ಶಿವಮೊಗ್ಗದಿಂದ ತಿರುಪತಿ ಮಾರ್ಗವಾಗಿ ಚನ್ನೈ ಸಂಪರ್ಕಿಸುವ ನೂತನ ರೈಲು ಸೇವೆಗೆ ಸಂಸದ ಬಿ. ವೈ. ರಾಘವೇಂದ್ರ ಅವರು ನಿನ್ನೆ ಚಾಲನೆ ನೀಡಿದ್ದಾರೆ.
ಶಿವಮೊಗ್ಗದಿಂದ ಎರಡು ದಿನ ರೇಣಿಗುಂಟಾ ಮಾರ್ಗ ವಾಗಿ ಚೆನ್ನೈಗೆ ರೈಲು ತೆರಳುತ್ತದೆ.
ರೈಲ್ವೆ ಇಲಾಖೆಗೆ ನಿರಂತರ ಮನವಿಗಳ ಫಲವಾಗಿ ಶಿವಮೊಗ್ಗ, ಬೆಂಗಳೂರು ಮದ್ರಾಸ್ ಎಕ್ಸಪ್ರೆಸ್ ಮತ್ತು ಶಿವಮೊಗ್ಗ,ರೇಣಿಗುಂಟ ರೈಲುಗಳನ್ನು ಒಗ್ಗೂಡಿಸಿ ಶಿವಮೊಗ್ಗದಿಂದ ತಿರುಪತಿ ಹಾಗೂ ಮದ್ರಾಸ್‌ಗೆ ತೆರಳುವ ಯಾತ್ರಾರ್ಥಿಗಳು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲಿನ ಸಮಯ ಹಾಗೂ ಮಾರ್ಗವನ್ನು ಬದಲಿಸಿ ಶಿವಮೊಗ್ಗ,ರೇಣಿಗುಂಟ ಮದ್ರಾಸ್, ಎಕ್ಸಪ್ರೆಸ್ ರೈಲು ಸೇವೆಗೆ ಚಾಲನೆ ನೀಡಲಾಗಿದೆ.

ಶಿವಮೊಗ್ಗ-ಶಿಕಾರಿಪುರ ರಾಣಿಬೆನ್ನೂರು ರೈಲು ಮಾರ್ಗವು ಸುಮಾರು 956 ಕೋಟಿ ಅಂದಾಜು ವೆಚ್ಚದಲ್ಲಿ 102 ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ಕಿ.ಮೀ. ಉದ್ದದ ರೈಲು ನಿರ್ಮಾಣ ಯೋಜನೆಯನ್ನು 2018-19ನೇ ಕೇಂದ್ರ ಮುಂಗಡ ಪತ್ರದಲ್ಲಿ ಮಂಜೂರು ಮಾಡಲಾಗಿದೆ.
ಶಿವಮೊಗ್ಗ ಟೌನ್ ರೈಲ್ವೇ ನಿಲ್ದಾಣದಲ್ಲಿ ನೂತನ ರೈಲಿಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ ಅವರು, ಸ್ವಾತಂತ್ರ್ಯ ಬಂದ ನಂತರ ಶಿವಮೊಗ್ಗದಲ್ಲಿ ಮೊದಲ ನೂತನ ರೈಲ್ವೆ ಯೋಜನೆಯಾಗಿದೆ ಎಂದು ತಿಳಿಸಿದರು.
ಈ ಹಿಂದೆ ಬೆಂಗಳೂರು ಮಾರ್ಗವಾಗಿ ಮದ್ರಾಸ್ ಗೆ ತೆರಳುತ್ತಿದ್ದ ಶಿವಮೊಗ್ಗ-ಮದ್ರಾಸ್ ಎಕ್ಸ್ ಪ್ರೆಸ್ ರೈಲು ಇದೀಗ ಶಿವಮೊಗ್ಗ-ತಿರುಪತಿ ರೈಲಿನೊಂದಿಗೆ ಸೇರ್ಪಡೆಯಾಗಿ ರೇಣಿಗುಂಟ ಮಾರ್ಗವಾಗ ಚೆನ್ನೈ ತಲುಪಲಿದೆ. ಈ ನೂತನ ರೈಲು ಸೇವೆಯು ಶಿವಮೊಗ್ಗದಿಂದ ಭಾನುವಾರ ಹಾಗೂ ಮಂಗಳವಾರ ಮತ್ತು ಮದ್ರಾಸ್ ನಿಂದ ಸೋಮವಾರ ಮತ್ತು ಬುಧವಾರಗಳಂದು ಸಂಚರಿಸಲಿದೆ.
ವಾರಕ್ಕೆ ಎರಡುದಿನ ಸಂಚರಿಸುವ ಈ ರೈಲು ಸೇವೆ ಒದಗಿಸಲಿದೆ ಎಂದು ಮಾಹಿತಿ ನೀಡಿದರು.