Thursday, February 26, 2026
Thursday, February 26, 2026
Home Blog Page 1619

ಉಕ್ರೇನಿನ ಡಾನ್ ಬಾಸ್ ಪ್ರದೇಶದಲ್ಲಿ ರಷ್ಯದ ತೀವ್ರ ದಾಳಿ

0

ಪೂರ್ವದ ಡಾನ್‌ಬಾಸ್‌ ಪ್ರಾಂತ್ಯದಲ್ಲಿ ರಷ್ಯಾ ತನ್ನ ತೀವ್ರ ದಾಳಿ ಆರಂಭಿಸಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ನಿನ್ನೆ ಮಾಹಿತಿ ನೀಡಿದ್ದಾರೆ.

ಡಾನ್‌ಬಾಸ್‌ಗಾಗಿ ರಷ್ಯಾ ಸೇನೆ ಯುದ್ಧ ಆರಂಭಿಸಿದೆ ಎಂದು ನಾವೀಗ ಖಚಿತಪಡಿಸಬಹುದಾಗಿದೆ. ಅದಕ್ಕಾಗಿ ಅವರು ದೀರ್ಘಕಾಲದಿಂದ ತಯಾರಿ ನಡೆಸಿದ್ದರು. ರಷ್ಯಾ ಸೇನೆಯ ಹೆಚ್ಚಿನ ಭಾಗವನ್ನು ಈ ಆಕ್ರಮಣಕ್ಕೆ ನಿಯೋಜಿಸಲಾಗಿದೆ ಎಂದು ಅವರು ಟೆಲಿಗ್ರಾಂ ಮೂಲಕ ಮಾಹಿತಿ ನೀಡಿದ್ದಾರೆ.

ರಷ್ಯಾ ಎಷ್ಟೇ ಸೈನಿಕರನ್ನು ಇಲ್ಲಿಗೆ ಕರೆತಂದರೂ, ನಾವು ಹೋರಾಡುತ್ತೇವೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ ಎಂದು ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ ರಾಜಧಾನಿ ಕೀವ್‌ ಸುತ್ತಲಿನ ಪ್ರದೇಶಗಳಿಂದ ರಷ್ಯಾ ತನ್ನ ಸೇನೆಯನ್ನು ಹಿಂಪಡೆದ ನಂತರ ಈಗ ಡಾನ್‌ಬಾಸ್‌ ಪ್ರದೇಶದಲ್ಲಿ ಹೋರಾಟವನ್ನು ತೀವ್ರಗೊಳಿಸಿದೆ.

ರಷ್ಯಾ ಪರ ಪ್ರತ್ಯೇಕತಾವಾದಿಗಳು 2014ರಿಂದಲೂ ಈ ಪ್ರದೇಶವನ್ನು ಭಾಗಶಃ ಹಿಡಿತದಲ್ಲಿಟ್ಟುಕೊಂಡಿದ್ದಾರೆ.

ಝೆಲೆನ್‌ಸ್ಕಿ ಭಾಷಣಕ್ಕೂ ಸ್ವಲ್ಪಹೊತ್ತಿಗೆ ಮೊದಲು, ಪೂರ್ವ ಲುಗಾನ್‌ಸ್ಕ್‌ ಪ್ರಾಂತ್ಯದ ಗವರ್ನರ್‌ ಸೆರ್ಗಿವ್‌ ಗಾಯ್ಡೆ ಕೂಡ, ಬಹು ನಿರೀಕ್ಷಿತ ದಾಳಿಯನ್ನು ರಷ್ಯಾ ಪ್ರಾರಂಭಿಸಿದೆ ಎಂದು ಘೋಷಿಸಿದ್ದರು. ಇದು ಕ್ರೂರವಾಗಿದೆ. ನಾವು ವಾರದ ಹಿಂದಿನಿಂದಲೂ ಹೇಳುತ್ತಿದ್ದಂತೆಯೇ ಈಗ ಆಕ್ರಮಣ ಆರಂಭವಾಗಿದೆ ಎಂದು ಸೆರ್ಗಿವ್‌ ಫೇಸ್‌ಬುಕ್‌ ಮೂಲಕ ಮಾಹಿತಿ ತಿಳಿಸಿದ್ದರು.

ಸ್ಥಳೀಯ ಅಧಿಕಾರಿಗಳ ಮಾಹಿತಿ ಪ್ರಕಾರ ರಷ್ಯಾ ನಡೆಸಿದ ಶೆಲ್‌ ದಾಳಿಯಿಂದಾಗಿ ನಿನ್ನೆ ಪೂರ್ವ ಉಕ್ರೇನ್‌ನಲ್ಲಿ ಕನಿಷ್ಠ 8 ನಾಗರಿಕರು ಸಾವನ್ನಪ್ಪಿದ್ದಾರೆ.

ಕ್ರೆಮಿನ್ನಾ ನಗರದಿಂದ ಹೊರಹೋಗಲು ಪ್ರಯತ್ನಿಸಿದ್ದ ನಾಲ್ವರು ಹಾಗೂ ನೆರೆಯ ಡೊನೆಟ್ಸ್ಕ್‌ ಪ್ರಾಂತ್ಯದಲ್ಲಿ ಇತರ 4 ಮಂದಿ ಮೃತಪಟ್ಟಿದ್ದಾರೆ.

ಡಾನ್‌ಬಾಸ್‌ ಪ್ರದೇಶದಲ್ಲಿ ರಷ್ಯಾ ಭಾರಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಉಕ್ರೇನ್‌ ಸೇನೆ ಈ ಮುಂಚೆಯೇ ಅಂದಾಜಿಸಿತ್ತು.

ಅಮೆರಿಕ ಮತ್ತು ನ್ಯಾಟೊ ಮಿತ್ರರಾಷ್ಟ್ರಗಳ ತೀವ್ರ ವಿರೋಧದ ನಡುವೆಯೂ ರಷ್ಯಾ ಫೆಬ್ರವರಿ 25ರಂದು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಇದಕ್ಕೂ ಸ್ವಲ್ಪ ಸಮಯದ ಮುಂಚೆ ಡೊನೆಟ್ಸ್ಕ್‌ ಮತ್ತು ಲುಗಾನ್‌ಸ್ಕ್‌ ಪ್ರಾಂತ್ಯಗಳು ಪ್ರತ್ಯೇಕವಾದಿಗಳ ಸ್ವತಂತ್ರ್ಯ ಪ್ರದೇಶಗಳೆಂದು ರಷ್ಯಾ ಅಧ್ಯಕ್ಷ ಪುಟಿನ್‌ ಅವರು ಘೋಷಿಸಿದ್ದರು.

ಪಿಓಕೆ ಪ್ರಧಾನಿಯಾಗಿ ಇಮ್ರಾನ್ ಪಕ್ಷದ ಇಲಿಯಾಸ್ ಆಯ್ಕೆ

0

ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಪ್ರಾಂತೀಯ ಅಧ್ಯಕ್ಷ ಸರ್ದಾರ್ ತನ್ವೀರ್ ಇಲಿಯಾಸ್ ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಈ ಚುನಾವಣೆಯಲ್ಲಿ ಇಲಿಯಾಸ್ ವಿರುದ್ಧ ಪ್ರತಿಪಕ್ಷಗಳಾದ ಪಿಪಿಪಿ ಮತ್ತು ಪಿಎಂಎಲ್-ಎನ್ ಪಕ್ಷಗಳು ಜಂಟಿಯಾಗಿ ಚೌಧರಿ ಯಾಸಿನ್ ಅವರನ್ನು ಕಣಕ್ಕಿಳಿಸಿದ್ದವು.

ಆದರೆ, ಈ ಚುನಾವಣೆಯನ್ನು ಪ್ರತಿಪಕ್ಷಗಳು ಬಹಿಷ್ಕರಿಸಿದ್ದವು. ಈ ಹಿನ್ನೆಲೆಯಲ್ಲಿ ಇಲಿಯಾಸ್ ಅವರು 33 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ದಿಂಗಾಲೇಶ್ವರ ಶ್ರೀಗಳು ಕಮೀಷನ್ ಮಾಹಿತಿ ಕೊಡಲಿ ತನಿಖೆಗೆ ಆದೇಶಿಸುವೆ

0

ದಿಂಗಾಲೇಶ್ವರ ಸ್ವಾಮಿಗಳು ಸರ್ಕಾರದ ಕಮಿಷನ್ ಬಗ್ಗೆ ವಿವರಗಳನ್ನು ನೀಡಿದರೆ ಸಂಪೂರ್ಣವಾಗಿ ತನಿಖೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಠಗಳಿಗೆ ಅನುದಾನ ಬಿಡುಗಡೆ ಮಾಡುವುದಕ್ಕೆ ಕಮಿಷನ್ ನೀಡಿರುವ ಕುರಿತು ದಿಂಗಾಲೇಶ್ವರ ಸ್ವಾಮಿಗಳು ಮಾಡಿರುವ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

ದಿಂಗಾಲೇಶ್ವರರು ಪರಮಪೂಜ್ಯರು, ಮಹಾತ್ಮರು, ತಪಸ್ವಿಗಳು. ಮಠಾಧೀಶರು ಹೇಳಿಕೆ ನೀಡಿದರೆ ಸಾಲುವುದಿಲ್ಲ. ಅವರು ಯಾರು, ಯಾರಿಗೆ, ಯಾವುದಕ್ಕಾಗಿ ಎಷ್ಟು ಪರ್ಸೆಂಟ್ ಹಣ ಕೊಟ್ಟಿದ್ದಾರೆ ಎಂದು ವಿವರಗಳನ್ನು ನೀಡಿದರೆ ಅದರ ಆಳಕ್ಕೆ ಹೋಗಿ ಸಂಪೂರ್ಣವಾಗಿ ತನಿಖೆ ಮಾಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಆಯೋಜಿಸಿದ್ದ ಕೃಷ್ಣಾ-ಮಹಾದಾಯಿ-ನವಲಿ ಸಂಕಲ್ಪಯಾತ್ರೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ದಿಂಗಾಲೇಶ್ವರ ಶ್ರೀಗಳು,”ಮಠಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನ ಪಡೆಯಲು ಶೇ. 30 ಕಮಿಷನ್ ನೀಡಬೇಕಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲಿಗೆ ಬಂದು ನಿಂತಿದೆ. ಅನುದಾನ ಪರ್ಸೆಂಟೇಜ್ ಕಡಿತ ಆದ ನಂತರವಷ್ಟೇ ಕಟ್ಟಡದ ಕೆಲಸ ಆರಂಭವಾಗುತ್ತದೆ ಎಂದು ಶ್ರೀಗಳು, ಸರಕಾರದ ವಿರುದ್ದ ಆರೋಪಿಸಿದ್ದರು.

ರಾಜ್ಯ ಸರ್ಕಾರದಿಂದ ಮೊದಲು ರೈತರ ಜಮೀನಿಗೆ ನೀರು ಕೊಡುವ ಕೆಲಸವಾಗಬೇಕಿದೆ. ಅದಕ್ಕಾಗಿಯೇ ಉತ್ತರ ಭಾರತದಲ್ಲಿ ಒಂದು ವರ್ಷ ಯಾವುದಕ್ಕೂ ಅಂಜದೇ ರೈತರು ನಡೆಸಿದ ಹೋರಾಟದ ರೀತಿಯಲ್ಲೇ ಪ್ರತಿರೋಧ ತೋರಿದರೆ ಮಾತ್ರ ರೈತರಿಗೆ ಅನ್ನ ಸಿಕ್ಕೀತು,ಎಂದು ದಿಂಗಾಲೇಶ್ವರ ಸ್ವಾಮಿಗಳು ಹೇಳಿದ್ದರು.

ಸರ್ಕಾರದಲ್ಲಿ ಕಮಿಷನ್ ನೀಡದಿದ್ದರೆ ಯಾವುದೇ ಕಾರಣಕ್ಕೂ ಹಣ ಬಿಡುಗಡೆ ಆಗುವುದಿಲ್ಲ. ಇಂತಿಷ್ಟು ಹಣವನ್ನು ನೀಡದಿದ್ದರೆ ಅನುದಾನ ಬಿಡುಗಡೆ ಆಗುವುದಿಲ್ಲ ಎಂದು ಅಧಿಕಾರಿಗಳೇ ನೇರವಾಗಿ ಹೇಳುತ್ತಾರೆ. ನಾಡಿನಲ್ಲಿ ಬುದ್ದಿಗೇಡಿ ಸರ್ಕಾರವಿದೆ ಎಂದಿದ್ದರು.

ಕೋವಿಡ್ ನಿರ್ವಹಣೆಯಲ್ಲಿ ಚೀನಾ ಎಡವಟ್ಟು ಆರ್ಥಿಕತೆಗೆ ಪೆಟ್ಟು

0

ಕೋವಿಡ್ ವಿಚಾರದಲ್ಲಿ ಚೀನಾ ಅನುಸರಿಸುತ್ತಿರುವ ತಪ್ಪು ಕ್ರಮದಿಂದ ಅನಾನುಕೂಲವೇ ಹೆಚ್ಚು.

ಶಾಂಘೈನ ಆರೋಗ್ಯ ಇಲಾಖೆ ನೌಕರರು ಬಿಡುವಿಲ್ಲದ ದುಡಿಮೆಯಿಂದ ಹೈರಾಣಾಗಿದ್ದಾರೆ.

ಚೀನಾದ ಶಾಂಘೈ ಮಹಾನಗರದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ವೃದ್ಧರ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರ ಸಾವು ಪ್ರತಿದಿನ ಎಂಬಂತೆ ವರದಿಯಾಗುತ್ತಿದೆ ಎಂದು ತಿಳಿದುಬಂದಿದೆ.
ಒಬ್ಬ ಆರೋಗ್ಯ ಕಾರ್ಯಕರ್ತನೂ ಮೃತಪಟ್ಟಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಶಾಂಘೈನ ಆರೋಗ್ಯ ಇಲಾಖೆ ನೌಕರರು ಲಾಕ್​ಡೌನ್ ನಿರ್ಬಂಧ ಜಾರಿ ಮತ್ತು ಜನರಿಗೆ ಸೇವೆ ಒದಗಿಸುವ ಕರ್ತವ್ಯದಲ್ಲಿ ಏಕಕಾಲಕ್ಕೆ ತೊಡಗಿಸಿಕೊಂಡಿದ್ದು ಕೆಲಸದ ಒತ್ತಡದಿಂದ ಹೈರಾಣಾಗಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಆರೋಗ್ಯ ಇಲಾಖೆ ನೌಕರರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಶನಿವಾರ ಚೀನಾದ ಶಾಂಘೈನಲ್ಲಿ 23,000 ಮಂದಿಯಲ್ಲಿ ಹೊಸದಾಗಿ ಕೊವಿಡ್ ಸೋಂಕು ಪತ್ತೆಯಾಗಿದೆ. ಆದರೆ ಈ ಪೈಕಿ 1015 ಮಂದಿಯಲ್ಲಿ ಮಾತ್ರ ರೋಗ ಲಕ್ಷಣಗಳಿದ್ದವು.

ಶಾಂಘೈನಲ್ಲಿ ಕೊವಿಡ್ ಸೋಂಕು ಪತ್ತೆಯಾಗಿದ್ದರೂ ಬಹುತೇಕ ಸೋಂಕಿತರಲ್ಲಿ ಯಾವುದೇ ಸೋಂಕು ಲಕ್ಷಣಗಳಿಲ್ಲ. ಆದರೆ ಚೀನಾ ಸರ್ಕಾರವು ಹಟಕ್ಕೆ ಬಿದ್ದಂತೆ ಲಾಕ್​ಡೌನ್ ಹೇರಿ, ಸೋಂಕಿತರನ್ನು ಕ್ವಾರಂಟೈನ್​ಗೆ ಒಳಪಡಿಸಿರುವ ಕಾರಣ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಆಗುತ್ತಿದೆ.
ಚೀನಾದ ಶಾಂಘೈ ನಗರದಲ್ಲಿ ಕಾಣಿಸಿಕೊಂಡಿರುವ ಕೊವಿಡ್ ಸೋಂಕು ಮತ್ತು ಅದನ್ನು ತಡೆಯಲು ಚೀನಾ ಅನುಸರಿಸುತ್ತಿರುವ ಕಟ್ಟುನಿಟ್ಟಿನ ಪ್ರತಿಬಂಧಕ ನೀತಿಯಿಂದಾಗಿ ಸರಕು ಪೂರೈಕೆ ಸರಪಣಿಗೆ ಧಕ್ಕೆ ಒದಗಿದೆ.

ಶಾಂಘೈನ ಡೊಂಘೈ ಎಲ್​ಡರ್​ಲಿ ಕೇರ್ ಆಸ್ಪತ್ರೆಯಲ್ಲಿ ಹಲವು ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಸೋಸಿಯೇಟೆಟ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ವೃದ್ಧರನ್ನು ನೋಡಿಕೊಳ್ಳುತ್ತಿದ್ದವರಲ್ಲಿ ಸೋಂಕು ಪತ್ತೆಯಾದ ನಂತರ ಅವರನ್ನು ಕಡ್ಡಾಯ ಕ್ವಾರಂಟೈನ್​ಗೆ ಒಳಪಡಿಸಲಾಯಿತು. ಈ ವೇಳೆ ವೃದ್ಧರ ಆರೈಕೆ ಮಾಡಲು ಯಾರೂ ಇರಲಿಲ್ಲ. ಆಸ್ಪತ್ರೆಗೆ ಸಿಬ್ಬಂದಿಯ ಮೇಲೆಯೂ ಕೊರೊನಾ ಕರ್ತವ್ಯದ ಒತ್ತಡವಿದ್ದ ಕಾರಣ ಅವರಿಗೂ ವೃದ್ಧರ ಆರೈಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ ಸಾಕಷ್ಟು ಜನರು ಮೃತಪಟ್ಟಿದ್ದಾರೆ ಎಂದು ಚೀನಾದ ಅಧಿಕಾರಿಗಳು ವಿವರಿಸಿದ್ದಾರೆ.

ಕ್ವಾರಂಟೈನ್​ನಲ್ಲಿರುವ ಸಂಬಂಧಿಗಳು ಆಸ್ಪತ್ರೆಯಲ್ಲಿರುವ ತಮ್ಮ ಕುಟುಂಬಗಳ ಹಿರಿಯರ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿರುವವರಿಗೆ ನೀಡುತ್ತಿರುವ ಚಿಕಿತ್ಸೆಯ ವಿಡಿಯೊಗಳನ್ನು ಪೋಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬಂದರುಗಳಲ್ಲಿ ಸರಕು ಇಳಿಸುವುದು ಮತ್ತು ಹಡಗುಗಳಿಗೆ ಲೋಡ್ ಮಾಡುವ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಬಂದರಿನಲ್ಲಿ ಇಳಿಸಿರುವ ಸರಕುಗಳು ಸಹ ಉದ್ದೇಶಿತ ಸ್ಥಳಗಳಿಗೆ ತಲುಪುತ್ತಿಲ್ಲ. ಸರಕು ಪೂರೈಕೆ ಸರಪಣಿಯಲ್ಲಿ ಏರುಪೇರಾಗಿರುವುದರಿಂದ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕ್ರಿಯೆಗಳು ಸ್ಥಗಿತತೊಂಡಿದ್ದು, ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುವ ಅಪಾಯ ಎದುರಾಗಿದೆ ಎಂದು ತಿಳಿದುಬಂದಿದೆ.

ಚೀನಾದ ಮಹತ್ವಾಕಾಂಕ್ಷಿ ಜಿಡಿಪಿ ಪ್ರಗತಿಯ ನಿರೀಕ್ಷೆಗೂ ಕೊವಿಡ್ ತಣ್ಣೀರು ಎರಚಿದೆ. ಇತ್ತೀಚೆಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಚೀನಾದ ಆರ್ಥಿಕತೆಯನ್ನು ನಿರ್ವಹಿಸುವುದೇ ಅಲ್ಲಿನ ಆಡಳಿತಕ್ಕೆ ದೊಡ್ಡ ಸವಾಲಾಗಿದೆ.

ಚೀನಾದ ವಾಣಿಜ್ಯ ನಗರಿ ಶಾಂಘೈ ಮಾತ್ರವೇ ಅಲ್ಲ, ಟೆಕ್ ಸಿಟಿ ಎನಿಸಿಕೊಳ್ಳುವ ಶೆನ್​ಝೆನ್​ನಲ್ಲಿಯೂ ಕೊವಿಡ್ ಕಾಣಿಸಿಕೊಂಡಿದ್ದು ಲಾಕ್​ಡೌನ್ ಘೋಷಿಸಲಾಗಿದೆ.

ಶಾಂಘೈ ಬಂದರು ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಕಾರು ತಯಾರಿಕಾ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿವೆ.

ದಾವಣಗೆರೆ- ತುಮಕೂರು ರೈಲ್ವೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ

0

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್‌ ಕುಮಾರ್‌ ಸೂಚನೆ ನೀಡಿರುವ ಪ್ರಕಾರ ಮೇ ಅಂತ್ಯದ ವೇಳೆಗೆ .ದಾವಣಗೆರೆ- ಚಿತ್ರದುರ್ಗ-ತುಮಕೂರು ನೂತನ ಮಾರ್ಗದ ಭೂಸ್ವಾಧೀನಕ್ಕೆ ಅಧಿಕಾರಿಗಳ ತಂಡ ರಚಿಸಿ ಜಂಟಿ ಸರ್ವೇ ಕಾರ್ಯಕೈಗೊಳ್ಳವಂತೆ ತಿಳಿಸಿರುತ್ತಾರೆ.

ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೂತನ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಕುರಿತು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಂದಾಯ, ಭೂಮಾಪನ, ರೈಲ್ವೆ, ಲೋಕೋಪಯೋಗಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡವು ಸರ್ವೇ ನಡೆಸಬೇಕು ಮತ್ತು ಮೇ ಅಂತ್ಯಕ್ಕೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಲು ಸರ್ಕಾರದ ಮುಂದೆ ತರಲು ಮುಂದಾಗಬೇಕು . ಮೇ ತಿಂಗಳ ಮಧ್ಯದ ವೇಳೆಗೆ ಮೊದಲ ಹಂತದ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದರು. ಭೂಸ್ವಾಧೀನಕ್ಕೆ ಅಗತ್ಯ ಇರುವ 200 ಕೋಟಿ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು. ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಆರ್‌.ಚಂದ್ರಯ್ಯ ಮಾತನಾಡಿ, ಹಿರಿಯೂರು ತಾಲ್ಲೂಕಿಗೆ 77 ಕೋಟಿ ಪರಿಹಾರ‌ ಬಿಡುಗಡೆಯಾಗಿದ್ದು, 49 ಕೋಟಿ ಪರಿಹಾರ ವಿತರಿಸಲಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 183 ಎಕರೆ ಭೂಮಿ ಸ್ವಾಧೀನಕ್ಕೆ ಪರಿಹಾರ ನಿಗದಿಪಡಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಶ್ರೀಧರ್, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಎನ್‌. ಸತೀಶ್‌ ಬಾಬು, ಭೂದಾಖಲೆ ಇಲಾಖೆ ಉಪನಿರ್ದೇಶಕ ರಾಮಾಂಜನೇಯ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಅಂತು ಬಹುದಿನದ ಕನಸು ನನಸಾಗುವ ಕಾಲ ಹತ್ತಿರಕ್ಕೆ ಬಂದಿದೆ.ದಾವಣಗೆರೆಯಿಂದ ತುಮಕೂರಿನ ತನಕ ಬರುವ ಹಳ್ಳಿಗಳಿಗೆ ಅನುಕೂಲ ಕಲ್ಪಿಸಿ ಬಡವರಿಗೆ ಅನುಕೂಲ ಅಗುವುದರಲ್ಲಿ ಸಂಶಯವಿಲ್ಲ. ತಕ್ಷಣ ಕಾರ್ಯವನ್ನು ಪ್ರಾರಂಭಿಸಲು ರೈಲ್ವೆ ಇಲಾಖೆ ಸರ್ಕಾರದ ಜೊತೆ ಹೆಚ್ಚಾಗಿ ಸಂಪರ್ಕ ಇಡಲು ಸಾರ್ವಜನಿಕರು ಮನವಿ ಮಾಡಿದರು.

ವರದಿ: ಮುರುಳೀಧರ್ ನಾಡಿಗೇರ್
ಭರಮಸಾಗರ

ಹೈಕೋರ್ಟಿಗೆ ಬೇಸಿಗೆ ರಜೆ ಎಲ್ಲರಿಗೆ ಅಗತ್ಯ ಮಾಹಿತಿ

0

ಏಪ್ರಿಲ್ 25ರಿಂದ ಮೇ 21ರವರೆಗೆ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ, ಕಲಬುರ್ಗಿ ಹಾಗೂ ಧಾರವಾಡ ಪೀಠಗಳಿಗೆ ಬೇಸಿಗೆ ರಜೆ ನೀಡಲಾಗಿದೆ. ಬೇಸಿಗೆ ರಜೆ ಸಲುವಾಗಿ ಕರ್ನಾಟಕ ಹೈಕೋರ್ಟ್ ತನ್ನ ಕಾರ್ಯವನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದೆ.

26.04.2022, 28.04.2022, 05.05.2022, 10.05.2022, 12.05.2022 ರಂದು, ಗೌರವಾನ್ವಿತ ನ್ಯಾಯಾಧೀಶರು ರಜಾಕಾಲದ ನ್ಯಾಯಾಧೀಶರಾಗಿ ಬೆಂಗಳೂರಿನ ಪ್ರಧಾನ ಪೀಠದಲ್ಲಿ ಕುಳಿತುಕೊಳ್ಳಲಿದ್ದಾರೆ.

ದಿನಾಂಕ 17.05.2022 ಮತ್ತು 19.05.2022 ರಂದು ನ್ಯಾಯಾಲಯ ಸಭಾಂಗಣಗಳಲ್ಲಿ ತುರ್ತು ವಿಷಯಗಳನ್ನು ಆಲಿಸಲು ಬೆಳಿಗ್ಗೆ 10.30 ಕ್ಕೆ ಕೋರ್ಟ್‌ ಇರಲಿದೆ.

ಭೌತಿಕ ಫೈಲಿಂಗ್ ಅನ್ನು ಆಯಾ ಬೆಂಚುಗಳಲ್ಲಿ ಅನುಮತಿಸತಕ್ಕದ್ದು. ಧಾರವಾಡ ಮತ್ತು ಕಲಬುರಗಿ. ಧಾರವಾಡದಲ್ಲಿ ಫೈಲಿಂಗ್ ಕೌಂಟರ್ ಗಳು ಮತ್ತು ಕಲಬುರಗಿ ಬೆಂಚುಗಳನ್ನು ಎಲ್ಲಾ ಕೆಲಸದ ದಿನಗಳಲ್ಲಿ ತೆರೆದಿಡಬೇಕು. ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.30 ರವರೆಗೆ ಇ-ಫೈಲಿಂಗ್ ಮೂಲಕ ಇ-ಫೈಲಿಂಗ್ ಅನ್ನು ಸಹ ಅನುಮತಿಸಲಾಗುತ್ತದೆ ಎಂದು ಮಾಹಿತಿಯಿಂದ ತಿಳಿದುಬಂದಿದೆ.

ನವದೆಹಲಿಯಲ್ಲಿ ಕೊಡವಿಕೊಂಡೆದ್ದ ಕೋವಿಡ್ ಸೋಂಕು!

0

ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಕೊರೋನಾ ಪಾಸಿಟಿವಿಟಿ ದರ ಹೆಚ್ಚಾಗಿದೆ. ಕಳೆದ ಎರಡು ವಾರಗಳಲ್ಲಿ ಕೊರೋನಾ ಪಾಸಿಟಿವಿಟಿ ದರ 0.5% ನಿಂದ 5%ಗೆ ಹೆಚ್ಚಳವಾಗಿದೆ.

ಒಂದೇ ದಿನ 461 ಕೋವಿಡ್ ಕೇಸ್ ಗಳು ಕಂಡುಬಂದಿದೆ. ಪಾಸಿಟಿವಿಟಿ ದರ 5.33% ನಷ್ಟಾಗಿದೆ. ಒಟ್ಟು 366 ಕೇಸ್ ಗಳು ದಾಖಲಾಗಿವೆ.

ಜನವರಿಯಲ್ಲಿ 6.2% ನಷ್ಟಿದ್ದ ಪಾಸಿಟಿವಿಟಿ ದರ ಫೆಬ್ರವರಿಯಲ್ಲಿ 5.09% ಗೆ ತಲುಪಿತ್ತು. ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಈ ನಿಯಮಗಳು ಅನಿವಾರ್ಯವಾಗಿದೆ ಎಂದು ವೈದ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ಎಲ್ಲೆಡೆ ಮೈಕ್ರೋ ಎಟಿಎಂ ಯಂತ್ರ ಒದಗಿಸಲಾಗುತ್ತದೆ- ಬಿ.ಎಸ್. ವೈ

0

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ವತಿಯಿಂದ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮವನ್ನು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನೆರವೇರಿಸಲಾಯಿತು.

ರಾಜ್ಯದ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಶಿವಮೊಗ್ಗ ಉಸ್ತುವಾರಿ ಸಚಿವರು ಆಗಿರುವ ಶ್ರೀ ಕೆ ಸಿ ನಾರಾಯಣ ಗೌಡ್ರು ಸಹಕಾರ ಧ್ವಜಾರೋಹಣವನ್ನು ನೆರವೇರಿಸಿದರು.

ವಿಶೇಷ ಆಹ್ವಾನಿತರಾದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಮೈಕ್ರೋ ಎಟಿಎಂ ಮಿಷನ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕವಾಗಿ ನೂರು ಕೃಷಿ ಪತ್ತಿನ ಸಹಕಾರ ಸಂಘ ಆಯ್ಕೆ ಮಾಡಲಾಗಿದೆ ಎಂದು ಯಡಿಯೂರಪ್ಪ ಅವರು ತಿಳಿಸಿದರು.

ಮೊಬೈಲ್ ಬ್ಯಾಂಕಿಂಗ್ ಸೇವಾ ಸೌಲಭ್ಯಗಳನ್ನು ಜಾರಿಗೊಳಿಸಲಾಗುತ್ತದೆ. ಮೊಬೈಲ್ ಅಪ್ಲಿಕೇಶನ್ ತರುವ ನಿಟ್ಟಿನಲ್ಲಿ ಬ್ಯಾಂಕಿಂಗ್ ವ್ಯವಹಾರಗಳನ್ನೂ ಜಾರಿಗೊಳಿಸಲಾಗುತ್ತದೆ. ರೈತರಿಗೆ ಹಾಗೂ ಸ್ವಸಹಾಯ ಸಂಘದ ಮನೆಬಾಗಿಲಿಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಯಡಿಯೂರಪ್ಪ ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಸೊರಬ ತಾಲೂಕಿನಲ್ಲಿ ಒಂದು, ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ, ಭದ್ರಾವತಿ ತಾಲೂಕಿನ ಕಲ್ಲಿ ಹಾಳ್ ಗ್ರಾಮದಲ್ಲಿ ಹೊಸ ಮೂರು ಮುಖ್ಯ ಶಾಖೆಯನ್ನು ತೆರೆಯುವ ಯೋಜನೆ ಹಮ್ಮಿಕೊಂಡಿದ್ದೇವೆ
ಎಂದು ತಿಳಿಸಿದರು.

ರಾಜ್ಯದ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಸಾವಿರದ ಒಂಬೈನೂರ 61 ರಲ್ಲಿ ಅತ್ಯಂತ ಬಡತನದಲ್ಲಿ ನನ್ನ ಕುಟುಂಬ ಇತ್ತು. ಒಂದು ಹೊತ್ತಿನ ಊಟಕ್ಕೂ ಕಷ್ಟ ಇದ್ದಂತಹ ಕಾಲ ಅದಾಗಿತ್ತು. ಬೆಳೆದಿದ್ದೆಲ್ಲ ಸಾಲ ಕೊಟ್ಟವರಿಗೆ ಮಾರಿ ನಾವು ಮುಳುಗಿ ಹೋಗ್ತಾ ಇದ್ವಿ. ಈ ಸಂದರ್ಭದಲ್ಲಿ ನಮಗೆ ಡಿಸಿಸಿ ಬ್ಯಾಂಕ್ ಆರಗ ಸೊಸೈಟಿ ಸಾಲ ಕೊಟ್ಟಿತ್ತು ಎಂದು ಡಿಸಿಸಿ ಬ್ಯಾಂಕಿನ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದರು.

ಪ್ರಸ್ತುತ ಸಂದರ್ಭದಲ್ಲಿ 23 ಕೋಟಿ 26 ಲಕ್ಷ ಲಾಭಗಳಿಸಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. 4. 21% ರಸ್ತು ತಿಳಿದಿದೆ ಎನ್ನುವ ಸಂಭ್ರಮಕ್ಕಾಗಿ ನಾವಿಂದು ಬಂದಿದ್ದೇವೆ. ಠೇವಣಿ ಮತ್ತು ಸಾಲ 244 ಕೋಟಿ ಬ್ಯಾಂಕ್ ನಂಬಿ ಜನ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಲೋಕಸಭೆ ಶಿವಮೊಗ್ಗ ಕ್ಷೇತ್ರ ಸಂಸದರಾದ ಬಿ .ವೈ.
ರಾಘವೇಂದ್ರ ಅವರು ಮಾತನಾಡಿ, ಇಲ್ಲಿ ವಿಶೇಷವಾದ ಸಮಾರಂಭ ನಡೆಯುತ್ತಿದೆ. ಈ ಕ್ಷೇತ್ರಕ್ಕೆ ಅನೇಕ ವರ್ಷಗಳ ಇತಿಹಾಸ ವಿದೆ. ಇತಿಹಾಸಕ್ಕೆ ಶಕ್ತಿ ತುಂಬಿದಂತಹ ನಮ್ಮ ಶಿವಮೊಗ್ಗ ಕ್ಷೇತ್ರದ ದಿ. ರುದ್ರಪ್ಪ ನವರ ಕೊಡುಗೆ ಅಪಾರ ಎಂದರು.

ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ನಮ್ಮ ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಇದು ಹೆಮ್ಮೆಯ ವಿಚಾರ ಎಂದರು.

ದೇಶದಲ್ಲಿ ಹಿಂದುಳಿದ ಜನರಿಗೆ ಆರ್ಥಿಕ ಬೆಂಬಲ ಸಿಕ್ಕಿರುವುದು ಸಹಕಾರಿ ಕ್ಷೇತ್ರದಿಂದ ಎಂದು ಬಿವೈ ರಾಘವೇಂದ್ರ ಅವರು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಹರತಾಳು ಹಾಲಪ್ಪ, ಕೆ ಪಿ ಅಶೋಕ್ ನಾಯಕ್ ವಿಧಾನಸಭೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಶಾಸಕರು, ಶ್ರೀ ಆಯನೂರು ಮಂಜುನಾಥ ವಿಧಾನಪರಿಷತ್ ಸದಸ್ಯರು, ಶ್ರೀ ಎಸ್ ರುದ್ರೆ ಗೌಡರು ವಿಧಾನಪರಿಷತ್ ಶಾಸಕರು, ಇನ್ನು ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಏಪ್ರಿಲ್21 ರಂದು ಶಿವಮೊಗ್ಗದಲ್ಲಿ ಸರ್ವೋತ್ತಮ ಸೇವಾಪ್ರಶಸ್ತಿ ವಿತರಣೆ

0

ರಾಜ್ಯ ಸರ್ಕಾರವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತ ನೌಕರರನ್ನು ಗುರುತಿಸಿ, ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲು ಉದ್ದೇಶಿಸಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 10ಜನ ಹಾಗೂ ಕಳೆದ ಸಾಲಿನಲ್ಲಿನ 10 ಜನ ಪ್ರತಿಭಾವಂತ ನೌಕರರನ್ನು ಗುರುತಿಸಲಾಗಿದ್ದು ಒಟ್ಟು 20 ಜನ ನೌಕರರನ್ನು ಏಪ್ರಿಲ್ 21 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ನೌಕರರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಪತ್ರ, ಸ್ಮರಣಿಕೆ ಹಾಗೂ 10,000 ರೂ.ಗಳ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.

ಅವರು ಇಂದು ಸರ್ಕಾರಿ ನೌಕರರ ದಿನಾಚರಣೆ ಕುರಿತು ಕೆ ಲೈವ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಏಪ್ರಿಲ್ 12ರಂದು ನಡೆಸಲಾಗುತ್ತಿದ್ದ ನಾಗರೀಕ ಸೇವಾ ದಿನವನ್ನು ರಾಜ್ಯ ಸರ್ಕಾರಿ ನೌಕರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿಂದೆ ಗಣರಾಜ್ಯೋತ್ಸವ ದಿನದಂದು ವಿತರಿಸಲಾಗುತ್ತಿದ್ದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಏಪ್ರಿಲ್ 21ರಂದು ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತಿದೆ ಎಂದವರು ನುಡಿದರು.

ಈ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು ಎದುರಿಸುತ್ತಿರುವ ಸವಾಲು, ಒತ್ತಡಗಳು, ಅದರ ಪರಿಹಾರೋಪಾಯಗಳು, ಸಾಮಾಜಿಕ ಹಾಗೂ ಕೌಟುಂಬಿಕ ನಿರ್ವಹಣೆಗೆ ಮಾರ್ಗದರ್ಶನ ಕುರಿತು ಆಹ್ವಾನಿತ ತಜ್ಞರಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದ್ದು, ಅಂದು ಎಲ್ಲಾ ಶ್ರೇಣಿಯ ಅಧಿಕಾರಿ-ನೌಕರರು ಒಂದೆಡೆ ಕಲೆತು ವಿಷಯ ವಿನಿಮಯ ಮಾಡಿಕೊಳ್ಳಲು ವೇದಿಕೆ ಕಲ್ಪಿಸಿದಂತಾಗಲಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಅಪರೂಪದ ಕಾರ್ಯಕ್ರಮ ಆಯೋಜಿಸಿದ ರಾಜ್ಯ ನಮ್ಮದಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಪ್ರಶಸ್ತಿಗೆ ಎಲ್ಲಾ ವೃಂದಗಳ ಕಾಯಂ ಸರ್ಕಾರಿ ನೌಕರರ ಉತ್ತಮ ಸೇವೆ ಪರಿಗಣಿಸಲಾಗುವುದು. ಅಲ್ಲದೆ, ನಾಗರೀಕರಿಗೆ ಗುಣಮಟ್ಟದ ಸೇವೆ ನೀಡಿರುವುದು, ನಾಗರೀಕ ಸ್ನೇಹಿ, ಭ್ರಷ್ಟಾಚಾರ ರಹಿತ ವಾತಾವರಣ ನಿರ್ಮಾಣ, ಮುಂದಾಳತ್ವ, ಚಲನಶೀಲಗಳ ರಚನೆ, ನಾಗರೀಕರ ಅನುಕೂಲಕ್ಕಾಗಿ ವಿನೂತನ ಪದ್ಧತಿ ಅಳವಡಿಕೆ, ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆ, ಕಚೇರಿ ವ್ಯವಸ್ಥೆ, ಇಲಾಖೆ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಮತ್ತಿತರ ಪ್ರಮುಖ ಅಂಶಗಳನ್ನು ಸರ್ವೋತ್ತಮ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ ಎಂದರು.

ಸರ್ಕಾರದ ಮಾರ್ಗಸೂಚಿಯಂತೆ ಒಳಾಡಳಿತ ಇಲಾಖೆ, ಅರಣ್ಯ, ಪರಿಸರ, ಜೀವಶಾಸ್ತ್ರ ಇಲಾಖೆಯ ಅಧಿಕಾರಿ, ಜೀವಶಾಸ್ತ್ರ ಸಿಬ್ಬಂದಿ, ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿ ಹೊರತುಪಡಿಸಿ ಉಳಿದ ಸರ್ಕಾರಿ ನೌಕರರನ್ನು ಈ ಪ್ರಶಸ್ತಿಗೆ ಪರಿಗಣಿಸಿರುವುದಾಗಿ ತಿಳಿಸಿದರು.

2020-21ನೇ ಸಾಲಿನ ಪ್ರಶಸ್ತಿ ಪುರಸ್ಕೃತರು :
ಡಾ|| ಚಂದ್ರಪ್ಪ ಎಂ.ಜಿ. – ಆರೋಗ್ಯ ಇಲಾಖೆ, ಡಾ|| ಇರ್ಫಾನ್ ಅಹ್ಮದ್ ಎ.ಎಸ್. — ಆರೋಗ್ಯ ಇಲಾಖೆ, ಮಧುಕುಮಾರ್ ಎಂ.ಜೆ. – ಆರೋಗ್ಯ ಇಲಾಖೆ, ಶ್ರೀಮತಿ ಲತಾ — ಆರೋಗ್ಯ ಇಲಾಖೆ, ಡಾ|| ಅಶೋಕ ಎಂ.ವಿ. — ಆರೋಗ್ಯ ಇಲಾಖೆ, ಶ್ರೀಮತಿ ರಾಧಮ್ಮ — ಆರೋಗ್ಯ ಇಲಾಖೆ, ಶ್ರೀಮತಿ ಕಾಂತಮ್ಮ ಟಿ.ವಿ. — ಕಂದಾಯ ಇಲಾಖೆ, ಶ್ರೀಮತಿ ಪುಷ್ಪಲತಾ _ ಕಂದಾಯ ಇಲಾಖೆ, ಶ್ರೀನಿವಾಸ್ — ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಹಾಗೂ ಶ್ರೀಮತಿ ನೇತ್ರಮ್ಮ ಎಂ. – ಭೂಮಾಪನ ಇಲಾಖೆ.

2021-22ನೇ ಸಾಲಿನ ಪ್ರಶಸ್ತಿ ಪುರಸ್ಕೃತರು :
ಬಸವರಾಜ ಡಿ.ಎಂ. — ಕೃಷಿ ಇಲಾಖೆ, ನಾಗರಾಜ ಪಿ. – ಶಿಕ್ಷಣ ಇಲಾಖೆ, ಶ್ರೀಮತಿ ಕೆ.ಎನ್. — ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹೆಚ್.ಜಿ.ಕೃಷ್ಣಪ್ರಸಾದ್ — ಕರ್ನಾಟಕ ನೀರಾವರಿ ನಿಗಮ, ಯಶವಂತ್ ಎನ್. — ಕಂದಾಯ ಇಲಾಖೆ, ಶಿವಕುಮಾರ್ ಕೆ. — ಜಿಲ್ಲಾ ಪಂಚಾಯತ್, ಹರ್ಷ ಎಂ.ಹೆಚ್. — ಕಂದಾಯ ಇಲಾಖೆ, ಶ್ರೀಮತಿ ಜಯಂತಿ ಎಂ.ಟಿ. — ಗ್ರಾಮೀಣಾಭಿವೃದ್ಧಿ ಇಲಾಖೆ, ಶ್ರೀಮತಿ ಕೋಕಿಲ – ಆರೋಗ್ಯ ಇಲಾಖೆ ಹಾಗೂ ಸತೀಶ್ ಎನ್. – ಸಮಾಜ ಕಲ್ಯಾಣ ಇಲಾಖೆ
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ನೌಕರರ ಸಂಘದ ಉಪಾಧ್ಯಕ್ಷ ಆರ್.ಮೋಹನ್‌ಕುಮಾರ್, ಕಾರ್ಯದರ್ಶಿ ಕೃಷ್ಣಮೂರ್ತಿ, ಅರುಣ್, ದಿನೇಶ್, ಲಕ್ಷ್ಮಣ್, ಸತೀಶ್ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮರಿಯುಪೋಲ್ ಜೀವ ಮಿಡಿಯುತ್ತಿದೆ

0

ರಷ್ಯಾದ ದಾಳಿಗಿಂತ ಮುಂಚೆ ಮರಿಯೂಪೋಲ್ ತುಂಬಾ ಶಾಂತಿಯಿಂದ ಬಾಳ್ವೆ ಮಾಡುತ್ತಿದ್ದಂತ ನಗರವಾಗಿತ್ತು. ಆದರೆ ಈಗ ಬಾಂಬ್ ದಾಳಿಯಿಂದಾಗಿ 95% ನಗರ ಹಾಳಾಗಿದೆ. ಅದರಲ್ಲಿ ಸಾವಿರಾರು ಜನ ಸಾವಿಗೀಡಾಗಿದ್ದಾರೆ. ಆದರೂ ಉಕ್ರೇನಿನ ಪಡೆ ತನ್ನ ಅಧಿಪತ್ಯವನ್ನು ಬಿಟ್ಟುಕೊಟ್ಟಿಲ್ಲ.

ಗಾಯಾಳುಗಳು ಮತ್ತು ಸತ್ತವರ ಕಳೇಬರಗಳನ್ನು ಅವಶೇಷಗಳಿಂದ ಹೊರತೆಗೆಯಬೇಕಿದೆ. ಅಲ್ಲಿಂದ ಸ್ಥಳಾಂತರಗೊಳ್ಳಬೇಕಿದೆ. ಹಾಗೆಯೇ, ಸಾವಿರಾರು ನಾಗರಿಕರು, ಚಿಕ್ಕ ಮಕ್ಕಳು, ಹಿರಿಯರು, ಇವರಿಗೆಲ್ಲಾ ಪುನರ್ವಸತಿ ಬೇಕಿದೆ. ಪ್ರಸ್ತುತ ಅಲ್ಲಿಯ ಜನ ಆಹಾರ ಮತ್ತು ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ.

ಈ ಸ್ಥಿತಿಯಲ್ಲೂ ಯುದ್ಧ 50 ದಿನಗಳು ಕಳೆದರೂ ಕೂಡ ಅಲ್ಲಿನ ಸರ್ಕಾರದ ಮೊರೆ ಹೀಗಿದೆ. ನಮಗೆ ಯುದ್ಧಸನ್ನದ್ಧ ವಾಹನಗಳನ್ನು ಕೊಡಿ. ಬಹು ರಾಕೆಟ್ ಚಿಮ್ಮಿಸುವ ವ್ಯವಸ್ಥೆ ಕೊಡಿ. ಹೆಚ್ಚುದೂರ ಸಾಗಬಲ್ಲ ಕ್ಷಿಪಣಿಗಳನ್ನು ಕೊಡಿ.