಲ್ಲಿ ಶಾಂತಿಯನ್ನು ಹದಗೆಡಿಸುತ್ತದೆ. ಅಲ್ ಖೈದಾ ಉಗ್ರ ಸಂಘಟನೆ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಯಾವುದೇ ರೀತಿಯ ತನಿಖೆಯನ್ನು ನಡೆಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಉಗ್ರ ಸಂಘಟನೆ ಮುಖ್ಯಸ್ಥನ ವಿಡಿಯೋ ಬಗ್ಗೆ ನಮಗೆ ಏನು ತಿಳಿದಿಲ್ಲ. ಇದೇ ಮೊದಲ ಬಾರಿಗೆ ಮುಸ್ಕಾನ್ ಬಗ್ಗೆ ಅಲ್ ಖೈದಾ ಉಗ್ರ ಸಂಘಟನೆ ಮಾತನಾಡಿರುವ ವಿಡಿಯೋ ನೋಡುತ್ತೇವೆ. ಅರೇಬಿಕ್ ನಲ್ಲಿ ಅವರೇನೋ ಹೇಳಿದ್ದಾರೆ. ಭಾರತದಲ್ಲಿ ನಾವೆಲ್ಲರೂ ನಂಬಿಕೆ, ಭ್ರಾತೃತ್ವದಲ್ಲಿ ನೆಲೆಸಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ನೌಕರರಿಗೆ ಡಿಎ ಜೊತೆ ಮನೆಬಾಡಿಗೆ ಭತ್ಯೆ ಹೆಚ್ಚಳ

0

ನರೇಂದ್ರ ಮೋದಿ ಸರ್ಕಾರ ನೇತೃತ್ವದ ಕೇಂದ್ರ ನೌಕರರ ಇತ್ತೀಚಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ.

ಡಿಎ ಒಟ್ಟಾರೆ ಶೇ.3ರಿಂದ ಶೇ.34ರಷ್ಟು ಏರಿಕೆಯಾಗಿದೆ. ಇದೀಗ ಕೇಂದ್ರ ಸರ್ಕಾರ ಶೀಘ್ರದಲ್ಲೇ ಉದ್ಯೋಗಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಗಲಿದೆ.

ಇದರಿಂದ ಅವರ ಸಂಬಳ ಮತ್ತಷ್ಟು ಹೆಚ್ಚಾಗಬಹುದು.
ಮೋದಿ ಸರ್ಕಾರವು ಈ ತಿಂಗಳು ನೌಕರರಿಗೆ ವೇತನ ಹೆಚ್ಚಳದ ಬಹುಮಾನವನ್ನ ನೀಡಲಿದೆ. ಡಿಎ ನಂತರ ಇದೀಗ ಮನೆ ಬಾಡಿಗೆ ಭತ್ಯೆ ಹಾಗೂ ಇತರೆ ಭತ್ಯೆಗಳನ್ನ ಹೆಚ್ಚಿಸಲು ಸರ್ಕಾರ ಮುಂದಾಗಿರುವಂತಿದೆ.

ಡಿಎ ಹೆಚ್ಚಳದ ನಂತರ ಎಚ್‌ಆರ್‌ಎ ಹೆಚ್ಚಾಗುವ ನಿರೀಕ್ಷೆಯೂ ಹೆಚ್ಚಿದೆ.
ಕಳೆದ ವರ್ಷ ಜುಲೈನಲ್ಲಿ ಎಚ್‌ಆರ್‌ಎ ಹೆಚ್ಚಿಸಲಾಗಿತ್ತು.

ಆ ನಂತರ ಡಿಎ ಕೂಡ ಶೇ.25ರಿಂದ ಶೇ.28ಕ್ಕೆ ಏರಿಕೆಯಾಗಿದೆ. ಈಗ ಡಿಎನ್‌ಎಯನ್ನು 34% ಕ್ಕೆ ಹೆಚ್ಚಿಸಲಾಗಿದೆ‌‌.

ಎಚ್‌ಆರ್‌ಎಯನ್ನು ಸಹ ಮಾರ್ಪಡಿಸಬಹುದು.
ಸರ್ಕಾರಿ ನೌಕರರಿಗೆ ಅವರು ಕೆಲಸ ಮಾಡುವ ನಗರದಿಂದ HRA ನಿರ್ಧರಿಸಲಾಗುತ್ತದೆ.

X, Y, Z ನಗರಗಳು ಮೂರು ವಿಭಾಗಗಳನ್ನು ಹೊಂದಿವೆ. X ವರ್ಗದ ನಗರಗಳಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಸರ್ಕಾರಿ ನೌಕರರು HRAನಲ್ಲಿ 3 ಶೇಕಡಾ ಹೆಚ್ಚಳವನ್ನು ಕಾಣುವ ಸಾಧ್ಯತೆಯಿದೆ ಎಂದು ಮಾಹಿತಿ ಲಭ್ಯವಾಗಿದೆ.

ಪ್ರಸ್ತುತ ಈ ನಗರಗಳಲ್ಲಿನ ಉದ್ಯೋಗಿಗಳು ಮೂಲ ವೇತನದ 27%ರಷ್ಟು HRA ಅನ್ನು ಪಡೆಯುತ್ತಾರೆ. ವೈ ವರ್ಗದ ನಗರಗಳಿಗೆ ಈ ಹೆಚ್ಚಳವು ಶೇಕಡಾ 2ರವರೆಗೆ ಇರುತ್ತದೆ. ಈ ಪ್ರದೇಶಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು 18-20% HRA ಪಡೆಯುತ್ತಾರೆ.

Z ವರ್ಗದ ನಗರಗಳು ತಮ್ಮ HRA ಅನ್ನು ಶೇಕಡಾ 1ರಷ್ಟು ಹೆಚ್ಚಿಸಬಹುದು. ಪ್ರಸ್ತುತ, ಈ ಪ್ರದೇಶಗಳಲ್ಲಿನ ಉದ್ಯೋಗಿಗಳಿಗೆ 9-10 ಪ್ರತಿಶತದಷ್ಟು HRA ಪಾವತಿಸಲಾಗುತ್ತದೆ.

ಎನ್ಇಪಿ ಪಠ್ಯದ ಜೊತೆ ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೂ ಮಹತ್ವ ನೀಡಿದೆ

0

ಅಂತರ್‌ ಶಿಸ್ತೀಯ ಅಧ್ಯಯನಕ್ಕೆ ಒತ್ತು ನೀಡಿರುವ ನೂತನ ಶಿಕ್ಷಣ ನೀತಿಯಲ್ಲಿ ಪಠ್ಯದ ಜೊತೆಗೆ ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಅವಕಾಶವಿದೆ.

ದೇಶದ ಕ್ರೀಡಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಲಿದೆ ಎಂದು ದೇಶದ ಪ್ರಥಮ ದೈಹಿಕ ಶಿಕ್ಷಣ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾದ ಚೆನೈನ ವೈಎಂಸಿಎ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಜಾರ್ಜ್ ಅಬ್ರಹಾಂ ವಿಶ್ವಾಸ ವ್ಯಕ್ತಪಡಿಸಿದರು.

ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಇತ್ತೀಚೆಗೆ ವಿಶ್ವವಿದ್ಯಾಲಯದ ಹಿರೇಮಠ್ ಸಭಾಂಗಣದಲ್ಲಿ “ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳ ಇತ್ತೀಚಿನ ಬೆಳವಣಿಗೆಗಳು” ಕುರಿತು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ಸಿಗುತ್ತಿಲ್ಲ. ಕ್ರೀಡಾ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಒದಗಿಸುವಲ್ಲಿ ಸರ್ಕಾರಗಳು ಆಸಕ್ತಿ ತೋರುತ್ತಿಲ್ಲ ಎಂಬ ಅಪವಾದವಿತ್ತು. ಆದರೆ, ನೂತನ ಶಿಕ್ಷಣ ನೀತಿ ಈ ಅಪವಾದವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಪ್ರಾಥಮಿಕ ಹಂತದಿಂದಲೇ ಅಮೂಲಾಗ್ರ ಬದಲಾವಣೆ ತರಲಿದೆ ಎಂದರು.

ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯವಂತ ಮಾನವ ಸಂಪನ್ಮೂಲ ಅತ್ಯಗತ್ಯ. ಇಂಥಹಾ ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಕೌಶಲ್ಯಗಳು ಅಗತ್ಯ. ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು, ಯೋಗ, ಮತ್ತು ಇವುಗಳ ಬಗ್ಗೆ ಸಾಂಸ್ಥಿಕವಾಗಿ ತರಬೇತಿ ನೀಡುವ ಕ್ರೀಡಾ ಸಂಸ್ಥೆಗಳು, ದೈಹಿಕ ಶಿಕ್ಷಣ ವಿಭಾಗಗಳು ಸದೃಢ ಸಮಾಜ ನಿರ್ಮಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಡಾ. ಜೆರಾಲ್ಡ್ ಡಿಸೌಜ, ಡಾ. ವೆಂಕಟೇಶ್, ಡಾ. ಕೃಷ್ಣಶರ್ಮ, ಡಾ. ಜಯರಾಮನ್, ಡಾ. ಮಲ್ಲಿಕಾರ್ಜುನಯ್ಯ ಮಾತನಾಡಿದರು. ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಗಜಾನನ ಪ್ರಭು, ಡಾ. ಎನ್. ಡಿ. ವಿರೂಪಾಕ್ಷ, ಡಾ. ರವೀಂದ್ರ ಗೌಡ, ವಿವಿಧ ವಿಶ್ವವಿದ್ಯಾಲಯಗಳ ಸುಮಾರು 150ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಉಕ್ರೇನ್ ಪ್ರಜೆಗಳ ಬಟ್ಟೆ ಕಳಚಿ ರಷ್ಯನ್ನರಿಂದ ತಪಾಸಣೆ

0

ರಷ್ಯಾ ವಶಪಡಿಸಿಕೊಂಡಿರೋ ಪ್ರದೇಶಗಳಿಂದ ಜನರನ್ನ ಸ್ಥಳಾಂತರ ಮಾಡ್ತಾ ಇರೋ ಅಂತಾರಾಷ್ಟ್ರೀಯ ರೆಡ್‌ಕ್ರಾಸ್‌ ಸಂಸ್ಥೆ 500 ಜನರನ್ನ ಯುಕ್ರೇನ್‌ನ ಜಪೋರಿಝ್ಝಿಯಾಗೆ ಕರೆತಂದಿದೆ.

ಏಳು ಬಸ್‌ ಮತ್ತು ಕನಿಷ್ಠ 40 ಕಾರುಗಳಲ್ಲಿ ಇವರನ್ನ ಸ್ಥಳಾಂತರ ಮಾಡಿದೆ.

ಇವರೆಲ್ಲ ಮಾರಿಯೋಪೌಲ್‌ನ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಆದರೆ ಇವರನ್ನು ಮಾರಿಯೋಪೌಲ್‌ನಿಂದಲೇ ನೇರವಾಗಿ ಕರೆತಂದಿಲ್ಲ.

ಬದಲಾಗಿ ಇವರೆಲ್ಲ ಪಕ್ಕದ ಬೆರ್ಡಿಯನ್ಸ್ಕ್‌ ನಗರದಲ್ಲಿ ಇದ್ದರು ಎಂದು ಗೊತ್ತಾಗಿದೆ. ಇವರನ್ನು ಕರೆದುಕೊಂಡು ಬರೋವಾಗ ಹಲವು ಚೆಕ್‌ ಪಾಯಿಂಟ್‌ಗಳಲ್ಲಿ ರಷ್ಯಾ ಸೇನೆ ಇವರನ್ನ ಬಟ್ಟೆ ಕಳಚಿ ಯುಕ್ರೇನ್‌ ಸೇನೆಯ ಟ್ಯಾಟೂ ಅಥವಾ ಆಯುಧಗಳೇನಾದರೂ ಇತ್ತಾ ಎಂದು ಚೆಕ್‌ ಮಾಡಿದೆ ಎಂದು ವರದಿಯಾಗಿದೆ.

ಮಾರಿಯೋಪೌಲ್‌ನಲ್ಲಿ ಇನ್ನೂ ಸಾವಿರಾರು ಜನ ಸಿಲುಕಿದ್ದು, ಅಲ್ಲಿಗೆ ಹೋಗೋಕೆ ರಷ್ಯಾ ಸೇನೆ ಬಿಡುತ್ತಿಲ್ಲ ಎಂದು ರೆಡ್‌ ಕ್ರಾಸ್‌ ಸಂಸ್ಥೆ ಹೇಳಿದೆ.

ವಾರಕ್ಕೆರಡು ಬಾರಿ ಮಾಸ್ಕೋಗೆ ಹಾರಾಟ ನಡೆಸುತ್ತಿದ್ದ ವಿಮಾನ ಸಂಚಾರ ಬಂದ್

0

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಬೆದರಿಕೆಯ ಗ್ರಹಿಕೆ ಹೆಚ್ಚಿದ ಕಾರಣ ವಿಮಾ ರಕ್ಷಣೆಯನ್ನು ಪಡೆಯಲು ಸಾಧ್ಯವಾಗದ ಕಾರಣ ಏರ್ ಇಂಡಿಯಾ ದೆಹಲಿಯಿಂದ ಮಾಸ್ಕೋಗೆ ವಾರಕ್ಕೆ ಎರಡು ಬಾರಿ ಹಾರಾಟವನ್ನು ರದ್ದುಗೊಳಿಸಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

ಟಾಟಾ ಗ್ರೂಪ್‌ನಿಂದ ನಿಯಂತ್ರಿಸಲ್ಪಡುವ ಭಾರತೀಯ ಧ್ವಜ ವಾಹಕವು ದೆಹಲಿ-ಮಾಸ್ಕೋ-ದೆಹಲಿ ಮಾರ್ಗದಲ್ಲಿ ಟಿಕೆಟ್‌ಗಳ ಮಾರಾಟವನ್ನು ನಿಲ್ಲಿಸಿದೆ ಮತ್ತು ವಿಮಾನದ ಭವಿಷ್ಯವು ಅಸ್ಪಷ್ಟವಾಗಿದೆ ಎಂದು ರಷ್ಯಾದ ರಾಯಭಾರ ಕಚೇರಿ ಬುಧವಾರ ವರದಿ ಮಾಡಿದೆ.

ಆತ್ಮೀಯ ಸಹ ನಾಗರಿಕರೇ, ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ದೆಹಲಿ- ಮಾಸ್ಕೋ-ದೆಹಲಿ ಮಾರ್ಗದಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದೆ ಎಂದು ನಾವು ನಿಮ್ಮ ಗಮನವನ್ನು ಸೆಳೆಯುತ್ತೇವೆ, ಈ ಏರ್‌ಲೈನ್‌ನ ರಷ್ಯಾಕ್ಕೆ ವಿಮಾನಗಳ ಪುನರಾರಂಭದ ನಿರೀಕ್ಷೆಗಳು ಸದ್ಯಕ್ಕೆ ಅನಿಶ್ಚಿತವಾಗಿವೆ.

ಏರ್ ಇಂಡಿಯಾ ಕಚೇರಿ ಪ್ರಕಾರ, ರದ್ದಾದ ವಿಮಾನಗಳ ಸಂಪೂರ್ಣ ಮರುಪಾವತಿಗೆ ಪ್ರಯಾಣಿಕರು ಅರ್ಹರಾಗಿರುತ್ತಾರೆ ಎಂದು ರಷ್ಯಾದ ರಾಯಭಾರ ಕಚೇರಿ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಟಾಸ್ ತಿಳಿಸಿದೆ.

ಇದು ಅಮೃತಕಾಲ ಭಾರತಕ್ಕೆ ಹೊಸ ಅವಕಾಶಗಳು ತೆರೆದಿವೆ -ಮೋದೀಜಿ

0

ರಷ್ಯಾ, ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತ ತಳೆದಿರುವ ತಟಸ್ಥ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಯುದ್ಧದ ವಿಷಯದಲ್ಲಿ ಇಡೀ ವಿಶ್ವವೇ ಇಬ್ಭಾಗವಾಗಿದ್ದರೂ ಜಾಗತಿಕ ಒತ್ತಡಕ್ಕೆ ಮಣಿಯದೆ ತಟಸ್ಥ ಧೋರಣೆ ತಳೆಯುವ ಮೂಲಕ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ.

ಇದು ಭಾರತ ಹಿಂದೆಂದಿಗಿಂತಲೂ ಹೆಚ್ಚು ಸದೃಢವಾಗಿದೆ ಎಂಬುದನ್ನು ತೋರಿಸುತ್ತಿದೆ ಎಂದು ಮೋದೀಜಿ ಅವರು ಹೇಳಿದ್ದಾರೆ.

ಬಿಜೆಪಿ 42ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಕ್ಷದ ಸಂಸದರು, ಶಾಸಕರು, ಕಾರ್ಯಕರ್ತರನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ವರ್ಷದ ಸಂಸ್ಥಾಪನಾ ದಿನ ಅತ್ಯಂತ ಮಹತ್ವಪೂರ್ಣವಾಗಿದೆ.

ಮೊದಲನೆಯದಾಗಿ ನಾವು ಸ್ವಾತಂತ್ರ್ಯದ 75ನೇ ವರ್ಷ ಆಚರಿಸುತ್ತಿದ್ದೇವೆ. ಇದು ಭಾರತದ ಅಮೃತ ಕಾಲವಾಗಿದೆ. ಎರಡನೆಯದಾಗಿ ಜಾಗತಿಕ ಪರಿಸ್ಥಿತಿಯಲ್ಲಿ ವ್ಯಾಪಕ ಬದಲಾವಣೆ ಕಂಡುಬರುತ್ತಿದೆ.

ಇದು ಭಾರತಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಸ್ಥಳೀಯ ವಸ್ತುಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಅಗತ್ಯವಿದೆ ಎಂದು ಮೋದೀಜಿ ಅವರು ಹೇಳಿದ್ದಾರೆ.

NEET-UG ಪರೀಕ್ಷಾ ದಿನಾಂಕ ಪ್ರಕಟ

0

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬುಧವಾರ (ಏಪ್ರಿಲ್ 6, 2022) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ಪದವಿಪೂರ್ವ (NEET-UG) 2022 ರ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ.

NTA ಯ ಮಾಹಿತಿಯ ಪ್ರಕಾರ, ಪದವಿಪೂರ್ವ ವೈದ್ಯಕೀಯ ಪ್ರವೇಶ ಪರೀಕ್ಷೆ ಜುಲೈ 17 ರಂದು ನಡೆಸಲಾಗುತ್ತದೆ.
NEET-UG 2022 ಪರೀಕ್ಷೆಯ ನೋಂದಣಿ ಪ್ರಕ್ರಿಯೆಯು neet.nta.nic.in ನಲ್ಲಿ ಪ್ರಾರಂಭವಾಗಿದೆ ಎಂದು NTA ಮಾಹಿತಿ ನೀಡಿದೆ.

ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 6, 2022 ಆಗಿದೆ.
ಪ್ರವೇಶ ಪರೀಕ್ಷೆಯು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದಿಂದ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ) 200 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಷಯದಲ್ಲಿ 50 ಪ್ರಶ್ನೆಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ (ಎ ಮತ್ತು ಬಿ). ಪರೀಕ್ಷೆಯ ಅವಧಿಯು 200 ನಿಮಿಷಗಳು (03 ಗಂಟೆ 20 ನಿಮಿಷಗಳು) ಮಧ್ಯಾಹ್ನ 02:00 ರಿಂದ ಸಂಜೆ 05:20ವರೆಗೆ ನಡೆಯಲಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇನ್ನು ಎಂಬಿಬಿಎಸ್, ಬಿಡಿಎಸ್, ಆಯುಷ್, ವೆಟರ್ನರಿ, ಬಿಎಸ್ಸಿ ನರ್ಸಿಂಗ್ ಮತ್ತು ಲೈಫ್ ಸೈನ್ಸ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್ ಯುಜಿ ಪರೀಕ್ಷೆ ನಡೆಯುತ್ತದೆ. ಅರ್ಜಿದಾರನಿಗೆ 17 ವರ್ಷ ವಯಸ್ಸಾಗಿರಬೇಕು. ಆದರೆ ಈ ಬಾರಿ NEET ಪರೀಕ್ಷೆ ಬರೆಯಲು ಯಾವುದೇ ವಯಸ್ಸಿನ ಮಿತಿ ಇಲ್ಲ ಎಂದು ತಿಳಿದುಬಂದಿದೆ.

NTA ಈ ವರ್ಷ ಎಲ್ಲಾ ಅಭ್ಯರ್ಥಿಗಳಿಗೆ NEET UGಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು ತೆಗೆದುಹಾಕಿದೆ.

NEET UG 2022 ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿ, ಉರ್ದು, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮರಾಠಿ, ಮಲಯಾಳಂ, ಒಡಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಸೇರಿದಂತೆ 13 ಭಾಷೆಗಳಲ್ಲಿ ನಡೆಸಲಾಗುತ್ತದೆ.