Monday, April 28, 2025
Monday, April 28, 2025

ಕೋವಿಡ್ ನಿರ್ವಹಣೆಯಲ್ಲಿ ಚೀನಾ ಎಡವಟ್ಟು ಆರ್ಥಿಕತೆಗೆ ಪೆಟ್ಟು

Date:

ಕೋವಿಡ್ ವಿಚಾರದಲ್ಲಿ ಚೀನಾ ಅನುಸರಿಸುತ್ತಿರುವ ತಪ್ಪು ಕ್ರಮದಿಂದ ಅನಾನುಕೂಲವೇ ಹೆಚ್ಚು.

ಶಾಂಘೈನ ಆರೋಗ್ಯ ಇಲಾಖೆ ನೌಕರರು ಬಿಡುವಿಲ್ಲದ ದುಡಿಮೆಯಿಂದ ಹೈರಾಣಾಗಿದ್ದಾರೆ.

ಚೀನಾದ ಶಾಂಘೈ ಮಹಾನಗರದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ವೃದ್ಧರ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರ ಸಾವು ಪ್ರತಿದಿನ ಎಂಬಂತೆ ವರದಿಯಾಗುತ್ತಿದೆ ಎಂದು ತಿಳಿದುಬಂದಿದೆ.
ಒಬ್ಬ ಆರೋಗ್ಯ ಕಾರ್ಯಕರ್ತನೂ ಮೃತಪಟ್ಟಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಶಾಂಘೈನ ಆರೋಗ್ಯ ಇಲಾಖೆ ನೌಕರರು ಲಾಕ್​ಡೌನ್ ನಿರ್ಬಂಧ ಜಾರಿ ಮತ್ತು ಜನರಿಗೆ ಸೇವೆ ಒದಗಿಸುವ ಕರ್ತವ್ಯದಲ್ಲಿ ಏಕಕಾಲಕ್ಕೆ ತೊಡಗಿಸಿಕೊಂಡಿದ್ದು ಕೆಲಸದ ಒತ್ತಡದಿಂದ ಹೈರಾಣಾಗಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಆರೋಗ್ಯ ಇಲಾಖೆ ನೌಕರರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಶನಿವಾರ ಚೀನಾದ ಶಾಂಘೈನಲ್ಲಿ 23,000 ಮಂದಿಯಲ್ಲಿ ಹೊಸದಾಗಿ ಕೊವಿಡ್ ಸೋಂಕು ಪತ್ತೆಯಾಗಿದೆ. ಆದರೆ ಈ ಪೈಕಿ 1015 ಮಂದಿಯಲ್ಲಿ ಮಾತ್ರ ರೋಗ ಲಕ್ಷಣಗಳಿದ್ದವು.

ಶಾಂಘೈನಲ್ಲಿ ಕೊವಿಡ್ ಸೋಂಕು ಪತ್ತೆಯಾಗಿದ್ದರೂ ಬಹುತೇಕ ಸೋಂಕಿತರಲ್ಲಿ ಯಾವುದೇ ಸೋಂಕು ಲಕ್ಷಣಗಳಿಲ್ಲ. ಆದರೆ ಚೀನಾ ಸರ್ಕಾರವು ಹಟಕ್ಕೆ ಬಿದ್ದಂತೆ ಲಾಕ್​ಡೌನ್ ಹೇರಿ, ಸೋಂಕಿತರನ್ನು ಕ್ವಾರಂಟೈನ್​ಗೆ ಒಳಪಡಿಸಿರುವ ಕಾರಣ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಆಗುತ್ತಿದೆ.
ಚೀನಾದ ಶಾಂಘೈ ನಗರದಲ್ಲಿ ಕಾಣಿಸಿಕೊಂಡಿರುವ ಕೊವಿಡ್ ಸೋಂಕು ಮತ್ತು ಅದನ್ನು ತಡೆಯಲು ಚೀನಾ ಅನುಸರಿಸುತ್ತಿರುವ ಕಟ್ಟುನಿಟ್ಟಿನ ಪ್ರತಿಬಂಧಕ ನೀತಿಯಿಂದಾಗಿ ಸರಕು ಪೂರೈಕೆ ಸರಪಣಿಗೆ ಧಕ್ಕೆ ಒದಗಿದೆ.

ಶಾಂಘೈನ ಡೊಂಘೈ ಎಲ್​ಡರ್​ಲಿ ಕೇರ್ ಆಸ್ಪತ್ರೆಯಲ್ಲಿ ಹಲವು ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಸೋಸಿಯೇಟೆಟ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ವೃದ್ಧರನ್ನು ನೋಡಿಕೊಳ್ಳುತ್ತಿದ್ದವರಲ್ಲಿ ಸೋಂಕು ಪತ್ತೆಯಾದ ನಂತರ ಅವರನ್ನು ಕಡ್ಡಾಯ ಕ್ವಾರಂಟೈನ್​ಗೆ ಒಳಪಡಿಸಲಾಯಿತು. ಈ ವೇಳೆ ವೃದ್ಧರ ಆರೈಕೆ ಮಾಡಲು ಯಾರೂ ಇರಲಿಲ್ಲ. ಆಸ್ಪತ್ರೆಗೆ ಸಿಬ್ಬಂದಿಯ ಮೇಲೆಯೂ ಕೊರೊನಾ ಕರ್ತವ್ಯದ ಒತ್ತಡವಿದ್ದ ಕಾರಣ ಅವರಿಗೂ ವೃದ್ಧರ ಆರೈಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ ಸಾಕಷ್ಟು ಜನರು ಮೃತಪಟ್ಟಿದ್ದಾರೆ ಎಂದು ಚೀನಾದ ಅಧಿಕಾರಿಗಳು ವಿವರಿಸಿದ್ದಾರೆ.

ಕ್ವಾರಂಟೈನ್​ನಲ್ಲಿರುವ ಸಂಬಂಧಿಗಳು ಆಸ್ಪತ್ರೆಯಲ್ಲಿರುವ ತಮ್ಮ ಕುಟುಂಬಗಳ ಹಿರಿಯರ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿರುವವರಿಗೆ ನೀಡುತ್ತಿರುವ ಚಿಕಿತ್ಸೆಯ ವಿಡಿಯೊಗಳನ್ನು ಪೋಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬಂದರುಗಳಲ್ಲಿ ಸರಕು ಇಳಿಸುವುದು ಮತ್ತು ಹಡಗುಗಳಿಗೆ ಲೋಡ್ ಮಾಡುವ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಬಂದರಿನಲ್ಲಿ ಇಳಿಸಿರುವ ಸರಕುಗಳು ಸಹ ಉದ್ದೇಶಿತ ಸ್ಥಳಗಳಿಗೆ ತಲುಪುತ್ತಿಲ್ಲ. ಸರಕು ಪೂರೈಕೆ ಸರಪಣಿಯಲ್ಲಿ ಏರುಪೇರಾಗಿರುವುದರಿಂದ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕ್ರಿಯೆಗಳು ಸ್ಥಗಿತತೊಂಡಿದ್ದು, ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುವ ಅಪಾಯ ಎದುರಾಗಿದೆ ಎಂದು ತಿಳಿದುಬಂದಿದೆ.

ಚೀನಾದ ಮಹತ್ವಾಕಾಂಕ್ಷಿ ಜಿಡಿಪಿ ಪ್ರಗತಿಯ ನಿರೀಕ್ಷೆಗೂ ಕೊವಿಡ್ ತಣ್ಣೀರು ಎರಚಿದೆ. ಇತ್ತೀಚೆಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಚೀನಾದ ಆರ್ಥಿಕತೆಯನ್ನು ನಿರ್ವಹಿಸುವುದೇ ಅಲ್ಲಿನ ಆಡಳಿತಕ್ಕೆ ದೊಡ್ಡ ಸವಾಲಾಗಿದೆ.

ಚೀನಾದ ವಾಣಿಜ್ಯ ನಗರಿ ಶಾಂಘೈ ಮಾತ್ರವೇ ಅಲ್ಲ, ಟೆಕ್ ಸಿಟಿ ಎನಿಸಿಕೊಳ್ಳುವ ಶೆನ್​ಝೆನ್​ನಲ್ಲಿಯೂ ಕೊವಿಡ್ ಕಾಣಿಸಿಕೊಂಡಿದ್ದು ಲಾಕ್​ಡೌನ್ ಘೋಷಿಸಲಾಗಿದೆ.

ಶಾಂಘೈ ಬಂದರು ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಕಾರು ತಯಾರಿಕಾ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chanakya Chess School ಮೇ 2 ರಿಂದ ಮುಕ್ತ ಚೆಸ್ ತರಬೇತಿ ಶಿಬಿರ

Chanakya Chess School ಚಾಣಕ್ಯ ಚೆಸ್ ಸ್ಕೂಲ್ ವತಿಯಿಂದ ಶಿವಮೊಗ್ಗ ನಗರದ...