Monday, March 24, 2025
Monday, March 24, 2025

ಎನ್ಇಪಿ ಪಠ್ಯದ ಜೊತೆ ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೂ ಮಹತ್ವ ನೀಡಿದೆ

Date:

ಅಂತರ್‌ ಶಿಸ್ತೀಯ ಅಧ್ಯಯನಕ್ಕೆ ಒತ್ತು ನೀಡಿರುವ ನೂತನ ಶಿಕ್ಷಣ ನೀತಿಯಲ್ಲಿ ಪಠ್ಯದ ಜೊತೆಗೆ ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಅವಕಾಶವಿದೆ.

ದೇಶದ ಕ್ರೀಡಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಲಿದೆ ಎಂದು ದೇಶದ ಪ್ರಥಮ ದೈಹಿಕ ಶಿಕ್ಷಣ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾದ ಚೆನೈನ ವೈಎಂಸಿಎ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಜಾರ್ಜ್ ಅಬ್ರಹಾಂ ವಿಶ್ವಾಸ ವ್ಯಕ್ತಪಡಿಸಿದರು.

ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಇತ್ತೀಚೆಗೆ ವಿಶ್ವವಿದ್ಯಾಲಯದ ಹಿರೇಮಠ್ ಸಭಾಂಗಣದಲ್ಲಿ “ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳ ಇತ್ತೀಚಿನ ಬೆಳವಣಿಗೆಗಳು” ಕುರಿತು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ಸಿಗುತ್ತಿಲ್ಲ. ಕ್ರೀಡಾ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಒದಗಿಸುವಲ್ಲಿ ಸರ್ಕಾರಗಳು ಆಸಕ್ತಿ ತೋರುತ್ತಿಲ್ಲ ಎಂಬ ಅಪವಾದವಿತ್ತು. ಆದರೆ, ನೂತನ ಶಿಕ್ಷಣ ನೀತಿ ಈ ಅಪವಾದವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಪ್ರಾಥಮಿಕ ಹಂತದಿಂದಲೇ ಅಮೂಲಾಗ್ರ ಬದಲಾವಣೆ ತರಲಿದೆ ಎಂದರು.

ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯವಂತ ಮಾನವ ಸಂಪನ್ಮೂಲ ಅತ್ಯಗತ್ಯ. ಇಂಥಹಾ ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಕೌಶಲ್ಯಗಳು ಅಗತ್ಯ. ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು, ಯೋಗ, ಮತ್ತು ಇವುಗಳ ಬಗ್ಗೆ ಸಾಂಸ್ಥಿಕವಾಗಿ ತರಬೇತಿ ನೀಡುವ ಕ್ರೀಡಾ ಸಂಸ್ಥೆಗಳು, ದೈಹಿಕ ಶಿಕ್ಷಣ ವಿಭಾಗಗಳು ಸದೃಢ ಸಮಾಜ ನಿರ್ಮಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಡಾ. ಜೆರಾಲ್ಡ್ ಡಿಸೌಜ, ಡಾ. ವೆಂಕಟೇಶ್, ಡಾ. ಕೃಷ್ಣಶರ್ಮ, ಡಾ. ಜಯರಾಮನ್, ಡಾ. ಮಲ್ಲಿಕಾರ್ಜುನಯ್ಯ ಮಾತನಾಡಿದರು. ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಗಜಾನನ ಪ್ರಭು, ಡಾ. ಎನ್. ಡಿ. ವಿರೂಪಾಕ್ಷ, ಡಾ. ರವೀಂದ್ರ ಗೌಡ, ವಿವಿಧ ವಿಶ್ವವಿದ್ಯಾಲಯಗಳ ಸುಮಾರು 150ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

BJP Protest 18 ಶಾಸಕರ ಅಮಾನತು. ಸರ್ಕಾರದಿಂದ ಅಧಿಕಾರ ದುರುಪಯೋಗ. ಜಿಲ್ಲಾ ಬಿಜೆಪಿ‌‌ ಪ್ರತಿಭಟನೆ

BJP Protest ಮುಸ್ಲಿಮರಿಗೆ ಅಸಂವಿಧಾನಿಕ 4% ಮೀಸಲಾತಿ, SCP-TSP ನಿಧಿಗಳ ದುರ್ಬಳಕೆ,...

ಶೀಘ್ರ ಬಾಡಿಗೆ ಕರಾರನ್ನ ನವೀಕರಣಗೊಳಿಸಿ- ಪಿ.ಮಂಜುನಾಥ್

ಶಿವಮೊಗ್ಗ ನಗರದ ಬಸ್ ನಿಲ್ದಾಣದ ಅವರಣದಲ್ಲಿರುವ ಅಂಗಡಿ ಮಳಿಗೆಗಳ ಬಾಡಿಗೆ ಕರಾರು...

World Tuberculosis Day ಕ್ಷಯರೋಗವು ಹರಡುವ ರೋಗ ಕುಟುಂಬಸ್ಥರು ಬಹಳ ಎಚ್ಚರದಿಂದಿರಬೇಕು- ಡಾ.ಕೆ. ಎಸ್.ನಟರಾಜ್

World Tuberculosis Day ಕ್ಷಯರೋಗ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು ಭಾರತ...

Thawar Chand Gehlot ರಾಜಭವನದಲ್ಲಿ ಸಂಭ್ರಮಿಸಿದ “ಚಂದನ” ದ ಚೈತ್ರಾಂಜಲಿ, ಯುಗಾದಿ ಶುಭಾಶಯ ಕೋರಿದ ರಾಜ್ಯಪಾಲ‌ ಗೆಹ್ಲೋಟ್

Thawar Chand Gehlot ಬೆಂಗಳೂರು 22.03.2025: ಹಿಂದುಗಳ ಹೊಸ ವರ್ಷವೆಂದೇ ಕರೆಯಲ್ಪಡುವ...