Saturday, February 28, 2026
Saturday, February 28, 2026
Home Blog Page 1595

ದಮನಿತರನ್ನ ಮುಖ್ಯವಾಹಿನಿಗೆ ತಂದವರು ಬಸವಣ್ಣ-ಬೋರಲಿಂಗಯ್ಯ

0

ಸಮಾಜದ ದಮನಿತ ಸಮುದಾಯಗಳನ್ನು ಒಗ್ಗೂಡಿಸಿ ಮುಖ್ಯವಾಹಿನಿಗೆ ತಂದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅವರುಗಳ ಅಗತ್ಯವನ್ನು ಮನಗಾಣಿಸುವ ಮೂಲಕ ಚಾರಿತ್ರಿಕ ಕ್ರಾಂತಿಕಾರಿ ಚಳುವಳಿಗೆ ಕಾರಣಕರ್ತರಾದ ಬಸವಣ್ಣ ನಿಜವಾದ ಅರ್ಥದಲ್ಲಿ ದಾರ್ಶನಿಕರಾಗಿದ್ದರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹಿ. ಚಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜ ಶಾಸ್ತ್ರ ವಿಭಾಗದ ಶ್ರೀ ಬಸವೇಶ್ವರ ಅಧ್ಯಯನ ಪೀಠದ ವತಿಯಿಂದ ಗುರುವಾರ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮ ಮತ್ತು ಬಸವ ತತ್ವ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಹನ್ನೆರಡನೆಯ ಶತಮಾನದಲ್ಲಿ ವಚನ ಕ್ರಾಂತಿಯ ಮೂಲಕ ಕಾಯಕ ಜೀವಿಗಳನ್ನು ಒಗ್ಗೂಡಿಸಿ ಅನುಭವ ಮಂಟಪವನ್ನು ಕಟ್ಟುವ ಮೂಲಕ ನಾಡಿನ ಚರಿತ್ರೆಗೆ ಹೊಸ ತಿರುವು ಕೊಟ್ಟರು. ದೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಒಕ್ಕಲಿಗ ಮುತ್ತಯ್ಯ, ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಹೀಗೆ ಅಲಕ್ಷಿತ ಸಮುದಾಯದ ಉಪಕಸುಬುಗಳನ್ನು ಮಾಡುವ ಕಾಯಕ ಜೀವಿಗಳಿಗೆ ಶಿವಶರಣರೆಂಬ ಘನತೆ ದಕ್ಕಿಸಿಕೊಟ್ಟ ಕ್ರಾಂತಿಕಾರಿ ನಾಯಕ ಬಸವಣ್ಣ ಎಂದರು.

ದೇವಭಾಷೆಯೆಂದು ಕರೆಯಿಸಿಕೊಳ್ಳುತ್ತಿದ್ದ ಸಂಸ್ಕೃತದಲ್ಲಿ ಸಾಹಿತ್ಯ ರಚನೆ ಮಾಡಿದರಷ್ಟೇ ಗೌರವ ದೊರಕುತ್ತಿದ್ದ ಕಾಲಘಟ್ಟದಲ್ಲಿ ಜಾನಪದ ಕಾವ್ಯಗುಣವನ್ನು ಅಳವಡಿಸಿಕೊಂಡ ಶ್ರೀಸಾಮಾನ್ಯನ ಸರಳಕನ್ನಡದಲ್ಲಿ ವಚನಗಳೆಂಬ ಹೊಸ ಪ್ರಕಾರವನ್ನು ಹುಟ್ಟುಹಾಕಿ ಶ್ರೇಷ್ಠ ಸಾಹಿತ್ಯ ರಚಿಸುವ ಮೂಲಕ ಕನ್ನಡ ಅಸ್ಮಿತೆಯನ್ನು ಶ್ರೀಮಂತಗೊಳಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲಬೇಕು ಎಂದು ಶ್ಲಾಘಿಸಿದರು.

ಶಿರಡಿ ಸಾಯಿಬಾಬಾ ಅವರಂತಹ ಸರಳವಾದ ಯತಿಗಳಿಗೆ ಚಿನ್ನದ ಅರಮನೆ ಕಟ್ಟುವ ಬೂಟಾಟಿಕೆಯ ಪ್ರಪಂಚವಿದು. ಕ್ರಾಂತಿಕಾರಿ ಯುಗಪುರುಷರನ್ನು ದೈವೀಕ ಸ್ವರೂಪಕ್ಕೆ ಏರಿಸಿ, ಆರಾಧನೆಗೆ ಸೀಮಿತಗೊಳಿಸಿ, ಗುಡಿಗುಂಡಾರಗಳಲ್ಲಿ ಬಂಧಿಸಿ, ಸಮಾಜವನ್ನು ಯಥಾಸ್ಥಿತಿಯಲ್ಲಿಡುವ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರಗಳ ನಡುವೆ ಬಸವ ತತ್ವ ಸರ್ವಕಾಲಕ್ಕೂ ಪ್ರಸ್ತುತ ಎಂದರು.

ನಂತರ ನಡೆದ ವಿಚಾರಗೋಷ್ಠಿಯಲ್ಲಿ ಡಾ. ಕುಮಾರ ಚಲ್ಯ, ಡಾ. ಗೋವಿಂದರಾಯ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯೆ ಡಾ. ಕಿರಣ್ ದೇಸಾಯಿ ಬಸವ ತತ್ವದ ವಿವಿಧ ಆಯಾಮಗಳ ಕುರಿತು ಮಾತನಾಡಿದರು. ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ವಿಭಾಗದ ಅಧ್ಯಕ್ಷ ಪ್ರೊ. ಎ. ರಾಮೇಗೌಡ, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಕೆ. ನವೀನ್ ಕುಮಾರ್, ಸಿಂಡಿಕೇಟ್ ಸದಸ್ಯ ರಮೇಶ್ ಬಾಬು, ಡಾ. ಗುರುಲಿಂಗಯ್ಯ, ಡಾ. ಅಂಜನಪ್ಪ, ಡಾ. ಹಸೀನಾ ಮತ್ತಿತರರು ಉಪಸ್ಥಿತರಿದ್ದರು.

ಭ್ರಷ್ಟಾಚಾರದ ಬೇರೆಲ್ಲಿದೆ?

0

 ನಮ್ಮ ಪರಿಸರದ ಗಿಡಮರಗಳ ಬೇರನ್ನ ಹುಡುಕ ಬಹುದು.ಆದರೆ ಈ ಭ್ರಷ್ಟಾಚಾರದ ಬೇರನ್ನ ಹುಡುಕಿದರೆ ಎಲ್ಲಿಗೆ ಮುಟ್ಟುತ್ತೇವೆ? ಗೊತ್ತಿಲ್ಲ!.

ಈಗ ಪಿಎಸ್ ಐ ನೇಮಕಾತಿ ಹಗರಣ ಎಲ್ಲರಿಗೂ ತಿಳಿದ ಸುದ್ದಿ. ಹುದ್ದೆಗಳ ನೇಮಕಾತಿಗೆ ಹಣ ಕೊಡುವವರೇ ಮೊದಲು ಭ್ರಷ್ಟಾಚಾರ ಬೆಳೆಸಿದ ಹೊಣೆ ಹೊರಬೇಕಾಗುತ್ತದೆ. ಮನೆ ಮಾರುವುದು. ಐವತ್ತು ಲಕ್ಷ ಕೊಟ್ಟೆ ಎಂದು ಕಣ್ಣೀರು ಹಾಕುವುದು.!ಇವೆಲ್ಲ ಕೈಬಿಟ್ಟ ಹಣವನ್ನ ಮರಳಿ ಕೊಡುವಂತೆ ಮಾಡುವುದಿಲ್ಲ. ಬದಲಾಗಿ ಮಾಧ್ಯಮಗಳಿಗೆ ಒಂದಿಷ್ಟು ಆಹಾರವಷ್ಟೇ..

ಕೆಪಿಎಸ್ ಸಿ ಬರುವುದಕ್ಕೆ ಮುಂಚೆ ಜಿಲ್ಲಾ ನೇಮಕಾತಿ ಸಮಿತಿಗಳಿದ್ದವು.

ಅಲ್ಲಿ ನಡೆಯುತ್ತಿದ್ದದ್ದೂ ಇದೇ ವ್ಯವಹಾರವೆ? ಕಡಿಮೆ ಹಣ ಪೀಕುತ್ತಿದ್ದರು.ಅಂದರೆ ಆಸಾಮಿಗಳು ಕಡಿಮೆ ಆಸೆಯನ್ನ ಹೊಂದಿದ್ದರು.

ಈಗ ಎಲ್ಲದರ ಧಾರಣೆ ಏರಿದಂತೆ ನೇಮಕಾತಿ ವಲಯಕ್ಕೂ ಬಂದಿದೆ.

ಹಿಂದೆ ಪರಿಣಿತರ ಪಟ್ಟಿಯಿರುತ್ತಿತ್ತು. ಅವರು ನೇಮಕಾತಿ ಸಮಿತಿಯಲ್ಲಿರುತ್ತಿದ್ದರು. ಈಗ ಹಾಗಲ್ಲ ಪಕ್ಷಕ್ಕಾಗಿ ದುಡಿದ ಹೋರಾಟಗಾರರಿಗೆ ಗಂಜಿ ಕೇಂದ್ರಗಳಂತಾಗಿಬಿಟ್ಟಿವೆ. ಪರಿಣತಿ ಮಾತೇ ಇಲ್ಲ.ಅಧಿಕಾರಿಯೊಬ್ಬನ ಸೂತ್ರದಂತೆ ನಡೆಯುವುದೂ ಬಹಳ. ಕಡೆಗೆ ದಿನದ ಕಲೆಕ್ಷನ್ ಕೊಟ್ಟಂತೆ ಆಯಾ ನೇಮಕಾತಿ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ಸೂಟ್ ಕೇಸು ಮನೆಗೆ ತಲುಪಿರುತ್ತದೆ. ಇದು ಎಲ್ಲಾ ಪಕ್ಷಗಳ ಆಡಳಿತದಲ್ಲೂ ನಡೆಯುವ ಸುಗ್ಗಿ.

ಕ್ಲಾಸ್ ಒನ್,ಕ್ಲಾಸ್ ಟು ಕೇಡರ್ ಗಳ ಮಾರುಕಟ್ಟೆ ಮಿತಿಯೇ ಇಲ್ಲ. ಕೋಟಿಗಟ್ಟಲೆ ವ್ಯಾಪಾರ. ಇದು ಎಲ್ಲ ರಾಜಕೀಯದವರಿಗೂ ಗೊತ್ತಿರುವ ಸಂಗತಿ. ಮುಚ್ಚಿಟ್ಟ
ನಡೆದು ಎಷ್ಟೋ ವರ್ಷಗಳಾಗಿವೆ .ಹೊರಬಂದಿಲ್ಲ.ಈಗ ಕೆಲವು ಹೊರಬರುತ್ತಿವೆ.

ನಮ್ಮದೇ ವ್ಯವಸ್ಥೆ. ನಾವೇ ತೆರಿಗೆ ಕಟ್ಟುವವರು. ನೇಮಕಾತಿ ವಲಯಗಳಲ್ಲಿ ಈ ರೀತಿಯ ಭ್ರಷ್ಟತೆಯ ಬೀಜ ಬಿತ್ತಿದರೆ ಅದು ಪ್ರತೀಬಾರಿಯೂ ಕ್ರಿಮಿಯಂತೆ ನಮ್ಮ ಸಮಾಜವನ್ನ ಹಾಳುಮಾಡುತ್ತಿರುತ್ತದೆ. ಈಗ ಅದೇ ಆಗಿದೆ.

ಮಾಧ್ಯಮಗಳ ಮುಂದೆ ಅತ್ತುಬಿಟ್ಟರೆ ಏನೂ ಸಾಧನೆಯಾಗುವುದಿಲ್ಲ.

ಈ ನಡುವೆ ಪ್ರತಿಭೆಯನ್ನ ನೆಚ್ಚಿಕೊಂಡು ಆಯ್ಕೆಯಾದವರೂ ಬಲಿಪಶುಗಳಾಗುತ್ತಾರಲ್ಲ ಅದಕ್ಕೆ ಯಾರು ಹೊಣೆ?

ಉಕ್ರೇನ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಿದ್ಧಗಂಗಾ ಶ್ರೀಗಳ ಕರೆ

0

ಉಕ್ರೇನ್​ನಲ್ಲಿ ವ್ಯಾಸಂಗ ಮಾಡುತ್ತಿದ್ದ ತುಮಕೂರು ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ ಬಳಿಕ ಅವರ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗದಂತೆ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯವು ಅವಕಾಶ ಕಲ್ಪಿಸಿದೆ.

ಒಟ್ಟು 27 ವಿದ್ಯಾರ್ಥಿಗಳು ಯುದ್ಧಾತಂಕದ ಬಳಿಕ ಭಾರತಕ್ಕೆ ಮರಳಿದ್ದರು. ಈ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆತಂಕದ ಕಾರ್ಮೋಡ ಕವಿದಿರುವ ಸಂದರ್ಭದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ನೆರವಿಗೆ ಧಾವಿಸಿದ್ದಾರೆ. ಮಠದ ಕಾಲೇಜಿನಲ್ಲಿ 16 ವಿದ್ಯಾಥಿರ್ಗಳಿಗೆ ಪ್ರಾಯೋಗಿಕ ತರಗತಿ, ಗ್ರಂಥಾಲಯ ಸೇರಿದಂತೆ ಅಗತ್ಯ ನೆರವು ನೀಡಿ ಕ್ಲಿನಿಕಲ್​ ಸಪೋರ್ಟ್​ ಸಿಗುವಂತೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸದ್ಯ ವೈದ್ಯಕೀಯ ಕೋರ್ಸ್​ಗೆ ಪೂರಕ ಹಾಗೂ ಬೆಂಬಲವಾಗಿ ಕಾಲೇಜು ಸಿಬ್ಬಂದಿ ನಿಂತಿದ್ದಾರೆ. ಈ ಮಕ್ಕಳ ಮುಂದಿನ ವೈದ್ಯಕೀಯ ಪರೀಕ್ಷೆಗಳ ಬಗ್ಗೆ ಸರ್ಕಾರವೇ ನಿರ್ಧರಿಸಲಿದೆ.

ಉಕ್ರೇನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರ ಸುರಕ್ಷಿತವಾಗಿ ಕರೆತಂದಿದ್ದು ಅವರ ವಿದ್ಯಾಭ್ಯಾಸ ಮೊಟಕಾಗಬಾರದು ಎನ್ನುವ ಉದ್ದೇಶದಿಂದ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಲು ಅವಕಾಶ ನೀಡಲಾಗಿದೆ ಎಂದು ಸಿದ್ದಲಿಂಗ ಶ್ರೀಗಳು ಮಾಹಿತಿ ನೀಡಿದ್ದಾರೆ.

ಚೆನ್ನೈ ಮೇಲೆ ಜಯ ಸಾಧಿಸಿದ ಆರ್ ಸಿ ಬಿ

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 13 ರನ್​ಗಳಿಂದ ಮಣಿಸಿದ ಆರ್​ಸಿಬಿ ಅಮೂಲ್ಯ ಎರಡು ಅಂಕಗಳನ್ನು ಸಂಪಾದಿಸಿತು.

ಐಪಿಎಲ್ ಪಂದ್ಯಾವಳಿಯಲ್ಲಿ ಇತ್ತೀಚೆಗೆ ಸೋಲಿನ ಬೆನ್ನೇರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಗೂ ಗೆಲುವಿನ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 13 ರನ್​ಗಳಿಂದ ಮಣಿಸಿದ ಆರ್​ಸಿಬಿ ಅಮೂಲ್ಯ ಎರಡು ಅಂಕಗಳನ್ನು ಸಂಪಾದಿಸಿತು.

ಫಾಫ್​ಡು ಪ್ಲೆಸಿಸ್ ನೇತೃತ್ವದ ಬೆಂಗಳೂರು ತಂಡ ಟಾಸ್ ಸೋತು ಮೊದಲು ಬ್ಯಾಟ್ ಮಾಡಿತು. ಉತ್ತಮ ಆರಂಭದ ಹೊರತಾಗಿಯೂ ಸತತವಾಗಿ ವಿಕೆಟ್ ಕಳೆದುಕೊಂಡ ಪರಿಣಾಮ ಆರ್​ಸಿಬಿ ಕಡಿಮೆ ಮೊತ್ತ ಕಲೆಹಾಕುವ ಭೀತಿಯಲ್ಲಿತ್ತು.

ಆದರೆ ರಜತ್ ಪಾಟಿದಾರ್, ಮಹಿಪಾಲ್ ಲಾಮ್ರೋರ್ ಹಾಗೂ ದಿನೇಶ್ ಕಾರ್ತಿಕ್​ರ ಅಮೂಲ್ಯ ಕೊಡುಗೆಯಿಂದ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಪೇರಿಸಿತು. ಗುರಿ ಬೆಂಬತ್ತಿದ ಚೆನ್ನೈ ಕೂಡ ಉತ್ತಮ ಆರಂಭ ಪಡೆಯಿತು. ಆದರೆ ಆರ್​ಸಿಬಿ ಲಯಬದ್ಧ ಬೌಲಿಂಗ್​ಗೆ ನಲುಗಿದ ಚೆನ್ನೈ ಬ್ಯಾಟರ್​ಗಳು 20 ಓವರ್​ಗಳಲ್ಲಿ 160 ರನ್​ ಗಳಿಸಲಷ್ಟೇ ಶಕ್ತರಾದರು.

ಸ್ಪಿನ್​ಗೆ ನೆರವು ನೀಡುತ್ತಿದ್ದ ಪಿಚ್​ನಲ್ಲಿ ಮ್ಯಾಕ್ಸ್​ವೆಲ್ ಅಮೂಲ್ಯ ಬೌಲಿಂಗ್ ಮಾಡಿದರು. ಅವರಿಗೆ ವನಿಂದು ಹಸರಂಗ, ಶಾಬಾಜ್ ಅಹ್ಮದ್ ಜತೆಯಾದರು. ವೇಗದ ಬೌಲಿಂಗ್​ನಲ್ಲಿ ಜೋಶ್ ಹೇಜಲ್​ವುಡ್ ಹಾಗೂ ಹರ್ಷಲ್ ಪಟೇಲ್ ಮಾರಕ ದಾಳಿ ನಡೆಸಿದರು.

ಪರಿಣಾಮವಾಗಿ ಚೆನ್ನೈ 160 ರನ್​ಗಳಿಗೆ 8 ವಿಕೆಟ್​ ಪೇರಿಸಲಷ್ಟೇ ಶಕ್ತವಾಯಿತು. ಈ ಗೆಲುವಿನಿಂದ ಆರ್​ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ 4ಕ್ಕೆ ಲಗ್ಗೆ ಇಟ್ಟಿದೆ.

ಚೆನ್ನೈ ವಿರುದ್ಧದ ಪಂದ್ಯಕ್ಕೂ ಮುನ್ನ 6ನೇ ಸ್ಥಾನದಲ್ಲಿದ್ದ ಆರ್​ಸಿಬಿ ಈಗ ಅಗ್ರ ನಾಲ್ಕರಲ್ಲಿ ಕಾಣಿಸಿಕೊಂಡಿದೆ. 11 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 5ರಲ್ಲಿ ಸೋತಿರುವ ಬೆಂಗಳೂರು ತಂಡ, 12 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಉಳಿದ ಮೂರೂ ಪಂದ್ಯಗಳನ್ನು ಗೆದ್ದು ಪ್ಲೇ ಆಫ್​ನಲ್ಲಿ ಆಡುವ ಹಂಬಲದಲ್ಲಿದೆ ಆರ್​ಸಿಬಿ. ಆದರೆ ನೆಟ್​​ ರನ್​ರೇಟ್ -0.444 ಇರುವುದು ತಂಡದ ಚಿಂತೆ ಹೆಚ್ಚಿಸಿದೆ.

ಇದನ್ನು ಉತ್ತಮಪಡಿಸಿಕೊಳ್ಳಲು ಉಳಿದ ಪಂದ್ಯಗಳನ್ನು ಹೆಚ್ಚಿನ ಅಂತರದಿಂದ ಗೆಲ್ಲುವ ಅನಿವಾರ್ಯತೆ ಇದೆ.

ಗುಜರಾತ್ ಟೈಟಾನ್ಸ್ ಆಡಿದ 10 ಪಂದ್ಯಗಳಲ್ಲಿ 16 ಅಂಕ ಸಂಪಾದಿಸಿದ್ದು, ಮೊದಲ ಸ್ಥಾನದಲ್ಲಿದೆ. 14 ಅಂಕಗಳೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಎರಡನೇ ಸ್ಥಾನದಲ್ಲಿದ್ದು 12 ಅಂಕಗಳೊಂದಿಗೆ ರಾಜಸ್ಥಾನ್ ರಾಯಲ್ಸ್ 3ನೇ ಸ್ಥಾನದಲ್ಲಿದೆ. ಆರ್​ಆರ್​ ತಂಡವು 0.340 ನೆಟ್​ ರನ್​ರೇಟ್ ಹೊಂದಿರುವುದು ಅದಕ್ಕೆ ಪ್ಲಸ್ ಆಗಿದೆ.
ಐದನೇ ಸ್ಥಾನದಲ್ಲಿರುವ ಸನ್​ರೈಸರ್ಸ್ ಹೈದರಾಬಾದ್ 10 ಅಂಕ ಹೊಂದಿದೆ. ಆದರೆ ಅದು ಕೇವಲ 9 ಪಂದ್ಯಗಳನ್ನಾಡಿದ್ದು, ಪ್ಲೇ ಅವಕಾಶ ಮುಕ್ತವಾಗಿದೆ.
ಅದಕ್ಕೂ ಮೇಲಾಗಿ ತಂಡದ ರನ್​ರೇಟ್ ಅತ್ಯುತ್ತಮವಾಗಿದೆ.

ಮತ್ತೆ 4 ದಿನ ಮಳೆಗಾಳಿ- ಹವಾಮಾನ ಮುನ್ಸೂಚನೆ

0

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನಗಳ ಕಾಲ ಮುಂದುವರಿಯಲಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ವ್ಯಾಪಕ ಮಳೆ ಸುರಿಯಲಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ.

ಉಕ್ರೇನ್ ಅಂಗಹೀನರಿಗೆ ಜೈಪುರ ಕೃತಕ ಕೈಕಾಲು ಜೋಡಣೆ ಚಿಂತನೆ

0

ಉಕ್ರೇನ್‌-ರಷ್ಯಾ ಯುದ್ಧದಿಂದಾಗಿ ಅಸಂಖ್ಯಾತ ಯೋಧರು, ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದು, ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ಮೂಲದ ಜೈಪುರ್‌ ಫಂಟ್‌ ಸಂಸ್ಥೆಯು ಉಕ್ರೇನಿನಲ್ಲಿ ಅಂಗಾಂಗ ಜೋಡಣೆಯ ಶಿಬಿರ ಆಯೋಜಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಸಂಸ್ಥೆಯ ಮುಖ್ಯಸ್ಥ ಪ್ರೇಮ್‌ ಭಂಡಾರಿ ಹಾಗೂ ಜಂಟಿ ಕಾರ್ಯದರ್ಶಿ ನಿಶಾಂತ್‌ ಅವರು ಶಿಬಿರ ನಡೆಸಲು ಅನುಮತಿಗಾಗಿ ನ್ಯೂಯಾರ್ಕ್ನಲ್ಲಿರುವ ಉಕ್ರೇನಿನ ರಾಯಭಾರಿ ಓಲೆಸ್ಕಿ ಹೊಲುಬೊವ್‌ ಅವರನ್ನು ಭೇಟಿಯಾಗಿದ್ದಾರೆ.

ಆದರೆ ಪ್ರಸ್ತುತ ಉಕ್ರೇನಿನಲ್ಲಿ ರಷ್ಯಾ ತೀವ್ರ ದಾಳಿ ನಡೆಸುತ್ತಿದ್ದು, ಸಂಘರ್ಷವಲಯದಲ್ಲಿ ಶಿಬಿರವನ್ನು ಆಯೋಜಿಸುವುದು ಕಷ್ಟ. ಹೀಗಾಗಿ ಉಕ್ರೇನಿನ ನೆರೆಯ ರಾಷ್ಟ್ರಗಳಾದ ಪೊಲೆಂಡಿನಲ್ಲಿ ಅಂಗಾಂಗ ಜೋಡಣಾ ಶಿಬಿರ ಆಯೋಜಿಸುವ ಯೋಜನೆ ಹಾಕಿಕೊಳ್ಳುತ್ತಿದ್ದೇವೆ ಎಂದು ಭಂಡಾರಿ ತಿಳಿಸಿದ್ದಾರೆ.

ಪದ್ಮ ಭೂಷಣ ಪುರಸ್ಕೃತ ಡಿ. ಆರ್‌. ಮೆಹತಾ ಅವರು ಭಗವಾನ್‌ ಮಹಾವೀರ್‌ ವಿಕಲಾಂಗ ಸಹಾಯಕ ಸಮಿತಿಯನ್ನು ಆರಂಭಿಸಿದ್ದರು. ಇದು ಜೈಪುರ್‌ ಫಂಟ್‌ನ ಮಾತೃಸಂಸ್ಥೆಯಾಗಿದೆ.

ಈ ಸಮಿತಿಯು ಏಷ್ಯಾ, ಆಫ್ರಿಕಾ, ಲ್ಯಾಟಿನ್‌ ಅಮೆರಿಕದ 33 ದೇಶಗಳಲ್ಲಿ ಒಟ್ಟು 85 ಅಂತಾರಾಷ್ಟ್ರೀಯ ಅಂಗಾಂಗ ಜೋಡಣಾ ಶಿಬಿರವನ್ನು ಹಮ್ಮಿಕೊಂಡಿದೆ. 1.9 ಲಕ್ಷ ಜನರಿಗೆ ಈವರೆಗೆ ಅಂಗಾಂಗ ಜೋಡಣೆ ಮಾಡಿದ ಹಿರಿಮೆ ಹೊಂದಿದೆ.

ಯುದ್ಧದಿಂದ ಆಹಾರದ ಬಿಕ್ಕಟ್ಟು-ಸಮರ ನಿಲ್ಲಿಸಿಭಾರತ ಫ್ರಾನ್ಸ್ ಜಂಟಿ ಹೇಳಿಕೆ

0

ಉಕ್ರೇನ್‌ನಲ್ಲಿ ನಾಗರಿಕರ ಸಾವುಗಳನ್ನು ಖಂಡಿಸಿ ಹಾಗೂ ಯುದ್ಧವನ್ನು ತಕ್ಷಣವೇ ನಿಲ್ಲಿಸುವಂತೆ ಭಾರತ ಮತ್ತು ಫ್ರಾನ್ಸ್ ನಿನ್ನೆ ಬುಧವಾರ ಕರೆ ನೀಡಿದೆ. ನಡೆಯುತ್ತಿರುವ ಸಂಘರ್ಷದ ಬೆಳಕಿನಲ್ಲಿ ಜಾಗತಿಕ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾರತ ಮತ್ತು ಫ್ರಾನ್ಸ್ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ಚರ್ಚೆಯ ಕೊನೆಯಲ್ಲಿ ಜಂಟಿ ಹೇಳಿಕೆಯನ್ನು ನೀಡುತ್ತಾ, ಉಕ್ರೇನ್‌ ಸಂಘರ್ಷದಿಂದಾಗಿ ಉಲ್ಬಣಗೊಂಡ ಆಹಾರ ಬಿಕ್ಕಟ್ಟಿನ ಅಪಾಯವನ್ನು ಪರಿಹರಿಸಲು ಸಂಘಟಿತ ಬಹುಪಕ್ಷೀಯ ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಭಾರತ ಮತ್ತು ಫ್ರಾನ್ಸ್ ಜಾಗತಿಕ ಆಹಾರ ಭದ್ರತೆ ಮತ್ತು ಪೋಷಣೆಯ ಪ್ರಸ್ತುತ ಉಲ್ಬಣಗೊಳ್ಳುವಿಕೆಯ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸುತ್ತವೆ. ಈಗಾಗಲೇ ಕೊರೋನಾ ಸಾಂಕ್ರಾಮಿಕದಿಂದ ಪ್ರಭಾವಿತವಾಗಿವೆ ಮತ್ತು ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಉತ್ತಮ ಕಾರ್ಯನಿರ್ವಹಣೆಯ ಮಾರುಕಟ್ಟೆಗಳು, ಒಗ್ಗಟ್ಟು ಮತ್ತು ದೀರ್ಘಾವಧಿಯ ಸ್ಥಿತಿಸ್ಥಾಪಕತ್ವವನ್ನು ಖಾತರಿಪಡಿಸುವ ಗುರಿಯನ್ನು ಹೊಂದಿರುವ ಆಹಾರ ಮತ್ತು ಕೃಷಿ ಸ್ಥಿತಿಸ್ಥಾಪಕತ್ವ ಮಿಷನ್ ನಂತಹ ಉಪಕ್ರಮಗಳ ಮೂಲಕ ಉಲ್ಬಣಗೊಂಡ ಆಹಾರ ಬಿಕ್ಕಟ್ಟಿನ ಅಪಾಯವನ್ನು ಪರಿಹರಿಸಲು ಉಭಯ ದೇಶಗಳು ಬದ್ಧವಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಂಟಿ ಹೇಳಿಕೆಯಲ್ಲಿ, ಫ್ರಾನ್ಸ್ ರಷ್ಯಾದ ಪಡೆಗಳಿಂದ ಉಕ್ರೇನ್ ವಿರುದ್ಧ ಕಾನೂನುಬಾಹಿರ ಮತ್ತು ಅಪ್ರಚೋದಿತ ಆಕ್ರಮಣದ ಬಲವಾದ ಖಂಡನೆ ಎಂದು ಪುನರುಚ್ಚರಿಸಿತು.

ಶಿವಮೊಗ್ಗ ಜಿಲ್ಲೆ ಕೆಲವು ಗ್ರಾಪಂ ಗಳಲ್ಲಿ ತೆರವಾದ ಸ್ಥಾನಗಳಿಗೆ ಚುನಾವಣೆ

0

ವಿವಿಧ ಕಾರಣಗಳಿಂದ ತೆರವಾದಂತ ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ, ಉಪ ಚುನಾವಣೆ ಘೋಷಣೆಯಾಗಿದೆ. ಮೇ.20ರಂದು ಮತದಾನ ನಡೆಯಲಿದೆ. ಮೇ.22ರಂದು ಮತ ಏಣಿಕೆ ಕಾರ್ಯ ನಡೆಯಲಿದೆ.

ಈ ಕುರಿತಂತೆ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಿದೆ. ಶಿವಮೊಗ್ಗ ಜಿಲ್ಲೆಯ ಈ ಕೆಳಕಂಡ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಈ ಕೆಳಕಂಡಂತೆ ಹೊರಡಿಸಿರೋದಾಗಿ ತಿಳಿಸಿದ್ದಾರೆ.

ನಾಮಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕ 10-05-2022 ಆಗಿದೆ. ದಿನಾಂಕ 11-05-2022ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ದಿನಾಂಕ 13-05-2022ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ. ದಿನಾಂಕ 20-05-2022ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಮತದಾನ ನಡೆಯಲಿದೆ.

ಮರು ಮತದಾನ ಅವಶ್ಯಕತೆಯಿದ್ದಲ್ಲಿ, ದಿನಾಂಕ 21-05-2022ರಂದು ನಡೆಸಲಾಗುತ್ತದೆ. ದಿನಾಂಕ 22-05-2022ರಂದು ತಾಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತಏಣಿಕೆ ಕಾರ್ಯ ನಡೆಯಲಿದೆ. ದಿನಾಂಕ 22-05-2022ರಂದು ಚುನಾವಣೆ ಮುಕ್ತಾಯಗೊಳಿಸಲಿದೆ ಎಂದು ತಿಳಿಸಿದ್ದಾರೆ.

ಇಳಿಕೆಯತ್ತ ಚಿನ್ನ ಏರುಗತಿಯಲ್ಲಿ ಬೆಳ್ಳಿ

0

ಈ ಬಾರಿ ಅಕ್ಷಯ ತೃತೀಯದ ಸಂದರ್ಭದಲ್ಲೂ ಚಿನ್ನದ ಬೆಲೆ ಏರಿಕೆಯಾಗಿರಲಿಲ್ಲ.
ಚಿನ್ನದ ಬೆಲೆಯಲ್ಲಿ ನಿನ್ನೆ ಕೂಡ ಮತ್ತೆ ಇಳಿಕೆಯಾಗಿದ್ದು, 230 ರೂ. ಕುಸಿತ ಕಂಡಿದೆ.

ಆದರೆ, ಬೆಳ್ಳಿಯ ಬೆಲೆ ಇಂದು 400 ರೂ. ಏರಿಕೆಯಾಗಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಹೀಗಿದೆ..

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,200 ರೂ. ಇದ್ದುದು 47,000 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,510 ರೂ. ಇದ್ದುದು 51,280 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,100 ರೂ. ಮುಂಬೈ- 47,000 ರೂ, ದೆಹಲಿ- 47,000 ರೂ, ಕೊಲ್ಕತ್ತಾ- 47,000 ರೂ, ಬೆಂಗಳೂರು- 47,000 ರೂ, ಹೈದರಾಬಾದ್- 47,000 ರೂ, ಕೇರಳ- 47,000 ರೂ, ಪುಣೆ- 47,100 ರೂ, ಮಂಗಳೂರು- 47,000 ರೂ, ಮೈಸೂರು- 47,000 ರೂ. ಇದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ.

ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಇಂದು ಚಿನ್ನದ ಬೆಲೆ ಕುಸಿತವಾಗಿದೆ. ಬೆಳ್ಳಿ ಬೆಲೆ ಕೊಂಚ ಏರಿಕೆಯಾಗಿದೆ.

ಮೇ16 ರಿಂದ ಶಾಲೆಗಳು ಆರಂಭ- ಸಚಿವ ನಾಗೇಶ್

0

ವಿವಿಧ ಕಾರಣಗಳಿಂದ ತೆರವಾದಂತ ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ, ಉಪ ಚುನಾವಣೆ ಘೋಷಣೆಯಾಗಿದೆ. ಮೇ.20ರಂದು ಮತದಾನ ನಡೆಯಲಿದೆ. ಮೇ.22ರಂದು ಮತ ಏಣಿಕೆ ಕಾರ್ಯ ನಡೆಯಲಿದೆ.

ಈ ಕುರಿತಂತೆ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಿದೆ. ಶಿವಮೊಗ್ಗ ಜಿಲ್ಲೆಯ ಈ ಕೆಳಕಂಡ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಈ ಕೆಳಕಂಡಂತೆ ಹೊರಡಿಸಿರೋದಾಗಿ ತಿಳಿಸಿದ್ದಾರೆ.

ನಾಮಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕ 10-05-2022 ಆಗಿದೆ. ದಿನಾಂಕ 11-05-2022ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ದಿನಾಂಕ 13-05-2022ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ. ದಿನಾಂಕ 20-05-2022ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಮತದಾನ ನಡೆಯಲಿದೆ.

ಮರು ಮತದಾನ ಅವಶ್ಯಕತೆಯಿದ್ದಲ್ಲಿ, ದಿನಾಂಕ 21-05-2022ರಂದು ನಡೆಸಲಾಗುತ್ತದೆ. ದಿನಾಂಕ 22-05-2022ರಂದು ತಾಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತಏಣಿಕೆ ಕಾರ್ಯ ನಡೆಯಲಿದೆ. ದಿನಾಂಕ 22-05-2022ರಂದು ಚುನಾವಣೆ ಮುಕ್ತಾಯಗೊಳಿಸಲಿದೆ ಎಂದು ತಿಳಿಸಿದ್ದಾರೆ.