Thursday, February 26, 2026
Thursday, February 26, 2026
Home Blog Page 1617

ಮಾನವ ಸಂವೇದನೆಗಳ ಡಿಜಿಟಲ್ ಪ್ರದರ್ಶನ

0

ಸೈನ್ಸ್‌ ಗ್ಯಾಲರಿ ಬೆಂಗಳೂರು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮಾನವನ ಮನಸ್ಸು, ಆಲೋಚನೆ ಹಾಗೂ ಆತನ ಭಾವನೆಯ ಸಂಕೀರ್ಣತೆಗಳ
ಕುರಿತಾಗಿ ಡಿಜಿಟಲ್ ಪ್ರದರ್ಶನವನ್ನ ಈಗಾಗಲೇ ಏಪ್ರಿಲ್ 8 ರಿಂದಲೇ ಆರಂಭಿಸಿದೆ.

ಈ ಪ್ರದರ್ಶನವು ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ ಮಾನವ ಮನಸ್ಸಿನ ಸಂಕೀರ್ಣತೆಗಳನ್ನ ಪರಿಶೋಧಿಸುತ್ತದೆ.

ಈ ಕಾರ್ಯಕ್ರಮವನ್ನು ನಿಮಾನ್ಸ್‌, ವೆಲ್‌ಕಮ್ ಟ್ರಸ್ಟ್ ಇಂಡಿಯಾ ಅಲಯನ್ಸ್‌, ದಿ ವೆಲ್‌ಬೀಯಿಂಗ್ ಪ್ರಾಜೆಕ್ಟ್‌ ಮತ್ತು ಮ್ಯೂಸಿಯಂ ಡಾ. ಗಿಸ್ಕೈನ್ ಘೆಂಟ್ ಸಹಯೋಗದಲ್ಲಿ ಈ ಡಿಜಿಟಲ್ ಪ್ರದರ್ಶನವನ್ನ ಆಯೋಜಿಸಲಾಗಿದೆ.

ಸೈನ್ಸ್‌ ಗ್ಯಾಲರಿ ಬೆಂಗಳೂರು ಯುವ ವಯಸ್ಕರನ್ನು ಗುರಿಯಾಗಿಸಿಕೊಂಡು ಆಗಿರುವ ಸಂಶೋಧನಾ ಆಧಾರಿತ ಸಾರ್ವಜನಿಕ ಸಂಸ್ಥೆಯಾಗಿದೆ. ಇದನ್ನ ಕರ್ನಾಟಕ ಸರ್ಕಾರ ಮತ್ತು 3 ಶೈಕ್ಷಣಿಕ ಪಾಲುದಾರರ ಬೆಂಬಲದೊಂದಿಗೆ ಸ್ಥಾಪಿಸಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್, ಮತ್ತು ಸೃಷ್ಟಿ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ ಈ 2 ಸಂಸ್ಥೆಯು ಗ್ಲೋಬಲ್ ಸೈನ್ಸ್ ಗ್ಯಾಲರಿ ನೆಟ್‌ವರ್ಕ್‌ನ ಸದಸ್ಯರಾಗಿದ್ದಾರೆ. ಇನ್ನು ಈ ಸೈನ್ಸ್‌ ಗ್ಯಾಲರಿಗಳು ಅಟ್ಲಾಂಟಾ, ಡೆಟ್ರಾಯಿಟ್, ಡಬ್ಲಿನ್, ಲಂಡನ್, ಮೆಲ್ಬೋರ್ನ್, ರೋಟರ್‌ಡ್ಯಾಮ್ ಮತ್ತು ಬರ್ಲಿನ್‌ನಲ್ಲಿಯೂ ಇದೆ.

ಸೈನ್ಸ್ ಗ್ಯಾಲರಿ ಬೆಂಗಳೂರು ಸಂಸ್ಥೆಯು ವಿಜ್ಞಾನವನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಭಾಷೆಯ ಸಮಸ್ಯೆಯಿಂದ ಉಂಟಾಗುವ ಸಮಸ್ಯೆಗಳನ್ನ ತಪ್ಪಿಸಲು ಬೇರೆ ಬೇರೆ ಭಾಷೆಗಳಲ್ಲೂ ಡಿಜಿಟಲ್ ಪ್ರದರ್ಶನ ನೀಡಲು ಮುಂದಾಗಿದೆ. ಈ ಮೂಲಕ ವಿವಿಧ ಭಾಷೆಯ ಪ್ರೇಕ್ಷಕರನ್ನ ಈ ಕಾರ್ಯಕ್ರಮದಲ್ಲಿ ಒಳಗೊಳ್ಳಲು ಸಂಸ್ಥೆ ಈ ಯೋಜನೆ ಮಾಡಿದೆ. ಸದ್ಯಕ್ಕೆ ಸೈನ್ಸ್‌ ಗ್ಯಾಲರಿಗೆ ಸಂಬಂಧಿಸಿದ 6 ಚಲನಚಿತ್ರಗಳು ಹಾಗೂ 10 ಡಿಜಿಟಲ್ ಪ್ರದರ್ಶನಗಳನ್ನ ನೀಡಲಾಗುತ್ತಿದೆ. ಇದರ ಜೊತೆಗೆ ಕಾರ್ಯಾಗಾರಗಳು, ಮಾಸ್ಟರ್‌ಕ್ಲಾಸ್‌ಗಳು ಮತ್ತು ಸಾರ್ವಜನಿಕ ಉಪನ್ಯಾಸಗಳು ಸೇರಿದಂತೆ ಲೈವ್ ಕಾರ್ಯಕ್ರಮಗಳು ಕೂಡ ನಡೆಯಲಿದೆ.

ಸೈನ್ಸ್ ಗ್ಯಾಲರಿ ಬೆಂಗಳೂರಿನ ಸ್ಥಾಪಕಿ, ನಿರ್ದೇಶಕಿ ಜಾಹ್ನವಿ ಫಾಲ್ಕಿ ಅವರು ಸೈನ್‌ ಗ್ಯಾಲರಿ ಕುರಿತು ಮಾತನಾಡಿದ್ದು, ಭಾರತೀಯ ಭಾಷೆಗಳಲ್ಲಿ ರೋಮಾಂಚಕ ಬೌದ್ಧಿಕ ಜೀವನವನ್ನು ರಚಿಸಲು ನಾವೆಲ್ಲರೂ ನಮ್ಮ ಕೈಲಾದಷ್ಟು ಮಾಡಬೇಕು. ಭಾಷೆಗಳನ್ನು ಜೀವಂತವಾಗಿಡಲು ಮತ್ತು ನಮ್ಮ ಸಂಸ್ಕೃತಿಗಳನ್ನು ಬೆಳೆಸಲು ಇದು ಏಕೈಕ ಮಾರ್ಗವಾಗಿದೆ. ಇದಕ್ಕಾಗಿ ಸೈನ್ಸ್ ಗ್ಯಾಲರಿ ಬೆಂಗಳೂರಿನಲ್ಲಿ, ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಉತ್ತಮ ಗುಣಮಟ್ಟದ ವಿಷಯವನ್ನು ರಚಿಸಲು ನಮ್ಮ ಸಂಸ್ಥೆ ಬದ್ಧವಾಗಿದೆ. ಅಲ್ಲದೆ ಇದನ್ನ ಇತರ ಭಾರತೀಯ ಭಾಷೆಗಳಿಗೂ ವಿಸ್ತರಿಸುತ್ತೇವೆ. ಒಟ್ಟಾರೆ ಸೈನ್ಸ್‌ ಗ್ಯಾಲರಿಯನ್ನು ಸಾರ್ವಜನಿಕ ಸಂಸ್ಥೆಯಂತೆ ರೂಪಿಸುವುದೇ ನಮ್ಮ ಸಂಸ್ಥೆಯ ಏಕೈಕ ಗುರಿಯಾಗಿದೆ, ಎಂದು ಜಾಹ್ನವಿ ಫಾಲ್ಕಿ ತಿಳಿಸಿದ್ದಾರೆ.

ಎಮ್ಮೆ ನಿನಗೆ ಸಾಟಿಯಿಲ್ಲ! ರೈಲನ್ನೇ ನಿಲ್ಲಿಸಿದೆಯಲ್ಲ!

0

ಎಮ್ಮೆ ನಿನಗೆ ಸಾಟಿಯಿಲ್ಲ ..ಹಾಡನ್ನ ನೀವೆಲ್ಲಾ ಕೇಳಿದ್ದೀರಿ.
ಬಿಸಿಲೋ ಬಿರುಗಾಳಿಯೋ ಮಳೆ ಚಳಿಗೆ ಊಹ್ಞೂಂ ಜಗ್ಗದ ಪ್ರಾಣಿ.
ಆದರೆ ಅವು ನಾವು ಪ್ರಯಾಣಿಸೋ ರೈಲನ್ನ ಜಗ್ಗಿ ನಿಲ್ಲುವಂತೆ ಮಾಡಿವೆ.
ರೈಲಿನ ಚಾಲಕ ಬಗ್ಗಿ ನೋಡಿ ಎಮ್ಮೆಗಳು ಹಳಿಯ ಮೇಲೆ ನಡೆಯುತ್ತಿದ್ದನ್ನ ಕಣ್ಣಾರೆ ನೋಡಿದ್ದಾನೆ.
ಪಾಪ..ಮೂಕ ಪ್ರಾಣಿ ಎಂಬ ಕನಿಕರ ಮೂಡಿದೆ. ರೈಲನ್ನ ನಿಲ್ಲಿಸಿದ. ಎಮ್ಮೆಗಳ ಪ್ರಾಣವುಳೀತು
ಈ ಘಟನೆ ನಡೆದದ್ದು ಶಿವಮೊಗ್ಗದ ಕಾಶೀಪುರ ರೈಲ್ವೇ ಗೇಟಿನ ಸಮೀಪ.

ಎಮ್ಮೆ ತಾನೆ ಅಂತ ಈಗ ಲಾರಿ ಬಸ್ಸುಗಳು
ಅವುಗಳ ಮೇಲೇಯೇ ಹರಿಸಿಕೊಂಡು ಭರ್ರನೆ ಹೋಗುವ ಎಷ್ಟೋ ಪ್ರಸಂಗ ನೋಡಿದ್ದೇವೆ.
ಕೆಲ ಸೆಕೆಂಡುಗಳ ಹೊತ್ತು ರೈಲನ್ನ ನಿಲ್ಲಿಸಿದಾಗ ಪ್ರಯಾಣಿಕರು ಗಾಭರಿಯಾದರು.ರೈಲು ತಾಳಗುಪ್ಪ ಕಡೆಗೆ ಹೊರಟಿತ್ತು. ಬಹುತೇಕ ನಡುಬಿಸಿಲ 1-10 ರ ಮಟಮಟ ಮಧ್ಯಾಹ್ನದ ವೇಳೆಯಾಗಿತ್ತು.
ಇದೇನು ಯಾವುದಾದರೂ ಅಪಘಾತವಾಗಿದೆಯ? ಎಂದು ಯೋಚಿಸತೊಡಗಿದರು.

ಆದರೆ ‌ನಿಜಾಂಶ ತಿಳಿದಾಗ ಚಾಲಕ ಮಹಾಶಯನ ಮಾನವೀಯ ನಡವಳಿಕೆಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಕಳೆದ ಮಂಗಳವಾರ
ಈ ಘಟನೆ ಸಂಭವಿಸಿದೆ.

ಆದರೆ ಎಮ್ಮೆಗಳು ಮಾತ್ರ
ಈ ಯಾವುದರ ಉಸಾಬರಿ ಹಚ್ಚಿಕೊಳ್ಳದೇ ಹಳಿಯಿಂದ ಅತ್ತ ನಡೆದು ಜಾಗ ಖಾಲಿಮಾಡಿವೆ.
ಅದಕ್ಕೆ ಹೇಳಿದ್ದು
ಎಮ್ಮೆ ನಿನಗೆ ಸಾಟಿಯಿಲ್ಲ!!!.

ಗೋಹತ್ಯೆ ನಿಷೇಧ ಕಾಯಿದೆಯನ್ನ ಎಲ್ಲರೂ ಸೌಹಾರ್ದದಿಂದ ಗೌರವಿಸೋಣ

0

ಗೋಹತ್ಯೆ ನಿಷೇಧ (ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020) ಕಾಯ್ದೆಯ ಸೆಕ್ಷನ್‌ 5 ಅಡಿಯಲ್ಲಿ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯವು ಅನುಮತಿಸಿ ಆದೇಶ ನೀಡಿರುವ ತೀರ್ಪು ಸ್ವಾಗತರ್ಹವಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಟಕಣೆ ಹೊರಡಿಸಿರುವ ಅವರು, ರಾಜ್ಯ ಉಚ್ಚ ನ್ಯಾಯಾಲಯ ಗೋಹತ್ಯೆ ನಿಷೇಧ ಕಾಯ್ದೆಯ ಅನುಷ್ಠಾನ ವಿಚಾರದಲ್ಲಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಇದನ್ನು ನಾವೆಲ್ಲರೂ ಗೌರವಿಸಿ, ಪಾಲಿಸಬೇಕು ಎಂದಿದ್ದಾರೆ.

ಗೋಹತ್ಯೆ ಕಾಯ್ದೆಯ ಸೆಕ್ಷನ್‌ 5 ಪ್ರಕಾರ, ಯಾವುದೇ ವ್ಯಕ್ತಿ ಯಾವುದೇ ರೀತಿಯಲ್ಲೂ ರಾಜ್ಯದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಲ್ಲುವ ಉದ್ದೇಶಕ್ಕೆ ಜಾನುವಾರುಗಳನ್ನು ಸಾಗಿಸಬಾರದು ಅಥವಾ ಸಾಗಣೆಗೆ ಅವಕಾಶ ಮಾಡಿಕೊಡಬಾರದು. ನಿಯಮ ಉಲ್ಲಂಘಿಸಿ ಸಾಗಣೆ ಮಾಡಿದರೆ ಅದು ಅಪರಾಧ ಕೃತ್ಯವಾಗಲಿದೆ. ಆದರೆ, ಕೃಷಿ ಮತ್ತು ಪಶುಸಂಗೋಪನೆ ಉದ್ದೇಶಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರ ನಿಗದಿಪಡಿಸಿರುವ ನಿಯಮಗಳ ಅನುಸಾರ ಜಾನುವಾರು ಸಾಗಣೆ ಅಪರಾಧ ಕೃತ್ಯವಾಗುವುದಿಲ್ಲ ಎಂದು ತಿಳಿಸಿದರು.

ಗೋಹತ್ಯೆ ನಿಷೇಧ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್‌ ಆರಿಫ್ ಜಮೀಲ್‌ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್‌.ಆರ್‌ ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಇದೇ ವೇಳೆ, ನಿಯಮ ಜಾರಿಯು ಅರ್ಜಿ ಕುರಿತಂತೆ ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿರುವುದನ್ನು ಎಲ್ಲರೂ ಸೌಹಾರ್ದದಿಂದ ಮತ್ತು ಪರಸ್ಪರ ಗೌರವದಿಂದ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಗೋವು ಪ್ರಾಣಿಯಲ್ಲ, ರಾಷ್ಟ್ರದ ಸಂಪತ್ತು. ಭಾರತೀಯ ಪರಂಪರೆಯಲ್ಲಿ ಗೋವುಗಳಿಗೆ ದೈವಿಕ ಸ್ಥಾನ ನೀಡಲಾಗಿದೆ. ಪೊಲೀಸ್‌ ಹಾಗೂ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು ಸರ್ಕಾರದ ಆದೇಶ ಎತ್ತಿಹಿಡಿದಿರುವ ಹೈಕೋರ್ಟ್‌ ತೀರ್ಪುನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸದಾ ಜಾಗೃತರಾಗಿರಬೇಕೆಂದು ಪ್ರಭು ಚವ್ಹಾಣ್‌ ಸೂಚಿಸಿದ್ದಾರೆ.

ಯಾವುದೇ ನಿರ್ದಿಷ್ಟ ಧರ್ಮದವರಾಗಲಿ ಪೂಜನೀಯ ಗೋಮಾತೆಯನ್ನು ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎನ್ನುವುದನ್ನು ಅರಿತು ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ವಿಚಾರವನ್ನು ನ್ಯಾಯಾಲಯವು ಆಳವಾಗಿ ಅಧ್ಯಯನ ಮಾಡಿ ಸರಿಯಾದ ತೀರ್ಪು ನೀಡಿದೆ. ಎಲ್ಲರಿಗೂ ಅಮೃತ ನೀಡುತ್ತಿರುವ ಗೋವು ರಕ್ಷಣೆಯಾಗಬೇಕು. ಗೋವು ಜಾಗೃತಿಯಿಂದ ನಾಡು, ಜನತೆ ಒಂದುಗೂಡಲು ಸಾಧ್ಯವಾಗುತ್ತದೆ. ಗೋವಿನ ಹಾಲು ಕುಡಿಯುವವರು ಗೋ ಮಾತೆ ಸೇವೆಗೆ ಕಟಿಬದ್ಧರಾಗಬೇಕು. ಎಲ್ಲರ ತಾಯಿಯಾದ ಗೋ ಮಾತೆಯ ಸೇವೆ ದೇಶ ಕಲ್ಯಾಣಕ್ಕೆ ಪೂರಕವಾಗಿದೆ ಎಂದು ಪ್ರಭು ಚವ್ಹಾಣ್‌ ಬಣ್ಣಿಸಿದ್ದಾರೆ.

ಮಳೆಗಾಲದಲ್ಲಿ ವಿದ್ಯುತ್ ಸಂಪರ್ಕಕ್ಕೆ ಬರುವ ಸಮಸ್ಯೆಗಳ ಪರಿಹಾರಕ್ಕೆ ಸಿದ್ಧರಾಗಿ

0

ವಿಫಲವಾದ ಪರಿವರ್ತಕಗಳನ್ನು 24 ಗಂಟೆಗಳಲ್ಲಿ ಬದಲಾವಣೆಗೆ ಕ್ರಮವಹಿಸುವಂತೆ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನೀಲ್ ಕುಮಾರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನೂತನ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಸಾಲಿನ ಸೆಪ್ಟೆಂಬರ್ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು 14,464 ಪರಿವರ್ತಕಗಳು ವಿಫಲಗೊಂಡಿದೆ. ಈ ಪೈಕಿ 24 ಗಂಟೆಗಳಲ್ಲಿ 11060 ಪರಿವರ್ತಕಗಳನ್ನು ಮಾತ್ರ ಬದಲಾವಣೆ ಮಾಡಲಾಗಿದೆ.

24 ಗಂಟೆಗಳ ನಂತರ 3501 ಹಾಗೂ ಬಾಕಿ 99 ಉಳಿದಿವೆ. ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸುವ ಅಗತ್ಯವಿದೆ ಎಂದರು.

ಪರಿವರ್ತಕಗಳ ಬದಲಾವಣೆಗೆ ಟಿಸಿ ಬ್ಯಾಂಕ್, ವೆಹಿಕಲ್ ನೀಡಲಾಗಿದೆ. 24 ಗಂಟೆಗಳಲ್ಲಿ ಬಲಾಯಿಸಲು ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದಾಗ ಬದಲಾವಣೆಗೊಳಿಸುವಲ್ಲಿ ಆಗುವ ತೊಂದರೆಗಳ ಬಗ್ಗೆ ಪರಿಹಾರ ಕಂಡುಕೊಂಡು ನಿಗದಿತ ವೇಳೆಯಲ್ಲಿ ಪರಿವರ್ತಕಗಳ ಬಲಾವಣೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪರಿವರ್ತಕಗಳ ಬಲಾವಣೆಯಲ್ಲಿ ವಿಳಂಬ ದೋರಣೆಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪರಿವರ್ತಕಗಳನ್ನು ಹಾಳಾಗದಂತೆ ನಿರ್ವಹಣೆಗೆ 10 ದಿನಗಳ ಕಾಲ ಅಭಿಯಾನ ಹಮ್ಮಿಕೊಳ್ಳಲು ತಿಳಿಸಿದರು.

ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕೆ ಗ್ರಾಮ ಪಂಚಾಯತಿಯಿಂದ ಎನ್‍ಓಸಿ ಪಡೆದುಕೊಳ್ಳುವುದು ಕಡ್ಡಾಯವಲ್ಲ. ಈ ಪೈಕಿ ಆಧಾರ ಕಾರ್ಡ ಮತ್ತು ರೇಶನ್ ಕಾರ್ಡ ಇದ್ದರೆ ಸಾಕು. ತೋಟದ ಮನೆಗಳಿಗೆ ಈ ಯೋಜನೆ ಅನ್ವಯವಾಗುವದಿಲ್ಲವೆಂದು ಸ್ಪಷ್ಟಪಡಿಸಿದರು.

ಶಾಲಾ ಕಾಲೇಜುಗಳ ವಿದ್ಯುತ್ ಅಪಾಯಕಾರಿ ಸ್ಥಳಗಳನ್ನು ಬದಲಾವಣೆಗೆ ಈ ಮಾಹೆಯ ಅಂತ್ಯದೊಳಗೆ ಕ್ರಮವಹಿಸಬೇಕು ಎಂದರು. ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ನೋಂದಣಿ ದಿನಾಂಕದಿಂದ ಒಂದು ತಿಂಗಳಲ್ಲಿ ಸಂಪರ್ಕ ಕಲ್ಪಿಸುವ ಕೆಲವಾಗಬೇಕು ಎಂದರು.

ವಿದ್ಯುತ್ ಕುಂದು ಕೊರತೆ ನಿವಾರಣೆಗೆ ವಿದ್ಯುತ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ತರುವ ದೂರುಗಳ ನಿವಾರಣೆಗೆ ಎಲ್ಲ ರೀತಿಯಿಂದ ಸಿದ್ದತೆ ಮಾಡಿಕೊಳ್ಳಲು, ಸಮಸ್ಯೆ ಬೇಗನೇ ಪರಿಹರಿಸುವಂತಾಗಬೇಕು. ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ವಿದ್ಯುತ್ ಸಂಪರ್ಕ, ಹೊಸ ಕನೆಕ್ಷನ್, ಕುಡಿಯುವ ನೀರು, ಟಿಸಿ ಬದಲಾವಣೆ ಸೇರಿದಂತೆ ಯಾವುದೇ ರೀತಿಯ ದೂರು ಬರದಂತೆ ಕ್ರಮವಹಿಸಿ ಇಲಾಖೆಯಲ್ಲಿ ಸುಧಾರಣೆ ತರುವ ಕೆಲಸವಾಗಬೇಕು ಎಂದರು.

ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಎಲ್ಲ ಕಾಮಗಾರಿಗಳು ಬರುವ ಡಿಸೆಂಬರ್ ತಿಂಗಳ ಒಳಗಾಗಿ ಪೂರ್ಣಗೊಳಿಸಿ ಉದ್ಘಾಟನೆಗೆ ಸಜ್ಜುಗೊಳಿಸಬೇಕು. ಬರುವ ಜೂನ್ ಮಾಹೆಯಿಂದ ಮಳೆಗಾಲ ಆರಂಭಗೊಳ್ಳಲಿದೆ. ವಿದ್ಯುತ್ ಸಂಪರ್ಕಕ್ಕೆ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲು ತಿಳಿಸಿದರು.

ಟಿಸಿ ರಿಪೇರಿ, ಐಪಿ ಸೆಟ್‍ನಲ್ಲಿ ನಿರ್ವಹಣೆ ಮಾಡಿ. ಈ ನಿಟ್ಟಿನಲ್ಲಿ ಅಧಿಕಾರಿಗಳು ಚೆನ್ನಾಗಿ ಕೆಲಸ ನಿರ್ವಹಿಸಿ, ಸಭೆಯಲ್ಲಿ ನೀಡಲಾದ ನಿರ್ದೇಶನಗಳನ್ನು ತಮ್ಮ ಕೆಳ ಹಂತದ ನೌಕರರಿಗೆ ತಲುಪಿಸಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಕಾರ್ಯ ಮಾಡಲು ತಿಳಿಸಿದರು.

ಸಭೆಯಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಭಾರತಿ, ಕೆಪಿಟಿಸಿಎಲ್‍ನ ನಿರ್ದೇಶಕ ಜಿ.ಆರ್.ಚಂದ್ರಶೇಖರಯ್ಯ, ಮುಖ್ಯ ಇಂಜಿನೀಯರ್ ಎಸ್.ವಿ.ಮಂಜುನಾಥ, ಕಾರ್ಯನಿರ್ವಾಹಕ ಇಂಜಿನೀಯರ್ ಕೆ.ಎ.ಆನಂದ, ಅಧೀಕ್ಷಕರ ಅಭಿಯಂತರ ಜಿ.ಕೆ.ಗೊಟ್ಯಾಳ, ಹೆಸ್ಕಾಂ ಡಿಟಿ ಎ.ಎನ್.ಕಾಂಬಳೆ, ಡಿಎಫ್‍ಓ ಬಿ.ಮಂಜುನಾಥ, ಪೈನಾನ್ಸ್ ಅಡವೈಜರ್ ಮಂಜಪ್ಪ, ಮುಖ್ಯ ಅಭಿಯಂತರ ಹೆಬ್ಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೃಷಿ ಸಮಸ್ಯೆಗೆ ಕ್ಷೇತ್ರದಲ್ಲಿಯೇ ಪರಿಹರಿಸುವ ಯತ್ನ ರೈತರೊಂದಿಗೊಂದು ದಿನ

0

ಯುವಜನರು ಕೃಷಿಯನ್ನು ಲಾಭದಾಯಕವಲ್ಲವೆಂದು ಪರಿಗಣಿಸಿ ನಗರ ಪಟ್ಟಣಗಳತ್ತ ಮುಖ ಮಾಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿ ಪುನಃ ಯುವ ಜನರನ್ನು ಗ್ರಾಮಗಳತ್ತ, ಕೃಷಿಯತ್ತ ವಾಪಸ್ ಕರೆತರುವ ಉದ್ದೇಶದಿಂದ ‘ರೈತರೊಂದಿಗೆ ಒಂದು ದಿನ ಎಂಬ ವಿಶಿಷ್ಟ’ ಕಾರ್ಯಕ್ರಮವನ್ನು ಜಾರಿ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಎಸ್.ಗೊಲ್ಲಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ರೈತರೊಂದಿಗೆ ಒಂದು ದಿನ’ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿಯನ್ನು ಕಡೆಗಣಿಸುವ ಕಾಲ ಇದಾಗಿದ್ದು, ರೈತರು ಯುವಜನರಲ್ಲಿ ಆತ್ಮಸ್ಥೈರ್ಯ ತುಂಬಲು ಕೃಷಿ ಇಲಾಖೆ ಹಲವು ವಿನೂತನ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ ಎಂದರು.

ಸರ್ಕಾರ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯ ಮೂಲಕ ವಿದ್ಯಾರ್ಥಿ ವೇತನ, ರೈತರ ಟ್ರಾಕ್ಟರ್ ಡೀಸೆಲ್ ಗೆ ಸಬ್ಸಿಡಿ, ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆ ಮತ್ತಿತರ ಮಹತ್ವದ ಯೋಜನೆಗಳನ್ನು ಜಾರಿ ಮಾಡಿದೆ. ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೇ ಪ್ರಧಾನ ಮಂತ್ರಿಗಳ ಕೃಷಿ ಸಮ್ಮಾನ್ ಯೋಜನೆಯಡಿ ರಾಜ್ಯದ 53 ಲಕ್ಷ ಫಲಾನುಭವಿ ರೈತರ ಖಾತೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟು 10 ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂದರು.

‘ರೈತರೊಂದಿಗೆ ಒಂದು ದಿನ ಎಂಬ ವಿಶಿಷ್ಟ’ ಕಾರ್ಯಕ್ರಮವನ್ನು 2020 ರ ನವೆಂಬರ್ ಮಾಹೆಯಿಂದ ಜಾರಿಗೆ ತಂದಿದ್ದು ಈಗಾಗಲೇ ರಾಜ್ಯದ 14 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪೂರೈಸಿ 15ನೇ ಜಿಲ್ಲೆಯಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ರೈತರೊಂದಿಗೆ ಒಂದು ದಿನ ಬೆರೆತು ಸಮಸ್ಯೆಗಳನ್ನು ಕ್ಷೇತ್ರ ಮಟ್ಟದಲ್ಲಿಯೇ ಆಲಿಸಿ ಸಾಧ್ಯವಾದಷ್ಟು ಅಲ್ಲಿಯೇ ಪರಿಹರಿಸಿ ಸ್ಥಳದಲ್ಲೆ ವಿವಿಧ ಸೌಲಭ್ಯಗಳನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು .

ರಾಜ್ಯದ ಸುಮಾರು 59 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಟ್ರಾಕ್ಟರ್ ಗಳಿಗೆ ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ. ತುಂತುರು ಮತ್ತು ಹನಿ ನೀರಾವರಿಗೆ ಗರಿಷ್ಠ ಸಬ್ಸಿಡಿಯನ್ನು ನೀಡುತ್ತಿದ್ದು, ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಒಟ್ಟಾರೆಯಾಗಿ ಕೃಷಿಯತ್ತ ಯುವಜನರನ್ನು ಪುನಃ ಕರೆತರಲು ಮತ್ತು ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಕೃಷಿ ಇಲಾಖೆ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೃಷಿ ಇಲಾಖೆ ಬದ್ಧವಾಗಿದೆ ಎಂದು ತಿಳಿಸಿದರು.

ಜೊತೆಗೆ ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಕಾಲೇಜುಗಳಲ್ಲಿ ಕಳೆದ ವರ್ಷ ಇದ್ದ ರೈತರ ಮಕ್ಕಳ ಮೀಸಲಾತಿಯನ್ನು ಶೇ.40 ರಿಂದ ಶೇ.50 ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದಿಂದಾಗಿ 186 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಪ್ರವೇಶಗಳು ದೊರೆತು ರೈತರ ಮಕ್ಕಳಿಗೆ ಅನುಕೂಲವಾಗಿದೆ ಎಂದರು.

ಟಾಟಾ ಐಪಿಎಲ್ 22 ಲಕ್ನೋಗೆ ಲಕ್ ನೋ ಎಂದ ಆರ್ ಸಿ ಬಿ ತಂಡ

0

ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಆರ್‌ಸಿಬಿ ಅಬ್ಬರಕ್ಕೆ ಬಲಿಷ್ಠ ಲಕ್ನೋ ಸೂಪರ್‌ ಜೈಂಟ್ಸ್ ತಂಡ ಸೋಲೊಪ್ಪಿಕೊಂಡಿತು. ನಾಯಕ ಫಾಫ್ ಡುಪ್ಲೆಸಿಸ್ ಅಮೋಘ ಆಟ ಪ್ರದರ್ಶನದ ಜೊತೆಗೆ, ಅಚ್ಚುಕಟ್ಟಿನ ಬೌಲಿಂಗ್‌ನ ಮೂಲಕ ಆರ್‌ಸಿಬಿ ಪಂದ್ಯ ಗೆದ್ದುಕೊಂಡಿದೆ.

ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೇರಿದೆ. ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ಪರ ಅನುಜ್ ರಾವತ್‌, ವಿರಾಟ್ ಕೊಹ್ಲಿ ಮತ್ತೊಮ್ಮೆ ವೈಫಲ್ಯವು ತಂಡಕ್ಕೆ ಉತ್ತಮ ಆರಂಭ ನೀಡಲು ಸಾಧ್ಯವಾಗಲ್ಲಿಲ್ಲ.

ಆದರೆ, ಇದರ ನಡುವೆ ಭರ್ಜರಿ ಆಟವಾಡಿದ ನಾಯಕ ಫಾಫ್ ಡುಪ್ಲೆಸಿಸ್ ಒತ್ತಡದ ಸನ್ನಿವೇಶದಲ್ಲಿ ಯಾವ ರೀತಿಯ ಆಟವಾಡಬಹುದು ಎಂಬುದನ್ನ ತೋರಿಸಿಕೊಟ್ಟರು.

ಕೇವಲ 4 ರನ್‌ಗಳ ಅಂತರದಲ್ಲಿ ಫಾಫ್‌ ಶತಕ ಮಿಸ್ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲ ಓವರ್‌ನಲ್ಲೇ ಎರಡು ವಿಕೆಟ್ ಕಳೆದುಕೊಂಡ ಆರ್‌ಸಿಬಿ ಮೇಲೆ ಉಂಟಾಗಿದ್ದ ಒತ್ತಡವನ್ನ ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾದರು.

ಲಕ್ನೋ ಸೂಪರ್ ಜೈಂಟ್ಸ್ ಬೌಲರ್‌ಗಳ ಮೇಲೆ ಕೌಂಟರ್ ಅಟ್ಯಾಕ್ ಮಾಡಿದ ಫಾಫ್ ಅಮೋಘ ಆಟವಾಡಿದರು. ಆದರೆ, ಕೇವಲ 4 ರನ್‌ಗಳ ಅಂತರದಲ್ಲಿ ಸೆಂಚುರಿ ಮಿಸ್ ಮಾಡಿಕೊಂಡರು.

64 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 96 ರನ್ ಕಲೆಹಾಕಿದ ಫಾಫ್ ನಿಗದಿತ 20 ಓವರ್‌ ಮುಕ್ತಾಯಕ್ಕೆ ಇನ್ನೊಂದು ಎಸೆತ ಬಾಕಿ ಇರುವಂತೆ ಕ್ಯಾಚಿತ್ತು, ಪೆವಿಲಿಯನ್ ಸೇರಿಕೊಂಡಿದ್ದು ಮಾತ್ರ ಆರ್‌ಸಿಬಿ ಅಭಿಮಾನಿಗಳಿಗೆ ಭಾರೀ ನಿರಾಸೆ ತಂದಿತು.

ಅಂತಿಮವಾಗಿ ಆರ್‌ಸಿಬಿ ಮ್ಯಾಕ್ಸ್‌ವೆಲ್ 23, ಶಬಾಜ್ ಅಹ್ಮದ್ 26 ರನ್‌ಗಳ ಕೊಡುಗೆಯಿಂದ 6 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು.
ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲ ಓವರ್‌ನಲ್ಲೇ ಎರಡು ವಿಕೆಟ್ ಕಳೆದುಕೊಂಡ ಆರ್‌ಸಿಬಿ ಮೇಲೆ ಉಂಟಾಗಿದ್ದ ಒತ್ತಡವನ್ನ ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾದರು. ಲಕ್ನೋ ಸೂಪರ್ ಜೈಂಟ್ಸ್ ಬೌಲರ್‌ಗಳ ಮೇಲೆ ಕೌಂಟರ್ ಅಟ್ಯಾಕ್ ಮಾಡಿದ ಫಾಫ್ ಅಮೋಘ ಆಟವಾಡಿದ್ರು. ಆದ್ರೆ ಕೇವಲ 4 ರನ್‌ಗಳ ಅಂತರದಲ್ಲಿ ಸೆಂಚುರಿ ಮಿಸ್ ಮಾಡಿಕೊಂಡರು.

64 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 96 ರನ್ ಕಲೆಹಾಕಿದ ಫಾಫ್ ನಿಗದಿತ 20 ಓವರ್‌ ಮುಕ್ತಾಯಕ್ಕೆ ಇನ್ನೊಂದು ಎಸೆತ ಬಾಕಿ ಇರುವಂತೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡಿದ್ದು ಮಾತ್ರ ಆರ್‌ಸಿಬಿ ಅಭಿಮಾನಿಗಳಿಗೆ ಭಾರೀ ನಿರಾಸೆ ತಂದಿತು. ಅಂತಿಮವಾಗಿ ಆರ್‌ಸಿಬಿ ಮ್ಯಾಕ್ಸ್‌ವೆಲ್ 23, ಶಬಾಜ್ ಅಹ್ಮದ್ 26 ರನ್‌ಗಳ ಕೊಡುಗೆಯಿಂದ 6 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು.

ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮೊದಲ ಓವರ್‌ನಲ್ಲೇ ಎರಡು ವಿಕೆಟ್ ಕಳೆದುಕೊಂಡ ಆರ್‌ಸಿಬಿ ಮೇಲೆ ಉಂಟಾಗಿದ್ದ ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾದರು.

ಲಕ್ನೋ ಸೂಪರ್ ಜೈಂಟ್ಸ್ ಬೌಲರ್‌ಗಳ ಮೇಲೆ ಕೌಂಟರ್ ಅಟ್ಯಾಕ್ ಮಾಡಿದ ಫಾಫ್ ಅಮೋಘ ಆಟವಾಡಿದರು. ಆದರೆ ಕೇವಲ 4 ರನ್‌ಗಳ ಅಂತರದಲ್ಲಿ ಸೆಂಚುರಿ ಮಿಸ್ ಮಾಡಿಕೊಂಡರು.

64 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 96 ರನ್ ಕಲೆಹಾಕಿದ ಫಾಫ್ ನಿಗದಿತ 20 ಓವರ್‌ ಮುಕ್ತಾಯಕ್ಕೆ ಇನ್ನೊಂದು ಎಸೆತ ಬಾಕಿ ಇರುವಂತೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡಿದ್ದು ಮಾತ್ರ ಆರ್‌ಸಿಬಿ ಅಭಿಮಾನಿಗಳಿಗೆ ಭಾರೀ ನಿರಾಸೆ ತಂದಿತು. ಅಂತಿಮವಾಗಿ ಆರ್‌ಸಿಬಿ ಮ್ಯಾಕ್ಸ್‌ವೆಲ್ 23, ಶಬಾಜ್ ಅಹ್ಮದ್ 26 ರನ್‌ಗಳ ಕೊಡುಗೆಯಿಂದ 6 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು.
ಆರ್‌ಸಿಬಿ ಲೈನ್ & ಲೆಂಥ್ ಬೌಲಿಂಗ್‌ಗೆ ಅದುರಿದ ಲಕ್ನೋ
182 ರನ್ ಗುರಿ ಬೆನ್ನತ್ತಿದ ಲಕ್ನೋಗೆ ಆರ್‌ಸಿಬಿ ಲೈನ್ & ಲೆಂಥ್ ಸ್ಪೆಷಲಿಸ್ಟ್‌ ಬೌಲರ್ ಜೋಶ್ ಹೇಜಲ್‌ವುಡ್ ಕೈ ಹಿಡಿದರು.

ಮೊದಲೆರಡು ವಿಕೆಟ್‌ಗಳನ್ನು ಬಹುಬೇಗ ಪಡೆದ ಹೇಜಲ್‌ವುಡ್‌ ತಮ್ಮ ಖಡಕ್ ಬೌಲಿಂಗ್ ದಾಳಿ ಮೂಲಕ ಲಕ್ನೋ ಬ್ಯಾಟರ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದರು.

ಕ್ವಿಂಟನ್ ಡಿಕಾಕ್, ಮನೀಶ್ ಪಾಂಡೆ ಜೊತೆಗೆ ಕೆಳಕ್ರಮಾಂಕದ ಸ್ಫೋಟಕ ಬ್ಯಾಟರ್‌ಗಳಾದ ಆಯುಷ್ ಬದೋನಿ ಮತ್ತು ಮಾರ್ಕಸ್ ಸ್ಟೋಯ್ನಿಸ್‌ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈತನ ಜೊತೆಗೆ ಹರ್ಷಲ್ ಪಟೇಲ್ ತನ್ನ ಸ್ಥಿರ ಪ್ರದರ್ಶನದ ಮೂಲಕ ಕೆ.ಎಲ್ ರಾಹುಲ್, ಜೇಸನ್ ಹೋಲ್ಡರ್‌ನಂತಹ ಪ್ರಮುಖ ವಿಕೆಟ್ ಪಡೆದರು. ಇನ್ನು ಮೊಹಮ್ಮದ್ ಸಿರಾಜ್ ಮತ್ತು ಮ್ಯಾಕ್ಸ್‌ವೆಲ್ ತಲಾ 1 ವಿಕೆಟ್ ಪಡೆಯುವುದರ ಜೊತೆಗೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

ಆರ್‌ಸಿಬಿಯ ಬೊಂಬಾಟ್ ಬೌಲಿಂಗ್ ದಾಳಿಗೆ ಲಕ್ನೋ ಸೂಪರ್ ಜೈಂಟ್ಸ್ ಕೇವಲ 168ರನ್‌ಗಳಿಸುವಷ್ಟರಲ್ಲಿ ಶಕ್ತವಾಯಿತು. ಆರ್‌ಸಿಬಿ 18ರನ್‌ಗಳ ಗೆಲುವಿನ ನಗಾರಿ ಬಾರಿಸಿದೆ. ಜೊತೆಗೆ ಅಮೂಲ್ಯ 2 ಪಾಯಿಂಟ್ಸ್ ತನ್ನ ಅಕೌಂಟ್‌ಗೆ ಜಮಾ ಮಾಡಿಕೊಂಡಿದೆ.

ಆರ್‌ಸಿಬಿ ಪಂದ್ಯ ವೀಕ್ಷಿಸಲು ಆಗಮಿಸಿದ ಕೆಜಿಎಫ್‌ನ ಅಧೀರ
ಆರ್‌ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯದಲ್ಲಿ ಸ್ಟೇಡಿಯಂನಲ್ಲಿ ವಿಶೇಷವಾಗಿ ಅತಿಥಿಗಳು ಕಾಣಿಸಿಕೊಂಡರು.

ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾ, ವಿಶ್ವದಾದ್ಯಂತ ಧೂಳೆಬ್ಬಿಸುತ್ತಿರುವ ಕನ್ನಡ ಚಿತ್ರ ಕೆಜಿಎಫ್-2 ಸಿನಿಮಾದ ಖಳನಟ ಅಧೀರ ಪಾತ್ರ ಸಂಜಯ್ ದತ್ ಮತ್ತು ರಿಮಿಕಾ ಸೇನ್ ಪಾತ್ರ ನಿರ್ವಹಿಸಿದ ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಪಂದ್ಯ ವೀಕ್ಷಿಸಿದರು.

ದೇಶದಲ್ಲಿನ ದೈನಂದಿನ ಕೋವಿಡ್ ಪಾಸಿಟಿವಿಟಿ ದರ ಶೇ0.49

0

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,067 ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 4,30,47,594 ರಷ್ಟಾಗಿದೆ. ದೇಶದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 12,340 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದೇ ಅವಧಿಯಲ್ಲಿ 40 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರಲ್ಲಿ 34 ಮಂದಿ ಕೇರಳದವರು. ಮಹಾರಾಷ್ಟ್ರದಲ್ಲಿ ಮೂವರು, ಉತ್ತರಪ್ರದೇಶ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ತಲಾ ಒಬ್ಬರು ಅಸುನೀಗಿದ್ದಾರೆ. ಮೃತರ ಒಟ್ಟು ಸಂಖ್ಯೆ 5,22,006 ಕ್ಕೆ ಏರಿದೆ.

ಒಟ್ಟು ಸೋಂಕಿತರ ಪೈಕಿ ಶೇಕಡ 0.03 ರಷ್ಟು ಸಕ್ರಿಯ ಪ್ರಕರಣಗಳಿವೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರವು ಶೇ. 98.76 ರಷ್ಟಿದೆ.

ದೈನಂದಿನ ಪಾಸಿಟಿವಿಟಿ ದರವು ಶೇಕಡ 0.49 ಮತ್ತು ವಾರದ ಪಾಸಿಟಿವಿಟಿ ದರವು ಶೇಕಡ 0.38 ರಷ್ಟಿದೆ.

ದೇಶದಾದ್ಯಂತ 186.90 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ.

ನಿರ್ಬಂಧದಲ್ಲಿ ರಷ್ಯ ಭಾರತದಿಂದ ವೈದ್ಯಕೀಯ ಉಪಕರಣಗಳ ಖರೀದಿ

0

ಉಕ್ರೇನ್ ಮೇಲಿನ ಆಕ್ರಮಣದ ನಂತರ ನಾನಾ ರೀತಿಯ ನಿರ್ಬಂಧಕ್ಕೆ ಒಳಗಾಗಿ ವಿದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಕಡಿತಕ್ಕೊಳಗಾಗಿರು ರಷ್ಯಾ, ಇದೀಗ ಅಗತ್ಯ ವೈದ್ಯಕೀಯ ಉಪಕರಣ ಪೂರೈಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದೆ.

ಈ ಹಿನ್ನೆಲೆಯಲ್ಲಿ ರಷ್ಯಾಕ್ಕೆ ಬೇಕಾದ ವೈದ್ಯಕೀಯ ಉಪಕರಣಗಳು ಮತ್ತು ಅವುಗಳ ಪೂರೈಕೆ ವಿಧಿವಿಧಾನ ಕುರಿತು ಚರ್ಚಿಸಲು ಭಾರತ ಹಾಗೂ ರಷ್ಯಾದ ವೈದ್ಯಕೀಯ ಉತ್ಪನ್ನಗಳ ಕಂಪನಿಗಳು ಏ.22ರಂದು ವರ್ಚುವಲ್ ಆಗಿ ಸಭೆ ನಡೆಸಲಿವೆ.

ಇದರಲ್ಲಿ ವ್ಯಾಪಾರ ವೃದ್ಧಿಸುವ ಮಾರ್ಗಗಳ ಮಾತುಕತೆ ನಡೆಯಲಿದೆ ಎಂದು ಭಾರತೀಯ ವೈದ್ಯಕೀಯ ಉತ್ಪನ್ನಗಳ ಉದ್ಯಮ ಸಂಘದ ಸಂಯೋಜಕರಾದ ರಾಜೀವ್ ನಾಥ್ ಹೇಳಿದ್ದಾರೆ.

ಇದಕ್ಕೆ ರಷ್ಯಾ ವ್ಯಾಪಾರ ಸಮೂಹವಾದ ಬ್ಯುಸಿನೆಸ್ ರಷ್ಯಾ ಒಪ್ಪಿಗೆ ಸೂಚಿಸಿದೆ ಎಂದೂ ಅವರು ಹೇಳಿದ್ದಾರೆ.

ವ್ಯಾಪಕವಾದ ಆರ್ಥಿಕ ನಿರ್ಬಂಧಗಳನ್ನು ಮಾಸ್ಕೋ ಎದುರಿಸುತ್ತಿದೆ. ಆದ್ದರಿಂದ, ಶೀತಲ ಸಮರದ ಸಮಯದಲ್ಲಿ ಬಳಸಿದಂತೆಯೇ ಸ್ಥಳೀಯ ಕರೆನ್ಸಿಗಳ ಪಾವತಿ ವ್ಯವಸ್ಥೆಯ ಮೂಲಕ ರಷ್ಯಾಗೆ ರಫ್ತನ್ನು ಹೆಚ್ಚು ಮಾಡಲು ಭಾರತ ಆಶಿಸುತ್ತಿದೆ.

ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ವಿಧಿಸಿದ ನಂತರ ರಷ್ಯಾದಿಂದ ಹೆಚ್ಚಿನ ತೈಲ ಖರೀದಿಸುವ ಭಾರತದ ನಿರ್ಧಾರಕ್ಕೆ ಪಾಶ್ಚಿಮಾತ್ಯ ದೇಶಗಳು ವಿರೋಧ ವ್ಯಕ್ತಪಡಿಸಿದ್ದವು.

ಪಟ್ಟು ಬಿಡದ ರಷ್ಯ ಸೆಡ್ಡು ಹೊಡೆಯುತ್ತಿರುವ ಉಕ್ರೇನ್

0

ಉಕ್ರೇನ್‌ನ ಈಶಾನ್ಯ ಭಾಗದಲ್ಲಿರುವ ಮಾರಿಯುಪೋಲ್ ನಗರವನ್ನು ರಷ್ಯಾ ಪಡೆಗಳು ಸುತ್ತುವರೆದಿವೆ. ಉಕ್ರೇನ್‌ ಸೈನಿಕರಿಗೆ ಶರಣಾಗುವಂತೆ ಮತ್ತೊಂದು ಸೂಚನೆಯನ್ನು ರಷ್ಯಾ ರವಾನಿಸಿದೆ.

ಮಾರಿಯುಪೋಲ್‌ ನಗರದ ಸುತ್ತಲೂ ರಷ್ಯಾ ಹೆಚ್ಚಿನ ಪಡೆಗಳನ್ನು ನಿಯೋಜನೆ ಮಾಡಿದೆ. ಈ ಮೂಲಕ ಇಂದು ದಾಳಿಯನ್ನು ತೀವ್ರಗೊಳಿಸುವ ಸೂಚನೆಯನ್ನು ರಷ್ಯಾ ನೀಡಿದೆ.

ಮತ್ತೊಂದು ಕಡೆ ಉಕ್ರೇನ್‌ಗೆ ವಾಯು ರಕ್ಷಣಾ ವ್ಯವಸ್ಥೆ, ಯುದ್ಧವಿಮಾನ ಸೇರಿದಂತೆ ವಿವಿಧ ಉಪಕರಣಗಳನ್ನು ಅಮೆರಿಕ, ಬ್ರಿಟನ್ ಸೇರಿದಂತೆ ವಿವಿಧ ದೇಶಗಳು ಪೂರೈಕೆ ಮಾಡುತ್ತಿವೆ.

ನಿನ್ನೆ ಸಹ ರಷ್ಯಾ ಸೈನಿಕರು ಉಕ್ರೇನ್ ಹೋರಾಟಗಾರರಿಗೆ ಶಸ್ತ್ರಾಸ್ತ್ರ ಕೆಳಗಿಡುವಂತೆ ಸೂಚನೆ ನೀಡಿದ್ದರು.ನಂತರ ಮಾರಿಯುಪೋಲ್‌ ನಗರದ ಮೇಲೆ ದಾಳಿಯನ್ನು ಸ್ಥಗಿತಗೊಳಿಸಲಾಗಿತ್ತು.

ಇಂದು ಮಧ್ಯಾಹ್ನ 2 ಗಂಟೆಯೊಳಗೆ ಉಕ್ರೇನ್ ಸೈನಿಕರು ಶರಣಾಗಬೇಕು ಎಂದು ರಷ್ಯಾಪಡೆಗಳು ಮತ್ತೊಂದು ಗಡುವು ನೀಡಿವೆ. ಈ ವಾರ ರಷ್ಯಾ,ಉಕ್ರೇನ್ ಯುದ್ಧ ನಿರ್ಣಾಯಕಘಟ್ಟ ತಲುಪುವ ಎಲ್ಲಾ ಸೂಚನೆಗಳು ಸಿಗುತ್ತಿವೆ.

ಇನ್ನೂ ಉಕ್ರೇನ್‌ನ ಡೋನ್ಬಾಸ್ ನಗರ ಆಕ್ರಮಿಸಿಕೊಳ್ಳಲು ರಷ್ಯಾ ಪ್ರಯತ್ನ ನಡೆಸಿದೆ. ನಿನ್ನೆಯಿಂದ ಈ ನಗರದ ಮೇಲೆ ರಷ್ಯಾ ದಾಳಿ ಆರಂಭಿಸಿದೆ. ಕಲ್ಲಿದ್ದಲು ಮತ್ತು ಉಕ್ಕು ಉತ್ಪಾದನೆ ಮಾಡುವ ಪ್ರಮುಖ ನಗರ ಇದಾಗಿದೆ.

ಬಂದರು ನಗರವಾಗಿರುವ ಮಾರಿಯುಪೋಲ್‌ನಲ್ಲಿಯೂ ಉಕ್ಕು ತಯಾರಿಕಾ ಘಟಕವಿದೆ. ಆದ್ದರಿಂದ ರಷ್ಯಾ ಪಡೆಗಳು ಆ ನಗರ ಸುತ್ತುವರೆದು ಅದನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿವೆ.

ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿ ದಾಳಿಯನ್ನು ಆರಂಭಿಸಿತ್ತು. ಮೊದಲೇ ಮಾರಿಯುಪೋಲ್‌ನ ನಗರಕ್ಕೆ ಹೋಗುವ ರಸ್ತೆಗಳನ್ನು ರಷ್ಯಾ ಪಡೆಗಳು ತಮ್ಮ ವಶಕ್ಕೆ ಪಡೆದಿದ್ದವು. ಇದರಿಂದಾಗಿ ನಗರಕ್ಕೆ ಆಹಾರ, ನೀರು ಪೂರೈಕೆಗೆ ತೊಂದರೆಯಾಗಿತ್ತು.

ರಷ್ಯಾ ದಾಳಿಯಿಂದ ಈ ನಗರದಲ್ಲಿ ಇದುವರೆಗೂ ಸುಮಾರು 20 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ರಷ್ಯಾದ ದಾಳಿ ತೀವ್ರವಾಗುತ್ತಿದ್ದಂತೆಯೇ ಉಕ್ರೇನ್‌ಗೆ ಅಮೆರಿಕ ಸೇರಿದಂತೆ ವಿವಿಧ ದೇಶಗಳ ಬೆಂಬಲವೂ ಕೂಡ ಹೆಚ್ಚಾಗುತ್ತಿದೆ.

ಭಾರತ ಹಾಲು ಉತ್ಪಾದನೆಯಲ್ಲಿ ಈಗ ಪ್ರಥಮ ಸ್ಥಾನ-ಮೋದಿ

0

ಭಾರತ ಕ್ಷೀರ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ನಂ.1 ಸ್ಥಾನದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಹೇಳಿದ್ದಾರೆ.

ಭಾರತದಲ್ಲಿ ವಾರ್ಷಿಕ 8.5 ಲಕ್ಷ ಕೋಟಿ ಮೌಲ್ಯದ ಹಾಲು ಉತ್ಪಾದನೆಯಾಗುತ್ತದೆ. ಇದು ಗೋಧಿ, ಭತ್ತದ ಉತ್ಪಾದನೆಗಿಂತಲೂ ಅಧಿಕವಾಗಿದ್ದು ಸಣ್ಣ ರೈತರು ಡೈರಿ ಕ್ಷೇತ್ರದ ಅತಿ ದೊಡ್ಡ ಫಲಾನುಭವಿಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬನಸ್ಕಾಂತದ ದಿಯೋದರ್ ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿ, ಇಂದು, ಭಾರತವು ವಿಶ್ವದ ಅತಿದೊಡ್ಡ ಕ್ಷೀರ ಉತ್ಪಾದಕ ರಾಷ್ಟ್ರವಾಗಿದೆ. ಕೋಟ್ಯಂತರ ರೈತರ ಜೀವನವು ಹಾಲಿನ ಮೇಲೆ ಅವಲಂಬಿತವಾಗಿರುವಾಗ, ಭಾರತವು ವಾರ್ಷಿಕವಾಗಿ 8.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹಾಲನ್ನು ಉತ್ಪಾದಿಸುತ್ತದೆ ಎಂದು ಹೇಳಿದ್ದಾರೆ.

ಗ್ರಾಮಗಳ ವಿಕೇಂದ್ರೀಕೃತ ಆರ್ಥಿಕ ವ್ಯವಸ್ಥೆಯು ಇದಕ್ಕೆ ಉದಾಹರಣೆಯಾಗಿದೆ. ಇದಕ್ಕೆ ವಿರುದ್ಧವಾಗಿ, ಗೋಧಿ ಮತ್ತು ಅಕ್ಕಿಯ ವಹಿವಾಟು ಕೂಡ 8.5 ಲಕ್ಷ ಕೋಟಿ ರೂ. ಗೆ ಸಮನಾಗುವುದಿಲ್ಲ. ಸಣ್ಣ ರೈತರು ಹೈನುಗಾರಿಕೆ ಕ್ಷೇತ್ರದ ದೊಡ್ಡ ಫಲಾನುಭವಿಗಳು ಎಂದು ಹೇಳಿದ್ದಾರೆ.

ಹೊಸ ಡೈರಿ ಸಂಕೀರ್ಣ ಮತ್ತು ಬನಾಸ್ ಡೈರಿಯ ಆಲೂಗೆಡ್ಡೆ ಸಂಸ್ಕರಣಾ ಘಟಕವು ಸ್ಥಳೀಯ ರೈತರನ್ನು ಸಬಲೀಕರಣಗೊಳಿಸುವ ಮತ್ತು ಪ್ರದೇಶದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.