Thursday, February 26, 2026
Thursday, February 26, 2026
Home Blog Page 1620

ಮತ್ತೆ ಜನತೆಗೆ ಜಿಎಸ್ ಟಿ ಬರೆ ಬೀಳಲಿದೆ

0

ಈಗಾಗಲೇ ಅಗತ್ಯ ವಸ್ತುಗಳ ಬೆಲೆ, ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.

ಹೀಗಿರುವಾಗಲೇ ಜಿ ಎಸ್ ಟಿ ( GST ) ಇಲ್ಲದಂತ ವಸ್ತುಗಳಿಗೆ ಶೇ.3ರಷ್ಟು ತೆರಿಗೆ ( Tax ) ವಿಧಿಸೋದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಈ ಮೂಲಕ ಜನತೆಗೆ ಮತ್ತೊಂದು ಬಿಗ್ ಶಾಕ್ ನೀಡೋದಕ್ಕೆ ಮುಂದಾಗಿದೆ.
ಮುಂದಿನ ತಿಂಗಳು ಇನ್ನೊಂದು ದುಬಾರಿ ಹೊಡೆತ, ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯೊಂದಿಗೆ ಬೀಳಲಿದೆ.

ಇದಕ್ಕೆ ಕಾರಣ ಜಿ ಎಸ್ ಟಿ ಮಂಡಳಿಯು ಸದ್ಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕೆಲ ವಸ್ತುಗಳಿಗೆ ಶೇ.3ರಷ್ಟು ಜಿ ಎಸ್ ಟಿ ವಿಧಿಸಲು ಹಾಗೂ ಶೇ.5ರಷ್ಟು ಸ್ಲಾಬ್ ತೆಗೆದು, ಅದನ್ನು ಶೇ.8ಕ್ಕೆ ಏರಿಸಲು ಸಿದ್ಧತೆ ಮಾಡಿಕೊಂಡಿರೋದೆ ಆಗಿದೆ.

ಸದ್ಯ ವಿವಿಧ ವಸ್ತುಗಳ ಮೇಲೆ ಶೇ.5, ಶೇ.12 ಶೇ.18 ಮತ್ತು ಶೇ.28 ಸ್ಲಾಬ್ ಗಳಲ್ಲಿ ಜಿಎಸ್ಟಿಯನ್ನು ವಿಧಿಸಲಾಗುತ್ತಿದೆ. ಬಹುತೇಕ ಅಗತ್ಯ ವಸ್ತುಗಳಿಗೆ ಶೇ.5ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ.

ಹುಬ್ಬಳ್ಳಿ ಗಲಭೆಗೆ ಕಿಡಿ ಹಚ್ಚಿದ ಯುವಕನ ಸೆರೆ

0

ಯುವಕ ವಾಟ್ಸಪ್‌ನಲ್ಲಿ ಎಡಿಟ್‌ ಮಾಡಿದ ಪ್ರಚೋದನಾಕಾರಿ ಪೋಸ್ಟರ್‌ ಹಾಕಿದ್ದರಿಂದ ಹುಬ್ಬಳ್ಳಿಯಲ್ಲಿ ಗಲಭೆ ಉಂಟಾಗಿದೆ.

ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಜನರನ್ನು ಬಂಧಿಸಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಬಂಧಿತ ವ್ಯಕ್ತಿಯನ್ನು ಅಭಿಷೇಕ್ ಹಿರೇಮಠ ಎಂದು ಗುರುತಿಸಲಾಗಿದೆ. ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಎಡಿಟ್ ಮಾಡಿದ ಪೋಸ್ಟರ್ ಸ್ಟೇಟಸ್ ಹಾಕಿಕೊಂಡಿದ್ದ ಅಭಿಷೇಕ್ ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ. ಜೈ ಶ್ರೀರಾಮ್, ಹಿಂದೂ ಸಾಮ್ರಾಟ್ ಎಂದು ಬರೆದುಕೊಂಡಿದ್ದ.

ಈ ವಿವಾದಿತ ಎಡಿಟ್ ಮಾಡಿದ ಪೋಸ್ಟರ್ ಕುರಿತು ಹುಬ್ಬಳ್ಳಿ ಅಂಜುಮನ್ ಸಮಿತಿಗೆ ಮಾಹಿತಿ ಬಂದ ಬಳಿಕ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರು ಗುಂಪು ಸೇರಿದ್ದರು. ಆಗ ಪೊಲೀಸರು ಮತ್ತು ಒಂದು ಕೋವಿನ ಜನರ ನಡುವೆ ವಾಗ್ವಾದ ನಡೆದಿತ್ತು.

ಜನರು ಪೊಲೀಸರು ಮತ್ತು ಆಸ್ಪತ್ರೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಹಳೇ ಹುಬ್ಬಳ್ಳಿ ನಿವಾಸಿ ಮೊಹಮ್ಮದ್ ಅಜರ್ ಬೇಲೇರಿ ನೀಡಿದ ದೂರಿನ ಅನ್ವಯ ಅಭಿಷೇಕ್ ಹಿರೇಮಠ ಬಂಧಿಸಲಾಗಿದೆ.

ಪರಂಪರೆಯು ನಾವು ವಾಸಿಸುವ ವರ್ತಮಾನಕ್ಕೆ ಶ್ರೀರಕ್ಷೆ

0

ಸಂಸ್ಕೃತಿ ಮತ್ತು ಪರಂಪರೆ ಮಾನವ ಸಮಾಜವನ್ನು ರೂಪಿಸುತ್ತದೆ.ಒಂದು ರಾಷ್ಟ್ರದ ಸಮುದಾಯದ ಗುರುತು ಅದರ ಐತಿಹಾಸಿಕ ಮತ್ತು ಸಾಂಸ್ಕøತಿಕ ಪರಂಪರೆಯಲ್ಲಿದೆ.

ಪರಂಪರೆಯು ನಾವು ವಾಸಿಸುವ ವರ್ತಮಾನದ ಅತ್ಯಗತ್ಯ ಭಾಗವಾಗಿರುವುದರ ಜೊತೆಗೆ ನಾವು ನಿರ್ಮಿಸುವ ಭವಿಷ್ಯಕ್ಕೆ ದಾರಿಯಾಗಿದೆ ಹಾಗೂ ನಾವು ಇಂದು ಹೇಗೆ ಬದುಕುತ್ತಿದ್ದೇವೆ ಮತ್ತು ಭವಿಷ್ಯದ ಪೀಳಿಗೆಗೆ ನಾವು ಏನನ್ನು ನೀಡುತ್ತೇವೆ ಎಂಬುದನ್ನು ವಿವರಿಸುತ್ತದೆ.

ನಮ್ಮ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪ್ರಾಚೀನ ನೈಸರ್ಗಿಕ ಪರಂಪರೆಯನ್ನು ಸಂರಕ್ಷಿಸಲು ಅಗತ್ಯವಿರುವ ಪ್ರಯತ್ನಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾನವ ಜನಾಂಗ ಮತ್ತು ಸಂಸ್ಕೃತಿ ಸಂಪೂರ್ಣವಾಗಿ ಮೀಸಲಾಗಿರಿಸಿ ಜಾಗತಿಕವಾಗಿ ಪ್ರತಿವರ್ಷ ಏಪ್ರಿಲ್ 18 ರಂದು ವಿಶ್ವ ಪರಂಪರೆ ದಿನವಾಗಿ ಇಂಟರ್ ನ್ಯಾಷನಲ್ ಕೌನ್ಸಿಲ್ ಆನ್ ಮಾನ್ಯೂಮೆಂಟ್ಸ್ ಅಂಡ್ ಸೈಟ್ಸ್( ಐ.ಸಿ.ಒ.ಎಮ್.ಒ.ಎಸ್) ನಿಂದ ಆಚರಿಸಲಾಗುತ್ತದೆ.

ಪ್ರಸ್ತುತ ವರ್ಷದ ವಿಶ್ವ ಪಾರಂಪರಿಕ ದಿನವನ್ನು “ಪರಂಪರೆ ಮತ್ತು ಹವಾಮಾನ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ವಿಶ್ವ ಪರಂಪರೆಯ ಗುಣಲಕ್ಷಣಗಳು ಪ್ರಸ್ತುತ ಮತ್ತು ಭವಿಷ್ಯದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳ ಸಮಸ್ಯೆಗಳನ್ನು ಮನಗಂಡ ಹಲವಾರು ಅಂತರ ರಾಷ್ಟ್ರೀಯ ಸಂಸ್ಥೆಗಳು 2005ರಲ್ಲಿ ವಿಶ್ವ ಪರಂಪರೆ ಸಮಿತಿ ಗಮನಕ್ಕೆ ತರಲಾಯಿತು. ಇದನ್ನು ಪರಿಗಣಿಸಿ ಯುನೆಸ್ಕೋ ವಿಶ್ವ ಪರಂಪರೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅನ್ವೇಷಿಸಲು ಮತ್ತು ನಿರ್ವಹಿಸಲು ಕಾರ್ಯಾರಂಭ ಮಾಡಿದೆ.

ಎರಡನೇ ಮಹಾ ಯುದ್ಧದ ನಂತರ ಉದ್ಭವಿಸಿದ ವಿಶ್ವ ಪರಂಪರೆ ಪರಿಕಲ್ಪನೆಯು, 1959 ರಲ್ಲಿ ಈಜಿಪ್ಟ್‍ನ ಅಸ್ವಾನ್ ಅಣೆಕಟ್ಟಿನ ನಿರ್ಮಾಣದಿಂದ ವಿಶ್ವದ ಅತ್ಯಂತ ವಿಶಿಷ್ಟವಾದ ಸಾಂಸ್ಕೃತಿಕ ಸ್ಮಾರಕಗಳಲ್ಲಿ ಒಂದಾದ ” ಅಬು ಸಿಂಬೆಲ್‍ನಲ್ಲಿರುವ ರಾಮ್‍ಸೆಸ್ ||” ದೇವಾಲಯವು ವಿನಾಶದ ಬೆದರಿಕೆಗೆ ಒಳಗಾದಾಗ ಅದರ ಮರು ನಿರ್ಮಾಣದಿಂದ ಪ್ರಾರಂಭವಾಯಿತು.

ಪ್ರಪಂಚದ ಪ್ರಮುಖ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ತಾಣಗಳನ್ನು ರಕ್ಷಿಸುವ ಸಲುವಾಗಿ ಜಾಗತಿಕ ಸಮಾವೇಶದ ಅಗತ್ಯತೆಯಿದ್ದ ಸಂದರ್ಭದಲ್ಲಿ 1972 ನವೆಂಬರ್ 16 ರಂದು ಇಡೀ ಮಾನವ ಕುಲಕ್ಕೆ ಸೇರಿದ ಅತ್ಯುತ್ತಮ ಸಾರ್ವತ್ರಿಕ ಮೌಲ್ಯದ ಸ್ಥಳಗಳನ್ನು ರಕ್ಷಿಸುವ ಉದ್ದೇಶದಿಂದ ಪ್ರಪಂಚದ ನೈಸರ್ಗಿಕ ಮತ್ತು ಸಾಂಸ್ಕøತಿಕ ಪರಂಪರೆಯ ಬಗ್ಗೆ ಒಂದು ಸಮಾವೇಶವನ್ನು ಯುನೆಸ್ಕೋ ಅಂಗೀಕರಿಸಿತು. ಇದರ ಫಲವಾಗಿ 1975ರಲ್ಲಿ ಜಾರಿಗೆ ಬಂದ ವಿಶ್ವ ಸಾಂಸ್ಕೃತಿಕ ಮತ್ತು ನೈಸರ್ಗಿಕ ರಕ್ಷಣೆಯು ಸಶಸ್ತ್ರ ಸಂಘರ್ಷಗಳಿಂದ, ಆರ್ಥಿಕ ಒತ್ತಡಗಳಿಂದ, ನೈಸರ್ಗಿಕ ವಿಕೋಪಗಳಿಂದ ಮತ್ತು ಹವಮಾನ ಬದಲಾವಣೆಗಳಂತಹ ಬೆದರಿಕೆಗಳಿಂದ ರಕ್ಷಿಸಲು ಸಂಘಟಿತವಾಗಿದೆ.
ವಿಶ್ವ ಪರಂಪರೆಯ ತಾಣಗಳು ವಿಶಿಷ್ಟವಾದ ಸಾಂಸ್ಕøತಿಕ ಅಥವಾ ಭೌತಿಕ ಪ್ರಾಮುಖ್ಯತೆಯ ಸ್ಥಳಗಳಾಗಿವೆ. ಇವುಗಳನ್ನು ಮಾನವೀಯತೆಯ ಮಹೋನ್ನತ ಮೌಲ್ಯಗಳೆಂದು ಪರಿಗಣಿಸಲಾಗಿದೆ. ಭೂಮಿಯ ಮೇಲಿನ ಅದ್ಭುತ ಕಟ್ಟಡಗಳು, ನಗರಗಳು, ಮರುಭೂಮಿ, ಕಾಡು, ದ್ವೀಪ, ಸರೋವರಗಳು ಮತ್ತು ಸ್ಮಾರಕಗಳು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರುತ್ತವೆ.

ಪ್ರತಿಯೊಂದು ದೇಶವು ತನ್ನದೇ ಆದ ಸಾಂಸ್ಕೃತಿಕ ಮತ್ತು ನೈಸರ್ಗಿಕ ಸ್ಮಾರಕಗಳನ್ನು ಹೊಂದಿದ್ದು, ಅವು ದೇಶದ ಇತಿಹಾಸವನ್ನು ಚಿತ್ರಿಸುವುದರ ಜೊತೆಗೆ ಸಂಸ್ಕೃತಿಯನ್ನು ರೂಪಿಸಲು ಬಹಳಷ್ಟು ಕೊಡುಗೆ ನೀಡುತ್ತದೆ.

ಇಂದು ವಿಶ್ವದಲ್ಲಿ ಹಲವಾರು ಪಾರಂಪರಿಕ ತಾಣಗಳು ಮಾನವನ ಹಲವು ಚಟುವಟಿಕೆಗಳಿಂದ ಹಾನಿಗೊಳಗಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ ಕೃಷಿಯ ವಿಸ್ತರಣೆ, ಗಣಿಗಾರಿಕೆ, ಕಾನೂನು ಬಾಹಿರ ಚಟುವಟಿಕೆಗಳು, ಯುದ್ಧ, ನಾಗರಿಕ ಅಶಾಂತಿ ಮತ್ತು ಮಿಲಿಟರಿ ವ್ಯಾಯಾಮಗಳು ಮತ್ತು ಹವಾಮಾನ ಬದಲಾವಣೆ. ಉದಾಹರಣೆಗೆ ಉಕ್ರೇನ್ ದೇಶ ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಯಾಗಿದ್ದು, ಅಲ್ಲಿನ ಏಳು ವಿಶ್ವ ಪಾರಂಪರಿಕ ತಾಣಗಳು ಇಂದು ರಷ್ಯಾದ ಆಕ್ರಮಣದಿಂದಾಗಿ ಅಪಾಯದ ಅಂಚಿನಲ್ಲಿವೆ.

ಪ್ರಪಂಚದ 167 ದೇಶಗಳಲ್ಲಿ ಸುಮಾರು 1154 ವಿಶ್ವ ಪಾರಂಪರಿಕ ತಾಣಗಳಿದ್ದು, ಇವುಗಳಲ್ಲಿ 897 ಸಂಸ್ಕೃತಿಕ 218 ನೈಸರ್ಗಿಕ ಮತ್ತು 39 ಮಿಶ್ರ ಗುಣಲಕ್ಷಣಗಳನ್ನು ಹೊಂದಿರುವ ತಾಣಗಳಾಗಿವೆ. ವಿಶ್ವದ ಅತೀ ಹೆಚ್ಚು ಯುನೆಸ್ಕೋ ಪಾರಂಪರಿಕ ತಾಣಗಳನ್ನು ಹೊಂದಿರುವ ದೇಶಗಳಲ್ಲಿ ಇಟಲಿ ಪ್ರಥಮ ಸ್ಥಾನದಲ್ಲಿದೆ(58). ಭಾರತದಲ್ಲಿ ಪ್ರಸ್ತುತ 40 ವಿಶ್ವ ಪಾರಂಪರಿಕ ತಾಣಗಳಿದ್ದು, ಅವುಗಳಲ್ಲಿ 32 ಸಾಂಸ್ಕೃತಿಕ 7 ನೈಸರ್ಗಿಕ ಮತ್ತು 1 ಮಿಶ್ರ ಗುಣಲಕ್ಷಣಗಳುಳ್ಳದ್ದಾಗಿವೆ.

ಇಂದು ವಿಶ್ವದಲ್ಲಿ ಹಲವಾರು ಪಾರಂಪರಿಕ ತಾಣಗಳು ಅಪಾಯದಲ್ಲಿವೆ. ಉದಾಹರಣೆಗೆ ನೈಸರ್ಗಿಕ ಪಾರಂಪರಿಕ ತಾಣವಾದ ಆಸ್ಟ್ರೇಲಿಯಾದ ‘ಗ್ರೇಟ್ ಬ್ಯಾರಿಯರ್ ರೀಫ್’ ಮಾನವನ ಅನೇಕ ಚಟುವಟಿಕೆಗಳಿಂದ ಅಪಾವನ್ನು ಎದುರಿಸುತ್ತಿದೆ. ಭಾರತದ ಮೂರು ಪ್ರಮುಖ ನೈಸರ್ಗಿ ವಿಶ್ವ ಪರಂಪರೆಯ ತಾಣಗಳು- ಪಶ್ಚಿಮ ಘಟ್ಟಗಳು, ಸುಂದರ್‍ಬನ್ ರಾಷ್ಟ್ರೀಯ ಉದ್ಯಾನವನ ಮತ್ತು ಮಾನಸ್ ವನ್ಯ ಜೀವಿ ಅಭಯಾರಣ್ಯಗಳು ಗಣಿಗಾರಿಕೆಯಂತಹ ಹಾನಿಕಾರಿಕ ಕೈಗಾರಿಕ ಚಟುವಟಿಕೆಗಳಿಂದ ಬೆದರಿಕೆಯನ್ನು ಎದುರಿಸುತ್ತಿವೆ. ಇತ್ತೀಚಿನ ತಂತ್ರಜ್ಞಾನ ಮತ್ತು ಸಂರಕ್ಷಣೆಯ ವಿಧಾನಗಳ ಕೊರತೆ ಹಾಗೂ ಹೆಚುತ್ತಿರುವ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಗಳು ಇಂದು ವಿಶ್ವದ ಪಾರಂಪರಿಕ ತಾಣಗಳಿಗೆ ಅಪಾಯವನ್ನೊಡ್ಡಿವೆ.

ವರ್ತಮಾನವನ್ನು ನಿರ್ಮಿಸಲು, ಸಮಾಜದ ಭವಿಷ್ಯವನ್ನು ರೂಪಿಸಲು ಮಾನವ ಜನಾಂಗವು ತನ್ನ ಭೂತ ಕಾಲವನ್ನು ಅವಲಂಬಿಸಿರುವುದರಿಂದ ಅಪಾಯದಂಚಿನಲ್ಲಿರುವ ಪಾರಂಪರಿಕ ತಾಣಗಳನ್ನು ರಕ್ಷಿಸುವುದು ಅಗತ್ಯವಾಗಿದೆ.
ಹವಾಮಾನ ಬದಲಾವಣೆಗಳ ಪರಿಣಾಮಗಿಳಿಂದ ವಿಶ್ವ ಪಾರಂಪರಿಕ ತಾಣಗಳನ್ನು ರಕ್ಷಿಸುವ ಪ್ರಮುಖ ಮಾರ್ಗಗಳೆಂದರೆ- ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಸಮರ್ಥವಾಗಿ ನಿರ್ವಹಿಸುವುದು, ಪಾರಂಪರಿಕ ರಕ್ಷಣ ಕಾನೂನುಗಳು, ಮಾಲಿನ್ಯ ನಿಯಂತ್ರಕ ಕಾನೂನುಗಳು ಮತ್ತು ಪರಿಸರ ರಕ್ಷಣಾ ಕಾನೂನುಗಳನ್ನು ತರುವುದರ ಮೂಲಕ ಪಾರಂಪರಿಕ ತಾಣಗಳ ರಕ್ಷಣೆ ಮಾಡಬಹುದಾಗಿದೆ.

ಭಾರತದ ಅಕ್ಕಿ ಗೋಧಿಗೆ ವಿದೇಶಿ ಬೇಡಿಕೆ ರಫ್ತು ಹೆಚ್ಚಳ – ಪೀಯುಷ್

0

ಭಾರತದ ಅಕ್ಕಿ, ಗೋಧಿಗೆ ವಿದೇಶಗಳ ಬೇಡಿಕೆಯಿಂದ ರಫ್ತು ಹೆಚ್ಚಾಗಿದೆ. 2013-14 ಮತ್ತು 2021-22 ರ ನಡುವೆ ಭಾರತದ ಅಕ್ಕಿ ರಫ್ತು ಹೆಚ್ಚಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭಾನುವಾರ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈಕುರಿತು ಮಾಹಿತಿ ಹಂಚಿಕೊಂಡಿರುವ ಪಿಯೂಷ್ ಗೋಯಲ್ ಅವರು ಭಾರತದ ಅಕ್ಕಿ ರಫ್ತು ದೊಡ್ಡ ಮಟ್ಟದಲ್ಲಿ ಬೆರಗುಗೊಳಿಸುವ ಬೆಳವಣಿಗೆಯನ್ನು ಗಳಿಸಿದೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಇಂಡಿಯಾ ದಿ ರೈಸ್ ಬಾಸ್ಕೆಟ್ ಆಫ್ ದಿ ವರ್ಲ್ಡ್ ಎಂಬ ಶೀರ್ಷಿಕೆಯ ಚಿತ್ರದಲ್ಲಿ ಅಕ್ಕಿ ರಫ್ತಿನ ಅಂಕಿಅಂಶಗಳನ್ನು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿಗಳು ರೈತರಿಗೆ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲು ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಥಿಸಿ ವಿವರಿಸಿದ್ದಾರೆ.

ಎಷ್ಟು ಬೆಳವಣಿಗೆ ಸಾಧಿಸಿದೆ ಎಂಬುವುದಕ್ಕೆ ಉತ್ತರ ಇಲ್ಲಿದೆ.
2013-14ರ ಆರ್ಥಿಕ ವರ್ಷದಲ್ಲಿ ಬಾಸುಮತಿ ಅಕ್ಕಿಯನ್ನು ಹೊರತುಪಡಿಸಿ ಅಕ್ಕಿ ರಫ್ತು 2,925 ಮಿಲಿಯನ್ ಆಗಿತ್ತು. ಅಂದಿನಿಂದ 2021-22ನೇ ಹಣಕಾಸು ವರ್ಷದಲ್ಲಿ ಇದು 6,115 ಮಿಲಿಯನ್ ಡಾಲರ್‌ಗಳಿಗೆ 109 ಪ್ರತಿಶತದಷ್ಟು ಬೆಳೆದಿದೆ.

ಈಕುರಿತು ಕೃಷಿ ಸಚಿವಾಲಯ ಒದಗಿಸಿರುವ ಪ್ರತ್ಯೇಕ ಮಾಹಿತಿಯಲ್ಲಿ 2021-22 ಹಣಕಾಸು ವರ್ಷದಲ್ಲಿ ಅಕ್ಕಿ ರಫ್ತು ಶೇ. 9.24 ರಷ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. ಅಕ್ಕಿ ರಫ್ತು ವರ್ಷಕ್ಕೆ ಅದರ ಒಟ್ಟು ಗುರಿಯ 102 ಪ್ರತಿಶತವನ್ನು ಸಾಧಿಸಿದೆ ಎಂದು ಕೃಷಿ ಸಚಿವಾಲಯ ಮಾಹಿತಿ ತಿಳಿಸಿದೆ.

ಕೋವಿಡ್ ನಂತರ ರಷ್ಯ ಉಕ್ರೇನ್ ಸಮರ ಮಿಕ್ಕ ದೇಶಗಳ ಆರ್ಥಿಕತೆಗೆ ಪೆಟ್ಟು

0

ರಷ್ಯಾ-ಯೂಕ್ರೇನ್ ಯುದ್ಧದ ಕಾರಣ ಜಾಗತಿಕ ಆರ್ಥಿಕತೆಯಲ್ಲಿ ಅನಿಶ್ಚಿತತೆ ತಲೆದೋರಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಭಿಪ್ರಾಯ ಪಟ್ಟಿದೆ.

ವಿಶ್ವ ಅನಿಶ್ಚಿತತೆಯ ಸೂಚ್ಯಂಕದಲ್ಲಿ ಈ ವರ್ಷದ ಮೊದಲ ಮೂರು ತಿಂಗಳ ತ್ರೖೆಮಾಸಿಕದಲ್ಲಿನ ಜಾಗತಿಕ ಹಣಕಾಸು ಪರಿಸ್ಥಿತಿಯನ್ನು ಅಧ್ಯಯನ ಮಾಡಿದೆ. 143 ದೇಶಗಳ ಆರ್ಥಿಕ ಬೆಳವಣಿಗೆಯಲ್ಲಿ ಕುಂಠಿತ ಕಂಡುಬಂದಿದೆ.

ಇದರಿಂದ ಉತ್ಪಾದನೆಯಲ್ಲಿ ಕುಸಿತವಾಗಿರುವುದು ವೇದ್ಯ ಎಂದು ಐಎಂಎಫ್ ವಿಶ್ಲೇಷಿಸಿದೆ.

ಕೊರೊನಾ ಸಾಂಕ್ರಾಮಿಕದಿಂದ ತೀವ್ರ ಹಿನ್ನೆಡೆ ಕಂಡಿದ್ದ ಜಾಗತಿಕ ಸರಬರಾಜು ಸರಪಳಿಯ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಅದರ ಮೇಲೆ ಯೂಕ್ರೇನ್ ಸಂಘರ್ಷವು ವ್ಯಾಪಕ ಪರಿಣಾಮ ಬೀರಿದೆ. ಇಂಧನ ತೈಲ ಮತ್ತು ಇನ್ನಿತರ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಐಎಂಎಫ್ ಹೇಳಿದೆ.

ಮೊದಲ ತ್ರೖೆಮಾಸಿಕದಲ್ಲಿನ ಆರ್ಥಿಕ ಹಿನ್ನಡೆಯ ಆಧಾರದಲ್ಲಿ ಹೇಳುವುದಾದರೆ ಪ್ರಸಕ್ತ ಹಣಕಾಸು ಸಾಲಿನಲ್ಲಿ ಶೇ. 0.35ರಷ್ಟು ಆರ್ಥಿಕ ಬೆಳವಣಿಕೆ ಇಳಿಕೆ ಆಗಲಿದೆ ಎಂದು ಐಎಂಎಫ್ ಹೇಳಿದೆ.

ಯುದ್ಧದಲ್ಲಿ ಉಕ್ರೇನ್ ಗೆ ಆರ್ಥಿಕ ಪೆಟ್ಟು ಐಎಂಎಫ್ ನೊಂದಿಗೆ ಮಾತುಕತೆ

0

ಉಕ್ರೇನ್‌ನ ಆರ್ಥಿಕ ಸ್ಥಿರತೆ ಮತ್ತು ದೇಶದ ಯುದ್ಧಾನಂತರದ ಪುನರ್ನಿರ್ಮಾಣದ ಕುರಿತು IMF ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರೊಂದಿಗೆ ಮಾತನಾಡಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎಂದು ತಿಳಿಸಿದ್ದಾರೆ.

ಯುಕ್ರೇನ್‌ನ ಆರ್ಥಿಕ ಸ್ಥಿರತೆ ಮತ್ತು ಯುದ್ಧಾನಂತರದ ಪುನರ್ನಿರ್ಮಾಣಕ್ಕೆ ಸಿದ್ಧತೆಗಳನ್ನು ಖಾತ್ರಿಪಡಿಸುವ ವಿಷಯದ ಬಗ್ಗೆ IMF ವ್ಯವಸ್ಥಾಪಕ ನಿರ್ದೇಶಕ ಜಾರ್ಜಿವಾ ಅವರೊಂದಿಗೆ ಚರ್ಚಿಸಲಾಗಿದೆ. ನಾವು ಇದೀಗ ಸ್ಪಷ್ಟವಾದ ಯೋಜನೆಗಳನ್ನು ಹೊಂದಿದ್ದೇವೆ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಹೊಂದಿದ್ದೇವೆ. IMF ಮತ್ತು ಉಕ್ರೇನ್ ನಡುವಿನ ಸಹಕಾರವು ಮುಂದುವರಿಯುತ್ತದೆ ಎಂದು ನನಗೆ ಖಾತ್ರಿಯಿದೆ. ಫಲಪ್ರದವಾಗಿರಿ, ಎಂದು ಝೆಲೆನ್ಸ್ಕಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಅವರು ಈ ವಾರ ವಾಷಿಂಗ್ಟನ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಮತ್ತು ಉಕ್ರೇನ್‌ಗೆ ಹೆಚ್ಚಿನ ಹಣಕಾಸಿನ ನೆರವು ಕೋರುವುದಾಗಿ ಹೇಳಿದರು.

ದೇಶದಲ್ಲಿ 1.5 ಕೋಟಿ ಹುದ್ದೆಗಳು ಖಾಲಿ ಇದ್ದೂ ಯುವಕರು ನೌಕರಿಗೆ ಅಲೆದಾಟ

0

ದೇಶದಲ್ಲಿ 1.5 ಕೋಟಿ ಹುದ್ದೆಗಳು ಖಾಲಿ ಇದ್ದರೂ, ನಿರುದ್ಯೋಗಿ ಯುವಕರು ಖಾಲಿ ಹೊಟ್ಟೆಯಲ್ಲಿ ಅಲೆದಾಡುವ ಪರಿಸ್ಥಿತಿ ಇದೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಕ್ಷೇತ್ರಕ್ಕೆ ಎರಡು ದಿನಗಳ ಭೇಟಿ ನೀಡಿರುವ ಅವರು, ನಿರುದ್ಯೋಗ ಸಮಸ್ಯೆ ಬಗ್ಗೆ ತಮ್ಮದೇ ಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಮುಜುಗರ ಮೂಡಿಸಿದ್ದಾರೆ.

ಕೋಟ್ಯಂತರ ನಿರುದ್ಯೋಗಿಗಳಿಗೆ ಮುಂದೆ ಏನಾಗುತ್ತದೆ? ಎನ್ನುವುದು ತಿಳಿಯದ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ.

ನಮ್ಮ ಹೋರಾಟ ಉದ್ಯೋಗ ಮತ್ತು ಆರ್ಥಿಕ ಸಮಾನತೆಗಾಗಿ. ಪ್ರತಿಯೊಬ್ಬರಿಗೂ ಸಮಾನ ಆರ್ಥಿಕ ಅವಕಾಶ ಲಭಿಸಬೇಕು ಎಂದು ನಮ್ಮ ಸಂವಿಧಾನ ಹೇಳುತ್ತದೆ. ಪ್ರತಿಯೊಬ್ಬರಿಗೂ ಉದ್ಯೋಗ ಇದ್ದಾಗ ಇದು ಸಾಧ್ಯವಾಗುತ್ತದೆ. ಯಾರ ಬ್ಯಾಂಕ್ ಖಾತೆಗೂ ಹಣ ಬರುತ್ತಿಲ್ಲ. ಆಶ್ವಾಸನೆ ನೀಡಿದಂತೆ ಎರಡು ಕೋಟಿ ಉದ್ಯೋಗವನ್ನೂ ನೀಡಿಲ್ಲ. ರೈತರ ಆದಾಯ ದುಪ್ಪಟ್ಟು ಕೂಡಾ ಆಗಿಲ್ಲ ಎಂದು ಗಾಂಧಿ ಹೇಳಿಕೆ ನೀಡಿದ್ದಾರೆ.

ಅಣ್ಣಾ ಹಝಾರೆ ಚಳವಳಿ ಮತ್ತು ರೈತ ಹೋರಾಟವನ್ನು ಕೂಡಾ ಉಲ್ಲೇಖಿಸಿರುವ ವರುಣ್, ಅಣ್ಣಾ ಹಝಾರೆ ಅವರ ಚಳುವಳಿಯನ್ನು ಬೆಂಬಲಿಸಿ ಧರಣಿ ಕುಳಿತ ಮೊದಲ ಸಂಸದ ನಾನು. ರೈತರ ಹೋರಾಟ ಆರಂಭವಾದಾಗ, ನಾನು ಅಧಿಕಾರಿಗಳನ್ನು ಕರೆದು ಪ್ರತಿಭಟನಾಕಾರರ ಬೇಡಿಕೆಗಳ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ್ದೆ ಎಂದು ವಿವರಿಸಿದ್ದಾರೆ.

ಖಮಾರಿಯಾ ಸೇತುವೆ ಹತ್ತಿರ ವರುಣ್‍ ಗಾಂಧಿಗೆ ಸ್ವಾಗತ ಕೋರಲು ಸಾವಿರಾರು ಮಂದಿ ಅಭಿಮಾನಿಗಳು ಸೇರಿದ್ದರು. ರಾಜಕೀಯ ಎನ್ನುವುದು ದೇಶ ಕಟ್ಟುವ ಸಾಧನವಾಗಬೇಕು ಎಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಸಲಹೆ ಮಾಡಿದರು.

ದೇಶದ ನೈಜ ಹೋರಾಟ ನಡೆಯಬೇಕಿರುವುದು ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ. ರಾಜಕೀಯ ಪಕ್ಷಗಳು ಮತ್ತು ನಾಯಕರು ತಮ್ಮ ವೈರತ್ವವನ್ನು ಬಿಟ್ಟು, ದೇಶದ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

ಶಿವಮೊಗ್ಗದಿಂದ ತಿರುಪತಿ ಸ‌ನಿಹಕ್ಕೆ ರೈಲು ಸೇವೆಗೆ ಚಾಲನೆ

0

ಶಿವಮೊಗ್ಗದಿಂದ ತಿರುಪತಿ ಮಾರ್ಗವಾಗಿ ಚನ್ನೈ ಸಂಪರ್ಕಿಸುವ ನೂತನ ರೈಲು ಸೇವೆಗೆ ಸಂಸದ ಬಿ. ವೈ. ರಾಘವೇಂದ್ರ ಅವರು ನಿನ್ನೆ ಚಾಲನೆ ನೀಡಿದ್ದಾರೆ.

ಶಿವಮೊಗ್ಗದಿಂದ ಎರಡು ದಿನ ರೇಣಿಗುಂಟಾ ಮಾರ್ಗ ವಾಗಿ ಚೆನ್ನೈಗೆ ರೈಲು ತೆರಳುತ್ತದೆ.

ರೈಲ್ವೆ ಇಲಾಖೆಗೆ ನಿರಂತರ ಮನವಿಗಳ ಫಲವಾಗಿ ಶಿವಮೊಗ್ಗ, ಬೆಂಗಳೂರು ಮದ್ರಾಸ್‌ ಎಕ್ಸಪ್ರೆಸ್ ಮತ್ತು ಶಿವಮೊಗ್ಗ,ರೇಣಿಗುಂಟ ರೈಲುಗಳನ್ನು ಒಗ್ಗೂಡಿಸಿ ಶಿವಮೊಗ್ಗದಿಂದ ತಿರುಪತಿ ಹಾಗೂ ಮದ್ರಾಸ್‌ಗೆ ತೆರಳುವ ಯಾತ್ರಾರ್ಥಿಗಳು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲಿನ ಸಮಯ ಹಾಗೂ ಮಾರ್ಗವನ್ನು ಬದಲಿಸಿ ಶಿವಮೊಗ್ಗ,ರೇಣಿಗುಂಟ ಮದ್ರಾಸ್, ಎಕ್ಸಪ್ರೆಸ್ ರೈಲು ಸೇವೆಗೆ ಚಾಲನೆ ನೀಡಲಾಗಿದೆ.

ಶಿವಮೊಗ್ಗ-ಶಿಕಾರಿಪುರ ರಾಣಿಬೆನ್ನೂರು ರೈಲು ಮಾರ್ಗವು ಸುಮಾರು 956 ಕೋಟಿ ಅಂದಾಜು ವೆಚ್ಚದಲ್ಲಿ 102 ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ಕಿ.ಮೀ. ಉದ್ದದ ರೈಲು ನಿರ್ಮಾಣ ಯೋಜನೆಯನ್ನು 2018-19ನೇ ಕೇಂದ್ರ ಮುಂಗಡ ಪತ್ರದಲ್ಲಿ ಮಂಜೂರು ಮಾಡಲಾಗಿದೆ.

ಶಿವಮೊಗ್ಗ ಟೌನ್ ರೈಲ್ವೇ ನಿಲ್ದಾಣದಲ್ಲಿ ನೂತನ ರೈಲಿಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ ಅವರು, ಸ್ವಾತಂತ್ರ್ಯ ಬಂದ ನಂತರ ಶಿವಮೊಗ್ಗದಲ್ಲಿ ಮೊದಲ ನೂತನ ರೈಲ್ವೆ ಯೋಜನೆಯಾಗಿದೆ ಎಂದು ತಿಳಿಸಿದರು.

ಈ ಹಿಂದೆ ಬೆಂಗಳೂರು ಮಾರ್ಗವಾಗಿ ಮದ್ರಾಸ್ ಗೆ ತೆರಳುತ್ತಿದ್ದ ಶಿವಮೊಗ್ಗ-ಮದ್ರಾಸ್ ಎಕ್ಸ್ ಪ್ರೆಸ್ ರೈಲು ಇದೀಗ ಶಿವಮೊಗ್ಗ-ತಿರುಪತಿ ರೈಲಿನೊಂದಿಗೆ ಸೇರ್ಪಡೆಯಾಗಿ ರೇಣಿಗುಂಟ ಮಾರ್ಗವಾಗ ಚೆನ್ನೈ ತಲುಪಲಿದೆ. ಈ ನೂತನ ರೈಲು ಸೇವೆಯು ಶಿವಮೊಗ್ಗದಿಂದ ಭಾನುವಾರ ಹಾಗೂ ಮಂಗಳವಾರ ಮತ್ತು ಮದ್ರಾಸ್ ನಿಂದ ಸೋಮವಾರ ಮತ್ತು ಬುಧವಾರಗಳಂದು ಸಂಚರಿಸಲಿದೆ.

ವಾರಕ್ಕೆ ಎರಡುದಿನ ಸಂಚರಿಸುವ ಈ ರೈಲು ಸೇವೆ ಒದಗಿಸಲಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿಗೊಂದು ಮನಃಸಾಕ್ಷಿಯ ಪರೀಕ್ಷೆಯಂತಾದ ಕಾರ್ಯಕಾರಿಣಿ ಸಭೆ

0

ಮುಂದಿನ ಚುನಾವಣೆಗೆ ಮತ್ತೆ ಬರುವೆ, ಸಾಧ್ಯವಾದರೆ ಪ್ರತಿ ಜಿಲ್ಲೆಗೆ ಬರುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಿಳಿಸಿದರು.

ಒಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ತಯಾರಿ ಆರಂಭಿಸಿವೆ. ಅದರಂತೆ ನಮ್ಮ ಬಿಜೆಪಿ ಪಕ್ಷವು ಸಹ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಸಭೆಯನ್ನು ಏರ್ಪಡಿಸಿ ಪಕ್ಷದ ಸಂಘಟನೆ ಮಾಡಲಾಗುತ್ತಿದೆ. ಹೊಸಪೇಟೆಯಲ್ಲಿ ಆಯೋಜಿಸಿರುವ ಈ ಸಮಾರಂಭ ನಮಗೆ ಸಂತಸ ತಂದಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಿಜಯ ನಗರ ಜಿಲ್ಲೆಯ ಹೊಸಪೇಟೆಯಲ್ಲಿ ಎರಡು ದಿನಗಳ ಕಾಲ ಬಿಜೆಪಿ ಕಾರ್ಯಕಾರಿಣಿ ಸಭೆ ನಿನ್ನೆ ಮುಕ್ತಾಯವಾಯಿತು. ಸಾರ್ವಜನಿಕ ಸಭೆಯನ್ನು ನಿನ್ನೆ ಸಂಜೆ 6 ಗಂಟೆಗೆ ಪ್ರಾರಂಭವಾಯಿತು. ವಿಶಾಲವಾದ ವೇದಿಕೆಯ ಮೇಲೆ ರಾಜ್ಯದ ಸಚಿವರು ,ರಾಷ್ಟ ನಾಯಕರು ಸುಮಾರು 30 ಆಹ್ವಾನಿತ ರಾಜಕೀಯ ಧುರೀಣರು ವೇದಿಕೆಯನ್ನು ಅಲಂಕರಿಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಹ ಸಭೆಯಲ್ಲಿ ಭಾಗವಹಿಸಿ ಸಭೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಬಳಸಿ ದೇಶದ ಅಭಿವೃದ್ದಿ ಯಲ್ಲಿ ಬಿಜೆಪಿಯು ಮಾಡಿದ ಬದಲಾವಣೆಗಳನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ಕಾಂಗ್ರೇಸ್ ಪಕ್ಷದ ಮೋಸದ ರಾಜಕೀಯ ಭ್ರಷ್ಟಾಚಾರ ಮತ್ತು ಒಳಜಗಳಗಳನ್ನು ಸಹ ಅವರ ಭಾಷಣದಲ್ಲಿ ಸಾರ್ವಜನಿಕರಿಗೆ ಅರ್ಥವಾಗುವ ಹಾಗೆ ತಿಳಿಸಿದರು. ಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಬಿಜೆಪಿ ಗೆಲುವಿನ ಮಹತ್ವದ ಸಲಹೆಗಳನ್ನು ತಿಳಿಸಿದರು ಚುನಾವಣಾ ಕಾರ್ಯತಂತ್ರ, ಪಕ್ಷ ಬಲವರ್ಧನೆ, ಸಂಘಟನೆಯ ಬಗ್ಗೆ ಕಾರ್ಯಕರ್ತರು ಹೋರಾಡಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಆಡಳಿತ ಮಾಡಲು ಸಾ ಸಾರ್ವಜನಿಕ ಆಶೀರ್ವಾದ ಪಡೆಯಲು ಮುಂದಾಗಬೇಕು. ಮತ್ತೆ ಬರುತ್ತೇನೆ ಪ್ರತಿ ಜಿಲ್ಲೆಗಳ ಪ್ರವಾಸ ಮಾಡುವೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.

ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿದೆ. ಯಡಿಯೂರಪ್ಪ ರೈತ ಬಂಧುವಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಬೆಳೆದಿದೆ, ಬೆಳಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಹೊಸ ಪೇಟೆಯ ಸಂಕಲ್ಪ ಸಭೆಯು ಅಸೆಂಬ್ಲಿ ಚುನಾವಣೆಯಲ್ಲಿ ವಿಜಯವನ್ನು ತಂದುಕೊಡಲಿದೆ. ಕರ್ನಾಟಕದ ಮುಂದಿನ ಗೆಲುವು ದಕ್ಷಿಣ ಭಾರತಕ್ಕೆ ಒಂದು ಸಂದೇಶ ನೀಡಲಿದೆ ಎಂದರು. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕ ಸ್ವಾಭಿಮಾನಿ ಕರ್ನಾಟಕವಾಗಿ ಪರಿವರ್ತನೆ ಹೊಂದುತ್ತಿದೆ. ರೈತ ವಿಧ್ಯಾ ನಿಧಿ ಪರಿಕಲ್ಪನೆ ಜಾರಿಯಾಗಿದೆ. ವಿವಿಧ ಮಾಸಾಶನ ಹೆಚ್ಚಳ ಮಾಡಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ವಿಶೇಷ ಯೋಜನೆಗಳು ಜಾರಿಗೊಳ್ಳುತ್ತಿವೆ ಎಂದು ಅವರು ಮೆಚ್ಚುಗೆ ಸೂಚಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಹೆಸರಿನಲ್ಲೇ ಚುನಾವಣೆ ಎದುರಿಸುತ್ತೇವೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕಾಮಗಾರಿಗಳನ್ನು ಜನರ ಮುಂದಿದೆ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು ಮತ್ತು ಶ್ರೀ ಅನಂದ್ ಸಿಂಗ್ ರವರಿಗೆ ಅಭಿನಂದನೆ ತಿಳಿಸಿದರು.

ಈ ಎಲ್ಲಾ ನಿಟ್ಟಿನಲ್ಲಿ ಭಾನುವಾರದ ಕಾರ್ಯಕಾರಿಣಿ ಸಭೆ ಮಹತ್ವ ಪಡೆದುಕೊಂಡಿದೆ. ಕಾರ್ಯಕಾರಿಣಿ ಸಭೆಯ ಬಳಿಕ ಹೊಸ ಹುಮ್ಮಸ್ಸಿನಲ್ಲಿ ಹಾಗೂ ಹೊಸ ಕಾರ್ಯತಂತ್ರದ ಮೂಲಕ ಬಿಜೆಪಿ ಪಕ್ಷ ಬಲವರ್ಧನೆ ಮತ್ತು ಚುನಾವಣಾ ತಯಾರಿಗೆ ಸಜ್ಜಾಗಲಿದೆ.

ನಾಯಕತ್ವ ಮತ್ತು ಸಚಿವ ಸಂಪುಟ ವಿಸ್ತರಣೆ ಇನ್ನು ಒಂದು ವಾರದಲ್ಲಿ

ಶ್ರೀ ನಡ್ಡಾ ರವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹಸಿರು ನಿಶಾನೆ ತೋರಿದರೂ ದೆಹಲಿಗೆ ಹೋಗಿ ತಿಳಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಎಪ್ರಿಲ್ 6 ರಂದು ನವದೆಹಲಿಯಲ್ಲಿ ನಡ್ಡಾ ಅವರನ್ನು ಭೇಟಿ ಮಾಡಿದ್ದ ಬೊಮ್ಮಾಯಿ, ಶುಕ್ರವಾರ ಸಚಿವ ಸಂಪುಟ ಪುನಾರಚನೆ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿರುವುದಾಗಿ ತಿಳಿಸಿದಂತೆ ಬಿಡುವಿನ ವೇಳೆಯಲ್ಲಿ ಮುಖ್ಯಮಂತ್ರಿ ಚರ್ಚಿಸಿದರು. ಈ ವಾರದಲ್ಲಿ ಸಚಿವ ಸಂಪುಟ ಬದಲಾಗುವ ನಿರೀಕ್ಷೆ ಇದೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಕೆಎಸ್ ಈಶ್ವರಪ್ಪ ಅವರು ಭ್ರಷ್ಟಾಚಾರ ಆರೋಪದ ಮೇಲೆ ಸಚಿವ ಸಂಪುಟದಿಂದ ಹೊರಗೆ ನಡೆದಿದೆ. ಈ ಬಾರಿಯ ಸಂಪುಟ ಪುನಾರಚನೆಯಲ್ಲಿ ಹೊಸ ಮುಖಗಳನ್ನು ಸೇರ್ಪಡೆಗೊಳಿಸಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಶ್ರೀ ಬಿ.ಎಲ್. ಸಂತೋಷ್ ಅವರು ಸಹ ಮಧ್ಯಪ್ರವೇಶಿಸಿರುವುದರಿಂದ ಆರ್ ಎಸ್ ಎಸ್ ಮೂಲದವರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಹೆಚ್ಚಾಗಿದೆ. ಬಹಿರಂಗಪಡಿಸುತ್ತಿದೆ. ಈ ಬೆಳವಣಿಗೆಗಳಿಗೆ ಹೈಕಮಾಂಡ್ ಆತಂಕಗೊಳ್ಳುವಂತೆ ಮಾಡಿದೆ.

2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷಕ್ಕೆ ಎದುರಾಗಲಿರುವ ಮುಜುಗರವನ್ನು ತಪ್ಪಿಸಲು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ರಾಷ್ಟ್ರೀಯ ನಾಯಕತ್ವವು ಇರುವ ಉತ್ತಮ ಆಯ್ಕೆಗಳ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಸಂಭವವಾಗಿದೆ. ಏಕೆಂದರೆ, ಬೊಮ್ಮಾಯಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಬೆಂಬಲವಿದೆ. ನಾಯಕತ್ವ ಬದಲಾವಣೆಯಾಗಿದ್ದೇ ಆದರೆ, ಇದು ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದರ ಜೊತೆಗೆ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನೂ ಸಂಪುಟಕ್ಕೆ ಸೇರ್ಪಡೆಗೊಳಿಸುವ ಕುರಿತಂತೆಯೂ ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಪಕ್ಷದ ನಾಯಕತ್ವ ಬಲಪಡಿಸುವುದಕ್ಕಾಗಿ ಶೋಭಾ ಕರಂದ್ಲಾಜೆ, ಸಿಟಿ ರವಿ, ಡಾ ಸಿ ಎನ್ ಅಶ್ವತ್ಥ್ ನಾರಾಯಣ, ಜಗದೀಶ್ ಶೆಟ್ಟರ್ ಅವರ ಹೆಸರುಗಳು ಕೆಲ ದಿನಗಳಿಂದ ಬಿಜೆಪಿ ವಲಯದಲ್ಲಿ ಸದ್ದು ಮಾಡುತ್ತಿದೆ. ನಿನ್ನೆ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಮುಕ್ತಾಯಗೊಂಡ ಬೆನ್ನಲ್ಲೇ ಸರ್ಕಾರ ಹಾಗೂ ಪಕ್ಷದಲ್ಲಾಗುವ ಬದಲಾವಣೆ ಕುರಿತ ಮಾಹಿತಿಗಳು ಬಹಿರಂಗಗೊಳ್ಳಲಿವೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಸರ್ಕಾರ ಹಾಗೂ ಪಕ್ಷಕ್ಕೆ ಆಗಿರುವ ಹಾನಿಯ ಕುರಿತಾಗಿ ಜೆ.ಪಿ. ನಡ್ಡಾ ರಾಜ್ಯ ಮುಖಂಡರಿಂದ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ. ಸಂತೋಷ್ ಆತ್ಮಹತ್ಯೆ ಪ್ರಕರಣ ಮತ್ತು ಕೆ.ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆಯ ವಿಚಾರ ಚರ್ಚೆ ಆಗುವ ಸಾಧ್ಯತೆ ಇದೆ. ಪ್ರತ್ಯೇಕವಾಗಿ ನಾಯಕರ ಜೊತೆ ಸಭೆ ನಡೆಸಿ ಜೆ.ಪಿ. ನಡ್ಡಾ ಈ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ.

ಕಾರ್ಯಕಾರಿಣಿಯಲ್ಲಿ ಭಾನುವಾರ ಜೆ.ಪಿ. ನಡ್ಡಾ ಅವರು ಹುಬ್ಬಳ್ಳಿಯಿಂದ ಹೊಸಪೇಟೆಗೆ ಆಗಮಿಸಿದರು. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಸೇರದಂತೆ ಸಚಿವರು, ಪ್ರಮುಖ ಮುಖಂಡರು, ಶಾಸಕರು, ಸಂಸದರು ಭಾಗವಹಿಸಿದ್ದರು.

ಸಭೆಯಲ್ಲಿ ಹೆಚ್ಚಾಗಿ ಹಾಕಲಾಗಿದ್ದ ಕುರ್ಚಿಗಳು ಖಾಲಿ ಇದ್ದವು. ಹಂಪೆ ಉತ್ಸವದಂತೆ ಕಾರ್ಯಕ್ರಮ, ವೇದಿಕೆ ಆಯೋಜಿಸಲಾಗಿತ್ತು.

ವರದಿ ಕೃಪೆ: ಮುರುಳೀಧರ್ ನಾಡಿಗೇರ್
ಹೊಸಪೇಟೆ – ವಿಜಯನಗರ

ಜಾನಪದ ಪ್ರಕಾರದ ಬಗ್ಗೆ ಯುವಪೀಳಿಗೆಯಲ್ಲಿ ಆಸಕ್ತಿ ಹುಟ್ಟಬೇಕು- ರಾಮಪ್ಪ

0

ಜಾನಪದ ಪ್ರತಿಯೊಬ್ಬರ ಬದುಕಿಗೂ ಶೋಭೆ ತರುವ ಕಲಾ ಪ್ರಕಾರವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹು ಮಾಧ್ಯಮಗಳ ಕಾರಣಕ್ಕೆ ಈ ಕಲೆ ನಶಿಸುತ್ತಿದೆ. ಅನಾದಿ ಕಾಲದ ಇತಿಹಾಸ ಹೇಳುವ ಈ ಕಲಾಪ್ರಕಾರದ ಬಗ್ಗೆ ಯುವ ತಲೆಮಾರಿನವರಲ್ಲಿ ಆಸಕ್ತಿ ಬೆಳೆಸಿದರೆ ಮಾತ್ರ ಅದು ಉಳಿಯಬಲ್ಲದು ಎಂದು ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪ ಅವರು ಹೇಳಿದರು.

ಸಾಗರ ಸಮೀಪದ ಸಿರಿಮಂತ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್, ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಸಿರಿವಂತೆ ಗ್ರಾಮ ಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಳಗುಪ್ಪ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಯಿಂದ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ಎರಡನೇ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಬದುಕು ಹಾಗೂ ಜಾನಪದ ಸಾಹಿತ್ಯ ಮತ್ತು ಕಲೆಯ ನಡುವೆ ಅವಿನಾಭಾವ ಸಂಬಂಧವಿದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್,

ಜಾನಪದ ಕಲಾವಿದರು ನಮ್ಮ ಸಂಸ್ಕೃತಿಯ ರಾಯಭಾರಿಗಳಿದ್ದಂತೆ. ಈ ಕಲಾವಿದರನ್ನು ಭಿಕ್ಷುಕರಂತೆ ಕಾಣುವ ಪ್ರವೃತ್ತಿ ಕೊನೆಯಾಗಬೇಕು. ಜಾನಪದ ಕಲಾವಿದರಿಗೆ ಮನಸ್ಸುಗಳನ್ನು ಬೆಸೆಯುವ ಶಕ್ತಿ ಇದೆ ಎಂದರು.

ಜಾನಪದವು ನಮ್ಮ ಸಂಸ್ಕೃತಿಯ ತಾಯಿಬೇರು. ಜಾನಪದ ಎಂಬುವುದೇ ಒಂದು ಸಂಭ್ರಮ ಎಂಬುದನ್ನು ನಾವು ಮರೆಯಬಾರದು. ಸರ್ಕಾರದ ನೆರವಿಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಮ್ಮೇಳನ ನಡೆಯುತ್ತಿರುವುದು ಜಾನಪದ ಪ್ರಕಾರದ ಪಾಲಿಗೆ ಆಶಾದಾಯಕ ಬೆಳವಣಿಗೆ ಎಂದರು.

ಸಮ್ಮೇಳನದ ಅಧ್ಯಕ್ಷ ಡೊಳ್ಳು ಕುಣಿತದ ಕಲಾವಿದ ಶಿಕಾರಿಪುರದ ಡೊಂಬರ ಹುಚ್ಚಪ್ಪ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸರ್ಕಾರದ ಜೊತೆಗೆ ಎಲ್ಲ ಸಂಘ ಸಂಸ್ಥೆಗಳ ಮೇಲೆ ಇದೆ. ಪ್ರತಿಯೊಬ್ಬರು ಈ ಕಲೆಗಳ ಬಗ್ಗೆ ಆಸಕ್ತಿ ತೋರಿದರೆ ಮಾತ್ರ ಕಲೆ ಬೆಳೆಯುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಲೇಖಕ ವಿ. ಗಣೇಶ್ ಅವರ ಜಾನಪದ ಕಥೆಗಳು ಕೃತಿಯನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಬಿಡುಗಡೆ ಮಾಡಿದರು.

ಹೆಗಡೆಮನೆ ಯೋಗೀಶ್, ಗಣಪತಿ ನಾಯ್ಕ್ ಸಿರಿವಂತೆ, ದೇವೇಂದ್ರ ಬೆಳೆಯೂರು, ನಾಗಮ್ಮ ಆನಂದಪುರ, ಶ್ರೀನಿವಾಸರಾವ್, ಲಕ್ಷ್ಮಣ ಕುಗ್ವೆ , ರಾಜು ಜನ್ನೆಹಕ್ಲು ಇವರಿಗೆ ಜಿಲ್ಲಾಮಟ್ಟದ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಜಾನಪದ ವಿದ್ವಾಂಸ ದೇವೇಂದ್ರ ಬೆಳೆಯೂರು ಶಿವಮೊಗ್ಗ ಜಿಲ್ಲೆಯಲ್ಲಿರುವಷ್ಟು ಜಾನಪದ ವೈವಿಧ್ಯ ರಾಜ್ಯದ ಇತರ ಭಾಗಗಳಲ್ಲಿ ಇಲ್ಲ. ದೊಡ್ಡಾಟ, ಸಣ್ಣಾಟ, ಪ್ರಕಾರಕ್ಕೆ ಸಿಗಬೇಕಾದ ಮಾನ್ಯತೆ ದೊರೆತಿಲ್ಲ. ಈ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದರು.

ಪ್ರಮುಖರಾದ ಮನೋಜ್ ಜನ್ನೆಹಕ್ಲು, ಗುಡ್ಡಪ್ಪ ಜೋಗಿ, ಸಾವಿತ್ರಿ ಚಂದ್ರಪ್ಪ, ಲೋಕೇಶ್ ಗಾಳಿಪುರ, ಲೋಕೇಶ್ ಎಸ್.ಎಲ್. ಉಪಸ್ಥಿತರಿದ್ದರು.