Thursday, February 26, 2026
Thursday, February 26, 2026
Home Blog Page 1618

ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ- ಬಿವೈಆರ್

0

ಶಿವಮೊಗ್ಗ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣಕ್ಕಾಗಿ ₹ 40 ಕೋಟಿ ಮಂಜೂರಾಗಿದೆ.
ಕಟ್ಟಡ ನಿರ್ಮಾಣಕ್ಕೆ ಕೂಡಲೇ ಟೆಂಡರ್‌ ಕರೆಯಲಾಗುವುದು ಎಂದು ಸಂಸದ ಬಿ.ವೈ.
ರಾಘವೆಂದ್ರ ಹೇಳಿದರು.

ಇಲ್ಲಿನ ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಉಚಿತ ಆರೋಗ್ಯ ಮೇಳದಲ್ಲಿ ಅವರು ಮಾತನಾಡಿದರು.

ಇನ್ನೂ ₹ 20 ಕೋಟಿ ಕೊರತೆ ಇದೆ. ಮಂಜೂರಾದ ಕೂಡಲೇ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆಯಬಹುದು. ಈ ಆಸ್ಪತ್ರೆ ಕಟ್ಟಡವನ್ನು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಅಥವಾ ಬೇರೆಡೆ ಜಾಗ ನೋಡಿ ಮಾಡಬೇಕೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯನ್ನು 1450 ಹಾಸಿಗೆಗಳುಳ್ಳ ಸಾಮರ್ಥ್ಯಕ್ಕೆ ಉನ್ನತೀಕರಿಸಲಾಗಿದೆ. ಶಿಕಾರಿಪುರದಲ್ಲೂ 150ರಿಂದ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಉನ್ನತೀಕರಿಸಲಾಗುತ್ತಿದೆ’ ಎಂದರು.

‘ಕೋವಿಡ್‍ನಿಂದ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ನಡೆದುಕೊಳ್ಳಬೇಕು. ಕೆಲಸದ ಒತ್ತಡಗಳ ನಡುವೆಯೂ ಒಂದು ಗಂಟೆಯಾದರೂ ಯೋಗಾಭ್ಯಾಸ, ವ್ಯಾಯಾಮಗಳಿಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಆದರ್ಶವಾಗಿರಲು ದೈವ ಭಕ್ತಿ ಗುರು ಭಕ್ತಿ ಆತ್ಮವಿಶ್ವಾಸ ಇರಬೇಕು-ಬೊಮ್ಮಾಯಿ

0

ಪೂಜ್ಯರು ಕೇವಲ ಮಠವನ್ನು ಮಾತ್ರ ಕಟ್ಟದೆ ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಜನರ ಮನಸ್ಸನ್ನು ಕಟ್ಟುತ್ತಿದ್ದಾರೆ. ನಾನು ಸಿಎಂ ಆಗಿ ಬಂದಿಲ್ಲ. ಭಕ್ತನಾಗಿ ಬಂದಿದ್ದೇನೆ. ಶೃಂಗೇರಿ ಶಾರದಾಂಬೆ ಹಾಗೂ ಹರಿಹರಪುರ ಮಠದ ಶಾರದಾ ಲಕ್ಷ್ಮಿ ನರಸಿಂಹ ಸ್ವಾಮಿ ದೇವರಿಂದ ರಾಜ್ಯವನ್ನು ಮುನ್ನಡೆಸುವ ಹೊಸ ಪ್ರೇರಣೆ ಪಡೆದುಕೊಂಡು ಹೋಗುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಶೃಂಗೇರಿ ಶಾರದಾಂಬೆ ಹಾಗೂ ಕೊಪ್ಪ ತಾಲೂಕಿನ ಐತಿಹಾಸಿಕ ಹರಿಹರಪುರ ಮಠಕ್ಕೆ ಭೇಟಿ ನೀಡಿದ ಸಿಎಂ, ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಗುರು ಎಲ್ಲರ ಸಹಾಯದಲ್ಲಿ ಬೆಳೆಯುತ್ತಿದ್ದೇವೆ. ಇದು ನಮ್ಮ ಅಕೌಂಟ್‌ನಲ್ಲಿ ಕ್ರೆಡಿಟ್ ಆಗಿರುತ್ತದೆ ಎಂದರು.

ಸಮಾಜ ಆದರ್ಶವಾಗಿ ಇರಬೇಕಾದರೆ ದೈವ ಭಕ್ತಿ, ಗುರುಭಕ್ತಿ ಹಾಗೂ ಆತ್ಮವಿಶ್ವಾಸ ಇರಬೇಕು. ಅದು ಬಹಳ ಮುಖ್ಯ. ಉತ್ಕ್ರಷ್ಟವಾದ ಪ್ರೀತಿಯೇ ಭಕ್ತಿ ಹಾಗೂ ಪವಿತ್ರ. ನಾವು ದೇವರ ಬಳಿ ಅಂತಸ್ತು, ಐಶ್ವರ್ಯ ಕೇಳುತ್ತೇವೆ ಎಂದು ತಿಳಿಸಿದರು.

ಸ್ವಾಮೀಜಿಗಳು ಲೋಕಕ್ಕಾಗಿ ಕೇಳಿ ಕೊಳ್ಳುತ್ತಾರೆ. ನಿಸ್ವಾರ್ಥ ಭಕ್ತಿಯ ಪ್ರಪಂಚದಲ್ಲಿ ನೀವು ಇದ್ದೀರಿ.ಭಗವಂತನಿಗೆ ಯಾರಿಗೆ, ಯಾವಾಗ, ಏನು ಕೊಡಬೇಕು ಎಂಬುದು ಗೊತ್ತಿದೆ. ಭಗವಂತ ಜನ್ಮ ನೀಡಿದ್ದಾನೆ. ನಾವು ಏಕೆ ಹುಟ್ಟಿದ್ದೇವೆ ಎಂಬುದಕ್ಕೆ ಉತ್ತರ ನಮ್ಮೊಳಗೆ ಇದೆ. ನಾವು ಅದನ್ನು ತಿಳಿದುಕೊಂಡರೆ ಜೀವನ ಸಾರ್ಥಕ. ಗುರುವಿನ ಬಳಿ ಭಕ್ತಿಯಲ್ಲಿ ಕರಗಿ ಲೀನವಾಗಬೇಕು.

ನಾನು ಎಂಬ ಅಸ್ತಿತ್ವವನ್ನು ವಿಸರ್ಜನೆ ಮಾಡಬೇಕು. ನಾನು ಎಂಬುದು ನಿಸರ್ಗದ ಸಣ್ಣ ಕಣ. ಯಾರೂ ಕೂಡ ಸರ್ವ ಸ್ವತಂತ್ರರಾಗಿ ಹುಟ್ಟಲ್ಲ ಎಂದರು.

ಟ್ವಿಟರ್ ಗಳ ಮೂಲಕ ಕುಟುಕಾಡುತ್ತಿರುವ ಮಾಜಿ ಸಿಎಂ ಗಳು

0

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ನಡುವಿನ ಮಾತಿನ ಸಮರ ಮುಂದುವರಿದಿದೆ.
ಇದೀಗ ಸಿದ್ದರಾಮಯ್ಯ ವಿರುದ್ಧ ಮತ್ತೆ ಟ್ವೀಟ್ ಮೂಲಕ ಪ್ರಶ್ನೆಗಳ ಸಮರ ಮುಂದುವರಿಸಿರುವ ಕುಮಾರಸ್ವಾಮಿ ಅವರು, ಪರ್ಸಂಟೇಜ್ ಪಿತಾಮಹ, ಅನೈತಿಕ ರಾಜಕಾರಣದ ಅಸಲಿ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಎಚ್. ಡಿ. ಕೆ ಅವರು, ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ, ಆ ಪಾಪಕ್ಕೆ ಪ್ರತಿಯಾಗಿ ಪಡೆದ ಫಲದ ಬಗ್ಗೆ ಪಲಾಯನವೇಕೆ ಸುಳ್ಳುರಾಮಯ್ಯ? ಕಳ್ಳಮಾಲು ಹ್ಯೂಬ್ಲೆಟ್ ವಾಚಿನ ಬಗ್ಗೆ ವಾಕರಿಕೆ ಬರುವಷ್ಟು ಹೇಸಿಗೆ ಕಥೆಗಳೇ ಇವೆ. ಇವೆರಡೂ ಪ್ರಶ್ನೆಗಳಿಗೂ ಉತ್ತರಿಸುತ್ತಿಲ್ಲ, ಯಾಕಯ್ಯಾ? ಈಶ್ವರಪ್ಪ ಬಗ್ಗೆ ಮಾತನಾಡಿ, ಅಭ್ಯಂತರವಿಲ್ಲ. ಡಿವೈಎಸ್ಪಿ ಗಣಪತಿ ಬಗ್ಗೆಯೂ ಹೇಳಿ, ಬೇಜಾರಿಲ್ಲ. ಆದರೆ, ಕಲ್ಲಪ್ಪ ಹಂಡೀಭಾಗ್ ಬಗ್ಗೆ ಮಾತನಾಡಿದರೆ ನಿಮ್ಮ ಜಾಣ ಮೌನವೇಕೆ? ಆ ಪಾಪಕ್ಕೆ ಪ್ರಾಯಶ್ಚಿತ್ತ ಅನುಭವಿಸದೇ ವಿಧಿಯೇ ಇಲ್ಲ. ಪ್ರಾಮಾಣಿಕ ಅಧಿಕಾರಿಯ ದುರಂತ ಅಂತ್ಯ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್ ಬಗ್ಗೆ ಸುಳ್ಳು ಹೇಳಿದ್ದೀರಿ. ನಾಚಿಕೆ ಆಗುವುದಿಲ್ಲವೇ ನಿಮಗೆ? ನಿಮ್ಮ ಐದು ವರ್ಷಗಳ ದುರಾಡಳಿತದಲ್ಲಿ ಆ ಜಿಲ್ಲೆಯೊಂದರಲ್ಲೇ 200 ರೈತರು ಆತ್ಮಹತ್ಯೆಗೆ ಶರಣಾದರು. ಮೈಷುಗರ್ ಕಾರ್ಖಾನೆ ಮುಚ್ಚಿಸಿ ಕಬ್ಬು ಬೆಳೆಗಾರರ ಮನೆ ಹಾಳು ಮಾಡಿದಿರಿ. ಮರೆತುಬಿಟ್ಟಿರಾ ಸುಳ್ಳುರಾಮಯ್ಯ? ಮಂಡ್ಯದಲ್ಲಿ ಏಳೂ ಸೀಟು ಸಿಗಲಿಲ್ಲ ಎಂದು ಜನರ ಮುಂದೆ ಹಲುಬುತ್ತೀರಿ. 200 ಅನ್ನದಾತರ ಜೀವಕ್ಕೆ ಎರವಾಗಿ, ಇಡೀ ಜಿಲ್ಲೆಯಲ್ಲಿ ಮರಣಮೃದಂಗ ಭಾರಿಸಿದ ನಿಮ್ಮ ರೈತವಿರೋಧಿ ನೀತಿಗಳು ಕಸಿದ ಜೀವಗಳ ಲೆಕ್ಕವೆಲ್ಲಾ ಚುಕ್ತಾ ಆಗುವ ಕಾಲ ಬಂದಿದೆ. ಜೀವ ತೆಗೆಯುವ ಜವರಾಯನ ಅವತಾರವೇ ನೀವಾಗಿರುವಾಗ ನಮ್ಮ ಕಣ್ಣೀರನ್ನು ಹಂಗಿಸುತ್ತೀರಿ ಎಂದು ಟೀಕೆ ಮಾಡಿದ್ದಾರೆ.

ಸಾರ್ವಜನಿಕ ಫ್ಲೆಕ್ಸ್ ಮೂಲಕ ಕುಂದುಕೊರತೆ ಹೇಳಿಕೊಂಡ ಶೃಂಗೇರಿ

0

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.

ಶೃಂಗೇರಿಗೂ ಸಿಎಂ ಭೇಟಿ ನೀಡುತ್ತಿದ್ದು, ಸಿಎಂ ಭೇಟಿಗೆ ಸ್ವಾಗತ ಕೋರಿ ಅಣಕವಾಡುತ್ತಿರುವ ಬ್ಯಾನರೊಂದು ಪತ್ತೆಯಾಗಿದೆ.

“ದಯವಿಟ್ಟು ನಿಧಾನವಾಗಿ ಚಲಿಸಿ, ಇದು ಆಸ್ಪತ್ರೆ ಇಲ್ಲದ ಊರು” ಎಂದು ಸಿಎಂ ಗೆ ಸೂಚಿಸುತ್ತಿರುವ ಬ್ಯಾನರ್ ಗಮನ ಸೆಳೆಯುತ್ತಿದೆ.

ಶೃಂಗೇರಿಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ 15 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಪದೇ ಪದೇ ಮಾತು ತಪ್ಪುತ್ತಿದೆ. ಹೀಗಾಗಿ ಸಿಎಂ ಗೆ ಸ್ವಾಗತ ಕೋರಿ ನಿಧಾನವಾಗಿ ಚಲಿಸುವಂತೆ ಎಚ್ಚರಿಸುವ ಬ್ಯಾನರ್ ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಶಂಗೇರಿ ಸುಸಜ್ಜಿತ ಆಸ್ಪತ್ರೆ ಮಂಜೂರಾರಿ ಕಡತವು 15 ವರ್ಷಗಳಿಂದ ಪ್ರಗತಿಯಲ್ಲಿದೆ. ತೀವ್ರ ಅನಾರೋಗ್ಯ ಸಂದರ್ಭದಲ್ಲಿ ಸುಮಾರು ನೂರು ಕಿ.ಮೀ ದೂರದ ಆಸ್ಪತ್ರೆಗೆ ತೆರೆಳಬೇಕಾದ ಕಾರಣ, ದಯವಿಟ್ಟು ತಮ್ಮ ಹಾಗೂ ನಮ್ಮ ಊರಿನವರ ಸುರಕ್ಷತೆಯ ದೃಷ್ಟಿಯಿಂದ ವಾಹನದಲ್ಲಿ ನಿಧಾನವಾಗಿ ಚಲಿಸಿ” ಎಂದು ಬರೆಯಲಾಗಿದೆ.

ಕೊಲ್ಕತ್ತಾ ವಿರುದ್ಧ ರಾಯಲ್ಸ್ ಜಯ

0

ಬ್ರಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಐಪಿಎಲ್ 15ನೇ ಆವೃತ್ತಿಯ 30ನೇ ಪಂದ್ಯದಲ್ಲಿ ರನ್ ಸುರಿಮಳೆ!.
ಮೊದಲು ಬ್ಯಾಟ್ ಮಾಡಿ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 217 ರನ್ ಬಾರಿಸಿದರೆ, ಎದುರಾಳಿ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ 19.4 ಓವರ್ ಗಳಲ್ಲಿ 210 ರನ್ ಗಳಿಗೆ ಸರ್ವ ಪತನಗೊಂಡು 7 ರನ್ ಗಳಿಂದ ಸೋಲನ್ನು ಒಪ್ಪಿಕೊಂಡಿತು. ಆರ್ ಆರ್ ಪರ ಆರಂಭಿಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್ (103 ರನ್, 61 ಎಸೆತ, 9 ಫೋರ್, 5 ಸಿಕ್ಸರ್) ಪ್ರಸಕ್ತ ಆವೃತ್ತಿಯಲ್ಲಿ ಎರಡನೇ ಹಾಗೂ ಐಪಿಎಲ್ ನಲ್ಲಿ ಒಟ್ಟಾರೆ ಮೂರು ಶತಕ ಬಾರಿಸುವ ಮೂಲಕ ಗೆಲುವಿನ ರುವಾರಿಯಾದರು ಹಾಗೆಯೇ ಇನ್ನಿಂಗ್ಸ್ ನ 17ನೇ ಓವರ್ ಎಸೆದ ಸ್ಪಿನ್ನರ್ ಯಜುವೇಂದ್ರ ಚಹಲ್ ಕೇವಲ ಎರಡು ರನ್ ನೀಡಿ ಹ್ಯಾಟ್ರಿಕ್ ಸಮೇತ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.


ಕೊನೆಯ ಓವರ್ ತನಕವೂ ಗೆಲುವು ಅತ್ತಿತ್ತ ಓಡಾಡುತ್ತಲೇ ಕೊನೆಗೆ ರಾಜಸ್ಥಾನ್ ರಾಯಲ್ಸ್ ಪಾಲಿಗೆ ದಕ್ಕಿತು. ಗುರಿ ಬೆನ್ನಟ್ಟಿದ ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ 85 ರನ್ ಭಾರಿಸಿದರೆ, ಆರಂಭಿಕ ಬ್ಯಾಟರ್ ಫಿಂಚ್ ಸ್ಪೋಟಕ 58 ರನ್ ಗಳಿಸಿದರು. ಕೊನೆಯಲ್ಲಿ ಉಮೇಶ್ ಯಾದವ್ ಎರಡು ಸಿಕ್ಸರ್ ಗಳ ಸಮೇತ 21ರನ್ ಬಾರಿಸಿ ಗೆಲುವಿನ ಆಸೆ ಮೂಡಿಸಿದರು ಆದರೆ ಒಬೇದ್ ಮುಕಾಯ್ ಎಸೆತಕ್ಕೆ ಬೌಲ್ಡ್ ಆದರೂ
ಮೊದಲು ಬ್ಯಾಟ್ ಮಾಡಲು ಸಿಕ್ಕಿದ ಅವಕಾಶವನ್ನು ಆರ್ ಆರ್ ತಂಡದ ಆರಂಭಿಕರಾದ ದೇವದತ್ ಪಡಿಕ್ಕಲ್ (24) ಹಾಗೂ ಜೋಸ್ ಬಟ್ಲರ್ ಸದುಪಯೋಗ ಪಡೆದುಕೊಂಡರು.

ಕೆಕೆಆರ್ ಬೌಲರ್ ಗಳನ್ನು ನಿರಂತರ ಕಾಡುತ್ತಾ ಮೊದಲ ವಿಕೆಟ್ ಗೆ 9.4 ಓವರ್ ಗಳಲ್ಲಿ 97 ರನ್ ಬಾರಿಸಿದರು.
ಮೂರನೆಯ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದ ನಾಯಕ ಸಂಜು ಸಮ್ಸನ್ ಕೂಡ 19 ಎಸೆತಗಳಲ್ಲಿ 38 ರನ್ ಬಾರಿಸಿ ರಸೆಲ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಶಿವಂ ಮಾವಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಗೆ ಮರಳಿದರು. ಬಳಿಕ ಶಿಂಬ್ರೋನ್ ಕೂಡ 13 ಎಸೆತಗಳಲ್ಲಿ ಅಜೇಯ 26 ರನ್ ಬಾರಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟುವಂತೆ ನೋಡಿಕೊಂಡರು. ಇನ್ನಿಂಗ್ಸ್ ನ 16ನೇ ಓವರ್ ಎಸೆದ ಪ್ಯಾಟ್ ಕಮಿನ್ಸ್ ಎಸೆತವನ್ನು ಸಿಕ್ಸರ್ ಗೆ ಹಟ್ಟಿದ ಬಟ್ಲರ್ ತಮ್ಮ ಎರಡನೇ ಶತಕ ಪೂರೈಸಿದರು ಆದರೆ, ಅದೇ ಓವರ್ ನಲ್ಲಿ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿ ಚಕ್ರವರ್ತಿ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ರಿಯಾನ್ ಪರಾಗ್ (5) ಹಾಗೂ ಕರುಣ್ ನಾಯರ್ (3) ಕಡಿಮೆ ಮೊತ್ತಕ್ಕೆ ನಿರ್ಗಮಿಸಿದರು ಕೆಕೆಆರ್ ಪರ ಸುನಿಲ್ ನರೈನ್ 21 ರನ್ ವೆಚ್ಚದಲ್ಲಿ ಎರಡು ವಿಕೆಟ್ ಪಡೆದರು.

ಬ್ರಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಐಪಿಎಲ್ 15ನೇ ಆವೃತ್ತಿಯ 30ನೇ ಪಂದ್ಯದಲ್ಲಿ ರನ್ ಸುರಿಮಳೆ!.
ಮೊದಲು ಬ್ಯಾಟ್ ಮಾಡಿ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 217 ರನ್ ಬಾರಿಸಿದರೆ, ಎದುರಾಳಿ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ 19.4 ಓವರ್ ಗಳಲ್ಲಿ 210 ರನ್ ಗಳಿಗೆ ಸರ್ವ ಪತನಗೊಂಡು 7 ರನ್ ಗಳಿಂದ ಸೋಲನ್ನು ಒಪ್ಪಿಕೊಂಡಿತು. ಆರ್ ಆರ್ ಪರ ಆರಂಭಿಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್ (103 ರನ್, 61 ಎಸೆತ, 9 ಫೋರ್, 5 ಸಿಕ್ಸರ್) ಪ್ರಸಕ್ತ ಆವೃತ್ತಿಯಲ್ಲಿ ಎರಡನೇ ಹಾಗೂ ಐಪಿಎಲ್ ನಲ್ಲಿ ಒಟ್ಟಾರೆ ಮೂರು ಶತಕ ಬಾರಿಸುವ ಮೂಲಕ ಗೆಲುವಿನ ರುವಾರಿಯಾದರು ಹಾಗೆಯೇ ಇನ್ನಿಂಗ್ಸ್ ನ 17ನೇ ಓವರ್ ಎಸೆದ ಸ್ಪಿನ್ನರ್ ಯಜುವೇಂದ್ರ ಚಹಲ್ ಕೇವಲ ಎರಡು ರನ್ ನೀಡಿ ಹ್ಯಾಟ್ರಿಕ್ ಸಮೇತ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.


ಕೊನೆಯ ಓವರ್ ತನಕವೂ ಗೆಲುವು ಅತ್ತಿತ್ತ ಓಡಾಡುತ್ತಲೇ ಕೊನೆಗೆ ರಾಜಸ್ಥಾನ್ ರಾಯಲ್ಸ್ ಪಾಲಿಗೆ ದಕ್ಕಿತು. ಗುರಿ ಬೆನ್ನಟ್ಟಿದ ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ 85 ರನ್ ಭಾರಿಸಿದರೆ, ಆರಂಭಿಕ ಬ್ಯಾಟರ್ ಫಿಂಚ್ ಸ್ಪೋಟಕ 58 ರನ್ ಗಳಿಸಿದರು. ಕೊನೆಯಲ್ಲಿ ಉಮೇಶ್ ಯಾದವ್ ಎರಡು ಸಿಕ್ಸರ್ ಗಳ ಸಮೇತ 21ರನ್ ಬಾರಿಸಿ ಗೆಲುವಿನ ಆಸೆ ಮೂಡಿಸಿದರು ಆದರೆ ಒಬೇದ್ ಮುಕಾಯ್ ಎಸೆತಕ್ಕೆ ಬೌಲ್ಡ್ ಆದರೂ
ಮೊದಲು ಬ್ಯಾಟ್ ಮಾಡಲು ಸಿಕ್ಕಿದ ಅವಕಾಶವನ್ನು ಆರ್ ಆರ್ ತಂಡದ ಆರಂಭಿಕರಾದ ದೇವದತ್ ಪಡಿಕ್ಕಲ್ (24) ಹಾಗೂ ಜೋಸ್ ಬಟ್ಲರ್ ಸದುಪಯೋಗ ಪಡೆದುಕೊಂಡರು. ಕೆಕೆಆರ್ ಬೌಲರ್ ಗಳನ್ನು ನಿರಂತರ ಕಾಡುತ್ತಾ ಮೊದಲ ವಿಕೆಟ್ ಗೆ 9.4 ಓವರ್ ಗಳಲ್ಲಿ 97 ರನ್ ಬಾರಿಸಿದರು.
ಮೂರನೆಯ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದ ನಾಯಕ ಸಂಜು ಸಮ್ಸನ್ ಕೂಡ 19 ಎಸೆತಗಳಲ್ಲಿ 38 ರನ್ ಬಾರಿಸಿ ರಸೆಲ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಶಿವಂ ಮಾವಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಗೆ ಮರಳಿದರು. ಬಳಿಕ ಶಿಂಬ್ರೋನ್ ಕೂಡ 13 ಎಸೆತಗಳಲ್ಲಿ ಅಜೇಯ 26 ರನ್ ಬಾರಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟುವಂತೆ ನೋಡಿಕೊಂಡರು. ಇನ್ನಿಂಗ್ಸ್ ನ 16ನೇ ಓವರ್ ಎಸೆದ ಪ್ಯಾಟ್ ಕಮಿನ್ಸ್ ಎಸೆತವನ್ನು ಸಿಕ್ಸರ್ ಗೆ ಹಟ್ಟಿದ ಬಟ್ಲರ್ ತಮ್ಮ ಎರಡನೇ ಶತಕ ಪೂರೈಸಿದರು ಆದರೆ, ಅದೇ ಓವರ್ ನಲ್ಲಿ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿ ಚಕ್ರವರ್ತಿ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ರಿಯಾನ್ ಪರಾಗ್ (5) ಹಾಗೂ ಕರುಣ್ ನಾಯರ್ (3) ಕಡಿಮೆ ಮೊತ್ತಕ್ಕೆ ನಿರ್ಗಮಿಸಿದರು ಕೆಕೆಆರ್ ಪರ ಸುನಿಲ್ ನರೈನ್ 21 ರನ್ ವೆಚ್ಚದಲ್ಲಿ ಎರಡು ವಿಕೆಟ್ ಪಡೆದರು.

ಹೊಸ ದತ್ತಾಂಶ ಕೇಂದ್ರ ನೀತಿಗೆ ರಾಜ್ಯ ಸಂಪುಟ ಅಸ್ತು

0

2025ರ ವೇಳೆಗೆ ದತ್ತಾಂಶ ಉದ್ಯಮದಲ್ಲಿ 10 ಸಾವಿರ ಕೋಟಿ ಹೂಡಿಕೆಯನ್ನು ಅಕರ್ಷಿಸುವ ಗುರಿ ಹೊಂದಿರುವ ಹೊಸ ದತ್ತಾಂಶ ಕೇಂದ್ರ ನೀತಿಗೆ (ಡಾಟಾ ಸೆಂಟರ್‌ ಪಾಲಿಸಿ) ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ದತ್ತಾಂಶ ಕೇಂದ್ರ ನೀತಿ-2022 ಜಾರಿಗೆ ತರಲು ತೀರ್ಮಾನಿಸಲಾಗಿದೆ.

ಇದಕ್ಕಾಗಿ 100 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ಹೊಸ ನೀತಿಯನ್ವಯ ಪ್ರೋತ್ಸಾಹ ಮತ್ತು ಸಬ್ಸಿಡಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ದೇಶದಲ್ಲಿ ಕರ್ನಾಟಕ ರಾಜ್ಯವು ದತ್ತಾಂಶ ಕೇಂದ್ರ ಕ್ಷೇತ್ರದಲ್ಲಿ ಮುಂಚೂಣಿ ಹೊಂದುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ಪ್ರಸ್ತುತ ದೇಶದಲ್ಲಿ ದತ್ತಾಂಶ ಕೇಂದ್ರದ ಉದ್ಯಮಕ್ಕೆ ಅಗ್ರ ಐದು ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ ಎಂದರು.

ದೇಶದ ಎಲ್ಲಾ ತಾಲ್ಲೂಕುಗಳಲ್ಲಿವಿಶೇಷ ಆರೋಗ್ಯ ಶಿಬಿರ- ಡಾ.ಸುಧಾಕರ್

0

ಪ್ರಧಾನ ಮಂತ್ರಿಗಳ ಆಶಯ ಮತ್ತು ಕೇಂದ್ರ ಆರೋಗ್ಯ ಸಚಿವರ ಕ್ರಿಯಾಶೀಲತೆಯಿಂದ ದೇಶದ ಎಲ್ಲಾ ತಾಲ್ಲೂಕಿನಲ್ಲಿ ವಿಶೇಷ ಆರೋಗ್ಯ ಶಿಬಿರ ಹಮ್ಮಿಕೊಂಡಿರುತ್ತದೆ.

ಇತಿಹಾಸದಲ್ಲೆ ಮೊದಲು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ.

ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನ ಕಲ್ಲು ಕಟ್ಟಡದಲ್ಲಿ ನಡೆದ ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಮತ್ತು ತಪಾಸಣಾ ಶಿಬಿರವನ್ನು ಪರಿಶೀಲಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ವಿಶೇಷ ಆರೋಗ್ಯ ಶಿಬಿರವನ್ನು ನಡೆಸಿ ಸಾರ್ವಜನಿಕರ ಆರೋಗ್ಯದಲ್ಲಿ ತೊಂದರೆಯಿದ್ದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ. ಕೆ. ಸುಧಾಕರ್ ಅವರು ಹೇಳಿದ್ದಾರೆ.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಇದ್ದರೆ ಆರೋಗ್ಯದಲ್ಲಿ ಏರುಪೇರಾದರೆ ಸರ್ಕಾರಿ ಆಸ್ಪತ್ರೆಯಾಗಲಿ ಅಥವಾ ಸರಕಾರದಿಂದ ದಾಖಲಿಸಿದ ಯಾವುದೇ ಉನ್ನತಮಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವ್ಯವಸ್ಥೆ ಇದೆ.
ಒಂದು ಬಾರಿ ಈ ಕಾರ್ಡ್ ಮಾಡಿಸಿದರೆ ಜೀವನ ಪೂರ್ತಿ ಕಾರ್ಡ್ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಇರುವಂತಹ ಎಲ್ಲಾ ಜನರಿಗೂ ಸಹ ಈ ಕಾರ್ಡನ್ನು ಉಚಿತವಾಗಿ ನೀಡಬೇಕೆಂದು ತಿಳಿಸಿದ್ದಾರೆ.

ಒಂದು ಆರೋಗ್ಯ ಶಿಬಿರಕ್ಕೆ 2 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಎಲ್ಲಾ ಸೌಲಭ್ಯವನ್ನು ಒಳಗೊಂಡಂತಹ ಆರೋಗ್ಯ ಶಿಬಿರವನ್ನು ಮಂಡ್ಯದಲ್ಲಿ ನಡೆಯುತ್ತಿರುವುದು ಬಹಳ ಶ್ಲಾಘನೀಯ ವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲೂ ಸಹ ವಿಶೇಷವಾಗಿ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಬೇಕು ಹಾಗೆ ಜನರಿಗೆ ಶಿಬಿರದ ಬಗ್ಗೆ ಇನ್ನಷ್ಟು ಜಾಗೃತಿಯನ್ನು ನೀಡಬೇಕು ಎಂದು ಸೂಚಿಸಿದರು. ಇದೇ ವೇಳೆ ಶ್ರವಣದೋಷವುಳ್ಳ ಮಕ್ಕಳಿಗೆ ಶ್ರವಣ ಸಾಧನ ಪರಿಕರಗಳಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಜಿಲ್ಲಾಧಿಕಾರಿಗಳಾದ ಎಸ್.ಅಶ್ವತಿ, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಜಿ.ಆರ್.ಜೆ ದಿವ್ಯಪ್ರಭು, ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಟಿ.ಎನ್.ಧನಂಜಯ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಾದ ಡಾ.ಸಂಜಯ್ ಟಿ.ಹೆಚ್.ಒ ಡಾ.ಜವರೇಗೌಡ,ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸತ್ಯ ಈಶ್ವರನ್ ಭಾರತದ ವಿಪ್ರೋ ಸಂಸ್ಥೆ ಮುಖ್ಯಸ್ಥ

0

ಐಟಿ ದಿಗ್ಗಜ ವಿಪ್ರೋ ನಿನ್ನೆ ಸತ್ಯ ಈಶ್ವರನ್ ಅವರನ್ನು ಭಾರತದ ವಿಪ್ರೋ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸುವುದಾಗಿ ಮಾಹಿತಿ ನೀಡಿದೆ.

ಕಾರ್ಯತಂತ್ರದ ಸಮಾಲೋಚನೆ, ರೂಪಾಂತರ ಮತ್ತು ಆಧುನೀಕರಣದ ಮಾತುಕತೆ ಮೂಲಕ ಭಾರತದಲ್ಲಿ ವಿಪ್ರೊದ ವ್ಯಾಪಾರವನ್ನು ಬಲಪಡಿಸುವ ಜವಾಬ್ದಾರಿಯನ್ನು ಈಶ್ವರನ್ ವಹಿಸಿಕೊಳ್ಳುತ್ತಾರೆ ಎಂದು ವಿಪ್ರೋ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ಕ್ಲೌಡ್, ಡಿಜಿಟಲ್, ಇಂಜಿನಿಯರಿಂಗ್ ಆರ್&ಡಿ, ಡೇಟಾ ಅಥವಾ ಅನಾಲಿಟಿಕ್ಸ್ ಮತ್ತು ಸೈಬರ್ ಸೆಕ್ಯುರಿಟಿಯಲ್ಲಿ ವಿಪ್ರೊದ ಸಾಮರ್ಥ್ಯಗಳು ಮತ್ತು ಹೂಡಿಕೆಗಳನ್ನು ನಿಯಂತ್ರಿಸಲು ಅವರು ಗ್ರಾಹಕರಿಗೆ ಸಹಾಯ ಮಾಡುತ್ತಾರೆ. ಭಾರತವು ವಿಪ್ರೊಗೆ ಕಾರ್ಯತಂತ್ರದ ಮಾರುಕಟ್ಟೆಯಾಗಿದೆ. ಹೆಚ್ಚಿನ ಮೌಲ್ಯದ ಸಲಹಾ ಸೇವೆಗಳನ್ನು ನೀಡುವಲ್ಲಿ ಸತ್ಯ ಅವರ ಶ್ರೀಮಂತ ಅಂತರರಾಷ್ಟ್ರೀಯ ಅನುಭವ ಮತ್ತು ಯಶಸ್ವಿ ಮಾರಾಟ ಮತ್ತು ನಾಯಕತ್ವದ ತಂಡಗಳನ್ನು ನಿರ್ಮಿಸುವ ಅವರ ದಾಖಲೆಯು ಭಾರತೀಯ ಗ್ರಾಹಕರಿಗೆ ವಿಶ್ವಾಸಾರ್ಹ ಪಾಲುದಾರರಾಗಿ ವಿಪ್ರೊದ ಸ್ಥಾನವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಸಿಇಒ ಅನಿಸ್ ಚೆಂಚಾಹ್ ಅವರು ಹೇಳಿದ್ದಾರೆ.

ವಿಪ್ರೋಗೆ ಸೇರುವ ಮೊದಲು, ಈಶ್ವರನ್ ಕೆಪಿಎಂಜಿ ಇಂಡಿಯಾದಲ್ಲಿ ವ್ಯಾಪಾರ ಸಲಹಾ ಮತ್ತು ದೂರಸಂಪರ್ಕ, ಮಾಧ್ಯಮ ಮತ್ತು ತಂತ್ರಜ್ಞಾನ ವಲಯದ ಮುಖ್ಯಸ್ಥರಾಗಿದ್ದರು.

ಕಾರು ಅಪಘಾತ ಜಿಲ್ಲಾಧಿಕಾರಿ ಪಾರು

0

ರಾಜ್ಯದ ಸಾವಿನ ಹೆದ್ದಾರಿ ಎಂದೆ ಪ್ರಖ್ಯಾತಿ ಪಡೆದಿರುವ ಹುಬ್ಬಳ್ಳಿ ,ಧಾರವಾಡ ಬೈಪಾಸ್ ರಸ್ತೆ ಮತ್ತೆ ಈಗ ಸುದ್ದಿಯಾಗಿದೆ. ಅಧಿಕಾರ ವಹಿಸಿಕೊಳ್ಳಲು ವಿಜಯಪುರಕ್ಕೆ ಕುಟುಂಬ ಸಮೇತ ಹೊರಟಿದ್ದ ಐಎಎಸ್ ಅಧಿಕಾರಿಯಿದ್ದ ಕಾರು ಪಲ್ಟಿಯಾದ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪದ ಬಳಿ ಸಂಭವಿಸಿದೆ. ಅದೃಷ್ಟವಶಾತ್ ಎಂದರೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಐಎಎಸ್ ಅಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಅವರ ಪತ್ನಿ ಶ್ವೇತಾ, ಮಕ್ಕಳಾದ ತನ್ವಿ, ವಿಹಾನ್ ಹಾಗೂ ಪ್ರವೀಣ ಕುಮಾರ ಕಾರಿನಲ್ಲಿ ಇದ್ದರು. ಈ ಘಟನೆ ಸುಮಾರು ಬೆಳಗಿನ ಜಾವ 5.30ರ ಸರಿಸುಮಾರಿಗೆ ನಡೆದಿದೆ.

ಘಟನೆ ನಡೆದ ನಂತರ ಎಲ್ಲರನ್ನೂ ಎಸ್ ಡಿಎಂ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ ಸಂದರ್ಭದಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ದಾವಣಗೆರೆ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ವಿಜಯಮಹಾಂತೇಶ ದಾನಮ್ಮನವರ ಅವರ ವರ್ಗಾವಣೆ ಆದೇಶ ನಿನ್ನೆಯಷ್ಟೇ ಬಂದಿತ್ತು. ವಿಜಯಪುರ ಜಿಲ್ಲಾಧಿಕಾರಿಯಾಗಲು ಹೊರಟಿದ್ದ ಸಮಯದಲ್ಲಿಯೇ ಈ ದುರ್ಘಟನೆ ನಡೆದಿದೆ.

ಯರಿಕೊಪ್ಪ ಕ್ರಾಸ್ ಬಳಿಯಲ್ಲಿ ಎದುರಿಗೆ ಬಂದ ಲಾರಿಯನ್ನು ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಶ್ರೀಲಂಕಾಗೆ ನೆರವು ನೀಡುತ್ತಿರುವ ಭಾರತಕ್ಕೆ ಶ್ಲಾಘನೆ

0

ಅಂತಾರಾಷ್ಟ್ರೀಯ ಹಣಕಾಸು ನಿಧಿ ವ್ಯವಸ್ಥಾಪಕ ನಿರ್ದೇಶಕಿಯಾದ ಕ್ರಿಸ್ಟಲಿನಾ ಜಾರ್ಜಿವಾ ಅವರು ನಿನ್ನೆ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟುಗಳನ್ನು ನಿಭಾಯಿಸಲು ಭಾರತದ ಸಹಾಯವನ್ನು ಶ್ಲಾಘಿಸಿದ್ದಾರೆ.

ಜೊತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದ್ವೀಪ ರಾಷ್ಟ್ರದೊಂದಿಗೆ ಹಣಕಾಸು ಸಂಸ್ಥೆಯು ಸಕ್ರಿಯವಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಭರವಸೆ ಯನ್ನು ನೀಡಿದ್ದಾರೆ.

ಸೀತಾರಾಮನ್ ಅವರೊಂದಿಗೆ ವಾಷಿಂಗ್ಟನ್ ಡಿಸಿ ಯಲ್ಲಿ ಐ ಎಮ್ ಎಫ್ ವಿಶ್ವ ಬ್ಯಾಂಕ್ ನ ಸಭೆಗಳ ಸಂದರ್ಭದಲ್ಲಿ ಜಾರ್ಜಿವಾ ಈ ಹೇಳಿಕೆಗಳನ್ನು ನೀಡಿದ್ದಾರೆ. ಇತ್ತೀಚಿನ ಭೌಗೋಳಿಕ ರಾಜಕೀಯ ಬೆಳವಣಿಗೆಗಳನ್ನು ಚರ್ಚಿಸುತ್ತಾ, ಸೀತಾರಾಮನ್ ಮತ್ತು ಜಾರ್ಜಿವಾ ಜಾಗತಿಕ ಆರ್ಥಿಕತೆಯ ಮೇಲೆ ಅದರ ಪ್ರಭಾವ ಮತ್ತು ಏರುತ್ತಿರುವ ಇಂಧನ ಬೆಲೆಗಳಿಗೆ ಸಂಬಂಧಿಸಿದ ಸವಾಲುಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ಆಹಾರ ಮತ್ತು ಇಂಧನ ಕೊರತೆ, ಗಗನಕ್ಕೇರುತ್ತಿರುವ ಬೆಲೆಗಳು ಮತ್ತು ವಿದ್ಯುತ್ ಕಡಿತದಿಂದ ಹೆಚ್ಚಿನ ಸಂಖ್ಯೆಯ ಜನರ ಮೇಲೆ ಪರಿಣಾಮ ಬೀರುವ ಮೂಲಕ ಸ್ವಾತಂತ್ರ್ಯದ ನಂತರ ಶ್ರೀಲಂಕಾ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಇದರ ಪರಿಣಾಮವಾಗಿ ಸರ್ಕಾರವು ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಭಾರಿ ಪ್ರತಿಭಟನೆಗಳು ನಡೆದಿವೆ.

ಕೊರೋನಾ ಹರಡುವಿಕೆಯನ್ನು ನಿಯಂತ್ರಿಸಲು ಭಾರತವು ತನ್ನ ಯಶಸ್ವಿ ಲಸಿಕೆ ಕಾರ್ಯಕ್ರಮಕ್ಕಾಗಿ ಜಾರ್ಜಿವಾ ಅವರು ಭಾರತಕ್ಕೆ ಅಭಿನಂದಿಸಿದರು. ಹಣಕಾಸು ಸಚಿವಾಲಯದ ಪ್ರಕಾರ, ಇತರ ದುರ್ಬಲ ದೇಶಗಳಿಗೆ ಕೊರೋನಾ ಪರಿಹಾರ ಬೆಂಬಲವನ್ನು ವಿಸ್ತರಿಸಿದ್ದಕ್ಕಾಗಿ ಅವರು ಭಾರತವನ್ನು ಶ್ಲಾಘಿಸಿದ್ದಾರೆ.

ಸಚಿವಾಲಯದ ಪ್ರಕಾರ, ಜಾರ್ಜಿವಾ ಅವರು ಭಾರತದ ಆರ್ಥಿಕತೆಯು ಚೇತರಿಸಿಕೊಳ್ಳಲು ಸಹಾಯ ಮಾಡಿದ ಭಾರತದ ಉತ್ತಮ ಗುರಿಯ ನೀತಿ ಮಿಶ್ರಣವನ್ನು ಶ್ಲಾಘಿಸಿದ್ದಾರೆ.